ಭಾಯಿ ಬಾಲ್ಮುಕುಂದ್

ಭಾಯಿ ಬಾಲ್ಮುಕುಂದ್ (೧೮೮೯ - ೮ ಮೇ ೧೯೧೫) ಒಬ್ಬ ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ. ದೆಹಲಿಯ ಪಿತೂರಿ ಪ್ರಕರಣದಲ್ಲಿ ಅವರ ಪಾತ್ರಕ್ಕಾಗಿ ಬ್ರಿಟಿಷ್ ರಾಜ್ ಅವರಿಗೆ ಮರಣದಂಡನೆ ನೀಡಿತು ಮತ್ತು ಅವರನ್ನು ಗಲ್ಲಿಗೇರಿಸಿತು. ಅವರು ಗದರ್ ಪಕ್ಷದ ಸ್ಥಾಪಕ ಸದಸ್ಯರಾಗಿದ್ದ ಮತ್ತೊಬ್ಬ ಕ್ರಾಂತಿಕಾರಿ ಭಾಯಿ ಪರಮಾನಂದರ ಸೋದರಸಂಬಂಧಿಯಾಗಿದ್ದರು.

ಆರಂಭಿಕ ಜೀವನ

ಭಾಯಿ ಬಾಲ್ಮುಕುಂದ್ ಅವರು ೧೮೮೯ ರಲ್ಲಿ ಝೇಲಂ ಜಿಲ್ಲೆಯ ( ಪ್ರಸ್ತುತ್ತ ಪಾಕಿಸ್ತಾನದಲ್ಲಿದೆ) ಕರಿಯಾಲಾ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಭಾಯಿ ಮಥುರಾ ದಾಸ್. ಅವರ ಕುಟುಂಬವು ಹಿಂದೂ ಇತಿಹಾಸದ ಪ್ರಸಿದ್ಧ ಹೊರಾಟಗರರಾದ ಭಾಯಿ ಮತಿ ದಾಸ್ ಅವರಿಂದ ಬಂದಿದೆ, ಅದರಿಂದ ಅವರು ತಮ್ಮ ಹೆಸರುಗಳಿಗೆ ಭಾಯಿ ಎಂಬ ವಿಶೇಷಣವನ್ನು ಇಟ್ಟಕೊಂಡಿದ್ದರು. ವಿದ್ಯಾರ್ಥಿಯಾಗಿದ್ದಾಗ ಬಾಲ್ಮುಕುಂದ್‌ ಅವರಿಗೆ ರಾಷ್ಟ್ರೀಯ ಚಳವಳಿಯಲ್ಲಿ ಆಸಕ್ತಿ ಹುಟ್ಟಿತು. ಪದವಿಯ ನಂತರ, ಅವರು ಅಧ್ಯಾಪಕ ವೃತ್ತಿಯನ್ನು ತೆಗೆದುಕೊಂಡರು, ಆದರೆ ರಾಷ್ಟ್ರೀಯ ಚಳುವಳಿಯೊಂದಿಗಿನ ಅವರ ಬಾಂಧವ್ಯವು ಅವರನ್ನು ಕಟ್ಟಾ ರಾಷ್ಟ್ರೀಯವಾದಿಯನ್ನಾಗಿ ಮಾಡಿತು. [೧]

ಕ್ರಾಂತಿಕಾರಿ ಚಟುವಟಿಕೆಗಳು

೨೩ ಡಿಸೆಂಬರ್ ೧೯೧೨ ರಂದು, ಲಾರ್ಡ್ ಹಾರ್ಡಿಂಜ್ ಅವರು ದೆಹಲಿಯ ಚಾಂದಿನಿ ಚೌಕ್ ಮೂಲಕ ರಾಜ್ಯದಲ್ಲಿ ಮೆರವಣಿಗೆ ನಡೆಸುತ್ತಿದ್ದಾಗ, ಅವರ ಮೇಲೆ ಸ್ಫೋಟಕ ಎಸೆಯಲಾಯಿತು. ವೈಸ್‌ರಾಯ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದವು, ಆದರೆ ಅವರ ಪರಿಚಾರಕ ಕೊಲ್ಲಲ್ಪಟ್ಟರು. ಐದು ತಿಂಗಳ ನಂತರ ೧೭ ಮೇ ೧೯೧೩ ರಂದು ಲಾಹೋರ್‌ನ ಲಾರೆನ್ಸ್ ಗಾರ್ಡನ್‌ನಲ್ಲಿ ಕೆಲವು ಯುರೋಪಿಯನ್ನರ ಮೇಲೆ ಮತ್ತೊಂದು ಎಸೆಯಲಾಯಿತು. ತನಿಖೆಯ ನಂತರ, ಬಾಲ್ಮುಕುಂದ್ ಅವರನ್ನು ಜೋಧ್‌ಪುರದಲ್ಲಿ ಬಂಧಿಸಲಾಯಿತು, ಅಲ್ಲಿ ಅವರು ಜೋಧ್‌ಪುರ ಮಹಾರಾಜರ ಪುತ್ರರ ಬೋಧಕರಾಗಿ ಕೆಲಸ ಮಾಡುತ್ತಿದ್ದರು.

ಸಾವು

ಬಾಂಬ್ ಸ್ಫೋಟಗಳ ತನಿಖೆಯ ನಂತರ ದೆಹಲಿಯಲ್ಲಿ ವಿಚಾರಣೆಯನ್ನು ನಡೆಸಲಾಯಿತು. ಇದರ ಪರಿಣಾಮವಾಗಿ ಬಾಲ್ ಮುಕುಂದ್ ಅವರೊಂದಿಗೆ ಅವರ ಸಹಚರರಾದ ಮಾಸ್ಟರ್ ಅಮೀರ್ ಚಂದ್, ಅವಧ್ ಬಿಹಾರಿ ಮತ್ತು ಬಸಂತ ಕುಮಾರ್ ಬಿಸ್ವಾಸ್ ಅವರಿಗೆ ಡಿಸೆಂಬರ್ ೮, ೧೯೧೪ ರಂದು ಮರಣದಂಡನೆ ವಿಧಿಸಲಾಯಿತು.[೨] ಮೇ ೧೧, ೧೯೧೫ ರಂದು, ಬಾಲ್ ಮುಕುಂದ್ ಅವರನ್ನು ೩೨ ನೇ ವಯಸ್ಸಿನಲ್ಲಿ ಅಂಬಾಲಾ ಕೇಂದ್ರೀಯ ಕಾರಾಗ್ರಹದಲ್ಲಿ ಗಲ್ಲಿಗೇರಿಸಲಾಯಿತು. [೩]

ಉಲ್ಲೇಖಗಳು

ಗ್ರಂಥಸೂಚಿ