ವಿಷಯಕ್ಕೆ ಹೋಗು

ಪಿ. ಭಾನುಮತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾನುಮತಿ ಅಂಚೆ ಚೀಟಿ

ಪಾಲುವಾಯಿ ಭಾನುಮತಿ ರಾಮಕೃಷ್ಣ, (Telugu: భానుమతీ రామకృష్ణ)

(೭ ಸೆಪ್ಟೆಂಬರ್, ೧೯೨೫-೨೪ ಡಿಸೆಂಬರ್, ೨೦೦೫)

ಡಾ.ಪಿ.ಭಾನುಮತಿಯವರ, ಪ್ರತಿಭೆ ಬಹುಮುಖವಾದದ್ದು. ದಕ್ಷಿಣ ಭಾರತದ ಖ್ಯಾತ ಹಿನ್ನೆಲೆಗಾಯಕಿ, ನಟಿ, ನಿರ್ದೇಶಕಿ, ಸಂಗೀತ ನಿರ್ದೇಶಕಕಿ, ಸಂಕಲನಕಾರ್ತಿ, ಚಿತ್ರಕಥಾ ಲೇಖಕಿ, ನೃತ್ಯಪ್ರವೀಣೆ, ಭರಣಿ ಸ್ಟುಡಿಯೊದ ಮಾಲಕಿ,ತೆಲುಗಿನ ಖ್ಯಾತ ಬರಹಗಾತಿ, ಮತ್ತು ಮೇಧಾವಿಯೆಂದು ಹೆಸರಾಗಿದ್ದರು. ಶಾಸ್ತ್ರೀಯ ಸಂಗೀತದಲ್ಲೂ ಪರಿಣಿತರಾಗಿದ್ದ ಭಾನುಮತಿ ರಾಮಕೃಷ್ಣ, ಪುರಂದರದಾಸರ ೮ ಜನಪ್ರಿಯ ಕೀರ್ತನೆಗಳನ್ನು ಶಂಕರಾಭರಣ, ಕಲ್ಯಾಣಿ, ಕಾನಡ, ಕಾಂಬೋಧಿ, 'ಬೇಹಾಗ್' ಹಾಗೂ 'ಆನಂದ ಭೈರವಿ' ರಾಗಗಳಲ್ಲಿ ವೈವಿಧ್ಯಮಯವಾಗಿ ಹಾಡಿದ್ದಾರೆ. ಈ ಕೊಡುಗೆಯಿಂದ ಆ ಅಮರ ಗಾಯಕಿಯ ಕನ್ನಡ ಇನಿದನಿ ಸ್ಥಿರವಾಗಿ ಉಳಿದಿದೆ. ತಮಿಳು, ತೆಲುಗು, ಹಿಂದಿ, ಸೇರಿದಂತೆ ನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. ಹಿಂದೆ, 'ಟೆಂಟ್ ಸಿನಿಮಾ' ಪ್ರಾರಂಭವಾಗುವ ಮೊದಲು, ರಂಗಭೂಮಿಯಲ್ಲಿ ನಾಟಕದ ಪರದೆ ಏಳುವಮೊದಲು, ಸಂತೆ ಮಾರುಕಟ್ಟೆಗಳಲ್ಲಿ ಹಲ್ಲುಪುಡಿ, ನಾರುಬೇರಿನ ಔಷಧಿಮಾರುವವರ ಬಳಿ ಹಾಕುತ್ತಿದ್ದ 'ಗ್ರಾಮಾಫೋನ್ ರೆಕಾರ್ಡ್' ಗಳು ಭಾನುಮತಿಯವರು ಹೇಳಿದ ಹಾಡುಗಳೇ. ಅವರು ಕನ್ನಡದಲ್ಲಿ ೧೯೫೭ ರಲ್ಲಿ ತೆರೆಕಂಡ 'ಕೆಂಪರಾಜ್ ಪ್ರೊಡಕ್ಷನ್' ರವರ 'ನಳದಮಯಂತಿ' ಚಿತ್ರದಲ್ಲಿ ಮಾತ್ರ ಅಭಿನಯಿಸಿದ್ದು. ಆದರೆ, ೧೯೪೩ ರಲ್ಲಿ, 'ಎಂ.ವಿ.ರಾಜಮ್ಮ' ನಿರ್ಮಿಸಿದ ರಾಧಾರಮಣ, ಚಿತ್ರದಲ್ಲಿ ಒಂದು ಚಿಕ್ಕಪಾತ್ರದಲ್ಲಿ ಅಭಿನಯಿಸಿದ್ದರು.

ಬಾಲ್ಯ, ಮನೆಯ ಪರಿಸರ

'ಭಾನುಮತಿ'ಯವರು, ಸರಸ್ವತಮ್ಮ ಮತ್ತು ಬೊಮ್ಮರಾಜು ವೆಂಕಟ ಸುಬ್ಬಯ್ಯನವರ ಮೂರನೆಯ ಪುತ್ರಿ. ಪ್ರಕಾಸಮ್ ಜಿಲ್ಲೆಯ ದೊಡ್ಡಾವರಂ ಗ್ರಾಮದಲ್ಲಿ ಜನಿಸಿದರು. ತಂದೆಯವರಿಗೆ ಶಾಸ್ತ್ರೀಯ ಸಂಗೀತದಲ್ಲಿ ಅಭಿರುಚಿ ಇತ್ತು; ಅವರು ನಾಟಕಗಳಲ್ಲಿ ಅಭಿನಯಿಸುತ್ತಿದ್ದಿದ್ದನ್ನು ಕಂಡು, ಮಗಳೂ ಪ್ರೇರಿತರಾದರು. ಬಾಲ್ಯದಲ್ಲಿ ಭಾನುಮತಿಯವರಿಗೆ ಸಂಗೀತದಲ್ಲಿ ಶಿಕ್ಷಣವನ್ನು ಕೊಡಿಸಿದರು. ಅವರು,೧೯೩೫ ರಲ್ಲಿ 'ಚಲನಚಿತ್ರ ವಲಯ'ಕ್ಕೆ ಪಾದಾರ್ಪಣೆಮಾಡಿದರು. ಒಟ್ಟಾರೆ, ಸುಮಾರು ೨೦೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಭಾನುಮತಿಯವರ ಪ್ರಬುದ್ಧತೆ ಹಾಗೂ ಬುದ್ಧಿಮತ್ತೆಯನ್ನು ಗುರುತಿಸಿದ ಜನ ಅವರನ್ನು ’ಅಷ್ಟಾವಧಾನಿ’ಯೆಂದು ಕರೆಯುತ್ತಿದ್ದರು. 'ಜ್ಯೋತಿಷ್ಯ ಶಾಸ್ತ್ರ'ದಲ್ಲಿ ಪರಿಣಿತಿಯಿತ್ತು. 'ತತ್ವ ಶಾಸ್ತ್ರ', ಅವರ ಪ್ರಿಯವಾದ ವಿಷಯವಾಗಿತ್ತು. ೧೯೩೯ ರಲ್ಲಿ ತೆಲುಗಿನಲ್ಲಿ ನಟಿಸಿದ ಮೊಟ್ಟಮೊದಲ ಚಿತ್ರ, 'ವರ ವಿಕ್ರಯಮ್' ನಲ್ಲಿ, ಅವರು 'ಕಾಳಿಂದಿ'ಯಾಗಿ ಅಭಿನಯಿಸಿದ್ದರು. ಈ ಚಿತ್ರವನ್ನು ಸಿ.ಪುಲ್ಲಯ್ಯ’ ನವರು ನಿರ್ದೇಶಿಸಿದ್ದರು.

  • ’ಮಾಲತಿ ಮಾಧವಮ್’,
  • ’ಧರ್ಮ ಪತ್ನಿ’,
  • ’ಭಕ್ತಿಮಾಲ’
  • ’ಕಿಷ್ಣ ಪ್ರೇಮ’ವೆಂಬ ಮೊದಲ ಚಿತ್ರ.
  • ’ಸ್ವರ್ಗಸೀಮ' ಎರಡನೆಯ ಚಿತ್ರ. ಜೀವನದಲ್ಲಿ ಮೈಲಿಗಲ್ಲಾಯಿತು. ಅನೇಕ ಚಿರಸ್ಮರಣೀಯ ಚಿತ್ರಗಳಲ್ಲಿ,
  • 'ಚಕ್ರಪಾಣಿ',
  • 'ಲೈಲಾ ಮಜ್ನು',
  • 'ವಿಪ್ರನಾರಾಯಣ',
  • 'ಮಲ್ಲೀಶ್ವರಿ'
  • 'ಬಾಟಸಾರಿ',
  • 'ಅಂತಸ್ತುಲು', ೧೯೫೩ ರಲ್ಲಿ ಮೊದಲ ನಿರ್ದೆಶಿಸಿದ ತೆಲುಗು ಚಿತ್ರ, 'ಚಂಡೀರಾಣಿ', ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ, ಕೊನೆಯ ಚಿತ್ರ ೧೯೯೮ ರಲ್ಲಿ 'ಪೆಳ್ಳಿ ಆಣುಕ'.

ಸಿ.ಎನ್.ಅಣ್ಣಾದುರೈ ಕೊಟ್ಟ ಬಿರುದು

ಸಿ.ಎನ್. ಅಣ್ಣಾದು,ರೈ ನಾಡಿಪ್ಪುಕ್ಕು ಲಕ್ಕನಂ ಎಂಬ ಬಿರುದನ್ನು ಕೊಟ್ಟಿದ್ದರು.(ನಟನಾಶಾಸ್ತ್ರದ ವ್ಯಾಕರಣ ಕೋವಿದೆ) ಹಿಂದೂಸ್ಥಾನಿ ಸಂಗೀತ, ಹಾಗೂ ದಕ್ಷಿಣಾದಿ ಶಾಸ್ತ್ರೀಯ ಸಂಗೀತದಲ್ಲಿ ಪ್ರಭುದ್ಧೆಯಾಗಿದ್ದರು. ಚಿತ್ರಗಳಲ್ಲಿ ತಮ್ಮ ಪಾತ್ರಗಳಿಗೆ ತಾವೇ ಹಾಡನ್ನು ಹಾಡಿದ್ದರು. ಭಾನುಮತಿ ರಾಮಕೃಷ್ಣರು ಹಾಡಿದ ಕೆಲವು ಮರಯಲಾರದ ಗೀತೆಗಳು :

  • ಪಿಲಿಚಿನ ಬಿಗುವತರ,
  • ಕಿಲ ಕಿಲ ವನ್ನುಲು,
  • ಓ ಪವುರಮ,
  • ಪ್ರೇಮೆ ನೆರಮ,

ಚಲನಚಿತ್ರ ಸಂಸ್ಥೆಗಳ ಜೊತೆಗೆ ಒಡನಾಟ, ಸಾರ್ವಜನಿಕ ಸೇವಾಸಂಸ್ಥೆಗಳಜೊತೆ ಕೆಲಸಮಾಡುತ್ತಿದ್ದರು. ಅವರು ಸಂಪರ್ಕದಲ್ಲಿದ್ದ ಸಂಘ ಸಂಸ್ಥೆಗಳ ವಿವರಗಳು ಹೀಗಿವೆ.

  • 'ರಾಜ್ಯ ಚಿತ್ರ ಪ್ರಶಸ್ತಿ ಸಮಿತಿ, ಸದಸ್ಯೆ', ೨ ವರ್ಷ,
  • 'ಫಿಲ್ಮ್ ಇನ್ಸ್ಟಿ ಟ್ಯೂಟ್ ಗೆ ಆಹ್ವಾನಿತ ಪ್ರಾಧ್ಯಾಪಕಿ'ಯಾಗಿದ್ದರು.
  • 'ಚಿಲ್ಡ್ರೆನ್ ಫಿಲ್ಮ್ ಸೊಸೈಟಿಗೆ ಸದಸ್ಯ'ರಾಗಿದ್ದರು, ೧೯೬೫-೭೦
  • 'ಚಿಕ್ಕ ಕಥೆ'ಗಳನ್ನು ಬರೆದರು.
  • 'ಆತ್ಮ ಚರಿತ್ರೆ', 'ನಾನೊ ನೇನು,' ತೆಲುಗಿನಲ್ಲಿ ನಂತರ ಇಂಗ್ಲೀಷ್ ನಲ್ಲಿ(Musings) ಮತ್ತು ಹಿಂದಿ ಭಾಷೆಯಲ್ಲಿ,
  • 'ಆಂಧ್ರಪ್ರದೇಶ್ ಸಾಹಿತ್ಯ ಅಕಾಡೆಮಿ ಅವಾರ್ಡ್ ಫಾರ್ ದ ಬೆಸ್ಟ್ ಶಾರ್ಟ್ ಸ್ಟೋರಿ ರೈಟರ್',
  • 'ಅತ್ತಗಾರಿ ಕಥಲು',
  • 'ಲಲಿತಕಲಾ ಅಕಾಡೆಮಿ'ಗೆ ೫ ವರ್ಷ ಸದಸ್ಯೆ.
  • 'ಆಂಧ್ರ ಪ್ರದೇಶದ ಸಾಹಿತ್ಯ ಅಕಾಡೆಮಿ ಸದಸ್ಯೆ' ೧೦ ವರ್ಷ.
  • 'ತಮಿಳುನಡಿನ ಚೆನ್ನೈ, ಗವರ್ನಮೆಂಟ್ ಮ್ಯೂಸಿಕ್ ಕಾಲೇಜ್' ಗೆ ೩ ವರ್ಷ 'ಡೈರೆಕ್ಟರ್', ಮತ್ತು 'ಪ್ರಾಂಶುಪಾಲ'ರಾಗಿ ದುಡಿದರು.

ಸಮಾಜಸೇವೆ ಅವರ ಜೀವನದ ಅವಿಭಾಜ್ಯ ಅಂಗ

ಸಮಾಜಸೇವೆಗೆ ಹೆಸರಾದ ವ್ಯಕ್ತಿ. 'ಚಿಕಾಗೊ ನಗರದ ಅಲ್ಟ್ರೂಸ ಇಂಟರ್ ನ್ಯಾಷನಲ್ ಸಂಸ್ಥೆ'ಯ ಸ್ಥಾಪಕ ಸದಸ್ಯೆಯಾಗಿ, 'ಖಜಾಂಚಿ'ಯಾಗಿ, ೧೯೬೩ ರಿಂದ ತಮ್ಮ ಜೀವನದ ಅಂತ್ಯದವರೆಗೆ ಸಂಪರ್ಕದಲ್ಲಿದ್ದರು.

  • 'ರೆಡ್ ಕ್ರಾಸ್ ಸೊಸೈಟಿ'ಗೆ ಸದಸ್ಯೆ,
  • 'ಚೆನ್ನೈನ ಸಾಲಿಗ್ರಾಮ'ದಲ್ಲಿ ಡಾ. ಭಾನುಮತಿ ರಾಮಕಿಷ್ಣ ಮೆಟ್ರಿಕ್ಯುಲೇಶನ್ ಸ್ಕೂಲ್,ಎಂಬ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದರು. ಇಲ್ಲಿ ಬಡಮಕ್ಕಳಿಗೆ ಉಚಿತ ವಿದ್ಯಾಭ್ಯಾಸದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ವೈಯಕ್ತಿಕ ಜೀವನ

'ಕ್ರಿಷ್ಣ ಪ್ರೇಮ' ಚಿತ್ರದ ಶೂಟಿಂಗ್ ಸಮಯದಲ್ಲಿ ಸಹಾಯಕ ನಿರ್ದೇಶಕ, ಚಿತ್ರ ನಿರ್ಮಾಪಕ, ತಮಿಳು, ತೆಲುಗು ಚಿತ್ರಗಳ ಸಂಪಾದಕ, ಪಿ.ಎಸ್. ರಾಮಕೃಷ್ಣರಾವ್ ರವರನ್ನು ಭೆಟ್ಟಿಯಾದರು. ಈ ಭೇಟಿ ಪ್ರೇಮದಲ್ಲಿ ತಿರುಗಿ ಅವರಿಬ್ಬರೂ ಆಗಸ್ಟ್,೮, ೧೯೪೩ ರಲ್ಲಿ ಮದುವೆಯಾದರು. ಈ ದಂಪತಿಗಳು ತಮ್ಮ ಮಗನ ಹೆಸರಿನಲ್ಲಿ, 'ಭರಣಿ ಪಿಕ್ಚರ್ಸ್' ಎಂಬ ಲಾಂಛನವನ್ನು ಪ್ರಾರಂಭಿಸಿದರು.

ರೇಡಿಯೊ ಸಿಲೊನ್

’ಸಿಲೋನ್ ರೇಡಿಯೊ ಸ್ಟೇಷನ್’ ನಲ್ಲಿ 'ಕನ್ನಡ ಪಾಡಲ್' ಕಾರ್ಯಕ್ರಮದಲ್ಲಿ ಹಾಡಿದ ನಳದಮಯಂತಿ ಕನ್ನಡ ಚಿತ್ರದ ಕೆಲವು ಹಾಡುಗಳು ಕೇಳಿಬರುತ್ತಿದ್ದವು. ಅವುಗಳ ವಿವರಗಳು ಹೀಗಿವೆ.

  • ’ಅರಸಂಜೆನೀಡಿದ ಅಮರಸಂದೇಶವದು’ ಅನುರಾಗದ ಅಲೆಗಳನು ಏಳಿಸುತಾ ನಿಂತಿಹುದು
  • ಮಾನಧಮಾನ ಸಹಿಸೆನೊ ಜಿಯಾ ಮೊರೆ ಕೇಳಿ ಸಲಹೊ ಮಹನೀಯ,
  • ಬೆಂಬಿಡದೆ ನದೆದಂತದವಳ ಬಿಸಿ ಕಂಬನಿಗೆ ಗುರಿಯಾದಳಾ,
  • ಕಂಡೇ ಜೀವನ ಸಾರಥಿಯಾ ಮುದಗೊಂಡೆ ಬೆಳಗಿ ನಯನಾರತಿಯಾ ಓ..ಓ
  • ಹಾಗೂ ಪತಿಪಾದ ಕಮಲಗಳ ಕಾರುಣ್ಯ ಪಡೆದಿರುವ ಸುದತಿಯಾವಳೋ ಕಾಣೆ ವೈಭವಕೆ ಮರುಳಾಗಿ ಒಲಿದವಳು ನಾನಲ್ಲ, ಅಭೋಗ ಲಾಲಸೆಗೆ ಗುರಿಯಾದ ಸತಿಯಲ್ಲ,

ಇವೇ ಮೊದಲಾದ ಹಾಡುಗಳು ಒಂದು ತೆರನ ಗುಂಗನ್ನು ರಸಿಕರ ಮನಸ್ಸಿನಲ್ಲಿ ಹಿಡಿಸಿ ಬಿಡುತ್ತಿದ್ದವು. ಎಚ್.ಎಂ.ವಿ ಧ್ವನಿಮುದ್ರಿಕೆ ೭೮ ಆಪ್.ಪಿ.ಎಂ.ನಲ್ಲಿವೆ.ಅವು ಈಗ ಲಭ್ಯವಿಲ್ಲ. ಹಳೆಯ ಹಾಡುಗಳನ್ನು ಸಂಗ್ರಹಿಸುವವರಿಗೆ ಇದೊಂದು ದೊಡ್ಡ ತೊಡಕಾಗಿ ಪರಿಣಮಿಸಿದೆ. ಇಂಗ್ಲೀಷ್ ಕವಿ ಕೀಟ್ಸ್ ಹೇಳುವಂತೆ, ಹರ್ಡ್ ಮೆಲೊಡೀಸ್ ಆರ್ ಸ್ವೀಟ್, ಬಟ್ ದೋಸ್ ಅನ್ ಹರ್ಡ್ ಆರ್ ಮಚ್ ಮೋರ್ ಸ್ವೀಟರ್’ (Heard melodies are sweet; but those unheard are much more sweeter) ಒಂದು ಸೋಲೊ ಮತ್ತು ಯುಗಳಗೀತೆಗಳನ್ನು ಹಾಡಿದ್ದಾರೆಂದು, ಜಯಸಿಂಹರವರ ದಾಖಲೆಯಿಂದ ತಿಳಿದುಬರುವ ಅಂಶಗಳು.

  • ’ಸಖಿಯೇ ನಿನ್ನಯ ಹೃದಯ ರತುನವ,
  • ಹೇ ಸರ್ವಮಂಗಳೆಯೇ.. ಮಾಂಗಲ್ಯ ಮೂರುತಿಯೇ,
  • ಹಾಗೂ ಘಂಟಸಾಲ ವೆಂಕಟೇಶ್ವರ ರಾವ್ ಜೊತೆ ಹಾಡಿದ ಪ್ರೇಮಮಯ.. ಈ ಜೀವನವು ಪಾವನ..
  • ೧೯೮೦-೮೧ ರಲ್ಲಿ 'ಸಂಗೀತಾ ಸಂಸ್ಥೆ'ಯವರು, 'ಕನ್ನಡದಲ್ಲಿ ದೇವರನಾಮದ ಧ್ವನಿಸುರಳಿ'ಗಳ ಹಾಗೂ 'ಧ್ವನಿಮುದ್ರಿಕೆ'ಗಳನ್ನು ಹೊರತಂದರು.

ಈ ಎಂಟೂ ಗೀತೆಗಳ ಧ್ವನಿಸುರಳಿಗಳು ಮತ್ತು ಧ್ವನಿಚಕ್ರವನ್ನು ಎಚ್.ಎಂ.ವಿ. ಈಗ ಮಾರುಕಟ್ಟೆಗೆ ತರುವುದಿದೆ. ನಳದಮಯಂತಿ', ೧೯೫೭ ರಲ್ಲಿ ಹೊರಬಂದ ನಾಲ್ಕನೆ ಚಿತ್ರ. ಈ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ, ಹಾಗೂ ಗೀತೆಗಳನ್ನು ರಚಿಸಿದವರು, ಹುಣಸೂರು ಕೃಷ್ಣಮೂರ್ತಿಗಳು. ವಿ.ಗೋಪಾಲಂ ಸಂಗೀತ ನಿರ್ದೇಶಕರು. ೨೬ ಹಾಡುಗಳು. ನಳನ ಪತ್ರ ಕೆಂಪರಾಜ್, ಆತ ಸ್ಪುರದೄಪಿ, ನಿರ್ದೇಶಕ. ದಮಯಂತಿಯ ಪಾತ್ರವನ್ನು ಭಾನುಮತಿಯವರು ಸುಂದರವಾಗಿ ನಿಭಾಯಿಸಿದರು. ನರಸಿಂಹರಾಜು, ವಾಸುದೇವ ಗಿರಿಮಾಜಿ, ಸಹಪಾತ್ರಗಳಲ್ಲಿದ್ದರು.

ನಾಯಕಿ ಮತ್ತು ಗಾಯಕಿ

ತೆಲುಗು, ತಮಿಳು ಚಿತ್ರಗಳ ಖ್ಯಾತ ಅಭಿನೇತ್ರಿ, ಸುಪ್ರಸಿದ್ಧ ಗಾಯಕಿ, ೧೯೫೭ ರಲ್ಲಿ ನಿರ್ಮಿತವಾದ ಒಂದು ತೆಲುಗುಚಿತ್ರ ’ವರುಡ ಕಾವಾಲಿ’ಯಲ್ಲಿ ಸಂಧರ್ಬೋಚಿತವಾಗಿ ಬರುವ 'ಕೃಷ್ಣಾನೀ ಬೇಗನೆ ಬಾರೋ' ಎಂಬ ಸುಪ್ರಸಿದ್ಧ ದಾಸರ ಕೀರ್ತನೆಯನ್ನು ಹಿನ್ನೆಲೆ ಗಾಯನಕ್ಕೆ ಭಾನುಮತಿ ಧ್ವನಿ ನೀಡಿದ್ದಾರೆ. ಆ ಚಿತ್ರದ ಸಂಗೀತ ನಿರ್ದೇಶಕ, ಜಿ.ರಾಮನಾಥನ್. ಡಾ. ರಾಜ್ ಕುಮಾರ್ ಜೊತೆ, 'ಅಣ್ಣ-ತಂಗಿ' ಚಿತ್ರದಲ್ಲೂ ರಾಜ್ ಜೋಡಿಯಾಗಿ ಅವರು ಅಭಿನಯಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಆಪಾತ್ರವನ್ನು ಬಿ. ಸರೋಜಾದೇವಿಯವರು, ಅಭಿನಯಿಸಿದರು.

ಪ್ರಶಸ್ತಿ ಪುರಸ್ಕಾರಗಳು

  • ಭಾರತ ಸರಕಾರದ 'ಪದ್ಮಶ್ರೀ' ಪ್ರಶಸ್ತಿ, ೧೯೬೬
  • ಭಾರತ ಸರಕಾರದ ರಾಷ್ಟ್ರಪತಿಯವರಿಂದ 'ಅಂತಸ್ತು'ಲು, 'ಪಲನತಿ ಯುದ್ಧಮ್' ಚಿತ್ರಕ್ಕೆ, ಅತ್ಯುತ್ತಮ ನಾಯಕಿನಟಿಯ ಪ್ರಶಸ್ತಿ ರಾಷ್ಟ್ರಪತಿ
  • ತಮಿಳುನಾಡು ಸರಕಾರದಿಂದ 'ಕಲೈಮಮಣಿ' (ಕಲೆಯ ಆರಾಧ್ಯದೇವತೆ) ಪದವಿಯ ಘೋಷಣೆ, ೧೯೮೩
  • 'ಗೌರವ ಡಾಕ್ಟೊರೇಟ್', ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ ತಿರುಪತಿ, ೧೯೮೪
  • ಆಂಧ್ರ ವಿಶ್ವವಿದ್ಯಾಲಯ , ವಿಶಾಖಪಟ್ನಮ್, 'ಕಲಾಪ್ರಪೂರ್ಣ ಪ್ರಶಸ್ತಿ', ೧೯೭೫
  • ಆಂಧ್ರಪ್ರದೇಶ ಸರಕಾರದ ವತಿಯಿಂದ 'ರಘುಪತಿ ವೆಂಕಯ್ಯ ಪ್ರಶಸ್ತಿ', ೧೯೮೬
  • 'ಬೆಸ್ಟ್ ಡೈರೆಕ್ಟರ್, ನಂದಿ ಅವಾರ್ಡ್', ೧೯೮೬
  • ಚೆನ್ನೈನ ರಾಜ-ಲಕ್ಷ್ಮಿ ಫೌಂಡೇಶನ್ ವತಿಯಿಂದ 'ರಾಜ-ಲಕ್ಷ್ಮಿ ಪ್ರಶಸ್ತಿ', ೧೯೯೮
  • ಆಂಧ್ರ ಪ್ರದೇಶ ಸರಲಾರದವತಿಯಿಂದ 'ಎಂಟಿಆರ್ ನ್ಯಾಷನಲ್ ಪ್ರಶಸ್ತಿ', ೨೦೦೦
  • 'ಪ್ರತಿಷ್ಠಿತ ಫದ್ಮ ಭೂಷಣ, ರಾಷ್ಟ್ರ ಪ್ರಶಸ್ತಿ', ೨೦೦೩
  • 'ನಾಲೊನೇನು' ಎಂಬ ಪುಸ್ತಕಕ್ಕಾಗಿ, ಅತ್ಯುತ್ತಮ ಸಿನೆಮಾ ಪುಸ್ತಕಬರಹಕ್ಕಾಗಿ ದೊರೆತ 'ನ್ಯಾಶನಲ್ ಫಿಲ್ಮ್ ಪ್ರಶಸ್ತಿ', ೧೯೯೪.

ಮರಣ

'ಪಿ. ಭಾನುಮತಿ'ಯವರು ಸನ್ ೨೦೦೫ ರ, ಡಿಸೆಂಬರ್, ೨೪ ರಂದು ಚೆನ್ನೈನಗರದಲ್ಲಿ ದೈವಾಧೀನರಾದರು.

🔥 Top keywords: ಮುಖ್ಯ ಪುಟಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಕನ್ನಡಗಾದೆಪಿ.ಲಂಕೇಶ್ಬಸವೇಶ್ವರದ.ರಾ.ಬೇಂದ್ರೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನ್ನಡ ಅಕ್ಷರಮಾಲೆಶಿವರಾಮ ಕಾರಂತಭಾರತದ ಸಂವಿಧಾನಕನ್ನಡ ಸಂಧಿಕನ್ನಡ ಗುಣಿತಾಕ್ಷರಗಳುಕರ್ನಾಟಕದ ಏಕೀಕರಣಬಿ. ಆರ್. ಅಂಬೇಡ್ಕರ್ಗೌತಮ ಬುದ್ಧಮಹಾತ್ಮ ಗಾಂಧಿಕರ್ನಾಟಕರಾಘವಾಂಕಕರ್ನಾಟಕದ ಜಿಲ್ಲೆಗಳುಕರ್ನಾಟಕದ ಇತಿಹಾಸವಚನ ಸಾಹಿತ್ಯಪುರಂದರದಾಸರಾಷ್ಟ್ರೀಯ ಸೇವಾ ಯೋಜನೆಮಾಸ್ತಿ ವೆಂಕಟೇಶ ಅಯ್ಯಂಗಾರ್ಹೊಯ್ಸಳಭಾರತೀಯ ಮೂಲಭೂತ ಹಕ್ಕುಗಳುಅಕ್ಕಮಹಾದೇವಿಪೂರ್ಣಚಂದ್ರ ತೇಜಸ್ವಿರಾಮಾಯಣಪಂಪಕನ್ನಡ ಸಾಹಿತ್ಯಅರ್ಜುನಭಾರತೀಯ ಸಂಸ್ಕೃತಿಜಾನಪದಸಮಾಸಜನಪದ ಕಲೆಗಳು