ಗೋಲ್ಡನ್ ಫೆಸೆಂಟ್

ಗೋಲ್ಡನ್ ಫೆಸೆಂಟ್
ಗಂಡು ಗೋಲ್ಡನ್ ಫೆಸೆಂಟ್
ಹೆಣ್ಣು ಗೋಲ್ಡನ್ ಫೆಸೆಂಟ್
Conservation status

Least Concern  (IUCN 3.1)[೧]
Scientific classification e
Unrecognized taxon (fix):ಕ್ರಿಸೋಲೋಫಸ್
ಪ್ರಜಾತಿ:
ಕ. ಪಿಕ್ಟಸ್
Binomial name
ಕ್ರಿಸೋಲೋಫಸ್ ಪಿಕ್ಟಸ್
Synonyms

ಫಾಸಿಯಾನಸ್ ಫೆಸೆಂಟ್ ಲಿನ್ನಿಯಸ್, ೧೭೫೮

ಗೋಲ್ಡನ್ ಫೆಸೆಂಟ್, ಚೈನೀಸ್ ಫೆಸೆಂಟ್ ಮತ್ತು ರೇನ್ಬೋ ಫೆಸೆಂಟ್ ಎಂದೂ ಕರೆಯಲ್ಪಡುತ್ತದೆ. ಇದು ಗ್ಯಾಲಿಫಾರ್ಮ್ಸ್ (ಗ್ಯಾಲಿನೇಶಿಯಸ್ ಪಕ್ಷಿಗಳು) ಮತ್ತು ಫ್ಯಾಸಿಯಾನಿಡೆ (ಫೆಸೆಂಟ್ಸ್) ಕುಟುಂಬದ ಆಟದ ಹಕ್ಕಿಯಾಗಿದೆ. ಕುಲದ ಹೆಸರು ಪ್ರಾಚೀನ ಗ್ರೀಕ್ ಕ್ರುಸೊಲೋಫೋಸ್‌ನಿಂದ ಬಂದಿದೆ.[೨]

ವಿವರಣೆ

ಮಲೇಷ್ಯಾದ ಕೌಲಾಲಂಪುರ್ ಬರ್ಡ್ ಪಾರ್ಕ್‌ನಲ್ಲಿ ಗಂಡು ಗೋಲ್ಡನ್ ಫೆಸೆಂಟ್

ಮಲೇಷ್ಯಾಕೌಲಾಲಂಪುರ್ ಬರ್ಡ್ ಪಾರ್ಕ್‌ನಲ್ಲಿ ಕಂಡುಬರುವ ವಯಸ್ಕ ಗಂಡು ಪಕ್ಷಿ ಸರಿಸುಮಾರು ೧೦೦ ಸೆಂ (೩೯ ಇಂಚು) ಉದ್ದವಿರುತ್ತದೆ, ಅದರ ಬಾಲವು ಒಟ್ಟು ಉದ್ದದ ಮೂರನೇ ಎರಡರಷ್ಟು ಭಾಗವನ್ನು ಹೊಂದಿದೆ ಮತ್ತು ಸುಮಾರು ೫೦೦-೭೦೦ ಗ್ರಾಂ (೧-೨ ಪೌಂಡು) ತೂಕವನ್ನು ಹೊಂದಿರುತ್ತದೆ. ಇದರ ಬಣ್ಣವು ಗೋಲ್ಡನ್ ಕ್ರೆಸ್ಟ್, ರಂಪ್ ಮತ್ತು ಪ್ರಕಾಶಮಾನವಾದ ಕೆಂಪು ದೇಹದಿಂದ ನಿರೂಪಿಸಲ್ಪಟ್ಟಿದೆ. ಇದು ಬೆಕ್ ಮೇಲೆ ಕಿತ್ತಳೆ ಬಣ್ಣದ ರಫ್ ಅಥವಾ "ಕೇಪ್" ಅನ್ನು ಹೊಂದಿದೆ, ಇದರ ಕಣ್ಣುಗಳನ್ನು ಹೊರತುಪಡಿಸಿದರೆ ಮುಖವು ಪರ್ಯಾಯ ಕಪ್ಪು ಮತ್ತು ಕಿತ್ತಳೆ ಫ್ಯಾನ್‌ನಂತೆ ಕಾಣುತ್ತದೆ. ಕಣ್ಣು ಪ್ರಕಾಶಮಾನವಾದ ಹಳದಿ ಮತ್ತು ಕಪ್ಪು ಬಣ್ನವನ್ನು ಹೊಂದಿದೆ. ಮುಖ, ಗಂಟಲು, ಗಲ್ಲದ ಮತ್ತು ಕತ್ತಿನ ಬದಿಗಳು ತುಕ್ಕು ಹಿಡಿದ ಕಂದು ಬಣ್ಣದ್ದಾಗಿರುತ್ತವೆ. ವಾಟಲ್ಸ್ ಮತ್ತು ಕಕ್ಷೀಯ ಚರ್ಮ ಎರಡೂ ಹಳದಿ. ಮೇಲಿನ ಬೆನ್ನು ಹಸಿರು ಮತ್ತು ಉಳಿದ ಹಿಂಭಾಗ ಮತ್ತು ರಂಪ್ ಗೋಲ್ಡನ್-ಹಳದಿ ಬಣ್ಣದ್ದಾಗಿದೆ. ರೆಕ್ಕೆಗಳ ಮೇಲಿನ ತೃತೀಯ ಗರಿಗಳು ನೀಲಿ ಬಣ್ಣದ್ದಾಗಿರುತ್ತವೆ, ಆದರೆ ಸ್ಕ್ಯಾಪುಲರ್ಗಳು ಗಾಢ ಕೆಂಪು ಬಣ್ಣದ್ದಾಗಿರುತ್ತವೆ. ಕೇಂದ್ರ ಬಾಲದ ಗರಿಗಳು ಕಪ್ಪು ಚುಕ್ಕೆಗಳನ್ನು ಹೊಂದಿದ್ದು, ಬಾಲದ ತುದಿಯು ದಾಲ್ಚಿನ್ನಿ ಬಣ್ಣದಿಂದ ಕೂಡಿದೆ. ಮೇಲಿನ ಬಾಲದ ಹೊದಿಕೆಗಳು ಕೇಂದ್ರ ಬಾಲದ ಗರಿಗಳಂತೆಯೇ ಒಂದೇ ಬಣ್ಣವನ್ನು ಹೊಂದಿರುತ್ತವೆ. ಗಂಡು ಕಡುಗೆಂಪು ಸ್ತನವನ್ನು ಹೊಂದಿದೆ, ಕಡುಗೆಂಪು ಮತ್ತು ತಿಳಿ ಚೆಸ್ಟ್ನಟ್ ಪಾರ್ಶ್ವಗಳು ಮತ್ತು ಕೆಳಭಾಗವನ್ನು ಹೊಂದಿರುತ್ತದೆ. ಕೆಳಗಿನ ಕಾಲುಗಳು ಮತ್ತು ಪಾದಗಳು ಮಂದ ಹಳದಿಯಾಗಿರುತ್ತದೆ.[೩]

ವಯಸ್ಕ ಹೆಣ್ಣು ಪಕ್ಷಿ ೬೦-೮೦ ಸೆಂ.ಮೀ (೨೪-೩೧ ಇಂಚು) ಉದ್ದ ಮತ್ತು ಸುಮಾರು ೩೫೦ ಗ್ರಾಂ (೧ ಪೌಂಡು) ತೂಕವನ್ನು ಹೊಂದಿದೆ. ಇದರ ಬಾಲವು ಪ್ರಮಾಣಾನುಗುಣವಾಗಿ ಉದ್ದವಾಗಿದೆ ಮತ್ತು ಇದರ ಒಟ್ಟು ಉದ್ದದ ಸರಿಸುಮಾರು ಅರ್ಧದಷ್ಟು ಇರುತ್ತದೆ. ಹೆಣ್ಣು ಸಾಮಾನ್ಯ ಫೆಸೆಂಟ್‌ಗೆ ಹೋಲುವ ಮಂದವಾದ ಮಚ್ಚೆಯ ಕಂದು ಬಣ್ಣದ ಪುಕ್ಕಗಳನ್ನು ಹೊಂದಿದೆ. ಇದು ಪುರುಷ ಪಕ್ಷಿಗಿಂತ ತುಂಬಾ ಕಡಿಮೆ ಆಕರ್ಷಕವಾಗಿದೆ, ಆದರೆ ಗಾಢವಾದ ಬಣ್ಣವನ್ನು ಹೊಂದಿದೆ ಮತ್ತು ತೆಳ್ಳಗಿದೆ. ಹೆಣ್ಣಿನ ಸ್ತನ ಮತ್ತು ಬದಿಗಳು ಬಾರ್ಡ್ ಬಫ್ ಮತ್ತು ಕಪ್ಪು ಮಿಶ್ರಿತ ಕಂದು ಬಣ್ಣವನ್ನು ಹೊಂದಿದೆ ಮತ್ತು ಹೊಟ್ಟೆಯು ಸರಳ ಬಫ್ ಆಗಿದೆ. ಕೆಲವು ಅಸಹಜ ಹೆಣ್ಣು ಪಕ್ಷಿಗಳು ತಮ್ಮ ಜೀವಿತಾವಧಿಯಲ್ಲಿ ಕೆಲವು ಪುರುಷ ಪುಕ್ಕಗಳನ್ನು ಅಭಿವೃದ್ಧಿಪಡಿಸಬಹುದು. ಗಂಡು ಮತ್ತು ಹೆಣ್ಣು ಎರಡೂ ಹಳದಿ ಕಾಲುಗಳು ಮತ್ತು ಹಳದಿ ಬಿಲ್ಲುಗಳನ್ನು ಹೊಂದಿರುತ್ತವೆ.[೩]

ವಿತರಣೆ ಮತ್ತು ಆವಾಸಸ್ಥಾನ

ಗೋಲ್ಡನ್ ಫೆಸೆಂಟ್ ಪಶ್ಚಿಮ ಚೀನಾದ ಪರ್ವತ ಪ್ರದೇಶಗಳಲ್ಲಿನ ಕಾಡುಗಳಿಗೆ ಸ್ಥಳೀಯವಾಗಿದೆ. ಆದರೆ ಯುನೈಟೆಡ್ ಕಿಂಗ್‌ಡಮ್, ಕೆನಡಾ, ಯುನೈಟೆಡ್ ಸ್ಟೇಟ್ಸ್, ಮೆಕ್ಸಿಕೊ, ಕೊಲಂಬಿಯಾ, ಪೆರು, ಬೊಲಿವಿಯಾ, ಚಿಲಿ, ಅರ್ಜೆಂಟೀ''ನಾ, ಉರುಗ್ವೆ, ಫಾಕ್ಲ್ಯಾಂಡ್ ದ್ವೀಪಗಳು, ಜರ್ಮನಿ, ಬೆಲ್ಜಿಯಂ, ನೆದರ್ಲ್ಯಾಂಡ್ಸ್, ಫ್ರಾನ್ಸ್, ಐರ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಕಾಡುಗಳಲ್ಲಿಯೂ ಕೂಡ ಕಾಣಬಹುದು.[೪] ಇಂಗ್ಲೆಂಡ್‌ನಲ್ಲಿರುವ ಬ್ರೆಕ್‌ಲ್ಯಾಂಡ್‌ನ ದಟ್ಟವಾದ ಅರಣ್ಯ ಭೂದೃಶ್ಯದಲ್ಲಿ, ಪೂರ್ವ ಆಂಗ್ಲಿಯಾದಲ್ಲಿ, ಐಲ್ಸ್ ಆಫ್ ಸ್ಕಿಲ್ಲಿಯಲ್ಲಿ ಮತ್ತು ಟ್ರೆಸ್ಕೊದಲ್ಲಿ ಕಂಡುಬರುತ್ತದೆ.

ಗೋಲ್ಡನ್ ಫೆಸೆಂಟ್‌ಗಳನ್ನು ೧೯೯೬ ರಲ್ಲಿ ಮೊದಲ ಬಾರಿಗೆ ಪತ್ತೆಹಚ್ಚುವ ಮೊದಲು ಕೆಲವು ಹಂತದಲ್ಲಿ ಹವಾಯಿಯಲ್ಲಿನ ಮಾಯಿಗೆ ಪರಿಚಯಿಸಲಾಯಿತು. ಮೂಲ ಪಕ್ಷಿಗಳನ್ನು ವೈಕಾಮೊಯ್ ಪ್ರಿಸರ್ವ್‌ನಲ್ಲಿ ಬಿಡುಗಡೆ ಮಾಡಲಾಯಿತು. ಸೆಕೆಂಡರಿ ಗುಂಪುಗಳನ್ನು ನಂತರ ಹನವಿ ನ್ಯಾಚುರಲ್ ಏರಿಯಾ ರಿಸರ್ವ್ ಮತ್ತು ಹಲೇಕಾಲಾ ರಾಷ್ಟ್ರೀಯ ಉದ್ಯಾನವನದಲ್ಲಿ ದಾಖಲಿಸಲಾಯಿತು, ಅಲ್ಲಿ ಅವುಗಳು ವೈಕಾಮೊಯ್‌ನ ಪ್ರಸರಣದ ಮೂಲಕ ಆಗಮಿಸಿದವು. ಒಟ್ಟಾರೆಯಾಗಿ, ಫೆಸೆಂಟ್‌ಗಳು ದ್ವೀಪದ ಇಳಿಜಾರಿನಲ್ಲಿರುವ ೧,೭೦೦–೨,೪೦೦ ಮೀ (೫,೫೭೭–೭,೮೭೪ ಅಡಿ) ನಡುವಿನ ಪ್ರದೇಶಗಳಲ್ಲಿ ವಾಸಿಸುತ್ತವೆ.[೫]

ಪರಿಸರ ವಿಜ್ಞಾನ

ಗೋಲ್ಡನ್ ಫೆಸೆಂಟ್‌ಗಳು ನೆಲದಲ್ಲಿನ ಧಾನ್ಯ, ಎಲೆಗಳು ಮತ್ತು ಅಕಶೇರುಕಗಳನ್ನು ತಿನ್ನುತ್ತವೆ, ಆದರೆ ಅವು ರಾತ್ರಿಯಲ್ಲಿ ಮರಗಳಲ್ಲಿ ನೆಲೆಸುತ್ತವೆ. ಚಳಿಗಾಲದಲ್ಲಿ, ಹಿಂಡುಗಳು ಕಾಡಿನ ಅಂಚಿನಲ್ಲಿರುವ ಮಾನವ ವಸಾಹತುಗಳ ಸಮೀಪದಲ್ಲಿರುವ ಮೇವು ತಿನ್ನುತ್ತವೆ, ಪ್ರಾಥಮಿಕವಾಗಿ ಗೋಧಿ ಎಲೆಗಳು ಮತ್ತು ಬೀಜಗಳು.[೬] ಇವು ಹೆಚ್ಚಿನ ಸಮಯವನ್ನು ನೆಲದ ಮೇಲೆ ಕಳೆಯಲು ಬಯಸುತ್ತವೆ. ಅವು ಸಣ್ಣ ಸ್ಥಳಗಳಲ್ಲಿ ವೇಗವಾಗಿ ಹಾರುತ್ತವೆ. ಈ ರೀತಿಯ ಹಾರಾಟವನ್ನು ಸಾಮಾನ್ಯವಾಗಿ "ಫ್ಲಾಪಿಂಗ್ ಫ್ಲೈಟ್" ಎಂದು ಕರೆಯಲಾಗುತ್ತದೆ ಮತ್ತು ಎಂ. ಪೆಕ್ಟೋರಾಲಿಸ್ ಪಾರ್ಸ್ ಥೋರಾಸಿಕಸ್‍ನ ಆಳವಾದ ಪದರ ಮತ್ತು ಅದಕ್ಕೆ ಅಂಟಿಕೊಳ್ಳುವ ಸ್ನಾಯುರಜ್ಜುವಿನಿಂದಾಗಿ ಇದು ಸಂಭವಿಸುತ್ತದೆ. ಈ ಸ್ನಾಯುವು ಸಾಮಾನ್ಯವಾಗಿ ಇತರ ಪಕ್ಷಿಗಳಲ್ಲಿ ಹಾರಾಟದ ಸ್ಥಿರತೆಗೆ ಕಾರಣವಾಗಿದೆ; ಆದಾಗ್ಯೂ, ಈ ಆಳವಾದ ಪದರದ ಅನುಪಸ್ಥಿತಿಯು ಈ ರೀತಿಯ "ಫ್ಲಾಪಿಂಗ್ ಫ್ಲೈಟ್" ಗೆ ಕಾರಣವಾಗುತ್ತದೆ, ಇದು ಪರಭಕ್ಷಕಗಳಿಂದ ತಪ್ಪಿಸಿಕೊಳ್ಳಲು ಈ ಕಾರ್ಯವಿಧಾನವನ್ನು ಉಪಯೋಗಿಸುತ್ತದೆ. ಆದಾಗ್ಯೂ, ಇವುಗಳು ಹಾರುವ ಬದಲು ಓಡಿಹೋಗಲು ಮತ್ತು ತಮ್ಮ ಪರಭಕ್ಷಕಗಳಿಂದ ಮರೆಯಾಗಲು ಬಯಸುತ್ತವೆ.[೭]

ಗೋಲ್ಡನ್ ಫೆಸೆಂಟ್‌ಗಳು ಒಂದು ಬಾರಿಗೆ ೮ ರಿಂದ ೧೨ ಮೊಟ್ಟೆಗಳನ್ನು ಇಡುತ್ತವೆ ಮತ್ತು ನಂತರ ಸುಮಾರು ೨೨-೨೩ ದಿನಗಳವರೆಗೆ ಕಾವುಕೊಡುತ್ತವೆ. ಇವು ಹಣ್ಣುಗಳು, ಗ್ರಬ್ಗಳು, ಬೀಜಗಳು ಮತ್ತು ಇತರ ರೀತಿಯ ಸಸ್ಯವರ್ಗಗಳನ್ನು ತಿನ್ನಲು ಇಷ್ಟ ಪಡುತ್ತವೆ.

ಸಂತಾನವೃದ್ಧಿ ಋತುವಿನಲ್ಲಿ ಗಂಡು ಲೋಹೀಯ ಕರೆಯನ್ನು ಹೊಂದಿರುತ್ತದೆ.

ಸೆರೆ

ಗೋಲ್ಡನ್ ಫೆಸೆಂಟ್ ಸಾಮಾನ್ಯವಾಗಿ ಮೃಗಾಲಯಗಳು ಮತ್ತು ಪಕ್ಷಿಧಾಮಗಳಲ್ಲಿ ಕಂಡುಬರುತ್ತದೆ, ಆದರೆ ಕೆಲವು ಬಾರಿ ಹೈಬ್ರಿಡ್ ಮಾದರಿಗಳು ತಮ್ಮ ವಂಶಾವಳಿಯಲ್ಲಿ ಲೇಡಿ ಅಮ್ಹೆರ್ಸ್ಟ್‌ನ ಫೆಸೆಂಟ್ ಅನ್ನು ಹೊಂದಿವೆ.[೩]

ಕಡುಗಂಟಲು, ಹಳದಿ, ದಾಲ್ಚಿನ್ನಿ, ಸಾಲ್ಮನ್, ಪೀಚ್, ಸ್ಪ್ಲಾಶ್, ಮಹೋಗಾನಿ ಮತ್ತು ಬೆಳ್ಳಿ ಬಣ್ಣಗಳನ್ನು ಹೊಂದಿರುವ ಪಕ್ಷಿಗಳು ಗೋಲ್ಡನ್ ಫೆಸೆಂಟ್‌ನ ವಿಭಿನ್ನ ರೂಪಾಂತರಗಳಾಗಿವೆ. ಪಕ್ಷಿಕೃಷಿಯಲ್ಲಿ, ಕಾಡು ಪ್ರಕಾರವನ್ನು ಈ ರೂಪಾಂತರಗಳಿಂದ ಪ್ರತ್ಯೇಕಿಸಲು "ಕೆಂಪು-ಚಿನ್ನ" ಎಂದು ಉಲ್ಲೇಖಿಸಲಾಗುತ್ತದೆ.

ಗರಿಗಳಲ್ಲಿನ ಬಣ್ಣವು ಗಂಡು ಗೋಲ್ಡನ್ ಫೆಸೆಂಟ್‌ನ ಆನುವಂಶಿಕ ಗುಣಮಟ್ಟವನ್ನು ಸೂಚಿಸುತ್ತದೆ. ವರ್ಣ, ಹೊಳಪು ಮತ್ತು ಕ್ರೋಮಾವನ್ನು ಸಾಮಾನ್ಯವಾಗಿ ಬಣ್ಣ ವ್ಯತ್ಯಾಸಗಳನ್ನು ನೋಡಲು ಅಳೆಯಲಾಗುತ್ತದೆ. ಬಹುರೂಪಿ ಮೇಜರ್ ಹಿಸ್ಟೋಕಾಂಪಾಟಿಬಿಲಿಟಿ ಕಾಂಪ್ಲೆಕ್ಸ್ ಲೊಕಸ್‌ನ, ಹೆಟೆರೋಜೈಗೋಸಿಟಿಯು ಗರಿಗಳು ಕ್ರೋಮಾ ಮತ್ತು ಪ್ರಕಾಶದೊಂದಿಗೆ ಹೆಚ್ಚು ಸಂಬಂಧಿಸಿದೆ ಎಂದು ಫಲಿತಾಂಶಗಳು ತೋರಿಸುತ್ತವೆ.

ಛಾಯಾಂಕಣ

ಉಲ್ಲೇಖಗಳು

ಬಾಹ್ಯ ಕೊಂಡಿಗಳು