ಚೌರಿ ಚೌರಾ ಘಟನೆ

ಚೌರಿ ಚೌರಾ ಘಟನೆಯು ಇಂದಿನ ಉತ್ತರ ಪ್ರದೇಶ ರಾಜ್ಯದ ಗೊರಖ್ ಪುರ ಜಿಲ್ಲೆಯಲ್ಲಿ ೫ ಫ಼ೆಬ್ರವರಿ ೧೯೨೨ ರಲ್ಲಿ ನೆಡೆಯಿತು.ಪ್ರತಿಭಟನಾಕಾರರ ಡೊಡ್ಡ ಗುಂಪೊಂದು ಅಸಹಕಾರ ಚಳುವಳಿಯಲ್ಲಿ ಭಾಗಹಿಸುತ್ತಿರುವಾಗ ಬ್ರಿಟೀಶ್ ಪೋಲೀಸರೊಂದಿಗೆ ಘರ್ಷಣೆ ಸಂಭವಿಸಿ ಪೋಲೀಸರು ಗುಂಡನ್ನು ಹಾರಿಸಿದರು.ಇದಕ್ಕೆ ಪ್ರತಿಯಾಗಿ ಪ್ರತಿಭಟನಾಕಾರರು ಪೋಲೀಸ್ ಠಾಣೆಗೆ ದಾಳಿಮಾಡಿ ಬೆಂಕಿ ಹಚ್ಚಿದರು. ಇದರಿಂದ ೨೨ ಮಂದಿಯ ಸಾವು ಸಂಭವಿಸಿತು. ಅಸಹಾಕಾರ ಚಳುವಳಿಗೆ ಕರೆಕೊಟ್ಟು ಅದರ ನೇತೃತ್ವವಹಿಸಿದ್ದ ಮಹಾತ್ಮ ಗಾಂಧಿಜಿಯವರು, ಈ ಘಟನೆ ತಮ್ಮ ಅಹಿಂಸೆಯ ಮಾರ್ಗಕ್ಕೆ ವಿರುದ್ಧವಾಗಿದ್ದುದರಿಂದ ಅವರು ಅಸಹಕಾರ ಚಳುವಳಿಯನ್ನು ೧೨ ಫ಼ೆಬ್ರವರಿ ೧೯೨೨ ರಂದು ಕೊನೆಗೊಳಿಸಿದರು..[೧]ಜವಾಹರ‌ಲಾಲ್ ನೆಹರು ತಮ್ಮ ಆತ್ಮಚರಿತ್ರೆಯಲ್ಲಿ ಗಂಧೀಜೀಯವರ ಈ ನಿರ್ಧಾರದಿಂದ ಜೈಲಿನಲ್ಲಿದ್ದ ಕಾಂಗ್ರೇಸ್ ಕಾರ್ಯಕರ್ತರಿಗೆ ಬಹಳ ಹಿನ್ನೆಡೆ ಮತ್ತು ನಿರಾಶಾದಾಯಕವಾಗಿತ್ತು ಎಂದು ಬರೆದಿದ್ದಾರೆ. ಅಸಹಕಾರ ಚಳುವಳಿಯನ್ನು ಹಿಂಪಡೆದ್ದಕ್ಕೆ ವಿಚಲಿತರಾದ ಭಗತ್ ಸಿಂಗ್ ಕ್ರಾಂತಿಕಾರಿ ಪ್ರತಿಭಟನೆಯ ಮಾರ್ಗ ಹಿಡಿಯುತ್ತಾರೆ.

ಚೌರಿ ಚೌರಾದಲ್ಲಿ ಬಲಿಯಾದವರ ಸ್ಮಾರಕ

ಪರಿಣಾಮ

ಇದರ ಪ್ರತಿಯಾಗಿ ಬ್ರಿಟೀಶ್ ಅಧಿಕಾರಿಗಳು ಚೌರಿ ಚೌರ ಸುತ್ತಮುತ್ತಲಿನ ಪ್ರದೇಶದಲ್ಲಿ ಸೈನಿಕಾಡಳಿತವನ್ನು ಘೋಷಣೆ ಮಾಡುತ್ತಾರೆ. ಹಲವಾರು ದಾಳಿನೆಡೆಸಿ ನೂರಾರು ಜನರನ್ನು ಬಂಧಿಸುತ್ತಾರೆ.ಘಟನೆಯಿಂದ ಆಘಾತಕ್ಕೊಳಗಾದ ಗಾಂಧೀಜಿ ಐದುದಿನಗಳ ಉಪವಾಸವನ್ನು ಕೈಗೊಡರು , ನೆಡೆದ ಘಟನೆಗೆ ತಾವೇ ಕಾರಣ ಎಂದು ಅವರು ಗ್ರಹಿಸಿದರು. [೨] ಆತುರದಲ್ಲಿ ಜನರನ್ನು ಚಳುವಳಿಗೆ ಪ್ರಚೋದಿಸಿದ್ದು ಆತುರವಾಯಿತೆಂದು, ಅಹಿಂಸೆಯ ಮಾರ್ಗಕ್ಕೆ ಇನ್ನೂ ಹೆಚ್ಚು ಒತ್ತು ನೀಡಲಿಲ್ಲವೆಂದು ಮತ್ತು ಚಳುವಳಿಯಲ್ಲಿ ಸಂಯಮ ಕಾಯ್ದುಕೊಳ್ಳಲು ತರಬೇತಿ ನೀಡಿಲ್ಲವೆಂದು ಅವರು ಮನಗಂಡರು. ಗಾಂಧೀಜಿಯವರಿಗೆ ಭಾರತೀಯರು ತಪ್ಪು ರೀತಿಯಲ್ಲಿ ತಯಾರಾಗಿದ್ದಾರೆ ಮತ್ತು ಸ್ವಾತಂತ್ರ್ಯ ಪಡೆಯಲು ಏನು ಬೇಕೋ ಅದನ್ನು ಮಾಡಲು ಇನ್ನು ತಯಾರಾಗಿಲ್ಲ ಎಂಬ ಅಭಿಪ್ರಾಯಕ್ಕೆ ಬಂದರು. ಗಾಂಧೀಜಿ ಅವರನ್ನುಬಂಧಿಸಿ ಆರು ವರ್ಷಗಳ ಕಾಲ ಜೈಲುವಾಸವನ್ನು ಬ್ರಿಟೀಷ್ ಸರ್ಕಾರ ವಿಧಿಸುತ್ತಾರೆ. ನಂತರ ಫ಼ೆಬ್ರವರಿ ೧೯೨೪ ರಲ್ಲಿ ಅನಾರೋಗ್ಯದ ಕಾರಣದಿಂದ ಅವರನ್ನು ಬಿಡುಗಡೆ ಮಾಡಲಾಯಿತು. [೩]ಫ಼ೆಬ್ರವರಿ ೧೨ ೧೯೨೨ ರಂದು, ಚೌರಿ ಚೌರ ಪ್ರಕರಣದ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅಸಹಕಾರ ಚಳುವಳಿಯನ್ನು ನಿಲ್ಲಿಸುತ್ತದೆ. [೪]

ಜೈಲಿನಲ್ಲಿದ್ದ ನೆಹರು ಮತ್ತು ಇನ್ನಿತರ ಹೋರಾಟಗಾರರು ಈ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ರಾಷ್ಟ್ರೀಯ ಏಕತೆ ಸಾಧಿಸುವ ಸಮಯದಲ್ಲಿ ಈ ನಿರ್ಧಾರ ಸಮಂಜಸವಲ್ಲ ಎಂದು ಭಾವಿಸುತ್ತಾರೆ. ಚಳುವಳಿಯನ್ನು ಹಿಂಪಡೆದ ಸ್ವಲ್ಪ ತಿಂಗಳುಗಳ ನಂತರ ಸರ್ಕಾರ ಗಾಂಧೀಜಿಯವರನ್ನು ಬಂಧಿಸಿ ಜೈಲಿನಲ್ಲಿಡುತ್ತದೆ. [೧]

ಉಲ್ಲೇಖಗಳು