ಪ್ರಭುದೇವ

ಪ್ರಭುದೇವ (ಜನನ ೩ ಏಪ್ರಿಲ್ ೧೯೭೩) ಭಾರತೀಯ ಚಲನಚಿತ್ರರಂಗದ ನಟರಾಗಿ, ನರ್ತಕರಾಗಿ, ನಿರ್ದೇಶಕರಾಗಿ, ನೃತ್ಯ ಸಂಯೋಜಕರಾಗಿ ಪ್ರಸಿದ್ಧಿ ಪಡೆದಿದ್ದಾರೆ.

ಪ್ರಭುದೇವ
ಜನನ
ಪ್ರಭುದೇವ

ಜನನ ೩ ಏಪ್ರಿಲ್ ೧೯೭೩[೧][೨]
ಮೈಸೂರು, ಕರ್ನಾಟಕ, ಬಾರತ
ವೃತ್ತಿ(ಗಳು)ಚಲನಚಿತ್ರ ನಟ, ನಿರ್ದೇಶಕ, ನೃತ್ಯ ಸಂಯೋಜಕ, ನಿರ್ಮಾಪಕ.
Years active೧೯೮೮ - ಪ್ರಸ್ತುತ
ಪೋಷಕ(ರು)ಮೂಗೂರು ಸುಂದರ್
ಮಹದೇವಮ್ಮ ಸುಂದರ್
Awardsಪದ್ಮಶ್ರೀ

ಜೀವನ

ಭಾರತೀಯ ಚಿತ್ರರಂಗ ಕಂಡ ಅಪೂರ್ವ ಪ್ರತಿಭೆಗಳಲ್ಲಿ ಒಬ್ಬರಾದ ಪ್ರಭುದೇವ ಏಪ್ರಿಲ್ ೩, ೧೯೭೩ ರಲ್ಲಿ ಮೈಸೂರಿನಲ್ಲಿ ಜನಿಸಿದರು. ಪ್ರಭುದೇವರ ತಂದೆ ಮೂಗೂರು ಸುಂದರ್ ಕನ್ನಡವೂ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ ಪ್ರಸಿದ್ಧರು. ತಮ್ಮ ತಂದೆಯಿಂದ ಪ್ರೇರೇಪಣೆ ಪಡೆದ ಪ್ರಭುದೇವ ಭರತ ನಾಟ್ಯ ಮತ್ತು ಇತರ ಭಾರತೀಯ ನೃತ್ಯ ಕಲೆಗಳ ಜೊತೆಗೆ ಪಾಶ್ಚಿಮಾತ್ಯ ನೃತ್ಯ ಕಲೆಗಳಲ್ಲೂ ಅಭ್ಯಾಸ ನಡೆಸಿದರು. ನೃತ್ಯ ಕಲೆ ಅವರ ಆಸ್ಥೆ ಮತ್ತು ವೃತ್ತಿ ಎರಡೂ ಆದವು.

ಅಸಾಮಾನ್ಯ ನಾಟ್ಯ ಪ್ರತಿಭೆ

ನಾಟ್ಯದಲ್ಲಂತೂ ಪ್ರಭುದೇವ ಅವರು ಮಾಡದಂತಹ ನಾಟ್ಯವೇ ಇಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಆತ ಹೆಜ್ಜೆ ಇಟ್ಟದ್ದೆಲ್ಲಾ ನಾಟ್ಯವೇ. ಸಾಮಾನ್ಯವಾಗಿ ಒಬ್ಬ ನಟ ಜನಪ್ರಿಯನಾದಾಗ ಅದಕ್ಕೆ ಹೋಲಿಕೆಗಳೂ ಹುಟ್ಟಿಕೊಳ್ಳುತ್ತವೆ. ಪ್ರಭುದೇವನನ್ನು ಕುರಿತು ಹೇಳುವಾಗ ಮೈಖೆಲ್ ಜಾಕ್ಸನ್ ಹೆಸರನ್ನು ಭಾರತೀಯರು ಯೋಚಿಸುವುದು ಅಘೋಷಿತ ವಾಡಿಕೆಯೇ ಆಗಿದೆ. ಅದೇನೇ ಇರಲಿ ಪ್ರಭುದೇವ ಭಾರತೀಯ ಚಿತ್ರರಸಿಕರ ಮನದಲ್ಲಿ ಮೂಡಿಸಿರುವ ನಾಟ್ಯದ ಕ್ರೇಜ್ ಅನ್ನಂತೂ ಅಲ್ಲಗೆಳೆಯುವಂತಿಲ್ಲ.

ಶ್ರೇಷ್ಠ ನೃತ್ಯ ಸಂಯೋಜಕ, ನಟ ನಿರ್ದೇಶಕ

  • ಚಿತ್ರರಂಗದಲ್ಲಿ ನೃತ್ಯದ ಅಳವಡಿಕೆಗಳ ಸ್ವರೂಪದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಪ್ರಭುದೇವ ಇಂದು ಚಿತ್ರರಂಗದ ಶ್ರೇಷ್ಠ ಕೋರಿಯಾಗ್ರಫರುಗಳಲ್ಲಿ ಒಬ್ಬರು ಎಂದು ಪ್ರಸಿದ್ಧ ಪಡೆದಿದ್ದಾರೆ. ಅವರು ‘ಮಿನ್ಸಾರ್ ಕನವು’, ‘ಲಕ್ಷ್ಯ’ ಚಿತ್ರಗಳಿಗೆ ಪಡೆದ ರಾಷ್ಟ್ರಪ್ರಶಸ್ತಿ ಇದನ್ನು ಸ್ಪಷ್ಟೀಕರಿಸುತ್ತದೆ. ಮಾಧುರಿ ದೀಕ್ಷಿತ್ ಅಂತಹ ಕಲಾವಿದೆಯನ್ನೂ ಒಳಗೊಂಡಂತೆ ‘ಪುಕಾರ್’ ಚಿತ್ರದಲ್ಲಿನ ನೃತ್ಯ ಸನ್ನಿವೇಶವನ್ನು ಅದ್ಭುತವಾಗಿ ಮೂಡಿಸಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ.
  • ಕಮಲಹಾಸನ್ ಅಂತಹ ಶ್ರೇಷ್ಠ ನಟನ ಜೊತೆ ಕೂಡಾ ಸರಿ ಸಮಾನ ಪಾತ್ರದಲ್ಲಿ ನಟಿಸಿ ದ್ದಾರೆ. ಪ್ರಭುದೇವ ಚಿತ್ರರಂಗಕ್ಕೆ ಬಂದದ್ದು ವೇಟ್ರಿ ವಿಯಾ ಎಂಬ ಚಿತ್ರದಿಂದ. ಅಲ್ಲಿಂದೀಚೆಗೆ ಅವರು ನೂರಾರು ಚಿತ್ರಗಳಿಗೆ ಕೋರಿಯಾಗ್ರಫಿ ನೀಡಿದ್ದಾರೆ.ಹಿಂದಿಯಲ್ಲಿ ಸಲ್ಮಾನ್ ಖಾನನ ಇತ್ತೀಚಿನ ಯಶಸ್ವೀ ಚಿತ್ರ ‘ವಾಂಟೆಡ್’, ಅಕ್ಷಯ್ ಕುಮಾರನ ‘ರೌಡಿ ರಾಥೋಡ್’ ಚಿತ್ರದ ನಿರ್ದೇಶನ ಕೂಡಾ ಈತನದೇ. ಇಂದು ಪ್ರಭುದೇವ ಕೋರಿಯಾಗ್ರಫಿ, ನಿರ್ದೇಶನ, ನಿರ್ಮಾಣ ಮತ್ತು ನಟನೆಗಳಲ್ಲಿ ಅಪಾರ ಹೆಸರಾಗಿದ್ದಾರೆ.
  • ತಮಿಳು, ತೆಲುಗು, ಹಿಂದಿ ಭಾಷೆಗಳೆಲ್ಲದರಲ್ಲಿ ಅವರು ವ್ಯಾಪಿಸಿದ್ದು ಈ ಎಲ್ಲಾ ಭಾಷೆಗಳಲ್ಲಿ ಅವರು ಜನಪ್ರಿಯ ಚಿತ್ರಗಳನ್ನು ನೀಡಿದ್ದಾರೆ ಎಂಬುದು ಗಮನಾರ್ಹವಾದದ್ದು. ನಟನೆಯ ಬಗ್ಗೆ ಹೇಳುವುದಾದರೆ ನೃತ್ಯ ಸನ್ನಿವೇಶಗಳನ್ನು ಒಳಗೊಂಡಂತೆ ಹೇಗೆ ಆಕರ್ಷಕರಾಗಿ ನಟಿಸುತ್ತಾ ರೋ ಅಷ್ಟೇ ಆಕರ್ಷಕವಾಗಿ ಹಾಸ್ಯ ಪಾತ್ರಗಳಲ್ಲಿ ಕೂಡಾ ಅಭಿನಯಿಸುವ ಈತನ ಪ್ರತಿಭೆ ಮೆಚ್ಚುವಂತದ್ದು. ಅಂದು ಅಗ್ನಿ ನಕ್ಷತ್ತಿರಂ ಚಿತ್ರದಲ್ಲಿ ಕಾಣದಂತೆ ನೃತ್ಯ ಮಾಡಿ ಹೋದ ಪ್ರಭುದೇವ ಮುಂದೆ ನೂರಾರು ಚಿತ್ರಗಳ ಹೀರೋ. ಕಾದಲನ್, ಜೆಂಟಲ್ ಮ್ಯಾನ್, ಮಿನ್ಸಾರ ಕನವು, ಪುಕಾರ್, ವಾನತ್ತೈ ಪೋಲ ಮುಂತಾದ ಚಿತ್ರಗಳಲ್ಲಿ ಆತನ ಕೈಚಳಕ ಮತ್ತು ಸಾಮರ್ಥ್ಯಗಳನ್ನು ಮೆಚ್ಚದವರೇ ಇಲ್ಲ.

ಎಲ್ಲೆಡೆಯಲ್ಲೂ ವ್ಯಾಪ್ತಿ

  • ೧೯೯೯ರ ವರ್ಷದಲ್ಲಿ ಪ್ರಭುದೇವ, ಶೋಭನ ಮತ್ತು ಎ. ಆರ್. ರೆಹಮಾನ್ ಜೊತೆಗೂಡಿ ಜರ್ಮನಿಯ ಮ್ಯೂನಿಚ್ಚಿನಲ್ಲಿ ‘ಮೈಖೆಲ್ ಜಾಕ್ಸನ್ ಅಂಡ್ ಫ್ರೆಂಡ್ಸ್’ ಕೂಟದಲ್ಲಿ ಪ್ರದರ್ಶನ ನೀಡಿದ್ದರು. ಅವರು ತಮ್ಮ ಸಹೋದರರ ಜೊತೆಗೂಡಿ ಕನ್ನಡವನ್ನೊಳಗೊಂಡಂತೆ ಕೆಲವು ಭಾಷೆ ಗಳಲ್ಲಿ 123 ಎಂಬ ಚಿತ್ರವನ್ನು ನಿರ್ಮಿಸಿ ನಟಿಸಿದ್ದರು. ಇತ್ತೀಚೆಗೆ ಪುನೀತ್ ರಾಜ್ ಕುಮಾರ್ ನಡೆಸುತ್ತಿರುವ ಕೋಟ್ಯಾಧಿಪತಿಯಲ್ಲಿ ಸಹಾ ಪಾಲ್ಗೊಂಡಿದ್ದರು. ಭಾರತದಲ್ಲಿ ಅವರ ನಡೆಸುತ್ತಿರುವ ಸೇವೆಯೇ ಅಲ್ಲದೆ ಸಿಂಗಪುರದಲ್ಲಿ ಪ್ರಭುದೇವ ಡ್ಯಾನ್ಸ್ ಅಕಾಡೆಮಿ ಸ್ಥಾಪಿಸಿದ್ದಾರೆ.
  • ಇಟ್ ಈಸ್ ಬೋರಿಂಗ್ ಎಂಬ ಅವರ ವಿಡಿಯೋ ಆಲ್ಬಂ ಇನ್ನೇನು ಹೊರಬರಲಿದೆ. ಪ್ರಸಿದ್ಧ ನೃತ್ಯಪಟು ‘ಲಾರೆನ್ ಗೊಟ್ಟಿಲೆಬ್’ ಜೊತೆಗೂಡಿ ಭಾರತದ ಪ್ರಥಮ 3D ಚಿತ್ರ “ABCD – Any Body Can Dance” ಚಿತ್ರದಲ್ಲಿ ನಟಿಸಿದ್ದಾರೆ. ಅವರ ಹಲವಾರು ನಿರ್ದೇಶನ, ನೃತ್ಯ ನಿರ್ದೇಶನ ಮತ್ತು ನಟನಾ ಚಿತ್ರಗಳು ಬರುತ್ತಿವೆ. ಹೀಗೆ ಅವರು ಪ್ರಾರಂಭದಿಂದ ಪ್ರಸಕ್ತದವರೆಗೆ ಅತ್ಯಂತ ಬೇಡಿಕೆಯಲ್ಲಿದ್ದಾರೆ. ಈ ಬೇಡಿಕೆ ಇನ್ನೂ ಬಹಳಷ್ಟು ಕಾಲ ಮುಂದುವರೆಯುವ ಎಲ್ಲ ಸೂಚನೆಗಳೂ ಇವೆ.

ಫಿಲ್ಮೋಗ್ರಾಫಿ

ನಿರ್ದೇಶಕ

ಚಲನಚಿತ್ರವರ್ಷಭಾಷೆಟಿಪ್ಪಣಿಗಳು
ನುವೋಸ್ತಾನಂತೆ ನೆನೊದ್ದಂತನ೨೦೦೫ತೆಲುಗು
ಪೌರ್ಣಮಿ೨೦೦೬ತೆಲುಗು
ಪೊಕ್ಕಿರಿ೨೦೦೭ತಮಿಳು
ಶಂಕರ್ ದಾದ ಜಿಂದಬಾದ್೨೦೦೭ತೆಲುಗು
ವಿಲ್ಲು೨೦೦೯ತಮಿಳು
ವಾಂಟೆಡ್೨೦೦೯ಹಿಂದಿ
ಎಂಜಿಯೂಮ್ ಕಾಧಲ್೨೦೧೧ತಮಿಳು
ವೇದಿ೨೦೧೧ತಮಿಳು
ರೌಡಿ ರಾಥೊರ್೨೦೧೨ಹಿಂದಿ
ರಾಮಯ್ಯ ವಸ್ತವಾಯ೨೦೧೩ಹಿಂದಿ
ಆರ್... ರಾಜ್ ಕುಮಾರ್೨೦೧೩ಹಿಂದಿ
ಆಕ್ಷನ್ ಜಾಕ್ಸನ್೨೦೧೪ಹಿಂದಿ
ಸಿಂಗ್ ಈಸ್ ಬ್ಲಿಂಗ್೨೦೧೫ಹಿಂದಿ
ದಬಾಂಗ್ ೩dagger೨೦೧೯ಹಿಂದಿಚಿತ್ರಕರಣ

ನಿರ್ಮಾಪಕ

ಚಲನಚಿತ್ರವರ್ಷನಿರ್ದೇಶಕಬಾಷೆಟಿಪ್ಪಣಿಗಳು
ದೇವಿ೨೦೧೬ಎ.ಎಲ್. ವಿಜಯ್ತಮಿಳು
ಬೋಗನ್೨೦೧೭ಲಕ್ಷ್ಮಣ್ತಮಿಳು
ಸಮ್ ಟೈಮ್ಸ್೨೦೧೮ಪ್ರಿಯದರ್ಶನ್ತಮಿಳುನೇರ-ವೀಡಿಯೊ
ವಿನೋಧನ್೨೦೧೯ವಿಕ್ಟರ್ ಜಯರಾಜ್ತಮಿಳುಚಿತ್ರೀಕರಣ

ಅಭಿನಯದ ಪಾತ್ರಗಳು

ನಟ

ಚಲನಚಿತ್ರವರ್ಷಭಾಷೆಪಾತ್ರಟಿಪ್ಪಣಿಗಳು
ಇಂದು೧೯೯೪ತಮಿಳುಪಟ್ಟಸು
ಕಾಧಲನ್೧೯೯೪ತಮಿಳುಪ್ರಭು
ರಾಸಯ್ಯ೧೯೯೫ತಮಿಳುರಾಸಯ್ಯ
ಲವ್ ಬರ್ಡ್ಸ್೧೯೯೬ತಮಿಳುಅರುಣ್
ಮಿ.ರೋಮಿಯೋ೧೯೯೬ತಮಿಳುರೊಮಿಯೋ, ಮದ್ರಾಸ್
ಮಿನ್ಸರ ಕನವು೧೯೯೭ತಮಿಳುದೇವ
ವಿಐಪಿ೧೯೯೭ತಮಿಳುಗುರು
ನಾಮ್ ಇರುವರ್ ನಮ್ಮಕು ಇರುವರ್೧೯೯೮ತಮಿಳುಪ್ರಭು, ದೇವ
ಲವ್ ಸ್ಟೋರಿ೧೯೯೯ತೆಲುಗುವಮ್ಸಿ
ಕಾತಲ ಕಾತಲ೧೯೯೮ತಮಿಳುಸುಂದರಲಿಂಗಮ್
ನಿನೈವಿರುಕ್ಕುಮ್ ವರಾಇ೧೯೯೯ತಮಿಳುಜನಕಿರಮನ್ ( ಜಾನಿ
ಸುಯಂವರಂ೧೯೯೯ತಮಿಳುಕನ್ನ
ಟೈಮ್೧೯೯೯ತಮಿಳುಶ್ರೀನಿವಾಸ ಮೂರ್ತಿ
ವಾನತಾಯಿಪ್ಪೊಲ೨೦೦೦ತಮಿಳುಸೇಲ್ವಕುಮಾರ್
ಏಝೈಯೊನ್ ಸಿರಿಪ್ಪಿ೨೦೦೦ತಮಿಳುಗನೆಸನ್
ಜೇಮ್ಸ್ ಪಾಂಡು೨೦೦೦ತಮಿಳುಜೇಮ್ಸ್
ಪೆನ್ನಿನ್ ಮನತಯಿ ತೊಟ್ಟು೨೦೦೦ತಮಿಳುಸುನಿಲ್
ಡಬಲ್ಸ್೨೦೦೦ತಮಿಳುಪ್ರಭು
ಉಲ್ಲಮ್ ಕೊಲ್ಲಾಯಿ ಪೊಗೊತೆ೨೦೦೧ತಮಿಳುಅನ್ಬು
ಅಲ್ಲಿ ತಾಂಧ ವಾನಮ್೨೦೦೧ತಮಿಳುಸತ್ಯಮ್
ಮನಧಾಯಿ ತಿರುದಿವಿಟ್ಟಯಿ೨೦೦೧ತಮಿಳುದೇವ
ಚಾರ್ಲಿ ಚಾಪಿನ್೨೦೦೨ತಮಿಳುತಿರು
H2O೨೦೦೨ಕನ್ನಡ]]ವೈರಮುತು
ಸಂತೋಶಮ್೨೦೦೨ತೆಲುಗುಪವನ್
ಒನ್ ಟೂ ತ್ರೀ೨೦೦೨ತಮಿಳುಸತ್ಯ
ಅಗ್ನಿ ಮಹರ್ಷಿ೨೦೦೨ಹಿಂದಿರಾಕ್ಷಶ
ತೊಟ್ಟಿ ಗ್ಯಾಂಗ್೨೦೦೨ತೆಲುಗುಸೂರಿ ಬಾಬು
'ಕಲ್ಯಾಣ ರಾಮುಡು೨೦೦೩ತೆಲುಗುರಾಜೇಶ್
ಅಲಾದಿನ್೨೦೦೩ತಮಿಳುಅಲಾದಿನ್
ಒಕ ರಾಧಾ ಇದ್ದರು ಕೃಷ್ಣುಲ ಪೆಲ್ಲಿ೨೦೦೩ತೆಲುಗುಮುರುಗನ್
ಎಂಗಲ್ ಅಣ್ಣ೨೦೦೪ತಮಿಳುಕನ್ನನ್
ತಪನ೨೦೦೪ತೆಲುಗುವೇನು
ಇಂತ್ಲೊ ಶ್ರೀಮತಿ ವೇಧಿಲೋ ಕುಮಾರಿ೨೦೦೪ತೆಲುಗುಗೋಪಾಲ್
ಅಂದಲು ಡೊಂಗಾಲೆ ದೊರಿಕಿತೆ೨೦೦೪ತೆಲುಗುಬುಜ್ಜಿ
ಸ್ಟೈಲ್೨೦೦೬ತೆಲುಗುಗಣೇಶ್
ಚುಕ್ಕಲ್ಲೊ ಚಂದ್ರುಡು೨೦೦೬ತೆಲುಗುಶರತ್ಅತಿಥಿ ಪ್ರದರ್ಶನ
ನಾಯುಡಮ್ಮ೨೦೦೬ತೆಲುಗುಪ್ರಭು
ಮೈಕೆಲ್ ಮದನ ಕಾಮರಾಜು೨೦೦೮ತೆಲುಗುಮೈಕೆಲ್, ರವಿ
ಉರುಮಿ೨೦೧೧ಮಲಯಾಳಂವವ್ವಲ್ಲಿ
ಏಬಿಸಿಡಿ - ಎನಿ ಬಡಿ ಕ್ಯಾನ್ ಡಾನ್ಸ್೨೦೧೩ಹಿಂದಿವಿಷ್ಣು
ಎಬಿಸಿಡಿ ೨೨೦೧೫ಹಿಂದಿ
ದೇವಿ೨೦೧೬ತಮಿಳುಕೃಷ್ಣ ಕುಮಾರ್
ಅಭಿನೇತ್ರಿ೨೦೧೬ತೆಲುಗು
ತುಟಕ್ ತುಟಕ್ ತುಟಿಯ೨೦೧೬ಹಿಂದಿ
ಕಲವಾಡಿಯ ಪೊಝುತುಗಲ್೨೦೧೭ತಮಿಳುಪೊರ್ಚೆಝಿಯಾನ್
ಗುಲೆಬಾಘವಾಲಿ೨೦೧೮ತಮಿಳುಬದ್ರಿ
ಮರ್ಕ್ಯುರಿ೨೦೧೮ಸೈಲೆಂಟ್ಬ್ಲೈಂಡ್ ಮ್ಯಾನ್
ಲಕ್ಷ್ಮಿ೨೦೧೮ತಮಿಳುಕೃಷ್ಣ / ವಿಕೆ
ಚಾರ್ಲಿ ಚಾಪಿನ್ ೨೨೦೧೯ತಮಿಳುತಿರು
ದೇವಿ ೨೨೦೧೯ತಮಿಳುಕೃಷ್ಣ ಕುಮಾರ್ / ಅಲೆಕ್ಸ್ / ರಂಗ ರೆಡ್ಡಿ
ಅಭಿನೇತ್ರಿ ೨೨೦೧೯ತೆಲುಗು
ಖಾಮೋಶಿ೨೦೧೯ಹಿಂದಿದೇವ್
ಯುಂಗ್ ಮುಂಗ್ ಸಂಗ್೨೦೧೯ತಮಿಳುಯುಂಗ್ಪೋಸ್ಟ್ ಪ್ರೊಡಕ್ಷನ್
ಪೋನ್ ಮನಿಕ್ಕವೆಲ್೨೦೧೯ತಮಿಳುಪೋನ್ ಮನಿಕ್ಕವೆಲ್50 th Film Fliming
ಥಿಯಲ್೨೦೧೯ತಮಿಳುTBAಚಿತ್ರೀಕರಣ
ಸ್ಟೀಟ್ ಡ್ಯಾನ್ಸರ್೨೦೧೯ಹಿಂದಿTBAಚಿತ್ರೀಕರಣ

==ನೃತ್ಯಗಾರ===

ಚಲನಚಿತ್ರಹಾಡುವರ್ಷಭಾಷೆಟಿಪ್ಪಣಿಗಳು
ಮೌನ ರಾಗಮ್ಪನಿವಿಝಮ್೧೯೮೬ತಮಿಳು
ಅಗ್ನಿ ನಟ್ಚಾತಿರಮ್ರಾಜ ರಾಜಧಿ೧೯೮೮ತಮಿಳು
ಅಧಿಕರಿನಾಯಾಂದಿ ಮೇಲಂ೧೯೯೧ತಮಿಳು
ಇಂದ್ಯಾಮ್ಎಪ್ರಿಲ್ ‌ಮಯಿಲೆ೧೯೯೧ತಮಿಳು
ಉನ್ನಾಯಿ ವಾಝ್ತಿಔಟ ಲಂಗ್ಡಿ೧೯೯೨ತಮಿಳು
ಸುರಿಯನ್ಲಾಲಕು ದೊಲ್ ದಪ್ಪಿಮ೧೯೯೨ತಮಿಳು
ಪ್ರತಾಪ್ಮಾಂಗ ಮಾಂಗ೧೯೯೩ತಮಿಳು
ರಕ್ಷಣಗಲ್ಲು ಮಂದಿ ಬಾಸು೧೯೯೩ತೆಲುಗು
ಏಝೈ ಜಾತಿಕೊಡುತಲಮ್ ಕೊಡುತಂಡ೧೯೯೩ತಮಿಳು
ಆಗ್ರಹಮ್೧೯೯೩ತೆಲುಗು
ಜೆಂಟಲ್ ಮ್ಯಾನ್ಚಿಕ್ಕು ಬುಕ್ಕು ರೈಲೆ೧೯೯೩ತಮಿಳು
ವಾಲ್ಟರ್ ವೆಟ್ರಿವೆಲ್ಚಿನ್ನ ರಾಸವೆ೧೯೯೩ತಮಿಳು
ಪುಕಾರ್ಕಾಯ್ ಸೇರ ಸೇರ೨೦೦೦ಹಿಂದಿ
ಮನಸೆಲ್ಲ ನೀನೆಗೆಸ್ಟ್ ಜಡ್ಜ್೨೦೦೨ಕನ್ನಡಅತಿಥಿ ಪ್ರದರ್ಶನ
ಬಾಬಕಿಚ್ಚು ತ೨೦೦೨ತಮಿಳು
ಶಕ್ತಿದಮ್ರೂ ಬಾಜೆ ರೆ೨೦೦೨ಹಿಂದಿ
ಆಬ್ರ ಕ ಡಾಬ್ರಶಿವ್ ಓಮ್೨೦೦೪ಹಿಂದಿ
ನುವೋಸ್ತಾನಂತೆ ನೆನೊದ್ದಂತನಪರಿಪೊಕೆ ಪಿಟ್ಟ೨೦೦೫ತೆಲುಗು
ಪೌರ್ಣಮಿಕೋಯೊ ಕೋಯೊ೨೦೦೬ತೆಲುಗು
ಪೊಕ್ಕಿರಿಆದುಂಗಡ೨೦೦೭ತಮಿಳು
ಶಂಕರ್ ದಾದ ಜಿಂದಬಾದ್ಜಗದೇಕ ವೀರುನಿಕಿ೨೦೦೭ತೆಲುಗು
ವಾನಉನ್ನತ ಲೇನತ್ತ೨೦೦೮ತೆಲುಗು
ವಿಲ್ಲುರಾಮ ರಾಮ೨೦೦೯ತಮಿಳು
ವಾಂಟೆಡ್ಜಲ್ವ೨೦೦೯ಹಿಂದಿ
ಪ.ರ ಪಲನಿಸಾಮಿಸಿಂಗಾರಿ ಮಾವ೨೦೧೦ತಮಿಳು
ಬಾಡಿಗಾರ್ಡ್ಕೋರಿಯೋಗ್ರಾಫರ್೨೦೧೦ಮಲಯಾಳಂ
ಉರ್ಮಿಅರಣೆ ಅರಣೆ೨೦೧೧ಮಲಯಾಳಂ
ಎಂಜಿಯೂಮ್ ಕಾಧಲ್ಎಂಜಿಯೂಮ್ ಕಾಧಲ್೨೦೧೧ತಮಿಳು
ದೋನಿವಾನ್ಗಮ್ ಪನತುಕ್ಕುಮ್೨೦೧೨ತಮಿಳು
ದೋನಿಮತ್ತಿಲೊನಿ ಚೆಟ್ಟು೨೦೧೨ತೆಲುಗು
ರೌಡಿ ರಾಥೊರ್ಚಿಂತ ತಾ ಚಿತ೨೦೧೨ಹಿಂದಿ
ಹೊ ಮೈ ಗಾಡ್ಗೋವಿಂದ೨೦೧೨ಹಿಂದಿ
ರಾಮಯ್ಯ ವಸ್ತವಾಯಜಾದು ಕಿ ಜಪ್ಪಿ೨೦೧೩ಹಿಂದಿ
ಬಾಸ್ಹಮ್ ನಾ ತೋಡೆ೨೦೧೩ಹಿಂದಿ
ಆರ್...ರಾಜ್ ಕುಮಾರ್ಗಂದಿ ಬಾತ್೨೦೧೩ಹಿಂದಿ
ಹ್ಯಾಪಿ ನ್ಯೂ ಯಿಯರ್ಡ್ಯಾನ್ಸ್ ಇನ್ಸ್ ಟ್ರಾಕ್ಟರ್೨೦೧೪ಹಿಂದಿಅತಿಥಿ ಪ್ರದರ್ಶನ
ಆಕ್ಷನ್ ಜಾಕ್ಸನ್ಏಜೆ೨೦೧೪ಹಿಂದಿ

ಹಾಡುಗಾರ

ಚಲನಚಿತ್ರಹಾಡುವರ್ಷಭಾಷೆ
ಸುಯಂವರಂಸಿವ ಸಿವ ಸಂಕರ೧೯೯೯ತಮಿಳು
ಉಲ್ಲಮ್ ಕೊಲ್ಲಾಯಿ ಪೋಗುತೆಕಿಂಗ್ಡ೨೦೦೧ತಮಿಳು

ಗೀತಕಾರ

ಚಲನಚಿತ್ರಹಾಡುವರ್ಷಸಂಯೋಜಕಭಾಷೆಟಿಪ್ಪಣಿಗಳು
ಯುಂಗ್ ಮುಂಗ್ ಸಂಗ್೨೦೧೮ಅಮ್ರೇಶ್ ಗಣೇಶ್ತಮಿಳು
ಚಾರ್ಲಿ ಚಾಪ್ಲಿನ್ ೨ಇವಲ ಇವಲ೨೦೧೮ಅಮ್ರೇಶ್ ಗಣೇಶ್ತಮಿಳು
ದೇವಿ ೨ಸೊಕ್ಕುರ ಪೆನ್ನೆ೨೦೧೮ಅಮ್ರೇಶ್ ಗಣೇಶ್ತಮಿಳು

ಪ್ರಶಸ್ತಿಗಳು

ವರ್ಷಪ್ರಶಸ್ತಿಚಲನಚಿತ್ರಗಳುಭಾಷೆವರ್ಗಫಲಿತಾಂಶ
೧೯೯೬ನ್ಯಾಷನಲ್ ಫಿಲ್ಮ್ ಅವಾರ್ಡ್ಮಿನ್ಸಾರ ಕನವುತಮಿಳುಅತ್ಯುತ್ತಮ ನೃತ್ಯ ಸಂಯೋಜನೆಗೆಲುವು
೨೦೦೪ನ್ಯಾಷನಲ್ ಫಿಲ್ಮ್ ಅವಾರ್ಡ್ಲಕ್ಷ್ಯಹಿಂದಿಅತ್ಯುತ್ತಮ ನೃತ್ಯ ಸಂಯೋಜನೆಗೆಲುವು
೨೦೦೫ಫಿಲ್ಮ್ ಫೇರ್ ಅವಾರ್ಡ್ಲಕ್ಷ್ಯಹಿಂದಿಅತ್ಯುತ್ತಮ ನೃತ್ಯ ಸಂಯೋಜನೆಗೆಲುವು
೨೦೦೪ನಂದಿ ಅವಾರ್ಡ್ವರ್ಷಂತೆಲುಗುಅತ್ಯುತ್ತಮ ನೃತ್ಯ ಸಂಯೋಜನೆಗೆಲುವು
೨೦೦೫ಫಿಲ್ಮ್ ಫೇರ್ ಅವಾರ್ಡ್ಸ್ ಸೌತ್ನುವೋಸ್ತಾನಂತೆ ನೆನೊದ್ದಂತನತೆಲುಗುಅತ್ಯುತ್ತಮ ನೃತ್ಯ ಸಂಯೋಜನೆಗೆಲುವು
೨೦೦೭ವಿಜಯ್ ಅವಾರ್ಡ್ಪೊಕ್ಕಿರಿತಮಿಳುನೆಚ್ಚಿನ ನಿರ್ದೇಶಕಗೆಲುವು
  • ಪ್ರಭುದೇವ ರವರು ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ೨೦೧೯ ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಮಾರ್ಚ್ ೧೧, ೨೦೧೯ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ, ಶ್ರೀ ರಾಮ್ ನಾಥ್ ಕೋವಿಂದ್ ರವರು ಶ್ರೀ ಪ್ರಭುದೇವ ರವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಉಲ್ಲೇಖಗಳು