ಮೀರಾ ಜಾಸ್ಮಿನ್

ಭಾರತೀಯ ಚಲನಚಿತ್ರ ನಟಿ


ಜಾಸ್ಮಿನ್ ಮೇರಿ ಜೋಸೆಫ್, ಮೀರಾ ಜಾಸ್ಮಿನ್ ಅವರು ವಿಬಿನ್ ಜೋಸೆಫ್ ಅವರನ್ನು ವಿವಾಹವಾಗಲಿದ್ದಾರೆ. (ಮಲಯಾಳಂ മീര ജാസ്മിന്‍) (ಜನಿಸಿದ್ದು 1984ರ ಫೆಬ್ರವರಿ 15ರಂದು), ಇವರು ತಮ್ಮ ಸ್ಟೇಜ್ ಹೆಸರಾದ ಮೀರಾ ಜಾಸ್ಮಿನ್ ಹೆಸರಿನಿಂದ ಚಿರಪರಿಚಿತರು, ಇವರು ಭಾರತೀಯ ಚಿತ್ರನಟಿ, 0}ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳನ್ನೊಳಗೊಂಡ ಭಾರತೀಯ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. . ಇವರು 2004ರಲ್ಲಿ ರಾಷ್ಟ್ರೀಯ ಫಿಲ್ಮ್ ಅವಾರ್ಡ್‌ನಲ್ಲಿ ಉತ್ತಮ ನಟಿ ಪ್ರಸಸ್ತಿ ಮತ್ತು ಎರಡು ಬಾರಿಗೆ ಕೇರಳ ರಾಜ್ಯದ ಫಿಲ್ಮ್ ಅವಾರ್ಡ್ ಹಾಗೂ ಒಂದು ತಮಿಳುನಾಡು ರಾಜ್ಯ ಫಿಲ್ಮ್ ಅವಾರ್ಡ್ ಗಳಿಸಿದ್ದಾರೆ ಅವರು ತಮಿಳುನಾಡು ಸರ್ಕಾರವು ನೀಡುವ ಅತ್ಯಂತ ಗೌರವಾನ್ವಿತ ಪ್ರಶಸ್ತಿ ಕಲೈಮಾಮಣಿಗೆ ಕೂಡ ಇವರು ಪಾತ್ರರಾಗಿದ್ದಾರೆ.ಇತ್ತೀಚೆಗೆ ಅವರು ತಮ್ಮ ಜೀವನ ಸಂಗಾತಿಯನ್ನು ಕಂಡುಕೊಂಡಿದ್ದಾರೆ (ಇದು ನಿಜವಾದ ಪ್ರೇಮವಿವಾಹ). MBA ಓದಿರುವ ಅವರು ಒಬ್ಬ ವ್ಯಾಪಾರಸ್ಥರಾಗಿದ್ದಾರೆ, ಮೇಡ್ ಫಾರ್ ಈಚ್ ಅದರ್. ಅವರ ಹೆಸರು ವಿಬಿನ್ ಜೋಸೆಫ್ 2011ರಲ್ಲಿ ಮದುವೆಯಾಗುವ ಯೋಜನೆ ಹೊಂದಿದ್ದಾರೆ.

ಮೀರಾ ಜಾಸ್ಮಿನ್

ಜಾಸ್ಮಿನ್, ೨೦೧೧ರಲ್ಲಿ
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಜಾಸ್ಮಿನ್ ಮೇರಿ ಜೋಸೆಫ್
(1984-02-15) ಫೆಬ್ರವರಿ ೧೫, ೧೯೮೪ (ವಯಸ್ಸು ೪೦)
ತಿರುವಳ್ಳ, ಕೇರಳ, ಭಾರತ
ವರ್ಷಗಳು ಸಕ್ರಿಯ೨೦೦೧-ಇಲ್ಲಿಯವರೆಗೆ

ಆರಂಭದ ಜೀವನ

1984ರ ಫೆಬ್ರವರಿ 15ರಂದು ಕೇರಳದ ಪಥನಮ್‌ತಿಟ್ಟ ಜಿಲ್ಲೆಯ ತಿರುವಲ್ಲದ ಕುಟ್ಟಪುಝಾದಲ್ಲಿ

ಮೀರಾ ಜಾಸ್ಮಿನ್ ಜನಿಸಿದರು, ಇವರ ಜನ್ಮನಾಮ  ಜಾಸ್ಮಿನ್ ಮೇರಿ ಜೋಸೆಫ್ .  

ಜೋಸೆಫ್ ಹಾಗೂ ಅಲೆಯಮ್ಮ ದಂಪತಿಗಳಿಗೆ ಜನಿಸಿದ ಇವರಿಗೆ ಜೆನಿ ಎಂಬ ಸಹೋದರಿ ಇದ್ದಾಳೆ. ಇವರು ಹುಟ್ಟಿದ್ದು ಕ್ರಿಶ್ಚಿಯನ್ ಸಮುದಾಯದಲ್ಲಿ (ಮರ್ ಥೋಮಾ ಚರ್ಚ್), ತೆಕ್ಕೆಮಾಲಾದ ಸೆವೆಂತ್ ಡೇ ಅಡ್ವೆಂಟಿಸ್ಟ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ (ಶಿಶುವಿಹಾರದಿಂದ ನಾಲ್ಕನೆಯ ತರಗತಿಯವರೆಗೆ) ಇವರ ಪ್ರಾಥಮಿಕ ಶಿಕ್ಷಣ ಮುಗಿಸಿ , ನಂತರ ತಿರುವಳ್ಳದ ಮರ್ ಥೋಮಾ ರೆಸಿಡೆನ್ಶಿಯಲ್ ಶಾಲೆ (ಐದನೆಯ ತರಗತಿಯಿಂದ ಪ್ರೌಢ ಶಾಲೆಯವರೆಗೆ) ಸೇರಿದರು. 2000ರಲ್ಲಿ ಆಕೆ ತಮ್ಮ ಶಾಲಾಭ್ಯಾಸವನ್ನು ಮುಗಿಸಿದರು ಅಮೇಲೆ ಆಕೆ ಪ್ರಾಣಿಶಾಸ್ತ್ರದಲ್ಲಿ BSc ಪದವಿ ಪಡೆಯಲು ಚಂಗಾನ್‌ಚೆರ್ರಿಯ ಅಸಂಪ್ಷನ್ ಕಾಲೇಜಿಗೆ ಸೇರಿದರು, ಅಲ್ಲಿ ಆಕೆ ಮೂರು ತಿಂಗಳ ಕಾಲ ಅಭ್ಯಾಸ ನಡೆಸಿದರು, ಆಗಲೇ ನಿರ್ದೇಶಕ ಬ್ಲೆಸ್ಸಿ ಅವರ ದೃಷ್ಟಿಗೆ ಬಿದ್ದರು (ನಿರ್ದೇಶಕ ಲೋಹಿತ್‌ದಾಸ್ ಅವರ ಸಹಾಯಕ ನಿರ್ದೇಶಕರಾಗಿದ್ದರು) ಮತ್ತು ಅವರು ಸೂತ್ರಧಾರನ್ ಚಿತ್ರದಲ್ಲಿ ನಟಿಸುವಂತೆ ಆಕೆಯನ್ನು ಕೇಳಿಕೊಂಡರು.

ಇತ್ತೀಚೆಗೆ ಅವರು ತಮ್ಮ ಜೀವನ ಸಂಗಾತಿಯನ್ನು ಕಂಡುಕೊಂಡಿದ್ದಾರೆ (ಇದು ನಿಜವಾದ ಪ್ರೇಮವಿವಾಹ). MBA ಓದಿರುವ ಅವರು ಒಬ್ಬ ವ್ಯಾಪಾರಸ್ಥರಾಗಿದ್ದಾರೆ, ಮೇಡ್ ಫಾರ್ ಈಚ್ ಅದರ್. ಅವರ ಹೆಸರು ವಿಬಿನ್ ಜೋಸೆಫ್ 2011ರಲ್ಲಿ ಮದುವೆಯಾಗುವ ಯೋಜನೆ ಹೊಂದಿದ್ದಾರೆ.

ಮಲಯಾಳಂ

ಜಾಸ್ಮಿನ್ ಅವರು ತಮ್ಮ ವೃತ್ತಿಜೀವನವನ್ನು 2001ರಲ್ಲಿ ಲೋಹಿತ್ ದಾಸ್ ನಿರ್ದೇಶನದ ಮಲಯಾಳಂ ಚಲನಚಿತ್ರ ಸೂತ್ರಧಾರನ್‌ನಲ್ಲಿ ನಾಯಕ ನಟ ದಿಲೀಪ್ ಎದುರಿಗೆ ಅಭಿನಯಿಸುವ ಮೂಲಕ ಪ್ರಾರಂಭಿಸಿದರು. ಹಣಕಾಸಿನ ವಿಷಯದಲ್ಲಿ ಈ ಚಲನಚಿತ್ರ ಹೆಚ್ಚು ಯಶಸ್ಸುಗಳಿಸಲಿಲ್ಲವಾದರೂ, ಆಕೆಗೆ ಬೇರೆ ಭಾಷೆಯ ಚಿತ್ರಗಳಲ್ಲಿ ಅವಕಾಶಗಳು ಬಂದರು. ಅವರ ಆರು ವರ್ಷಗಳ ವೃತ್ತಿಜೀವನದಲ್ಲಿ ಒಂದು ಡಜನ್ ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತನ್ನ ಎರಡನೆಯ ಚಲನಚಿತ್ರ ನಿರ್ದೇಶಕ ಕಮಲ್ ನಿರ್ದೇಶಸಿದ ’ಗ್ರಾಮಫೋನ್’ನಲ್ಲಿ ನವ್ಯನಾಯರ್ ಜೊತೆಯಲ್ಲಿ ನಾಯಕನಟ ದಿಲೀಪ್ ಎದುರಿಗೆ ಅಭಿನಯಿಸಿದರು. ಯಹೂದಿ ಹುಡುಗಿಯಾಗಿ ನಟಿಸಿದ ಆಕೆಯ ಈ ಚಿತ್ರದ ಪಾತ್ರವನ್ನು ಮಲಯಾಳಂ ಚಿತ್ರ ಪ್ರೇಕ್ಷಕರು ಮೆಚ್ಚಿ ಹೊಗಳಿದ್ದಾರೆ. ಆಕೆಯ ಮೂರನೆಯ ಚಲನಚಿತ್ರ ಸ್ವಪ್ನಕ್ಕೂಡು, ಇದು ಒಂದು ಹಾಸ್ಯವನ್ನು ಕೂಡಿದ ಪ್ರೇಮ ಚಿತ್ರ, ಕಮಲ್ ನಿರ್ದೇಶನದ ಈ ಚಿತ್ರದಲ್ಲಿಪೃಥ್ವಿರಾಜ್, ಕುಂಚಕೊ ಬೊಬನ್, ಜಯಸೂರ್ಯ, ಮತ್ತು ಭಾವನ ಅವರು ಕೂಡ ತಾರಾಗಣದಲ್ಲಿದ್ದಾರೆ. ಇದರಲ್ಲಿ ಆಕೆಯ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆಯಲ್ಲದೆ ಇದು ಬಾಕ್ಸ್ ಆಫೀಸ್‌ನಲ್ಲಿ ಕೂಡಾ ದೊಡ್ಡ ಯಶಸ್ಸು ಕಂಡಿದೆ. ಅವರ ಐದು ಮುಖ್ಯ ಪಾತ್ರಗಳಲ್ಲಿ, ಮೀರಾ ಪಾತ್ರವು ಹೆಚ್ಚು ದಾಖಲೆಯಾಗಿದೆ. ಆಕೆಯ ಮಾರ್ಗದರ್ಶಕ ರಾದ ಲೋಹಿತ್‌ದಾಸ್ ನಿರ್ದೇಶನದ ಕಸ್ತೂರಿಮಾನ್ ಚಿತ್ರದ ಯಶಸ್ಸಿನ ನಂತರ ಮಲಯಾಳಂ ಚಲನಚಿತ್ರರಂಗದಿಂದ ಹೆಚ್ಚು ಆಕರ್ಷಿತಳಾದಳು.

ಹಾಸ್ಯಚಿತ್ರಗಳು ಮತ್ತು ಭಾವನಾತ್ಮಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಕಸ್ತೂರಿಮಾನ್ ಚಿತ್ರದ ತಮ್ಮ ಅಭಿನಯಕ್ಕಾಗಿ ಮೊದಲ ಫಿಲ್ಮ್ ಫೇರ್ ಅವಾರ್ಡ್ ಸ್ವೀಕರಿಸಿದರು.  

100ದಿನಗಳ ಪ್ರದರ್ಶನಗಳನ್ನು ನೀಡುವ ಮೂಲಕ: ಬಾಕ್ಸ್ ಆಫೀಸ್‌ನಲ್ಲಿ ಕೂಡಾ ಯಶಸ್ಸು ಗಳಿಸಿತು. ಅದೇ ವರ್ಷದಲ್ಲಿ, ಟಿ.ವಿ.ಚಂದ್ರನ್‌ ಅವರ ಉದ್ಘ್ಹೋಷಿತ ಚಿತ್ರದಲ್ಲಿ ನಟಿಸಿದರು Paadam Onnu: Oru Vilaapam. ಇದರಲ್ಲಿ ಆಕೆ 15-ವರ್ಷ ವಯಸ್ಸಿನ ಮುಸ್ಲಿಂ ಬಾಲೆಯೊಬ್ಬಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಆ ಬಾಲೆಗೆ ಮುದುಕನೊಬ್ಬನ ಜೊತೆ ಮದುವೆಯಾಗಲು ಒತ್ತಾಯಿಸುತ್ತಾರೆ ಆಕೆ ಬರೀ ರಾಜ್ಯ ಪ್ರಶಸ್ತಿಯಲ್ಲದೆ ರಾಷ್ಟ್ರೀಯ ಪ್ರಶಸ್ತಿ ಮತ್ತು ಇತರೆ ಪ್ರಶಸ್ತಿಗಳನ್ನು ಕೂಡಾ ಪಡೆದುಕೊಂಡಿದ್ದಾರೆ. ಕಾವ್ಯಾ ಮಾಧವನ್‌ ಜೊತೆಯಲ್ಲಿ ಪೆರುಮಾಝಕ್ಕಳಂ ಚಿತ್ರದಲ್ಲಿ ರಝಿಯಾ ಪಾತ್ರದಲ್ಲಿ ಅಭಿನಯಿಸಿದ್ದಾರೆ . 'ಅಚುವಿಂತೆ ಅಮ್ಮಾ'(2005) ಚಿತ್ರದಲ್ಲಿ, ಆಕೆ ಎಳೆಯ ವಯಸ್ಸಿನ ಬೆಡಗಿ ಅಚುವಿನ ಪಾತ್ರದಲ್ಲಿ ಗಮನಾರ್ಹ ನಟನೆಯನ್ನು ಮಾಡಿದ್ದಾಳೆ, ಆ ಪಾತ್ರ ಅಚ್ಚಳಿಯದೆ ಮನದಾಳದಲ್ಲಿ ಉಳಿಯುವಂತಿದೆ. ಸೂಪರ್ ಸ್ಟಾರ್ ಮೋಹನ್‌ಲಾಲ್ ಅವರ ಜೊತೆಯಲ್ಲಿ ರಾಸತಂತ್ರಂ(2006) ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ. ಆಕೆ ಅರ್ಧ ಚಿತ್ರದಲ್ಲಿ ಹುಡುಗನಾಗಿ ಅಭಿನಯಿಸಿದ್ದಾಳೆ ಮತ್ತು ಈ ಚಿತ್ರವು ದೊಡ್ಡ ಯಶಸ್ಸನ್ನು ಕಂಡಿತು. ಆಕೆಯ ನಂತರದ ಚಿತ್ರ ನಟ ದಿಲೀಪ್ ಜೊತೆಯಲ್ಲಿ - ವಿನೋದಯಾತ್ರ ಮತ್ತೆ ಸತ್ಯನ್ ಅಂತಿಕ್ಕಾಡ್ ಜೊತೆಯಲ್ಲಿ ಆತ ಸಾಲಾಗಿ ತನ್ನ 3ನೆಯ ಚಿತ್ರದಲ್ಲಿಯೂ ಆಕೆಯನ್ನು ತೆಗೆದು ಕೊಂಡಿದ್ದಾನೆ. ಆಕೆ ನಂತರ ಅತ್ಯಂತ ವಿಮರ್ಶಾತ್ಮಕ ಚಿತ್ರ ಓರೆ ಕಡಲ್‌ನಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿತು ಮತ್ತು ಪ್ರಶಸ್ತಿಗಳನ್ನು ಗಳಿಸಿತು. ಅಕೆಯ ಮುಗ್ಧ ಮದ್ಯಮ ವರ್ಗದ ಹೆಂಗಸಿನ ಅಭಿನಯವು ಎಲ್ಲ ಮೂಲೆಗಳಿಂದ ಹೊಗಳಿಕೆಯನ್ನು ಪಡೆಯಿತು. "ಮೆಗಾಸ್ಟಾರ್‌ನ ಜೊತೆಯಲ್ಲಿ ಅಭಿನಯಿಸುವುದು ಈಕೆಯು ಬೆಳವಣಿಗೆ ಹಾಗೂ ಮೀರಾ ಜಾಸ್ಮಿನ್ ಎಂತಹ ಕಷ್ಟದ ಪಾತ್ರಗಳನ್ನೂ ನಿಭಾಯಿಸಬಲ್ಲವಳಾಗಿದ್ದಾಳೆ" ಎಂದು ಮಾದ್ಯಮಗಳು ವರದಿ ಮಾಡಿದವು. ಆಕೆಯ ನಂತರದ ಚಿತ್ರ ದಿಲೀಪ್ ಜೊತೆಯಲ್ಲಿ ಕಲ್ಕತ್ತಾ ನ್ಯೂಸ್. ಆಕೆಯನ್ನು ಚಲನಚಿತ್ರ ರಂಗಕ್ಕೆ ಪರಿಚಯಿಸಿದ ಬ್ಲೆಸ್ಸಿಯವರೇ ಕಲ್ಕತ್ತ ನ್ಯೂಸ್‌ ನ ನಿರ್ದೇಶಕರು.

ತಮಿಳು

ಜಾಸ್ಮಿನ್ ಅವರು ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದರಿಂದ ದಕ್ಷಿಣ ಭಾರತದಲ್ಲಿ ಹೆಚ್ಚು ಜನಪ್ರಿಯವಾದರು. ಆಕೆ ನಟಿಸಿದ ತಮಿಳು ಚಲನಚಿತ್ರ ರನ್  ಮತ್ತು ಬಾಲ  (2002) ಚಿತ್ರಗಳ ಯಶಸ್ಸಿನಿಂದಾಗಿ ತಮಿಳು ಚಿತ್ರರಂಗದಲ್ಲಿ ನೆಲೆಯೂರಿದ ಉತ್ತಮ ನಟರ ಜೊತೆಯಲ್ಲಿ ನಟಿಸುವ ಅವಕಾಶಗಳು ಆಕೆಯನ್ನು ಹುಡುಕಿಕೊಂಡು ಬಂದವು. 

ರನ್ ಚಿತ್ರದ ಉತ್ತಮ ಅಭಿನಯಕ್ಕಾಗಿ ಫಿಲ್ಮ್ ಫೇರ್‌ನಲ್ಲಿ ಉತ್ತಮ ಹೊಸ ನಟಿ ಪ್ರಶಸ್ತಿಯನ್ನು ಗಳಿಸಿದಳು. ಆಕೆಯ ಯಶಸ್ಸು ತಮಿಳು ಚಿತ್ರರಂಗದ ಮಹಾನ್ ನಿರ್ದೇಶಕರುಗಳಾದ ಮಣಿರತ್ನಂ ಅವರ ಆಯುತಾ ಎಜುತು ಮತ್ತು ಎಸ್ ಎಸ್ ಸ್ಟ್ಯಾನ್ಲೆ ಯವರ ಮರ್ಕ್ಯುರಿ ಪೊಕ್ಕಲ್ ಚಿತ್ರಗಳಲ್ಲಿ ನಟಿಸುವ ಅವಕಾಶ ತಂದುಕೊಟ್ಟಿತು.ಮೀರಾ 15 ತಮಿಳು ಚಿತ್ರಗಳಲ್ಲಿ ಅಭಿನಯಿಸಿದರು.

ತೆಲುಗು ಮತ್ತು ಕನ್ನಡ

ಜಾಸ್ಮಿನ್ ತೆಲುಗಿನ "ರನ್" (ತಮಿಳಿನಿಂದ ಡಬ್ ಮಾಡಿರುವುದು) ದಲ್ಲಿ ಮೊದಲಭಾರಿಗೆ ಅಭಿನಯಿಸುವ ಮೂಲಕ ತೆಲುಗು ಚಿತ್ರರಂಗದಲ್ಲಿ ಕೂಡಾ ಜನಪ್ರಿಯವಾದರು. 2004ರಿಂದ ಆಕೆ ತೆಲುಗು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ ಅಮ್ಮಾಯಿ ಬಾಗುಂದಿ ಮತ್ತು ಗುಡುಂಬ ಶಂಕರ್ ನಂತರದಲ್ಲಿ ಆಕೆ ಪುನೀತ್ ರಾಜ್‌ಕುಮಾರ್ ಅಭಿನಯದ ’ಮೌರ್ಯ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಳು. ಆಕೆಯ ಇನ್ನೊಂದು ಕನ್ನಡ ಚಿತ್ರ ಪುನೀತ್ ರಾಜ್‌ಕುಮಾರ್ ಹಾಗೂ ರಮ್ಯ ಅಕ ದಿವ್ಯ ಸ್ಪಂದನ ಅವರ ಜೊತೆಯಲ್ಲಿ ಅಭಿನಯಿಸಿದ "ಅರಸು" ಅತ್ಯಂತ ಯಶಸ್ವಿಯಾಯಿತು. ಆಕೆಯ ಮುಂಬರುವ ಕನ್ನಡ ಚಿತ್ರಗಳು ದೇವರು ಕೊಟ್ಟ ತಂಗಿ ಮತ್ತು ಇಜ್ಜೋಡು .

ಜಾಸ್ಮಿನ್ ಅವರ ತೆಲುಗಿನ ದೊಡ್ಡ ಯಶಸ್ಸು ಎಂದರೆ ರವಿ ತೇಜ ನಾಯಕನಾಗಿರುವ ಭದ್ರ . ಆಕೆಯ ಇತರೆ ತೆಲುಗು ಚಿತ್ರಗಳೆಂದರೆ ರಾರಾಜು, ಮಹಾರಧಿ, ಯಮಗೊಳ ಮಲ್ಲಿ ಮೊದಲಾಯಿಂದಿ, ಗೋರಿಂಟಕು ಹಾಗೂ ಹೊಸ ಚಿತ್ರ ಮಾ ಅಯನಾ ಚಂತಿ ಪಿಲ್ಲಡು,ಇದರಲ್ಲಿ ಎರಡನೆಯ ಬಾರಿಗೆ ಶಿವಾಜಿ ಜೊತೆಯಲ್ಲಿ ಅಭಿನಯಿಸಿದ್ದಾರೆ.

ವಿವಾದ

ಕೇರಳದ ತಾಲಿಪರಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಿವಾದಕ್ಕೊಳಗಾದರು. ಅಲ್ಲಿ ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ. ಹಿಂದೂ ಭಕ್ತರು ಇದನ್ನು ವಿರೋಧಿಸಿದರು ಕೊನೆಯಲ್ಲಿ ಆಕೆ ದೇವಸ್ಥಾನವನ್ನು ಶುದ್ಧಗೊಳಿಸುವುದಕ್ಕಾಗಿ Rs. 10,000 ದಂಡವನ್ನು ದೇವಸ್ಥಾನದ ಅಧಿಕಾರಿಗಳಿಗೆ ನೀಡಿದರು.[೧][೨]

ಪ್ರಶಸ್ತಿಗಳು

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

  • ೨೦೦೪ - ಉತ್ತಮ ನಟಿ, Paadam Onnu: Oru Vilapam

ಕೇರಳ ರಾಜ್ಯದ ಚಲನಚಿತ್ರ ಪ್ರಶಸ್ತಿಗಳು

  • ೨೦೦೩ - ಉತ್ತಮ ನಟಿ, Paadam Onnu: Oru Vilapam, ಕಸ್ತೂರಿ ಮಾನ್
  • ೨೦೦೭ - ಉತ್ತಮ ನಟಿ, ಓರೆ ಕಡಲ್ .

ತಮಿಳುನಾಡು ರಾಜ್ಯದ ಚಲನಚಿತ್ರ ಪ್ರಶಸ್ತಿಗಳು

  • ೨೦೦೫ - ತಮಿಳುನಾಡು ರಾಜದ ಚಲನಚಿತ್ರ ಪ್ರಶಸ್ತಿ(ವಿಶೇಷ ಬಹುಮಾನಗಳು), ಕಸ್ತೂರಿ ಮಾನ್

ತಮಿಳುನಾಡು ಸರ್ಕಾರ

  • ೨೦೦೮ - ಕಲೈಮಾಮಣಿ ಪ್ರಶಸ್ತಿ

ಫಿಲ್ಮ್‌ಫೇರ್ ಪ್ರಶಸ್ತಿಗಳು

  • ೨೦೦೨- ಫಿಲ್ಮ್‌ಫೇರ್‌ನ ಉತ್ತಮ ಹೊಸ ನಟಿ (ತಮಿಳು), ರನ್
  • ೨೦೦೩ - ಅತ್ಯುತ್ತಮ ನಟಿ ಫಿಲ್ಮ್‌ಫೇರ್ ಪ್ರಶಸ್ತಿ (ಮಲಯಾಳಂ), ಕಸ್ತೂರಿಮಣ್ [೩]
  • ೨೦೦೬ - ಅತ್ಯುತ್ತಮ ನಟಿ ಫಿಲ್ಮ್‌ಫೇರ್ ಪ್ರಶಸ್ತಿ (ಮಲಯಾಳಂ) , ಅಚುವಿಂತೆ ಅಮ್ಮ
  • ೨೦೦೭ - ಅತ್ಯುತ್ತಮ ನಟಿ ಫಿಲ್ಮ್‌ಫೇರ್ ಪ್ರಶಸ್ತಿ (ಮಲಯಾಳಂ), ಓರೆ ಕಡಲ್ [೪]

V ಶಾಂತಾರಾಮ್‌ ಪ್ರಶಸ್ತಿ

  • ೨೦೦೩ - ವಿ ಶಾಂತಾರಾಮ್ ಉತ್ತಮ ನಟಿ ಪ್ರಶಸ್ತಿ, Paadam Onnu: Oru Vilapam .
  • ೨೦೦೭ - ವಿ ಶಾಂತಾರಾಮ್ ಉತ್ತಮ ನಟಿ ಪ್ರಶಸ್ತಿ, ಓರೆ ಕಡಲ್

Asianet Film Awards

  • ೨೦೦೩ - ಜೀವಾ- ಏಷಿಯಾನೆಟ್ ಉತ್ತಮ ನಟಿ ಚಲನಚಿತ್ರ ಪ್ರಶಸ್ತಿ, , Paadam Onnu: Oru Vilapam [೫]
  • ೨೦೦೪ - ಜೀವಾ- ಲಕ್ಸ್- ಏಷಿಯಾನೆಟ್ ಉತ್ತಮ ನಟಿ ಚಲನಚಿತ್ರ ಪ್ರಶಸ್ತಿ, ಪೆರುಮಾಝಕ್ಕಲಮ್ [೬]
  • ೨೦೦೫ - ಜೀವಾ- ಲಕ್ಸ್- ಏಷಿಯಾನೆಟ್ ಉತ್ತಮ ನಟಿ ಚಲನಚಿತ್ರ ಪ್ರಶಸ್ತಿ, ಅಚುವಿಂತೆ ಅಮ್ಮಾ
  • ೨೦೦೭ - ಜೀವಾ- ಲಕ್ಸ್- ಏಷಿಯಾನೆಟ್ ಉತ್ತಮ ನಟಿ ಚಲನಚಿತ್ರ ಪ್ರಶಸ್ತಿ, ಓರೆ ಕಡಲ್

ವನಿತಾ ಚಲನಚಿತ್ರ ಪ್ರಶಸ್ತಿ

  • ೨೦೦೪ - ವನಿತಾ- ಚಂದ್ರಿಕಾ ಉತ್ತಮ ನಟಿ ಚಲನಚಿತ್ರ ಪ್ರಶಸ್ತಿ, ಪೆರುಮಾಝಕ್ಕಲಮ್
  • ೨೦೦೭ - ವನಿತಾ-ಪೆಯಿಂಟ್ ಚಲನಚಿತ್ರ ಉತ್ತಮ ನಟಿ ಪ್ರಶಸ್ತಿ, ಓರೆ ಕಡಲ್

ಮಾತೃಭೂಮಿ ಚಲನಚಿತ್ರ ಪ್ರಶಸ್ತಿಗಳು

  • ೨೦೦೩ - ಮಾತೃಭೂಮಿ- ಮೆಡಿಮಿಕ್ಸ್ ಉತ್ತಮನಟಿ ಪ್ರಶಸ್ತಿ, Paadam Onnu: Oru Vilapam [೭]
  • ೨೦೦೪ - ಮಾತೃಭೂಮಿ- ಮೆಡಿಮಿಕ್ಸ್ ಉತ್ತಮನಟಿ ಪ್ರಶಸ್ತಿ, ಪೆರುಮಾಝಕ್ಕಲಮ್ [೮]

ಇತರೇ ಪ್ರಶಸ್ತಿಗಳು

  • ೨೦೦೧ -ಉತ್ತಮ ಹೊಸ ನಟಿ ಭರತನ್ ಪ್ರಶಸ್ತಿ, ಸೂತ್ರಧಾರನ್ [೯]
  • ೨೦೦೨ - ಉತ್ತಮ ಹೊಸ ನಟಿ ದಿನಕರನ್ ಪ್ರಶಸ್ತಿ, ರನ್ [೧೦]
  • ೨೦೦೩ - ರಾಷ್ಟ್ರೀಯ ಚಲನಚಿತ್ರ ಅಕಾಡೆಮಿ ಉತ್ತಮ ನಟಿ ಪ್ರಶಸ್ತಿ, Paadam Onnu: Oru Vilapam .
  • ೨೦೦೩ - ಕಾವೇರಿ -ಚಲನಚಿತ್ರ ವಿಮರ್ಶಕರ ಪ್ರಶಸ್ತಿ, Paadam Onnu: Oru Vilapam [೧೧]
  • ೨೦೦೩ - ಕೇರಳ ಚಲಚಿತ್ರ ಪ್ರೇಕ್ಷಕರ ಕೌನ್ಸಿಲ್ ಪ್ರಶಸ್ತಿ, Paadam Onnu: Oru Vilapam
  • ೨೦೦೩ - ಕೇರಳ ಚಲನಚಿತ್ರ ವಿಮರ್ಶಕರ ಅಸೋಸಿಯೇಶನ್ ಪ್ರಶಸ್ತಿ, Paadam Onnu: Oru Vilapam [೧೨]
  • ೨೦೦೪ - ತಿಕ್ಕುರುಷಿ ಉತ್ತಮ ನಟಿ ಪ್ರಶಸ್ತಿ, ಪೆರುಮಝಕ್ಕಲಮ್ .[೧೩]
  • ೨೦೦೫ - ಅಮೃತಾ ಚಲನಚಿತ್ರ ಫ್ರಟರ್ನಿಟಿ ಉತ್ತಮ ನಟಿ ಪ್ರಶಸ್ತಿಅಚುವಿಂತೆ ಅಮ್ಮ
  • ೨೦೦೬ - ಜೀವನ್ TV-ಮಾಸ್ಟ್ರೊಮಾನಿಯಾ ಉತ್ತಮ ನಟಿ ಪ್ರಶಸ್ತಿ, ರಾಸತಂತ್ರಂ
  • ೨೦೦೭ - ದುಬೈ ಅಮ್ಮಾ ಉತ್ತಮ ನಟಿ ಪ್ರಶಸ್ತಿ, ಓರೆ ಕಡಲ್
  • ೨೦೦೭ - ಫೋಕನಾ ಉತ್ತಮ ನಟಿ ಪ್ರಶಸ್ತಿ, ಓರೆ ಕಡಲ್ [೧೪]
  • ೨೦೦೭ - ಅಮೃತಾ ಉತ್ತಮ ನಟಿ ಪ್ರಶಸ್ತಿ, ಓರೆ ಕಡಲ್ [೧೫]
  • ೨೦೦೭ - ಶ್ರೀವಿದ್ಯಾ ಪುರಸ್ಕಾರಂ (ಉತ್ತಮ ನಟಿ), ಓರೆ ಕಡಲ್ [೧೬]
  • ೨೦೦೭ - ತರಂಗಿಣಿ ಉತ್ತಮ ನಟಿ ಪ್ರಶಸ್ತಿ, ಓರೆ ಕಡಲ್
  • ೨೦೦೮ - 8ನೆಯ ವಾರ್ಷಿಕ ಇಮ್ಯಾಜಿನ್ ಇಂಡಿಯನ್ ಚಲನಚಿತ್ರ ಪ್ರಶಸ್ತಿ ಸಮಾರಂಭ ಸ್ಪೆಯಿನ್‌ನಲ್ಲಿ ಉತ್ತಮ ನಟಿ ಪ್ರಶಸ್ತಿ , "ಓರೆ ಕಡಲ್"
  • ೨೦೦೮ - ದುಬೈ ಅಮ್ಮಾ ಉತ್ತಮ ನಟಿ ಪ್ರಶಸ್ತಿ, ಕಲ್ಕತ್ತಾ ನ್ಯೂಸ್
  • ೨೦೦೯ - ವೀರಾ ಪಝಾಸಿ ಅವಾರ್ಡ್ಸ್ -ಸ್ವರ್ಣ ಮಯೋಗಮ್

ಚಲನಚಿತ್ರಗಳ ಪಟ್ಟಿ

ವರ್ಷಶೀರ್ಷಿಕೆಪಾತ್ರಭಾಷೆಟಿಪ್ಪಣಿಗಳು
2001ಸೂತ್ರಧಾರನ್ಶಿವಾನಿಮಲಯಾಳಂ
2002ರನ್‌ಪ್ರಿಯಾತಮಿಳು
ಬಾಲಆರತಿತಮಿಳು
2003ಕಸ್ತೂರಿಮಾನ್ಮಲಯಾಳಂಫಿಲ್ಮ್‌ಫೇರ್ ಅವಾರ್ಡ್‌ನ ಅತ್ಯುತ್ತಮ ಮಲಯಾಳಂ ನಟಿ ಪ್ರಶಸ್ತಿ ವಿಜೇತೆ
ಪುಧಿಯಾ ಗೀತಾಯ್ಸುಶಿತಮಿಳು
ಗ್ರಾಮಫೋನ್ಜೆನ್ನಿಫರ್ಮಲಯಾಳಂ
ಸ್ವಪ್ನಕ್ಕೂಡುಕಮಲಮಲಯಾಳಂ
ಆಂಜನೇಯದಿವ್ಯತಮಿಳು
Paadam Onnu: Oru Vilapamಶಾಹಿನಾಮಲಯಾಳಂರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ನಟಿ ವಿಜೇತೆ
ಕೇರಳ ಸರ್ಕಾರದ ಉತ್ತಮ ನಟಿ ಪ್ರಶಸ್ತಿ ವಿಜೇತೆ
ಏಷಿಯಾನೆಟ್ ಉತ್ತಮ ನಟಿ ಪ್ರಶಸ್ತಿ ,ವಿಜೇತೆ
ಜೂಟ್ಮೀರಾತಮಿಳು
ಚಕ್ರಂಇಂದ್ರಾಣಿಮಲಯಾಳಂ
2004ಅಮ್ಮಾಯಿ ಬಾಗುಂದಿಜನನಿ,
ಸತ್ಯ
ತೆಲುಗು
ಆಯುತ ಎಜುತುಸಸಿತಮಿಳು
ಮೌರ್ಯಅಲಮೇಲುಕನ್ನಡ
ಗುಡುಂಬ ಶಂಕರ್ಗೌರಿತೆಲುಗು
[[

ಪೆರುಮಾಝಕ್ಕಲಮ್]]

ರಝಿಯಾಮಲಯಾಳಂಏಷಿಯಾನೆಟ್ ಉತ್ತಮ ನಟಿ ಪ್ರಶಸ್ತಿ ,ವಿಜೇತೆ
2005ಅಚುವಿಂತೆ ಅಮ್ಮಅಶ್ವತಿಮಲಯಾಳಂಫಿಲ್ಮ್‌ಫೇರ್ ಅವಾರ್ಡ್‌ನ ಅತ್ಯುತ್ತಮ ಮಲಯಾಳಂ ನಟಿ ಪ್ರಶಸ್ತಿ ವಿಜೇತೆ
ಏಷಿಯಾನೆಟ್ ಉತ್ತಮ ನಟಿ ಪ್ರಶಸ್ತಿ ,ವಿಜೇತೆ
ಭದ್ರಅನುತೆಲುಗು
ಕಸ್ತೂರಿ ಮಾನ್ಉಮಾತಮಿಳುತಮಿಳು ನಾಡು ರಾಜ್ಯದ ಉತ್ತಮ ನಟಿ ವಿಶೇಷ ಪ್ರಶಸ್ತಿ,ವಿಜೇತೆ
ಸಂಡಕೋಝಿಹೇಮಾತಮಿಳು
2006ಮರ್ಕ್ಯುರಿಅಂಬು ಚೆಲ್ವಿತಮಿಳು
ರಸತಂತ್ರಂಕಣ್ಮಣಿಮಲಯಾಳಂ
ರಾರಾಜುಜ್ಯೋತಿತೆಲುಗು
2007ಅರಸುಕನ್ನಡ
ಮಹಾರಧಿಕಲ್ಯಾಣಿತೆಲುಗು
ತಿರುಮಗನ್ಅಯ್ಯಕ್ಕತಮಿಳು
ವಿನೋದಯಾತ್ರಆನುಪಮಮಲಯಾಳಂ
[[

ಪೊರಟ್ಟಾಯ್ ಎಂಗೀರ ಅಝಗು ಸುಂದರಂ]]

ಶ್ವೇತಾತಮಿಳು
[[

ಯಮಗೊಳ ಮಲ್ಲಿ ಮೊದಲಯಿಂಡಿ]]

ಐಶ್ವರ್ಯಾತೆಲುಗು
ಓರೆ ಕಡಲ್ದೀಪ್ತಿಮಲಯಾಳಂಕೇರಳ ಸರ್ಕಾರದ ಉತ್ತಮ ನಟಿ ಪ್ರಶಸ್ತಿ ವಿಜೇತೆ
ಫಿಲ್ಮ್‌ಫೇರ್ ಅವಾರ್ಡ್‌ನ ಅತ್ಯುತ್ತಮ ಮಲಯಾಳಂ ನಟಿ ಪ್ರಶಸ್ತಿ ವಿಜೇತೆ
ಏಷಿಯಾನೆಟ್ ಉತ್ತಮ ನಟಿ ಪ್ರಶಸ್ತಿ ,ವಿಜೇತೆ
2008ಕಲ್ಕತ್ತಾ ನ್ಯೂಸ್ಕೃಷ್ಣ ಪ್ರಿಯಮಲಯಾಳಂಉತ್ತಮ ಮಲಯಾಳಂ ನಟಿ ಫಿಲ್ಮ್ ಫೇರ್ ಪ್ರಶಸ್ತಿಗೆ ಈಕೆಯ ಹೆಸರು ನಾಮನಿರ್ದೇಶನಗೊಂಡಿತ್ತು
ಇನ್ನತೆ ಚಿಂತಾ ವಿಷಯಂಕಮಲಾಮಲಯಾಳಂ
ನೇಪಾಳಿಪ್ರಿಯಾತಮಿಳು
ಮಿನ್ನಮಿನ್ನಿಕೂತ್ತಂಚಾರುಲತಾಮಲಯಾಳಂ
ರಾತ್ರಿ ಮಝಾಮೀರಾಮಲಯಾಳಂ
ಗೊರಿನ್ತಕು ಲಕ್ಷ್ಮಿತೆಲುಗು
ಮಾ ಅಯನ ಚಂತಿ ಪಿಲ್ಲಡು ರಾಜೇಶ್ವರಿತೆಲುಗು
2009ಮರಿಯಧೈ ಚಂದ್ರತಮಿಳು
ಬಂಗಾರು ಬಾಬು ಮೀರಾತೆಲುಗು
ಅ ಆ ಇ ಈ ಕಲ್ಯಾಣಿ ಚಂದ್ರಂತೆಲುಗು
ದೇವರು ಕೊಟ್ಟ ತಂಗಿ ಲಕ್ಷ್ಮಿಕನ್ನಡ
ಆಕಾಶ ರಾಮಣ್ಣ ತೆಲುಗುಚಿತ್ರೀಕರಣ
ಸಿವಪ್ಪು ಮಲೈ ತಮಿಳುಚಿತ್ರೀಕರಣ
ಅಧಿ ನಾರಾಯಣ ತಮಿಳುಚಿತ್ರೀಕರಣ
2010ಪೆನ್ ಸಿಂಗಂ ತಮಿಳುಚಿತ್ರೀಕರಣ
ಮಲೈಯೂರ್ ಮೊಂಬತ್ತಿಯಾನ್ತಮಿಳುಚಿತ್ರೀಕರಣ
ಪಾತ್ತಿಂತೆ ಪಲಝಿಮಲಯಾಳಂಚಿತ್ರೀಕರಣ
ಮೋಕ್ಷತೆಲುಗುಚಿತ್ರೀಕರಣ
ಇಜ್ಜೋಡುಚೀನಿಕನ್ನಡತಡವಾಗಿದೆ

ಆಕರಗಳು

ಹೊರಗಿನ ಕೊಂಡಿಗಳು

Awards
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
ಪೂರ್ವಾಧಿಕಾರಿ
Konkona Sen Sharma
for Mr. and Mrs. Iyer
Best Actress
for Paadam Onnu: Oru Vilapam

2004
ಉತ್ತರಾಧಿಕಾರಿ
Tara
for Hasina

123