ದಿಗಂತ್ (ನಟ)

(ದಿಗಂತ್ ಇಂದ ಪುನರ್ನಿರ್ದೇಶಿತ)


ದಿಗಂತ್ ಮಂಚಾಲೆ , ಅಥವಾ ದಿಗಂತ್ , ಕನ್ನಡ ಚಲನಚಿತ್ರ ನಟ ಹಾಗು ರೂಪದರ್ಶಿ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಕೂಡ ಆಗಿದ್ದಾರೆ.[೧]

ದಿಗಂತ್
ದಿಗಂತ್
ಬೇರೆ ಹೆಸರುಗಳುದೂದ್ ಪೇಡ
ವೃತ್ತಿನಟ, ರೂಪದರ್ಶಿ
ವರ್ಷಗಳು ಸಕ್ರಿಯ೨೦೦೬-ಇಲ್ಲಿಯ ತನಕ
ಪತಿ/ಪತ್ನಿಐಂದ್ರಿತಾ ರೇ

ಆರಂಭಿಕ ಜೀವನ

ಇವರ ಹುಟ್ಟೂರು ಕರ್ನಾಟಕ ರಾಜ್ಯದ ಸಾಗರ. ಇವರು ವಾಣಿಜ್ಯ ಕ್ಷೇತ್ರದಲ್ಲಿ ಉನ್ನತ ಪದವಿ ಪಡೆದಿದ್ದಾರೆ. ಇವರ ಶಾಲಾ ವಿದ್ಯಾಭ್ಯಾಸ ತೀರ್ಥಹಳ್ಳಿಯಲ್ಲಿ ನಡೆಯಿತು, ಪಿ ಯು ಸಿ ಯನ್ನು ತುಂಗಾ ಮಹಾವಿದ್ಯಾಲಯ, ತೀರ್ಥಹಳ್ಳಿಯಲ್ಲಿ ಮುಗಿಸಿದರು. ದಿಗಂತನ ತಂದೆ ಕೃಷ್ಣಮೂರ್ತಿ ಅವರು ಪದವಿ ಕಾಲೇಜಿನ ಪ್ರಾಧ್ಯಾಪಕ. ದಿಗಂತ್ ಅವರಿಗೆ ಒಬ್ಬ ಸಹೋದರನಿದ್ದಾನೆ.

ವೃತ್ತಿಜೀವನ

ಇವರು ಕನ್ನಡ ಚಲನಚಿತ್ರೋದ್ಯಮಕ್ಕೆ ಪರಿಚಯಗೊಂಡಿದ್ದು ಮಿಸ್ ಕ್ಯಾಲಿಫೋರ್ನಿಯಾ ಇಂದ. ಅನಂತರದ ಚಲನಚಿತ್ರ ಎಸ್ ಎಂ ಎಸ್ ೬೨೬೦. ಆದರೆ ಇವರನ್ನು ಜನಪ್ರಿಯ ನಟನಾಗಿಸಿದ್ದು ಮುಂಗಾರು ಮಳೆ.[೨] ನಂತರ ಗಾಳಿಪಟ ಚಿತ್ರದಲ್ಲಿ ಕೂಡ ನಟಿಸಿದರು.[೩] 'ಗಾಳಿಪಟ'ದ ಯಶಸ್ಸಿನ ನಂತರ ದಿಗಂತ್ ಮುಖ್ಯ ಭೂಮಿಕೆಯಲ್ಲಿ ೫ ಚಲನಚಿತ್ರದಲ್ಲಿ ಕಂಡುಬಂದರು. ಮನಸಾರೆ ಇವರು ಏಕನಾಯಕನಾಗಿ ನಟಿಸಿದ ಮೊದಲ ಚಲನಚಿತ್ರ.[ಸೂಕ್ತ ಉಲ್ಲೇಖನ ಬೇಕು].

ಚಲನಚಿತ್ರಗಳು

ಬಿಡುಗಡೆಚಲನಚಿತ್ರನಿರ್ದೇಶಕಟಿಪ್ಪಣಿಗಳು
[ಯಾವಾಗ?]ಕಡಲ ಮಗೆ (ತುಳು)
೨೦೦೬ಮಿಸ್ ಕ್ಯಾಲಿಫೋರ್ನಿಯಾಕೂಡ್ಲು ರಾಮಕೃಷ್ಣ
೨೦೦೬ಮುಂಗಾರು ಮಳೆಯೋಗರಾಜ ಭಟ್ಅತಿಥಿ ಪಾತ್ರ
೨೦೦೭ಮೀರಾ ಮಾಧವ ರಾಘವಟಿ.ಎನ್.ಸೀತಾರಾಂ
೨೦೦೮ಗಾಳಿಪಟಯೋಗರಾಜ್ ಭಟ್
೨೦೦೯ಮಸ್ತ್ ಮಜಾ ಮಾಡಿಅನಂತ ರಾಜು
೨೦೦೯ಹೌಸ್ ಫುಲ್ಹೇಮಂತ್ ಹೆಗಡೆ
೨೦೦೯ಮನಸಾರೆಯೋಗರಾಜ ಭಟ್
೨೦೦೯ಬಿಸಿಲೆಸಂದೀಪ್ ಎಸ್ ಗೌಡ
೨೦೧೦ಸ್ವಯಂವರ
೨೦೧೦ಪಂಚರಂಗಿಯೋಗರಾಜ್ ಭಟ್
೨೦೧೧ಜಾಲಿ ಬಾಯ್ಸ್
೨೦೧೧ಮಿ.ಡುಪ್ಲಿಕೇಟ್
೨೦೧೧ಲೈಫು ಇಷ್ಟೇನೆಪವನ್ ಕುಮಾರ್
೨೦೧೧ಕಾಂಚಾಣ
೨೦೧೧ಪುತ್ರ

ಉಲ್ಲೇಖಗಳು