ಎ.ಪಿ.ಜೆ.ಅಬ್ದುಲ್ ಕಲಾಂ

ಭಾರತದ 11 ನೇ ರಾಷ್ಟ್ರಪತಿ, ವಿಜ್ಞಾನಿ, ವಿಜ್ಞಾನದ ಆಡಳಿತಾಧಿಕಾರಿ

ಅಬ್ದುಲ್ ಕಲಾಂರವರು ಒಬ್ಬ ಭಾರತೀಯ ವಿಜ್ಞಾನಿ ಹಾಗೂ ಭಾರತದ ೧೧ನೆಯ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು.

ಎ.ಪಿ.ಜೆ. ಅಬ್ದುಲ್ ಕಲಾಂ
೧೨ನೇ ವಾರ್ಟನ್ ಇಂಡಿಯಾ ಎಕನಾಮಿಕ್ ಫೋರಂ, ೨೦೦೮

ಅಧಿಕಾರ ಅವಧಿ
೨೫ ಜುಲೈ ೨೦೦೨ – ೨೫ ಜುಲೈ ೨೦೦೭
ಪ್ರಧಾನ ಮಂತ್ರಿಅಟಲ್ ಬಿಹಾರಿ ವಾಜಪೇಯಿ
ಮನಮೋಹನ್ ಸಿಂಗ್
ಉಪ ರಾಷ್ಟ್ರಪತಿಭೈರೋನ್ ಸಿಂಗ್ ಶೇಖಾವತ್
ಪೂರ್ವಾಧಿಕಾರಿಕೆ ಆರ್ ನಾರಾಯಣನ್
ಉತ್ತರಾಧಿಕಾರಿಪ್ರತಿಭಾ ದೇವಿಸಿಂಗ್ ಪಾಟೀಲ್
ವೈಯಕ್ತಿಕ ಮಾಹಿತಿ
ಜನನಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ
೧೫ -೧೦ -೧೯೩೧
ರಾಮೇಶ್ವರಂ, ಮದ್ರಾಸ್ ಪ್ರೆಸಿಡೆನ್ಸಿ,
ಮರಣ೨೭ ಜುಲೈ ೨೦೧೫
ಶಿಲ್ಲಾಂಗ್
ಅಭ್ಯಸಿಸಿದ ವಿದ್ಯಾಪೀಠಸೇಂಟ್ ಜೋಸೆಫ್ಸ್ ಕಾಲೇಜ್, ತಿರುಚಿರಾಪಳ್ಳಿ
ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
ಉದ್ಯೋಗಉಪನ್ಯಾಸಕ, ಲೇಖಕ, ವಿಜ್ಞಾನಿ, ರಾಷ್ಟ್ರಪತಿ
ಅಂತರಿಕ್ಷಯಾನ ಇಂಜಿನಿಯರ್
ಜಾಲತಾಣabdulkalam.com
ಐಐಟಿ ಗುವಾಹಟಿಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತಿರುವ ಡಾ. ಅಬ್ದುಲ್ ಕಲಾಂ


ಇವರು ಹುಟ್ಟಿ ಬೆಳೆದದ್ದು ತಮಿಳುನಾಡಿನ ರಾಮೇಶ್ವರಂನಲ್ಲಿ. ಇವರು ಭೌತಶಾಸ್ತ್ರ ಮತ್ತು ಅಂತರಿಕ್ಷಯಾನ ಇಂಜಿನಿಯರಿಂಗ್ ಅಧ್ಯಯನ ಮಾಡಿದ್ದರು. ಅಧ್ಯಯನ ನಂತರ ನಾಲ್ಕು ದಶಕಗಳ ಕಾಲ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಅರ್.ಡಿ.ಓ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದಲ್ಲಿ ವಿಜ್ಞಾನಿ ಮತ್ತು ವಿಜ್ಞಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದರು.ಭಾರತದ ನಾಗರಿಕ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ಕ್ಷಿಪಣಿ ಅಭಿವೃದ್ಧಿ ಪ್ರಯತ್ನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕ್ಷಿಪಣಿ ಮತ್ತು ಉಡಾವಣಾ ತಂತ್ರಜ್ಞಾನದ ಅಭಿವೃದ್ಧಿಯ ಅಧ್ಯಯನದಿಂದ, ಇವರು ಭಾರತದ ಕ್ಷಿಪಣಿ ಮಾನವ ಎಂಬ ಹೆಸರಿನಿಂದ ಚಿರಪರಿಚಿತರಾಗಿದ್ದರು. ೧೯೯೮ರಲ್ಲಿ ನೆಡೆದ ಭಾರತದ ಪೋಖ್ರಾನ್-೨ ಪರಮಾಣು ಪರೀಕ್ಷೆಯಲ್ಲಿ ಸಾಂಸ್ಥಿಕವಾಗಿ, ತಾಂತ್ರಿಕವಾಗಿ ಮತ್ತು ರಾಜಕೀಯವಾಗಿ ಒಂದು ಪ್ರಮುಖ ಪಾತ್ರ ವಹಿಸಿದರು. ಅವರು ಸ್ಇಎಕ್ಸ್ದು ಮಾದು ೯೭೪ರಲ್ಲಿ ನಡೆದ ಮೂಲ ಪರಮಾಣು ಪರೀಕ್ಷೆಯ ನಂತರ ನೆಡೆದ ಮೊದಲ ಪರಮಾಣು ಮಾಡುಯತಿದ ಎಮ್ದ್ದ 51 ನ್ನು xಗಿದೆ. ಕಲಾಂ ಅವರು ೨೦೦೨ ರಲ್ಲಿ, ಆಡಳಿತ ಪಕ್ಷ ಭಾರತೀಯ ಜನತಾ ಪಕ್ಷ ಮತ್ತು ವಿರೋಧ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಎರಡು ಪಕ್ಷಗಳ ಬೆಂಬಲದೊಂದಿಗೆ ರಾಷ್ಟ್ರಪತಿಯಾಗಿ ಆಯ್ಕೆಯಾದರು.ಐದು ವರುಷಗಳ ಅವಧಿ ಪೂರೈಸಿದ ನಂತರ, ಅವರು ಶಿಕ್ಷಣ, ಬರವಣಿಗೆ ಮತ್ತು ಸಾರ್ವಜನಿಕ ಸೇವೆಯ ಜೀವನಕ್ಕೆ ಮರಳಿದರು. ಅವರು ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರು ಅವಿವಾಹಿತರಾಗಿದ್ದರು. ಅಬ್ದುಲ್ ಕಲಾಂ ಅವರನ್ನ ಭಾರತದ ಮಿಸೈಲ್ ಮ್ಯಾನ್ ಆಫ್ ಇಂಡಿಯ ಎಂದು ಕರೆಯುತ್ತಾರೆ

ಬಾಲ್ಯ ಜೀವನ ಮತ್ತು ವಿದ್ಯಾಭ್ಯಾಸ

  • ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಅವರು  ತಮಿಳುನಾಡು ರಾಜ್ಯದ ರಾಮೇಶ್ವರಂನಲ್ಲಿ, ೧೫ ಅಕ್ಟೋಬರ್ ೧೯೩೧ ರಂದು ತಮಿಳು ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಜೈನುಲಬ್ದೀನ್, ಅವರು ದೋಣಿ ಮಾಲೀಕರಾಗಿದ್ದರು. ತಾಯಿ ಅಶಿಮಾ ಗೃಹಿಣಿಯಾಗಿದ್ದರು. ಕಲಾಂ ಅವರ ತಂದೆ, ಈಗ ನಿರ್ನಾಮವಾದ ಧನುಷ್ಕೋಡಿ ಮತ್ತು ರಾಮೇಶ್ವರಂ ನಡುವೆ ತಮ್ಮ ದೋಣಿಯಲ್ಲಿ ಹಿಂದು ಭಕ್ತಾದಿಗಳನ್ನು ಕರೆದುಕೊಂಡು ಹೋಗುತ್ತಿದ್ದರು. *ಕಲಾಂ ಅವರು ಕುಟುಂಬದ ನಾಲ್ಕು ಜನ ಸಹೋದರರು ಮತ್ತು ಒಬ್ಬ ಸಹೋದರಿಯಲ್ಲಿ ಅತ್ಯಂತ ಕಿರಿಯರಾಗಿದ್ದರು. ಅವರು ಬಡ ಹಿನ್ನೆಲೆಯಿಂದ ಬಂದವರು ಮತ್ತು ತನ್ನ ಕುಟುಂಬಕ್ಕೆ ಆರ್ಥಿಕವಾಗಿ ಬೆಂಬಲಿಸುವ ಸಲುವಾಗಿ, ಕಿರಿಯ ವಯಸ್ಸಿನಲ್ಲೇ ಕೆಲಸ ಆರಂಭಿಸಿದರು. ತಮ್ಮ ತಂದೆ ಗೆ ಆರ್ಥಿಕವಾಗಿ ಸಹಾಯ ಮಾಡಲು, ಅವರು ಶಾಲೆಯ ನಂತರ ತಮ್ಮ ಸಂಸೂದ್ದಿನ ಕಲಾಂ ಜೊತೆಗೆ ಪತ್ರಿಕೆಗಳನ್ನು ವಿತರಣೆ ಮಾಡುತ್ತಿದ್ದರು. ಇವರ ಬಾಲ್ಯವು ಬಹಳ ಬಡತನದಿಂದ ಕೂಡಿತ್ತು.
  • ಮುಂಜಾನೆ ೪:೦೦ ಘಂಟೆಗೆ ಎದ್ದು ದಿನದ ಪಾಠಗಳನ್ನು ಓದಿ ಶಾಲೆಗೆ ಹೋಗುತ್ತಿದ್ದರು. ಅವರು ಶಾಲೆಯಲ್ಲಿದ್ದಾಗ ಒಬ್ಬ ಸಾಧಾರಣ ವಿಧ್ಯಾರ್ಥಿಯಾಗಿದ್ದರು, ಆದರೆ ಚುರುಕಾದ ಮತ್ತು ಕಠಿಣ ಪರಿಶ್ರಮ ಪಡುವ ವಿಧ್ಯಾರ್ಥಿಯಾಗಿದ್ದರು. ಅವರಿಗೆ ಗಣಿತದಲ್ಲಿ ವಿಶೇಷ ಆಸಕ್ತಿ ಇತ್ತು. ಅವರು ಗಣಿತವನ್ನು ಗಂಟೆಗಳ ಅಧ್ಯಯನ ಮಾಡುತ್ತಿದ್ದರು.
  • ಅವರು ರಾಮನಾಥಪುರಂ ಶ್ವಾರ್ಟ್ಜ್ ಮೆಟ್ರಿಕ್ಯುಲೇಷನ್ಶಾ ಶಾಲೆಯಲ್ಲಿ ಶಿಕ್ಷಣ ಮುಗಿಸಿದ ನಂತರ ತಿರುಚಿರಾಪಳ್ಳಿಯಲ್ಲಿ ಕಲಾಂ ಸೇಂಟ್ ಜೋಸೆಫ್ಸ್ ಕಾಲೇಜಿಗೆ ಸೇರಿಕೊಂಡರು. ೧೯೫೪ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದರು.
  • ಕೋರ್ಸ್ ಕೊನೆಯಲ್ಲಿ ಅವರಿಗೆ ವಿಷಯದ ಬಗ್ಗೆ ಉತ್ಸಾಹ ಕಡಿಮೆಯಾಗುತ್ತಾ ಬಂತು ಮತ್ತು ವಿಷಯವನ್ನು ನಾಲ್ಕು ವರುಷಗಳ ಕಾಲ ಅಧ್ಯಯನ ಮಾಡಿದಕ್ಕೆ ಆಮೇಲೆ ಪಶ್ಚಾತಾಪ ಪಟ್ಟರು. ಅವರು ಮದ್ರಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಿಕ್ಷಯಾನ ಇಂಜಿನಿಯರಿಂಗ್ ಓದಲು ಮದ್ರಾಸ್ಗೆ ತೆರಳಿದರು.
  • ಕಲಾಂ ಅವರು ಕೆಲಸ ಮಾಡುತ್ತಿದ್ದಾಗ ಹಿರಿಯ ವರ್ಗದ ಯೋಜನೆಯ ಪ್ರಗತಿ ಬಗ್ಗೆ ಡೀನ್ ಅವರು ಅತೃಪ್ತಿ ವ್ಯಕ್ತಪಡಿಸಿ, ಇನ್ನೂ ಮೂರು ದಿನಗಳಲ್ಲಿ ಯೋಜನೆ ಮುಗಿಸದಿದ್ದರೆ, ಅವರ ವಿದ್ಯಾರ್ಥಿವೇತನ ರದ್ದು ಮಾಡುವ ಬೆದೆರಿಕೆ ಹಾಕಿದರು, ಕಲಾಂ ಅವರು ಡೀನ್ ಕೊಟ್ಟ ಗಡುವಿನಲ್ಲಿ ಯೋಜನೆ ಪೂರೈಸಿದರು.
  • ಅವರ ಕೆಲಸದಿಂದ ಪ್ರಭಾವಿತರಾದ ಡೀನ್ ಅವರು "ನಾನು ನಿನ್ನ ಮೇಲೆ ಹೆಚ್ಚು ಒತ್ತಡ ಹಾಕಿ ಕಠಿಣವಾದ ಗಡುವಿನಲ್ಲಿ ಕೆಲಸ ಪೂರೈಸಲು ಹೇಳಿದ್ದೆ" ಎಂದು ಹೇಳಿದರು. ಎಂಟು ಸ್ಥಾನಗಳು ಖಾಲಿ ಇದ್ದ ಭಾರತೀಯ ವಾಯುಪಡೆಯಾ ಅರ್ಹತಾ ಸುತ್ತಿನಲ್ಲಿ ಒಂಬತ್ತನೆಯ ಸ್ಥಾನ ಪಡೆದದ್ದರಿಂದ, ಯುದ್ದ ವಿಮಾನದ ಚಾಲಕನಾಗುವ ಅವರ ಕನಸಿನ ಅವಕಾಶ ತಪ್ಪಿಹೋಯಿತು.

ವೃತ್ತಿಜೀವನ

ವಿಜ್ಞಾನಿಯಾಗಿ

ಒಬ್ಬರನ್ನು ಸೋಲಿಸುವುದು ಬಹಳ ಸುಲಭ, ಆದರೆ ಒಬ್ಬರನ್ನು ಗೆಲ್ಲುವುದು ಬಹಳ ಕಷ್ಟ.

ಎ.ಪಿ.ಜೆ. ಅಬ್ದುಲ್ ಕಲಾಂ

  • ೧೯೬೦ರಲ್ಲಿ ಮದ್ರಾಸ್ ತಾಂತ್ರಿಕ ಮಹಾವಿದ್ಯಾಲಯದಿಂದ ಪದವಿ ಪಡೆದ ನಂತರ ಕಲಾಂ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಅರ್.ಡಿ.ಓ) ನ ವಾಯುಯಾನವಿಜ್ಞಾನ ಅಭಿವೃದ್ಧಿ ವಿಭಾಗಕ್ಕೆ ಒಬ್ಬ ವಿಜ್ಞಾನಿಯಾಗಿ ಸೇರಿಕೊಂಡರು. ಅಲ್ಲಿ ಅವರು ತಮ್ಮ ವೃತ್ತಿ ಜೀವನದ ಪ್ರಾರಂಭದಲ್ಲಿ ಭಾರತದ ಭೂ ಸೇನೆಗೆ ಸಣ್ಣ ಹೆಲಿಕಾಪ್ಟರ್ ಗಳನ್ನು ವಿನ್ಯಾಸ ಮಾಡುತ್ತಿದ್ದರು, ಆದರೆ ಅವರಿಗೆ ತಾವು ಡಿ.ಅರ್.ಡಿ.ಓ ನಲ್ಲಿ ಆಯ್ತುಕೊಂಡ ಕೆಲಸದ ಬಗ್ಗೆ ಅಸಮಾಧಾನ ಇತ್ತು.
  • ಕಲಾಂ ಅವರು ಹೆಸರಾಂತ ಬಾಹ್ಯಾಕಾಶ ವಿಜ್ಞಾನಿ ವಿಕ್ರಂ ಸಾರಾಭಾಯ್ ಅವರ ಅಡಿಯಲ್ಲಿದ್ದ ಇನ್ಕೋಸ್ಪಾರ್ ಸಮಿತಿಯ ಭಾಗವಾಗಿದ್ದರು. ೧೯೬೯ರಲ್ಲಿ ಕಲಾಂ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವರ್ಗಾಯಿಸಲಾಯಿತು. ಅಲ್ಲಿ ಅವರು ರೋಹಿಣಿ ಉಪಗ್ರಹವನ್ನು ೧೯೮೦ರಲ್ಲಿ ಭೂಮಿಯ ಕಕ್ಷೆಯನ್ನು ಸೇರಿಸಿದರು.
  • ಭಾರತದ ಮೊದಲ ಉಪಗ್ರಹ ಉಡಾವಣಾ ವಾಹನ (ಎಸ್.ಎಲ್.ವಿ-೩) ರ ಯೋಜನ ನಿರ್ದೇಶಕರಾದರು. ೧೯೬೫ರಲ್ಲಿಯೇ ಕಲಾಂ ಅವರು ವಿಸ್ತರಿಸಬಲ್ಲ ರಾಕೆಟ್ ಯೋಜನೆಯನ್ನು ಪ್ರತ್ಯೇಕವಾಗಿ ಆರಂಭಿಸಿದರು. ೧೯೬೯ರಲ್ಲಿ ಈ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿತು, ಅವರು ಆಗ ಈ ಯೋಜನೆಯನ್ನು ವಿಸ್ತರಿಸಿ, ಹಲವು ಇಂಜಿನಿಯರ್‍ಗಳನ್ನು ಈ ಯೋಜನೆಗೆ ಸೇರಿಸಿಕೊಂಡರು.
  • ೧೯೬೩-೬೪ರಲ್ಲಿ ಕಲಾಂ ಅವರು ಹ್ಯಾಮ್ಟನ್ ವರ್ಜೀನಿಯಾದ, ನಾಸಾದ ಲ್ಯಾಂಗ್ಲೀ ಸಂಶೋಧನಾ ಕೇಂದ್ರ , ಗ್ರೀನ್ ಬೆಲ್ಟ್ , ಮೇರಿಲ್ಯಾಂಡ್ ನ ಗೊಡಾರ್ಡ್ ಬಾಹ್ಯಾಕಾಶ ಹಾರಾಟ ಕೇಂದ್ರ ಮತ್ತು ವಾಲೋಪ್ಸ್ ಯುದ್ದ ವಿಮಾನ ಫೆಸಿಲಿಟಿಗೆ ಬೇಟಿ ನೀಡಿದ್ದರು. ೧೯೭೦ ಮತ್ತು ೧೯೮೦ ರ ನಡುವೆ ಕಲಾಂ ಅವರು ಪೋಲಾರ್ ಉಪಗ್ರಹ ವಾಹನ (ಪಿ.ಎಸ್.ಎಲ್.ವಿ) ಮತ್ತು ಎಸ್.ಎಲ್.ವಿ-೩ ಯೋಜನೆಗಳನ್ನು ಅಭಿವೃದ್ಧಿ ಪಡಿಸುವ ಪ್ರಯತ್ನ ಮಾಡಿದರು.
  • ಮುಂದಿನ ದಿನಗಳಲ್ಲಿ ಈ ಯೋಜನೆಗಳು ಯಶಸ್ವಿಯಾದವು. ದೇಶದ ಮೊದಲ ಪರಮಾಣು ಪರೀಕ್ಷೆ 'ನಗುವ ಬುದ್ಧ' ಯೋಜನೆಯ ಅಭಿವೃದ್ದಿಯಲ್ಲಿ ಕಲಾಂ ಅವರು ಭಾಗಿಯಾಗಿರಲಿಲ್ಲ. ಆದರೂ ಸಹ ಪರಮಾಣು ಪರೀಕ್ಷೆಯನ್ನು ಟಿ.ಅರ್.ಬಿ.ಎಲ್. ಪ್ರತಿನಿಧಿಯಾಗಿ ವೀಕ್ಷಿಸಲು ಡಾ. ರಾಜಾರಾಮಣ್ಣನವರು ಆಹ್ವಾನಿಸಿದರು.
ಬೆಂಗಳೂರಿಗೆ ಸೀಮಿತವಾಗಿರುವ ಐಟಿ ಕಂಪನಿಗಳು ಬೇರೆ ನಗರಗಳಿಗೂ ವಿಸ್ತರಣೆಯಾಗಬೇಕು. ಮೈಸೂರು, ಬೆಳಗಾವಿ, ಮಂಗಳೂರು, ಮಡಿಕೇರಿ, ಹುಬ್ಬಳ್ಳಿ-ಧಾರವಾಡದಲ್ಲಿಯೂ ಐಟಿ ಕಂಪನಿಗಳು ಸ್ಥಾಪನೆಯಾಗಬೇಕು.

ಎ.ಪಿ.ಜೆ. ಅಬ್ದುಲ್ ಕಲಾಂ

  • 1958 ರಲ್ಲಿ ಮದ್ರಾಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನೋಲಜಿಯಿಂದ ವೈಮಾನೀಕ ಇಂಜಿನೀಯರ್‍ನಲ್ಲಿ ಪದವಿಯನ್ನು ಪಡೆದರು. ಹಾಗೆಯೇ ಪಿ.ಎಚ್.ಡಿ., ಎಮ್ ಟೆಕ್ ಪದವಿಯನ್ನು ಪಡೆದಿದ್ದಾರೆ. ಡಿ.ಆರ್.ಡಿ.ಓ ಹಾಗೂ ಇಸ್ರೋಗಳಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿರುವ ಇವರು ಭಾರತದ ಅಣುಬಾಂಬು ಹಾಗೂ ಕ್ಷಿಪಣಿಗಳ ಜನಕ ಎಂದೇ ಪ್ರಸಿದ್ಧರು.
  • ಸನ್ 1998 ರಲ್ಲಿ ಪೋಖ್ರನ್-2 ನ್ಯೂಕ್ಲಿಯರ್ ಪರೀಕ್ಷೆಯಲ್ಲಿ, ತಾಂತ್ರಿಕವಾಗಿ,ರಾಜಕೀಯವಾಗಿ ಪ್ರಧಾನ ಪಾತ್ರವನ್ನು ವಹಿಸಿದರು. ಆದರೂ ಇವರು ಅಪವಾದಗಳಿಂದ ದೂರವಿರಲ್ಲಿಲ್ಲ, ಕೇವಲ ಹೋಮಿ ಜಹಂಗೀರ್ ಭಾಬಾ ಮತ್ತು ವಿಕ್ರಮ್ ಸಾರಾಭಾಯಿಯವರ ಕೆಲಸವನ್ನು ಮುಂದುವರಿಸಿದರೆಂದು ಹಾಗು ನ್ಯೂಕ್ಲಿಯರ್ ವಿಜ್ಞಾನದಲ್ಲಿ ಪ್ರಾವೀಣ್ಯವಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟರು.
  • ರಾಷ್ಟ್ರಪತಿ ಆಗುವುದಕ್ಕೂ ಮುನ್ನ ಇವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್ : ಡಿ.ಆರ್.ಡಿ.ಓ.) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ(ಇಸ್ರೋ)ದಲ್ಲಿ ವೈಮಾನಿಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದರು. ಇವರು ಭಾರತಕ್ಕೆ ಕ್ಷಿಪಣಿ ಹಾಗೂ ರಾಕೆಟ್ ತಾಂತ್ರಜ್ಞಾನವನ್ನು ತಯಾರಿಸಿರುವ ಕಾರಣ ,ಕ್ಷಿಪಣಿಗಳ ಜನಕ (ಮಿಸೈಲ್ ಮ್ಯಾನ್ ಆಫ್ ಇಂಡಿಯ)ಎಂದು ಕರೆಯಲ್ಪಡುತ್ತಾರೆ.
  • ಅಣ್ಣಾ ವಿಶ್ವವಿದ್ಯಾಯಲಯ(ಚೆನ್ನೈ), ಜೆ.ಎಸ್.ಎಸ್ ವಿಶ್ವವಿದ್ಯಾಲಯ (ಮೈಸೂರು) ಮತ್ತು ಅನೇಕ ಸಂಶೋಧನಾಲಯದಲ್ಲಿ ವೈಮಾನಿಕ ಪ್ರಾದ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು 2011ರ ಮೇನಲ್ಲಿ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ್ದರು. ಕಲಾಮ್ ಓರ್ವ ವಿಜ್ಞಾನಿಯು, ತಮಿಳು ಕವಿಯು ಹಾಗೂ ವೀಣಾ ವಾದಕರೂ ಆಗಿದ್ದಾರೆ.
  • ತಮ್ಮ ಕೊನೆಯ ದಿನಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಐ.ಐ.ಎಮ್, ಅಹಮದಾಬಾದ್ ಮತ್ತು ಐ.ಐ.ಎಮ್, ಇಂದೋರಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. [೧].

ರಾಷ್ಟ್ರಪತಿಯಾಗಿ

  • ಕಲಾಂರವರು ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. 2002ರ ರಾಷ್ಟ್ರಪತಿ ಚುನಾವಣೆಯಲ್ಲಿ ಲಕ್ಷ್ಮೀ ಸೆಹೆಗಲ್ ವಿರುದ್ಧ ೧೦೭,೩೬೬ ಮತಗಳ ಮುನ್ನಡೆಯಲ್ಲಿ ಗೆದ್ದರು. 22 ಜುಲೈ 2002ರಿಂದ 22 ಜುಲೈ 2007ರವರೆಗೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು.[೨]ಅ ಸರಳತೆ, ಪ್ರಾಮಾಣಿಕತೆ, ಮತ್ತು ಮೇಧಾವಿತನದ ಸಾಕಾರದಂತಿರುವ ಕಲಾಂ ಅವರು ರಾಷ್ಟ್ರಪತಿ ಹುದ್ದೆಯ ಘನತೆಯನ್ನು ಹೆಚ್ಚಿಸಿದರು. ಜನಸಾಮಾನ್ಯರ ರಾಷ್ಟ್ರಪತಿ ಎಂಬ ಕೀರ್ತಿಗೆ ಪಾತ್ರರಾದರು. ಸ್ವತಃ ಬ್ರಹ್ಮಚಾರಿ ಆದ ಇವರಿಗೆ ಮಕ್ಕಳೆಂದರೆ ಬಹು ಪ್ರೀತಿ. ಮಕ್ಕಳೊಂದಿಗೆ ಬೆರೆತು ಉಪಯುಕ್ತ ಸಲಹೆ ಸೂಚನೆ ನೀಡುವುದು ಇವರ ಪ್ರಿಯ ಹವ್ಯಾಸ.

ಲೇಖಕರಾಗಿ

ರಾಷ್ಟ್ರಪತಿ ಹುದ್ದೆಯಿಂದ ವಿರಮಿಸಿದ ಅನಂತರವೂ ಇವರು ಜನಪ್ರಿಯ ಧುರೀಣರು ಮತ್ತು ವಿಜ್ಞಾನಿಯಾಗಿ ಕಂಗೊಳಿಸುತ್ತಿದ್ದಾರೆ. ಇವರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಹತ್ತಾರು ಗ್ರಂಥಗಳನ್ನು ರಚಿಸಿದ್ದಾರೆ. ‘ವಿಂಗ್ಸ್‌ ಆಫ್ ಫೈರ್’ ಎಂಬುದು ಇವರ ಆತ್ಮಕಥೆ. ಇವರು ತಮ್ಮ ‘ಇಂಡಿಯಾ ಮೈ ಡ್ರೀಮ್’, ‘ಇಂಡಿಯಾ ೨೦೨೦’ ಎಂಬ ಗ್ರಂಥಗಳಲ್ಲಿ ಭವ್ಯ ಭಾರತ ನಿರ್ಮಾಣದ ಬಗ್ಗೆ ರೂಪುರೇಷೆಗಳನ್ನು ಹಾಕಿಕೊಟ್ಟಿದ್ದಾರೆ. ‘ಮೈ ಜರ್ನಿ’, ‘ಟಾರ್ಗೆಟ್ ತ್ರಿ ಬಿಲಿಯನ್’- ಇವು ಇವರ ಇತ್ತೀಚಿನ ಕೃತಿಗಳು. ಅಪ್ರತಿಮ ದೇಶಭಕ್ತರೂ ಉತ್ತಮ ವಾಗ್ಮಿಯೂ ಆಗಿರುವ ಕಲಾಂ ಅವರು ದೇಶ ವಿದೇಶಗಳಲ್ಲಿ ಸಂಚರಿಸುತ್ತ ಜ್ಞಾನ-ವಿಜ್ಞಾನ ಪ್ರಸಾರದಲ್ಲಿ ತಮ್ಮ ಸಹಾಯಹಸ್ತ ನೀಡುತ್ತಿದ್ದಾರೆ.

ಪ್ರಶಸ್ತಿಗಳು ಮತ್ತು ಗೌರವಗಳು

ವಿಐಎಮ್ಎಸ್ ನಲ್ಲಿ ಅಬ್ದುಲ್ ಕಲಾಂ ರವರ ಪ್ರತಿಮೆ
ಪ್ರಶಸ್ತಿ ಅಥವಾ ಗೌರವದ ವರ್ಷಪ್ರಶಸ್ತಿ ಅಥವಾ ಗೌರವದ ಹೆಸರುಗೌರವಿಸಿದ ಸಂಸ್ಥೆ
೨೦೧೪ಡಾಕ್ಟರ್ ಆಫ್ ಸೈನ್ಸ್ಎಡಿನ್‌ಬರ್ಗ್ ವಿಶ್ವವಿದ್ಯಾಲಯ, ಯೂ.ಕೆ[೩]
೨೦೧೨ಡಾಕ್ಟರ್ ಆಫ್ ಲಾ (ಆನರಿಸ್ ಕೌಸಾ)ಸೈಮನ್ ಫೇಸರ್ ವಿಶ್ವವಿದ್ಯಾಲಯ[೪]
೨೦೧೧ಐಇಇಇ ಗೌರವ ಸದಸ್ಯತ್ವಐಇಇಇ [೫]
೨೦೧೦ಡಾಕ್ಟರ್ ಆಫ್ ಇಂಜಿನಿಯರಿಂಗ್ವಾಟರ್ಲೂ ವಿಶ್ವವಿದ್ಯಾಲಯದ[೬]
೨೦೦೯ಗೌರವ ಡಾಕ್ಟರೇಟ್ಓಕ್ಲ್ಯಾಂಡ್ ವಿಶ್ವವಿದ್ಯಾಲಯ[೭]
೨೦೦೯ಹೂವರ್ ಮೆಡಲ್ಎ.ಎಸ್.ಎಮ್.ಇ ಫೌಂಡೇಶನ್, ಯುಎಸ್ಎ[೮]
೨೦೦೯ಇಂಟರ್ನ್ಯಾಷನಲ್ ವೊನ್ ಕಾರ್ಮಾನ್ ವಿಂಗ್ಸ್ ಪ್ರಶಸ್ತಿಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಟೆಕ್ನಾಲಜಿ, ಯುಎಸ್ಎ [೯]
೨೦೦೮ಡಾಕ್ಟರ್ ಆಫ್ ಇಂಜಿನಿಯರಿಂಗ್ (ಆನರಿಸ್ ಕೌಸಾ)ನನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯ, ಸಿಂಗಪುರ್[೧೦]
೨೦೦೭ಕಿಂಗ್ ಚಾರ್ಲ್ಸ್ II ಪದಕರಾಯಲ್ ಸೊಸೈಟಿ, ಯೂ.ಕೆ.[೧೧][೧೨][೧೩]
೨೦೦೭ಸೈನ್ಸ್ ಗೌರವ ಡಾಕ್ಟರೇಟ್ವಾಲ್ವರ್ಹ್ಯಾಂಪ್ಟನ್ ವಿಶ್ವವಿದ್ಯಾಲಯ, ಯೂ.ಕೆ., UK[೧೪]
೨೦೦೦ರಾಮಾನುಜನ್ ಪ್ರಶಸ್ತಿಅಲ್ವಾರ್ ಸಂಶೋಧನಾ ಕೇಂದ್ರ, ಚೆನೈ[೧೫]
೧೯೯೮ವೀರ್ ಸಾವರ್ಕರ್ ಪ್ರಶಸ್ತಿಭಾರತ ಸರ್ಕಾರ[೧೬]
೧೯೯೭ದೇಶದ ಐಕ್ಯತೆಯ ಇಂದಿರಾಗಾಂಧಿ ಪ್ರಶಸ್ತಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್
೧೯೯೭ಭಾರತ ರತ್ನಭಾರತ ಸರ್ಕಾರ [೧೭]
೧೯೯೪ಡಿಸ್ಟಿಂಗ್ವಿಶ್ಡ್ ಫೆಲೋನಿರ್ದೇಶಕರ ಸಂಸ್ಥೆ (ಭಾರತ)[೧೮]
೧೯೯೦ಪದ್ಮ ವಿಭೂಷಣಭಾರತ ಸರ್ಕಾರ[೧೫][೧೯]
೧೯೮೧ಪದ್ಮ ಭೂಷಣಭಾರತ ಸರ್ಕಾರ[೧೫][೧೯]

ಇವರ ಪುಸ್ತಕಗಳು

  1. ಡೆವೆಲಪ್ಮೆಂಟ್ಸ್ ಇನ್ ಫ್ಲುಯಿಡ್ ಮೆಖಾನಿಕ್ಸ್ ಅಂಡ್ ಸ್ಪೇಸ್ ಟೆಕ್ನಾಲಜಿ-ರೊಡ್ಡಂ ನರಸಿಂಹರವರ ಜತೆ ಬರೆದಿರುವ ವೈಜ್ಞಾನಿಕ ಪುಸ್ತಕ.[೨೦]
  2. ವಿಂಗ್ಸ್ ಆಫ್ ಫೈಯರ್ (ಕನ್ನಡ ಅನುವಾದ - ಅಗ್ನಿಯ ರೆಕ್ಕೆಗಳು)-ಅರುಣ್ ತಿವಾರಿಯವರ ಜತೆ ಬರೆದ ಈ ಪುಸ್ತಕವು ಇವರ ಆತ್ಮಕಥೆಯಾಗಿದ್ದು, ಇವರ ಸರಳ ಹಾಗೂ ಮಾದರಿ ಜೀವನದ ಅನೇಕ ಘಟನೆಗಳನ್ನು ಓದುಗರಿಗೆ ತೆರೆದಿಡುತ್ತದೆ. ಇಂದಿನ ಯುವ ಪೀಳಿಗೆಗೆ ಇದೊಂದು ಅನುರೂಪವಾದ ಮಾರ್ಗದರ್ಶಿ.[೨೧]
  3. ಇಂಡಿಯಾ 2020- ಈ ಪುಸ್ತಕದಲ್ಲಿ ಕಲಾಮ್ ರವರು 2020 ನೇ ಇಸವಿಯಲ್ಲಿ ಭಾವಿ ಭಾರತವು ಹೇಗಿರಬೇಕೆಂದು ತಮ್ಮ ಕನಸನ್ನು ಬಿಚ್ಚಿಡುತ್ತಾರೆ. ಯುವ ಜನಾಂಗಕ್ಕೆ ಸ್ಪೂರ್ತಿಯಾಗಬಲ್ಲಂತಹ ಕೃತಿ.[೨೨]
  4. ಇಗ್ನೈಟೆಡ್ ಮೈಂಡ್ಸ್- ಮಕ್ಕಳಿಗಾಗಿ ಬರೆದಿರುವ ಈ ಪುಸ್ತಕವು ಅವರು ಮುಂದಿನ ನಾಗರೀಕರಾಗಿದ್ದು ದೇಶವನ್ನು ಹೇಗೆ ಬೆಳಸಬಹುದು ಎಂದು ಹೇಳುತ್ತದೆ.[೨೩]
  5. ಎನ್ವಿಶನಿಂಗ್ ಅನ್ ಎಂಪವರ್ಡ್ ನೇಷನ್-ಸಾಮಾಜಿಕ ಬದಲಾವಣೆಗಾಗಿ ತಂತ್ರಜ್ಞಾನದ ಬಗ್ಗೆ ಎ.ಶಿವತನು ಪಿಳ್ಳೈರವರ ಜತೆ ಬರೆದಿರುವ ಪುಸ್ತಕ.[೨೪]
  6. ಮೈ ಜರ್ನೀ- ಇದು ಅವರ ಎರಡನೇ ಆತ್ಮಕಥೆ. ಇಲ್ಲಿ ಅವರ ಜೀವನದ ಇಷ್ಟ-ಕಷ್ಟಗಳ ಬಗ್ಗೆ ಹೇಳಿದ್ದಾರೆ. ಇದನ್ನು ವಿ.ಸತ್ಯನಾರಾಯಣ ಮೂರ್ತಿ ಪ್ರಕಟಿಸಿದ್ದಾರೆ.[೨೫]
  7. ದಿ ಲೈಫ್ ಟ್ರೀ - ಕಲಾಂ ಅವರು ಬರೀ ವಿಜ್ಞಾನಿಯಲ್ಲದೆ ಒಳ್ಳೆಯ ಕವಿಯೂ ಆಗಿದ್ದಾರೆ. ದಿ ಲೈಫ್ ಟ್ರೀ ಅವರ ಕವನ ಸಂಕಲನವಾಗಿದ್ದು ವಿಜ್ಞಾನ ಮತ್ತು ಸಾಹಿತ್ಯವನ್ನು ಒಂದು ಮಾಡುವ ಪುಸ್ತಕ ಇದು. ಇವರ ಕವನಗಳು ಇವರ ದೇಶಭಕ್ತಿ ಹಾಗು ಮಾತೃಭಕ್ತಿಯನ್ನು ತೋರಿಸುತ್ತದೆ ಮತ್ತು ದೇವರ ಮೇಲೆ ಇವರಿಗಿರುವ ಶ್ರದ್ಧಾ ಭಕ್ತಿಯನ್ನು ತೋರಿಸುತ್ತದೆ.[೨೬]
  8. ಚಿಲ್ರೆನ್ ಆಸ್ಕ್ ಕಲಾಂ-ಮಕ್ಕಳು ಕಲಾಂರವರಿಗೆ ಬರೆದ ಪತ್ರಗಳ ಪ್ರಶ್ನೆಗಳಿಗೆ ಪ್ರತ್ಯುತ್ತರ ಪತ್ರಗಳ ಸಂಕಲನ ಈ ಪುಸ್ತಕ. ಇದರಲ್ಲಿ ಮಕ್ಕಳ ವಿಷಯಗಳು, ಭಾರತೀಯತೆ, ವಿದ್ಯಾಭ್ಯಾಸ, ಸಾಮಾನ್ಯ ವಿಷಯಗಳು, ವಿಜ್ಞಾನ ಮತ್ತು ಆಧ್ಯಾತ್ಮದ ಬಗ್ಗೆ ಮಕ್ಕಳಿಗೆ ತಿಳಿಸುತ್ತದೆ.[೨೭]

ಮರಣ

  • ಡಾ.ಅಬ್ದುಲ್ ಕಲಾಂರವರು,[೨೮] ಜುಲೈ 27, 2015 ರಂದು ಶಿಲ್ಲಾಂಗ್ ನಲ್ಲಿ ಉಪನ್ಯಾಸ ನೀಡುವ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದರು. ನಂತರ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.[೨೯] ಕೊನೆಯ ಉಸಿರು ಇರುವವರೆಗೂ ಅವರು ಸೇವೆಯಲ್ಲಿ ನಿರತರಾಗಿದ್ದು, ಇಡೀ ದೇಶದ ಜನತೆಗೆ ಮಾದರಿಯ ವ್ಯಕ್ತಿತ್ವ ಹೊಂದಿದವರಾಗಿದರು.
  • ೩೦,ಜುಲೈ, ೨೦೧೫ ರಂದು, ಡಾ.ಕಲಾಂ ಹುಟ್ಟಿಬೆಳೆದ ತಮಿಳುನಾಡಿನ ರಾಮೇಶ್ವರಂ ಊರಿನಲ್ಲಿ ಅವರ ಅಂತಿಮಕ್ರಿಯೆ, ಸಕಲ ರಾಷ್ಟ್ರೀಯ ಗೌರವಗಳೊಂದಿಗೆ ನಡೆಯಿತು. [೩೦]

ಡಾ.ಕಲಾಂ ಬಗ್ಗೆ ಬರೆದಿರುವ ಪುಸ್ತಕಗಳು

  • ಕಲಾಂ ಮೇಷ್ಟ್ರು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ಮಕ್ಕಳಿಗಾಗಿ ರಚಿಸಿದ, ಒಂದು ಬಹುಮೂಲ್ಯ ಕೃತಿ. ಅದನ್ನು ರಚಿಸಿದವರು. ಪ್ರೊ. ಎಚ್. ಆರ್. ರಾಮಕೃಷ್ಣರಾವ್. : ISBN : 81-7713-199-0. ಇದರ ೧,೦೦೦ ಪ್ರತಿಗಳು ಮಾರಾಟವಾಗಿವೆ.

ಉಲ್ಲೇಖಗಳು

by Kevin