ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ ಯನ್ನು ತೆಂಗು/ತೆಂಗಿನಕಾಯಿ ಮರದ ಕಾಯಿಗಳಿಂದ ತೆಗೆಯುತ್ತಾರೆ. ತೆಂಗಿನಮರ/ ಕೊಬ್ಬರಿಮರ ಸಸ್ಯಶಾಸ್ತ್ರದಲ್ಲಿ ಪಾಮೇ(palmae)ಕುಟುಂಬಕ್ಕೆ ಸೇರಿದ ಗಿಡ. ಇದರ ಸಸ್ಯಶಾಸ್ತ್ರ ಹೆಸರು 'ಕೊಕಸ್ ನ್ಯೂಸಿಫೆರಾ'(cocos nucifera). 'ಕೊಕಸ್' ಪ್ರಜಾತಿಯಲ್ಲಿ ಈ ಮರ ಒಂದೇ ಇದೆ. ಕೊಬ್ಬರಿ ಎಣ್ಣೆಯನ್ನು ಕೇರಳದ ಜನರು ಅಡುಗೆ ಮಾಡುವುದರಲ್ಲಿ ಹೆಚ್ಚಾಗಿ ಬಳಸುತ್ತಾರೆ.

ತೆಂಗಿನ ಮರ
ಮಂಜಲು ತೆಂಗಿನಕಾಯಿ.
ಒಣಗಿಸಿದ ಕೊಬ್ಬರಿ ತಿರುಳು
ಗಿಟಕಿಯಾಗಿದ್ದ ಕೊಬ್ಬರಿ ಎಣ್ಣೆ
ಗಾಣ
ಎಣ್ಣೆ ತೆಗೆಯುವ ಯಂತ್ರ

ಬೇರೆ ಭಾರತೀಯ ಭಾಷೆಗಳಲ್ಲಿ ಸಾಧಾರಣವಾದ ಹೆಸರು

  1. ಹಿಂದಿ=ನಾರಿಯಲ್(Nariyal)
  2. ಗುಜರಾತಿ=ನಲಿಯೆರಿ(Nalieri)
  3. ಮಲಯಾಳಂ=ತೆಂಗು(Tengu)
  4. ತೆಲುಗು=ಟೆಂಕಾಯ(Tenkaya),ಕೊಬ್ಬರಿ(kobbari)
  5. ತಮಿಳು=ತೆನ್ನೈ(Tennai)
  6. ಒರಿಯಾ=ನಡಿಯ(Nadiya)
  7. ಬೆಂಗಾಲಿ= ನಾರಿಕೇಲ್(Narikel)
  8. ಪಂಜಾಬಿ=ನಾರ್ಯಲ್(Naryal)
  9. ತುಳು=ತಾರಾಯಿ(Taaraayi)
ತೆಂಗಿನ ಹೂವು

ತೆಂಗಿನಕಾಯಿ

  • ತೆಂಗಿನ ಕಾಯಿ ದೊಡ್ಡದಾಗಿ, ದಪ್ಪದಾಗಿರುತ್ತದೆ. ದೀರ್ಘವಾದ ಅಂಡಾಕಾರ ರೂಪದಲ್ಲಿರುತ್ತದೆ. ಹೊರ ಭಾಗದಲ್ಲಿ ದಪ್ಪವಾಗಿ ಕತ್ತ/ನಾರು/ಕೆಲ್ಲ ಇರುತ್ತದೆ. ಕತ್ತದ ಅಂತರ ಭಾಗ ದೊಳಗೆ ಗೋಳಾಕಾರದಲ್ಲಿ ದಪ್ಪವಾಗಿ ,ದೃಢವಾದ ಕತ್ತ/ನಾರಿನಿಂದ ತಯಾರಿಸ್ಪಟ್ಟ, ಸಿಪ್ಪೆ/ಗೆರಟೆ(shell)ಇರುತ್ತದೆ.
  • ಸಿಪ್ಪೆ ಒಳಗೆ ದಪ್ಪವಾಗಿ,ವೃತ್ತಾಕಾರ/ವಲಯಾಕಾರವಾದ ಬೆಳ್ಳಗಿನ ತಿರುಳು ಇರುತ್ತದೆ. ಈ ತಿರುಳಿನಿಂದ ಕೊಬ್ಬರಿ ಎಣ್ಣೆಯನ್ನು ತೆಗೆಯಲಾಗುತ್ತದೆ. ತೆಂಗಿನ ಕಾಯಿಯಿಂದ ಸಿಹಿಯಾದ ತೆಂಗಿನಹಾಲನ್ನು(ಹಸಿ ತಿರುಳಿಯನ್ನು ಹಿಂಡಿ) ಪಡೆಯಲಾಗುತ್ತದೆ. ಕೆಲವೂಂದು ಪ್ರಭೇದದ ತೆಂಗಿನಕಾಯಿಗಳನ್ನು ಎಳೆನೀರಿನ(ತೆಂಗಿನ ನೀರು) ಸಲುವಾಗಿ ಬೆಳೆಸಲಾಗುತ್ತದೆ.
  • ಒಂದು ಕಾಯಿ ೧.೦-೧.೬ಕಿ.ಲೋ ಇರುತ್ತದೆ. ಇದರಲ್ಲಿ ನಾರು/ಕತ್ತ (Fibre)೩೫%,ತಿರುಳು (copra)೨೮%,ಗರಟೆ/ಸಿಪ್ಪೆ (shell)೧೨%,ಮತ್ತು ೨೦% ಎಳೆನೀರು ಇರುತ್ತವೆ. ಒಣಗಿಸಿದ ತೆಂಗಿನಕಾಯಿಯಲ್ಲಿ ಎಣ್ಣೆ ೬೮-೭೦% ಸಿಗುತ್ತದೆ. ತೆಂಗಿನಕಾಯಿಯಲ್ಲಿ ಪ್ರೋಟೀನ್ ಅಂಶ ಕಡಿಮೆ ಇರುತ್ತದೆ.

ಕೊಬ್ಬರಿ ಎಣ್ಣೆ ಉತ್ಪಾದನೆ

  • ತೆಂಗಿನ ಕಾಯಿನಿಂದ ಎಣ್ಣೆಯನ್ನು ಎರಡು ರೀತಿಯಲ್ಲಿ ತೆಗೆಯಲಾಗುತ್ತದೆ. ಒಂದು ರೀತಿಯಲ್ಲಿ ತೆಂಗಿನಕಾಯಿಯ ಮೇಲಿರುವ ನಾರನ್ನು ಪೂರ್ಣವಾಗಿ ತೆಗೆದು, ಗೋಳಾ ಕಾರದ ಲ್ಲಿರುವ, ಸಿಪ್ಪೆ ಕಾಯನ್ನು ಬಯಲು ಪ್ರದೇಶದಲ್ಲಿ ಒಣಗಿಸುತ್ತಾರೆ. ಕಾಯಿ ಒಣಗಿದಮೆಲೆ ಸಿಪ್ಪೆಯನ್ನು ಒಡೆದು ತಿರುಳನ್ನು ಹೊರಗೆ ತೆಗೆಯುತ್ತಾರೆ.
  • ಒಣಗಿದ ತಿರುಳನ್ನು ಕುರಿಡಿ/ಕೊಬ್ಬರಿ /ಗಿಟುಕು ಕಾಯಿ ಎನ್ನುತ್ತಾರೆ. ಸಿಪ್ಪೆ ಒಳಗಿರುವ,ಗಟ್ಟಿ ಗರಟೆಯುಳ್ಳ ಕಾಯಿ - ಅದರ ಒಳಗಿರುವ ಕೊಬ್ಬರಿ / ಒಣಗಿದ ತಿರುಳನ್ನು 'ಗಾಣೆ ಅಥವಾ ಎಕ್ಸುಪೆಲ್ಲರು ಯಂತ್ರ'ವೆಂದು ಕರೆಯಲಾಗುವ ಎಣ್ಣೆ ತೆಗೆಯುವ ಯಂತ್ರದಲ್ಲಿ ಆಡಿಸಿ ಎಣ್ಣೆಯನ್ನು ಉತ್ಪಾದನೆ ಮಾಡುತ್ತಾರೆ.
  • ಎರಡನೇ ರೀತಿಯಲ್ಲಿ, ತೆಂಗಿನ ಕಾಯಿ ಹಸಿಯಾಗಿರುವಾಗಲೇ ಒಡೆದು ,ತಿರುಳನ್ನು ಒಂದು ತರಹದ ಬಾಣಲೆಯಲ್ಲಿ ಹುರಿಗೊಳಿಸಿ, ತಿರುಳಿನಲ್ಲಿರುವ ಸಾಂದ್ರತೆಯನ್ನು ಕಡಿಮೆ ಮಾಡಿ(೧೦-೧೧%)ಆಮೇಲೆ ಯಂತ್ರಗಳ ಸಹಾಯದಿಂದ ಕೊಬ್ಬರಿ ಎಣ್ಣೆಯನ್ನು ಉತ್ಪಾದನೆ ಮಾಡಲಾಗುತ್ತದೆ.

ಕೊಬ್ಬರಿ ಎಣ್ಣೆ-ಲ‌ಕ್ಷಣಗಳು

  • ತೆಂಗಿನ ಕಾಯಿಯಿಂದ ಉತ್ಪಾದನೆ ಮಾಡದಿರುವ ಎಣ್ಣೆ ಪಾರದರ್ಶಕವಾಗಿರುತ್ತದೆ. ಕೆಲವೂಂದು ಸಂದರ್ಭದಲ್ಲಿ ಮಂಕಾಗಿ ಮಂಜಲು(pale yellow)ಬಣ್ಣದಲ್ಲಿ ಕಾಣಿಸುತ್ತದೆ. ಕೊಬ್ಬರಿ ಎಣ್ಣೆ ಹೆಚ್ಚಿನ ಶೇಕಡದಲ್ಲಿ ಸಂತೃಪ್ತ ಕೊಬ್ಬಿನ ಆಮ್ಲಗಳನ್ನು ಹೊಂದಿರುತ್ತದೆ.
  • ಸಂತೃಪ್ತ ಕೊಬ್ಬಿನ ಆಮ್ಲಗಳ ದ್ರವೀಭವನ ಉಷ್ಣೋಗ್ರತೆ(melting point/temperature), ಅಸಂತೃಪ್ತ ಕೊಬ್ಬಿನ ಆಮ್ಲಗಿಂತ ಹೆಚ್ಚಾಗಿ/ಅಧಿಕವಾಗಿರುತ್ತದೆ. ಅದರಿಂದ ಶೀತಕಾಲದಲ್ಲಿ, ಪರಿಸರ ಉಷ್ಣೋಗ್ರತೆ ಕಡಿಮೆ ಇದ್ದ ಸಂದರ್ಭದಲ್ಲಿ ಕೊಬ್ಬರಿ ಎಣ್ಣೆ ಘನೀಭವಿಸಿ ಗಟ್ಟಿಯಾಗುತ್ತದೆ. ಕೊಬ್ಬರಿ ಎಣ್ಣೆ ಕೊಬ್ಬರಿ ವಾಸನೆ ಹೊಂದಿರುತ್ತದೆ. ಕೊಬ್ಬರಿ ಎಣ್ಣೆಯನ್ನು ಕೇರಳ ರಾಜ್ಯದಲ್ಲಿ ಅಡುಗೆಗೆ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುತ್ತಾರೆ.
ಲಕ್ಷಣಮಿತಿ
ಸಾಂದ್ರತೆ(density)(300Cవద్ద)0.915-0.920
ವಕ್ರೀಭವ ಸೂಚನೆ(400Cవద్ద)1.4481-1.4491
ಅಯೋಡಿನ್ ಮೌಲ್ಯ6.0-11
ಸಪೋನೊಫಿಕೆಸನು ಮೌಲ್ಯ248-265
ಅನ್ ಸಪೋನಿಫಿಯಬುಲ್ ಪದಾರ್ಥ೦.೫-೧.೦%
ಕಲರ್(color)(ಗರಿಷ್ಟ)೨.೦ units
ತೇವ೦.೨೫%
ಪೊಲೆನ್ಸ್ಕಿ ಮೌಲ್ಯ(polensky value)೦.೫-.೦೮
ದ್ರವೀಭವ ಉಷ್ಣೋಗ್ರತೆ೨೫C

ಕೊಬ್ಬರಿ ಎಣ್ಣೆ-ಕೊಬ್ಬು ಆಮ್ಲಗಳು

  • ಕೊಬ್ಬರಿ ಎಣ್ಣೆಯಲ್ಲಿ ೯೪% ಸಂತೃಪ್ತ ಕೊಬ್ಬಿನ ಆಮ್ಲಗಳು,೬% ಅಸಂತೃಪ್ತ ಕೊಬ್ಬಿನ ಆಮ್ಲಗಳಿರುತ್ತವೆ .ಅದರಿಂದ ಈ ಎಣ್ಣೆಯ ಅಯೋಡಿನ್ ಮೌಲ್ಯ(Iodine value)ತುಂಬಾ ಕಮ್ಮಿ. ಎಣ್ಣೆಯ ಅಯೋಡಿನ್ ಮೌಲ್ಯ ಜಾಸ್ತಿ ಆಗಿದ್ದರೆ ಅದರಲ್ಲಿ ಇರುವ ಅಸಂತೃಪ್ತ ಕೊಬ್ಬಿನ ಆಮ್ಲಗಳ ಪ್ರತಿಶತ ಬೆಳೆಯುತ್ತದೆ.
  • ಹೆಚ್ಚು ಅಸಂತೃಪ್ತ ಕೊಬ್ಬಿನ ಆಮ್ಲಗಳಿದ್ದ ಎಣ್ಣೆಗಳನ್ನು ಆಹಾರ ದಲ್ಲಿ ಉಪಯೋಗಿಸುವುದು ಒಳ್ಳೆಯದು. ಒಲಿಕ್ ಆಮ್ಲ ಮತ್ತು ಲಿನೊಲಿಕ್ ಆಮ್ಲ ಈ ಎರಡು ಆಮ್ಲಗಳು ಮಾತ್ರ ಕೊಬ್ಬರಿ ಎಣ್ಣೆಯಲ್ಲಿರುವ ಅಸಂತೃಪ್ತ ಕೊಬ್ಬಿನ ಆಮ್ಲಗಳು.

ಕೊಬ್ಬರಿ ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ಪಟ್ಟಿ

ಕೊಬ್ಬಿನ ಆಮ್ಲಪ್ರತಿ ಶತ
ಕಾಪ್ರೋಯಿಕ್ ಆಮ್ಲ(C6:0)1.3
ಕಾಪ್ರೋಲಿಕ್ ಆಮ್ಲ(C8:0)12.20
ಕಾಫ್ರಿಕ್ ಆಮ್ಲ(C10:0)8.0
ಲಾರಿಕ್ ಆಮ್ಲ(C12:0)48.80
ಮಿರಿಸ್ಟಿಕ್ ಆಮ್ಲ(C14:0)14.80
ಪಾಮಿಟಿಕ್ ಆಮ್ಲ(C16:0)6.90
ಸ್ಟಿಯರಿಕ್ ಆಮ್ಲ(C18:0)2.0
ಅರಚಿಡಿಕ್ ಆಮ್ಲ(C20:0)1.50
ಒಲಿಕ್ ಆಮ್ಲ(C18:1)4.5
ಲಿನೊಲಿಕ್ ಆಮ್ಲ(C18:2)1.40

ಕೊಬ್ಬರಿ ಎಣ್ಣೆಯ ಉಪಯೋಗಗಳು

  1. ಅಡುಗೆ ಎಣ್ಣೆಯಾಗಿ(cooking oil)ವಿನಿಯೋಗಿಸುತ್ತಾರೆ.
  2. ಕೇಶ ತೈಲ(Hair oil)ವನ್ನಾಗಿ ಬಳಸುತ್ತಾರೆ[೧].
  3. ದೇಹ ಮರ್ದ್ಶನ ತೈಲವನ್ನಾಗಿ ಉಪಯೋಗ ಮಾಡುತ್ತಾರೆ.
  4. ಬೇಕರಿ ಪದಾರ್ಥಗಳಲ್ಲಿ ಬಳಸುತ್ತಾರೆ.
  5. ಪಾರಿಶ್ರಮಿಕ ಪದಾರ್ಥಗಳ ತಯಾರಿಕೆಯಲ್ಲಿ.
  6. ಸಾಬೂನ್ ಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ[೨].
  7. ಕಾಸ್ಮಾಟಿಕ್ಸು(ಸೌಂದರ್ಯ ಪದಾರ್ಥಗಳು)ತಯಾರಿಕೆಯಲ್ಲಿಯು ಇದನ್ನು ಉಪಯೋಗಿಸುತ್ತಾರೆ..
  8. ಷೇವಿಂಗ್ ಕ್ರೀಮ್ ತಯಾರಿಕೆಯಲ್ಲಿ[೩] ಉಪಯೋಗ ಮಾಡುತ್ತಾರೆ .
  9. ದೀಪಾರಾಧನೆಯಲ್ಲಿಯು ಉಪಯೋಗಿಸುತ್ತಾರೆ.

ಇವುಗಳನ್ನೂ ನೋಡಿ

ಉಲ್ಲೇಖನ