ರವೀಂದ್ರ ಭುಸರಿ

ರವೀಂದ್ರ ಯಶವಂತರಾವ್ ಭೂಸಾರಿ ಇವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಹಾರಾಷ್ಟ್ರ ರಾಜ್ಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) [೧] ಆಗಿದ್ದರು. [೨] [೩] ಇವರು ಪಶ್ಚಿಮ ಪ್ರಂತ್ಯದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ (ಪೂರ್ಣವದಿ ಪ್ರಚಾರಕರು) ಮತ್ತು ಅದರ ರಾಷ್ಟ್ರೀಯ ಕಾರ್ಯಕಾರಿಣಿಯ ಮಾಜಿ ಸದಸ್ಯರಾಗಿದ್ದರು.

ರವೀಂದ್ರ ಭೂಸಾರಿ
ವೈಯಕ್ತಿಕ ವಿವರಗಳುಜನನ( 1957-06-17 ) ೧೭ ಜೂನ್ ೧೯೫೭

(ವಯಸ್ಸ ೬೬ು)ಬ್ರಹ್ಮಪುರಿ, ಮಹಾರಾಷ್ಟ್ರ, ಭಾರತ

ರಾಜಕೀಯ ಪಕ್ಷಭಾರತೀಯ ಜನತಾ ಪಕ್ಷ
ಉದ್ಯೋಗಪ್ರಧಾನ ಕಾರ್ಯದರ್ಶಿ (ಸಂಘಟನೆ) - ಮಹಾರಾಷ್ಟ್ರ ರಾಜ್ಯ ಬಿಜೆಪಿ
ಜಾಲತಾಣwww.mahabjp.org

ಆರಂಭಿಕ ಜೀವನ

ಮಹಾರಾಷ್ಟ್ರದ ಬ್ರಹ್ಮಪುರಿ ಜಿಲ್ಲೆಯ ಭೂಸಾರಿ ಕುಟುಂಬದಲ್ಲಿ ೧೭ ಜೂನ್ ೧೯೫೭ ರಂದು ಜನಿಸಿದರು. ಅಜ್ಜ ದಿವಂಗತ ವಕೀಲ ಭಾಸ್ಕರರಾವ್ ಭೂಸಾರಿ ಅವರು ತಾಲ್ಲೂಕು ಸಂಘಚಾಲಕರಾಗಿದ್ದರು. ಕು. ಸುಮನ್ ಚಾವ್ಜಿ ಮತ್ತು ಶೇ.ಯಶವಂತ ಭೂಸಾರಿ ಯವರ ೩ ನೇ ಮಗನಾಗಿ ಜನಿಸಿದರು. ರವೀಂದ್ರ ಭೂಸಾರಿಗೆ ಒಬ್ಬ ಹಿರಿಯ ಸಹೋದರ ರಾಮ್, ಹಿರಿಯ ಸಹೋದರಿ ರೇಖಾ, ತಂಗಿ ರಂಜಾ ಮತ್ತು ಕಿರಿಯ ಸಹೋದರಿ ಮಾಧುರಿ ಇದ್ದಾರೆ. ಇವರು ಬಾಲ್ಯದಿಂದಲೂ ಸಂಘದ ಸ್ವಯಂ ಸೇವಕರಾಗಿದ್ದರು. ಅವರು ಆರ್‌ಎಸ್‌ಎಸ್‌ ನ ಬುದ್ಧಿಜೀವಿಗಳಲ್ಲಿ ಒಬ್ಬರು ಎಂದು ಗುರುತಿಸಿಕೂಂಡಿದ್ದಾರೆ. ಇವರದು ರೈತಾಪಿ ಮನೆತನ, ವಾಸಾ ಗ್ರಾಮ, ಗಡ್ಚಿರೋಲಿಯಲ್ಲಿ ನೆಲೆಸಿದ್ದರು. ಇವರು ಭಾರತದ ರಾಷ್ಟ್ರಸಂತ್ ತುಕಾಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಶಿಕ್ಷಣ ಮತ್ತು ಆರಂಭಿಕ ವೃತ್ತಿಜೀವನ

ಭೂಸಾರಿ ಕುಟುಂಬವು ತನ್ನ ಮೂವರು ಸಹೋದರಿಯರ ಶಿಕ್ಷಣಕ್ಕಾಗಿ ನಾಗಪುರಕ್ಕೆ ಸ್ಥಳಾಂತರಗೊಂಡಿತು. ನಾಗಪುರದ ಧರಂಪೇತ್ ಹೈಸ್ಕೂಲ್‌ನಲ್ಲಿ ವಿದ್ಯಾರ್ಥಿಯಾಗಿದ್ದಾಗ, ಭೂಸಾರಿ ಕ್ರಿಕೆಟ್, ಕಬಡ್ಡಿ, ಖೋ-ಖೋ, ಫುಟ್‌ಬಾಲ್ ಮತ್ತು ಹಾಕಿಯಲ್ಲಿ ತಮ್ಮ ಶಾಲೆಯನ್ನು ಪ್ರತಿನಿಧಿಸಿದರು. ೧೯೭೬-೭೭ರಲ್ಲಿ ಅವರು ಧರಂಪೇತ್ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಚುನಾವಣೆಯಲ್ಲಿ ಸ್ಪರ್ಧಿಸಿದರು ಭಾರಿ ಅಂತರದಿಂದ ಗೆದ್ದರು. ಅವರು ರಾಷ್ಟ್ರಸಂತ್ ತುಕಾಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾಲಯ ದಿಂದ ವಾಣಿಜ್ಯ ಪದವಿಯನ್ನು ಪಡೆದರು. ಕಾಲೇಜು ತಂಡದ ಕ್ರಿಕೆಟ್ ತಂಡದ ನಾಯಕರೂ ಆಗಿದ್ದರು. ಎಂ.ಕಾಂ ಪದವಿ ಪರೀಕ್ಷೆಯಲ್ಲಿ ಕಾಲೇಜಿನಲ್ಲಿ ಅಗ್ರಸ್ತಾನ ಪಡೆದರು. ೧೯೭೮-೭೯ರಲ್ಲಿ ಅವರು ತಮ್ಮ ಕಾಲೇಜು ನಿಯತಕಾಲಿಕದ ಸಂಪಾದಕರ ತಂಡದ ಭಾಗವಾಗಿದ್ದರು. ೧೯೭೯-೮೧ರಲ್ಲಿ ಧರಂಪೇತ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಮುಂಬೈನಲ್ಲಿ ಜುಲೈ ೨೩ ರಂದು ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭೂಸಾರಿ ಅವರನ್ನು ಪ್ರದೇಶ ಸಂಘಟನಾ ಕಾರ್ಯದರ್ಶಿಯಾಗಿ ಔಪಚಾರಿಕವಾಗಿ ಘೋಷಿಸಲಾಯಿತು. [೪]

ಆರ್‌ಎಸ್‌ಎಸ್‌ ಜೊತೆಗಿನ ಒಡನಾಟ

ದಿವಂಗತ ವಿಲಾಸ್ ಫಡ್ನವಿಸ್ ರವರ ಜೊತೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಒಡನಾಟವು ಬಾಲ್ಯದಿಂದಲೇ ಶುರುವಾಯಿತು. ಪ್ರೊಫೆಸರ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಅವರು ೧೯೮೧ ರಲ್ಲಿ ಆರ್‌ಎಸ್‌ಎಸ್‌ನ ಪ್ರಚಾರಕರ (ಪೂರ್ಣವದಿ ಕಾರ್ಯಕರ್ತ) ಆಗಿದರು. ಭೂಸಾರಿ ಅವರನ್ನು ವಿದರ್ಭ ಪ್ರದೇಶ, ಪಶ್ಚಿಮ ಭಾರತ ಪ್ರದೇಶಗಳಾದ ಮಹಾರಾಷ್ಟ್ರ, ಗುಜರಾತ್, ಗೋವಾ ಮತ್ತು ಕಳೆದ ಕೆಲವು ಕಾಲ ನಾಗಪುರದ ಆರ್‌ಎಸ್‌ಎಸ್ ಪ್ರಧಾನ ಕಚೇರಿಯ ಕಚೇರಿಯ ಕಾರ್ಯದರ್ಶಿಯಾಗಿ ಹಲವಾರು ಪ್ರಮುಖ ಹುದ್ದೆಗಳಿನ್ನು ಅಲಂಕರಿಸಿದರು . ಅವರು ವಿದರ್ಭದ ಅಕೋಲಾ ಪ್ರದೇಶದಲ್ಲಿಯೂ ಅಲ್ಪ ಕಾಲ ಕೆಲಸ ಮಾಡಿದರು[೫]. ೧೯೯೩ ರಲ್ಲಿ ಅವರು ಅಕೋಲಾ ನಗರದಲ್ಲಿ ದೀಪಾವಳಿ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ೧೯೮ ರಲ್ಲಿ ಅವರು ೩೫,೦೦೦ ಸಾವಿರ ಆರ್ ಎಸ್ಎಸ್ ಸ್ವಯಂಸೇವಕರ ವಿಧರ್ಬ ಪ್ರದೇಶದ "ಮಹಾಶಿಬಿರ್" ನ ಪ್ರಮುಖ ಸಂಘಟಕರಲ್ಲಿ ಒಬ್ಬರಾಗಿದ್ದರು[೬].

ಬಿಜೆಪಿ ಜೊತೆ ಒಡನಾಟ

ಭೂಸಾರಿ ಯವರನ್ನು ೨೦೧೧ ರಲ್ಲಿ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ [೭] ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ನಿತಿನ್ ಗಡ್ಕರಿ ನೇಮಿಸಿದರು[೫] [೮].

ಮಹಾರಾಷ್ಟ್ರ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ರವೀಂದ್ರ ಭೂಸಾರಿ ಅವರು ಐತಿಹಾಸಿಕ ಮೇ ೨೦೧೪ರ ಲೋಕಸಭಾ ಚುನಾವಣೆ ನಂತರ ಅಕ್ಟೋಬರ್ ನಲ್ಲಿ ೨೦೧೪ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪ್ರಚಾರವನ್ನು ಮುನ್ನಡೆಸಿದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು. ಈ ಎರಡೂ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು.

೨೦೧೫ರಲ್ಲಿ, ಭೂಸಾರಿ ಅವರು "ನಾಗಪುರ ಹೀರೋಸ್" ಪ್ರಶಸ್ತಿಗೆ ಭಾಜನರಾದರು. ಮುಂದಿನ ವರ್ಷದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಯಿದೆಯನ್ನು ಉಲ್ಲಂಘಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದರು. [೯]

ಉಲ್ಲೇಖಗಳು