ಸಂವತ್ಸರಗಳು

ಸಂವತ್ಸರ ಒಂದು ಚಾಂದ್ರಮಾನ ವರ್ಷವನ್ನು ಸಂವತ್ಸರ ಎಂದು ಕರೆಯುತ್ತೇವೆ. ಈ ಪದ್ಧತಿಯಲ್ಲಿ ೬೦ ಸಂವತ್ಸರಗಳ ಒಂದು ಚಕ್ರವನ್ನು ಅನುಸರಿಸುತ್ತೇವೆ. ಈ ಸಂವತ್ಸರಗಳನ್ನು ಪ್ರಭವ, ವಿಭವ, ಶುಕ್ಲ ಇತ್ಯಾದಿ ಹೆಸರುಗಳಿಂದ ಗುರುತಿಸುತ್ತಾರೆ. ಮೊದಲನೆಯ ಸಂವತ್ಸರವು ಪ್ರಭವ ಎಂಬ ಹೆಸರಿನಿಂದ ಕರೆಸಿಕೊಂಡರೆ ಕೊನೆಯ ಅಂದರೆ ೬೦ನೇ ಸಂವತ್ಸರವನ್ನು ಕ್ಷಯ ಅಥವಾ ಅಕ್ಷಯ ಎಂದು ಕರೆಯಲಾಗಿದೆ. ಬೃಹಸ್ಪತಿ ಗ್ರಹವು ಒಂದು ಪ್ರದಕ್ಷಿಣೆ ಮುಗಿಸಲು ೧೨ ವರ್ಷಗಳ ಕಾಲಾವಧಿ ಬೇಕಾಗುತ್ತದೆ. ಇದನ್ನು " ಬಾರ್ಹಸ್ಪತ್ಯ"

ಬ್ರಾಹಸ್ಪತ್ಯ ಯುಗ" ಎನ್ನುತ್ತಾರೆ. ಇಂತಹ ಐದು ಬ್ರಾಹಸ್ಪತ್ಯ ಯುಗಗಳ ಒಟ್ಟು ಕಾಲಾವಧಿ ೬೦ ವರ್ಷಗಳ ಒಂದು ಚಕ್ರಕ್ಕೆ ಅಷ್ಟು ಸಂವತ್ಸರಗಳೆಂದು ಪರಿಗಣಿಸುತ್ತೇವೆ.

ವರ್ಷದ ಪರಿಕಲ್ಪನೆ

ಸಂವತ್ಸರ ಎಂದರೆ ಸಂಸ್ಕೃತದಲ್ಲಿ ವರ್ಷವಾಗಿದ್ದು, ಹಿಂದೂ ಸಂಪ್ರದಾಯದಲ್ಲಿ ಒಟ್ಟು ೬೦ ಸಂವತ್ಸರಗಳಿವೆ.

ಸಂವತ್ಸರ (संवत्सर)Samvatsara ಎಂಬುದು ಸಂಸ್ಕೃತ ಭಾಷೆಯ ಒಂದು ಪಾರಿಭಾಷಿಕ ಪದವಾಗಿದ್ದು, ವೇದ ಸಾಹಿತ್ಯಗಳಲ್ಲಿ ಮುಖ್ಯವಾಗಿ ಋಗ್ವೇದ ಮತ್ತು ಇತರ ಪ್ರಾಚೀನ ಸಾಹಿತ್ಯ ಪಠ್ಯಗಳಲ್ಲಿ ಒಂದು ವರ್ಷಕ್ಕೆ ಸಂವಾದಿಯಾಗಿ ಬಳಕೆಯಾಗುತ್ತಿತ್ತು. ಒಂದು ಜೋವಿಯನ್ ವರ್ಷವನ್ನು ಭಾರತೀಯ ಕ್ಯಾಲೆಂಡರ್‌ಗಳಲ್ಲಿ ಬೃಹಸ್ಪತಿ(ಗುರು) ಎಂದು ವ್ಯಾಖ್ಯಾನಿಸಲಾಗಿದ್ದು, ಅದು ಒಂದು ನಕ್ಷತ್ರಪುಂಜದಿಂದ ಮುಂದಿನ ನಕ್ಷತ್ರಕ್ಕೆ ಸಾಗಲು ತೆಗೆದುಕೊಳ್ಳುವ ಸರಾಸರಿ ಚಲನೆಯ ಸಮಯವಾಗಿದೆ.


ಸಂವತ್ಸರಗಳು

೧೮೦ ವರ್ಷಗಳ ಸಂವತ್ಸರ ಕ್ರಮ

ನಾವೆಲ್ಲರೂ ನಮ್ಮ ಹುಟ್ಟಿದ ವರ್ಷವನ್ನು ಥಟ್ಟನೆ ಹೇಳುತ್ತೇವೆ. ಭಾರತೀಯ ಪಂಚಾಂಗ ರೀತ್ಯಾ ಹುಟ್ಟಿದ ಸಂವತ್ಸರ, ನಿಮ್ಮ ಹುಟ್ಟಿದ ವರ್ಷ ಯಾವ ಸಂವತ್ಸರದಲ್ಲಿದೆಯೆಂಬ ವಿವರ ಇಲ್ಲಿದೆ ನೋಡಿ.[೧]

ಸಂಖ‍್ಯೆಸಂವತ್ಸರಇಂಗ್ಲಿಷ್ ವರ್ಷಇಂಗ್ಲಿಷ್ ವರ್ಷಇಂಗ್ಲಿಷ್ ವರ್ಷ
ಪ್ರಭವ[೨]೧೮೬೭೧೯೨೭೧೯೮೭
ವಿಭವ[೩]೧೮೬೮೧೯೨೮೧೯೮೮
ಶುಕ್ಲ[೪]೧೮೬೯೧೯೨೯೧೯೮೯
ಪ್ರಮೋದೂತ[೫]೧೮೭೦೧೯೩೦೧೯೯೦
ಪ್ರಜೋತ್ಪತ್ತಿ[೬]೧೮೭೧೧೯೩೧೧೯೯೧
ಅಂಗೀರಸ[೭]೧೮೭೨೧೯೩೨೧೯೯೨
ಶ್ರೀಮುಖ[೮]೧೮೭೩೧೯೩೩೧೯೯೩
ಭಾವ[೯]೧೮೭೪೧೯೩೪೧೯೯೪
ಯುವ[೧೦]೧೮೭೫೧೯೩೫೧೯೯೫
೧೦ಧಾತ೧೮೭೬೧೯೩೬೧೯೯೬
೧೧ಈಶ್ವರ೧೮೭೭೧೯೩೭೧೯೯೭
೧೨ಬಹುಧಾನ್ಯ೧೮೭೮೧೯೩೮೧೯೯೮
೧೩ಪ್ರಮಾದಿ೧೮೭೯೧೯೩೯೧೯೯೯
೧೪ವಿಕ್ರಮ೧೮೮೦೧೯೪೦೨೦೦೦
೧೫ವೃಷ೧೮೮೧೧೯೪೧೨೦೦೧
೧೬ಚಿತ್ರಭಾನು೧೮೮೨೧೯೪೨೨೦೦೨
೧೭ಸ್ವಭಾನು೧೮೮೩೧೯೪೩೨೦೦೩
೧೮ತಾರಣ೧೮೮೪೧೯೪೪೨೦೦೪
೧೯ಪಾರ್ಥಿವ೧೮೮೫೧೯೪೫೨೦೦೫
೨೦ವ್ಯಯ೧೮೮೬೧೯೪೬೨೦೦೬
೨೧ಸರ್ವಜಿತ್೧೮೮೭೧೯೪೭೨೦೦೭
೨೨ಸರ್ವಧಾರಿ೧೮೮೮೧೯೪೮೨೦೦೮
೨೩ವಿರೋಧಿ೧೮೮೯೧೯೪೯೨೦೦೯
೨೪ವಿಕೃತಿ೧೮೯೦೧೯೫೦೨೦೧೦
೨೫ಖರ೧೮೯೧೧೯೫೧೨೦೧೧
೨೬ನಂದನ೧೮೯೨೧೯೫೨೨೦೧೨
೨೭ವಿಜಯ೧೮೯೩೧೯೫೩೨೦೧೩
೨೮ಜಯ೧೮೯೪೧೯೫೪೨೦೧೪
೨೯ಮನ್ಮಥ೧೮೯೫೧೯೫೫೨೦೧೫
೩೦ದುರ್ಮುಖಿ೧೮೯೬೧೯೫೬೨೦೧೬
೩೧ಹೇಮಲಂಬ (ಹೇವಿಳಂಬಿ / ಹೇವಿಲಂಬಿ ಅಲ್ಲ)[೧೧]೧೮೯೭೧೯೫೭೨೦೧೭
೩೨ವಿಳಂಬಿ೧೮೯೮೧೯೫೮೨೦೧೮
೩೩ವಿಕಾರಿ೧೮೯೯೧೯೫೯೨೦೧೯
೩೪ಶಾರ್ವರಿ೧೯೦೦೧೯೬೦೨೦೨೦
೩೫ಪ್ಲವ೧೯೦೧೧೯೬೧೨೦೨೧
೩೬ಶುಭಕೃತ೧೯೦೨೧೯೬೨೨೦೨೨
೩೭ಶೋಭಕೃತ೧೯೦೩೧೯೬೩೨೦೨೩
೩೮ಕ್ರೋಧಿ೧೯೦೪೧೯೬೪೨೦೨೪
೩೯ವಿಶ್ವಾವಸು೧೯೦೫೧೯೬೫೨೦೨೫
೪೦ಪರಾಭವ೧೯೦೬೧೯೬೬೨೦೨೬
೪೧ಪ್ಲವಂಗ೧೯೦೭೧೯೬೭೨೦೨೭
೪೨ಕೀಲಕ೧೯೦೮೧೯೬೮೨೦೨೮
೪೩ಸೌಮ್ಯ೧೯೦೯೧೯೬೯೨೦೨೯
೪೪ಸಾಧಾರಣ೧೯೧೦೧೯೭೦೨೦೩೦
೪೫ವಿರೋಧಿಕೃತ೧೯೧೧೧೯೭೧೨೦೩೧
೪೬ಪರಿಧಾವಿ೧೯೧೨೧೯೭೨೨೦೩೨
೪೭ಪ್ರಮಾದ೧೯೧೩೧೯೭೩೨೦೩೩
೪೮ಆನಂದ೧೯೧೪೧೯೭೪೨೦೩೪
೪೯ರಾಕ್ಷಸ೧೯೧೫೧೯೭೫೨೦೩೫
೫೦ನಳ೧೯೧೬೧೯೭೬೨೦೩೬
೫೧ಪಿಂಗಳ೧೯೧೭೧೯೭೭೨೦೩೭
೫೨ಕಾಳಯುಕ್ತಿ೧೯೧೮೧೯೭೮೨೦೩೮
೫೩ಸಿದ್ಧಾರ್ಥಿ೧೯೧೯೧೯೭೯೨೦೩೯
೫೪ರೌದ್ರಿ೧೯೨೦೧೯೮೦೨೦೪೦
೫೫ದುರ್ಮತಿ೧೯೨೧೧೯೮೧೨೦೪೧
೫೬ದುಂದುಭಿ೧೯೨೨೧೯೮೨೨೦೪೨
೫೭ರುಧಿರೋದ್ಗಾರಿ೧೯೨೩೧೯೮೩೨೦೪೩
೫೮ರಕ್ತಾಕ್ಷಿ೧೯೨೪೧೯೮೪೨೦೪೪
೫೯ಕ್ರೋಧನ೧೯೨೫೧೯೮೫೨೦೪೫
೬೦ಅಕ್ಷಯ೧೯೨೬೧೯೮೬೨೦೪೬

ಉಲ್ಲೇಖಗಳು