ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೧೯೧೫ರಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ. ಈ ಹಿಂದೆ ಕನ್ನಡ ಸಾಹಿತ್ಯದ ಅನೇಕ ಗಣ್ಯರು, ಮಹಾಪುರುಷರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.[೧]

ಕನ್ನಡ ಸಾಹಿತ್ಯ ಸಮ್ಮೇಳನ
ಪ್ರಕಾರಕನ್ನಡ ಸಾಹಿತ್ಯ
ಆವರ್ತನ1 ವರ್ಷಕೊಮ್ಮೆ
ಸ್ಥಳ (ಗಳು)ವಿವಿಧ
ಸಕ್ರಿಯ ವರ್ಷಗಳು108
ಉದ್ಘಾಟನೆ1915 (ಬೆಂಗಳೂರು)
ಇತ್ತೀಚಿನ2023 (ಹಾವೇರಿ)
ಮುಂದಿನ2023 (ಮಂಡ್ಯ)
ಪೋಷಕ (ರು)ಕರ್ನಾಟಕ ಸರಕಾರ
ವೆಬ್ಸೈಟ್
Kannada Sahitya Sammelana

ಹಿನ್ನಲೆ

೧೯೧೪ರ ದಿ ಮೈಸೂರು ಎಕಾನಾಮಿಕ್ ಕಾನ್ಫೆರೆನ್ಸ್ (ಮೈಸೂರು ಸಂಪದಭ್ಯುದಯ ಸಮಾಜ) ಸಮ್ಮೆಳನದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗೆ ಪೂರಕವಾದ ಪರಿಷತ್ತನ್ನು ಸ್ಥಾಪಿಸುವ ವಿಚಾರದಲ್ಲಿ ರಾವ್ ಬಹದ್ದೂರ್ ಎಂ. ಶಾಮರಾವ್, ಕರ್ಪೂರ ಶ್ರೀನಿವಾಸರಾವ್ ಮತ್ತು ಪಿ. ಎಸ್. ಅಚ್ಯುತರಾವ್ ಅವರುಗಳನ್ನೊಳಗೊಂಡ ಉಪಸಮಿತಿಯನ್ನು ರಚಿಸಲಾಯಿತು. ಈ ಉಪಸಮಿತಿಯು ಅಂದಿನ ವಿವಿಧ ಕನ್ನಡ ನಾಡುಗಳ ಪ್ರಾಜ್ಞರೊಡನೆ ಸಮಾಲೋಚಿಸಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ, ಆ ಸಮ್ಮೇಳನಗಳಲ್ಲಿ ಕೆಲವು ಉದ್ದೇಶ ಸಾಧನಕ್ರಮಗಳನ್ನು ಚಿಂತಿಸುವ ಕುರಿತಾದ ಮಾರ್ಗದರ್ಶನ ಸೂತ್ರಗಳನ್ನು ರೂಪಿಸಿತು.

  1. ಕನ್ನಡ ಭಾಷೆಯಲ್ಲಿ ವ್ಯಾಕರಣ, ಚರಿತ್ರೆ, ನಿಘಂಟು ಬರೆಯಿಸುವುದು,
  2. ನವೀನಶಾಸ್ತ್ರಗಳಿಗೆ ಸಂಬಂಧಪಟ್ಟ ಕನ್ನಡ ಗ್ರಂಥಗಳಲ್ಲಿ ಪ್ರಯೋಗಿಸಲು ಯೋಗ್ಯವಾದ ಪಾರಿಭಾಷಿಕ ಶಬ್ದಗಳ ಕೋಶವನ್ನು ಪ್ರಕಟಿಸುವುದು.
  3. ತತ್ವಶಾಸ್ತ್ರ, ಪ್ರಕೃತಿವಿಜ್ಞಾನ, ಚರಿತ್ರೆ, ಸಾಹಿತ್ಯ ಮೊದಲಾದ ವಿಷಯಗಳಿಗೆ ಸಂಬಂಧಪಡುವ ಗ್ರಂಥಗಳನ್ನು ಕನ್ನಡದಲ್ಲಿ ಬರೆಯುವುದಕ್ಕೆ ಪ್ರೋತ್ಸಾಹಕೊಟ್ಟು ಅವುಗಳನ್ನು ಪ್ರಚುರಪಡಿಸುವುದು.
  4. ಕನ್ನಡ ಭಾಷೆಗೂ ಕನ್ನಡ ಗ್ರಂಥಗಳಿಗೂ ಸಂಬಂಧಪಟ್ಟ ಎಲ್ಲಾ ಚರ್ಚಾಂಶಗಳನ್ನೂ ವಿಚಾರಮಾಡಿ ನಿರ್ಣಯಿಸುವುದು.
  5. ಬೆರೆ ಭಾಷೆಗಳಲ್ಲಿರುವ ಉತ್ತಮ ಗ್ರಂಥಗಳನ್ನು ಕನ್ನಡಿಸಿ ಪ್ರಕಟಿಸುವುದು.
  6. ಉತ್ಕೃಷ್ಟವಾದ ಪ್ರಾಚೀನ ಗ್ರಂಥಗಳನ್ನೂ, ಕನ್ನಡ ದೇಶಗಳ ಚರಿತ್ರೆಯನ್ನೊಳಗೊಂಡ ಗ್ರಂಥಗಳನ್ನೂ ಸಂಗ್ರಹಿಸಿ, ಅದನ್ನು ಪರಿಷ್ಕರಿಸಿ ಪ್ರಕಟಿಸುವುದೂ ಅಲ್ಲದೆ, ಕನ್ನಡನಾಡಿನ ಪೂರ್ವಸ್ಥಿತಿಯನ್ನು ವಿಶದಗೊಳಿಸುವ ವಸ್ತುಗಳನ್ನು ಕೂಡಿಟ್ಟು ಅವುಗಳನ್ನು ಕಾಪಾಡುವುದಕ್ಕಾಗಿ ಪ್ರಾಚೀನ ವಸ್ತುಸಂಗ್ರಹಾಲಯವನ್ನೇರ್ಪಡಿಸುವುದು.
  7. ಕರ್ನಾಟಕ ಭಾಷಾಸಂಸ್ಕರಣ, ಕರ್ಣಾಟಕ ಗ್ರಂಥಾಭಿವೃದ್ಧಿಗಳನ್ನು ಕುರಿತು ಪಂಡಿತಯೋಗ್ಯವಾದ ಲೇಖನಗಳನ್ನೊಳಕೊಂಡ ಕನ್ನಡದ ಪತ್ರಿಕೆಗಳನ್ನು ಪ್ರಕಟಿಸುವುದು.
  8. ಗ್ರಂಥಕರ್ತರಿಗೆ ಬಿರುದು ಸಂಭಾವನೆ ಕೊಡುವುದು.
  9. ಕರ್ನಾಟಕ ಭಾಷೆಗೂ ಸಾಹಿತ್ಯಕ್ಕೂ ಸಂಬಂಧಿಸಿದ ಅಪೂರ್ವ ಪರಿಶೋಧನ ಕಾರ್ಯದಲ್ಲಿ ನಿರತರಾಗಿರುವ ಕನ್ನಡ ಅಥವಾ ಸಂಸ್ಕೃತ ವಿದ್ವಾಂಸರಿಗೆ ಪಂಡಿತವೇತನಗಳನ್ನು ಕೊಡುವುದು.
  10. ಕರ್ನಾಟಕ ಭಾಷೋನ್ನತಿಗೂ, ಗ್ರಂಥಾಭಿವೃದ್ಧಿಗೂ ಸಂಬಂಧಪಡುವ ಸಮಸ್ತ ವಿಷಯಗಳನ್ನೂ ಆಯಾ ಸರ್ಕಾರದವರ ಪರಾಮರ್ಶಕ್ಕೆ ತಂದು ಅವನ್ನು ತೃಪ್ತಿಕರವಾಗಿ ವ್ಯವಸ್ಥೆಮಾಡಿಸಿಕೊಳ್ಳುವುದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡುವುದು.
  11. ಕನ್ನಡ ಮಾತನ್ನಾಡುವ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಸ್ಥಳಗಳಲ್ಲಿ ಕನ್ನಡದ ವಾಚನಾಲಯಗಳನ್ನೂ ಪುಸ್ತಕಭಂಡಾರಗಳನ್ನೂ ಸ್ಥಾಪಿಸುವುದು.
  12. ಕನ್ನಡ ನಾಡುಗಳ ಪ್ರಮುಖರನ್ನು ಸೇರಿಸಿ ಸಭೆಗಳನ್ನೇರ್ಪಡಿಸುವುದು, ಮತ್ತು ಸಮರ್ಥರಾದ ವಿದ್ವಾಂಸರಿಂದ ಉಪನ್ಯಾಸಗಳನ್ನು ಮಾಡಿಸುವುದು.[೨]

ಈವರೆಗಿನ ಸಮ್ಮೇಳನಗಳ ಪಟ್ಟಿ

ಉಲ್ಲೇಖಗಳು

ಹೊರ ಕೊಂಡಿಗಳು

  1. ಸಚಿತ್ರ ಸಮ್ಮೇಳನ Archived 2011-02-04 ವೇಬ್ಯಾಕ್ ಮೆಷಿನ್ ನಲ್ಲಿ.
  2. ಬರಗೂರರ ಅಧ್ಯಕ್ಷ ಭಾಷಣ:2 Dec, 2016:[[೧]]
ಸಮ್ಮೇಳನದ ಸಂಖ್ಯೆಸಮ್ಮೇಳನ ನಡೆದ ದಿನಾಂಕ, ತಿಂಗಳು ಮತ್ತು ವರ್ಷಸ್ಥಳಅಧ್ಯಕ್ಷತೆ
೩, ೪, ೫, ೬ ಮೇ ೧೯೧೫ಬೆಂಗಳೂರುಎಚ್. ವಿ. ನಂಜುಂಡಯ್ಯ
೬, ೭, ೮ ಮೇ ೧೯೧೬ಬೆಂಗಳೂರುಎಚ್. ವಿ. ನಂಜುಂಡಯ್ಯ
೮, ೯, ೧೦ ಜೂನ್ ೧೯೧೭ಮೈಸೂರುಎಚ್. ವಿ. ನಂಜುಂಡಯ್ಯ
೧೧, ೧೨, ೧೩ ಮೇ ೧೯೧೮ಧಾರವಾಡಆರ್. ನರಸಿಂಹಾಚಾರ್
೬, ೭, ೮ ಮೇ ೧೯೧೯ಹಾಸನಕರ್ಪೂರ ಶ್ರೀನಿವಾಸರಾವ್
೨೦, ೨೧ ಜೂನ್ ೧೯೨೦ಹೊಸಪೇಟೆರೊದ್ದ ಶ್ರೀನಿವಾಸರಾವ್
೧೯, ೨೦, ೨೧ ಮೇ ೧೯೨೧ಚಿಕ್ಕಮಗಳೂರುಕೆ. ಪಿ. ಪುಟ್ಟಣ್ಣ ಚೆಟ್ಟಿ
೧೨, ೧೩ ಮೇ ೧೯೨೨ದಾವಣಗೆರೆಎಂ. ವೆಂಕಟಕೃಷ್ಣಯ್ಯ
೨೧, ೨೨, ೨೩ ಮೇ ೧೯೨೩ಬಿಜಾಪುರಸಿದ್ಧಾಂತಿ ಶಿವಶಂಕರ ಶಾಸ್ತ್ರಿ
೧೦೧೬, ೧೭, ೧೮ ಮೇ ೧೯೨೪ಕೋಲಾರಹೊಸಕೋಟೆ ಕೃಷ್ಣಶಾಸ್ತ್ರಿ
೧೧೯, ೧೦, ೧೧ ಮೇ ೧೯೨೫ಬೆಳಗಾವಿಬೆನಗಲ್ ರಾಮರಾವ್
೧೨೨೨, ೨೩, ೨೪ ಮೇ ೧೯೨೬ಬಳ್ಳಾರಿಫ. ಗು. ಹಳಕಟ್ಟಿ
೧೩೧೯, ೨೦, ೨೧ ಮೇ ೧೯೨೭ಮಂಗಳೂರುಆರ್. ತಾತಾಚಾರ್ಯ
೧೪೧, ೨, ೩ ಜೂನ್ ೧೯೨೮ಕಲಬುರಗಿಬಿ. ಎಂ. ಶ್ರೀಕಂಠಯ್ಯ
೧೫೧೨, ೧೩, ೧೪ ಮೇ ೧೯೨೯ಬೆಳಗಾವಿಮಾಸ್ತಿ ವೆಂಕಟೇಶ ಅಯ್ಯಂಗಾರ್
೧೬೫, ೬, ೭ ಅಕ್ಟೋಬರ್ ೧೯೩೦ಮೈಸೂರುಆಲೂರು ವೆಂಕಟರಾವ್
೧೭೨೮, ೨೯, ೩೦ ಡಿಸೆಂಬರ್ ೧೯೩೧ಕಾರವಾರಮುಳಿಯ ತಿಮ್ಮಪ್ಪಯ್ಯ
೧೮೨೮, ೨೯, ೩೦ ಡಿಸೆಂಬರ್ ೧೯೩೨ಮಡಿಕೇರಿಡಿ. ವಿ. ಗುಂಡಪ್ಪ
೧೯೨೯, ೩೦, ೩೧ ಡಿಸೆಂಬರ್ ೧೯೩೩ಹುಬ್ಬಳ್ಳಿವೈ. ನಾಗೇಶ ಶಾಸ್ತ್ರಿ
೨೦೨೮, ೨೯, ೩೦ ಡಿಸೆಂಬರ್ ೧೯೩೪ರಾಯಚೂರುಪಂಜೆ ಮಂಗೇಶರಾವ್
೨೧೨೬, ೨೭, ೨೮ ಡಿಸೆಂಬರ್ ೧೯೩೫ಮುಂಬೈಎನ್. ಎಸ್. ಸುಬ್ಬರಾವ್
೨೨೨೯, ೩೦, ೩೧ ಡಿಸೆಂಬರ್ ೧೯೩೭ಜಮಖಂಡಿಬೆಳ್ಳಾವೆ ವೆಂಕಟನಾರಣಪ್ಪ
೨೩೨೯, ೩೦, ೩೧ ಡಿಸೆಂಬರ್ ೧೯೩೮ಬಳ್ಳಾರಿರಂಗನಾಥ ದಿವಾಕರ
೨೪೨೫, ೨೬, ೨೭, ೨೮ ಡಿಸೆಂಬರ್ ೧೯೩೯ಬೆಳಗಾವಿಮುದವೀಡು ಕೃಷ್ಣರಾವ್
೨೫೨೭, ೨೮, ೨೯ ಡಿಸೆಂಬರ್ ೧೯೪೦ಧಾರವಾಡವೈ. ಚಂದ್ರಶೇಖರ ಶಾಸ್ತ್ರಿ
೨೬೨೭, ೨೮, ೨೯ ಡಿಸೆಂಬರ್ ೧೯೪೧ಹೈದರಾಬಾದ್ಎ. ಆರ್. ಕೃಷ್ಣಶಾಸ್ತ್ರಿ
೨೭೨೬, ೨೭, ೨೮ ಜನವರಿ ೧೯೪೩ಶಿವಮೊಗ್ಗದ. ರಾ. ಬೇಂದ್ರೆ
೨೮೨೮, ೨೯, ೩೦ ಡಿಸೆಂಬರ್ ೧೯೪೪ರಬಕವಿಶಿ. ಶಿ. ಬಸವನಾಳ
೨೯೨೬, ೨೭, ೨೮ ಡಿಸೆಂಬರ್ ೧೯೪೫ಮದರಾಸುಟಿ. ಪಿ. ಕೈಲಾಸಂ
೩೦೭, ೮, ೯ ಮೇ ೧೯೪೭ಹರಪನಹಳ್ಳಿಸಿ. ಕೆ. ವೆಂಕಟರಾಮಯ್ಯ
೩೧೨೯, ೩೦, ೩೧ ಡಿಸೆಂಬರ್ ೧೯೪೮ಕಾಸರಗೋಡುತಿ. ತಾ. ಶರ್ಮ
೩೨೫, ೬, ೭ ಮಾರ್ಚ್ ೧೯೪೯ಕಲಬುರಗಿಉತ್ತಂಗಿ ಚನ್ನಪ್ಪ
೩೩೨೪, ೨೫, ೨೬ ಮೇ ೧೯೫೦ಸೊಲ್ಲಾಪುರಎಂ. ಆರ್. ಶ್ರೀನಿವಾಸಮೂರ್ತಿ
೩೪೨೬, ೨೭, ೨೮ ಡಿಸೆಂಬರ್ ೧೯೫೧ಮುಂಬೈಗೋವಿಂದ ಪೈ
೩೫೧೬, ೧೭, ೧೮ ಮೇ ೧೯೫೨ಬೇಲೂರುಶಿ. ಚ. ನಂದೀಮಠ
೩೬೨೬, ೨೭, ೨೮ ಡಿಸೆಂಬರ್ ೧೯೫೪ಕುಮಟಾವಿ. ಸೀತಾರಾಮಯ್ಯ
೩೭೧೦, ೧೧, ೧೨ ಜೂನ್ ೧೯೫೫ಮೈಸೂರುಶಿವರಾಮ ಕಾರಂತ
೩೮೨೫, ೨೬, ೨೭ ಡಿಸೆಂಬರ್ ೧೯೫೬ರಾಯಚೂರುಆದ್ಯ ರಂಗಾಚಾರ್ಯ
೩೯೭, ೮, ೯ ಮೇ ೧೯೫೭ಧಾರವಾಡಕುವೆಂಪು
೪೦೧೮, ೧೯, ೨೦ ಜನವರಿ ೧೯೫೮ಬಳ್ಳಾರಿವಿ. ಕೃ. ಗೋಕಾಕ
೪೧೧೧, ೧೨, ೧೩ ಫೆಬ್ರವರಿ ೧೯೬೦ಬೀದರ್ಡಿ. ಎಲ್. ನರಸಿಂಹಾಚಾರ್
೪೨೨೭, ೨೮, ೨೯ ಡಿಸೆಂಬರ್ ೧೯೬೦ಮಣಿಪಾಲಅ. ನ. ಕೃಷ್ಣರಾಯ
೪೩೨೭, ೨೮, ೨೯ ಡಿಸೆಂಬರ್ ೧೯೬೧ಗದಗಕೆ. ಜಿ. ಕುಂದಣಗಾರ
೪೪೨೮, ೨೯, ೩೦ ಡಿಸೆಂಬರ್ ೧೯೬೩ಸಿದ್ದಗಂಗಾರಂ. ಶ್ರೀ. ಮುಗಳಿ
೪೫೧೦, ೧೧, ೧೨ ಮೇ ೧೯೬೫ಕಾರವಾರಕಡೆಂಗೋಡ್ಲು ಶಂಕರಭಟ್ಟ
೪೬೨೬, ೨೭, ೨೮ ಮೇ ೧೯೬೭ಶ್ರವಣಬೆಳಗೊಳಆ. ನೇ. ಉಪಾಧ್ಯೆ
೪೭೨೭, ೨೮, ೨೯ ಡಿಸೆಂಬರ್ ೧೯೭೦ಬೆಂಗಳೂರುದೇ. ಜವರೇಗೌಡ
೪೮೩೧ ಮೇ, ೧, ೨ ಜೂನ್ ೧೯೭೪ಮಂಡ್ಯಜಯದೇವಿತಾಯಿ ಲಿಗಾಡೆ
೪೯೧೧, ೧೨, ೧೩ ಡಿಸೆಂಬರ್ ೧೯೭೬ಶಿವಮೊಗ್ಗಎಸ್. ವಿ. ರಂಗಣ್ಣ
೫೦೨೩, ೨೪, ೨೫ ಏಪ್ರಿಲ್ ೧೯೭೮ದೆಹಲಿಜಿ. ಪಿ. ರಾಜರತ್ನಂ
೫೧೦೯, ೧೦, ೧೧ ಮಾರ್ಚ್ ೧೯೭೯ಧರ್ಮಸ್ಥಳಗೋಪಾಲಕೃಷ್ಣ ಅಡಿಗ
೫೨೭, ೮, ೯, ೧೦ ಫೆಬ್ರವರಿ ೧೯೮೦ಬೆಳಗಾವಿಬಸವರಾಜ ಕಟ್ಟೀಮನಿ
೫೩೧೩, ೧೪, ೧೫ ಮಾರ್ಚ್ ೧೯೮೧ಚಿಕ್ಕಮಗಳೂರುಪು. ತಿ. ನರಸಿಂಹಾಚಾರ್
೫೪೨೭, ೨೮, ೨೯, ೩೦ ನವೆಂಬರ್ ೧೯೮೧ಮಡಿಕೇರಿಶಂ. ಬಾ. ಜೋಶಿ
೫೫೨೩, ೨೪, ೨೫, ೨೬ ಡಿಸೆಂಬರ್ ೧೯೮೨ಸಿರ್ಸಿಗೊರೂರು ರಾಮಸ್ವಾಮಿ ಅಯ್ಯಂಗಾರ್
೫೬೨೩, ೨೪, ೨೫ ಮಾರ್ಚ್ ೧೯೮೪ಕೈವಾರಎ. ಎನ್. ಮೂರ್ತಿರಾವ್
೫೭೫, ೬, ೭ ಏಪ್ರಿಲ್ ೧೯೮೫ಬೀದರ್ಹಾ. ಮಾ. ನಾಯಕ
೫೮೨೯, ೩೦, ೩೧ ಅಕ್ಟೋಬರ್, ೧ ನವೆಂಬರ್ ೧೯೮೭ಕಲಬುರಗಿಸಿದ್ಧಯ್ಯ ಪುರಾಣಿಕ
೫೯೧೬, ೧೭, ೧೮ ಫೆಬ್ರವರಿ ೧೯೯೦ಹುಬ್ಬಳ್ಳಿಆರ್. ಸಿ. ಹಿರೇಮಠ
೬೦೨೮, ೨೯, ೩೦ ನವೆಂಬರ್ ೧೯೯೦ಮೈಸೂರುಕೆ. ಎಸ್. ನರಸಿಂಹಸ್ವಾಮಿ
೬೧೯, ೧೦, ೧೧, ೧೨ ಜನವರಿ ೧೯೯೨ದಾವಣಗೆರೆಜಿ. ಎಸ್. ಶಿವರುದ್ರಪ್ಪ
೬೨೫, ೬, ೭ ಫೆಬ್ರವರಿ ೧೯೯೩ಕೊಪ್ಪಳಸಿಂಪಿ ಲಿಂಗಣ್ಣ
೬೩೧೧, ೧೨, ೧೩ ಫೆಬ್ರವರಿ ೧೯೯೪ಮಂಡ್ಯಚದುರಂಗ
೬೪೩, ೪, ೫ ಜೂನ್ ೧೯೯೫ಮುಧೋಳಎಚ್. ಎಲ್. ನಾಗೇಗೌಡ
೬೫೨೧, ೨೨, ೨೩, ೨೪ ಡಿಸೆಂಬರ್ ೧೯೯೬ಹಾಸನಚನ್ನವೀರ ಕಣವಿ
೬೬೧೧, ೧೨, ೧೩, ೧೪ ಡಿಸೆಂಬರ್ ೧೯೯೭ಮಂಗಳೂರುಕಯ್ಯಾರ ಕಿಞ್ಞಣ್ಣ ರೈ
೬೭೧೧, ೧೨, ೧೩, ೧೪ ಫೆಬ್ರವರಿ ೧೯೯೯ಕನಕಪುರಎಸ್. ಎಲ್. ಭೈರಪ್ಪ
೬೮೨೪, ೨೫, ೨೬ ಜೂನ್ ೨೦೦೦ಬಾಗಲಕೋಟೆಶಾಂತಾದೇವಿ ಮಾಳವಾಡ
೬೯೧೫, ೧೬, ೧೭ ಫೆಬ್ರವರಿ ೨೦೦೨ತುಮಕೂರುಯು. ಆರ್. ಅನಂತಮೂರ್ತಿ
೭೦೭, ೮, ೯ ಮಾರ್ಚ್ ೨೦೦೩ಬೆಳಗಾವಿಪಾಟೀಲ ಪುಟ್ಟಪ್ಪ
೭೧೧೮, ೧೯, ೨೦, ೨೧ ಡಿಸೆಂಬರ್ ೨೦೦೩ಮೂಡುಬಿದಿರೆಕಮಲಾ ಹಂಪನಾ
೭೨೨೭, ೨೮, ೨೯ ಜನವರಿ ೨೦೦೬ಬೀದರ್ಶಾಂತರಸ ಹೆಂಬೆರಳು
೭೩೨೦, ೨೧, ೨೨, ೨೩ ಡಿಸೆಂಬರ್ ೨೦೦೭ಶಿವಮೊಗ್ಗಕೆ. ಎಸ್. ನಿಸಾರ್ ಅಹಮ್ಮದ್
೭೪೧೨, ೧೩, ೧೪, ೧೫ ಡಿಸೆಂಬರ್ ೨೦೦೭ಉಡುಪಿಎಲ್. ಎಸ್. ಶೇಷಗಿರಿ ರಾವ್
೭೫೪, ೫, ೬ ಫೆಬ್ರವರಿ ೨೦೦೯ಚಿತ್ರದುರ್ಗಎಲ್. ಬಸವರಾಜು
೭೬೧೯, ೨೦, ೨೧ ಫೆಬ್ರವರಿ ೨೦೧೦ಗದಗಗೀತಾ ನಾಗಭೂಷಣ
೭೭೪, ೫, ೬ ಫೆಬ್ರವರಿ ೨೦೧೧ಬೆಂಗಳೂರುಜಿ. ವೆಂಕಟಸುಬ್ಬಯ್ಯ
೭೮೯, ೧೦, ೧೧ ಡಿಸೆಂಬರ್ ೨೦೧೧ಗಂಗಾವತಿಸಿ. ಪಿ. ಕೃಷ್ಣಕುಮಾರ್
೭೯೯, ೧೦, ೧೧ ಫೆಬ್ರವರಿ ೨೦೧೩ಬಿಜಾಪುರಕೋ. ಚೆನ್ನಬಸಪ್ಪ
೮೦೭, ೮, ೯ ಜನವರಿ ೨೦೧೪ಕೊಡಗುನಾ. ಡಿಸೋಜಾ
೮೧೩೧ ಜನವರಿ, ೧, ೨, ೩ ಫೆಬ್ರವರಿ ೨೦೧೫ಶ್ರವಣಬೆಳಗೊಳಸಿದ್ಧಲಿಂಗಯ್ಯ
೮೨೨, ೩, ೪ ಡಿಸೆಂಬರ್ ೨೦೧೬ರಾಯಚೂರುಬರಗೂರು ರಾಮಚಂದ್ರಪ್ಪ
೮೩೨೪, ೨೫, ೨೬ ನವೆಂಬರ್ ೨೦೧೭ಮೈಸೂರುಚಂದ್ರಶೇಖರ ಪಾಟೀಲ
೮೪೪, ೫, ೬ ಜನವರಿ ೨೦೧೯ಧಾರವಾಡಚಂದ್ರಶೇಖರ ಕಂಬಾರ
೮೫೫, ೬, ೭ ಫೆಬ್ರವರಿ ೨೦೨೦ಕಲಬುರಗಿಎಚ್. ಎಸ್. ವೆಂಕಟೇಶಮೂರ್ತಿ
೮೬೬, ೭, ೮ ಜನವರಿ ೨೦೨೩ಹಾವೇರಿದೊಡ್ಡರಂಗೇಗೌಡ (ನಿಯೋಜಿತ ಅಧ್ಯಕ್ಷರು)
೮೭ನಿಗದಿಸಿಲ್ಲಮಂಡ್ಯನಿಯೋಜಿಸಿಲ್ಲ