ಗುಲಗಂಜಿ


ಗುಲಗಂಜಿ
Scientific classification
ಸಾಮ್ರಾಜ್ಯ:
ಸಸ್ಯಗಳು
(ಶ್ರೇಣಿಯಿಲ್ಲದ್ದು):
ಆವೃತ ಬೀಜಿಗಳು
(ಶ್ರೇಣಿಯಿಲ್ಲದ್ದು):
ಯೂಡಿಕೋಟ್ಸ್
(ಶ್ರೇಣಿಯಿಲ್ಲದ್ದು):
ರೋಸಿಡ್ಸ್
ಗಣ:
ಫಬೆಲ್ಸ್
ಕುಟುಂಬ:
ಫಭಾಸಿಯೆ
ಕುಲ:
ಅಬ್ರಸ್
ಪ್ರಜಾತಿ:
ಎ.ಪ್ರೆಕಾಟೋರಿಯಸ್
Binomial name
ಅಬ್ರಸ್ ಪ್ರೆಕಾಟೋರಿಯಸ್
L., 1753

ಗುಲಗಂಜಿಯ ಗಿಡವು ಹಳದಿ ಬಣ್ಣದ್ದಾಗಿದ್ದು ಕೆಂಪು ಬಣ್ಣದ ಹೂವುಗಳನ್ನು ಬಿಡುತ್ತದೆ. ಕಡು ಕೆಂಪಗಿನ ತುದಿಯಲ್ಲಿ ಕಪ್ಪು ಚುಕ್ಕೆಯಿರುವ ಸಣ್ಣ ಬೀಜವೇ ಗುಲಗಂಜಿ. ಅಕ್ಕಸಾಲಿಗರು ಹಿಂದಿನ ಕಾಲದಲ್ಲಿ ಬಂಗಾರವನ್ನು ತೂಕಮಾಡಲು ಗುಲಗಂಜಿಯ ಬೀಜಗಳನ್ನು ಬಳಸುತ್ತಿದ್ದರು.ಈಗಲೂ ಗ್ರಾಮೀಣ ಪ್ರದೇಶದಲ್ಲಿ ಚಿನ್ನ ತೂಕ ಮಾಡಲು ಗುಲಗಂಜಿ ಬಳಕೆ ಆಗುತ್ತದೆ.ಗುಲಗಂಜಿ ಗಿಡ ಹಳದಿ ಬಣ್ಣದ್ದಾಗಿದ್ದು, ಕೆಂಪು ಹೂಗಳನ್ನು ಬಿಡುತ್ತದೆ.ಗುಲಗಂಜಿ ಬೀಜಗಳು ಆಕರ್ಷಕವಾದ ಕೆಂಪು ಮತ್ತು ಕಡು ಕಪ್ಪು ಬಣ್ಣದಿಂದ ಕೂಡಿರುತ್ತವೆ[೧].ಗುಲಗಂಜಿಯಲ್ಲಿ `ಅಬ್ರಿನ್` ಎನ್ನುವ ಅಪಾಯಕಾರಿಯಾದ ಅಂಶವಿದೆ.ಇದು ನಾಗರಹಾವಿನ ವಿಷಕ್ಕಿಂತಲೂ ಹೆಚ್ಚು ತೀಕ್ಷ್ಣವಾಗಿದೆ[೨].

`ಏಬ್ರಸ್ ಪ್ರಿಕಟೋರಿಯಸ್`- ಗುಲಗಂಜಿಯ ಸಸ್ಯಶಾಸ್ತ್ರೀಯ ಹೆಸರು `ಏಬ್ರಸ್ ಪ್ರಿಕಟೋರಿಯಸ್`. ಇಂಗ್ಲೀಷ್‌ನಲ್ಲಿ ಇದಕ್ಕೆ `ಇಂಡಿಯನ್ ಲಿಕೋರಿಸ್` ಎನ್ನುತ್ತಾರೆ.

ಮಲೇಷ್ಯಾ ಮತ್ತು ಇಂಡೋನೇಷ್ಯಾ ದೇಶಗಳು ಗುಲಗಂಜಿಯ ತವರು.

ಚೀನಾ ದೇಶದಲ್ಲಿ ಗುಲಗಂಜಿಯು ಪ್ರೀತಿಯ ಸಂಕೇತ ಆಗಿದೆ.

ಗುಲಗಂಜಿ ಬೀಜ ವಿಷಪ್ರಭಾವ

ವಿಶ್ವ ಯುದ್ಧ ಸಮಯದಲ್ಲಿ ಗುಲಗಂಜಿ ಬೀಜಗಳನ್ನು ಶತ್ರು ಸೈನಿಕರನ್ನು ಕೊಲ್ಲಲು ಬಳಸುತ್ತಿದ್ದರು ಎಂಬ ಬಗ್ಗೆ ದಾಖಲೆಗಳಿವೆ. ಗುಲಗಂಜಿ ಗಿಡದ ಉಳಿದ ಭಾಗಗಳಾದ ಕಾಂಡ, ಸೊಪ್ಪು, ಎಲೆ ಇತ್ಯಾದಿಗಳು ವಿಷ ಬಾಧೆಯನ್ನುಂಟು ಮಾಡುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.ಗುಲಗಂಜಿ ವಿಷ ಬಾಧೆಯನ್ನು ಪತ್ತೆ ಹಚ್ಚುವುದು ಸ್ವಲ್ಪ ಕಷ್ಟ. ಗುಲಗಂಜಿ ಬೀಜ ತಿಂದ ನಂತರ ವಿಷಬಾಧೆಯ ಲಕ್ಷಣಗಳು ಮತ್ತು ಮರಣೋತ್ತರ ಪರೀಕ್ಷೆಯಲ್ಲಿ ಕಂಡು ಬರುವ ಕೆಲವು ವಿಶಿಷ್ಟ ಬದಲಾವಣೆ�ಗಳ ಮೂಲಕ ವಿಷದ ನಿಖರತೆಯನ್ನು ಪತ್ತೆ ಹಚ್ಚಬಹುದು. ಇದಕ್ಕೆ ನಿಖರ ಚಿಕಿತ್ಸೆ ಇಲ್ಲ. ಆದರೂ ಕೂಡಲೇ ವಾಂತಿ ಅಥವಾ ಬೇಧಿ ಮಾಡಿಸುವ ಮೂಲಕ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು.ಶರೀರಕ್ಕೆ ರಕ್ತನಾಳದ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಗ್ಲುಕೋಸ್ ಅಥವಾ ಉತ್ತಮ ದ್ರವಾಹಾರ ನೀಡುವುದರ ಮೂಲಕ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು. ಇದಕ್ಕಿಂತ ಮುಖ್ಯವಾಗಿ ಜಾನುವಾರುಗಳು ಗುಲಗಂಜಿ ಬೀಜಗಳು ತಿನ್ನದಂತೆ ತಡೆದುಕೊಳ್ಳುವುದು ಉತ್ತಮ ಉಪಾಯ[೧] .

ಉಲ್ಲೇಖಗಳು

ಚಿತ್ರಮಾಲೆ

<gallery>File:Starr 031108-3197 Abrus precatorius.jpg|ಗಿಡFile:Abrus precatorius1SHSU.jpg|ಹುವುಗಳುFile:Abrus precatorius — Scott Zona 001.jpg|ಗುಲಗಂಜಿ ಕಾಯಿ-ಬೀಜಗಳುFile:Abrus precatorius seeds.jpg|ಗುಲಗಂಜಿ ಬೀಜ<gallery>