ನಿಯಾ ಶರ್ಮಾ

ಭಾರತೀಯ ಕಿರುತೆರೆ ನಟಿ

ನಿಯಾ ಶರ್ಮಾ(ಜನನː೧೭ ಸೆಪ್ಟೆಂಬರ್‌ ೧೯೯೦) ರವರೊಬ್ಬ ಭಾರತೀಯ ದೂರದರ್ಶನ ನಟಿ . ಇವರು ಸ್ಟಾರ್ ಪ್ಲಸ್‌ನ ಕಾಲಿ - ಏಕ್ ಅಗ್ನಿಪರಿಕ್ಷಾ [೧] ಎಂಬ ಧಾರವಾಹಿಯಲ್ಲಿ ಅನು ಎಂಬ ಪಾತ್ರದಲ್ಲಿ , ಏಕ್‌ ಹಜಾರೊ ಮೆ ಮೇರಿ ಬೆಹೆನಾ ಹೆ[೨] - ಮಾನ್ವಿ , ಜೀ ಟಿವಿಯ ಜಮಾಯಿ ರಾಜ[೩] - ರೋಶ್ನಿ ಪಟೇಲ್‌ , ಕಲರ್ಸ್‌ ಟಿವಿ ಯ ಇಷ್ಕ್‌ ಮೆ ಮರ್ಜಾವಾ[೪] - ಆರೋಹಿ ಕಶ್ಯಪ್‌ ನಂತಹ ಪಾತ್ರಗಳಲ್ಲಿ ಅಭಿನಯಿಸಿ ಇವರು ಹೆಸರುವಾಸಿಯಾಗಿದ್ದಾರೆ . ಇವರು ಖತ್ರೋನ್ ಕೆ ಖಿಲಾಡಿ ಯಲ್ಲಿ ಸ್ಪರ್ಧಿಯಾಗಿದ್ದು ಟಾಪ್‌ ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು .[೫].ನಿಯಾ ಶರ್ಮಾ ರವರು ಟ್ವಿಸ್ಟೆಡ್‌ ವೆಬ್‌ ಸೀರೀಸ್‌ನಿಂದಾಗಿ ಜನಪ್ರಿಯತೆಯನ್ನು ಪಡೆದರು . ಬ್ರಿಟಿಷ್ ಮೂಲದ ಈಸ್ಟರ್ನ್ ಐ ಪತ್ರಿಕೆ ಪ್ರಕಟಿಸಿದ ಪ್ರಕಾರ , ಟಾಪ್ ೫೦ ಸೆಕ್ಸಿಯೆಸ್ಟ್ ಏಷ್ಯನ್ ವುಮೆನ್ ೨೦೧೭ ರ ಪಟ್ಟಿಯಲ್ಲಿ ಇವರು ಎರಡನೇ ಸ್ಥಾನವನ್ನುಗಳಿಸಿದ್ದಾರೆ . [೬]

ನಿಯಾ ಶರ್ಮಾ
ಜನನ೧೭ ಸೆಪ್ಟೆಂಬರ್‌ ೧೯೯೦
ರೋಹಿಣಿ, ಭಾರತ
ರಾಷ್ಟ್ರೀಯತೆಭಾರತೀಯ
ವೃತ್ತಿನಟಿ
Years active೨೦೧೦ -

ವೈಯಕ್ತಿಕ ಜೀವನ

ನಿಯಾ ಶರ್ಮಾ ರವರ ನಿಜವಾದ ಹೆಸರು ನೇಹಾ ಶರ್ಮಾ . ಅವರ ಕುಟುಂಬದಲ್ಲಿ ಅವರು ಕಿರಿಯ ಮಗಳು . ಆಕೆಗೆ ಒಬ್ಬ ಹಿರಿಯ ಸಹೋದರನಿದ್ದಾನೆ. ಬ್ರಿಟಿಷ್ ಮೂಲದ ಈಸ್ಟರ್ನ್ ಐ ಪತ್ರಿಕೆಯಲ್ಲಿ ಪ್ರಕಟಿಸಿದ ಪ್ರಕಾರ ಶರ್ಮಾರವರು ೨೦೧೬ ರಲ್ಲಿ ನಂ .೩ ಹಾಗೂ ೨೦೧೭ ರಲ್ಲಿ ಟಾಪ್ ೫೦ ಸೆಕ್ಸಿಯೆಸ್ಟ್ ಏಷ್ಯನ್ ಮಹಿಳಾ ಪಟ್ಟಿಯಲ್ಲಿ ೨ ನೇ ಸ್ಥಾನವನ್ನುಗಳಿಸಿದ್ದಾರೆ. [೭]

ವೃತ್ತಿಜೀವನ

ನಿಯಾ ರವರು ತಮ್ಮ ವೃತ್ತಿಜೀವನವನ್ನು ಕಾಲಿ- ಏಕ್ ಅಗ್ನಿಪರೀಕ್ಷಾ ಎಂಬ ಧಾರಾವಾಹಿಯಲ್ಲಿ ನಟಿಸುವುದರ ಮೂಲಕ ಪ್ರಾರಂಭಿಸಿದರು ನಂತರ ಬೆಹೆನೆ ಎಂಬ ಧಾರವಾಹಿಯ ಮೂಲಕ ಮುಂದಿನ ಹೆಜ್ಜೆ ಹಾಕಿದರು. ಇವರು ದಿ ಪ್ಲೇಯರ್ ಎಂಬ ರಿಯಾಲಿಟಿ ಶೋನಲ್ಲಿಯೂ ಸಹ ಕಿರು ಪಾತ್ರವನ್ನು ನಿರ್ವಹಿಸಿದರು . ೨೦೧೧ ರಲ್ಲಿ ಏಕ್ ಹಜಾರೊ ಮೇ ಮೇರಿ ಬೆಹ್ನಾ ಹೆ ಧಾರವಾಹಿಯಲ್ಲಿ ಮಾನ್ವಿ ಎಂಬ ಪಾತ್ರದಲ್ಲಿ , ೨೦೧೪ ರಲ್ಲಿ ಜೀ ಟವಿಯ ಜಮಾಯಿ ರಾಜಾ ಎಂಬ ಧಾರವಾಹಿಯಲ್ಲಿ ರವಿ ದೂಬೆ ರವರ ಜೊತೆ ರೋಶ್ನಿ ಎಂಬ ಪಾತ್ರದಲ್ಲಿ , ೨೦೧೭ ರಲ್ಲಿ ವಿಕ್ರಮ್ ಭಟ್ ರವರ ವೆಬ್ ಸರಣಿ ಟ್ವಿಸ್ಟೆಡ್ ನಲ್ಲಿ ಮಹಿಳಾ ಪ್ರಮುಖ ಪಾತ್ರವಾದ ಆಲಿಯಾ ಮುಖರ್ಜಿಯವರ ಪಾತ್ರವನ್ನು ನಿರ್ವಹಿಸಿದರು ಹಾಗೂ ಅದೇ ವರುಷದಲ್ಲಿ ಅವರು ಫಿಯರ್‌ ಫ್ಯಾಕ್ಟರ್‌ ː ಖತ್ರೋನ್‌ ಕೆ ಖಿಲಾಡಿ ೮ ಪೈನ್‌ ಇನ್‌ ಸ್ಪೈನ್ ಎಂಬ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದರು . ಅದರಲ್ಲಿ ಅವರು ಆಗಸ್ಟ್‌ ೬ ರಂದು ಎಲಿಮಿನೇಟ್‌ ಆಗಿದ್ದು ಆಗಸ್ಟ್‌ ೨೬ ರಂದು ಅವರು ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಪುನಃ ಆ ಶೋನಲ್ಲಿ ಭಾಗವಹಿಸಿ ಕೊನೆಗೆ ಖತ್ರೋನ್‌ ಕೆ ಖಿಲಾಡಿ ೮ ರಲ್ಲಿ ಮೊದಲನೇ ಫೈನಲಿಸ್ಟ್‌ ಆಗಿ ಆಯ್ಕೆಯಾದರು .[೮]

೨೦೧೮ ರಲ್ಲಿ ಅರ್ಜುನ್ ಬಿಜ್ಲಾನಿಯವರ ಜೊತೆ ಆರೋಹಿ ಕಶ್ಯಪ್ ಎಂಬ ಮುಖ್ಯ ಪಾತ್ರದಲ್ಲಿ ಇಷ್ಕ್ ಮೇ ಮರ್ಜವಾನ್ ಎಂಬ ಧಾರವಾಹಿಯಲ್ಲಿ ನಟಿಸಿದರು .ಈ ಪ್ರದರ್ಶನವು ಕಲರ್ಸ್ ಟಿವಿಯಲ್ಲಿ ಪ್ರಸಾರವಾಗಿತ್ತು ಹಾಗೂ ಜೂನ್ ೨೦೧೯ ರಲ್ಲಿ ಕೊನೆಗೊಂಡಿತು. ೨೦೧೯ ರಲ್ಲಿ ಇವರು ಕಲರ್ಸ್ ಟಿವಿಯಲ್ಲಿ ಪ್ರಸಾರವಾಗಲಿರುವ ನಾಗಿನ್ 4ರಲ್ಲಿ ನಾಗ್ರಾಣಿಯಾಗಿ ಪಾತ್ರವಹಿಸುತ್ತಿದ್ದಾರೆ .[೯][೧೦][೧೧]

ದೂರದರ್ಶನ

ವರ್ಷಪ್ರದರ್ಶನಪಾತ್ರಚಾನೆಲ್ಉಲ್ಲೇಖ
೨೦೧೦–೨೦೧೧ಕಾಲಿ ಏಕ್‌ ಅಗ್ನಿಪರೀಕ್ಷಾಅನುಸ್ಟಾರ್‌ ಪ್ಲಸ್[೧೨]
೨೦೧೧ಬೆಹೆನೆನಿಶಾ ಮೆಹೆತಾ[೧೨]
ದ ಪ್ಲೇಯರ್ಕಿರು ಪಾತ್ರಚಾನೆಲ್‌ ವಿ
೨೦೧೧–೨೦೧೩ಏಕ್‌ ಹಜಾರೋ ಮೆ ಮೇರಿ ಬೆಹೆನ ಹೆಮಾನ್ವಿ ಚೌದ್ರಿಸ್ಟಾರ್‌ ಪ್ಲಸ್[೧೩]
೨೦೧೧ಇಸ್‌ ಪ್ಯಾರ್‌ ಕೊ ಕ್ಯ ನಾಮ್‌ ದೂಮಾನ್ವಿ ಚೌದ್ರಿ (ಅತಿಥಿ)
೨೦೧೨ನಯೀ ಸೋಚ್‌ ಕೀ‌ ತಲಾಶ್ ಆಮೀರ್‌ ಕೆ ಸಾಥ್
೨೦೧೨–೨೦೧೩ಸ್ಟಾರ್ಲೈಟ್
೨೦೧೨ಯೆ ರಿಶ್ತಾ ಕ್ಯಾ ಕೆಹೆಲಾತಾ ಹೆ
೨೦೧೩ಪ್ಯಾರ್‌ ಕ ದರ್ದ್‌ ಹೆ ಮೀಠಾ ಮೀಠಾ ಪ್ಯಾರ ಪ್ಯಾರ
೨೦೧೪–೨೦೧೬ಜಮಾಯಿ ರಾಜರೋಶ್ನಿ ಪಟೇಲ್ಜೀ ಟಿವಿ[೧೪]
೨೦೧೪ಪವಿತ್ರ್‌ ರಿಶ್ತಾರೋಶ್ನಿ ಪಟೇಲ್ (ಅತಿಥಿ)
ಕಬೂಲ್‌ ಹೆ[೧೫]
ಬಾಕ್ಸ್‌ ಕ್ರಿಕರಟ್‌ ಲೀಗ್‌ ೧ಸ್ಪರ್ಧಿಸೋನಿ ಎಂಟರ್ಟೈನ್ಮೆಂಟ್‌ ಟೆಲಿವಿಷನ್
೨೦೧೫ಕಿಲ್ಲರ್ ಕರಾಕೆ ಅಟ್ಕಾ ತೊ ಲಟ್ಕಾ& ಟಿವಿ
೨೦೧೬ಕಾಮಿಡಿ ನೈಟ್ಸ್‌ ಬಚಾವೊಸ್ವತಃ (ಅತಿಥಿ)ಕಲರ್ಸ್‌ ಟಿವಿ
ಟಶನ್‌‌ - ಎ - ಇಶ್ಕ್ರೋಶ್ನಿ ಪಟೇಲ್ (ಅತಿಥಿ)ಜೀ ಟಿವಿ
೨೦೧೭ಫಿಯರ್‌ ಫ್ಯಾಕ್ಟರ್‌ ː ಖತ್ರೋಂಕೆ ಖಿಲಾಡಿ ೮ಸ್ಪರ್ಧಿಕಲರ್ಸ್‌ ಟಿವಿ[೧೬]
ರಸೋಯಿ ಕಿ ಜಂಗ್‌ ಮಮ್ಮಿಯೋಂ ಕೆ ಸಂಗ್[೧೭]
ಭಾಗ್‌ ಬಕುಲ್‌ ಭಾಗ್ಸ್ವತಃ (ಅತಿಥಿ)[೧೮]
೨೦೧೮ಆಪ್‌ ಕೆ ಆಜಾನೆ ಸೆಜೀ ಟಿವಿ
೨೦೧೮–೨೦೧೯ಇಶ್ಕ್‌ ಮೆ ಮರ್ಜಾವಾಆರೋಹಿ ಕಶ್ಯಪ್ / ಅಂಜಲಿ ಶರ್ಮಾಕಲರ್ಸ್‌ ಟಿವಿ[೧೯]
೨೦೧೮ಉಡಾನ್‌ ಸಪ್ನೋ ಕಿಆರೋಹಿ ಕಶ್ಯಪ್(ಅತಿಥಿ)
ಇಂಟರ್ನೆಟ್‌ವಾಲಾ ಲವ್
ಏಕ್‌ ಆಫ್‌ ಸ್ಪೇಸ್‌ ೧ಸ್ವತಃ (ಅತಿಥಿ)ಎಮ್‌ ಟಿವಿ ಇಂಡಿಯಾ
ನಾಗಿನ್‌ ೩ಆರೋಹಿ ಕಶ್ಯಪ್(ಅತಿಥಿ)ಕಲರ್ಸ್‌ ಟಿವಿ
೨೦೧೯ಶಕ್ತಿ - ಅಸ್ತಿತ್ವ್‌ ಕೆ ಎಹೆಸಾಸ್‌ ಕಿ
ಫಿಯರ್‌ ಫ್ಯಾಕ್ಟರ್‌ ː ಖತ್ರೋಂಕೆ ಖಿಲಾಡಿ ೯ಸ್ವತಃ(ವೈಲ್ಡ್‌ ಕಾರ್ಡ್‌ ಸ್ಪರ್ಧಿ)

ಪ್ರಶಸ್ತಿಗಳು

  • ೨೦೧೨ – ಇಂಡಿಯನ್‌ ಟಎಲಿವಿಷನ್‌ ಅಕಾಡೆಮಿ ಅವಾರ್ಡ್ಸ್‌, ದೇಶ್‌ ಕೀ ಧಡ್ಕನ್ – ಅತ್ಯುತ್ತಮ ನಟಿ – ಪಾಪ್ಯುಲರ್ ಏಕ್‌ ಹಜಾರೊ ಮೆ ಮೇರಿ ಬೆಹೆನಾ ಹೆ (ವಿಜೇತೆ)[೨೦]
  • ೨೦೧೪ – ಜೀ ರಿಶ್ತೆ ಅವಾರ್ಡ್ಸ್‌ , ಜನಮೆಚಚಿದ ನವ ಜೋಡಿ - ಜಮಾಯಿ ರಾಜ [೨೧]
  • ೨೦೧೪ – ಜೀ ರಿಶ್ತೆ ಅವಾರ್ಡ್ಸ್‌ , ಜನಮೆಚ್ಚಿದ ಅತ್ತೆ-ಸೊಸೆ - ಜಮಾಯಿ ರಾಜ [೨೧]
  • ೨೦೧೫ – ಟೆಲಿವಿಷನ್‌ ಸ್ಟೈಲ್ ಅವಾರ್ಡ್ಸ್‌, ಅತ್ಯುತ್ತಮ ಸ್ಟೈಲಿಶ್‌ ಮಗಳು - ಜಮಾಯಿ ರಾಜ [೨೨]
  • ೨೦೧೫ – ಇಂಡಿಯನ್‌ ಟಎಲಿವಿಷನ್‌ ಅಕಾಡೆಮಿ ಅವಾರ್ಡ್ಸ್‌ , Gr8! ಫೇಸ್‌ ಫೀಮೇಲ್- ಜಮಾಯಿ ರಾಜ[೨೩]

ನಾಮನಿರ್ದೇಶನ

  • ೨೦೧೩ – ಇಂಡಿಯನ್‌ ಟೆಲಿ ಅವಾರ್ಡ್ಸ್ , ಅತ್ಯುತ್ತಮ ನಟಿ (ಮುಖ್ಯ ಪಾತ್ರ) – ಏಕ್‌ ಹಜಾರೊ ಮೆ ಮೇರಿ ಬೆಹೆನಾ ಹೆ[೨೪]
  • ೨೦೧೪ – ಇಂಡಿಯನ್‌ ಟಎಲಿವಿಷನ್‌ ಅಕಾಡೆಮಿ ಅವಾರ್ಡ್ಸ್‌ , ಅತ್ಯುತ್ತಮ ತೆರೆಮೇಇನ ದಂಪತಿಗಳು – ಜಮಾಯಿ ರಾಜ [೨೫]
  • ೨೦೧೪ – ಜೀ ರಿಶ್ತೆ ಅವಾರ್ಡ್ಸ್‌ , ಜನಮೆಚ್ಚಿದ ಜೋಡಿ – ಜಮಾಯಿ ರಾಜ [೨೧]
  • ೨೦೧೪ – ಜೀ ರಿಶ್ತೆ ಅವಾರ್ಡ್ಸ್‌ , ಜನಮೆಚ್ಚಿದ ಹೊಸ ಸದಸ್ಯೆ – ಮಹಿಳೆ – ಜಮಾಯಿ ರಾಜ [೨೧]
  • ೨೦೧೪ – ಜೀ ರಿಶ್ತೆ ಅವಾರ್ಡ್ಸ್‌ , ಜನಮೆಚ್ಚಿದ ಮಗಳು – ಜಮಾಯಿ ರಾಜ [೨೧]
  • ೨೦೧೪ – ಜೀ ರಿಶ್ತೆ ಅವಾರ್ಡ್ಸ್‌ , ಫೇವರೇಟ್‌ ಪಾಪ್ಯುಲರ್‌ ಫೇಸ್‌ - ಜಮಾಯಿ ರಾಜ [೨೧]
  • ೨೦೧೫ – ಇಂಡಿಯನ್‌ ಟೆಲಿ ಅವಾರ್ಡ್ಸ್‌ , ಅತ್ಯುತ್ತಮ ತೆರೆ ಮೇಲಿನ ಜೋಡಿ - ಜಮಾಯಿ ರಾಜ[೨೬]
  • ೨೦೧೫ – ಜೀ ಗೋಲ್ಡ್ ಅವಾರ್ಡ್ಸ್‌ , ಅತ್ಯುತ್ತಮ ನಟಿ - ಜಮಾಯಿ ರಾಜ [೨೭]
  • ೨೦೧೫ – ಜೀ ಗೋಲ್ಡ್ ಅವಾರ್ಡ್ಸ್‌ , ಅತಿ ಹೆಚ್ಚು ಜನಪ್ರಿಯತೆ ಪಡೆದ ಜೋಡಿ - ಜಮಾಯಿ ರಾಜ
  • ೨೦೧೫ – ಜೀ ರಿಶ್ತೆ ಅವಾರ್ಡ್ಸ್‌ , ನೆಚ್ಚಿನ ಪತಿ ಪತ್ನಿ ಸಂಬಂಧ - ಜಮಾಯಿ ರಾಜ [೨೮]
  • ೨೦೧೫ – ಜೀ ರಿಶ್ತೆ ಅವಾರ್ಡ್ಸ್‌ , ಜನಮೆಚ್ಚಿದ ಮಗಳು - ಜಮಾಯಿ ರಾಜ[೨೮]
  • ೨೦೧೯ – ಇಂಡಿಯನ್‌ ಟೆಲಿ ಅವಾರ್ಡ್ಸ್ , ಜನಮೆಚ್ಚಿದ ನಾಯಕಿ (ಮುಖ್ಯ ಪಾತ್ರ) - ಇಶ್ಕ್‌ ಮೆ ಮರ್ಜಾವಾ

ಗ್ಯಾಲರಿ

ಉಲ್ಲೇಖಗಳು