ಉಷ್ಣಾಯಾನ್ ಉತ್ಸರ್ಜನೆ

ಉಷ್ಣಾಯಾನ್ ಉತ್ಸರ್ಜನೆ ಎಂದರೆ ಲೋಹವನ್ನು ಕಾಸಿದಾಗ ಉಂಟಾಗುವ ಎಲೆಕ್ಟ್ರಾನುಗಳ ಉತ್ಸರ್ಜನೆ (ಥರ್ಮಯಾನಿಕ್ ಎಮಿಶನ್). ಲೋಹವನ್ನು ಕಾಸಿದಾಗ ಆಂಶಿಕವಾಗಿ ತುಂಬಿರುವ ಶಕ್ತಿಪಟ್ಟೆಗಳಲ್ಲಿರುವ ಎಲೆಕ್ಟ್ರಾನುಗಳು ಶಕ್ತಿ ಪಡೆದು ಹೆಚ್ಚು ವೇಗವಾಗಿ ಚಲಿಸತೊಡಗುತ್ತವೆ. ಸಾಕಷ್ಟು ಶಕ್ತಿ ಪಡೆದೊಡನೆ ಲೋಹದಿಂದ ಅವುಗಳ ಉತ್ಸರ್ಜನೆಯಾಗುತ್ತದೆ. ಈ ಉತ್ಸರ್ಜಿತ ಎಲೆಕ್ಟ್ರಾನುಗಳಿಂದ ಉಂಟಾಗುವುದೇ ಉಷ್ಣಾಯಾನ್ (ಥರ್ಮಯಾನಿಕ್) ವಿದ್ಯುತ್ಪ್ರವಾಹ. ತಾಪದೊಂದಿಗೆ ಈ ವಿದ್ಯುತ್ಪ್ರವಾಹ ಸಾಂದ್ರತೆ ಹೇಗೆ ಬದಲಾಗುವುದೆಂಬುದನ್ನು ನೊಬೆಲ್ ಪುರಸ್ಕೃತ ಬ್ರಿಟಿಷ್ ಭೌತವಿಜ್ಞಾನಿ ಓವೆನ್ ವಿಲ್ಯಾನ್ಸ್ ರಿಚರ್ಡ್ಸನ್ (1879-1959) ಆವಿಷ್ಕರಿಸಿದ ಸೂತ್ರ ವಿವರಿಸುತ್ತದೆ.

ಈ ವಿದ್ಯಮಾನವನ್ನು ಮೊದಲು ಎಡ್ಮಂಡ್ ಬೆಕ್ವೆರೆಲ್ ೧೮೫೩ರಲ್ಲಿ ವರದಿ ಮಾಡಿದನು.[೧][೨][೩] ಇದನ್ನು ೧೮೭೩ರಲ್ಲಿ ಬ್ರಿಟನ್‍ನಲ್ಲಿ ಫ್ರೆಡರಿಕ್ ಗುಥ್ರಿ ಮರುಶೋಧಿಸಿದನು.[೪][೫]

ಉಲ್ಲೇಖಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: