ಕೇಸರಿ (ಪತ್ರಿಕೆ)

ಕೇಸರಿ ಒಂದು ಮರಾಠಿ ದಿನಪತ್ರಿಕೆಯಾಗಿದ್ದು, ಇದು 1881 ರಲ್ಲಿ ಭಾರತೀಯ ಸ್ವಾತಂತ್ರ್ಯ ಚಳವಳಿಯ ಪ್ರಮುಖ ನಾಯಕ ಲೋಕಮಾನ್ಯ ಬಾಲ ಗಂಗಾಧರ ತಿಲಕರಿಂದ ಸ್ಥಾಪಿಸಲ್ಪಟ್ಟಿತು. ಈ ವೃತ್ತಪತ್ರಿಕೆ ಭಾರತೀಯ ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಯ ಒಂದು ಭಾಗವಾಗಿ ಬಳಸಲ್ಪಟ್ಟಿತು ಮತ್ತು ಕೇಸರಿ ಮರಾಠ ಟ್ರಸ್ಟ್ ಮತ್ತು ತಿಲಕರ ವಂಶಸ್ಥರು ಇದನ್ನು ಪ್ರಕಟಿಸಿದರು.

ಕೇಸರಿ Kesari
ವಿಧದಿನ ಪತ್ರಿಕೆ
ಸ್ಥಾಪನೆ1881
ಭಾಷೆMarathi
ಅಧಿಕೃತ ಜಾಲತಾಣdailykesari.com

ಬಾಲ ಗಂಗಾಧರ ತಿಲಕ್ ಅವರ ಎರಡು ಪತ್ರಿಕೆಗಳಾದ ಕೇಸರಿ, ಮರಾಠಿ ಮತ್ತು ಮರಾಠಾ (ಕೇಸರಿ-ಮರಾಠಾ ಟ್ರಸ್ಟ್ನಿಂದ ಚಾಲಿತ ) ಅನ್ನು ಕೇಸರಿ ವಾಡಾ, ನಾರಾಯಣ ಪೇಟ್ , ಪುಣೆಯಿಂದ ಇಂಗ್ಲಿಷ್ನಲ್ಲಿ ಪ್ರಕಟಿಸುತ್ತಿದ್ದರು. ಚಿಪ್ಪುನ್ಕುರ್, ಅಗಾರ್ಕರ್ ಮತ್ತು ತಿಲಕರಿಂದ ಪತ್ರಿಕೆಗಳು ಮೂಲತಃ ಸಹಕಾರವಾಗಿ ಪ್ರಾರಂಭಿಸಲ್ಪಟ್ಟವು.[೧][೨][೩]

ಆರಂಭಿಕ ವರ್ಷಗಳು, ಸಂಪಾದಕರು ಮತ್ತು ಬರಹಗಾರರು

ಕೇಸರಿ ಸಂಪಾದಕರಲ್ಲಿ ಹಲವಾರು ಸ್ವಾತಂತ್ರ್ಯ ಯೋಧರು ಮತ್ತು ಸಾಮಾಜಿಕ ಕಾರ್ಯಕರ್ತರು / ಸುಧಾರಕರು, ಅಗರ್ಕರ್ (ಅದರ ಮೊದಲ ಸಂಪಾದಕ), ಚಿಪ್ಲುನ್ಕರ್ ಮತ್ತು ತಿಲಕ್ ಮೊದಲಾದವರು ಸೇರಿದ್ದಾರೆ. 1887 ರಲ್ಲಿ ಅಗರ್ಕರ್ ತಮ್ಮ ಸ್ವಂತ ಸುದ್ದಿ ಪತ್ರಿಕೆಯಾದ ಸುಧಾರಕ್ (ದಿ ರಿಫಾರ್ಮರ್) ಅನ್ನು ಪ್ರಾರಂಭಿಸಲು ಕೇಸರಿಯನ್ನು ಬಿಟ್ಟು, ನಂತರದ ದಿನಗಳಲ್ಲಿ ತಿಲಕ್ ತಮ್ಮದೇ ಆದ ಪತ್ರಿಕೆ ಪ್ರಕಟಿಸುತ್ತಿದ್ದರು.[೪]'[೫]

ಉಲ್ಲೇಖ