ಕವಲುದಾರಿ

ಹೇಮಂತ್ ರಾವ್ ನಿರ್ದೇಶನದ ೨೦೧೮ ರ ಚಲನಚಿತ್ರ

ಕವಲುದಾರಿ ಇದು ೨೦೧೯ರ ಭಾರತೀಯ, ಕನ್ನಡ ಭಾಷೆಯ ಚಲನಚಿತ್ರವಾಗಿದ್ದು ಇದನ್ನು ಹೇಮಂತ್ ರಾವ್ ರವರು ಬರೆದು ನಿರ್ದೇಶಿಸಿದ್ದಾರೆ.[೧] ಪಿ.ಆರ್.ಕೆ ಪ್ರೊಡಕ್ಷನ್ ನ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಿಸಿ, ಪುನೀತ್ ರಾಜ್‍ಕುಮಾರ್ ರವರು ಪ್ರಸ್ತುತ ಪಡಿಸಿದ್ದಾರೆ.[೨] ಈ ಚಿತ್ರದಲ್ಲಿ ಅನಂತ್ ನಾಗ್,[೩][೪] ರಿಷಿ,[೨] ಅಚ್ಯುತ್ ಕುಮಾರ್,ಸುಮನ್ ರಂಗನಾಥ್, ರೋಷಿಣಿ ಪ್ರಕಾಶ್[೫] ಮತ್ತು ಸಿದ್ಧಾರ್ಥ್ ಮಾಧ್ಯಮಿಕ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.[೬] ಈ ಚಿತ್ರದ ಹಿನ್ನಲೆ ಸಂಗೀತ ಮತ್ತು ಹಾಡುಗಳನ್ನು ಚರಣ್ ರಾಜ್ ರವರು ಸಂಯೋಜಿಸಿದ್ದಾರೆ. ಈ ಚಿತ್ರವು ಇದೀಗ ತಮಿಳು, ಹಿಂದಿ ಮತ್ತು ತೆಲುಗುವಿನಲ್ಲಿ ರಿಮೇಕ್ ಆಗುತ್ತಿದೆ.[೭] [೮]

ಕವಲುದಾರಿ
ಚಲನಚಿತ್ರದ ಪೋಸ್ಟರ್
ನಿರ್ದೇಶನಹೇಮಂತ್ ರಾವ್
ನಿರ್ಮಾಪಕಅಶ್ವಿನಿ ಪುನೀತ್ ರಾಜಕುಮಾರ್
ಚಿತ್ರಕಥೆಹೇಮಂತ್ ರಾವ್
ಕಥೆಹೇಮಂತ್ ರಾವ್
ಪಾತ್ರವರ್ಗ
ಸಂಗೀತಚರಣ್ ರಾಜ್
ಛಾಯಾಗ್ರಹಣಅದ್ವೈತ ಗುರುಮೂರ್ತಿ
ಸ್ಟುಡಿಯೋಪಿ.ಆರ್.ಕೆ ಪ್ರೊಡಕ್ಷನ್ಸ್
ಬಿಡುಗಡೆಯಾಗಿದ್ದು
  • ಏಪ್ರಿಲ್ 12, 2019 (2019-04-12)
ದೇಶಭಾರತ
ಭಾಷೆಕನ್ನಡ

ಸಾರಾಂಶ

ಟ್ರಾಫಿಕ್ ಪೊಲೀಸ್ ಶ್ಯಾಮ್ (ರಿಷಿ), ಸಂಚಾರವನ್ನು ನಿಭಾಯಿಸುವ ತನ್ನ ದಿನಚರಿಯಿಂದ ಬೇಸರಗೊಂಡಿದ್ದಾನೆ. ಅವನು ಅಧಿಕೃತ ಅನುಮತಿಯಿಲ್ಲದೆ ಪ್ರಕರಣಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಪ್ರಾರಂಭಿಸುತ್ತಾನೆ ಮತ್ತು ಅದು ಅವನ ಡಿಪಾರ್ಟ್ಮೆಂಟ್ ನವರೊಂದಿಗೆ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಂತರ ಅವನು ಮೆಟ್ರೊ ನಿರ್ಮಾಣ ಸ್ಥಳದ ಬಳಿ ಮೂರು ತಲೆಬುರುಡೆಗಳು ಕಂಡುಬಂದಿರುವ ಪ್ರಕರಣವನ್ನು ತೆಗೆದುಕೊಳ್ಳುತ್ತಾನೆ. ಈ ನಡುವೆ ಅವನು ಪತ್ರಕರ್ತ ಕುಮಾರ್ (ಅಚ್ಯುತ್ ಕುಮಾರ್) ನನ್ನು ಭೇಟಿಯಾಗುತ್ತಾನೆ. ಅಪರಾಧ ತನಿಖಾ ತಂಡವು ಕೈಬಿಟ್ಟಿದ್ದ ಈ ಪ್ರಕರಣವನ್ನು ಈತ ಮುಂದುವರಿಸುತ್ತಾನೆ. ಇದನ್ನು ತನಿಖೆ ಮಾಡುತ್ತಾ ಮಾಡುತ್ತಾ ೪೦ ವರ್ಷಗಳ ಹಿಂದೆ ಇದೇ ಪ್ರಕರಣದ ತನಿಖೆ ನಡೆಸಿದ್ದ ಮುತ್ತಣ್ಣ (ಅನಂತ್ ನಾಗ್) ರನ್ನು ಭೇಟಿಯಾಗಲು ಹೋಗುತ್ತಾನೆ. ಮುತ್ತಣ್ಣ ಅವರ ಕುಟುಂಬದ ಮರಣದ ನಂತರ ಕೆಲಸದಿಂದ ಸ್ವಯಂಪ್ರೇರಿತವಾಗಿ ನಿವೃತ್ತಿ ಪಡೆದಿರುತ್ತಾರೆ. ಅವರು ಶ್ಯಾಮ್ ಗೆ ಸಹಾಯ ಮಾಡಲು ಮೊದಲು ನಿರಾಕರಿಸುತ್ತಾರೆ. ಒಂದೆರಡು ಬಾರಿ ಅವನನ್ನು ಕೊಲ್ಲಲು ಕೂಡ ಪ್ರಯತ್ನಿಸುತ್ತಾರೆ. ಆದರೆ ಶ್ಯಾಮ್ ಅವರೊಳಗಿನ ಪೊಲೀಸ್ ಅನ್ನು ಹೊಡೆದೆಬ್ಬಿಸುತ್ತಾನೆ. ತನಿಖೆಯಲ್ಲಿ ಆ ಮೂಳೆಗಳು ಪುರಾತತ್ವ ಅಧಿಕಾರಿ ನಾಯ್ಡು ಮತ್ತು ಅವರ ಪತ್ನಿ ಮತ್ತು ಮಗಳಿಗೆ ಸೇರಿದವು ಎಂದು ಶ್ಯಾಮ್ ಗೆ ತಿಳಿಯುತ್ತದೆ. ೪೦ ವರ್ಷಗಳ ಹಿಂದೆ ಮುತ್ತಣ್ಣ ತನಿಖೆ ನಡೆಸಿದ ಕಾಣೆಯಾದ ವ್ಯಕ್ತಿ ಪ್ರಕರಣ. ಮುತ್ತಣ್ಣ ಮತ್ತು ಶ್ಯಾಮ್ ಇಬ್ಬರು ಸೇರಿ ಈ ಪ್ರಕರಣವನ್ನು ತನಿಖೆ ಮಾಡಲು ಆರಂಭಿಸುತ್ತಾರೆ. ನಾಯ್ಡು ಗೆ ಪುರಾತತ್ವ ಇಲಾಖೆಯಲ್ಲಿ ಬಹಳ ಬೆಲೆ ಬಾಳುವ ವಿಗ್ರಹಗಳು ಸಿಕ್ಕಿರುತ್ತದೆ. ಆ ಕಾರಣದಿಂದಲೇ ಅವನ್ನು ಕೊಲ್ಲಲಾಗಿದೆ ಎಂದು ಮುತ್ತಣ್ಣ ಮತ್ತು ಶ್ಯಾಮ್ ಊಹಿಸುತ್ತಾರೆ. ಅವರಿಗೆ ನಾಯ್ಡು ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಅವನಿಗೆ ಆಪ್ತರಾಗಿದ್ದ ವ್ಯಕ್ತಿಗಳ ಬಗ್ಗೆ ಅನುಮಾನ ಬಂದು ಅವರೆನ್ನಲ್ಲಾ ಹುಡುಕಲು ಶುರು ಮಾಡುತ್ತಾರೆ. ಕೊನೆಯಲ್ಲಿ ಕುಮಾರ್ ನಿಜವಾದ ಒಬ್ಬ ಪರ್ಪ್ಯುಟೇಟರ್ ಎಂದು ತಿಳಿದುಬರುತ್ತದೆ, ಆ ಸಮಯದಲ್ಲಿ ನಾಯ್ಡುವಿನ ಚಾಲಕನಾಗಿದ್ದ ಫರ್ನಾಂಡಿಸ್ ಜೊತೆ ಸೇರಿ ನಾಯ್ಡು ಮತ್ತು ಅವನ ಕುಟುಂಬವನ್ನು ಕೊಲೆ ಮಾಡಿರುವುದು ತಿಳಿಯುತ್ತದೆ. ಚಾಲಕನಾಗಿದ್ದ ಫರ್ನಾಂಡಿಸ್ ಕುಮಾರ್ ಗೆ ಮೋಸ ಮಾಡಿ ವಿಗ್ರಹ ಹಾಗೂ ಹಣವನ್ನೆಲ್ಲ ತೆಗೆದುಕೊಂಡು ಪರಾರಿಯಾಗುತ್ತಾನೆ. ಆತ ತಲೆ ಮರೆಸಿಕೊಂಡು ಮೈಲೂರು ಶ್ರೀನಿವಾಸ್ ಆಗಿ ತನ್ನದೇ ರಾಜಕೀಯ ಪಕ್ಷವನ್ನು ಕಟ್ಟಿರುತ್ತಾನೆ. ಇದೀಗ ಮುಖ್ಯಮಂತ್ರಿ ಆಗಲು ಕೂಡ ಮುಂದಾಗಿರುತ್ತಾನೆ. ಶ್ಯಾಮ್ ತನ್ನ ನಿರ್ದಾರವನ್ನು ತೆಗೆದುಕೊಳ್ಳುತ್ತಾನೆ. ಆತ ಫರ್ನಾಂಡಿಸ್ ನನ್ನು ಕುಮಾರ್ ನ ಸಹಾಯದಿಂದ ಹೋಲಿಯ ದಿನದಂದು ವಿಷ ಹಾಕಿಸಿ ನಾಯ್ಡು ಅನ್ನು ಕೊಂದ ರೀತಿಯಲ್ಲೇ ಸಾಯಿಸುತ್ತಾನೆ.

ಪಾತ್ರವರ್ಗ

  • ಅನಂತ್ ನಾಗ್, ಮುತ್ತಣ್ಣನಾಗಿ
  • ರಿಷಿ, ಶ್ಯಾಮ್ ಆಗಿ
  • ಅಚ್ಯುತ್ ಕುಮಾರ್, ಕುಮಾರ್/ಬಬ್ಲೂ ಆಗಿ
  • ಸುಮನ್ ರಂಗಾನಾಥನ್, ಮಾಧುರಿಯಾಗಿ
  • ರೋಷಿಣಿ ಪ್ರಕಾಶ್[೫], ಪ್ರಿಯಾ ಆಗಿ
  • ಅವಿನಾಶ್, ಲಕ್ಷ್ಮಣ್ ಆಗಿ
  • ಸಂಪತ್, ಮೈಲೂರ್ ಶ್ರೀನಿವಾಸ್/ಫರ್ನಾಂಡಿಸ್ ಆಗಿ
  • ಸಿದ್ದಾರ್ಥ ಮಾಧ್ಯಮಿಕ[೯], ಗುರುದಾಸ್ ನಾಯ್ಡು ಆಗಿ
  • ಭರತ್ ಗೌಡ, ಯುವ ಬಾಬ್ಲೂ ಆಗಿ
  • ಸುಲಿಲಿ ಕುಮಾರ್, ಲೋಕೇಶ್ ಆಗಿ
  • ಸಿರಿ ರವಿಕುಮಾರ್, ಗೀತಾ ಮುತ್ತಣ್ಣನಾಗಿ
  • ಶರ್ಮಿಳಾ ಎಸ್. ಕಾರ್ತಿಕ್, ತಿಮ್ಮಕ್ಕನಾಗಿ
  • ಕಿರಣ್ ಕುಮಾರ್, ಸೆಬಾಸ್ಟಿಯನ್ ಆಗಿ
  • ಹನುಮಂತೇ ಗೌಡ, ಕೆ. ಗಣಪತಿಯಾಗಿ
  • ರಮೇಶ್ ಪಂಡಿತ್, ಚಳಪತಿಯಾಗಿ

ಧ್ವನಿಸುರುಳಿ

Untitled

ಚರಣ್ ರಾಜ್ ಚಿತ್ರಕ್ಕೆ ಹಿನ್ನಲೆ ಸಂಗೀತ ಮತ್ತು ಹಾಡುಗಳನ್ನು ಸಂಯೋಜಿಸಿದ್ದಾರೆ.[೧೦] ಹಾಡುಗಳಿಗೆ ಸಾಹಿತ್ಯವನ್ನು ನಾಗಾರ್ಜುನ್ ಶರ್ಮಾ, ಧನಂಜಯ್ ರಂಜನ್ ಮತ್ತು ಕಿರಣ್ ಕಾವೇರಪ್ಪ ಅವರು ಬರೆದಿದ್ದಾರೆ.

ಹಾಡುಗಳು
ಸಂ.ಹಾಡುಸಾಹಿತ್ಯಗಾಯಕ(ರು)ಸಮಯ
1."ನಿಗೂಢ ನಿಗೂಢ"ನಾಗಾರ್ಜುನ ಶರ್ಮಾಸಂಜಿತ್ ಹೆಗಡೆ04:40
2."ಸಂಶಯ"ಧನಂಜಯ್ ರಂಜನ್ಅದಿತಿ ಸಾಗರ್02:42
3."ಇದೇ ದಿನ"ಧನಂಜಯ್ ರಂಜನ್ಸಿದ್ಧಾಂತ್ ಸುಂದರ್04:34
4."ಖಾಲಿ ಖಾಲಿ"ಧನಂಜಯ್ ರಂಜನ್ಶರಣ್ಯ ಗೋಪಿನಾಥ್02:29
5."ಕವಲುದಾರಿ"ಕಿರಣ್ ಕಾವೇರಪ್ಪಪುನೀತ್ ರಾಜ್‍ಕುಮಾರ್02:49
ಒಟ್ಟು ಸಮಯ:16:36

ಉಲ್ಲೇಖಗಳು

ಬಾಹ್ಯ ಕೊಂಡಿಗಳು