ಅರಿಸಿನ ಗುರುಗಿ

ಅರಿಸಿನ ಗುರುಗಿ
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
Rosids
ಗಣ:
Malpighiales
ಕುಟುಂಬ:
Clusiaceae
ಉಪಕುಟುಂಬ:
Clusioideae
ಪಂಗಡ:
Garcinieae
ಕುಲ:
Garcinia
ಪ್ರಜಾತಿ:
G. morella
Binomial name
Garcinia morella
(Gaertn.) Desr.
Synonyms

Garcinia gaudichaudii , Mangostana morella Gaertn. , Garcinia elliptica Wall. , Garcinia guttaWt.[೧]

ಅರಿಸಿನ ಗುರುಗಿ : ಗಟ್ಟಿಫೆರೀ (ಕ್ಲೂಸಿಯೇಸೀ) ಕುಟುಂಬದ ಗಾರ್ಸಿನಿಯ ಮೊರೆಲಎಂಬ ವೃಕ್ಷ. ಇದಕ್ಕೆ ಅರದಾಳ, ಕಣ್‍ಕುಟಿಗ, ದೇವನಹುಳಿ ಎಂಬ ಹೆಸರುಗಳೂ ಇವೆ.ಇದು ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ಚಿಕ್ಕ ಗಾತ್ರದ ಮರ, ಇದರ ಅಂಟು ಔಷದಿಗೂಬಣ್ಣಕ್ಕೂ ಉಪಯುಕ್ತವಾಗಿದೆ; ಕ್ರಿಮಿನಾಶಕವೂ ಹೌದು. ಇದರ ವಿಶೇಷ ವ್ಯವಸಾಯಥೈಲೆಂಡ್ ಪ್ರದೇಶಗಳಲ್ಲಿದೆ. ಮಳೆಗಾಲದಲ್ಲಿ ಕಾಂಡದಲ್ಲಿ ಗೀರಿ ಅಂಟನ್ನು ಶೇಖರಿಸುತ್ತಾರೆ.ಒಣಗಿದ ಅಂಟನ್ನು ನೀರಿಗೆ ಹಾಕಿದರೆ ಹಳದಿ ಬಣ್ಣದ ಜಿಡ್ಡುದ್ರವ ಬರುತ್ತದೆ. ಅಮೋನಿಯದ್ರಾವಣ ಹಾಕಿದಾಗ ಕರಗಿ ಬರುವ ಹಳದಿ ದ್ರವ ಜಿಂಕ್ ಅಲ್ಯೂಮಿನಿಯಮ್, ಸುಣ್ಣಇತ್ಯಾದಿ ಬಣ್ಣಗಚ್ಚುಗಳಿಂದ ಹಳದಿ ಅಥವಾ ಕೆಂಪು ಬಣ್ಣಕೊಡುತ್ತದೆ. ಬೀಜದ ಎಣ್ಣೆದೀಪ ಉರಿಸಲು ಬರುತ್ತದೆ. ಕೊಬ್ಬನ್ನು ತುಪ್ಪದಂತೆ ಬಳಸುತ್ತಾರೆ.(ಎ.ಕೆ.ಎಸ್.)

ಉಲ್ಲೇಖಗಳು