ಸುಹಾಸಿನಿ ಮಣಿರತ್ನಮ್

(ಸುಹಾಸಿನಿ ಮಣಿರತ್ನಂ ಇಂದ ಪುನರ್ನಿರ್ದೇಶಿತ)

ಸುಹಾಸಿನಿ ಮಣಿ ರತ್ನಮ್ (ಜನನ ಆಗಸ್ಟ್ ೧೫,[೧] ೧೯೬೧, ಹುಟ್ಟುಹೆಸರು ಸುಹಾಸಿನಿ) ದಕ್ಷಿಣ ಭಾರತದ ಚಿತ್ರನಟಿ. ಅವರು ೧೯೮೦ರಲ್ಲಿ ತಮಿಳು ಚಲನಚಿತ್ರ ”ನೆಂಜತಾಯ್ ಕಿಲ್ಲಾದೆ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು.[೨]

ಸುಹಾಸಿನಿ ಮಣಿರತ್ನಂ
ಜನನ (1961-08-15) ೧೫ ಆಗಸ್ಟ್ ೧೯೬೧ (ವಯಸ್ಸು ೬೨)
ವೃತ್ತಿ(ಗಳು)ನಟಿ ನಿರ್ದೇಶಕಿ, ನಿರ್ಮಾಪಕಿ, ಬರಹಗಾರ್ತಿ
Years active1980–present
ಸಂಗಾತಿ(s)ಮಣಿರತ್ನಂ
(1988–present)
ಮಕ್ಕಳು1

ಸುಹಾಸಿನಿ ಜನಿಸಿದ್ದು ಚೆನ್ನೈನಲ್ಲಿ. ಇವರ ತಂದೆ ಖ್ಯಾತ ನಟ ಚಾರು ಹಾಸನ್. ಕಮಲ್ ಹಾಸನ್ ಸುಹಾಸಿನಿ ಅವರ ಚಿಕ್ಕಪ್ಪ. ಚಲನಚಿತ್ರ ನಿರ್ದೇಶಕ ಮಣಿರತ್ನಂ ಸುಹಾಸಿನಿ ಅವರ ಪತಿ.

"ನೆಂಜತ್ತೆ ಕಿಳ್ಳಾದೆ" ಚಿತ್ರದ ಮೂಲಕ ನಟಿಯಾದ ಸುಹಾಸಿನಿಯವರು ನಿರ್ದೇಶನ, ನಿರ್ಮಾಣ ವಿಭಾಗಗಳಲ್ಲಿಯೂ ಅನುಭವ ಹೊಂದಿದ್ದಾರೆ.

ಕನ್ನಡದಲ್ಲಿ "ಉಷಾ", "ಬೆಂಕಿಯಲ್ಲಿ ಅರಳಿದ ಹೂವು" ಚಿತ್ರಗಳ ಮೂಲಕ ಕೆ ಬಾಲಚಂದರ್ ಅವರ ಚಿತ್ರಗಳಲ್ಲಿ ಪರಿಚಿತರಾದ ಸುಹಾಸಿನಿ ಮುಂದೆ "ಸುಪ್ರಭಾತ", "ಬಂಧನ", "ಹೊಸ ನೀರು", "ಮುತ್ತಿನ ಹಾರ", "ಹಿಮಪಾತ", "ಅಮೃತವರ್ಷಿಣಿ", "ಯಾರಿಗೆ ಸಾಲುತ್ತೆ ಸಂಬಳ", "ಮಾತಾಡು ಮಾತಾಡು ಮಲ್ಲಿಗೆ", "ಹೆಂಡ್ತೀಗೆ ಹೇಳ್ತೀನಿ", "ಸ್ಕೂಲ್ ಮಾಸ್ಟರ್ ", "ಎರಡನೇ ಮದುವೆ" ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

"ಸಿಂಧು ಭೈರವಿ’" ಚಿತ್ರದ ಅಭಿನಯಕ್ಕಾಗಿ ಸುಹಾಸಿನಿ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿದೆ. ದಕ್ಷಿಣ ಭಾರತದ ಪ್ರಸಿದ್ಧ ನಟರಾದ ವಿಷ್ಣುವರ್ಧನ್, ಅನಂತನಾಗ್, ರಜನೀಕಾಂತ್, ಮುಮ್ಮುಟಿ, ಮೋಹನ್ ಲಾಲ್, ಚಿರಂಜೀವಿ, ರಮೇಶ್ ಮುಂತಾದ ನಾಯಕನಟರು, ಎಲ್ಲಾ ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಸುಹಾಸಿನಿ, "ಇಂದಿರಾ" ಎಂಬ ಚಿತ್ರವನ್ನೂ, "ಪೆಣ್ " ಎಂಬ ದೂರದರ್ಶನ ಧಾರವಾಹಿಯನ್ನೂ ನಿರ್ದೇಶಿಸಿದ್ದಾರೆ. ತಮ್ಮ ಪತಿ ಮಣಿರತ್ನಂ ಅವರೊಂದಿಗೆ ಚಿತ್ರಗಳ ನಿರ್ಮಾಣದಲ್ಲೂ ಅವರು ಸಹಭಾಗಿಗಳಾಗಿದ್ದಾರೆ. ಅಲ್ಲದೆ ದೂರದರ್ಶನದಲ್ಲಿ ಸಿನಿಮಾ ವಿಮರ್ಶೆ, ಸಾಮಾಜಿಕ ಸೇವಾಕ್ಷೇತ್ರಗಳಲ್ಲಿ ಭಾಗವಹಿಸುತ್ತಾರೆ.

ಆಯ್ದ ಚಲನಚಿತ್ರಗಳ ಪಟ್ಟಿ

ಸುಹಾಸಿನಿ ಅಭಿನಯದ ಕೆಲವು ಚಿತ್ರಗಳನ್ನು ಈ ಪಟ್ಟಿಯಲ್ಲಿ ನೀಡಲಾಗಿದೆ.

ಕನ್ನಡ

ವರ್ಷಚಿತ್ರಪಾತ್ರನಿರ್ದೇಶನಭೂಮಿಕೆ
೧೯೮೩ಬೆಂಕಿಯಲ್ಲಿ ಅರಳಿದ ಹೂವು[೩]ಕೆ.ಬಾಲಚಂದರ್ಜೈಜಗದೀಶ್, ಪವಿತ್ರಾ
೧೯೮೪ಬಂಧನ[೪]ಎಸ್.ವಿ.ರಾಜೇಂದ್ರಸಿಂಗ್ ಬಾಬುವಿಷ್ಣುವರ್ಧನ್, ಜೈಜಗದೀಶ್
೧೯೮೬ಉಷಾರಾಘವರಾಮಕೃಷ್ಣ
೧೯೮೬ಹೊಸ ನೀರು[೫]ಕೆ.ವಿ.ಜಯರಾಂಅನಂತ್ ನಾಗ್
೧೯೮೮ಸುಪ್ರಭಾತ[೬]ದಿನೇಶ್ ಬಾಬುವಿಷ್ಣುವರ್ಧನ್
೧೯೯೦ಮುತ್ತಿನಹಾರ[೭]ಎಸ್.ವಿ.ರಾಜೇಂದ್ರಸಿಂಗ್ ಬಾಬುವಿಷ್ಣುವರ್ಧನ್
೧೯೯೫ಹಿಮಪಾತಎಸ್.ವಿ.ರಾಜೇಂದ್ರಸಿಂಗ್ ಬಾಬುವಿಷ್ಣುವರ್ಧನ್, ಜಯಪ್ರದಾ, ಜೈಜಗದೀಶ್
೧೯೯೭ಅಮೃತವರ್ಷಿಣಿದಿನೇಶ್ ಬಾಬುರಮೇಶ್, ಶರತ್ ಬಾಬು
೧೯೯೮ಹೆಂಡ್ತಿಗೇಳ್ತೀನಿದಿನೇಶ್ ಬಾಬುವಿಷ್ಣುವರ್ಧನ್
೧೯೯೯ವಿಶ್ವಶಿವಮಣಿಶಿವರಾಜ್ ಕುಮಾರ್, ಅನಂತ್ ನಾಗ್
೨೦೦೦ಯಾರಿಗೆ ಸಾಲುತ್ತೆ ಸಂಬಳಎಂ.ಎಸ್.ರಾಜಶೇಖರ್ಶಶಿಕುಮಾರ್
೨೦೦೦ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿಕೂಡ್ಲು ರಾಮಕೃಷ್ಣಅನಂತ್ ನಾಗ್,ರಾಮಕೃಷ್ಣ, ತಾರ
೧೯೯೦ಎಲ್ಲರ ಮನೆ ದೋಸೆನುಎಚ್.ಎನ್.ಪ್ರಕಾಶ್ರಾಮ್ ಕುಮಾರ್, ಶ್ರುತಿ
೨೦೦೧ಹಾಲು ಸಕ್ಕರೆಯೋಗಿಶ್ ಹುಣಸೂರುದೇವರಾಜ್, ಶಶಿಕುಮಾರ್, ಜಗ್ಗೇಶ್, ಅರ್ಚನಾ
೨೦೦೩ಅಣ್ಣಾವ್ರುಓಂಪ್ರಕಾಶ್ ರಾವ್ಅಂಬರೀಶ್, ದರ್ಶನ್
೨೦೦೭ಮಾತಾಡ್ ಮಾತಾಡು ಮಲ್ಲಿಗೆನಾಗತಿಹಳ್ಳಿ ಚಂದ್ರಶೇಖರ್ವಿಷ್ಣುವರ್ಧನ್
೨೦೧೦ಎರಡನೇ ಮದುವೆದಿನೇಶ್ ಬಾಬುಅನಂತ್ ನಾಗ್
೨೦೧೦ಸ್ಕೂಲ್ ಮಾಸ್ಟರ್ದಿನೇಶ್ ಬಾಬುವಿಷ್ಣುವರ್ಧನ್
೨೦೧೧ಮತ್ತೊಂದು ಮದುವೇನಾದಿನೇಶ್ ಬಾಬುಅನಂತ್ ನಾಗ್
೨೦೧೩"ಮೈನಾ"ನಾಗಶೇಖರ್

ಚೇತನ್ , ನಿತ್ಯಾ ಮೆನನ್

ಹಿಂದಿ/ಇಂಗ್ಲಿಷ್

ವರ್ಷಸಿನಿಮಾಪಾತ್ರಟಿಪ್ಪಣಿ
೨೦೧೫ವೈಟಿಂಗ್ಪಂಕಜ

ನಿರ್ದೇಶಕಿಯಾಗಿ

ವರ್ಷಸಿನಿಮಾನಟರುಟಿಪ್ಪಣಿ
೧೯೯೫ಇಂದಿರಾಅನು ಹಾಸನ್, ಅರ್ವಿಂದ್ ಸ್ವಾಮಿ
೧೯೯೧ಪೆನ್ನಟಿ ಸಹ

ಕಂಠದಾನಿಯಾಗಿ

ವರ್ಷಸಿನಿಮಾಡಬ್ಭಾಷೆ
೧೯೯೧ದಳಪತಿಶೋಬನತಮಿಳು
೧೯೯೩ತೀರುದ ತೀರುದಹೀರ ರಾಜ್ಗೋಪಾಲ್ತಮಿಳು
೧೯೯೮ಉಯಿರೆಮನಿಷಾ ಕೊಯಿರಾಲತಮಿಳು

ಉಲ್ಲೇಖಗಳು