ಚಕ್ರಾತಾ

ಚಕ್ರಾತಾ ಭಾರತದ ಉತ್ತರಾಖಂಡ್ ರಾಜ್ಯದಲ್ಲಿರುವ ಒಂದು ದಂಡು ಪಟ್ಟಣ ಮತ್ತು ಡೆಹ್ರಾಡೂನ್ ಜಿಲ್ಲೆಯ ಒಂದು ಉಪ ಜಿಲ್ಲೆ / ತಹಸಿಲ್ ಕೂಡ ಆಗಿದೆ.

ಚಕ್ರಾತಾದ ದೇವ್‍ಬನ್‌ನಿಂದ ನೋಟ

ಪ್ರವಾಸೋದ್ಯಮ ಮತ್ತು ಪ್ರಕೃತಿ

ಬುಧೇರ್ ಅರಣ್ಯ ವಿಶ್ರಾಮಗೃಹದಲ್ಲಿ ಮಂಜುಳ್ಳ ಮುಂಜಾವು
ಅರಣ್ಯ ವಿಶ್ರಾಮಗೃಹ - ದೇವ್‍ಬನ್
ಹನೋಲ್‌ನಲ್ಲಿರುವ ಪ್ರಾಚೀನ ಮರದ ಮಹಾಸು ದೇವತಾ ದೇವಸ್ಥಾನ.

ಈ ಪ್ರದೇಶದಲ್ಲಿ ಶಂಕುಮರಗಳು, ರೋಡೋಡೆಂಡ್ರನ್‍ಗಳು ಮತ್ತು ಓಕ್‍ಗಳು ಹೇರಳವಾಗಿವೆ. ಕೆಂಪು ರೋಡೋಡೆಂಡ್ರನ್‍ಗಳು ಈ ಪ್ರದೇಶದಲ್ಲಿ ಹೆಚ್ಚು ಕಂಡುಬರುತ್ತವೆ. ಚಕ್ರಾತಾದ ಸಮೀಪವಿರುವ ಆಕರ್ಷಣೆಗಳು ಹೀಗಿವೆ:

  • ಟೈಗರ್ ಜಲಪಾತವು ಉತ್ತರಾಖಂಡದ ಅತಿ ಎತ್ತರದ ನೇರ ಜಲಪಾತವಾಗಿದೆ. ಇದು ಚಕ್ರಾತಾದಿಂದ 20 ಕಿ.ಮೀ ದೂರದಲ್ಲಿದೆ ಮತ್ತು 312 ಅಡಿ ಎತ್ತರವಿದೆ.
  • ಬುಧೇರ್ (ಮೊಯಿಲಾ ಡಂಡಾ) 2800 ಮೀಟರ್ ಎತ್ತರದಲ್ಲಿರುವ ಒಂದು ಸುಂದರವಾದ ಹುಲ್ಲುಗಾವಲು. ಬುಧೇರ್‌ನ ಕಾರ್ಸ್ಟ್ ಭೂದೃಶ್ಯಗಳು ಪ್ರಾಚೀನ ಸುಣ್ಣದ ಗುಹೆಗಳ ಜಾಲಕ್ಕೆ ನೆಲೆಯಾಗಿವೆ.
  • ಕನಾಸರ್ ಏಷ್ಯಾದ ಅತ್ಯುತ್ತಮ ಯೋಗ್ಯತೆಯ ದೇವದಾರ್ ಅರಣ್ಯದಿಂದ ಆವೃತವಾಗಿದೆ. ಇದು ಚಕ್ರಾತಾದ ಸಮೀಪವಿರುವ ಅತ್ಯುತ್ತಮ ಪಿಕ್ನಿಕ್ ತಾಣಗಳಲ್ಲಿ ಒಂದಾಗಿದೆ.
  • ಚಿಲ್ಮಿರಿ ಸೂರ್ಯಾಸ್ತದ ಸ್ಥಳವು ಸೂರ್ಯಾಸ್ತದ ಅತ್ಯುತ್ತಮ ನೋಟಗಳಲ್ಲಿ ಒಂದನ್ನು ನೀಡುವ ಸುಂದರವಾದ ಪ್ರಸ್ಥಭೂಮಿಯಾಗಿದೆ.
  • ಸುಮಾರು 2900 ಮೀಟರ್ ಎತ್ತರದಲ್ಲಿರುವ ದೇವ್‍ಬನ್ ಹಿಮಾಲಯದ ಪರಿದೃಶ್ಯ ನೋಟವನ್ನು ನೀಡುತ್ತದೆ.
  • ಮುಂಡಾಲಿ ಹುಲ್ಲುಗಾವಲುಗಳನ್ನು ತಲುಪುವುದು ಕಷ್ಟ, ಆದರೆ ಚಳಿಗಾಲದ ಕ್ರೀಡೆಗಳಿಗೆ ಬಹಳ ಸಾಮರ್ಥ್ಯವನ್ನು ಹೊಂದಿವೆ.
  • ಲಾಖಾಮಂಡಲ್ ಎಂಬುದು ಪುರಾತನ ಹಿಂದೂ ದೇವಾಲಯ ಸಂಕೀರ್ಣವಾಗಿದ್ದು, ಶಿವನಿಗೆ ಸಮರ್ಪಿತವಾಗಿದೆ ಮತ್ತು ಪಾಂಡವರೊಂದಿಗೆ ಸಂಬಂಧ ಹೊಂದಿದೆ.
  • ಬೈರತ್ ಖೈ ಕಣಿವೆಮಾರ್ಗ ಎಂದೂ ಕರೆಯಲ್ಪಡುವ ಬೈರತ್ ಖೈ (ಬೆಟ್ಟಗಳ ರಾಜಕುಮಾರಿ) ಚಕ್ರಾತಾದಿಂದ ಪೂರ್ವಕ್ಕೆ 25 ಕಿ.ಮೀ ದೂರದಲ್ಲಿದೆ. ಇಲ್ಲಿ ಜನರು ಉತ್ತರದಲ್ಲಿ ವರ್ಷವಿಡೀ ಹಿಮದಿಂದ ಆವೃತವಾದ ಹಿಮಾಲಯದ 180 ಡಿಗ್ರಿ ನೋಟವನ್ನು ವೀಕ್ಷಿಸಬಹುದು.
  • ಮಂಝ್‍ಗಾಂವ್ ಶಿವನಿಗೆ ಸಮರ್ಪಿತವಾದ ಪ್ರಾಚೀನ ಹಿಂದೂ ದೇವಾಲಯವಾಗಿದೆ. ಇದನ್ನು ಪ್ರಾದೇಶಿಕ ಭಾಷೆಯಲ್ಲಿ ಮಾಸು ದೇವತಾ ಎಂದು ಕರೆಯಲಾಗುತ್ತದೆ.

ವಿಸ್ತರಿತ ಸ್ಥಳಗಳು

ಹನೋಲ್ ಚಕ್ರಾತಾದಿಂದ 100 ಕಿ.ಮೀ. ದೂರದಲ್ಲಿದ್ದು ಸುಂದರವಾದ ರಜಾಸ್ಥಳವಾಗಿದೆ. ಹನೋಲ್‍ನಲ್ಲಿ ಮಹಾಸು ದೇವತಾ ದೇವಾಲಯವಿದೆ. ಇದು ಭಗವಾನ್ ಮಹಾಸುವಿಗೆ ಸಮರ್ಪಿತವಾಗಿದೆ.

ಉಲ್ಲೇಖಗಳು

ಹೊರಗಿನ ಕೊಂಡಿಗಳು