ಶಿವರಾಜ್‍ಕುಮಾರ್ (ನಟ)

ಭಾರತೀಯ ಚಲನಚಿತ್ರ ನಟ
(ಶಿವರಾಜ್ ಕುಮಾರ್ ಇಂದ ಪುನರ್ನಿರ್ದೇಶಿತ)

ಡಾ. ಶಿವರಾಜ್‍ಕುಮಾರ್ ಕನ್ನಡದ ಚಿತ್ರನಟ. ಡಾ. ರಾಜ್‍ಕುಮಾರ್‍ಅವರ ಹಿರಿಯಪುತ್ರ. ಶಿವಣ್ಣ ಎಂದೇ ಹೆಸರಾದ ಶಿವರಾಜ್‍ಕುಮಾರ್, ನಟಿಸಿದ ಮೊದಲ ಮೂರೂ ಚಿತ್ರಗಳು ೧೦೦ ದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಬಿರುದು ಪಡೆದ ಹಿರಿಮೆ ಇವರದ್ದು.

ಡಾ. ಶಿವರಾಜ್‍ ಕುಮಾರ್
ಜನನ
ಶಿವು ಪುಟ್ಟ ಸ್ವಾಮಿ

೧೯೬೨-೦೭-೧೨
ಇತರೆ ಹೆಸರುಪುಟ್ಟಸ್ವಾಮಿ,ಶಿವಣ್ಣ
ವೃತ್ತಿ(ಗಳು)ನಟ, ಹಿನ್ನಲೆ ಗಾಯಕ , ನೃತ್ಯಗಾರ
Years active೧೯೮೬ —ಪ್ರಸಕ್ತ
Titleಡಾಕ್ಟರೇಟ್ ಪದವಿ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ[೧], ಶಿವಣ್ಣ , ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್,ಎಸ್ ಆರ್‌ ಕೆ, ನಾಟ್ಯ ಸಾರ್ವಭೌಮ,
ಸಂಗಾತಿಗೀತಾ ಶಿವರಾಜ್‍ಕುಮಾರ್
ಮಕ್ಕಳುನಿವೇದಿತಾ,ನಿರುಪಮಾ
ಪೋಷಕ(ರು)ಡಾ.ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್

ಜನನ

ಶಿವರಾಜ್‍ಕುಮಾರ್ ೧೯೬೨ರ ಜುಲೈನಲ್ಲಿ ಮದ್ರಾಸ್ ನಗರದಲ್ಲಿ ಡಾ. ರಾಜ್‍ಕುಮಾರ್ ಮತ್ತು ಪಾರ್ವತಮ್ಮ ದಂಪತಿಗಳಿಗೆ ಜನಿಸಿದರು. ಡಾ. ರಾಜ್‍ಕುಮಾರ್ ಮಗನಿಗೆ ಶಿವಪುಟ್ಟಸ್ವಾಮಿ ಎಂದು ತಮ್ಮ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಙ್ನಾಪಕಾರ್ಥವಾಗಿ ಅವರ ಹೆಸರನ್ನೇ ಮಗನಿಗೆ ಇಟ್ಟರು. ಬಾಲ್ಯದಿಂದಲೇ ಶಿಸ್ತು ಮತ್ತು ಸಂಯಮಗಳನ್ನು ರೂಢಿಸಿಕೊಂಡ ಶಿವರಾಜ್‍ಕುಮಾರ್, ಕ್ರೀಡಾಚಟುವಟಿಕೆಗಳಲ್ಲಿ ಹೆಸರು ಮಾಡಿದರು.

ಚಿತ್ರರಂಗ

ಮುಂಬೈನಲ್ಲಿ ಅಭಿನಯದ ತರಬೇತಿ ಪಡೆದ ಶಿವರಾಜ್‍ಕುಮಾರ್, ೧೯೮೬ನೇ ಇಸವಿಯಲ್ಲಿ ಆನಂದ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಚಿ. ಉದಯಶಂಕರ್ ಪುತ್ರ ಚಿ. ಗುರುದತ್, ನಟಿ ಸುಧಾರಾಣಿ ಇವರಿಬ್ಬರ ಮೊದಲ ಚಿತ್ರವೂ ಆನಂದ್ ಆಗಿತ್ತು. ತನ್ನನ್ನೂ ಮತ್ತು ತನ್ನ ತಾಯಿಯನ್ನು ನಡುಬೀದಿಯಲ್ಲಿ ಬಿಟ್ಟ ತನ್ನ ತಂದೆಗೆ ಬುದ್ದಿ ಕಲಿಸುವ ವಿದ್ಯಾರ್ಥಿಯ ಪಾತ್ರದಲ್ಲಿ ಶಿವರಾಜ್‍ಕುಮಾರ್ ನಟನೆಗೆ ಪ್ರಶಂಸೆ ಪಡೆದರು.ಮುಂದಿನ ಎರಡೂ ಚಿತ್ರಗಳು (ರಥಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ) ಶತದಿನ ಪ್ರದರ್ಶನ ಕಂಡವು..
ಅಭಿನಯದ ಮೊದಲ ಮೂರೂ ಚಿತ್ರಗಳೂ ಶತದಿನೋತ್ಸವದ ಯಶಸ್ಸು ಪಡೆದದ್ದರಿಂದ 'ಹ್ಯಾಟ್ರಿಕ್ ಹೀರೋ' ಎಂಬ ಬಿರುದಿಗೆ ಪಾತ್ರರಾದರು. ರಣರಂಗ ಚಿತ್ರ ಕೂಡಾ ಶತದಿನ ಪ್ರದರ್ಶನ ಕಂಡಿತು.೧೯೯೨ರಿಂದ ೧೯೯೫ರ ಅವಧಿಯಲ್ಲಿ ಶಿವರಾಜ್‍ಕುಮಾರ್ ಅಭಿನಯದ ಚಿತ್ರಗಳು ಸತತವಾಗಿ ಸೋಲು ಕಂಡವು. ೧೯೯೪ರಲ್ಲಿ ಉಪೇಂದ್ರ ನಿರ್ದೇಶನದ ಓಂ ಚಿತ್ರ ಶಿವರಾಜ್‍ಕುಮಾರ್ ರಿಗೆ ಭಿನ್ನ ಇಮೇಜ್ ನೀಡಿತು. ಭೂಗತ ಪಾತಕಿ ಸ್ಟೇಷನ್ ಸತ್ಯ ಬದುಕನ್ನು ಆಧರಿಸಿದ ಆ ಚಿತ್ರ ಜನಮನ್ನಣೆ, ಯಶಸ್ಸು ಮತ್ತು ಕೀರ್ತಿ ತಂದಿತು. ೧೯೯೫ರಲ್ಲಿ ಜನುಮದ ಜೋಡಿ ಮತ್ತು ನಮ್ಮೂರ ಮಂದಾರ ಹೂವೆ ಚಿತ್ರಗಳ ಅಭೂತಪೂರ್ವ ಯಶಸ್ಸು ಹಿವರಾಜ್‍ಕುಮಾರ್ ರಿಗೆ ಅಗ್ರ ಸ್ಥಾನದತ್ತ ತಂದೊಯ್ದಿತು. ಆ ರೀತಿಯ ಗೆಲುವನ್ನು ಕಾಣಲು, ೧೯೯೯ರಲ್ಲಿ ತೆರೆಕಂಡ ಎಕೆ ೪೭ ಚಿತ್ರದವರೆಗೆ ಶಿವರಾಜ್‍ಕುಮಾರ್ ಕಾಯಬೇಕಾಯಿತು. ತಮ್ಮ ಸಜ್ಜನಿಕೆ, ಸರಳತೆ ಮತ್ತು ತಾದಾತ್ಮ್ಯತೆಯಿಂದ ಶಿವರಾಜ್‍ಕುಮಾರ್ ನಿರ್ಮಾಪಕರುಗಳಿಗೆ ಮಿನಿಮಂ ಗ್ಯಾರಂಟಿ ಹೀರೋ ಆದರು. ರೊಮಾಂಟಿಕ್ ಪಾತ್ರಗಳ ರಮೇಶ್, ಭಿನ್ನತೆಯ ಉಪೇಂದ್ರ, ಆವೇಶಭರಿತ ಪೋಲೀಸ್ ಪಾತ್ರಗಳ ಸಾಯಿಕುಮಾರ್ ಹೀಗೆ ಹಲವು ನಟರುಗಳ ನಡುವೆಯೂ ಶಿವರಾಜ್‍ಕುಮಾರ್, ತಮ್ಮ ಸ್ಥಾನವನ್ನು ಕಾಯ್ದುಕೊಂಡಿದ್ದರು. ಇಮೇಜ್ ನ ಹಂಗು ಇಲ್ಲದೆ, ವಿಭಿನ್ನ ಪಾತ್ರಗಳನ್ನು ನಿರ್ವಹಿಸಲು ಸದಾ ಮುಂದಾಗುಗಿತ್ತಿದ್ದ ಶಿವರಾಜ್, ಅದೇ ಕಾರಣಕ್ಕೆ ಬರಗೂರು ರಾಮಚಂದ್ರಪ್ಪನವರ ಹಗಲುವೇಷ, ಪ್ರೇಂರ ಜೋಗಿ, ಹೀಗೆ ಹಲವು ಹೊಸ ನಿರ್ದೇಶಕರ ಮೊದಲ ಆಯ್ಕೆಯಾಗಿ ಉಳಿದರು. ರವಿಚಂದ್ರನ್, ರಮೇಶ್ ಮತ್ತು ಉಪೇಂದ್ರ ಶಿವರಾಜ್ ರ ನೆಚ್ಚಿನ ಗೆಳೆಯರು.

ಗಾಯನ

ಇವರು ಆಸೆಗೊಬ್ಬ ಮೀಸೆಗೊಬ್ಬ, ಮೋಡದ ಮರೆಯಲ್ಲಿ, ಅಂಡಮಾನ್, ಸಾರ್ವಭೌಮ ಅಭಯಹಸ್ತ ಹಲವಾರು ಚಿತ್ರಗಳಲ್ಲಿ ಹಿನ್ನೆಲೆಗಾಯನ ಕೂಡ ಮಾಡಿದ್ದಾರೆ.ಇವರ ಪುತ್ರಿಯ ಹೆಸರು ನಿವೇದಿತಾ. ಈಕೆ, ಅಂಡಮಾನ್ ಚಿತ್ರದಲ್ಲಿ ನಟಿಸಿದ್ದಾಳೆ.

ಪ್ರಶಸ್ತಿಗಳು

ರಾಜ್ಯ ಪ್ರಶಸ್ತಿಗಳು

  • ಓಂ- ೧೯೯೫ - ಅತ್ಯುತ್ತಮ ನಟ ರಾಜ್ಯಪ್ರಶಸ್ತಿ
  • ಹೃದಯ ಹೃದಯ - ೧೯೯೯ - ಅತ್ಯುತ್ತಮ ನಟ ರಾಜ್ಯಪ್ರಶಸ್ತಿ
  • ಚಿಗುರಿದ ಕನಸು - ೨೦೦೩ - ಅತ್ಯುತ್ತಮ ನಟ ರಾಜ್ಯಪ್ರಶಸ್ತಿ
  • ಜೋಗಿ - ೨೦೦೬ - ಅತ್ಯುತ್ತಮ ನಟ ರಾಜ್ಯಪ್ರಶಸ್ತಿ

ಉಜ್ವಲ ಪ್ರಶಸ್ತಿ

  • ಆನಂದ್ - ೧೯೮೬
  • ಭೂಮಿತಾಯಿಯ ಚೊಚ್ಚಲ ಮಗ - ೧೯೯೮

ಚಿತ್ರ ರಸಿಕರ ಸಂಘ ಪ್ರಶಸ್ತಿ

  • ಮಿಡಿದ ಶ್ರುತಿ - ೧೯೯೨
  • ಜನುಮದ ಜೋಡಿ - ೧೯೯೬
  • ಎ.ಕೆ.೪೭ - ೧೯೯೯

ಫಿಲಮ್‍ಫೇರ್ ಪ್ರಶಸ್ತಿ

ಹೀರೋಹೋಂಡ ಎಕ್ಸ್ಪ್ರೆಸ್ ಪ್ರಶಸ್ತಿ

  • ಓಂ - ೧೯೯೫
  • ಜನುಮದ ಜೋಡಿ - ೧೯೯೬
  • ಎ.ಕೆ.೪೭ - ೧೯೯೯

ಆರ್ಯಭಟ ಪ್ರಶಸ್ತಿ

ಸ್ಕ್ರೀನ್ ಅವಾರ್ಡ್ಸ್

  • ನಮ್ಮೂರ ಮಂದಾರ ಹೂವೆ - ೧೯೯೬

ಎಸ್.ಐ.ಸಿ.ಎ. ವಿಶೇಷ ಜ್ಯೂರಿ ಪ್ರಶಸ್ತಿ

  • ತವರಿಗೆ ಬಾ ತಂಗಿ - ೨೦೦೨
  • ಚಿಗುರಿದ ಕನಸು - ೨೦೦೪

ಹಲೋ ಗಾಂಧಿನಗರ ಪ್ರಶಸ್ತಿ

  • ಚಿಗುರಿದ ಕನಸು - ೨೦೦೪

ಈ ಟಿವಿ ವಾಟಿಕಾ ಪ್ರಸಸ್ತಿ

  • ಜೋಗಿ - ೨೦೦೫

ಮೈಲಿಗಲ್ಲುಗಳು

  • ೧ನೇ ಚಿತ್ರ: ಆನಂದ್ (೧೯೮೬)
  • ೨೫ನೇ ಚಿತ್ರ: ಮನಮಿಡಿಯಿತು (೧೯೯೫)
  • ೫೦ನೇ ಚಿತ್ರ: ಏ.ಕೆ. ೪೭ (೧೯೯೯)
  • ೭೫ನೇ ಚಿತ್ರ: ಶ್ರೀರಾಮ್ (೨೦೦೩)
  • ೧೦೦ನೇ ಚಿತ್ರ: ಜೋಗಯ್ಯ (೨೦೧೧)

ಅಭಿನಯಿಸಿದ ಚಲನಚಿತ್ರಗಳು

ಈ ಹೃದಯ ನಿನಗಾಗಿ ಚಿತ್ರದಲ್ಲಿ ಒಂದು ಹಾಡಿನಲ್ಲಿ ನಟಿಸಿದ್ದಾರೆ


ಸಂಖ್ಯೆವರ್ಷಚಿತ್ರದ ಹೆಸರುಪಾತ್ರಚಿತ್ರ ನಿರ್ಮಾಣ ಸಂಸ್ಥೆನಿರ್ದೇಶನನಿರ್ಮಾಪಕರುಸಂಗೀತಛಾಯಗ್ರಹಣ
11986ಆನಂದ್ಆನಂದ್ದಾಕ್ಷಾಯಿಣಿ ಕಂಬೈನ್ಸ್ಸಿಂಗೀತಂ ಶ್ರೀನಿವಾಸರಾವ್ಪಾರ್ವತಮ್ಮ ರಾಜಕುಮಾರ್ಶಂಕರ್-ಗಣೇಶ್ಬಿ.ಸಿ.ಗೌರಿಶಂಕರ್
21986ರಥ ಸಪ್ತಮಿಭಗವತಿ ಕಂಬೈನ್ಸ್ಎಂ.ಎಸ್.ರಾಜಶೇಖರ್ಎಸ್.ಎ.ಗೋವಿಂದರಾಜ್ಉಪೇಂದ್ರಕುಮಾರ್ವಿ.ಕೆ.ಕಣ್ಣನ್
31987ಮನ ಮೆಚ್ಚಿದ ಹುಡುಗಿಕ್ಯಾತ್ಯಾಯಿಣಿ ಆರ್ಟ್ ಕಂಬೈನ್ಸ್ಎಂ.ಎಸ್.ರಾಜಶೇಖರ್ಎಸ್.ಎ.ಚಿನ್ನೇಗೌಡಉಪೇಂದ್ರಕುಮಾರ್ಬಿ.ಸಿ.ಗೌರಿಶಂಕರ್
41988ಶಿವ ಮೆಚ್ಚಿದ ಕಣ್ಣಪ್ಪಕಣ್ಣಪ್ಪಭಗವತಿ ಕಂಬೈನ್ಸ್ವಿಜಯ್ಎಸ್.ಎ.ಗೋವಿಂದರಾಜ್ಟಿ.ಜಿ.ಲಿಂಗಪ್ಪ
51988ಸಂಯುಕ್ತನಿರುಪಮ ಆರ್ಟ್ ಕಂಬೈನ್ಸ್ಕೆ.ಎನ್.ಚಂದ್ರಶೇಖರ್ ಶರ್ಮಎಸ್.ಎ.ಗೋವಿಂದರಾಜ್ಸಿಂಗೀತಂ ಶ್ರೀನಿವಾಸರಾವ್ವಿ.ಕೆ.ಕಣ್ಣನ್
61988ರಣರಂಗವೈಷ್ಣವಿ ಮೂವೀಸ್ವಿ.ಸೋಮಶೇಖರ್ವೈಷ್ಣವಿ ಮೂವೀಸ್ಹಂಸಲೇಖಹೆಚ್.ಜಿ.ರಾಜು
71989ಇನ್‌ಸ್ಪೆಕ್ಟರ್ ವಿಕ್ರಂಇನ್ಸ್ಪೆಕ್ಟರ್ ವಿಕ್ರಂನಿಖಿಲೇಶ್ವರಿ ಸಿನಿ ಕಂಬೈನ್ಸ್ದಿನೇಶ್ ಬಾಬುರಾಘವೇಂದ್ರವಿಜಯಾನಂದ್ದಿನೇಶ್ ಬಾಬು
81989ಅದೇ ರಾಗ ಅದೇ ಹಾಡುಭಗವತಿ ಕಂಬೈನ್ಸ್ಎಂ.ಎಸ್.ರಾಜಶೇಖರ್ಎಸ್.ಎ.ಗೋವಿಂದರಾಜ್ಶಂಕರ್-ಗಣೇಶ್ಬಿ.ಸಿ.ಗೌರಿಶಂಕರ್
91990ಆಸೆಗೊಬ್ಬ ಮೀಸೆಗೊಬ್ಬದಶರಥಪ್ರಸಾದ್ ರಾಮಪ್ರಸಾದ್ / ಲಕ್ಷ್ಮಣಪ್ರಸಾದ್ ಶರ್ಮಾಪೂರ್ಣಿಮ ಎಂಟರ್‌ಪ್ರೈಸಸ್ಎಂ.ಎಸ್.ರಾಜಶೇಖರ್ಪಾರ್ವತಮ್ಮ ರಾಜಕುಮಾರ್ಉಪೇಂದ್ರಕುಮಾರ್ಬಿ.ಸಿ.ಗೌರಿಶಂಕರ್
101990ಮೃತ್ಯಂಜಯನಿಖಿಲೇಶ್ವರಿ ಸಿನಿ ಕಂಬೈನ್ಸ್ದತ್ತರಾಜ್ರಾಘವೇಂದ್ರಉಪೇಂದ್ರಕುಮಾರ್ವಿ.ಕೆ.ಕಣ್ಣನ್
111991ಅರಳಿದ ಹೂವುಗಳುದಾಕ್ಷಾಯಿಣಿ ಸಿನಿ ಕಂಬೈನ್ಸ್ಚಿ.ದತ್ತರಾಜ್ಪಾರ್ವತಮ್ಮ ರಾಜಕುಮಾರ್ಉಪೇಂದ್ರಕುಮಾರ್ವಿ.ಕೆ.ಕಣ್ಣನ್
121991ಮೋಡದ ಮರೆಯಲ್ಲಿಶ್ರೀ ವೈಷ್ಣವಿ ಮೂವೀಸ್ಎಂ.ಎಸ್.ರಾಜಶೇಖರ್ಪಾರ್ವತಮ್ಮ ರಾಜಕುಮಾರ್ರಾಜನ್-ನಾಗೇಂದ್ರಕೆ.ಕಣ್ಣನ್
131992ಮಿಡಿದ ಶೃತಿನಿರುಪಮ ಆರ್ಟ್ಸ್ಎಂ.ಎಸ್.ರಾಜಶೇಖರ್ಎಸ್.ಎ.ಗೋವಿಂದರಾಜ್ಉಪೇಂದ್ರಕುಮಾರ್ವಿ.ಕೆ.ಕಣ್ಣನ್
141992ಪುರುಷೋತ್ತಮಶ್ರೀ ರೇಣುಕಾಂಬ ಕಂಬೈನ್ಸ್ಎಂ.ಎಸ್.ರಾಜಶೇಖರ್ಮಧುಬಂಗಾರಪ್ಪಹಂಸಲೇಖವಿ.ಕೆ.ಕಣ್ಣನ್
151992ಮಾವನಿಗೆ ತಕ್ಕ ಅಳಿಯಗಣೇಶಶ್ರೀ ಚಕ್ರೇಶ್ವರಿ ಕಂಬೈನ್ಸ್ವಿ.ಗೋವಿಂದರಾಜ್ಪಾರ್ವತಮ್ಮ ರಾಜಕುಮಾರ್ಶಂಕರ್-ಗಣೇಶ್ಶ್ರೀಕಾಂತ್
161993ಜಗ ಮೆಚ್ಚಿದ ಹುಡುಗಚೌಡೇಶ್ವರಿ ಆರ್ಟ್ಸ್ಭಾರ್ಗವಎಸ್.ಎ.ಶ್ರೀನಿವಾಸ್ರಾಜನ್-ನಾಗೇಂದ್ರಡಿ.ವಿ.ರಾಜಾರಾಮ್
171993ಚಿರಬಾಂಧವ್ಯಶಾಶ್ವತಿ ಚಿತ್ರಎಂ.ಎಸ್.ರಾಜಶೇಖರ್ಆರ್.ನಿವೇದಿತಹಂಸಲೇಖಮಲ್ಲಿಕಾರ್ಜುನ್
181993ಆನಂದಜ್ಯೋತಿಶಿವ ಚಿತ್ರಾಲಯಚಿ.ದತ್ತರಾಜ್ರಾಕಲೈನ್ ವೆಂಕಟೇಶ್ವಿಜಯಾನಂದ್ಜೆ.ಜಿ.ಕೃಷ್ಣ
191994ಗಂಧದಗುಡಿ ಭಾಗ-೨ಶಂಕರ್ಭರಣಿ ಚಿತ್ರವಿಜಯ್ಎಂ.ಪಿ.ಶಂಕರ್ರಾಜನ್-ನಾಗೇಂದ್ರಮಲ್ಲಿಕಾರ್ಜುನ್
201994ಮುತ್ತಣ್ಣ • ಮುತ್ತಣ್ಣ
 • ಕಿರಣ್
ಕಾವೇರಿ ಅಮ್ಮ ಫಿಲಂಸ್ಎಂ.ಎಸ್.ರಾಜಶೇಖರ್ಎಲ್.ಸೋಮಣ್ಣಗೌಡಹಂಸಲೇಖಆರ್.ಮಧುಸೂದನ್
211994ಗಂಡುಗಲಿಜ್ಯೋತಿ ಚಿತ್ರಸಿ.ಹೆಚ್.ಬಾಲಾಜಿಸಿಂಗ್ ಬಾಬುಜೆ.ಜಿ.ಕೃಷ್ಣಸಾಧುಕೋಕಿಲಜೆ.ಜಿ.ಕೃಷ್ಣ
221995ಗಡಿಬಿಡಿ ಅಳಿಯಕಲ್ಯಾಣಿ ಎಂಟರ್‌ಪ್ರೈಸಸ್ಸಾಯಿಪ್ರಕಾಶ್ಕೆ.ರಾಘವರಾವ್ಕೋಟಿಜಾನಿಲಾಲ್
231995ಸವ್ಯಸಾಚಿಸಾವಿತ್ರಿ ಚಿತ್ರಎಂ.ಎಸ್.ರಾಜಶೇಖರ್ಶಾಶ್ವತಿ ಚಿತ್ರಸಾಧುಕೋಕಿಲಮಲ್ಲಿಕಾರ್ಜುನ್
241995ಓಂಸತ್ಯಮೂರ್ತಿಪೂರ್ಣಿಮ ಎಂಟರ್‌ಪ್ರೈಸಸ್ಉಪೇಂದ್ರಪಾರ್ವತಮ್ಮ ರಾಜಕುಮಾರ್ಹಂಸಲೇಖಬಿ.ಸಿ.ಗೌರಿಶಂಕರ್
251995ಮನ ಮಿಡಿಯಿತುಶ್ರೀ ವೈಭವಲಕ್ಷ್ಮಿ ಕಂಬೈನ್ಸ್ಎಂ.ಎಸ್.ರಾಜಶೇಖರ್ರಾಣಿ ರಾಜಶೇಖರ್ಉಪೇಂದ್ರಕುಮಾರ್ಮಲ್ಲಿಕಾರ್ಜುನ್
261995ಸಮರಎ.ಎ.ಕಂಬೈನ್ಸ್ಸಿ.ಗುರುದತ್ಪ್ರವೀಣ್ಕೌಸ್ತುಭಆರ್.ಮಧುಸೂದನ್
271995ದೊರೆಶ್ರೀ ನಿಮಿಷಾಂಬ ಪ್ರೊಡಕ್ಷನ್ಸ್ಶಿವಮಣಿಎಂ.ಚಂದ್ರಶೇಖರ್ಹಂಸಲೇಖಕೃಷ್ಣಕುಮಾರ್
281996ಇಬ್ಬರ ನಡುವೆ ಮುದ್ದಿನ ಆಟಎಸ್.ವಿ.ಪ್ರೊಡಕ್ಷನ್ಸ್ರೇಲಂಗಿ ನರಸಿಂಹರಾವ್ಟಿ.ಎಮ್.ವೆಂಕಟಸ್ವಾಮಿಸಾಧುಕೋಕಿಲನಾಗೇಂದ್ರಕುಮಾರ್
291996ಗಾಜನೂರ ಗಂಡುಶ್ರೀ ಲಕ್ಷ್ಮಿ ಸಿನಿ ಪ್ರೊಡಕ್ಷನ್ಸ್ಆನಂದ್ ಪಿ.ರಾಜುಜಿ.ಆರ್.ಕೃಷ್ಣರೆಡ್ಡಿಸಾಧುಕೋಕಿಲಮಲ್ಲಿಕಾರ್ಜುನ್
301996ಶಿವಸೈನ್ಯಶಿವಯಶಿ ಎಂಟರ್‌ಪ್ರೈಸಸ್ಶಿವಮಣಿವೈ.ಎಸ್.ರಮೇಶ್ಇಳಯರಾಜಎ.ವಿ.ಕೃಷ್ಣಕುಮಾರ್
311996ಅಣ್ಣಾವ್ರ ಮಕ್ಕಳುಶಿವ ಶಕ್ತಿ ಪ್ರೊಡಕ್ಷನ್ಸ್ಹೆಚ್.ಎಸ್.ಫಣಿರಾಮಚಂದ್ರವೈ.ಆರ್.ಜೈರಾಜ್ರಾಜೇಶ್ ರಾಮನಾಥ್ಬಿ.ಎಸ್.ಬಸವರಾಜ್
321996ನಮ್ಮೂರ ಮಂದಾರ ಹೂವೆಮನೋಜ್ಚಿನ್ನಿ ಫಿಲಂಸ್ಸುನಿಲ್ ಕುಮಾರ್ ದೇಸಾಯಿಜಯಶ್ರೀದೇವಿಇಳಯರಾಜಸುಂದರನಾಥ್ ಸುವರ್ಣ
331996ಆದಿತ್ಯಕ್ರಿಯೇಟಿವ್ ಮೀಡಿಯಲೋಕಚಂದರ್ಎಂ.ಪಿ.ರವಿ ಕೊಟ್ಟಾರಕರರಾಜೇಶ್ ರಾಮನಾಥ್ವಿಜಯಗೋಪಾಲ್
341996ಜನುಮದ ಜೋಡಿಕೃಷ್ಣಶ್ರೀ ವೈಷ್ಣವಿ ಕಂಬೈನ್ಸ್ಟಿ.ಎಸ್.ನಾಗಾಭರಣಪಾರ್ವತಮ್ಮ ರಾಜಕುಮಾರ್ವಿ.ಮನೋಹರ್ಬಿ.ಸಿ.ಗೌರಿಶಂಕರ್
351997ಈ ಹೃದಯ ನಿನಗಾಗಿರಾಮಾಲಯನ್ ಫಿಲಂಸ್ಮಜ್ಜಿ ಕೃಷ್ಣಪ್ರಸಾದ್ಪಾರಸ್ ಜೈನ್ವಿ.ಮನೋಹರ್ಎಂ.ವಿ.ರಾಮಕೃಷ್ಣ
361997ಗಂಗಾ ಯಮುನಮೇಘ ಪ್ರೊಡಕ್ಷನ್ಸ್ಎಸ್.ಮಹೇಂದರ್ಬಿ.ಪಿ.ತ್ಯಾಗರಾಜ್ವಿದ್ಯಾಸಾಗರ್ರಮೇಶ್ ಬಾಬು
371997ಸಿಂಹದ ಮರಿವಿಶ್ವರಾಮು ಎಂಟರ್‌ಪ್ರೈಸಸ್ಎನ್.ಓಂಪ್ರಕಾಶ್ ರಾವ್ರಾಮುಹಂಸಲೇಖಟಿ.ಜನಾರ್ಧನ್
381997ಅಮ್ಮಾವ್ರ ಗಂಡಅಕ್ಷಯ್ ಎಂಟರ್‌ಪ್ರೈಸಸ್ಹೆಚ್.ಎಸ್.ಫಣಿರಾಮಚಂದ್ರಎಂ.ಕೆ.ಶ್ರೀನಿವಾಸರಾಜ್ಡಿ.ವಿ.ರಾಜಾರಾಮ್
391997ಮುದ್ದಿನ ಕಣ್ಮಣಿಶಿವರಾಮ್ ಹೆಗಡೆಗಣೇಶ ಪಿಚ್ಚರ್ಸ್ರವಿಕೊಟ್ಟಾರಕರ್ಶಾರದಎಸ್.ಪಿ.ವೆಂಕಟೇಶ್ಕೃಷ್ಣಕುಮಾರ್
401997ರಾಜಕಾವೇರಿ ಅಮ್ಮ ಫಿಲಂಸ್ರೇಲಂಗಿ ನರಸಿಂಹರಾವ್ಎಲ್.ಸೋಮಣ್ಣದೇವನಾಗೇಂದ್ರ
411997ಜೋಡಿ ಹಕ್ಕಿಮಾಚ / ಮನೋಜ್ಶ್ರೀ ಗುರು ರಾಘವೇಂದ್ರ ಪ್ರೊಡಕ್ಷನ್ಸ್ಡಿ.ರಾಜೇಂದ್ರಬಾಬುಪಿ.ಧನರಾಜ್ವಿ.ಮನೋಹರ್ರಮೇಶ್ ಬಾಬು
421997ಪ್ರೇಮ ರಾಗ ಹಾಡು ಗೆಳತಿಚಿನ್ನಿ ಫಿಲಂಸ್ಸುನಿಲ್ ಕುಮಾರ್ ದೇಸಾಯಿಜಯಶ್ರೀದೇವಿಇಳಯರಾಜಎ.ವಿ.ಕೃಷ್ಣಕುಮಾರ್
431998ನಮ್ಮೂರ ಹುಡುಗವಿಜಯ ನರಸಿಂಹ ಚಿತ್ರರವೀಂದ್ರನಾಥ್ಅಶೋಕ್ವಿ.ಮನೋಹರ್ಆರ್.ಮಧುಸೂದನ್
441998ಕುರುಬನ ರಾಣಿರಾಕ್‌ಲೈನ್ ಪ್ರೊಡಕ್ಷನ್ಸ್ಡಿ.ರಾಜೇಂದ್ರಬಾಬುರಾಕಲೈನ್ ವೆಂಕಟೇಶ್ವಿ.ಮನೋಹರ್ಅಶೊಕ್ ಕಶ್ಯಪ್
451998ಅಂಡಮಾನ್ಶ್ರೀ ಜ್ವಾಲಾಮಾಲಿನಿ ದೇವಿ ಫಿಲಂಸ್ಪಿ.ಹೆಚ್.ವಿಶ್ವನಾಥ್ಜಿ.ಪದ್ಮಲತಹಂಸಲೇಖಪಿ.ರಾಜನ್
461998ಮಿಸ್ಟರ್ ಪುಟ್ಟಸ್ವಾಮಿಶ್ರೀ ಪುಟ್ಟಣ್ಣ ಪ್ರೊಡಕ್ಷನ್ಸ್ವಿ.ಉಮಾಕಾಂತ್ಶ್ರೀನಿವಾಸ್ವಿ.ಮನೋಹರ್ಪಿ.ಕೆ.ಹೆಚ್.ದಾಸ್
471998ಭೂಮಿ ತಾಯಿಯ ಚೊಚ್ಚಲ ಮಗಕರ್ಣವೈಭವ ಲಕ್ಷ್ಮಿ ಪ್ರೊಡಕ್ಷನ್ಸ್ಎಸ್.ವಿ.ರಾಜೇಂದ್ರಸಿಂಗ್ ಬಾಬುಜೈಜಗದೀಶ್ವಿ.ಮನೋಹರ್ಬಿ.ಸಿ.ಗೌರಿಶಂಕರ್
481998ಗಡಿಬಿಡಿ ಕೃಷ್ಣಚಿನ್ನಿ ಫಿಲಂಸ್ಸಾಯಿಪ್ರಕಾಶ್ಎಸ್.ಆರ್.ಭಾರತಿದೇವಿಹಂಸಲೇಖವಿಜಯಕುಮಾರ್
491999ಜನುಮದಾತಬಾಬ ಪ್ರೊಡಕ್ಷನ್ಸ್ಟಿ.ಎಸ್.ನಾಗಾಭರಣಕೆ.ಮುಸ್ತಫವಿ.ಮನೋಹರ್ಬಿ.ಸಿ.ಗೌರಿಶಂಕರ್
501999ಚಂದ್ರೋದಯಸಂದೇಶ್ ಕಂಬೈನ್ಸ್ಮಹೇಂದರ್ಸತೀಶ್ ಸ್ವಾಮಿಹಂಸಲೇಖಕೃಷ್ಣಕುಮಾರ್
511999ಎ.ಕೆ.೪೭ರಾಮ್ಎನ್.ಓಂ ಪ್ರಕಾಶ್ ರಾವ್ರಾಮುಹಂಸಲೇಖಪಿ.ರಾಜನ್
521999ವಿಶ್ವವಿಶ್ವಧನಲಕ್ಷ್ಮಿ ಕ್ರಿಯೇಷನ್ಸ್ಶಿವಮಣಿಪಿ.ಧನರಾಜ್ಹಂಸಲೇಖರಮೇಶ್ ಬಾಬು
531999ಹೃದಯ ಹೃದಯರವಿವಜ್ರೇಶ್ವರಿ ಎಂಟರ್ ಪ್ರೈಸಸ್ಎಂ.ಎಸ್.ರಾಜಶೇಖರ್ಪಾರ್ವತಮ್ಮ ರಾಜಕುಮಾರ್ಹಂಸಲೇಖಬಿ.ಸಿ.ಗೌರಿಶಂಕರ್
542000ಪ್ರೀತ್ಸೆಸೂರ್ಯರಾಕ್‌ಲೈನ್ ಪ್ರೊಡಕ್ಷನ್ಸ್ಡಿ.ರಾಜೇಂದ್ರಬಾಬುರಾಕಲೈನ್ ವೆಂಕಟೇಶ್ಹಂಸಲೇಖಪಿ.ಕೆ.ಹೆಚ್.ದಾಸ್
552000ಹಗಲುವೇಷಎ ಫಿಲಂಸ್ಜಾನ್ ದೇವರಾಜ್ಬಿ.ಜಗನ್ನಾಥ್ಹಂಸಲೇಖರಾಜನ್
562000ಯಾರೇ ನೀ ಅಭಿಮಾನಿಆದಿತ್ಯಶ್ರೀ ಜ್ವಾಲಾಮಾಲಿನಿ ಪ್ರೊಡಕ್ಷನ್ಸ್ಡಿ.ರಾಜೇಂದ್ರಬಾಬುಪಿ.ಲಕ್ಷ್ಮಣ್ಹಂಸಲೇಖಪಿ.ಕೆ.ಹೆಚ್.ದಾಸ್
572000ಇಂದ್ರಧನುಷ್ಎ.ಎಂಟರ್‌ಪ್ರೈಸಸ್ವಿ.ಮನೋಹರ್ಪೂರ್ಣಿಮವಿ.ಮನೋಹರ್ಸುಂದರನಾಥ್ ಸುವರ್ಣ
582000ಕೃಷ್ಣಲೀಲೆರಾಕ್‌ಲೈನ್ ಪ್ರೊಡಕ್ಷನ್ಸ್ಡಿ.ರಾಜೇಂದ್ರಬಾಬುರಾಕಲೈನ್ ವೆಂಕಟೇಶ್ವಿ.ಮನೋಹರ್ಬಿ.ಸಿ.ಗೌರಿಶಂಕರ್
592000ದೇವರ ಮಗಭರತ್ಶ್ರೀ ವಿನಾಯಕ ಮೂವೀಸ್ಡಿ.ರಾಜೇಂದ್ರಬಾಬುಎ.ಗಣೇಶ್ಹಂಸಲೇಖಪಿ.ಕೆ.ಹೆಚ್.ದಾಸ್
602000ಗಲಾಟೆ ಅಳಿಯಂದ್ರುಚೆನ್ನಾಂಭಿಕ ಫಿಲಂಸ್ಎಸ್.ನಾರಾಯಣ್ಅನಿತದೇವಆರ್.ಗಿರಿ
612000ಮದುವೆ ಆಗೋಣ ಬಾ
622001ಅಸುರವಾಸುಸಂದೇಶ್ ಎಂಟರ್ ಪ್ರೈಸಸ್ಎಸ್.ಮಹೇಂದರ್ಗುರುಕಿರಣ್
632001ಬಹಳ ಚೆನ್ನಾಗಿದೆಚಿತ್ರ ಜ್ಯೋತಿಎಂ.ಎಸ್.ರಾಜಶೇಖರ್ಗಣಪತಿ ಪ್ರಸಾದ್, ಎಸ್.ರಾಮನಾಥನ್,ಕೋಟಿಪ್ರಸಾದ್ ಬಾಬು
642001ಬಾವ ಭಾಮೈದರಾಮು ಎಂಟರ್‌ಪ್ರೈಸಸ್ಕಿಶೋರ್ ಸರ್ಜಾರಾಮುಹಂಸಲೇಖಅಶೊಕ್ ಕಶ್ಯಪ್
652001ಸುಂದರಕಾಂಡಶ್ರೀ ವೆಂಕಟೇಶ್ವರ ಪ್ರೊಡಕ್ಷನ್ಸ್ಎಂ.ಎಸ್.ರಾಜಶೇಖರ್ಮಡಿಕೊಂಡ ವೆಂಕಟಮುರಳಿಕೃಷ್ಣಎಮ್.ಎಮ್.ಕೀರವಾಣಿಪ್ರಸಾದ್ ಬಾಬು
662001ಯುವರಾಜಆರ್.ಎಸ್.ಪ್ರೊಡಕ್ಷನ್ಸ್ಪೂರಿ ಜಗನ್ನಾಥ್ಆರ್.ಶ್ರೀನಿವಾಸ್ರಮಣ ಗೋಕುಲ
672001ಜೋಡಿರಾಕ್‌ಲೈನ್ ಪ್ರೊಡಕ್ಷನ್ಸ್ಕಿಶೋರ್ ಸರ್ಜಾರಾಕಲೈನ್ ವೆಂಕಟೇಶ್ಎಸ್.ಎ.ರಾಜಕುಮಾರ್
682002ಕೋದಂಡರಾಮಶ್ರೀ ಲಕ್ಷ್ಮಿ ಪಿಚ್ಚರ್ಸ್ವಿ.ರವಿಚಂದ್ರನ್ವಿ.ವೆಂಕಟರಾವ್ವಿ.ರವಿಚಂದ್ರನ್
692002ನಿನ್ನೇ ಪ್ರೀತಿಸುವೆಅಸ್ಕರ್ ಫಿಲಂಸ್ಎನ್.ಓಂಪ್ರಕಾಶ್ ರಾವ್ಕೆ.ಮೆಹರುನ್ನೀಸ ರೆಹಮಾನ್, ಕೆ.ಮುಸ್ತಫಆನಂದ್ ಆಡಿಯೋಎಸ್.ಮನೋಹರ್
702002ತವರಿಗೆ ಬಾ ತಂಗಿಮೇಘ ಹಿಟ್ ಫಿಲಂಸ್ಓಂ ಸಾಯಿಪ್ರಕಾಶ್ಆರ್.ಎಸ್.ಗೌಡಹಂಸಲೇಖಅಜಯ್ ಕುಮಾರ್
712003ಡಾನ್ರಾಯಲ್ ಫಿಲಂಸ್ಪಿ.ಎನ್.ಸತ್ಯರಮೇಶ್ ಯಾಧವ್
722003ಶ್ರೀರಾಮ್ಆರ್.ಎಸ್.ಪ್ರೊಡಕ್ಷನ್ಸ್ಎಂ.ಎಸ್.ರಮೇಶ್ಆರ್.ಶ್ರೀನಿವಾಸ್ಗುರುಕಿರಣ್ಹೆಚ್.ಸಿ.ವೇಣು
732003ಸ್ಮೈಲ್ಶ್ರೀ ಮಾತ ಪಿಚ್ಚರ್ಸ್ಸೀತಾರಾಮ ಕಾರಾಂತ್ಎನ್.ಕೆ.ಪ್ರಕಾಶ್ ಬಾಬುವಿ.ಮನೋಹರ್ಪಿ.ರಾಜನ್
742003ನಂಜುಂಡಿರಾಮು ಎಂಟರ್‌ಪ್ರೈಸಸ್ಆರ್.ಎಸ್.ಬ್ರದರ್ಸ್ರಾಮುಹಂಸಲೇಖಬಿ.ಸುರೇಶ್ ಬಾಬು
752003ಚಿಗುರಿದ ಕನಸುಶ್ರೀ ವಜ್ರೇಶ್ವರಿ ಫಿಲಂಸ್ಟಿ.ಎಸ್.ನಾಗಾಭರಣಪಾರ್ವತಮ್ಮ ರಾಜಕುಮಾರ್ವಿ.ಮನೋಹರ್ಬಿ.ಸಿ.ಗೌರಿಶಂಕರ್
762004ರೌಡಿ ಅಳಿಯಕೋಮಲ್ ಎಂಟರ್‌ಪ್ರೈಸಸ್ಓಂ ಸಾಯಿಪ್ರಕಾಶ್ಎಂ.ಸಿ.ನೇಹಸಪ್ತಸ್ವರದಾಸರಿ ಸೀನು
772004ಸಾರ್ವಭೌಮರೋಹಿಣಿ ಎಂಟರ್‌ಪ್ರೈಸಸ್ಕೆ.ಮಹೇಶ್ ಸುಖಧರೆಆರ್.ಜಗದೀಶ್ಹಂಸಲೇಖಬಿ.ಎ.ಮಧು
782004ಕಾಂಚನಗಂಗಲಕ್ಷ್ಮಿ ಕ್ರಿಯೇಷನ್ಸ್ಎಸ್.ವಿ.ರಾಜೇಂದ್ರಸಿಂಗ್ ಬಾಬುಜೈಜಗದೀಶ್, ವಿಜಯಲಕ್ಷ್ಮಿಸಿಂಗ್,ಎಸ್.ಎ.ರಾಜಕುಮಾರ್ಬಿ.ಸಿ.ಗೌರಿಶಂಕರ್
792005ರಿಷಿಶ್ರೀ ಜೈಮಾತ ಕಂಬೈನ್ಸ್ಪ್ರಕಾಶ್ಜೆ.ಜಯಮ್ಮಗುರುಕಿರಣ್ಕೃಷ್ಣಕುಮಾರ್
802005ರಾಕ್ಷಸರಾಮು ಫಿಲಂಸ್ಕೋಕಿಲ ಸಾಧುರಾಮುರಂಗನಾಥ್, ಶಶಿಕುಮಾರ್ಕೃಷ್ಣಕುಮಾರ್
812005ವಾಲ್ಮೀಕಿಶ್ರೀನಿವಾಸ ಪ್ರೊಡಕ್ಷನ್ಸ್ಎಂ.ಎಸ್.ರಮೇಶ್ಹೆಚ್.ಸಿ.ಶ್ರೀನಿವಾಸ್ಗುರುಕಿರಣ್ದಾಸರಿ ಸೀನು
822005ಜೋಗಿಅಶ್ವಿನಿ ಪ್ರೊಡಕ್ಷನ್ಸ್ಪ್ರೇಮ್ಪಿ.ಕೃಷ್ಣಪ್ರಸಾದ್, ರಾಮಪ್ರಸಾದ್ಗುರುಕಿರಣ್ಎಮ್.ಆರ್.ಸೀನು
832005ಅಣ್ಣ ತಂಗಿವಿಜಯ್ ಫಿಲಂಸ್ಸಾಯಿಪ್ರಕಾಶ್ಪ್ರಭಾಕರ್ಹಂಸಲೇಖಆರ್.ಗಿರಿ
842006ಅಶೋಕರಾಯಲ್ ಪಿಚ್ಚರ್ಸ್ಶಿವಮಣಿರಮೇಶ್ ಯಾಧವ್ಸಾಧುಕೋಕಿಲಸುಂದರರಾಜ್ ಸುವರ್ಣ
852006ತವರಿನ ಸಿರಿರಾಮು ಫಿಲಂಸ್ಸಾಯಿಪ್ರಕಾಶ್ರಾಮುಹಂಸಲೇಖಆರ್.ಗಿರಿ
862006ಗಂಡುಗಲಿ ಕುಮಾರರಾಮಎಂ.ಎಸ್.ರಾಮಯ್ಯ ಚಿತ್ರಾಲಯಭಾರ್ಗವಅನಿತ ಪಟ್ಟಾಭಿರಾಮ್ಗುರುಕಿರಣ್ಸುಂದರನಾಥ್ ಸುವರ್ಣ
872007ತಾಯಿಯ ಮಡಿಲುಎಸ್.ನಾರಾಯಣ್ಎಸ್.ಎ.ರಾಜಕುಮಾರ್
882007ಸಂತಎಸ್.ಮುರಳಿಮೋಹನ್ಗುರುಕಿರಣ್
892007ಗಂಡನ ಮನೆಎಸ್.ಮಹೇಂದರ್ವಿ.ಮನೋಹರ್
902007ಲವ ಕುಶಓಂ ಸಾಯಿಪ್ರಕಾಶ್ಗುರುಕಿರಣ್
91೨೦೦೮ಸತ್ಯ ಇನ್ ಲವ್ರಾಘವ್ ಲೋಕಿಗುರುಕಿರಣ್
92೨೦೦೮ಬಂಧು ಬಳಗನಾಗಣ್ಣಹಂಸಲೇಖ
93೨೦೦೮ಮಾದೇಶರವಿ ಶ್ರೀವತ್ಸಮನೋಮೂರ್ತಿ
94೨೦೦೮ಪರಮೇಶ ಪಾನ್‌ವಾಲಾಪರಮೇಶಮಹೇಶ್ ಬಾಬುವಿ.ಹರಿಕೃಷ್ಣ
95೨೦೦೯ನಂದಆರ್.ಅನಂತರಾಜುವಿ.ಮನೋಹರ್
96೨೦೦೯ಹ್ಯಾಟ್ರಿಕ್ ಹೊಡಿಮಗಸತ್ಯ.ಪಿಜಸ್ಸಿ ಗಿಫ್ಟ್
97೨೦೦೯ಭಾಗ್ಯದ ಬಳೆಗಾರಓಂ ಸಾಯಿಪ್ರಕಾಶ್ಇಳಯರಾಜ
98೨೦೦೯ದೇವರು ಕೊಟ್ಟ ತಂಗಿಓಂ ಸಾಯಿಪ್ರಕಾಶ್ಹಂಸಲೇಖ
992010ಸುಗ್ರೀವಪ್ರಶಾಂತ್ಗುರುಕಿರಣ್
1002010ತಮಸ್ಸುಶಂಕರ್ಅಗ್ನಿ ಶ್ರೀಧರ್ಸಂದೀಪ್ ಚೌಟ
೧೦೧೨೦೧೦ಮೈಲಾರಿಆರ್ ಚಂದ್ರುಗುರುಕಿರಣ್
೧೦೨೨೦೧೧ಜೋಗಯ್ಯಪ್ರೇಂಪ್ರೇಂಗುರುಕಿರಣ್
೧೦೩೨೦೧೧ಚೆಲುವೆಯೇ ನಿನ್ನ ನೋಡಲುರಘು ರಾಮ್ಎನ್ ಎಂ ಸುರೇಶ್ವಿ.ಹರಿಕೃಷ್ಣ
೧೦೪೨೦೧೨ಶಿವಎನ್.ಓಂ ಪ್ರಕಾಶ್ ರಾವ್ಕೆ ಪಿ ಶ್ರೀನಾಥ್ಗುರುಕಿರಣ್
೧೦೫೨೦೧೩ಲಕ್ಷ್ಮಿರಾಘವ ಲೋಕಿಭಾಸ್ಕರ್ಗುರುಕಿರಣ್
೧೦೬೨೦೧೩ಅಂದರ್ ಬಹಾರ್ಫನೇಶ್ ಎಸ್ ರಾಮನಾಥಪುರಭಾಸ್ಕರ್,ಅವಿನಾಶ್ವಿಜಯ್ ಪ್ರಕಾಶ್
೧೦೭೨೦೧೩ಕಡ್ಡಿ ಪುಡಿಆನಂದ / ಕಡ್ಡಿಪುಡಿದುನಿಯಾ ಸೂರಿಎಂ ಚಂದ್ರುವಿಜಯ್ ಪ್ರಕಾಶ್
೧೦೮೨೦೧೩ಭಜರಂಗಿಹರ್ಷನಟರಾಜ್ ಗೌಡ,ಮಂಜುನಾಥ್ ಗೌಡಅರ್ಜುನ್ ಜನ್ಯ
೧೦೯೨೦೧೪ಆರ್ಯನ್ಆರ್ಯನ್ರಾಜೇಂದ್ರ ಬಾಬು,ಗುರುದತ್ಧ್ರುವ ದಾಸ್,ಡಿ ಕುಮಾರ್ಜಸ್ಸಿ ಗಿಫ್ಟ್
೧೧೦೨೦೧೪ಬೆಳ್ಳಿಬಸವರಾಜ್ / ಬೆಳ್ಳಿಯಶಸ್ವಿನಿ ಸಿನಿ ಕ್ರಿಯೇಶನ್ಸ್,ಮುಸ್ಸಂಜೆ ಮಹೇಶ್ಏಚ್. ರ್. ರಾಜೇಶ್, ಕೇ. ಜ್. ರಾಜಶೇಕರ್ವೀ. ಶ್ರೀಧರ್ಕೇ. ಎಸ್. ಚಂದ್ರಶೇಕರ್
೧೧೧೨೦೧೫ವಜ್ರಕಾಯವಿರಾಜ್ಹರ್ಷಸೀ. ಆರ್. ಮನೋಹರ್, ಸೀ. ಆರ್. ಗೋಪಿಅರ್ಜುನ್ ಜನ್ಯಸ್ವಾಮಿ ಜೇ
೧೧೨೨೦೧೬ಕಿಲ್ಲಿಂಗ್ ವೀರಪ್ಪನ್ರಾಮ ಗೋಪಾಲ್ ವರ್ಮರವಿ ಶಂಕರ್ರಾಮಿ
೧೧೩೨೦೧೬ಶಿವಲಿಂಗಶಿವಪಿ.ವಾಸುವಿ.ಹರಿಕೃಷ್ಣಪಿ.ಕೆ. ಎಚ್. ದಾಸ್
೧೧೪೨೦೧೬ಸಂತೆಯಲ್ಲಿ ನಿಂತ ಕಬೀರಕಬೀರನರೇಂದ್ರ ಬಾಬುಇಸ್ಮಾಯಿಲ್ ದರ್ಬಾರ್ನವೀನ್ ಕುಮಾರ್
೧೧೫೨೦೧೭ಶ್ರೀ ಕಂಠಮಂಜು ಸ್ವರಾಜ್ಬಿ. ಅಜನೀಶ್ ಲೋಕನಾಥ್ಬಿ. ಸುರೇಶ್ ಬಾಬು
೧೧೬೨೦೧೭ಬಂಗಾರ ಸನ್ ಆಫ್ ಬಂಗಾರದ ಮನುಷ್ಯಯೋಗಿ.ಜಿ.ರಾಜ್ವಿ.ಹರಿಕೃಷ್ಣಜೈ ಆನಂದ್
೧೧೭೨೦೧೭ಮಾಸ್ ಲೀಡರ್ನರಸಿಂಹವೀರ್ ಸಮರ್ಥ್
೨೦೧೮ಟಗರುಟಗರು ಶಿವಚರಣ್ ರಾಜ್

ಉಲ್ಲೇಖಗಳು