ಸೇಂಟ್ ಮೇರೀಸ್ ಚರ್ಚ್, ಸಿಕಂದರಾಬಾದ್

ಸೇಂಟ್ ಮೇರೀಸ್ ಚರ್ಚ್, ಸಿಕಂದರಾಬಾದ್ ಭಾರತದ ತೆಲಂಗಾಣ ರಾಜ್ಯದ ಸಿಕಂದರಾಬಾದ್‌ನಲ್ಲಿರುವ ಒಂದು ಚಿಕ್ಕ ಬೆಸಿಲಿಕಾ . ಇದನ್ನು ಬೆಸಿಲಿಕಾ ಎಂದು ಗೊತ್ತುಪಡಿಸುವ ಆದೇಶವನ್ನು 7 ನವೆಂಬರ್ 2008 ರಂದು ಹೊರಡಿಸಲಾಯಿತು. ಸೇಂಟ್ ಮೇರೀಸ್ ಚರ್ಚ್‌ನ ನಿರ್ಮಾಣ 1850 ರಲ್ಲಿ ಪೂರ್ಣಗೊಂಡಿತು.

ಸೇಂಟ್ ಮೇರೀಸ್ ಚರ್ಚ್

ಸೇಂಟ್ ಮೇರೀಸ್ ಚರ್ಚ್ ಭಾರತದ ಸಿಕಂದರಾಬಾದ್ ನಗರದಲ್ಲಿರುವ ಅತ್ಯಂತ ಹಳೆಯ ರೋಮನ್ ಕ್ಯಾಥೋಲಿಕ್ ಚರ್ಚ್ ಆಗಿದೆ. ಇದು ಪೂಜ್ಯ ಕನ್ಯಾ ಮೇರಿಗೆ ಸಮರ್ಪಿತವಾಗಿದೆ.[೧] ಚರ್ಚ್‌ನ ಪಕ್ಕದಲ್ಲಿ ಸೇಂಟ್ ಆ್ಯನ್ಸ್ ಕಾನ್ವೆಂಟ್ ಇದೆ, ಇದು ಸಿಕಂದರಾಬಾದ್‌ನ ಸೇಂಟ್ ಆ್ಯನ್ಸ್ ಪ್ರೌಢಶಾಲೆಯನ್ನು ನಡೆಸುತ್ತದೆ.

ಇತಿಹಾಸ

ಫ಼ಾದರ್ ಡ್ಯಾನಿಯಲ್ ಮರ್ಫ಼ಿ 1839 ರಲ್ಲಿ ಭಾರತಕ್ಕೆ ಆಗಮಿಸಿದರು ಮತ್ತು 1840ರಲ್ಲಿ ಸೇಂಟ್ ಮೇರೀಸ್ ಚರ್ಚ್ ಅನ್ನು ಕ್ಯಾಥೆಡ್ರಲ್ ಆಗಿ ನಿರ್ಮಿಸಲು ಪ್ರಾರಂಭಿಸಿದರು. ಇದು 1850 ರಲ್ಲಿ ಪೂರ್ಣಗೊಂಡಿತು ಮತ್ತು ಆಶೀರ್ವದಿಸಲ್ಪಟ್ಟಿತು ಮತ್ತು ಆ ಸಮಯದಲ್ಲಿ ಹೈದರಾಬಾದ್ ರಾಜ್ಯದ ಅತಿದೊಡ್ಡ ಚರ್ಚ್ ಆಗಿತ್ತು.[೨]

ವಾಸ್ತುಕಲೆ

ಚರ್ಚ್ ಭಾರತೀಯ ಗೋಥಿಕ್ ಶೈಲಿಗೆ ಒಂದು ವಿಶಿಷ್ಟ ಉದಾಹರಣೆಯಾಗಿದೆ. ಬಾಗಿದ ಕಮಾನುಗಳು ಮತ್ತು ಮೊನಚಾದ ಆನಿಕೆಗಳನ್ನು ಹೊಂದಿದೆ. ಇತರ ಕ್ಯಾಥೋಲಿಕ್ ಚರ್ಚುಗಳಂತೆ, ಸೇಂಟ್ ಮೇರೀಸ್ ಸಂತರಿಗೆ ಮೀಸಲಾಗಿರುವ ಹಲವಾರು ಪಕ್ಕದ ಬಲಿಪೀಠಗಳನ್ನು ಹೊಂದಿದೆ.

ಗಂಟೆಗಳು

ಸೆಂಟ್ ಮೇರೀಸ್ ಚರ್ಚ್, ಕ್ರಿಸ್ಮಸ್ ಮುನ್ನಾದಿನದಂದು ಮಧ್ಯರಾತ್ರಿಯ ಮಾಸ್ ತಯಾರಿಗಾಗಿ ಅಲಂಕರಿಸಲ್ಪಟ್ಟಿದೆ

ಚರ್ಚ್ ನಾಲ್ಕು ಗಂಟೆಗಳನ್ನು ಹೊಂದಿದೆ. ಇವುಗಳನ್ನು 1901 ರಲ್ಲಿ[೩] ಇಟಲಿಯಿಂದ ತರಲಾಯಿತು. ಗಂಟೆಗಳ ಪೈಕಿ ಒಂದರಲ್ಲಿ ಬಿರುಕುಗಳು ಮೂಡಿವೆ ಎಂದು ವರದಿಯಾಗಿದೆ.[೩]

ಉಲ್ಲೇಖಗಳು