ಸದಸ್ಯ:Sushmareddyn/ನನ್ನ ಪ್ರಯೋಗಪುಟ

                                                            ಸ್ಪೈಡರ್ ಕೋತಿ   

ಸ್ಪೈಡರ್ ಕೋತಿಗಳು ಅಟಿಲಿಸ್ (Ateles) ಕುಲದ, ಅಟಿಲಿನೆ (Atelinae) ಉಪಕುಟುಂಬದ, ಅಟಿಲಿಡೆ(atelidae) ಎಂಬ ಕುಟುಂಬಕ್ಕೆ ಸೇರಿದ ಹೊಸ ಜಾತಿಯ ಕೋತಿಗಳು. ಇವು ದಕ್ಷಿಣ ಮೆಕ್ಸಿಕೋಯಿಂದ ಬ್ರೆಜಿಲ್ ಪ್ರಾಂತ್ಯದವರೆಗೆ ಹಾಗು ಮಧ್ಯ ಮತ್ತು ದಕ್ಷಿಣ ಅಮೆರಿಕಾದ ಉಷ್ಣವಲದ ಕಾಡುಗಳಲ್ಲಿ ಕಂಡುಬರುತ್ತವೆ. ಈ ಕುಲದಲ್ಲಿ ಏಳು ಜಾತಿಯ ಕೋತಿಗಳು ಕಂಡುಬರುತ್ತದೆ. ಸದ್ಯಕ್ಕೆ ಈ ಎಲ್ಲಾ ಪ್ರಾಣಿಗಳು ಅಪಾಯದಲ್ಲಿವೆ. ಪ್ರಮುಖವಾಗಿ ಕಪ್ಪುಬಣ್ಣದ ಸ್ಪೈಡರ್ ಕೋತಿ ಮತ್ತು ಕಂದು ಬಣ್ಣದ ಸ್ಪೈಡರ್ ಕೋತಿ ತೀವ್ರ ಅಪಾಯದ ಅಂಚಿನಲ್ಲಿದೆ.

ಸ್ಪೈಡರ್ ಕೋತಿ

ಅಂಗರಚನೆ

ಅಸಮನಾದ ಉದ್ದನೆಯ ಕಾಲುಗಳು ಹಾಗು ಉದ್ದನೆಯ ಬಾಲಗಳು ಇವುಗಳನ್ನು ಹೊಸ ಪ್ರಪಂಚದ ಅತೀ ದೊಡ್ಡ ಕೋತಿಗಳನ್ನಾಗಿ ಗುರುತಿಸಲು ಸಹಾಯಕವಾಗಿದೆ ಹಾಗು ಇವುಗಳ ಹೆಸರು ಉಗಮವಾಗಲು ಕಾರಣವಾಗಿದೆ. ಸ್ಪೈಡರ್ ಕೋತಿಗಳು ಮಳೆ-ಕಾಡು ಪ್ರದೇಶಗಳಲ್ಲಿ ವಾಸಿಸುತ್ತವೆ[೧].

ಆಹಾರ ಪದ್ಧತಿ

ಇವು ಮುಖ್ಯವಾಗಿ ಹಣ್ಣುಗಳನ್ನು ಆಹಾರವಾಗಿ ಸೇವಿಸುತ್ತವೆ ಆದರೆ ಕೆಲವೊಮ್ಮೆ ಎಲೆಗಳನ್ನೂ, ಹೂವುಗಳನ್ನೂ ಹಾಗು ಕ್ರಿಮಿ-ಕೀಟಗಳನ್ನೂ ಸಹ ಸೇವಿಸುತ್ತವೆ. ಸ್ಪೈಡರ್  ಕೋತಿಗಳ ಅಗಾಧ ಗಾತ್ರದಿಂದಾಗಿ ಇವುಗಳಿಗೆ ವಿಶಾಲವಾದ ತೇವಾಂಶವುಳ್ಳ  ನಿತ್ಯಹರಿದ್ವರ್ಣ ಕಾಡುಗಳ ಅಗತ್ಯವಿರುತ್ತದೆ ಮತ್ತು ತೊಂದರೆಗೊಳಗಾಗದ ಮಳೆ-ಕಾಡು ಪ್ರದೇಶಗಳು ಸ್ಪೈಡರ್ ಕೋತಿಗಳ ಪ್ರಥಮ ಆದ್ಯತೆಯಾಗಿರುತ್ತದೆ.

ನಡತೆ

ಸ್ಪೈಡರ್ ಕೋತಿಗಳು ಸಾಮಾಜಿಕ ಪ್ರಾಣಿಗಳು ಹಾಗು ಇವು ಗುಂಪಿನಲ್ಲಿ ವಾಸಿಸುತ್ತವೆ, ಪ್ರತೀ ಗುಂಪಿನಲ್ಲಿ ೩೫ ಕೋತಿಗಳು ಕಂಡುಬರುತ್ತದೆ ಆದರೆ ಹಗಲಿನಲ್ಲಿ ಮೇವಿಗೋಸ್ಕರ ಗುಂಪಿನಿಂದ ಬೇರೆಯಾಗುತ್ತವೆ[೨]. ಇತ್ತೀಚಿನ ಪ್ರಚೋಲಿತ ವಿಶ್ಲೇಷಣೆಯ ಮೇಲಿಂದ ಸಹಬಾಗಿಗಳ ಸಂವೇದನದ ಸಂಶೋಧನೆಯು ಸೂಚಿಸುವುದೇನೆಂದರೆ ಸ್ಪೈಡರ್ ಕೋತಿಗಳು ಈಗಿನ ಕೋತಿಗಳಿಗಿಂತ ಅತ್ಯಂತ ಬುದ್ಧಿಹೊಂದಿದೆ[೩]. ಇವುಗಳು ತೊಂದರೆಗೊಳಗಾದಾಗ ಅತೀ ವಿಭಿನ್ನವಾದ ಶಬ್ದಗಳನ್ನು ಮಾಡುತ್ತವೆ ಹಾಗು ಗಟ್ಟಿಯಾಗಿ ಬೊಗಳುತ್ತವೆ. ಬೊಗಳುವುದರ ಜೊತೆ-ಜೊತೆಗೆ ಕುದುರೆ ಹಾಗೆ ಮೃದುವಾಗಿ ಶಬ್ದ ಮಾಡುವುದು ಮತ್ತು ದೀರ್ಘಕಾಲ ಕಿರುಚುವುದು ಸ್ಪೈಡರ್ ಕೋತಿಗಳ ಅಭ್ಯಾಸ. ಸ್ಪೈಡರ್ ಕೋತಿಗಳ ಅಗಾಧ ಗಾತ್ರದಿಂದಾಗಿ ಅವುಗಳು ಆಹಾರದ ಪ್ರಮುಖ ಮೂಲವಾಗಿದೆ. ಆದುದರಿಂದ ಸ್ಥಾನಿಕ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಪೈಡರ್ ಕೋತಿಗಳನ್ನು ಬೇಟೆಯಾಡುತ್ತಾರೆ. ಗಿಡಗಳನ್ನು ಕತ್ತರಿಸಿ ನೆಲ ಸಮ ಮಾಡುವುದರಿಂದಲೂ ಸಹ ಅವುಗಳ ವಾಸಸ್ಥಳ ನಾಶಗೊಳ್ಳುವ ಸಾಧ್ಯತೆ ಹೆಚ್ಚಿದೆ. ಸ್ಪೈಡರ್ ಕೋತಿಗಳು ಮಲೇರಿಯಾ ಕಾಯಿಲೆಗೆ ಬಹಳ ಬೇಗನೆ ತುತ್ತಾಗುವೆ ಮತ್ತು ಈ ಕೋತಿಗಳನ್ನು ಹಲವು ರೋಗಗಳ ಅಧ್ಯಯನಕ್ಕಾಗಿ ಪ್ರಯೋಗಾಲಯಗಳಲ್ಲಿ ಉಪಯೋಗಿಸುತ್ತಾರೆ. ಈ ಮೇಲಿನ ಕಾರಣಗಳಿಂದಾಗಿ ಸ್ಪೈಡರ್ ಕೋತಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. 

ಶರೀರಶಾಸ್ತ್ರ

ಸ್ಪೈಡರ್ ಕೋತಿಗಳು ಹೊಸ ಪ್ರಪಂಚದ ಅತೀ ದೊಡ್ಡ ಕೋತಿಗಳು, ಇವುಗಳಲ್ಲಿ ಕಪ್ಪು ಬಣ್ಣದ ಸ್ಪೈಡರ್ ಕೋತಿ ಎಲ್ಲಾ ಕೋತಿಗಳಿಗಿಂತ ದೊಡ್ಡದು. ಗಂಡು ಕೋತಿಗಳ ಸರಾಸರಿ ತೂಕ ೧೧ ಕೆ.ಜಿ. ಹಾಗು ಹೆಣ್ಣು ಕೋತಿಗಳು ಸುಮಾರು ೯ರಿಂದ-೧೦ ಕೆ.ಜಿ. ತೂಕವಿರುತ್ತದೆ. ಅಸಮನಾದ ಕಾಲುಗಳು, ಸಣಕಲ ಅಂಗಗಳು ಸ್ಪೈಡರ್ ಕೋತಿಗಳ ಹೆಸರಿನ ಉಗಮಕ್ಕೆ ಸ್ಪೂರ್ತಿಯಾಗಿದೆ. ಸ್ಪೈಡರ್ ಕೋತಿಗಳ ಬಾಲ ಸುಮಾರು ೮೯ ಸೆಂಟಿಮೀಟರಗಳಷ್ಟು ಉದ್ದವಿರುತ್ತದೆ ಹಾಗು ಬಾಲ ಬಹಳ ಮೆದುವಾಗಿರುತ್ತದೆ ಮತ್ತು ಬಾಲದ ತುದಿ ಕೂದಲುರಹಿತವಾಗಿರುವುದರಿಂದ ಇವುಗಳ ಬಾಲವನ್ನು ಬೆರಳುಗುರುತಿಗೆ ಹೋಲಿಸಲ್ಪಡುತ್ತದೆ. ವೃಕ್ಷಗಳಲ್ಲಿ ವಾಸಿಸುವ ಕಟ್ಟುನಿಟ್ಟಾದ ಜೀವನಶೈಲಿ ಈ ಸ್ಪೈಡರ್ ಕೋತಿಗಳ ಐದನೇ ಕೈಯಾಗಿ ಕಾರ್ಯನಿರ್ವಹಿಸುತ್ತದೆ[೪]. ಸ್ಪೈಡರ್ ಕೋತಿಗಳು ನಡೆಯುವಾಗ ಅದರ ಕೈಗಳು ನೆಲದಲ್ಲಿ ಎಳೆದಾಡುತ್ತಿರುತ್ತವೆ. ಇತರ ಸಾಮಾನ್ಯ ಕೋತಿಗಳ ಹಾಗೆ ನಡೆಯುವಾಗ ದೇಹದ ಸಮತೋಲನಕ್ಕಾಗಿ ತಮ್ಮ ಕೈಗಳನ್ನು ಬಳಸುವ ಬದಲು ಇವು ತಮ್ಮ ಬಾಲಗಳನ್ನು ಬಳಸುತ್ತವೆ. ಸ್ಪೈಡರ್ ಕೋತಿಗಳ ಕೈಗಳು ಬಹಳ ಚಿಕ್ಕದಾಗಿ ಕೊಕ್ಕಿನಂತಿದ್ದು ಕಡಿಮೆ ಹೆಬ್ಬೆರಳುಗಳನ್ನು ಹೊಂದಿದೆ. ಕೈಯಿನ ಬೆರಳುಗಳು ಉದ್ದ ಮತ್ತು ಡೊಂಕು-ಡೊಂಕಾಗಿದೆ. ಸ್ಪೈಡರ್ ಕೋತಿಗಳ ಕೂದಲು ಸಾಮಾನ್ಯವಾಗಿ ಕಪ್ಪು ಮತ್ತು ಕಂದು ಬಣ್ಣದ್ದಾಗಿರುತ್ತದೆ ಅಥವ ಅಪರೂಪವಾಗಿ ಬಿಳಿ ಬಣ್ಣವಿರುತ್ತದೆ. ಸ್ಪೈಡರ್ ಕೋತಿಗಳ ತಲೆಯ ಗಾತ್ರ ಚಿಕ್ಕದು ಮತ್ತು ಮುಖ ಕೂದಲುರಹಿತವಾಗಿರುತ್ತದೆ. ದೂರ-ದೂರವಾಗಿ ಸ್ಥಾಪಿತವಾಗಿರುವ ಮೂಗಿನ ಹೊಳ್ಳೆಗಳು ಈ ಸ್ಪೈಡರ್ ಕೋತಿಗಳ ವಿಶೇಷ ಲಕ್ಷಣವಾಗಿದೆ. ಸ್ಪೈಡರ್ ಕೋತಿಗಳು ಅತ್ಯಂತ ಚುರುಕುಬುದ್ದಿ ಹೊಂದಿರುವ ಪ್ರಾಣಿಗಳು ಮತ್ತು ಇವು ಕಾಡು ಜಿಂಕೆಗಳ ತರಹ ಮರದಿಂದ ಮರಕ್ಕೆ ಜಿಗಿಯುತ್ತಿರುತ್ತವೆ. ಹೆಣ್ಣು ಸ್ಪೈಡರ್ ಕೋತಿಗಳು ವಿಶೇಷವಾಗಿ ಅಭಿವೃದ್ಧಿಗೊಂಡಿರುವ ಚಂದ್ರನಾಡಿಯನ್ನು ಹೊಂದಿದೆ. ಈ ಚಂದ್ರನಾಡಿಯನ್ನು ಸುಳ್ಳು ಶಿಶ್ನ ಎಂದು ಕರೆಯಲ್ಪಡುತ್ತದೆ ಏಕೆಂದರೆ ಈ ನಾಡಿ ಆಂತರಿಕ ಮಾರ್ಗ ಅಥವಾ ಮೂತ್ರ ವಿಸರ್ಜನಾಳ ಹೊಂದಿದೆ ಮತ್ತು ಇದರ ಆಕಾರ ಶಿಶ್ನವನ್ನು ಹೋಲುವಂತಿರುತ್ತದೆ. ದಕ್ಷಿಣ ಅಮೆರಿಕಾದ ಸ್ಪೈಡರ್ ಕೋತಿಗಳ ಸಂಶೋಧಕರು ಹಾಗು ವೀಕ್ಷಕರು ಈ ಕೋತಿಗಳ ಲಿಂಗವನ್ನುಅವುಗಳ ಅಂಡಾಶಯವನ್ನು ನೋಡಿ ನಿರ್ಧರಿಸುತ್ತಾರೆ, ಏಕೆಂದರೆ ಹೆಣ್ಣು ಸ್ಪೈಡರ್ ಕೋತಿಗಳು ಹೊಂದಿರುವ ಚಂದ್ರನಾಡಿ ಬಹುತೇಕ ಶಿಶ್ನದ ರೀತಿ ಕಾಣುತ್ತದೆ. ಚಂದ್ರನಾಡಿಯ ಮೇಲಿರುವ ವಾಸನೆ ಗ್ರಂಥಿಗಳನ್ನು ಸಹ ಗುರುತಿಸಿ ಸಂಶೋದಕರು ಸ್ಪೈಡರ್ ಕೋತಿಗಳ ಲಿಂಗವನ್ನು ಪತ್ತೆ ಹಚ್ಚುತ್ತಾರೆ.   ಸ್ಪೈಡರ್ ಕೋತಿಗಳು ಗುಂಪುಗಳಲ್ಲಿ ಓಡಾಡುತ್ತವೆ. ಪ್ರತಿ ಗುಂಪಿನಲ್ಲಿ ೧೫ರಿಂದ- ೨೫ ಕೋತಿಗಳಿರುತ್ತವೆ, ಕೆಲವೊಮ್ಮೆ ೩೦ರಿಂದ-೪೦ ಕೋತಿಗಳಿರುತ್ತವೆ ಆದರೆ ಹಗಲಿನಲ್ಲಿ ಈ ಕೋತಿಗಳು ಉಪಗುಂಪುಗಳಾಗಿ ವಿಭಜನೆಗೊಳ್ಳುತ್ತವೆ. ಪ್ರತಿ ಉಪಗುಂಪುಗಳಲ್ಲಿ ೨ರಿಂದ- ೮ ಕೋತಿಗಳಿರುತ್ತವೆ. ಈ ತರಹದ ಸಾಮಾಜಿಕ ರಚನೆ ಕೇವಲ ಹೋಮೋ-ಸೇಪಿಯನ್ಸ್(homo-sapiens) ಮತ್ತು ಚಿಪಾಂಜಿ(chimpanzees) ಸಸ್ತನಿಗಳಲ್ಲಿ ಕಾಣಬಹುದು. ಉಪಗುಂಪುಗಳ ಗಾತ್ರ ಹಾಗು ಅವುಗಳ ವಿಭಜನೆ,ಆಹಾರದ ಅವಶ್ಯಕತೆ ಮತ್ತು ಭಕ್ಷಣೆಯ ಮೇಲೆ ಆಧಾರಿತವಾಗಿದೆ. ಸಾಮಾನ್ಯವಾಗಿ ಉಪಗುಂಪುಗಳ ಗಾತ್ರ ೨ರಿಂದ- ೮ರಳೊಗೆ ಇರುತ್ತದೆ. ಪ್ರೌಢಾವಸ್ಥೆಯ ಸಂದರ್ಭದಲ್ಲಿ ಗಂಡು ಸ್ಪೈಡರ್ ಕೋತಿಗಳ ಬದಲು ಹೆಣ್ಣು ಸ್ಪೈಡರ್ ಕೋತಿಗಳು ಗುಂಪಿನಿಂದ ಚೆದರಿ ಹೋಗಿ ಹೊಸಗುಂಪುಗಳನ್ನು ಸೇರಿಕೊಳ್ಳುತ್ತದೆ. ಗಂಡು ಸ್ಪೈಡರ್ ಕೋತಿಗಳು ಜೀವನವಿಡೀ ಒಟ್ಟಿಗೆ ಬಾಳುವ ಒಲವನ್ನು ತೋರಿಸುತ್ತದೆ. ಈ ತರಹದ ಒಲವು ಸಸ್ತನಿಗಳಲ್ಲಿ ಬಹಳ ಕಡಿಮೆ ಎಂದು ಹೇಳಬಹುದು. ಹೆಣ್ಣು ಸ್ಪೈಡರ್ ಕೋತಿಗಳ ಮತ್ತು ಅದರ ಸಂತತಿಯ ನಡುವೆ ಅತೀ ಗಟ್ಟಿಯಾದ ಸಂಬಂಧ ಏರ್ಪಾಡಾಗುತ್ತದೆ. ಸ್ಪೈಡರ್ ಕೋತಿಗಳು ಭಂಗಿಗಳನ್ನು ಮತ್ತು ನಿಲುವನ್ನು ಉಪಯೋಗಿಸಿಕೊಂಡು ತಮ್ಮ ಉದ್ದೇಶಗಳನ್ನು ಹಾಗು ಅವಲೋಕನಗಳನ್ನು ಹಂಚಿಕೊಳ್ಳುತ್ತವೆ. ಸ್ಪೈಡರ್ ಕೋತಿಗಳು ತಮ್ಮನ್ನು ಸಮೀಪಿಸುತ್ತಿರುವ ಮನುಷ್ಯರನ್ನು ನೋಡಿದಾಗ ಅವು ನಾಯಿಯ ಹಾಗೆ ಜೋರಾಗಿ ಬೊಗಳಲಾರಂಭಿಸುತ್ತವೆ ಮತ್ತು ಬೇರೆ ಯಾವುದಾದರು ಪ್ರಾಣಿಗಳು ಸಮೀಪಿಸಿದಲ್ಲಿ ಈ ಕೋತಿಗಳು ಮರದ ಕೊಂಬೆಯ ತುದಿಗೆ ಏರಿ ಆ ಕೊಂಬೆಯನ್ನು ಅಲುಗಾಡಿಸಿ ಅಪಾಯದಿಂದ ಪಾರಾಗುತ್ತದೆ.

ಉಲ್ಲೇಖನಗಳು