ಅಚ್ಯುತ್ ಕುಮಾರ್

ಅಚ್ಯುತ್ ಕುಮಾರ್ ಕನ್ನಡದ ಚಲನಚಿತ್ರ ನಟ . ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದಲ್ಲಿ ಜನಿಸಿದರು. ಅವರು ಬೆಂಗಳೂರಿನ ವಿಶ್ವವಿದ್ಯಾನಿಲಯದ ಕಲ್ಪತರು ಪ್ರಥಮ ದರ್ಜೆ ಕಾಲೇಜಿನಿಂದ ಪದವಿ ಶಿಕ್ಷಣದಲ್ಲಿ ಪದವಿ ಪಡೆದರು. ಅವರ ಸಿದ್ಲಿಂಗು ಮತ್ತು ಲೂಸಿಯಾ ಚಲನಚಿತ್ರಗಳಲ್ಲಿನ ಅಭಿನಯಕ್ಕಾಗಿ ಪ್ರಸಿದ್ಧರಾದರು ಮತ್ತು ಅವರು 3 ಫಿಲ್ಮ್ಫೇರ್ ಪ್ರಶಸ್ತಿಗಳು, 2 ಕರ್ನಾಟಕ ರಾಜ್ಯ ಚಲನಚಿತ್ರ ಅತ್ಯುತ್ತಮ ಪ್ರಶಸ್ತಿಯನ್ನು ಗೆದ್ದಿದ್ದಾರೆ.[೧]

ಅಚ್ಯುತ್ ಕುಮಾರ್
Achyuth Kumar
ಜನನ
ರಾಷ್ಟ್ರೀಯತೆಭಾರತೀಯ
ವೃತ್ತಿನಟ
Years active2000-ಪ್ರಸ್ತುತ

ವೃತ್ತಿಜೀವನ

ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ನಿನಾಸಮ್ನಲ್ಲಿ ನಟನಾಗಿ ಅಚ್ಯುತ್ ಕುಮಾರ್ ತರಬೇತಿಯನ್ನು ಪ್ರಾರಂಭಿಸಿದರು.ಆ ಸಮಯದಲ್ಲಿ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ಕಸರವಳ್ಳಿ 2000 ದಲ್ಲಿ ತನ್ನ ದೂರದರ್ಶನ ಧಾರಾವಾಹಿ ಗ್ರಹಭಂಗದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲು ಆಯ್ಕೆಯಾದರು. ಮೂಡಲ ಮನೆ ,ಪ್ರೀತಿ ಇಲ್ಲದ ಮೆಲೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ[೨]

ಕುಮಾರ್ ಅವರ ವೃತ್ತಿಜೀವನದಲ್ಲಿ 2007 ರಲ್ಲಿ ಪ್ರಾರಂಭವಾಯಿತು. ಅವರು ಮೊಗ್ಗಿನ ಮನಸುನಲ್ಲಿ ನಾಯಕಿಯ ತಂದೆಯ ಪಾತ್ರವನ್ನು ನಿರ್ವಹಿಸಲು ಸಹಿ ಹಾಕಿದರು. ಮತ್ತು ಆದಿನಗಳು ನಲ್ಲಿ ಐಲ್ ಕುಮಾರ್ ಪಾತ್ರವನ್ನು ನಿರ್ವಹಿಸಿದರು . ಅವರು ತಮ್ಮ ನಟನಾಗಿ ಖ್ಯಾತಿಯನ್ನು ಗಳಿಸಿದರು ಮತ್ತು ವರ್ಷಕ್ಕೆ 12 ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು.ಅವರು ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡರು, 2013 ಚಲನಚಿತ್ರ ಲೂಸಿಯಾದಲ್ಲಿ ಅವರು ವ್ಯಾಪಕ ಮೆಚ್ಚುಗೆಯನ್ನು ಪಡೆದಿದ್ದಾರೆ.ಈ ಚಿತ್ರದಲ್ಲಿ, ಅವರು ಶಂಕರಣ್ಣ ಪಾತ್ರವನ್ನು ನಿರ್ವಹಿಸಿದರು,ಒಬ್ಬ ಚಲನಚಿತ್ರ ರಂಗಮಂದಿರ ಮಾಲೀಕ ಮತ್ತು ಚಿತ್ರದ ಪ್ರಮುಖ ಪಾತ್ರ ನಿಖಿಲ್ ನ ಉದ್ಯೋಗದಾತ ಸತೀಶ್ ನಿನಾಸಾಮ್ ಅಭಿನಯಿಸಿದ್ದಾರೆ.  ಈ ಸಾಧನೆ ಅವರಿಗೆ ಅತ್ಯುತ್ತಮ ಪೋಷಕ ನಟನಿಗಾಗಿರುವ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.[೩]

ಹೆಜ್ಜೆಗಳು (2013) ರಲ್ಲಿ, ಕುಮಾರ್ ಜೂಜಿನ ವ್ಯಸನಿ, ಕೊಂದಂಡ ಪಾತ್ರವನ್ನು ನಿರ್ವಹಿಸಿದರು ,ಅವರ ಈ ನಟನೆಗೆ ಕರ್ನಾಟಕ ರಾಜ್ಯ ಚಲನಚಿತ್ರ ಅತ್ಯುತ್ತಮ ಪೋಷಕ ನಟನಿ ಪ್ರಶಸ್ತಿಯನ್ನು ಪಡೆದರು .ಅವರು ಅಮರಾವತಿ (2017) ನಲ್ಲಿನ ಶಿವಪ್ಪ ಪಾತ್ರಕ್ಕಾಗಿ ಪ್ರಶಂಸೆ ಗಳಿಸಿದರು, ಮಕ್ಕಳ ಕಳ್ಳಸಾಗಣೆಗೆ ಸಂಬಂಧಿಸಿದ ಊರ್ವಿ (2017) ನಲ್ಲಿ, ಅವರು ಮಹಿಳೆಯರನ್ನು ಅಪಹರಿಸಿ, ಅವರನ್ನು ಅತ್ಯಾಚಾರ ಮಾಡಿ ವೇಶ್ಯಾವಾಟಿಕೆಗೆ ಒತ್ತಾಯಿಸುವ ಪ್ರಭಾವೀ ವ್ಯಕ್ತಿಯಾದ ದೇವರುಗುಂಡ ಪಾತ್ರ ನಿರ್ವಹಿಸಿದ್ದಾರೆ.[೪][೫][೬][೭][೮]

ಉಲ್ಲೇಖಗಳು