ಬೆಂಗಳೂರು ನಗರ ರೈಲ್ವೆ ನಿಲ್ದಾಣ

ಬೆಂಗಳೂರು ನಗರದ ಮುಖ್ಯ ರೈಲ್ವೆ ನಿಲ್ದಾಣ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ[೧] ರೈಲ್ವೆ ನಿಲ್ದಾಣ ಎಂದು ಅಧಿಕೃತವಾಗಿ ಹೆಸರಿಸಲಾಗಿರುವ ಬೆಂಗಳೂರು ನಗರ ರೈಲ್ವೆ ನಿಲ್ದಾಣವು ಬೆಂಗಳೂರು ನಗರದ ಮುಖ್ಯ ರೈಲ್ವೆ ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಿಲ್ದಾಣವನ್ನು ಕನ್ನಡನಾಡಿನ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಸ್ಮರಣಾರ್ಥ ಮೇ ೨೦೧೫ ರಲ್ಲಿ ಮರುನಾಮಕರಣ[೨] ಮಾಡಲಾಗಿ, ೩ ಫೆಬ್ರವರಿ ೨೦೧೬ ರಿಂದ ಅಧಿಕೃತಗೊಳಿಸಲಾಗಿದೆ.[೧] ಈ ನಿಲ್ದಾಣವು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತಾಗಿಕೊಂಡಿದೆ. ಈ ನಿಲ್ದಾಣವು ನೈಋತ್ಯ ರೈಲ್ವೆ ಹಾಗು ಭಾರತೀಯ ರೈಲ್ವೆಯ ಬಹುಮುಖ್ಯ ಕೇಂದ್ರವಾಗಿದೆ. ಈ ನಿಲ್ದಾಣವು ೧೦ ಅಂಕಣಗಳು ಹಾಗು ೨ ಪ್ರವೇಶ ದ್ವಾರಗಳನ್ನು ಹೊಂದಿದೆ. ಇದು ಭಾರತದ ಅತ್ಯಂತ ಜನನಿಬಿಡ ರೈಲ್ವೆ ನಿಲ್ದಾಣಗಳಲ್ಲೊಂದಾಗಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಬೆಂಗಳೂರು ನಗರ) ರೈಲ್ವೆ ನಿಲ್ದಾಣ
ಭಾರತೀಯ ರೈಲ್ವೆ ನಿಲ್ದಾಣ
ಸ್ಥಳರೈಲ್ವೆ ನಿಲ್ದಾಣ ರಸ್ತೆ, ಗುಬ್ಬಿ ತಿರುವು, ಬೆಂಗಳೂರು, ಕರ್ನಾಟಕ,
 ಭಾರತ
ನಿರ್ದೇಶಾಂಕ12°58′42″N 77°34′10″E / 12.97833°N 77.56944°E / 12.97833; 77.56944
ಎತ್ತರ896.920 metres (2,942.65 ft)
ಒಡೆತನದಭಾರತೀಯ ರೈಲ್ವೆ
ನಿರ್ವಹಿಸುತ್ತದುನೈಋತ್ಯ ರೈಲ್ವೆ
ಗೆರೆ(ಗಳು)ಚೆನ್ನೈ ಕೇಂದ್ರ-ಬೆಂಗಳೂರು ನಗರ ಮಾರ್ಗ
ವೇದಿಕೆ೧೦
ಸಂಪರ್ಕಗಳುಕೆಂಪೇಗೌಡ ಬಸ್ ನಿಲ್ದಾಣ, ನಮ್ಮ ಮೆಟ್ರೋ
Construction
ಪಾರ್ಕಿಂಗ್ಇದೆ
Other information
ಸ್ಥಿತಿಚಾಲ್ತಿಯಲ್ಲಿದೆ
ನಿಲ್ದಾಣದ ಸಂಕೇತSBC
ವಿದ್ಯುನ್ಮಾನಹೌದು
ರೈಲ್ವೆ ನಕ್ಷೆಯಲ್ಲಿ ಬೆಂಗಳೂರು ನಗರ ರೈಲ್ವೆ ನಿಲ್ದಾಣ

ಕೂಡು ನಿಲ್ದಾಣ(ಜಂಕ್ಷನ್)

ಬೆಂಗಳೂರು ಭಾರತದ ಬಹುಮುಖ್ಯ ಕೂಡು ನಿಲ್ದಾಣಗಳಲ್ಲೊಂದಾಗಿದೆ. ಮೊದಲ ೭ ಅಂಕಣಗಳು ಚೆನ್ನೈ ಮತ್ತು ಸೇಲಂ ರೈಲ್ವೆ ಮಾರ್ಗಗಳನ್ನು ಸಂಪರ್ಕಿಸುತ್ತವೆ. ಹುಬ್ಬಳ್ಳಿಯಿಂದ ಯಶವಂತಪುರ ಮಾರ್ಗದಲ್ಲಿ ಬರುವ ರೈಲುಗಳು ೮ ರಿಂದ ೧೦ನೆ ಅಂಕಣಗಳನ್ನು ಸೇರುತ್ತವೆ . ಅಂಕಣ ೫ ರಿಂದ ೧೦ರಲ್ಲಿ, ಮೈಸೂರುಕಡೆಗೆ ಪ್ರಯಾಣಿಕ ಗಾಡಿಗಳು ಹೊರಡುತ್ತವೆ. ಅಂಕಣ ೪ ಮತ್ತು ೫ರ ಮಧ್ಯ ಇರುವ ಹಳಿಗಳನ್ನು ರೈಲುಗಳನ್ನು ನಿಲ್ಲಿಸಲು ಬಳಸಲಾಗುತ್ತದೆ. ಬೆಂಗಳೂರು ನಗರ ರೈಲ್ವೆ ನಿಲ್ದಾಣದಿಂದ ೫ ರೈಲ್ವೆ ಮಾರ್ಗಗಳು ಹಾದು ಹೋಗುತ್ತವೆ. ಗುಂತಕಲ್ ಮಾರ್ಗವಾಗಿ ಹೈದರಾಬಾದ್, ಕೃಷ್ಣರಾಜಪುರ ಮಾರ್ಗವಾಗಿ ಚೆನ್ನೈ, ಹೊಸೂರು ಮಾರ್ಗವಾಗಿ ಸೇಲಂ, ಮೈಸೂರು, ತುಮಕೂರು ಮಾರ್ಗವಾಗಿ ಹುಬ್ಬಳ್ಳಿ, ಬೀರೂರು. ಬೆಂಗಳೂರು ದಂಡು, ಬಂಗಾರಪೇಟೆ ಮೂಲಕ ಹಾದುಹೋಗುವ ಬೆಂಗಳೂರು-ಚೆನ್ನೈ ರೈಲ್ವೆ ಮಾರ್ಗವನ್ನು ಸಂಪೂರ್ಣ ವಿದ್ಯುದೀಕರಿಸಲಾಗಿದ್ದು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಈ ನಿಲ್ದಾಣದಿಂದ ದಿನಂಪ್ರತಿ ೬೩ ವೇಗದೂತ ರೈಲುಗಳನ್ನೊಳಗೊಂಡು ಒಟ್ಟು ೮೮ ರೈಲುಗಳು ಕಾರ್ಯಾಚರಿಸುತ್ತವೆ ಮತ್ತು ಅಂದಾಜು ೨,೨೦,೦೦೦ ಪ್ರಯಾಣಿಕರು ಈ ನಿಲ್ದಾಣವನ್ನು ಬಳಸುತ್ತಾರೆ.[೩]

ರೈಲ್ವೆ ಬಡಾವಣೆ

ನಿಲ್ದಾಣದ ಹಿಂಭಾಗದಲ್ಲಿ ರೈಲ್ವೆ ಸಿಬ್ಬಂದಿಗಳಿಗಾಗಿಯೆ ಬಡಾವಣೆಯೊಂದನ್ನು ಸ್ಥಾಪಿಸಲಾಗಿದ್ದು. ಈ ಕಾಲೋನಿಯು ಶಾಲೆ, ಆಸ್ಪತ್ರೆ, ಆಟದ ಮೈದಾನ ಮುಂತಾದ ಮೂಲಸೌಕರ್ಯಗಳನ್ನೊಳಗೊಂಡಿದೆ.

ವಿಸ್ತರಣೆ

ಟಿಕೇಟ್ ಮುಂಗಟ್ಟೆ, ಕೆಳಮಹಡಿಯ ವಾಹನ ನಿಲ್ದಾಣ ಹಾಗು ಪ್ರಯಾಣಿಕರ ಚಾವಡಿಗಳನ್ನೊಳಗೊಂಡ ಸುಸಜ್ಜಿತ ಕಟ್ಟಡವು ಓಕಳೀಪುರ ಪ್ರವೇಶ ದ್ವಾರದಲ್ಲಿ ಸೇವೆಗೆ ಮುಕ್ತಗೊಳಿಸಲಾಗಿದೆ.[೪]

ಸ್ಥಳ

ಕೆಂಪೇಗೌಡ ಬಸ್ ನಿಲ್ದಾಣ(ಮೆಜೆಸ್ಟಿಕ್)ನ ಹತ್ತಿರ.

ಉಲ್ಲೇಖಗಳು

ಬಾಹ್ಯ ಕೊಂಡಿಗಳು