ವಚನಕಾರರ ಅಂಕಿತ ನಾಮಗಳು

೧೨ ನೆಯ ಶತಮಾನದ ಮೂಲ ವಚನಕಾರರಿಂದಿಡಿದು, ೨೦ನೇ ಶತಮಾನದ ವಚನಕಾರರವರೆಗೂ ನೂರಾರು ಜನ ತಮ್ಮದೇ ಧಾಟಿಯಲ್ಲಿ ವಚನಗಳನ್ನು ರಚಿಸಿ,ಹಲವಾರು ಅಂಕಿತನಾಮಗಳಿಂದ ಗುರುತಿಸಿಕೊಂಡಿದ್ದಾರೆ. ಇದರೊಳಗೆ ದಾಸವರೇಣ್ಯರುಗಳು ಬರುವುದು ವಿಶೇಷವಾಗಿದೆ. ಅಂತಹ ವಚನಕಾರರ ಪಟ್ಟಿಯನ್ನು ಈ ಕೆಳಕಂಡಂತೆ ಕೊಡಲಾಗಿದೆ.

ಕ್ರಮ ಸಂಖ್ಯೆವಚನಕಾರರ ಹೆಸರುಅಂಕಿತನಾಮ
ಜೇಡರ ದಾಸಿಮಯ್ಯರಾಮನಾಥ
ಅಲ್ಲಮಪ್ರಭುಗುಹೇಶ್ವರ
ಅಕ್ಕಮಹಾದೇವಿಚನ್ನಮಲ್ಲಿಕಾರ್ಜುನ
ಬಸವಣ್ಣಕೂಡಲ ಸಂಗಮದೇವ
ಮುಕ್ತಾಯಕ್ಕಅಜಗಣ್ಣ
ಚೆನ್ನಬಸವಣ್ಣಕೂಡಲ ಚೆನ್ನಸಂಗಯ್ಯ
ಅಂಬಿಗರ ಚೌಡಯ್ಯಅಂಬಿಗರ ಚೌಡಯ್ಯ
ಮಡಿವಾಳ ಮಾಚಯ್ಯಕಲಿದೇವರದೇವ
ಗಂಗಾಂಬಿಕೆಗಂಗಾಪ್ರಿಯ ಕೂಡಲ ಸಂಗಮದೇವ
೧೦ನೀಲಾಂಬಿಕೆ/ನೀಲಲೋಚನೆಸಂಗಯ್ಯ
೧೧ಆದಯ್ಯಸೌರಾಷ್ಟ್ರ ಸೋಮೇಶ್ವರ
೧೨ಡೋಹಾರ ಕಕ್ಕಯ್ಯಅಭಿನವ ಮಲ್ಲಿಕಾರ್ಜುನ
೧೩ಮೋಳಿಗೆ ಮಾರಯ್ಯನಿಃಕಳಂಕ ಮಲ್ಲಿಕಾರ್ಜುನ
೧೪ಸೊನ್ನಲಿಗೆ ಸಿದ್ದರಾಮಕಪಿಲಸಿದ್ದ ಮಲ್ಲಿಕಾರ್ಜುನ
೧೫ಮಧುವಯ್ಯಅರ್ಕೇಶ್ವರಲಿಂಗ
೧೬ಅಮುಗೆ ರಾಯಮ್ಮಅಮುಗೇಶ್ವರ
೧೭ನೀಲಮ್ಮಬಸವ
೧೮ಅಕ್ಕಮ್ಮರಾಮೇಶ್ವರ ಲಿಂಗ
೧೯ಸಿದ್ದಬುದ್ದಯ್ಯಗಳ ಪುಣ್ಯಸ್ತ್ರೀ ಕಾಳವ್ವೆಭೀಮೇಶ್ವರಾ
೨೦ಸೂಳೆ ಸಂಕವ್ವನಿರ್ಲಜ್ಜೇಶ್ವರ
೨೧ಕದಿರ ಕಾಯಕದ ಕಾಳವ್ವೆಗುಮ್ಮೇಶ್ವರ
೨೨ರೇಮಮ್ಮೆನಿರಂಗಲಿಂಗ
೨೩ಗುಡ್ಡವ್ವೆನಿಂಬೇಶ್ವರಾ
೨೪ವೀರಮ್ಮಶಾಂತೇಶ್ವರ ಪ್ರಭುವೇ
೨೫ಬಾಚಿಕಾಯಕದ ಕಾಳವ್ವೆಕರ್ಮಹರ ಕಾಳೇಶ್ವರಾ
೨೬ಕೇತಲದೇವಿಕುಂಬೇಶ್ವರ
೨೭ರೇಚವ್ವೆನಿಜಶಾಂತೇಶ್ವರ
೨೮ಕಾಮಮ್ಮನಿರ್ಭೀತಿ ನಿಜಲಿಂಗದಲ್ಲಿ
೨೯ಲಕ್ಷ್ಮಮ್ಮಅಗಜೇಶ್ವರಲಿಂಗವು
೩೦ಗಂಗಮ್ಮಗಂಗೇಶ್ವರಲಿಂಗದಲ್ಲಿ
೩೧ಮಸಣಮ್ಮನಿಜಗುಣೇಶ್ವರಲಿಂಗದಲ್ಲಿ
೩೨ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆಉರಿಲಿಂಗ ಪೆದ್ದಿಗಳರಸ
೩೩ರೇಕಮ್ಮಶ್ರೀ ಗುರು ಸಿದ್ದೇಶ್ವರ
೩೪ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀಮಸಣಯ್ಯಪ್ರಿಯ ಗಜೇಶ್ವರಾ
೩೫ಕದಿರ ರೆಮ್ಮವ್ವೆರೆಮ್ಮಿಯೊಡೆಯ ಗುಮ್ಮೇಶ್ವರಾ
೩೬ಗೊಗ್ಗವ್ವೆನಾಸ್ತಿನಾಥ
೩೭ಅಕ್ಕನಾಗಮ್ಮಸಂಗನ ಬಸವಣ್ಣ
೩೮ಸತ್ಯಕ್ಕಶಂಭುಜಕೇಶ್ವರಾ
೩೯ಮೋಳಿಗೆ ಮಹಾದೇವಿನಿಃಕಳಂಕ ಮಲ್ಲಿಕಾರ್ಜುನಲಿಂಗ
೪೦ಲಿಂಗಮ್ಮಅಪ್ಪಣ್ಣ ಪ್ರಿಯ ಚನ್ನಬಸವಣ್ಣ
೪೧ನಿಜಗುಣ ಶಿವಯೋಗಿಶಂಭುಲಿಂಗ
೪೨ಶ್ರೀಜಯಚಾಮರಾಜೇಂದ್ರ ಒಡೆಯರ್ಶ್ರೀ ವಿದ್ಯಾ
೪೩ಡಾ.ಪುಟ್ಟರಾಜ ಕವಿ ಗವಾಯಿಗಳುಗುರು ಕುಮಾರ ಪಂಚಾಕ್ಷರೇಶ್ವರ
೪೪ಶ್ರಿ ಆದಿತ್ಯ ಪಾಳೇಗಾರಆತ್ಮಲಿಂಗ

.

ಗ್ರಂಥ ಋಣ

  • ಶಿವಶರಣೆಯರ ವಚನಗಳು ಸಮಗ್ರ ಸಂಪುಟ - ಡಾ.ಆರ್.ಸಿ. ಹಿರೇಮಠ್
  • ಸ್ಪರ್ಧಾ ಚೈತ್ರ - ಪ್ರಧಾನ ಸಂಪಾದಕರು-ಬಿ.ಎಸ್. ವಸಂತಕುಮಾರ್

ನೋಡಿ

ಉಲ್ಲೇಖಗಳು