ಮೂತ್ರಿ

ಮೂತ್ರಿಯು ಕೇವಲ ಮೂತ್ರ ವಿಸರ್ಜನೆಗಾಗಿ ಇರುವ ಸ್ವಚ್ಛವಾದ ಕೊಳಾಯಿ ನೆಲೆವಸ್ತು. ಪಾಶ್ಚಾತ್ಯ ದೇಶಗಳಲ್ಲಿನ ಸಾರ್ವಜನಿಕ ಶೌಚಾಲಯಗಳಲ್ಲಿ ಪುರುಷ ಬಳಕೆದಾರರಿಗಾಗಿ ಹಲವುವೇಳೆ ಮೂತ್ರಿಗಳನ್ನು ಒದಗಿಸಲಾಗುತ್ತದೆ (ಮುಸ್ಲಿಮ್ ದೇಶಗಳಲ್ಲಿ ಕಡಿಮೆ). ಇವುಗಳನ್ನು ಸಾಮಾನ್ಯವಾಗಿ ನಿಂತಿರುವ ಸ್ಥಿತಿಯಲ್ಲಿ ಬಳಸಲಾಗುತ್ತದೆ. ಮೂತ್ರಿಗಳು ಕೈಬಳಕೆಯ ಫ಼್ಲಶ್, ಸ್ವಯಂಚಾಲಿತ ಫ಼್ಲಶ್, ಅಥವಾ ಫ಼್ಲಶ್ ಇಲ್ಲದೇ (ಜಲರಹಿತ ಮೂತ್ರಿಗಳಿರುವ ಸಂದರ್ಭಗಳಲ್ಲಿ) ಇರಬಹುದು. ಇವುಗಳನ್ನು (ವಿವಿಕ್ತತಾ ಗೋಡೆಗಳು ಇರುವ ಅಥವಾ ಇಲ್ಲದಿರುವ) ಏಕ ನೈರ್ಮಲ್ಯ ನೆಲೆವಸ್ತುಗಳಾಗಿ ಅಥವಾ ವಿವಿಕ್ತತಾ ಗೋಡೆಗಳಿರದ ತೊಟ್ಟಿ ವಿನ್ಯಾಸದಲ್ಲಿ ವ್ಯವಸ್ಥೆ ಮಾಡಿರಬಹುದು. ಮಹಿಳೆಯರಿಗಾಗಿ ವಿನ್ಯಾಸ ಮಾಡಲಾದ ಮೂತ್ರಿಗಳು ಕೂಡ ಅಸ್ತಿತ್ವದಲ್ಲಿವೆ ಆದರೆ ಅಪರೂಪವಾಗಿವೆ. ಮಹಿಳೆಯರು ಮಹಿಳಾ ಮೂತ್ರವಿಸರ್ಜನಾ ಸಾಧನ ಇರುವ ಪುರುಷ ಮೂತ್ರಿಗಳನ್ನು ಬಳಸುವುದು ಸಾಧ್ಯವಿದೆ.[೧]

ಒಂದು ಸಾಲಿನಲ್ಲಿ ವಿಭಜನೆಗಳಿಲ್ಲದ ಸಂವೇದಕ ನಿರ್ವಹಿತ ಮೂತ್ರಿಗಳ ಸಾಮಾನ್ಯ ವ್ಯವಸ್ಥೆ

ಉಲ್ಲೇಖಗಳು