ತೆಂಗಿನಕಾಯಿ ಮರಪಾಮೇ/ಅರೆಕೆಸಿಯಾ ಸಸ್ಯ ಕುಟುಂಬಕ್ಕೆ ಸೇರಿದ ಮರ. ಕೊಂಬೆಗಳು ಇರುವುದಿಲ್ಲ. ಗರಿಗಳು ಹಸ್ತಾಕಾರದಲ್ಲಿರುತ್ತವೆ. ಪಾಮೇಸಸ್ಯ ಕುಟುಂಬದಲ್ಲಿ ಈ ಮರ ಕೊಕಸ್ ಜಾತಿಗೆ ಸೇರಿದ ಮರ.[೧] . ಈ ಜಾತಿಯಲ್ಲಿ ಇರುವ ಒಂದೇ ಮರ ತೆಂಗಿನಮರ.ಗರಿಗಳು ಹರಿತವಾಗಿ ಹಚ್ಚ ಹಸಿರಾಗಿರುತ್ತವೆ. ಈ ಮರದ ಸಸ್ಯ ಶಾಸ್ತ್ರ ಹೆಸರು ಕೊಕಸ್ ನ್ಯುಸಿಫೆರಾ(cocos nucifera). ಮರದ ಮೇಲಿನ ಭಾಗದಲ್ಲಿ ವೃತ್ತಾಕಾರ ರೂಪದಲ್ಲಿ ಗರಿಗಳು ವ್ಯಾಪ್ತಿಸಿರುತ್ತವೆ. ತೆಂಗಿನ ಕಾಯಿಗಳು ದೊಡ್ಡದಾಗಿರುತ್ತವೆ. ಕಾಯಿಯ ಹೊರಭಾಗದಲ್ಲಿ ದಪ್ಪವಾಗಿ ಕತ್ತ/ನಾರು ಇರುತ್ತದೆ. ಕತ್ತದ ಒಳಗೆ ದಪ್ಪವಾದ, ಗಟ್ಟಿಯಾದ ಸಿಪ್ಪೆ ಇರುತ್ತದೆ. ಈ ಸಿಪ್ಪೆ ಒಳಗೆ ತಿರುಳು ಕಂಡು ಬರುತ್ತದೆ. ತಿರುಳು ಬೆಳ್ಳಗೆ ಇರುತ್ತದೆ.
ತೆಂಗಿನ ಮರ ಜನ್ಮದ ಬಗ್ಗೆ ಒಂದೇ ಅಭಿಪ್ರಾಯ ಇಲ್ಲ. ಬೇರೇ ಬೇರೇ ಅಭಿಪ್ರಾಯಗಳಿವೆ.<r FAO. pp. 3–4. ISBN 978-92-5-100853-9.</ref>[೩][೪]. ಕೆಲವರು ಇಂಡೋ-ಪೆಸಿಫಿಕ್ ಸಮುದ್ರ ಪ್ರಾಂತವೆಂದು ಅಭಿಪ್ರಾಯ ವ್ಯಕ್ತಪಡಿಸಿದರೆ, ಕೆಲವರು ಮೆಲನೆಸಿಯ (melanesia) ಅಥವಾ ಮಲೇಷಿಯಾ (malesia)ಆಗಿರಬಹುದು ಎಂದಿದ್ದಾರೆ .ಇನ್ನು ಬೇರೆಯವರು ಆಗ್ನೇಯ ದಿಶೆಯಲ್ಲಿದ್ದ ದಕ್ಷಿಣ ಅಮೆರಿಕಾ ಎಂದು ಭಾವಿಸಿದ್ದಾರೆ[೩][೪][೫]. ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳಿಂದ ಶೇಖರಣೆ ಮಾಡಿದ ೩೭-೫೫ ಮಿಲಿಯನ್ ವರ್ಷದ ಪಳೆಯುಳಿಕೆ(fossil) ಆಧಾರದಿಂದ ಇದರ ಮೂಲ ಸ್ಥಾನ ಈ ಎರಡು ದೇಶಗಳು ಎಂದು ಭಾವಿಸಲಾಗಿದೆ.
ಮರ
ನೇರವಾಗಿ ಎತ್ತರಕ್ಕೆ ಬೆಳೆಯುವ ಮರ. ಕೊಂಬೆಗಳಿರುವುದಿಲ್ಲ, ಗರಿಗಳಿರುತ್ತವೆ. ದೇಶವಾಳಿ ಮರ ೨೫-೩೦ ಮೀ. ಎತ್ತರ ಬೆಳೆಯುತ್ತದೆ. ಎಲೆಗಳು ಹಸ್ತ ರೂಪದಲ್ಲಿರುತ್ತವೆ. ಹಸ್ತಾಕಾರ ದಲ್ಲಿ ಪತ್ರಗಳು/ಎಲೆ/ಗರಿಗಳಿರುವ ಮರ, ಗಿಡಗಳನ್ನು ಪಾಮೇಸಸ್ಯ ಕುಟುಂಬಕ್ಕೆ ಸೇರಿಸಲಾಗಿದೆ. ತೆಂಗಿನಮರದ ಜೀವನ/ಕಾಲ ೮೦-೧೦೦ ವರ್ಷಗಳು. ಮರ ಹೂವುಗಳನ್ನು ೭-೧೦ ವರ್ಷದೊಳಗೆ ಬಿಡುತ್ತದೆ. ಮರದ ಕಾಂಡದ ಮೇಲಿನ ಕಡೆ ಭಾಗದಲ್ಲಿ ಗರಿಗಳನ್ನು ಬಿಡುತ್ತದೆ. ಮೇಲಿನ ಕಡೆ ಭಾಗದಲ್ಲಿ ೩೦ ಗರಿಗಳಿರುತ್ತವೆ. ಗರಿಗಳು ದೊಡ್ಡವಾಗಿ ೧೫-೨೦ ಅಡಿಗಳ ಉದ್ದ ಇರುತ್ತವೆ. ಮರದಲ್ಲಿ ೩೦ ಗರಿಗಳಿರುತ್ತವೆ. ತಿಂಗಳಿಗೊಂದು ಹೊಸ ಗರಿಯನ್ನು ಬಿಡುತ್ತದೆ. ಗರಿಯ ಜೀವನ ಕಾಲ ೩೦ ತಿಂಗಳುಗಳು, ಆಮೇಲೆ ಮರದಿಂದ ಗರಿ ಬೀಳುತ್ತದೆ. ಒಂದು ಮರದಿಂದ ೬೦ ಕಾಯಿಗಳು ಒಂದು ವರ್ಷಕ್ಕೆ ಬರುತ್ತವೆ. ಗಂಡು ಮತ್ತು ಹೆಣ್ಣು ಹೂವುಗಳು ಒಂದೇ ಮರದಲ್ಲಿ ಒಂದೇ ಕಡೆ ಇರುತ್ತವೆ. ಹೂವುಗಳು ಜೊಂಪಾಗಿ ಬಿಡುತ್ತವೆ. ಅವನ್ನು ಹೊಂಬಾಳೆಯೆಂದು ಕರೆಯುತ್ತಾರೆ. ಒಂದು ಮರದಲ್ಲಿ ೩೦ರ ತನಕ ಹೂ ಜೊಂಪೇ/ಗೊಂಚಲು (bunch) ಇರುತ್ತವೆ. ತಿಂಗಳಿಗೊಂದು ಹೂ ಗೊಂಚಲು ಹುಟ್ಟುತ್ತದೆ. ಒಂದು ಮರದಿಂದ ಒಂದು ಸಂವತ್ಸರ ಕಾಲದಲ್ಲಿ ೩೦-೬೦ ಕಾಯಿಗಳು ಉತ್ಪತ್ತಿಯಾಗುತ್ತವೆ. ಹೆಣ್ಣು ಹೂವು ಹುಟ್ಟಿದ ಮೇಲೆ ಕಾಯಿ ಆಗುವುದಕ್ಕೆ ಒಂದು ಸಂವತ್ಸರ ಕಾಲಬೇಕು.
ಸಸ್ಯಲಕ್ಷಣ
ತೆಂಗು 70 - 80 ವರ್ಷಗಳ ಕಾಲ ಬದುಕಿ ಫಲಕೊಡುವ ಒಂಟಿ ಕಾಂಡದ ವೃಕ್ಷ. ಮರದ ಬುಡದಲ್ಲಿ ಭದ್ರವಾದ ಬೇರುಗಳುಂಟು. ಕಾಂಡ ಕೊಂಬೆರಹಿತವಾಗಿದ್ದು ಬಿದ್ದ ಗರಿಗಳ ಗುರುತಿನಿಂದ ಕೂಡಿ ಸ್ತಂಭಾಕೃತಿಯಿಂದ 20 – 25 m. ಗೂ ಹೆಚ್ಚು ಎತ್ತರವಾಗಿ ಬೆಳೆಯುವುದು. ಮರದ ತುದಿಯಲ್ಲಿ ದಟ್ಟವಾಗಿ ಬೆಳೆದ ಬೇರೆ ಬೇರೆ ವಯಸ್ಸಿನ ಸುಮಾರು 30 - 40 ಗರಿಗಳಿರುತ್ತವೆ.
ಗಿಡದ ತುದಿಯ ಕೇಂದ್ರದಲ್ಲಿ ಸುಳಿಯಿದೆ. ಗರಿಗಳ ಉದ್ದ ಸುಮಾರು 4-6m. ಮಧ್ಯದ ದಿಂಡಿನ ಎರಡು ಕಡೆಯೂ ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿರುವ 200 ರಿಂದ 300 ಕಿರುಪತ್ರಗಳುಂಟು. ಒಂದು ಸಿಂಗಾರದಲ್ಲ (ಹೊಂಬಾಳೆಯಲ್ಲಿ) ಗಂಡು ಮತ್ತು ಹೆಣ್ಣು ಹೂಗಳಿರುತ್ತವೆ. ಪ್ರತಿ ಎಲೆಯ ಕಂಕುಳಲ್ಲೂ ಒಂದು ಸಿಂಗಾರ ಬರುವುದು. ಸಿಂಗಾರ ಉದ್ದನೆಯ ಕವಚದಿಂದ ಮುಚ್ಚಿರುವುದು. ಕವಚ ಒಡೆದು ಸಿಂಗಾರ ಅರಳಿದಾಗ ಅದರ ನಡುದಿಂಡಿನ ಎರಡು ಭಾಗದಲ್ಲೂ ಜೋಡಣೆಗೊಂಡಿರುವ ಉಪಕವಲುಗಳ ಮೇಲೆ ಹೂಗಳು ಗೋಚರವಾಗುವುವು. ತುದಿಯಲ್ಲಿ ಗಂಡು ಹೂಗಳೂ, ಬುಡದಲ್ಲಿ ಹೆಣ್ಣು ಹೂಗಳೂ ಇವೆ. ಮೊದಲು ಗಂಡು ಹೂಗಳು ಅನಂತರ ಹೆಣ್ಣು ಹೂಗಳು ಅರಳುತ್ತವೆ. ಉತ್ತಮವಾಗಿ ಕೃಷಿಮಾಡಿದ ಮರದಿಂದ 100 - 200 ಕಾಯಿಗಳು ದೊರೆಯುವುವು. ಕಾಯಿಗಳ ಬಣ್ಣ ಹಳದಿ, ಕೆಂಪು, ಕಿತ್ತಳೆ, ಕಂದು, ಹಸಿರು - ಹೀಗೆ ವೈವಿಧ್ಯಮಯ. ಕಾಯಿ ಡ್ರೂಪ್ ಮಾದರಿಯದು.
ತೆಂಗಿನ ಮರಗಳಲ್ಲಿ ವಿಧ
ಮರಗಳಲ್ಲಿ ಎರಡು ವಿಧಗಳಿವೆ. ಒಂದು ಎತ್ತರ/ಉದ್ದ ಪ್ರಭೇದ, ಎರಡನೆಯದು ಕುಳ್ಳ/ಗುಜ್ಜಾರಿ(dwarf)ತರಹದ್ದು. ಭಾರತ ದೇಶದಲ್ಲಿ ಬೆಳೆಸುವ ತೆಂಗಿನ ಮರಗಳಲ್ಲಿ ದೇಶವಾಳಿ ಜೊತೆಗೆ ಸಂಕರ ತಳಿ/ಮಿಶ್ರ ತಳಿ(hybrid)ಮರಗಳೂ ಇವೆ.
ತೆಂಗಿನಮರ/ಗಿಡವನ್ನು ಭಾರತ ದೇಶದಲ್ಲಿಕಲ್ಪವೃಕ್ಷ(Tree of heaven)ಎಂದು ಕರೆಯಲಾಗುತ್ತದೆ.
ಮಣ್ಣು/ನೆಲ: ತೆಂಗಿನಕಾಯಿ ಮರ ತೊಗಟೆಗಳನ್ನು ಬೆಳಸುವುದಕ್ಕೆ ಕರಾವಳಿ ಪ್ರಾಂತ್ಯ ಮತ್ತು ಸಮುದ್ರಮಟ್ಟಕ್ಕಿಂತ ೯೦೦ ಮೀಟರುಗಳ ಎತ್ತರದಲ್ಲಿದ್ದ ಭೂಮಿ/ನೆಲಗಳು ಅನುಕೂಲಕರವಾಗಿವೆ. ಇನ್ನು ತೆಂಗಿನ ಮರಗಳನ್ನು ಬೆಳೆಸುವುದಕ್ಕೆ ದ್ರವವನ್ನು ಹರಿಸಿ ಬಿಡುವ ಭೂಮಿಗಳು, redloam,coastal alliuvial,laterite,marshyl low land ಗಳು ಅನುಕೂಲಕರವಾಗಿವೆ.
ಪ್ರಪಂಚದಲ್ಲಿ ತೆಂಗಿನಕಾಯಿ ಮರ ತೋಟಗಳನ್ನು ಸಾಗುವಳಿ ಮಾಡುವ ದೇಶಗಳು
ಈ ಕೆಳಗಿನ ದೇಶಗಳಲ್ಲಿ ತೆಂಗಿನಕಾಯಿ ತೋಟಗಳನ್ನು ಹೆಚ್ಚಾಗಿ ಸಾಗುವಳಿ ಮಾಡುತಾರೆ.೧.ಫಿಲಿಫ್ಪಿನ್ಸು, ೨.ಇಂಡೋನೇಷಿಯಾ, ೩.ಬ್ರೆಜಿಲ್, ೪.ಶ್ರೀಲಂಕ, ೫.ಥಾಯ್ ಲಾಂಡ್, ೬.ಮೆಕ್ಸಿಕೋ, ೭.ವಿಯಾಟ್ನಾಂ, ೮.ಪಾಪ್ಯೂ ನ್ಯೂಗಿನಿಯಾ, ೯.ಮಲೇಸಿಯಾ, ೧೦.ಟಾಂಜಾನಿಯಾ. ೧೧.ಆಸ್ಟ್ರೇಲಿಯಾ, ೧೨.ಬರ್ಮುಡಾ, ೧೩.ಮಾಲ್ಡೀವ್ಸ್ ನಲ್ಲಿ, ೧೪.ಪರ್ಷಿಯನ್ ಗಲ್ಫ್, ೧೫.ಅರೇಬಿ ಸಮುದ್ರ, ೧೬. ಕೆಂಪು ಸಮುದ್ರ ಕರಾವಳಿ ಪ್ರಾಂತದಲ್ಲಿಯೂ ಸಾಗುವಳಿ ಮಾಡುತ್ತಾರೆ.
ಕೀ.ಶ. 2010ರಲ್ಲಿ ತೆಂಗಿನಕಾಯಿ ಉತ್ಪತ್ತಿಯಲ್ಲಿ ಮೊದಲಿನ ಹತ್ತು ಸ್ಥಾನದಲ್ಲಿದ್ದ ದೇಶಗಳು
ದೇಶ
ಉತ್ಪಾದನೆ (ಟನ್ನುಗಳು)
ಪಾದಸೂಚಿಕೆ
ಫಿಲಿಫಿನ್ಸು
19,500,000
ಇಂಡೋನೇಶಿಯಾ
15,540,000
ಇಂಡಿಯಾ
10,824,100
ಬ್ರೆಜಿಲ್
2,759,044
ಶ್ರೀಲಂಕ
2,200,000
F
ಥಾಯ್ ಲಾಂಡ್
1,721,640
F
ಮೆಕ್ಸಿಕೋ
1,246,400
F
ವಿಯಾಟ್ನಾಂ
1,086,000
A
ಪಾಪೂನ್ಯೂ ಗಿನಿಯಾ
677,000
F
ಮಲೇಸಿಯಾ
555,120
ಟಾಂಜಾನಿಯಾ
370,000
F
ಒಟ್ಟಿಗೆ
54,716,444
A
No symbol = official figure, P = official figure, F = FAO estimate, * = Unofficial/Semi-official/mirror data, C = Calculated figure, A = Aggregate (may include official, semi-official or estimates);
ಗುಡಿಸಲು/ಜೋಪಡಿಗಳ ಮಾಳಿಗೆಗೆ/ಸೂರನ್ನಾಗಿ ಉಪಯೋಗಿಸುತ್ತಾರೆ.
ಒಣಗಿಸಿದ ಎಲೆಗಳನ್ನು ಸೌದೆಯಾಗಿ ಉಪಯೋಗಿಸುತ್ತಾರೆ.
ಶವ ಸಂಸ್ಕಾರದ ಸಮಯದಲ್ಲೂ ತೆಂಗಿನ ಗರಿ/ಮಟ್ಟೆಗಳನ್ನು ಬಳಸುತ್ತಾರೆ.
೨.ಮರದಕಾಂಡ
ಒಣಗಿಸಿದ ಕಾಂಡವನ್ನು ಮನೆ ನಿರ್ಮಾಣದಲ್ಲಿ ದೂಲವನ್ನಾಗಿ ಉಪಯೋಗಿಸುತ್ತಾರೆ.
ಮರದ ಕಾಂಡವನ್ನು ಮನೆಯ ಕಂಬ/ಸ್ತಂಬಗಳನ್ನಾಗಿ ಉಪಯೋಗಿಸುವುದಕ್ಕೂ ಬಳಸಬಹುದು.
ಸೌದೆಯಾಗಿ ಉಪಯೋಗಿಸಬಹುದು.
ಸಣ್ಣ ಕಾಲುವೆಗಳನ್ನು ಹಾಯಲು/ದಾಟುವುದಕ್ಕೆ ನಾವೆಯಾಗಿಯೂ ಉಪಯೋಗಿಸುತ್ತಾರೆ.
೩.ಕಾಯಿ
ಕಾಯಿಯ ಮೇಲಿರುವ ಕತ್ತಮಿಂದ ತೆಂಗಿನನಾರು ತಯಾರು ಮಾಡಿ, ಅದರಿಂದ ಕಾಲ್ಚಾಪೆ(doormat), ಹಗ್ಗ, ನೇಣುರುಳುಗಳನ್ನು ಉತ್ಪನ್ನ ಮಾಡುವರು.
ಕಾಯಿ ಒಳಗೆ ಇರುವ ನೀರನ್ನು ಎಳೆನೀರೆಂದು ಕರೆಯುತ್ತಾರೆ. ಈ ಎಳೆನೀರಲ್ಲಿ ಪೋಷಕ ಪದಾರ್ಥಗಳು ಅಧಿಕವಾಗಿವೆ. ಹೆಚ್ಚಿನ ಜನ ಎಳೆನೀರಿರುವ ಪ್ರಭೇದಗಳನ್ನು ಬೆಳೆಸುತ್ತಾರೆ. ಅದರಲ್ಲಿ ಗಂಗಾಭವಾನಿ ಪ್ರಭೇದವೂ ಒಂದು.
ಕತ್ತ ತೆಗೆದ ತೆಂಗಿನಕಾಯನ್ನು ದೇವಾಲಯದಲ್ಲಿ, ಮನೆಯಲ್ಲಿ ಪೂಜೆ ಮಾಡುವಾಗ ಉಪಯೋಗಿಸುವರು.
ಶುಭಕಾರ್ಯದಲ್ಲಿ, ಮದುವೆ ಸಂದರ್ಭದಲ್ಲಿ ತೆಂಗಿನಕಾಯಿ ಇರಲೇಬೇಕು.
ಕತ್ತದ ಕೊಚ್ಚನ್ನು ಸೌದೆಯನ್ನಾಗಿ ವಿನಿಯೋಗಿಸುತ್ತಾರೆ.
ಕೊಬ್ಬರಿ ಎಳೆನೀರನ್ನು ಹುಳುಹಿಡಿಸಿ, ಅದರಿಂದ ಲೊಕೋನೆಟ್ ವಿನೆಗರ್(coconut vinegar)ನ್ನು ಉತ್ಪಾದನೆ ಮಾಡುವರು.
ತೆಂಗಿನಕಾಯಿ ಒಳಗಿರುವ ಹಸಿ ತಿರುಳು/ಕೊಬ್ಬರಿಯಿಂದ ಕೊಬ್ಬರಿ ಹಾಲನ್ನು ತೆಗೆಯಲಾಗುತ್ತದೆ.
ಹಸಿ ಕೊಬ್ಬರಿಯಿಂದ ಕೊಬ್ಬರಿಚಟ್ನಿ , ಸಾಂಬಾರು ಮಾಡಲಾಗುತ್ತದೆ.
ಹಸಿ ಮತ್ತು ಒಣ ಕೊಬ್ಬರಿಯಿಂದ ಕೊಬ್ಬರಿ ಎಣ್ಣೆಯನ್ನು ತಯಾರಿಸುವರು.
ಕೊಬ್ಬರಿ ಸಿಪ್ಪೆಯಿಂದ ಅಲಂಕರಣ ವಸ್ತು ಸಾಮಗ್ರಿಗಳನ್ನು ಮಾಡಲಾಗುತ್ತದೆ.
ಕೊಬ್ಬರಿ ಎಣ್ಣೆ
ಹೆಚ್ಚಿನ ವಿವರಗಳಿಗಾಗಿ ಪ್ರಧಾನ ಲೇಖನ ಕೊಬ್ಬರಿ ಎಣ್ಣೆನೋಡಿರಿ.