ಅಮರಾವತಿ (ರಾಜಧಾನಿ)

ಅಂದ್ರಪ್ರದೇಶದ ಒಂದು ನಗರ
ಇದು ಆಂಧ್ರ ಪ್ರದೇಶದ ರಾಜಧಾನಿಯ ಲೇಖನವಾಗಿದೆ. ಇದೇ ಹೆಸರಿನ ಬೇರೆ ಲೇಖನಗಳಿಗಾಗಿ ಅಮರಾವತಿ (ದ್ವಂದ್ವ ನಿವಾರಣೆ) ನೋಡಿ.

ಅಮರಾವತಿ ಆಂಧ್ರ ಪ್ರದೇಶ ರಾಜ್ಯದ ಹೊಸ ರಾಜಧಾನಿಯಾಗಿದೆ.[೪] ಈ ನಗರ ಆಂಧ್ರ ಪ್ರದೇಶ ರಾಜಧಾನಿ ಪ್ರಾಂತ್ಯಕ್ಕೆ ಸೇರಿರುವ ಗುಂಟೂರು ಜಿಲ್ಲೆಯ ಕೃಷ್ಣ ನದಿಯ ದಕ್ಷಿಣ ದಡದಲ್ಲಿದೆ.[೫] ಈ ಯೋಜನಾಬದ್ಧ ನಗರದ ಶಂಕುಸ್ಥಾಪನೆ ಪ್ರಧಾನಿ ನರೇಂದ್ರ ಮೋದಿಯವರಿಂದ ೨೦೧೫ ಅಕ್ಟೋಬರ್ ೨೨ರಂದು ನಡೆಯಿತು.[೬] ಗುಂಟೂರು ಮತ್ತು ವಿಜಯವಾಡ ರಾಜಧಾನಿಗೆ ಸಮೀಪವಿರುವ ಪ್ರಮುಖ ನಗರಗಳು.[೭]

ಅಮರಾವತಿ
అమరావతి
ದೇಶಭಾರತ
ರಾಜ್ಯಆಂಧ್ರ ಪ್ರದೇಶ
ಜಿಲ್ಲೆಗುಂಟೂರು
Government
 • Typeಪ್ರಾದೇಶಿಕ ಪ್ರಾಧಿಕಾರ
 • Bodyಆಂಧ್ರ ಪ್ರದೇಶ ರಾಜಧಾನಿ ಪ್ರಾಂತ್ಯ ಅಭಿವೃದ್ಧಿ ಪ್ರಾಧಿಕಾರ
Area
 • ನಗರ೨೧೭.೨೩ km (೮೩.೮೭ sq mi)
 • Metro೮,೩೫೨.೬೯ km (೩,೨೨೪.೯೯ sq mi)
Population
 (೨೦೧೧)[೩]
 • ನಗರ೧,೦೩,೦೦೦
Time zoneUTC+5:30 (ಭಾರತೀಯ ಕಾಲಮಾನ)
ಪಿನ್ ಕೋಡ್
520 xxx, 521 xxx, 522 xxx
Vehicle registrationAP 07 , AP 16
ಅಧಿಕೃತ ಭಾಷೆತೆಲುಗು
Websiteಅಮರಾವತಿಯ ಅಧಿಕೃತ ಜಾಲತಾಣ

ಹೆಸರಿನ ಹಿನ್ನಲೆ

ಹೊಸ ರಾಜಧಾನಿಗೆ ಗುಂಟೂರು ಜಿಲ್ಲಿಯಲ್ಲಿಯೇ ಇರುವ ಐತಿಹಾಸಿಕ ಸ್ಥಳ ಹೆಸರಿಡಲಾಗಿದೆ. ಅದು ಬೌದ್ಧರ ಸಾಂಸ್ಕೃತಿಕ ಕೇಂದ್ರವಾಗಿತ್ತು ಮತ್ತು [[ಶಾತವಾಹನರು|ಶಾತವಾಹನರ] ರಾಜಧಾನಿಯೂ ಆಗಿತ್ತು.<ref ಅಮರಾವತಿಯ,[೫]</ref>

ಇತಿಹಾಸ

ಆಂಧ್ರ ಪ್ರದೇಶ ಪುನರ್ ಸಂಘಟನಾ ಕಾಯ್ದೆಯ (೨೦೧೪) ಪ್ರಕಾರ, ಆಂಧ್ರಪ್ರದೇಶದ ಇಬ್ಭಾಗಿಸುವಿಕೆಯ ನಂತರ, ಹೈದರಾಬಾದ್ ಹೊಸತಾಗಿ ರಚಿತವಾದ ರಾಜ್ಯ ತೆಲಂಗಾಣದ ರಾಜಧಾನಿಯಾಯಿತು. ಹೈದರಾಬಾದನ್ನು ಹತ್ತು ವರ್ಷಗಳ ಕಾಲ ಎರಡೂ ರಾಜ್ಯಗಳ ಜಂಟಿ ರಾಜಧಾನಿಯಾಗಿ ಉಳಿಸಲಾಯಿತು. ಆದ್ದರಿಂದ ಆಂಧ್ರಪ್ರದೇಶದ ರಾಜಧಾನಿಯಾಗಿ ಅಮರಾವತಿಯನ್ನು ನಿರ್ಮಿಸಲಾಗುತ್ತಿದೆ.[೮]

ಶಂಕುಸ್ಥಾಪನೆ

ನಗರದ ಶಂಕುಸ್ಥಾಪನೆ ೨೨ ಅಕ್ಟೋಬರ್ ೨೦೧೫ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಉದ್ದಂಡರಾಯುನಿಪಾಲೇಮ್‍ನಲ್ಲಿ ನೆರವೇರಿಸಿದರು. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ಜಪಾನಿನ ಆರ್ಥಿಕ ವ್ಯಾಪಾರ ಮತ್ತು ಉದ್ಯಮ ಸಚಿವ ಯೋಸುಕೆ ತಕಗಿ, ಮತ್ತು ಸಿಂಗಪುರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ, ಎಸ್. ಈಶ್ವರನ್ ಹಾಜರಿದ್ದರು.[೯][೬]

ವಸ್ತುತಃ ರಾಜಧಾನಿ

ಅಕ್ಟೋಬರ್ ೨೦೧೬ರ ವೇಳೆಗೆ, ಆಂಧ್ರ ಪ್ರದೇಶ ರಾಜ್ಯ ಸರ್ಕಾರದ ಬಹುತೇಕ ವಿಭಾಗಗಳು ಮತ್ತು ಅಧಿಕಾರಿಗಳು ಅಮರಾವತಿಯ ವೆಲಗಪುಡಿಯಿಂದ ಮಧ್ಯಂತರ ಸೌಲಭ್ಯಗಳೊಂದೆಗೆ ಕಾರ್ಯವಹಿಸುತ್ತಿದ್ದಾರೆ. ಕೆಲವೇ ಸಿಬ್ಬಂದಿ ಹೈದರಾಬಾದಿನಲ್ಲಿ ಹಿಂದುಳಿದ ಕಾರ್ಯವಹಿಸುತ್ತಿದ್ದಾರೆ.[೧೦] ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಏಪ್ರಿಲ್ ೨೦೧೬ರಿಂದ ವೆಲಗಪುಡಿಯಲ್ಲಿ ಕೆಲಸ ಆರಂಭಿಸಿದರು. ಪ್ರಸ್ತುತ ಆಂಧ್ರ ಪ್ರದೇಶದ ವಿಧಾನಸಭೆ ಹೈದರಾಬಾದಿನಲ್ಲಿ ಉಳಿದಿದೆ ಆದರೆ ೨೦೧೭ರಲ್ಲಿ ಮಧ್ಯಂತರ ಶಾಸಕಾಂಗ ಕಟ್ಟಡಗಳು ಪೂರ್ಣಗೊಂಡ ನಂತರ ವೆಲಗಪುಡಿಗೆ ಅದನ್ನು ಸ್ಥಳಾಂತರಿಸಲು ಯೋಜನೆ ಇದೆ.[೧೧]

ಭೂಗೋಳ

ನಗರವನ್ನು ಗುಂಟೂರು ಜಿಲ್ಲೆಯ ಕೃಷ್ಣಾ ನದಿಯ ದಂಡೆಯಲ್ಲಿ ನಿರ್ಮಿಸಲಾಗುತ್ತಿದೆ. ನಗರವು ವಿಜಯವಾಡದಿಂದ ೧೨ ಕಿಲೋಮೀಟರ್ ನೈಋತ್ಯಕ್ಕೆ ಮತ್ತು ಗುಂಟೂರಿಂದ ೨೪ ಕಿಲೋಮೀಟರ್ ಉತ್ತರಕ್ಕೆ ಇರುತ್ತದೆ.[೧೨]

ಆಡಳಿತ

ಕಾರ್ಯನಿರ್ವಹಣೆ

ಅಮರಾವತಿಯ ನಗರ ಯೋಜನೆ ಚಟುವಟಿಕೆಗಳನ್ನು ಆಂಧ್ರಪ್ರದೇಶ ರಾಜಧಾನಿ ಪ್ರಾಂತ್ಯ ಅಭಿವೃದ್ಧಿ ಪ್ರಾಧಿಕಾರ ಕೈಗೊಂಡಿದೆ.[೧೩] [೧೪] ವೆಲಗಪುಡಿಯ ರಾಜ್ಯ ಸರ್ಕಾರದ ಸಚಿವಾಲಯ ಸರ್ಕಾರಿ ನೌಕರರಿಗೆ ಆಡಳಿತ ಘಟಕವಾಗಿದೆ.[೧೫]

ಅಧಿಕಾರ ವ್ಯಾಪ್ತಿಮತ್ತು ಯೋಜನೆಗಳು

ರಾಜಧಾನಿಯು ೨೧೭.೨೩ ಚದುರ ಕಿಮಿ (೮೩.೮೭ ಚದರ ಮೈಲಿ) ವಿಸ್ತೀರ್ಣದಲ್ಲಿ ಹರಡಿದೆ. ಮಂಗಳಗಿರಿ, ತುಲ್ಲೂರು ಮತ್ತು ತಡೇಪಲ್ಲಿ ಮಂಡಲಗಳ ಹಳ್ಳಿಗಳನ್ನು ಒಳಗೊಂಡಿದೆ. ಸುಮಾರು ೪ ಬಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹೊಸ ನಗರಕ್ಕೆ ಕೇಂದ್ರ ಸರ್ಕಾರದಿಂದ ಬಹಳಷ್ಟು ಆರ್ಥಿಕ ಬೆಂಬಲ ದೊರೆತಿದೆ. ಪ್ರಸ್ತುತ ಉದ್ದೇಶಿತ ಪ್ರದೆಶ ೩೦ ಹಳ್ಳಿಗಳನ್ನೊಳಗೊಂಡು ೩೫೦೦೦ ಎಕರೆ ಹರಡಿದೆ.[೧೬]

ಸಾರಿಗೆ ವ್ಯವಸ್ಥೆ

ವಿಜಯವಾಡ-ಅಮರಾವತಿ ಮತ್ತು ಗುಂಟೂರು-ತುಲ್ಲೂರು ರಸ್ತೆಗಳು ಕ್ರಮವಾಗಿ ವಿಜಯವಾಡ ಮತ್ತು ಗುಂಟೂರು ನಗರಗಳಿಂದ ಅಮರಾವತಿಗೆ ಸಂಪರ್ಕ ಕಲ್ಪಿಸುತ್ತವೆ.[೧೭] ಎ.ಪಿ.ಎಸ್.ಆರ್.ಟಿ.ಸಿ ಬಸ್ಸುಗಳು ವಿಜಯವಾಡದ ನೆಹರು ಬಸ್ ನಿಲ್ದಾಣದಿಂದ ಮತ್ತು ಗುಂಟೂರು ಎನ್.ಟಿ.ಆರ್ ಬಸ್ ನಿಲ್ದಾಣದಿಂದ ಈ ಮಾರ್ಗದಲ್ಲಿ ಕಾರ್ಯ ನಿರ್ವಹಿಸುತ್ತವೆ.[೧೮] ಅಮರಾವತಿ ಸೀಡ್ ಕ್ಯಾಪಿಟಲ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ೧೬ರಿಂದ ರಾಜಧಾನಿಗೆ ಪ್ರವೇಶಿಸಲು ಪ್ರಸ್ತಾಪಿಸಲಾಗಿದೆ.[೧೯]

ಎ.ಪಿ.ಎಸ್.ಆರ್.ಟಿ.ಸಿ ಎರಡು ಡಿಪೊಗಳು (ಪೂರ್ವ/ಪಶ್ಚಿಮ) ಮತ್ತು ಒಂಬತ್ತು ಉತ್ತಮ ದರ್ಜೆಯ ಟರ್ಮಿನಲ್‍ಗಳನ್ನು ನಿರ್ಮಿಸಲಿದೆ. ಅವುಗಳ ತಮ್ಮ ವಿನ್ಯಾಸ ಮತ್ತು ನಗರದ ಪ್ರಯಾಣಿಕರ ಅನುಕೂಲಕ್ಕೆ ಪ್ರಸಿದ್ದವಾಗಲಿವೆ.[೨೦]

ಉಲ್ಲೇಖಗಳು