ರೀಸಸ್ ಮಂಗ

ರೀಸಸ್ ಮಂಗ
ಗಂಡು, ಗೋಕರ್ಣ ಅರಣ್ಯ, ನೇಪಾಳ
ಗಲ್ತಾಜಿ, ಜೈಪುರದಲ್ಲಿ ಮರಿಯೊಂದಿಗೆ ಹೆಣ್ಣು
Conservation status

Least Concern  (IUCN 3.1)[೧]
Scientific classification e
ಕ್ಷೇತ್ರ:ಯೂಕ್ಯಾರ್ಯೋಟಾ
ಸಾಮ್ರಾಜ್ಯ:ಅನಿಮೇಲಿಯ
ವಿಭಾಗ:ಕಾರ್ಡೇಟಾ
ವರ್ಗ:ಮ್ಯಾಮೇಲಿಯಾ
ಗಣ:ಪ್ರೈಮೇಟ್ಸ್
ಕುಟುಂಬ:ಸರ್ಕೋಪಿತೇಸಿಡೇ
ಕುಲ:ಮಕಾಕಾ
ಪ್ರಜಾತಿ:
M. mulatta
Binomial name
Macaca mulatta
(Zimmermann, 1780)[೨]
Rhesus macaque native range
Synonyms[೩]
Species synonymy
  • Simia fulvus (Kerr, 1792)
  • Simia rhesus Audebert, 1798
  • Simia erythraea Shaw, 1800
  • Macaca nipalensis Hodgson, 1840
  • Macaca oinops Hodgson, 1840
  • Inuus sanctijohannis R. Swinhoe, 1866
  • Inuus sancti-johannis R. Swinhoe, 1866
  • Macacus lasiotus Gray, 1868
  • Macacus tcheliensis A. Milne-Edwards, 1872
  • Macacus vestitus A. Milne-Edwards, 1892
  • Macacus rhesus villosus True, 1894
  • Pithecus littoralis Elliot, 1909
  • Macaca siamica Kloss, 1917
  • Macaca mulatta mcmahoni Pocock, 1932

ರೀಸಸ್ ಮಂಗವು ಪ್ರೈಮೇಟ್ ಗಣ, ಸರ್ಕೊಪಿತಿಸಿಡೀ ಕುಟುಂಬ, ಸರ್ಕೊಪಿತಿಸಿನೀ ಉಪಕುಟುಂಬ, ಮಕಾಕ ಜಾತಿಯ ನಾಲ್ಕು ಪ್ರಭೇದಗಳ ಪೈಕಿ ಒಂದು ಮಂಗ. ದ್ವಿನಾಮ ಪದ್ಧತಿ ಹೆಸರು: ಮಕಾಕ ಮುಲೇಟ. ದಕ್ಷಿಣ ಮತ್ತು ಆಗ್ನೇಯ ಏಷ್ಯವಾಸಿ. ಭಾರತ ಉಪಖಂಡದ ಉತ್ತರ ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿವೆ.

ಲಕ್ಷಣಗಳು

ಹಳದಿ ಮಿಶ್ರಿತ ಅಥವಾ ಮರಳಿನ ಬಣ್ಣ; 47-64 ಸೆಮೀ ಉದ್ದದ ಬಲಿಷ್ಠ ದೇಹ; 20-30 ಸೆಂಮೀ ಉದ್ದದ ಬಾಲ;[೪] 4.5-11 ಕಿ.ಗ್ರಾಮ್ ತೂಕ; ಕಿತ್ತಳೆ-ಕೆಂಪು ಬಣ್ಣದ ಕೂದಲು ಇರುವ ಪೃಷ್ಠ ಹಾಗೂ ಒಳತೊಡೆ; ಹಣೆಯಿಂದ ಹಿಮ್ಮುಖವಾಗಿ ಬೆಳೆದಿರುವ ಬೈತಲೆರಹಿತ ತಲೆಗೂದಲು - ಇವು ವಯಸ್ಕ ರ‍್ಹೀಸಸ್ ಮಂಗದ ವಿಶಿಷ್ಟ ಲಕ್ಷಣಗಳು.

ನಡವಳಿಕೆ

ಸಾಮಾಜಿಕ ಸ್ವಭಾವ

ಬಲಿಷ್ಠ ಗಂಡು ಮಂಗದ ನಾಯಕತ್ವದಲ್ಲಿ 8-180 ಸದಸ್ಯರಿರುವ ಗುಂಪುಗಳಲ್ಲಿ ವಾಸ. ಅಲೆಮಾರೀ ಪ್ರವೃತ್ತಿ.

ಸಂತಾನೋತ್ಪತ್ತಿ

ಅಕ್ಟೋಬರ್-ಡಿಸೆಂಬರ್ ಗಂಡುಹೆಣ್ಣುಗಳು ಕೂಡುವ ಕಾಲ.

ಆಹಾರ

ಹಣ್ಣು, ಬೀಜ, ಬೇರು, ಮೂಲಿಕೆ ಮತ್ತು ಚಿಕ್ಕ ಕೀಟಗಳು.

ಧಾರ್ಮಿಕ ಮಹತ್ತ್ವ

ಹಿಂದು ಮತ್ತು ಬೌದ್ಧರಿಗೆ ಇದು ಪವಿತ್ರ ಪ್ರಾಣಿ. ಎಂದೇ, ಭಾರತದಲ್ಲಿ ಮಾನವ ಆವಾಸ ಮತ್ತು ದೇವಾಲಯಗಳ ಆಸುಪಾಸಿನಲ್ಲಿ ಇವು ನೆಲಸಿವೆ.

ವೈದ್ಯಕೀಯ ಮಹತ್ವ

ದೈಹಿಕ ಪ್ರಕ್ರಿಯೆಗಳಲ್ಲಿ ಮಾನವನನ್ನು ಹೋಲುವುದರಿಂದ ವೈದ್ಯಕೀಯ ಮತ್ತು ಮನೋವೈಜ್ಞಾನಿಕ ಅಧ್ಯಯನಗಳಲ್ಲಿ ಪ್ರಯೋಗಪಶುವಾಗಿ ವ್ಯಾಪಕ ಬಳಕೆ. ಮಾನವನ ಕೆಂಪು ರಕ್ತಕಣಗಳ ಮೇಲ್ಮೈಯಲ್ಲಿರುವ ರ‍್ಹೀಸಸ್ ಅಂಶ ಎಂಬ ಪ್ರತಿಜನಕಗಳು (ಆಂಟಿಜೆನ್) ರ‍್ಹೀಸಸ್ ಮಂಗಗಳ ರಕ್ತದಲ್ಲಿ ಮೊದಲು ಪತ್ತೆಯಾಯಿತು.

ಉಲ್ಲೇಖಗಳು

ಹೊರಗಿನ ಕೊಂಡಿಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: