ವಿಷಯಕ್ಕೆ ಹೋಗು

ನಿಹಾಲಿ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂಡೋ ಆರ್ಯನ್,ದ್ರಾವಿಡ, ಟಿಬೆಟ್ ಬರ್ಮನ್, ಆಸ್ಟ್ರೋ ಎಷಿಯಾಟಿಕ್ ಎಂದು ನಾಲ್ಕು ಭಾಗಗಳಾಗಿ ಭಾರತದ ಭಾಷೆಗಳನ್ನು ವರ್ಗಿಕರಿಸುತ್ತಾರೆ. ಆದರೆ ಯಾವ ಭಾಷ ಕುಟುಂಬಕ್ಕೂ ಸೇರದೆ, ತನ್ನದೆ ಆದ ವಿಶಿಷ್ಟ ಸಂಸ್ಕೃತಿಯನ್ನು, ಶೈಲಿಯನ್ನು ಹೊಂದಿರುವ‍ ಭಾ‍‍‍‍‍‍‍ಷೆಗಳಲ್ಲಿ ಮೊದಲ ಸಾಲಿನಲ್ಲಿ ಬರುವಂತಹದು ನಿಹಾಲಿ.

ರಹಸ್ಯ ಭಾಷೆಯಾಗಿ ನಿಹಾಲಿ

ಮಹಾರಾಷ್ಟ್ರದ ಜಾಲ್ಗಾಂವ್ ಜಾಮೋದ್ನಲ್ಲಿ ಸುಮಾರು ೨೫೦೦ ಆದಿವಾಸಿಗಳು ನಿಹಾಲಿ ಭಾಷೆಯನ್ನು ಮಾತನಾಡುತ್ತಾರೆ.[೧]ನಿಹಾಲಿಯನ್ನು ಹೆಚ್ಚು ಕಡಿಮೆ ರಹಸ್ಯ ಭಾಷೆಯಾಗಿ ಬಳಸುತ್ತಾರೆ. ಅದು ಸಾಮಾನ್ಯವಾಗಿ ಹೊರಗಿನವರಿಗೆ ಬಹಿರಂಗವಾಗುವುದಿಲ್ಲ.ನಿಹಾಲಿ ಭಾಷೆಯ ಭಾಷಣಕಾರರು ಇದ್ದಾರೆ.ಆದರೆ ಅಲ್ಲಿ ಹೆಚ್ಚು ಹಿಂದಿಯನ್ನು ಅಳವಡಿಸಿಕೊಳ್ಳಲು ಸರ್ಕಾರ ಒಲವು ತೋರಿಸುತ್ತಿದೆ.

ಆದಿವಾಸಿಗಳ ಭಾಷೆ

ನಿಹಾಲಿಯನ್ನು ಮಾತನಾಡುವ ಸ್ಥಳಿಯ ಬುಡಕಟ್ಟು ಜನರು ಮರಾಠಿ, ಕೊರ್ಕು ಮತ್ತು ಹಿಂದಿಯಂತಹ ಇತರ ಭಾಷೆಗಳನ್ನು ಮಾತನಾಡುವವರೊಂದಿಗೆ ಆಂತರ್ ವಿವಾಹವಾದರು. ಒಂದು ಮಗು ಮನೆಯಲ್ಲಿ ನಿಹಾಲಿಯನ್ನು ಮಾತನಾಡುತ್ತಿದ್ದರ, ಒಮ್ಮೆ ಅವನು ತರಗತಿಗೆ ಪ್ರವೇಶಿಸಿದಾಗ ಆ ಶಾಲೆಯ ಬೊಧನ ಭಾಷೆಗೆ ಬದಲಾಗುತ್ತಾನೆ. ಪೋಷಕರು ತಮ್ಮ ಮಕ್ಕಳೊಂದಿಗೆ ಮಾತೃಭಾ‍‍‍‍ಷೆಯನ್ನು ಮಾತನಾಡಿದಾಗ ಈ ನಿಹಾಲಿ ಭಾಷೆ ಜೀವಂತವಾಗಿರುತ್ತದೆ.

ನಿಹಾಲಿ ಭಾಷೆಯಲ್ಲಿ ಜನಪದ ಸಾಹಿತ್ಯ

ನಿಹಾಲಿ ಭಾಷೆಯ ಜನರು ತಮ್ಮ ಭಾಷೆಯಲ್ಲಿ ಜಾನಪದ ಕಥೆಗಳು ಮತ್ತು ಹಾಡುಗಳನ್ನು ಹಾಡುತ್ತಾರೆ, ಅವರ ಇತಿಹಾಸ ಮತ್ತು ಪುರಾಣಗಳು ನಿಜವಾಗಿಯೂ ಎಷ್ಟು ಶ್ರೀಮಂತವಾಗಿವೆ ಎಂಬುದು ತಿಳಿಯುತ್ತದೆ.[೨]

ನಿಹಾಲಿ ಭಾಷೆ ಇತರ ಸಮುದಾಯಗಳಿಗಿಂತ ಭಿನ್ನವಾಗಿದೆ ಮತ್ತು ಕಡಿಮೆ ಸಂಖ್ಯೆಯ ಭಾಷಿಕರು ಇದ್ದಾರೆ ಎಂದು ಅವರಿಗೆ ಈಗ ತಿಳಿದಿದೆ ನಿಹಾಲಿ ಭಾಷೆಯನ್ನು ರಕ್ಷಿಸಬಲ್ಲ ವಿಧಾನಗಳ ಕುರಿತು ಭಾಷಾವಿಜ್ಞಾನಿಗಳು ಪ್ರಶ್ನಿಸಿದಾಗ ಅವರು ನಿಹಾಲಿ ಆದರಿತ ಬೋಧನೆ ಸಾಮಾಗ್ರಿಗಳನ್ನು ತಯಾರಿಸಲು ಮತ್ತು ಬೋಧಿಸಲು ಸೂಚಿಸುತ್ತಾರೆ.

ಉಲ್ಲೇಖಗಳು

🔥 Top keywords: ಮುಖ್ಯ ಪುಟಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಕನ್ನಡಗಾದೆಪಿ.ಲಂಕೇಶ್ಬಸವೇಶ್ವರದ.ರಾ.ಬೇಂದ್ರೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನ್ನಡ ಅಕ್ಷರಮಾಲೆಶಿವರಾಮ ಕಾರಂತಭಾರತದ ಸಂವಿಧಾನಕನ್ನಡ ಸಂಧಿಕನ್ನಡ ಗುಣಿತಾಕ್ಷರಗಳುಕರ್ನಾಟಕದ ಏಕೀಕರಣಬಿ. ಆರ್. ಅಂಬೇಡ್ಕರ್ಗೌತಮ ಬುದ್ಧಮಹಾತ್ಮ ಗಾಂಧಿಕರ್ನಾಟಕರಾಘವಾಂಕಕರ್ನಾಟಕದ ಜಿಲ್ಲೆಗಳುಕರ್ನಾಟಕದ ಇತಿಹಾಸವಚನ ಸಾಹಿತ್ಯಪುರಂದರದಾಸರಾಷ್ಟ್ರೀಯ ಸೇವಾ ಯೋಜನೆಮಾಸ್ತಿ ವೆಂಕಟೇಶ ಅಯ್ಯಂಗಾರ್ಹೊಯ್ಸಳಭಾರತೀಯ ಮೂಲಭೂತ ಹಕ್ಕುಗಳುಅಕ್ಕಮಹಾದೇವಿಪೂರ್ಣಚಂದ್ರ ತೇಜಸ್ವಿರಾಮಾಯಣಪಂಪಕನ್ನಡ ಸಾಹಿತ್ಯಅರ್ಜುನಭಾರತೀಯ ಸಂಸ್ಕೃತಿಜಾನಪದಸಮಾಸಜನಪದ ಕಲೆಗಳು