ಚಿತ್ತಾಪುರ

ಚಿತ್ತಾಪುರ ಕರ್ನಾಟಕ ರಾಜ್ಯದ, ಕಲಬುರಗಿ ಜಿಲ್ಲೆಯ ಪುರಸಭೆ ಮತ್ತು ತಾಲ್ಲೂಕು ಕೇಂದ್ರವಾಗಿದೆ. ಇದು ಜಿಲ್ಲಾ ಕೇಂದ್ರದಿಂದ ೪೬ ಕಿ. ಮೀ ದೂರದಲ್ಲಿದೆ.[೨][೩]

ಚಿತ್ತಾಪುರ
Chitapur
ಪಟ್ಟಣ
Country ಭಾರತ
ರಾಜ್ಯಕರ್ನಾಟಕ
ಜಿಲ್ಲೆಗುಲ್ಬರ್ಗ
Area
 • Total೩.೫ km (೧.೪ sq mi)
Elevation
೪೦೩ m (೧,೩೨೨ ft)
Population
 (2011)
 • Total೩೧,೨೯೯[೧]
 • Density೭,೭೦೬.೮೬/km (೧೯,೯೬೦.೭/sq mi)
Languages
 • Officialಕನ್ನಡ
Time zoneUTC+5:30 (IST)
ಪಿನ್ ಕೋಡ್
585211
Telephone code08474
ಲಿಂಗ ಅನುಪಾತ1:1 ♂/♀
Websitechittapuratown.mrc.gov.in

ಜನಸಂಖ್ಯೆ

೨೦೧೧ರ ಭಾರತದ ಜನಗಣತಿಯ ಪ್ರಕಾರ ಚಿತ್ತಾಪುರ 31299 ಜನಸಂಖ್ಯೆಯನ್ನು ಹೊಂದಿದ್ದು, 15489 ಪುರುಷರು ಮತ್ತು 15810 ಮಹಿಳೆಯರು ಇದ್ದಾರೆ.[೧]

ಕೃಷಿ

ಇಲ್ಲಿರುವ ಎರಡು ಮುಖ್ಯ ನದಿಗಳೆ೦ದರೆ ಕೃಷ್ಣಾ ಮತ್ತು ಭೀಮಾ ಇದರ ಉಪ-ನದಿ ಕಾಗಿನಾ ಇರುತ್ತವೆ. ಕೃಷ್ಣಾ ಮೇಲ್ದಂಡೆ ಯೋಜನೆ ಇಲ್ಲಿನ ಕೃಷಿ ಯೋಜನೆಗಳಲ್ಲಿ ಮುಖ್ಯವಾದದ್ದು. ಚಿತ್ತಾಪುರ್ ತಾಲ್ಲೂಕಿನಲ್ಲಿ ಮಣ್ಣು ಕಪ್ಪು ಮಣ್ಣಾಗಿದ್ದು ಇಲ್ಲಿನ ಮುಖ್ಯ ಬೆಳೆಗಳು ಜೋಳ, ತೊಗರಿ, ನೆಲಗಡಲೆ, ಅಕ್ಕಿ ಮತ್ತು ಬೇಳೆಗಳು. ಇಲ್ಲಿ ಪ್ರಸಿದ್ಧ ನಾಗವಿ ದೇವಾಲಯ ಇದೆ. ಇದು ರಾಷ್ಟ್ರಕೂಟರ ಆಳ್ವಿಕೆಗೆ ಒಳಪಟ್ಟಿತ್ತು, ಇಂದಿಗೂ ಬಹಳ ಪ್ರಸಿದ್ದವಾಗಿದೆ.ತೆಂಗಳಿ, ನಾಲವಾರ, ಶಹಬಾದ, ರಾವೂರ, ಕಾಳಗಿ, ಗು೦ಡಗುರ್ತಿ, ವಾಡಿ, ಇ೦ಗಳಗಿ, ದಿಗ್ಗಾಂವ ಪ್ರಮುಖ ಹಳ್ಳಿಗಳು. ಅಲ್ಲದೇ ಇಲ್ಲಿ ಶಹಾಬಾದ್ ಕಲ್ಲುಗಳು ಪ್ರಸಿದ್ಧ. ಇದೆ ತಾಲೂಕಿನ ದಕ್ಷಿಣ ಭಾಗದಲ್ಲಿ ಭೀಮಾ ನದಿಯು ಹರಿಯುತ್ತದೆ ಇದೆ ನದಿಯ ದಡದ ಮೇಲೆ ಸುಪ್ರಸಿದ್ದ ಸನ್ನತಿ ಗ್ರಾಮದ ಹತ್ತಿರ ಚಂದ್ರಲಾಂಬ ದೇವಾಲಯವಿದೆ. ನಾಲವಾರ ರೇಲ್ವೆ ಸ್ಟೇಶನ್ ನಿಂದ 18 ಕಿ ಮೀ ದೂರದಲ್ಲಿರುತ್ತದೆ. ಈ ತಾಲೂಕಿನಲ್ಲಿ ಹೇರಳವಾಗಿ ಶಹಾಬಾದ ಕಲ್ಲುಗಳು ದೊರಿಯುವುದರಿಂದ ಸಿಮೆಂಟ್ ಕಾರ್ಖಾನೆಗಳು ಸಹ ಇವೆ.

ಆರೋಗ್ಯ ಕೇಂದ್ರ

ಚಿತ್ತಾಪುರದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಇದೆ.[೪]

ಶಿಕ್ಷಣ

  • ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜು, ಚಿತ್ತಾಪುರ[೫]
  • ಸರ್ಕಾರ ಪದವಿಪೂರ್ವ ಕಾಲೇಜು,ಚಿತ್ತಾಪುರ
  • ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ,ಚಿತ್ತಾಪುರ[೬]

ಸಾರಿಗೆ/ಸಂಪರ್ಕ

  • ಬಸ್ಸು :ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಸಂಚಾರ ಸೇವೆ ಒದಗಿಸುತ್ತದೆ.
  • ರೈಲು : ಚಿತ್ತಾಪುರದಲ್ಲಿ ರೈಲು ನಿಲ್ದಾಣ ಇದೆ. ಇಲ್ಲಿಂದ ಮುಂಬಯಿ, ಪುಣೆ, ಗುಲ್ಬರ್ಗ, ಸೋಲಾಪುರ್, ಬೆಂಗಳೂರು, ಹೈದ್ರಾಬಾದ್ ಮುಂತಾದ ನಗರಗಳಿಗೆ ಈ ರೈಲ್ವೆ ನಿಲ್ದಾಣದ ಮೂಲಕ ಸಂಚರಿಸಬಹುದು.
  • ವಿಮಾನ: ಹತ್ತಿರದ ವಿಮಾನ ನಿಲ್ದಾಣ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೈದ್ರಾಬಾದ್ 180 ಕಿ.ಮೀ ದೂರದಲ್ಲಿದೆ.

ಉಲ್ಲೇಖನಗಳು


🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ