ಅಜೀವಿಕರು

ಅಜೀವಿಕರುಬುದ್ಧ ಮತ್ತು ಮಹಾವೀರರ ಕಾಲದಲ್ಲಿ (ಕ್ರಿ.ಪೂ. 6ನೆಯ ಶತಮಾನ) ಭಿಕ್ಷಾಟನೆಯಿಂದ ಜೀವಿಸುತ್ತಿದ್ದ ಒಂದು ಪಂಥದ ಅನುಯಾಯಿಗಳು.

ಸ್ಥಾಪನೆ

ಗೊಸಾಲ ಮಂಖಲಿ ಪುತ್ತ ಈ ಪಂಥದ ಸ್ಥಾಪಕ.

ಸಿದ್ಧಾಂತಗಳು

ಅಜೀವವೆಂದರೆ ಜೀವನಕ್ರಮ, ಕರ್ಮದ ಶೃಂಖಲೆಯಿಂದ ಮುಕ್ತನಾಗುವವನೇ ಅಜೀವಿಕ, ಭಿಕ್ಷಾಟನೆಯೇ ಇವನ ಜೀವನವೃತ್ತಿ ಎಂದು ಗೊಸಾಲ ಹೇಳಿರುವನು.ಪುರುಷ ಪ್ರಯತ್ನದ ಮೇಲೆ ಯಾವುದೂ ಆಧಾರಗೊಂಡಿಲ್ಲ. ಮನುಷ್ಯರಲ್ಲಿ ಕಂಡುಬರುವ ವ್ಯತ್ಯಾಸಕ್ಕೆ, ಭ್ರಷ್ಟತೆಗೆ, ಪಾತಿತ್ಯಕ್ಕೆ ವಿಧಿ(ವಾತಾವರಣ, ಸ್ವಭಾವ) ಕಾರಣವೆಂದು ಈ ಪಂಥದ ತತ್ವ.

The 3rd century BCE mendicant caves of the Ājīvikas (Barabar, near Gaya, Bihar).[೧]

ಬೌದ್ಧಮತದ ಪ್ರಕಾರ ಭಿಕ್ಷುಗಳು ಅನುಸರಿಸಬೇಕಾದ ಎಂಟರಲ್ಲಿ ಸಮ್ಯಕ್-ಜೀವನ ಒಂದು ಮುಖ್ಯ ಮಾರ್ಗ. ಮಹಾವೀರನಿಗೆ ಗೊಸಾಲನ ಪರಿಚಯವಿತ್ತು. ಅಪ್ರಾಮಾಣಿಕನೆಂದು ತಿಳಿದ ಮೇಲೆ ಗೋಸಾಲನ ಸ್ನೇಹ ಬಿಟ್ಟನು. ಮತ್ತೆ ಇವರಿಬ್ಬರು ಕಕ್ಷಿ-ಪ್ರತಿಕಕ್ಷಿಗಳಾಗಿ ಸಂಧಿಸಿ ಹೋರಾಡಿದರು. ಕೊನೆಗೆ ತನ್ನ ಹೀನ ಕೃತ್ಯಗಳನ್ನು ಒಪ್ಪಿಕೊಂಡ ಗೋಸಾಲ ಮಹಾವೀರನ ಶಿಷ್ಯನಾದ. ಅಜೀವಿಕರಿಗೆ ದಶರಥ (ಅಶೋಕನ ಮೊಮ್ಮಗ) ಗುಹೆಗಳಲ್ಲಿ ಕೆಲವು ಆಶ್ರಮಗಳನ್ನು ಕೊಟ್ಟಿದ್ದನು.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ