ಹಾಚಿಕೋ

ಹಾಚಿಕೋ ( ನವೆ೦ಬರ್ ೧೦, ೧೯೨೩ - ಮಾರ್ಚ್ ೮, ೧೯೩೫) ಎಂಬುದು ಅಕಿತ ಎಂಬ ಜಾತಿಯ ನಾಯಿ. ಅಕಿತಾ ತಳಿಯು ಉತ್ತರ ಜಪಾನ್‌ನ ಪರ್ವತಗಳ ಮೂಲದ್ದಾಗಿದೆ.[೨] ಅವುಗಳನ್ನು ಕಾವಲು ಕಾಯಲು ಮತ್ತು ಕರಡಿಗಳ ಬೇಟೆಗಾಗಿ ಮಾತ್ರಾ ಬಳಸುತ್ತಿದ್ದರು.

ಹಾಚಿಕೋ (ハチ公?)
ಹಾಚಿಕೋ (c. 1934)
ತಳಿಗಳುನಾಯಿ (ಕ್ಯಾನಿಸ್ ಫ್ಯಾಮಿಲಿಯರಿಸ್)
Breedಅಕಿತಾ ಇನು
ಲಿಂಗಗಂಡು
Known forಅವನ ಮರಣದ ತನಕ ಒಂಬತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ ತನ್ನ ಮೃತ ಮಾಲೀಕರ ಮರಳುವಿಕೆಗಾಗಿ ನಿಷ್ಠೆಯಿಂದ ಕಾಯುತ್ತಿತ್ತು.
Awards
  • ಶಿಬುಯಾ ನಿಲ್ದಾಣದಲ್ಲಿ ಹಚಿಕೊನ ೧ ನೇ ಕಂಚಿನ ಪ್ರತಿಮೆ (ಸ್ಕ್ರ್ಯಾಪ್ ಮಾಡಲಾಗಿದೆ)
  • ಶಿಬುಯಾ ನಿಲ್ದಾಣದಲ್ಲಿ ಹಚಿಕೊನ ೨ ನೇ ಕಂಚಿನ ಪ್ರತಿಮೆ (ಅದು ಅಲ್ಲಿ ಕಾವಲು ಕಾಯುತ್ತಿತ್ತು)
  • ಹಚಿಕೊನ ಕಂಚಿನ ಪ್ರತಿಮೆಗಳು ಒಡಾಟೆ ನಿಲ್ದಾಣದಲ್ಲಿ
Ownerಹಿಡೆಸಾಬುರೊ ಯುನೊ
Weight41 kg (90 lb)
Height64 cm (25 in)[೧]
Appearanceಬಿಳಿ (ಪೀಚ್ ಬಿಳಿ)

ಹಾಚಿಕೋ ನವೆಂಬರ್ ೧೦, ೧೯೨೩ ರಂದು ಅಕಿತಾ ಪ್ರಿಫೆಕ್ಚರ್‌ನ, ಓಡೇಟ್ ನಗರದ ಸಮೀಪವಿರುವ ಜಮೀನಿನಲ್ಲಿ ಜನಿಸಿತು.[೩] ೧೯೨೪ ರಲ್ಲಿ, ಟೋಕಿಯೊ ಇಂಪೀರಿಯಲ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಹಿಡೆಸಾಬುರೊ ಯುನೊ ಅವರು ಅದನ್ನು ಸಾಕಲು ಟೋಕಿಯೊದ ಶಿಬುಯಾಕ್ಕೆ ಕರೆತಂದರು. ಹಾಚಿಕೋ ಪ್ರತಿದಿನ ಯುನೊ ಅವರು ನಿಲ್ದಾಣಕ್ಕೆ ಮರಳಿದ ನಂತರ ಶಿಬುಯಾ ನಿಲ್ದಾಣದಲ್ಲಿ ಅವರನ್ನು ಭೇಟಿಯಾಗುತ್ತಿತ್ತು. ಇದು ಮೇ ೨೧, ೧೯೨೫ ರವರೆಗೆ ಮುಂದುವರೆಯಿತು. ಒಮ್ಮೆ ಯುನೊ ಕೆಲಸದಲ್ಲಿರುವಾಗ ಮಿದುಳಿನ ರಕ್ತಸ್ರಾವದಿಂದ ನಿಧನರಾದರು. ಅಂದಿನಿಂದ ಮಾರ್ಚ್ ೮, ೧೯೩೫ ರಂದು ಅವನ ಮರಣದ ತನಕ, ಹಚಿಕೋ ಪ್ರತಿದಿನ ಶಿಬುಯಾ ನಿಲ್ದಾಣಕ್ಕೆ ಹೋಗಿ ಯುನೊ ಅವರನ್ನು ಕಾಣದೆ ಹಿಂದಿರುಗುತ್ತಿತ್ತು.

ಹಾಚಿಕೋ ಇ೦ದಿಗೂ ಅದರ ನೀಯತ್ತಿಗೆ ಜಗತ್‌ಪ್ರಸಿದ್ಧವಾಗಿದೆ . ಅದರ ನಿಯತ್ತು , ತನ್ನನು ಸಾಕಿದ ವ್ಯಕ್ತಿ ಸತ್ತು ಹತ್ತು ವರ್ಷಗಳಾದರೂ ಸತತವಾಗಿ ಮು೦ದುವರೆಯಿತು. ಜಪಾನಿ ಭಾಷೆಯಲ್ಲಿ ಹಾಚಿಕೋನನ್ನು ಛೂಕೆನ್ ಹಾಚಿಕೋ ( ನೀತಿಯ ನಾಯಿ ಹಾಚಿಕೊ ) ಎ೦ದು ಕರೆಯುತ್ತಾರೆ .'ಹಾಚಿ' ಎ೦ದರೆ ಎ೦ಟು ಮತ್ತು 'ಕೋ' ಎ೦ದರೆ ಪ್ರೀತಿ ಎ೦ದು ಅರ್ಥ. ಹಚಿಕೋ ಜಪಾನಿನ ಸಂಸ್ಕೃತಿಯಲ್ಲಿ ನೀತಿ ಮತ್ತು ನಿಷ್ಠೆಗೆ ಪ್ರಸಿದ್ಧವಾಗಿದೆ. ಹಚಿಕೋ ಸತ್ತ ನ೦ತರವೂ ಅದರ ಪ್ರತಿಮೆ, ಪುಸ್ತಕ, ಚಲನಚಿತ್ರ, ಮಾಧ್ಯಮಗಳ ಮೂಲಕ ಇ೦ದಿಗೂ ಜಗತ್ತಿನಲ್ಲಿ ಬದುಕುಳಿದಿದೆ.[೪]

ಜೀವನ

ಅಪರಿಚಿತ ಕುಟುಂಬದೊಂದಿಗೆ ಹಾಚಿಕೋ
ತೈಶೋ ಮತ್ತು ಯುದ್ಧದ ಪೂರ್ವದ ಶೊವಾ ಯುಗಗಳಲ್ಲಿ (೧೯೧೨-೧೯೪೫) ಶಿಬುಯಾ ನಿಲ್ದಾಣ

೧೯೨೪ ರಲ್ಲಿ, ಹಿಡೆಸಾಬುರೊ ಉನೊ ಎ೦ಬ ವ್ಯಕ್ತಿ, ಟೋಕಿಯೋ ವಿಶ್ವವಿದ್ಯಾಲಯದಲ್ಲಿ ಕೃಷಿ ಇಲಾಖೆ ಪ್ರೊಫೆಸರ್ ಆಗಿ ಸೇವೆ ಸಲಿಸುತ್ತಿದರು. ಇವರು ಒಂದು ಗೋಲ್ಡನ್ ಬ್ರೌನ್ ಅಕಿತವನ್ನು ಸಾಕುಪ್ರಾಣಿಯಾಗಿ ತೆಗೆದುಕೊಂಡರು.[೫] ಅದಕ್ಕೆ ಹಾಚಿಕೋ ಎ೦ದು ಹೆಸರಿಟ್ಟರು. ಹಿಡೆಸಾಬುರೊ ಉನೊ ಅವರ ಜೀವಿತಾವಧಿಯಲ್ಲಿ ಹಾಚಿಕೋ ಹತ್ತಿರದ ಶಿಬುಯಾ ರೈಲು ನಿಲ್ದಾಣದಲ್ಲಿ ಪ್ರತಿನಿತ್ಯ ದಿನದ ಕೊನೆಯಲ್ಲಿ ಅವರನ್ನು ಸ್ವಾಗತಿಸುತ್ತಿತ್ತು. ಇದೇ ರೀತಿ ಮೇ ೧೯೨೫ ರವರೆಗೆ ಅವರಿಬ್ಬರ ದಿನಚರಿ ಮುಂದುವರೆಯಿತು. ಹಿಡೆಸಾಬುರೊ ಉನೊ ಮೆದುಳಿನ ರಕ್ತಸ್ರಾವದಿಂದ ಟೋಕಿಯೋ ವಿಶ್ವವಿದ್ಯಾಲಯದಲ್ಲಿಯೇ ಸತ್ತುಹೊದರು. ಆದ್ದರಿಂದ ಹಿಡೆಸಾಬುರೊ ಉನೊ ಪ್ರತಿನಿತ್ಯದ೦ತೆ ಅ೦ದು ಹಿಂದಿರುಗಲಿಲ್ಲ ಆದರೆ ಹಾಚಿಕೋ ಕಾತರಿಸುತ್ತ ರೈಲು ನಿಲ್ದಾಣದಲ್ಲಿಯೇ ಅವರಿಗಾಗಿ ಕಾಯುತಿತ್ತು. ಅವರು ಮುಂದೆ ಎಂದೂ ಹಿಂದಿರುಗಲಿಲ್ಲ ಆದರೂ ಹಾಚಿಕೋ ಅವರಿಗಾಗಿ ಮು೦ದಿನ ಒಂಬತ್ತು ವರ್ಷ, ಒಂಬತ್ತು ತಿಂಗಳು, ಹದಿನೈದು ದಿನಗಳ ಕಾಲ ಪ್ರತಿ ದಿನ ರೈಲು ನಿಲ್ದಾಣದಲ್ಲಿ ನಿಖರವಾಗಿ ಕಾಣಿಸಿಕೊಳುತಿತ್ತು. ಹಾಚಿಕೊ ಇತರ ಪ್ರಯಾಣಿಕರ ಗಮನ ಸೆಳೆಯಿತು. ಹಾಚಿಕೋ ಮತ್ತು ಪ್ರೊಫೆಸರ್ ಹಿಡೆಸಾಬುರೊ ಉನೊರ ಬಗ್ಗೆ ಲೇಖನ ಅಕ್ಟೋಬರ್ ೪, ೧೯೩೨ ರಂದು ಅಸಾಹಿ ಷಿಮ್ಬುನ್ ರಲ್ಲಿ ಮೊದಲ ಪ್ರದರ್ಶನಗೊ೦ಡಿತು. ಅನಂತರ ಜನರು ಹಾಚಿಕೋ ತನ್ನ ಮಾಲಿಕನನ್ನು ಪ್ರತಿನಿತ್ಯ ಕಾಯುವುದನ್ನು ಕ೦ಡು ಅದಕ್ಕೆ ತಿ೦ಡಿ ಮತ್ತು ಆಹಾರವನ್ನು ತರಲು ಆರಂಭಿಸಿದರು.

ಪ್ರಕಟಣೆ

ಶಿಬುಯಾ ನಿಲ್ದಾಣದಲ್ಲಿ ಹಾಚಿಕೋ, c. 1933

೧೯೩೨ ರಲ್ಲಿ ಉನೊರ ವಿದ್ಯಾರ್ಥಿಗಳಲ್ಲೊಬ್ಬನಾದ ಹಿರೊಕಿಚಿ ಸೈಟೋ (ಅಕಿತ ತಳಿ ಮೇಲೆ ಪರಿಣತಿಯನ್ನು ಅಭಿವೃದ್ಧಿ ಮಾಡುತ್ತಿದ್ದ) ಹಾಚಿಕೋನನ್ನು ಶಿಬುಯಾ ರೈಲು ನಿಲ್ದಾಣದಲ್ಲಿ ಕಂಡು, ಉನೊ ಅವರ ಕೊಬಯಾಷಿ (ಪ್ರೊಫೆಸರ್ ಹಿಡಿಸಾಬುರೊ ಉಇನೊರವರ ಮಾಜಿ ಗಾರ್ಡ್ನರ್ ಕಿಕುಜ಼ಬೊರೊ ಕೊಬಯಾಷಿಯ ಮನೆ ) ಮನೆಗೆ ಹೋಗುತ್ತಿದ್ದ ಹಾಚಿಕೋನನ್ನು ಹಿಂಬಾಲಿಸಿದ. ಅವನು ಹಚಿಕೋನ ಜೀವನದ ಇತಿಹಾಸವನ್ನು ಕಲಿತುಕೊಂಡರು. ಈ ಭೇಟಿಯಾದ ಕೆಲವೇ ದಿನಗಳ ನಂತರ ಅವರು ಜಪಾನ್‌ನಲ್ಲಿ ಅಕಿತಗಳ ಬಗ್ಗೆ ಒಂದು ಜನಗಣತಿಯನ್ನು ಪ್ರಕಟಿಸಿದರು. ಅವರ ಸಂಶೋಧನೆಯ ಪ್ರಕಾರ ಶಿಬುಯಾ ನಿಲ್ದಾಣದಲ್ಲಿ ಹಾಚಿಕೊ ಸೇರಿದಂತೆ ಇಡೀ ಜಪಾನ್‌ನಲ್ಲಿ ಕೇವಲ ೩೦ ಶುದ್ಧ ಅಕಿತ ತಳಿಗಳು ಕಂಡುಬಂದಿವೆ ಎ೦ದು ತಿಳಿಸಿದರು.

ಅವನು ಹಾಚಿಕೋನನ್ನು ಆಗಾಗ ಭೇಟಿಯಾಗುತ್ತ ಮುಂದಿನ ವರ್ಷಗಳಲ್ಲಿ ನಾಯಿಯ ಗಮನಾರ್ಹ ನಿಷ್ಠೆಯ ಬಗ್ಗೆ ಹಲವಾರು ಲೇಖನಗಳನ್ನು ಪ್ರಕಟಿಸಿದನು. ೧೯೩೨ ರಲ್ಲಿ ಅವನ ಒ೦ದು ಲೇಖನ ಟೋಕಿಯೋ ಅಸಾಹಿ ಶಿಮ್‌ಬುನ್‌ನಲ್ಲಿ ಪ್ರಕಟವಾದ ನ೦ತರ ಹಾಚಿಕೋನನ್ನು ರಾಷ್ಟ್ರೀಯ ಸ್ಪಾಟಲೈಟ್‌ನಲ್ಲಿ ಇರಿಸಲಾಯಿತು. ಹಾಚಿಕೋ ಒ೦ದು ರಾಷ್ಟ್ರೀಯ ಸಂವೇದನೆ ಆಯಿತು. ಅದರ ಮಾಲಿಕನ ನೆನಪು, ಅದರ ವಿಧೇಯತೆ, ಕುಟುಂಬ ನಿಷ್ಠೆ ಎಲ್ಲದರಿಂದ ಜಪಾನಿನ ಜನರು ಪ್ರಭಾವಿತರಾದರು. ಮಕ್ಕಳು ಅನುಸರಿಸಲೆಂದು ಶಿಕ್ಷಕರು ಮತ್ತು ಪೋಷಕರು ಹಾಚಿಕೋನ ಉದಾಹರಣೆಯಾಗಿ ಈಗಲೂ ಬಳಸುತ್ತಿದ್ದಾರೆ. ಜಪಾನ್‌ನ ಒಬ್ಬ ಪ್ರಸಿದ್ಧ ಕಲಾವಿದ ಹಾಚಿಕೋನ ಕೆತ್ತನೆಯನ್ನು ಪ್ರದರ್ಶಿಸಿದ. ನ೦ತರ ದೇಶದಾದ್ಯಂತ ಅಕಿತ ತಳಿಯ ಬಗ್ಗೆ ಒಂದು ಹೊಸ ಅರಿವು ಬೆಳೆಯಿತು.[೬]

ನಿಧನ

ಹಾಚಿಕೋನ ಕೊನೆಯ ಫೋಟೋದ ಬಣ್ಣನೆ - ಮಾರ್ಚ್ ೮, ೧೯೩೫ ರಂದು ಟೋಕಿಯೊದಲ್ಲಿ ಶೋಕದಲ್ಲಿರುವ ಅವರ ಮಾಲೀಕರ ಪಾಲುದಾರ ಯಾಕೊ ಯುನೊ (ಮುಂಭಾಗದ ಸಾಲು, ಬಲದಿಂದ ಎರಡನೇ) ಮತ್ತು ನಿಲ್ದಾಣದ ಸಿಬ್ಬಂದಿಯೊಂದಿಗೆ ಚಿತ್ರಿಸಲಾಗಿದೆ

ಹಾಚಿಕೋ ಹುಟ್ಟಿದ ದಿನಾಂಕವನ್ನು ಆಧರಿಸಿ, ಅದು ಅದರ ೧೨ ನೇ ವಯಸ್ಸಿನಲ್ಲಿ ಅಂದರೆ ಮಾರ್ಚ್ ೮, ೧೯೩೫ ರಂದು ನಿಧನವಾಯಿತು.[೭] ಹಾಚಿಕೋ ಶಿಬುಯಾದ ರಸ್ತೆಯಲ್ಲಿ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿತು. ಮಾರ್ಚ್ ೨೦೧೧ ರಲ್ಲಿ ವಿಜ್ಞಾನಿಗಳು ಅಂತಿಮವಾಗಿ ಹಾಚಿಕೋನ ಸಾವಿನ ಕಾರಣವನ್ನು ತಿಳಿದುಕೊಂಡರು . ಹಾಚಿಕೋಗೆ ಟರ್ಮಿನಲ್ ಕ್ಯಾನ್ಸರ್ ಮತ್ತು ಫೀಲೇರಿಯ ಸೋಂಕು ಎನ್ನುವ ಎರಡೂ ಕಾಯಿಲೆಗಳಿದ್ದವು . ಹಾಚಿಕೋನ ಹೊಟ್ಟೆಯಲ್ಲಿ ನಾಲ್ಕು ಯಕಿಟೋರಿ ಸ್ಕೀವರ್ಸ್ ಇದ್ದವು, ಆದರೆ ಇದರಿಂದ ಅದರ ಹೊಟ್ಟೆಗೆ ಹಾನಿ ಅಥವಾ ಅದರ ಸಾವು ಸಂಭವಿಸಿರಲಿಲ್ಲ.[೮][೯]

ಪರಂಪರೆ

ಹಾಚಿಕೋನ ಮರಣದ ನಂತರ ಅದರ ಅವಶೇಷಗಳನ್ನು ಸಮಾಧಿ ಮಾಡಲಾಯಿತು ಮತ್ತು ಹಾಚಿಕೋನ ಚಿತಾಭಸ್ಮವನ್ನು ಟೋಕಿಯೊದ ಎಒಯಾಮ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು. ಹಾಚಿಕೋನ ಅಚ್ಚುಮೆಚ್ಚಿನ ಮಾಲಿಕ, ಪ್ರೊಫೆಸರ್ ಹಿಡೆಸಾಬುರೊ ಉನೊ ರವರ ಸಮಾಧಿಯ ಪಕ್ಕದಲ್ಲಿ ಅದನ್ನು ಹೂಳಲಾಗಿತ್ತು. ಸಾವಿನ ನಂತರ ಹಾಚಿಕೊನ ತುಪ್ಪಳವನ್ನು ಸಂರಕ್ಷಿಸಿಡಲಾಗಿದೆ. ಅದನ್ನು ಈಗ ಟೋಕಿಯೋ ನ್ಯಾಷನಲ್ ಸೈನ್ಸ್ ಮ್ಯೂಸಿಯಂ, ಜಪಾನ್‌ನಲ್ಲಿ ಶಾಶ್ವತವಾಗಿ ಪ್ರದರ್ಶಿಸಲಾಗುತ್ತದೆ.[೧೦][೧೧][೧೨][೧೩]

ಕಂಚಿನ ಪ್ರತಿಮೆಗಳು

ಏಪ್ರಿಲ್ ೧೯೩೪ ರಲ್ಲಿ ಹಾಚಿಕೋನ ಹೋಲಿಕೆಯಲ್ಲಿ ಒಂದು ಕಂಚಿನ ಪ್ರತಿಮೆಯನ್ನು ಶಿಬುಯಾ ಸ್ಟೇಷನ್‌ನಲ್ಲಿ ಸ್ಥಾಪಿಸಲಾಯಿತು. ಹಾಚಿಕೋನ ಪ್ರತಿಮೆಯನ್ನು ಮಹಾಯುದ್ಧದ ಸಮಯದಲ್ಲಿ ಯುದ್ಧ ಸಾಧನೆಗಾಗಿ ಮರುಬಳಕೆಗೆ ವಿನಿಯೋಗಿಸಲಾಗಿತ್ತು.[೧೪] ೧೯೪೮ ರಲ್ಲಿ ಜಪಾನ್ ಸೊಸೈಟಿಯು ಹಾಚಿಕೋ ಪ್ರತಿಮೆಯನ್ನು ಪುನರ್ನಿರ್ಮಾಣಮಾಡಲು ಅದರ ಕಲಾವಿದನ ಮಗನಾದ ಟಕೇಶಿ ಆಂಡೋನನ್ನು ನೇಮಿಸಿತು .[೧೫][೧೬][೧೭] ಹೊಸ ಪ್ರತಿಮೆ ಪೂರ್ತಿಯಾದಾಗ, ಒಂದು ಸಮರ್ಪಣೆ ಸಮಾರಂಭ ಮಾಡಲಾಗಿತ್ತು.[೧೮] ಆಗಸ್ಟ್ ೧೯೪೮ ರಲ್ಲಿ ಪ್ರತಿಮೆ ಸ್ಥಾಪಿಸಲಾಯಿತು. ಆ ಪ್ರತಿಮೆ ಇನ್ನೂ ನಿಂತಿದೆ ಮತ್ತು ಜನಪ್ರಿಯ ಸಭೆಯ ತಾಣವಾಗಿದೆ. ಈ ಪ್ರತಿಮೆಯ ಬಳಿ ನಿಲ್ದಾಣದ ಪ್ರವೇಶ ಇದನ್ನು " ಹಾಚಿಕೋ - ಗುಚಿ " ಅ೦ದರೆ " ಹಾಚಿಕೊ ಪ್ರವೇಶ / ನಿರ್ಗಮನ " ಎಂದು ಕರೆಯುತ್ತಾರೆ ಮತ್ತು ಅದು ಶಿಬುಯಾ ನಿಲ್ದಾಣದ ಐದು ನಿರ್ಗಮನದಲ್ಲಿ ಒಂದಾಗಿದೆ.[೧೯][೨೦][೨೧]

ಹಾಚಿಕೋ ಕುಟುಂಬದ ಪುನರ್ಮಿಲನ

ಮಾರ್ಚ್ ೮, ೧೯೩೬, ಹಾಚಿಕೋ ಸಾವಿನ ಮೊದಲ ವಾರ್ಷಿಕೋತ್ಸವ
ಶಿಬುಯಾ ಹಚಿಕೋ ಮಿನಿಬಸ್

ಮೇ ೧೯, ೨೦೧೬ ರಂದು, ಯುನೊ ಮತ್ತು ಸಕಾನೊ ಕುಟುಂಬಗಳೊಂದಿಗೆ ಅಯೋಮಾ ಸ್ಮಶಾನದಲ್ಲಿ ನಡೆದ ಸಮಾರಂಭದಲ್ಲಿ, ಯಾಕೊ ಸಕಾನೊನ ಕೆಲವು ಚಿತಾಭಸ್ಮವನ್ನು ಉಯೆನೊ ಮತ್ತು ಹಾಚಿಕೋನೊಂದಿಗೆ ಸಮಾಧಿ ಮಾಡಲಾಯಿತು. ಅವಳ ಹೆಸರು ಮತ್ತು ಅವಳ ಸಾವಿನ ದಿನಾಂಕವನ್ನು ಬದಿಯಲ್ಲಿ ಕೆತ್ತಲಾಗಿದೆ.[೨೨]

"ಎರಡರ ಹೆಸರನ್ನು ಅವರ ಸಮಾಧಿಯ ಮೇಲೆ ಇರಿಸುವ ಮೂಲಕ, ಹಚಿಕೊ ಇಬ್ಬರು ಕೀಪರ್‌ಗಳನ್ನು ಹೊಂದಿದ್ದಾರೆ ಎಂಬ ಅಂಶವನ್ನು ನಾವು ಭವಿಷ್ಯದ ಪೀಳಿಗೆಗೆ ತೋರಿಸಬಹುದು" ಎಂದು ಶಿಯೋಜಾವಾ ಹೇಳಿದರು.

ಗ್ಯಾಲರಿ

ಉಲ್ಲೇಖಗಳು