ಸದಸ್ಯ:2230987suman/ನನ್ನ ಪ್ರಯೋಗಪುಟ

ಪರಿಚಯ

ನನ್ನ ಹೆಸರು ಸುಮನ್ ದಂಡಿ,ನಾನು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಕಡ್ವಾಡ್ ಅನ್ನುವ ಗ್ರಾಮದಲ್ಲಿ ೨೦೦೫ ಜನವರಿ ೦೧ ರಂದು ಶ್ರೀ ಸೂರ್ಯಕಾಂತ್ ದಂಡಿ ಮತ್ತು ಶ್ರೀಮತಿ ಸಂಪಾವತಿ ದಂಡಿ ಅವರ ಮಗಳಾಗಿ ಜನಿಸಿದ್ದೇನೆ .

ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ನನ್ನ ಸ್ವಗ್ರಾಮ ಕಡ್ವಾಡ್ ನ ನೈಟಿಂಗೇಲ್ ಪಬ್ಲಿಕ್ ಸ್ಕೂಲ್ ನಲ್ಲಿ ಮತ್ತು ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆಯಲ್ಲಿ ಕಲಿತು,ಶಾಲೆಗೆ ಮತ್ತು ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದೇನೆ.ಮತ್ತು ನನ್ನ ಪ್ರಥಮ ಮತ್ತು ದ್ವಿತೀಯ ಪಿಯುಸಿ ಅನ್ನು ಶರಣಬಸವೇಶ್ವರ ಕಲಾ ಮತ್ತು ವಿಜ್ಞಾನ ಕಾಲೇಜು,ಕಲಬುರ್ಗಿಯಲ್ಲಿಕಲಿತು, ಕಾಲೇಜಿಗೆ  ಪ್ರಥಮ ಸ್ಥಾನವನ್ನು ಪಡೆದು ಉತ್ತರ್ಣಳಾಗಿದ್ದೇನೆ.ನಾನು ಪ್ರಸ್ತುತ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಬಿ ಎ  ಪದವಿಯನ್ನು ಪಡಿಯುತ್ತಾ ಇದ್ದೇನೆ.

ನನ್ನ ಹವ್ಯಾಸಗಳು: ಕುಣಿಯುವುದು, ಹಾಡುವುದು ,ಪದ್ಯಗಳನ್ನು ಬರೆಯುವುದು, ಮತ್ತು ಪ್ರಯಾಣ ಮಾಡುವುದು ಮತ್ತು ಪುಸ್ತಕವನ್ನು ಓದುವುದು ಇತ್ಯಾದಿ.

ನನ್ನ ಸಾಧನೆ:

ನಾನು ನನ್ನ ೧೦ ನೇ ತರಗತಿ ಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ನನ್ನ ಶಾಲೆಯ ಪರವಾಗಿ ದೂರದರ್ಶನದಲ್ಲಿ ಪ್ರಸಾರ ವಾಗುವ 'ಥಟ್ ಅಂತ ಹೇಳಿ' ಅನ್ನುವ ಕಾರ್ಯಕ್ರಮ ದಲ್ಲಿ ಭಾಗಿಯಾಗಿ ಆ ಸ್ಪರ್ಧೆಯಲ್ಲಿ ೨ನೇ ಸ್ಥಾನವನ್ನು ಪಡೆದು ನನ್ನ ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ತರುವಂತೆ ಮಾಡಿದ್ದೇನೆ. ಮತ್ತು ನನ್ನ ಗ್ರಾಮದ ಜನ ಮತ್ತು ನಮ್ಮ ಶಾಲೆಯವರು ನನ್ನ ಈ ಸಾಧನೆಗಾಗಿ ನನಗೆ ಸನ್ಮಾನ ಮಾಡಿದರು ನಾನು ನನ್ನ ಊರಿನಿಂದ ದೂರದರ್ಶನದಲ್ಲಿ ಬರುವಷ್ಟರ ಮಟ್ಟಿಗೆ ಹೋದವಳು ನಾನೇ ಮೊದಲು ಹುಡ್ಗಿ .ಅವರು ಮಾಡಿದ ಸನ್ಮಾನ ನನಗೆ ತುಂಬಾ ಇಷ್ಟವಾಯಿತು. ನನ್ನ ಗ್ರಾಮಸ್ತರ ಕಣ್ಣಲ್ಲಿ ನನ್ನ ಬಗೆಗಿರುವ ಗೌರವವನ್ನು ನೋಡಿ ನಾನು ನಿಜವಾಗಿಯೆ ಅತಿ ದೊಡ್ಡ ಸಾಧನೆ ಮಾಡಿದೆ ಅನಿಸಿತು.

ಮತ್ತು ಹಾಗೆಯೆ ನಮ್ಮ ಬೀದರ್ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಭಂದ ಸ್ಪರ್ಧೆ ಜರಗಿತ್ತು ಅದರಲ್ಲಿಯು ಕೂಡ ನನಗೆ ತ್ರಿತಿಯ ಬಹುಮಾನ ದೊರಕಿತು, ಹೆಮ್ಮೆಯ ವಿಷಯವೆಂದರೆ ಬಹುಮಾವನ್ನು ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ ಬಂಡೆಪ್ಪ ಖಾಶೆಂಪುರೆ ಅವರು ವಿತರಿಸಿದರು.

ಮತ್ತು ನಾನು ೧೦ನೆ ತರಗತಿ ಯಲ್ಲಿ ನನ್ನ ತಾಲೂಕಿಗೆ ಮೊದಲ ಸ್ಥಾನವನ್ನು ಪಡೆದೆ ಅದರ ಬಹುಮಾನವಾಗಿ ನನಗೆ ನಮ್ಮ ಕ್ಷೇತ್ರದ ಶಾಸಕರು ಲ್ಯಾಪ್ಟಾಪ್ ಅನ್ನು ಕೊಟ್ಟು ಸನ್ಮಾನಿಸಿದರು ಇದು ಕೂಡ ತುಂಬಾ ಹೆಮ್ಮೆಯ ವಿಶಯವಾಗಿತ್ತು.

ಮತ್ತು ನಾನು ನನ್ನ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವಾಗ ಏನ್ ಸಿ ಸಿ ಅಭ್ಯರ್ಥಿಯಾಗಿದ್ದೆ, ಮತ್ತು ನನಗೆ ಹೆಮ್ಮೆಯ ವಿಷಯವೆನೆಂದರೆ ಕರ್ನಾಟಕ ರಾಜ್ಯದ ಪ್ರೌಢ ಶಿಕ್ಷಣ ಅಧಿಕಾರಿಯಾಗಿದ್ದ ಡಾ. ಅಶ್ವಥ್ ನಾರಾಯಣ್ ಅವರನ್ನು ಆ ಸಂಧರ್ಭದಲ್ಲಿ ಭೇಟಿ ನೀಡುವ ಅವಕಾಶ ಮತ್ತು ಅವರೊಂದಿಗೆ ಚರ್ಚಿಸುವಂಥಹ ಅವಕಾಶ ನನಗೆ ದೊರಕಿತ್ತು.

ನಾನು ಇನ್ನೂ ಮಾಡಬೇಕಾದ ಸಾಧನೆ :

ಐಪಿಎಸ್ ಅಧಿಕಾರಿಯಾಗಿ ಜನರ ಸೇವೆ ಮಾಡಬೇಕೆಂದು ನನ್ನ ಇಚ್ಛೆ, ಮತ್ತು ನಾನು ಅನಾಥ ಆಶ್ರಮವನ್ನು ತೆರೆದು ಸೇವೆ ಸಲ್ಲಿಸಲು ಆಶಿಸಿದ್ದೆನೆ.ಮತ್ತು ನಾನು ಬಡವರನ್ನು ಅವರ ಮೂಲಭೂತ ಅಗತ್ಯತೆಗಳ ಬಗ್ಗೆ ಮಾಹಿತಿಯನ್ನು ಹೇಳಿಕೊಡುವೆನು ಏಕೆಂದರೆ ಅನೇಕ ಜನರು ತಮ್ಮ ಮೂಲಭೂತ ಅಗತ್ಯತೆಗಳ ಬಗ್ಗೆ ಅರಿವಿಲ್ಲದೆ ಇದ್ದಾರೆ,ಅದಕ್ಕಾಗಿ ನಾನು ಆದಷ್ಟು ಪ್ರಯತ್ನಮಾಡುವೆನು ಜನರನ್ನು ಅವರ ಮೂಲಭೂತ ಅಗತ್ಯತೆಗಳ ಬಗ್ಗೆ ಅರಿವನ್ನು ನೀಡುವೆನು.

ಧನ್ಯವಾದಗಳು.