ಅಲ್ಫ ಕಣ
ಅಲ್ಫ ಕಣ(α)ಎಂದರೆ ಒಂದು ವಿಕಿರಣಶೀಲ ಮೂಲವಸ್ತುವು ವಿಕಿರಣ ಹೊಂದುತ್ತಿರುವಾಗ ಹೊರಹೊಮ್ಮಿಸುವ ಧನವಿದ್ಯುತ್ ಅಂಶವಿರುವ ಕಣ.ಈ ಕ್ರಿಯೆಗೆ ಅಲ್ಫ ಕ್ಷಯ (alpha decay)ಎಂದು ಹೆಸರು. ಅಲ್ಫ ಕಣವು ಹೀಲಿಯಮ್ ನ ಪರಮಾಣುವಿನಂತಿರುತ್ತದೆ.ಇದರಲ್ಲಿ ಎರಡು ಪ್ರೋಟಾನ್ಗಳು ಎರಡು ನ್ಯೂಟ್ರಾನ್ಗಳಿಗೆ ಬಲವಾಗಿ ಬೆಸೆದುಕೊಂಡಿರುತ್ತದೆ.ಆದುದರಿಂದ ಇದನ್ನು He2+ ಅಥವಾ 42He2+ ಎಂದು ಬರೆಯಬಹುದು.ಇದರ ದ್ರವ್ಯರಾಶಿ 6.644656×10-27 kg,ಆಗಿದ್ದು ಬೀಟ ಕಣಗಳಿಗಿಂತ ಸುಮಾರು ೭೦೦೦ ಪಟ್ಟು ಭಾರವಾಗಿರುತ್ತವೆ.ಒಂದು ಮೂಲವಸ್ತುವಿನಿಂದ ಅಲ್ಫ ಕಣಗಳು ಹೊರಹೊಮ್ಮಿದಾಗ ಅದರ ದ್ರವ್ಯರಾಶಿಯು 4.0015 u ರಷ್ಟು ಕಡಿಮೆಯಾಗಿ, ಅಂದರೆ ಅದರ ಎರಡು ಪ್ರೊಟಾನುಗಳು ಕಡಿಮೆಯಾಗುವುದರಿಂದ ಅದು ಹೊಸ ಪರಮಾಣುವಾಗಿ ಪರಿವರ್ತನೆ ಹೊಂದುತ್ತದೆ.ಉದಾಹರಣೆಗೆ ರೇಡಿಯಮ್ ಮೂಲವಸ್ತುವು ಅಲ್ಫ ಕ್ಷಯ(alpha decay)ಕ್ಕೆ ಒಳಪಟ್ಟಾಗ ರೇಡಾನ್ ಆಗಿ ಪರಿವರ್ತನೆ ಹೊಂದುತ್ತದೆ.ಗ್ರೀಕ್ ವರ್ಣಮಾಲೆಯ ಮೊದಲ ಅಕ್ಷರ "ಆಲ್ಫಾ" - α ನ ನಂತರ ಅಲ್ಫ ಕಣವನ್ನು ಹೆಸರಿಸಲಾಗಿದೆ.
🔥 Top keywords: ಮುಖ್ಯ ಪುಟಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಕನ್ನಡಗಾದೆಪಿ.ಲಂಕೇಶ್ಬಸವೇಶ್ವರದ.ರಾ.ಬೇಂದ್ರೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನ್ನಡ ಅಕ್ಷರಮಾಲೆಶಿವರಾಮ ಕಾರಂತಭಾರತದ ಸಂವಿಧಾನಕನ್ನಡ ಸಂಧಿಕನ್ನಡ ಗುಣಿತಾಕ್ಷರಗಳುಕರ್ನಾಟಕದ ಏಕೀಕರಣಬಿ. ಆರ್. ಅಂಬೇಡ್ಕರ್ಗೌತಮ ಬುದ್ಧಮಹಾತ್ಮ ಗಾಂಧಿಕರ್ನಾಟಕರಾಘವಾಂಕಕರ್ನಾಟಕದ ಜಿಲ್ಲೆಗಳುಕರ್ನಾಟಕದ ಇತಿಹಾಸವಚನ ಸಾಹಿತ್ಯಪುರಂದರದಾಸರಾಷ್ಟ್ರೀಯ ಸೇವಾ ಯೋಜನೆಮಾಸ್ತಿ ವೆಂಕಟೇಶ ಅಯ್ಯಂಗಾರ್ಹೊಯ್ಸಳಭಾರತೀಯ ಮೂಲಭೂತ ಹಕ್ಕುಗಳುಅಕ್ಕಮಹಾದೇವಿಪೂರ್ಣಚಂದ್ರ ತೇಜಸ್ವಿರಾಮಾಯಣಪಂಪಕನ್ನಡ ಸಾಹಿತ್ಯಅರ್ಜುನಭಾರತೀಯ ಸಂಸ್ಕೃತಿಜಾನಪದಸಮಾಸಜನಪದ ಕಲೆಗಳು