ವಿಷಯಕ್ಕೆ ಹೋಗು

ಹಾರುವ ತಟ್ಟೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಾರುವ ತಟ್ಟೆಗಳ ಒಂದು ಕಾಲ್ಪನಿಕ ಚಿತ್ರ

ಬ್ರಹ್ಮಾಂಡಕ್ಕೆ ಆದಿ, ಅಂತ್ಯಗಳಿಲ್ಲ. ಬ್ರಹ್ಮಾಂಡ ಕಲ್ಪನಾತೀತವಾದುದು. ಭೂಮಿ ಇರುವ ಸೌರಮಂಡಲ ಕ್ಷೀರ ಪಥ (Milky way) (ಆಕಾಶ ಗಂಗೆ) ವೆಂದು ಕರೆಯಲ್ಪಡುವ ಗ್ಯಾಲಕ್ಸಿಯಲ್ಲಿದೆ. ಆಕಾಶಗಂಗೆ ಊಹಿಸಲಾರದಷ್ಟು ವಿಸ್ತಾರವಾಗಿದೆ. ಅದರ ಯಾವುದೋ ಒಂದು ಬಿಂದುವಿನಲ್ಲಿ ಸೌರ ಮಂಡಲದ ಸದಸ್ಯರಾದ ಸೂರ್ಯ, ಭೂಮಿ ಮತ್ತಿತರ ಗ್ರಹಗಳಿವೆ. ವೀಕ್ಷಕನಿಂದ ಅಥವಾ ವೀಕ್ಷಕನಿಗೆ ಸುಲಭವಾಗಿ ವಿವರಿಸಲಾಗದ  ವಾಯವಿಕ ವಸ್ತು ಅಥವಾ ದ್ಯುತಿ ವಿದ್ಯಮಾನದ ಜನಪ್ರಿಯ ನಾಮವೇ ಹಾರುವ ತಟ್ಟೆ. ವರದಿಯಾದವುಗಳ ಪೈಕಿ ಹೆಚ್ಚಿನವು ಸಾಸರು ಅಥವಾ ಬಿಲ್ಲೆಯ ಆಕಾರದವಾಗಿದ್ದರಿಂದ ಈ ಹೆಸರು.

ಕಿರು ಪರಿಚಯ

ಖಗೋಳ ವಿಜ್ಞಾನದ ಭಾಷೆಯಲ್ಲಿ ಹೇಳುವುದಾದರೆ ಹಾರುವ ತಟ್ಟೆಗಳು ಅಪರಿಚಿತ ಹಾರಾಡುವ ವಸ್ತುಗಳು (Unidentified Flying Objects - UFO) ಎಂಬ ಗುಂಪಿಗೆ ಸೇರುತ್ತವೆ. ಇದುವರೆಗೂ ಗುರುತಿಸಲ್ಪಡದೇ ಇರುವಂಥಹ ವಿಸ್ಮಯಕಾರಿ ವಸ್ತುಗಳೆಲ್ಲವೂ ಇದೇ ಗುಂಪಿಗೆ ಸೇರುತ್ತವೆ. ಹಾಗಾಗಿ ಅಂತರಿಕ್ಷದಲ್ಲಿ ಹಾರಾಡಿದಂತೆ ಕಾಣುವ ವಿಸ್ಮಯಕಾರಿ ಅಪರಿಚಿತ ಆಕಾಶ ಕಾಯಗಳೇ ಹಾರುವ ತಟ್ಟೆಗಳು ಎಂಬುದಾಗಿ ವ್ಯಾಖ್ಯಾನಿಸಬಹುದು. ಭೂಮಿಯನ್ನು ಬಿಟ್ಟು ಜೀವಿಗಳನ್ನು ಹೊಂದಿರುವ ಗ್ರಹಗಳು ಈ ಬ್ರಹ್ಮಾಂಡದಲ್ಲಿ ಬೇರೆಲ್ಲೋ ಇದ್ದು ಅಲ್ಲಿಂದಲೇ ಈ ಹಾರಾಡುವ ವಸ್ತುಗಳು ಬರುತ್ತವೆ ಎಂದೂ ಸಹ ಹಲವರು ನಂಬುತ್ತಾರೆ.

ಹಾರುವ ತಟ್ಟೆಗಳ ಕಿರು ಇತಿಹಾಸ

ಈ ಹಾರುವ ತಟ್ಟೆಗಳ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಪ್ರಾಚೀನ ಕಾಲದಿಂದಲೂ ಇಂಥ ಅಸಾಧಾರಣ ವಾಯವಿಕ ವಿದ್ಯಮಾನಗಳು ಗೋಚರಿಸಿದ ವರದಿಗಳಿದ್ದರೂ ಎರಡನೆಯ ಜಾಗತಿಕ ಯುದ್ಧಾನಂತರ ವಾಯುಯಾನ ಹಾಗೂ ಆಕಾಶಯಾನ ವಿಜ್ಞಾನಗಳಲ್ಲಿ ಆದ ಬೆಳೆವಣಿಗೆಗಳು ಮತ್ತು ಅಮೆರಿಕದಲ್ಲಿ ಗೋಚರಿಸಿತೆಂದು (1947) ಹೇಳಲಾದ ವರದಿಯೊಂದಕ್ಕೆ ದೊರೆತ ಪ್ರಚಾರದಿಂದಾಗಿ ಈ ವಿದ್ಯಮಾನ ವಿಜ್ಞಾನಿಗಳ ಆಸಕ್ತಿ ಕೆರಳಿಸಿತು. ತದನಂತರ ಇವು ಗೋಚರಿಸಿದ ಸಹಸ್ರಗಟ್ಟಳೆ ವರದಿಗಳು ಜಗತ್ತಿನಾದ್ಯಂತ ದಾಖಲಾಗಿವೆ.

ಶತಮಾನಗಳಿಂದಲೂ ಈ ವಿಷಯದ ಮೇಲೆ ಚರ್ಚೆಗಳು ನಡೆಯುತ್ತಲೇ ಬಂದಿವೆ. ೧೯೪೭ ರಲ್ಲಿ ಅಮೇರಿಕದ ವಾಶಿಂಗ್ಟನ್ ನಗರದ ಕೆನತ್ ಆರ್ನಾಲ್ಡ್ ಎಂಬ ವ್ಯಕ್ತಿಯೋರ್ವನು ಖಾಸಗಿ ವಿಮಾನವೊಂದರಲ್ಲಿ ಪಯಣಿಸುತ್ತಿದ್ದಾಗ ವಿಚಿತ್ರವಾದ, ತಟ್ಟೆಯಂತಹ ಆಕೃತಿಯುಳ್ಳ ಸುಮಾರು ೯ ವಸ್ತುಗಳು ಪರ್ವತಗಳ ಮೇಲಿನಿಂದ ಹಾದು ಹೋದವು,[೧] ಹಾಗೂ ಅವು ಅತ್ಯಂತ ವೇಗವಾಗಿ ಅಂದರೆ ಗಂಟೆಗೆ ಸುಮಾರು ೧೯೦೦ ಕಿ.ಮೀ, ಗೂ ಹೆಚ್ಚಿನ ವೇಗದಲ್ಲಿ ಚಲಿಸುತ್ತಿದ್ದವು ಎಂಬುದಾಗಿ ವರದಿ ಮಾಡಿದನು.[೨]

ವರ್ಗೀಕರಣ ಪ್ರಯತ್ನಗಳು

ಹಾರುವ ತಟ್ಟೆಗಳ ವೀಕ್ಷಣಾ ವರದಿಗಳನ್ನು ‘ರಾತ್ರಿಯಲ್ಲಿಯ ದೃಗ್ಗೋಚರ ಬೆಳಕುಗಳು’, ‘ಹಗಲಿನಲ್ಲಿಯ ದೃಗ್ಗೋಚರ ತಟ್ಟೆಗಳು’, ‘ರೇಡಾರ್ ಮುಖೇನ (ಕೆಲವೊಮ್ಮೆ ದೃಗ್ಗೋಚರಸಹಿತ) ಗೋಚರಿಸಿದವು’, ‘1, 2 ಅಥವಾ 3ನೆಯ ಬಗೆಯ ನಿಕಟ ಮುಖಾಮುಖಿಗಳು’ ಎಂದು ವರ್ಗೀಕರಿಸುವ ಪ್ರಯತ್ನಗಳೂ ಆಗಿವೆ. ಸಮೀಪದಲ್ಲಿ ಗೋಚರಿಸಿಯೂ ವೀಕ್ಷಕನ ಮೇಲಾಗಲೀ ಪರಿಸರದ ಮೇಲಾಗಲೀ ಯಾವುದೇ ಪರಿಣಾಮ ಉಂಟುಮಾಡದವು 1ನೆಯ, ಏನಾದರೂ ಪರಿಣಾಮ ಉಂಟುಮಾಡಿದವು 2ನೆಯ ಬಗೆಯ ನಿಕಟ ಮುಖಾಮುಖಿಗಳು. ‘ಹಾರುವ ತಟ್ಟೆಗಳಲ್ಲಿ’ ಪಯಣಿಸುತ್ತಿದ್ದವರೊಂದಿಗೆ ವೈಯಕ್ತಿಕ ಸಂಪರ್ಕ ಉಂಟಾದವು 3ನೆಯ ಬಗೆಯ ನಿಕಟ ಮುಖಾಮುಖಿ.

ಸತ್ಯಾಸತ್ಯತೆಯ ಪರೀಕ್ಷಣೆ

ಎಲ್ಲ ವರದಿಗಳ ಸತ್ಯಾಸತ್ಯತೆಯ ಪರೀಕ್ಷಣೆ ಸಾಧ್ಯವಾಗಿಲ್ಲವಾದರೂ ಪರೀಕ್ಷಿಸಿದವುಗಳ ಪೈಕಿ ಶೇಕಡಾ 90ರಷ್ಟು ಉಜ್ಜ್ವಲ ಗ್ರಹ ಅಥವಾ ನಕ್ಷತ್ರ, ವಿಮಾನ, ಪಕ್ಷಿ, ಬಲೂನ್, ಗಾಳಿಪಟ, ವಾಯವಿಕ ಫ್ಲೇರ್, ಉಲ್ಕೆ, ಉಪಗ್ರಹ, ವಿಶಿಷ್ಟ ಮೋಡ[೩] ಅಥವಾ ವೈದ್ಯುತ ವಿದ್ಯಮಾನಗಳಾಗಿದ್ದುವು. ಉಳಿದವುಗಳ ಪೈಕಿ ಕೆಲವು ಅಸಮರ್ಪಕ ವೀಕ್ಷಣೆ, ತಮಾಷೆಗಾಗಿ ಮಾಡಿದ ವಂಚನೆ ಅಥವಾ ಭ್ರಮೆ ಪ್ರಕರಣಗಳಾಗಿದ್ದವು. ಕೆಲವೇ ಕೆಲವು ಪ್ರಕರಣಗಳನ್ನು ವಿವರಿಸಲು ಸಾಧ್ಯವಾಗಿಲ್ಲ.

ಹಾರುವ ತಟ್ಟೆಗಳಿಂದ ರಾಷ್ಟ್ರೀಯ ಭದ್ರತೆಗೆ ಏನಾದರೂ ಧಕ್ಕೆ ಉಂಟಾದೀತೇ ಎಂಬುದನ್ನು ನಿರ್ಧರಿಸಲೋಸುಗ ಅಮೆರಿಕದ ವಾಯುಪಡೆ 12,618 ಗೋಚರ ಪ್ರಕರಣ ವರದಿಗಳನ್ನು ಪರಿಶೀಲಿಸಿತು (1947-69). ಇವುಗಳ ಪೈಕಿ 701 ಪ್ರಕರಣಗಳನ್ನು (5.6%) ತೃಪ್ತಿಕರವಾಗಿ ವಿವರಿಸಲು ಸಾಧ್ಯವಾಗಲಿಲ್ಲ.

ಅನ್ಯಗ್ರಹ ವಾಸಿಗಳ ಅಂತರಿಕ್ಷಯಾನ ನೌಕೆಗಳಿವು ಎಂದು ವಾದಿಸುವವರ ದೊಡ್ಡ ಗುಂಪೂ ಇದೆ. ಇವರ ವಾದ ನಿಜವೆಂದು ಸಾಧಿಸಬಲ್ಲ ಸಂಶಯಾತೀತವಾದ ಅಥವಾ ವಿಜ್ಞಾನ ಸ್ವೀಕಾರಾರ್ಹವಾದ ಸಾಕ್ಷ್ಯಾಧಾರ ಇನೂ ದೊರೆತಿಲ್ಲ.

ನೋಡಿ

ಉಲ್ಲೇಖಗಳು

ಹೊರ ಕೊಂಡಿಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
🔥 Top keywords: ಮುಖ್ಯ ಪುಟಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಕನ್ನಡಗಾದೆಪಿ.ಲಂಕೇಶ್ಬಸವೇಶ್ವರದ.ರಾ.ಬೇಂದ್ರೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನ್ನಡ ಅಕ್ಷರಮಾಲೆಶಿವರಾಮ ಕಾರಂತಭಾರತದ ಸಂವಿಧಾನಕನ್ನಡ ಸಂಧಿಕನ್ನಡ ಗುಣಿತಾಕ್ಷರಗಳುಕರ್ನಾಟಕದ ಏಕೀಕರಣಬಿ. ಆರ್. ಅಂಬೇಡ್ಕರ್ಗೌತಮ ಬುದ್ಧಮಹಾತ್ಮ ಗಾಂಧಿಕರ್ನಾಟಕರಾಘವಾಂಕಕರ್ನಾಟಕದ ಜಿಲ್ಲೆಗಳುಕರ್ನಾಟಕದ ಇತಿಹಾಸವಚನ ಸಾಹಿತ್ಯಪುರಂದರದಾಸರಾಷ್ಟ್ರೀಯ ಸೇವಾ ಯೋಜನೆಮಾಸ್ತಿ ವೆಂಕಟೇಶ ಅಯ್ಯಂಗಾರ್ಹೊಯ್ಸಳಭಾರತೀಯ ಮೂಲಭೂತ ಹಕ್ಕುಗಳುಅಕ್ಕಮಹಾದೇವಿಪೂರ್ಣಚಂದ್ರ ತೇಜಸ್ವಿರಾಮಾಯಣಪಂಪಕನ್ನಡ ಸಾಹಿತ್ಯಅರ್ಜುನಭಾರತೀಯ ಸಂಸ್ಕೃತಿಜಾನಪದಸಮಾಸಜನಪದ ಕಲೆಗಳು