ವರ್ಗೀಯ ವ್ಯಂಜನ

ಸ್ವತಂತ್ರವಾಗಿ ಉಚ್ಚರಿಸಲಾಗದ ಅಕ್ಷರಗಳು ‘ವ್ಯಂಜನ’ಗಳಾಗಿವೆ. ಸ್ವರಗಳ ಸಹಾವಿಲ್ಲದೆ ವ್ಯಂಜನಗಳ ಉಚ್ಚಾರ ಸಾಧ್ಯವಿಲ್ಲ. ಉದಾ : ಕ್+ಅ=ಕ. ವ್ಯಂಜನ ಸಂಜ್ಞೆಗಳಲ್ಲಿ ‘ಕ್’ಕಾರದಿಂದ ‘ಮ್’ಕಾರದವರೆಗೆ ಒಟ್ಟು 25 ಅಕ್ಷರಗಳಿವೆ.[೧] ವ್ಯಂಜನದ ಒಳವರ್ಗಗಳಿದ್ದು ಅವುಗಳನ್ನು ವರ್ಗೀಕರಿಸಲು ಸಾಧ್ಯ. ಹೀಗೆ ವರ್ಗೀಕರಿಸಲು ಸಾಧ್ಯವಾಗುವ ಅಕ್ಷರಗಳನ್ನು ವರ್ಗೀಯ ವ್ಯಂಜನಗಳು ಎಂದು ಕರೆಯುತ್ತಾರೆ, ವರ್ಗೀಯ ವ್ಯಂಜನಗಳನ್ನು ಹೇಗೆ ಬೇಕಾದರೂ ವರ್ಗೀಕರಿಸಲು ಸಾಧ್ಯ.

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು

ವರ್ಗ

  • ‘ಕ್’ವರ್ಗದ ವ್ಯಂಜನಗಳು - ಕ್ ಖ್ ಗ್ ಘ್ ಙ - 5
  • ‘ಚ್’ವರ್ಗದ ವ್ಯಂಜನಗಳು - ಚ್ ಛ್ ಜ್ ಝ್ ಞ - 5
  • ‘ಟ್’ವರ್ಗದ ವ್ಯಂಜನಗಳು – ಟ್ ಠ್ ಡ್ ಢ್ ಣ - 5
  • ‘ತ್’ವರ್ಗದ ವ್ಯಂಜನಗಳು – ತ್ ಥ್ ದ್ ಧ್ ನ್ - 5
  • ‘ಪ್’ವರ್ಗದ ವ್ಯಂಜನಗಳು - ಪ್ ಫ್ ಬ್ ಭ್ ಮ್ - 5

ವರ್ಗೀಯ ವ್ಯಂಜನಗಳು ಭಾಷಾವಿಜ್ಞಾನದ ನೆಲೆಯಲ್ಲಿ ವರ್ಗಗಳಾಗಿ

ವರ್ಗೀಯ ವ್ಯಂಜನಗಳು
ಕಂಠ್ಯ (ಕವರ್ಗ)
ತಾಲವ್ಯ (ಚವರ್ಗ)
ಮೂರ್ಧನ್ಯ (ಟವರ್ಗ)
ದಂತ್ಯ (ತವರ್ಗ)
ಓಷ್ಠ್ಯ (ಪವರ್ಗ)

ಉಚ್ಛಾರದ ನೆಲೆಯಲ್ಲಿ ವರ್ಗೀಯಗಳು

ಅಲ್ಪಪ್ರಾಣ

ಈ ವರ್ಗಾಕ್ಷರಗಳಲ್ಲಿ ಪ್ರತಿ ವರ್ಗದ ಪ್ರಥಮ, ತೃತೀಯ ವರ್ಗದ ಕ್, ಚ್ , ಟ್ , ತ್ , ಪ್, ಗ್ , ಜ್ , ಡ್ , ದ್ , ಬ್ ಅಕ್ಷರಗಳನ್ನು ‘ಅಲ್ಪಪ್ರಾಣ’ ಅಥವಾ ಸರಳವೆಂದು ಕರೆಯುತ್ತಾರೆ. ಅಲ್ಪ ಉಸಿರಾಟದಲ್ಲಿ ಉಚ್ಚರಿಸುವ ವ್ಯಂಜನಗಳು.

ಸ್ಥಾನಅಲ್ಪಪ್ರಾಣIPA ಅಕ್ಷರ
ಕಂಠ್ಯ (ಕವರ್ಗ) Ka ga
ತಾಲವ್ಯ (ಚವರ್ಗ) ca ja
ಮೂರ್ಧನ್ಯ (ಟವರ್ಗ) Ṭa ḍa
ದಂತ್ಯ (ತವರ್ಗ) ta da
ಓಷ್ಠ್ಯ (ಪವರ್ಗ) pa ba

ಮಹಾಪ್ರಾಣ

ದ್ವಿತೀಯಾ, ಚತುರ್ಥ ವರ್ಗದ ಖ್ , ಛ್ , ಠ್ , ಥ್, ಫ್, ಘ್ , ಝ್ , ಢ್ , ಧ್ , ಭ್ ಅಕ್ಷರಗಳನ್ನು ‘ಮಹಾಪ್ರಾಣ ಅಕ್ಷರ’ ಅಥವಾ ಪರುಷಾಕ್ಷರವೆಂದು ಕರೆಯುತ್ತಾರೆ. ನಿಟ್ಟುಸಿರಿನೊಂದಿಗೆ ನಾಭಿಮೂಲದಿಂದ ಉಚ್ಚರಿಸುವ ವ್ಯಂಜನಗಳು ಮಹಾಪ್ರಾಣ ಅಕ್ಷರಗಳು.

ಸ್ಥಾನಮಹಾಪ್ರಾಣIPA ಅಕ್ಷರ
ಕಂಠ್ಯ (ಕವರ್ಗ) Ka ga
ತಾಲವ್ಯ (ಚವರ್ಗ) ca ja
ಮೂರ್ಧನ್ಯ (ಟವರ್ಗ) Ṭa ḍa
ದಂತ್ಯ (ತವರ್ಗ) ta da
ಓಷ್ಠ್ಯ (ಪವರ್ಗ) pa ba

ಅನುನಾಸಿಕ

ವರ್ಗದ ಪಂಚಮಾಕ್ಷರ ಙ್ , ಞ್ , ಣ್ , ನ್, ಮ್ ಗಳನ್ನು ‘ಅನುನಾಸಿಕ ಅಕ್ಷರ’ವೆಂದು ಕರೆಯುತ್ತಾರೆ. ಅನುನಾಸಿಕ ಎಂದರೆ ಮೂಗಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳು.

ಸ್ಥಾನಅನುನಾಸಿಕIPA ಅಕ್ಷರ
ಕಂಠ್ಯ (ಕವರ್ಗ)Ṅa
ತಾಲವ್ಯ (ಚವರ್ಗ)Ña
ಮೂರ್ಧನ್ಯ (ಟವರ್ಗ)Ṇa
ದಂತ್ಯ (ತವರ್ಗ)Na
ಓಷ್ಠ್ಯ (ಪವರ್ಗ)Ma

ಉಲ್ಲೇಖ