ಜಾಯ್‌ಸ್ಟಿಕ್‌

ಜಾಯ್‌ಸ್ಟಿಕ್ (ಸನ್ನೆಗೋಲು)ಮಾಹಿತಿ ಉಪಕರಣವಾಗಿದ್ದು, ಒಂದು ಆಧಾರದ ಮೇಲೆ ತಿರುಗುವ ದಂಡವನ್ನು ಹೊಂದಿದೆ. ಅದನ್ನು ನಿಯಂತ್ರಿಸುವ ಉಪಕರಣಕ್ಕೆ ಅದರ ಕೋನ ಅಥವಾ ದಿಕ್ಕನ್ನು ತಿಳಿಸುತ್ತದೆ. ಜಾಯ್‌ಸ್ಟಿಕ್‌ಗಳನ್ನು ಸಾಮಾನ್ಯವಾಗಿ ವಿಡಿಯೊ ಆಟಗಳನ್ನು ನಿಯಂತ್ರಿಸಲು ಬಳಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಒಂದು ಅಥವಾ ಹೆಚ್ಚು ಪುಶ್‌ಬಟನ್‌(ಒತ್ತುಗುಂಡಿ)ಗಳನ್ನು ಹೊಂದಿದ್ದು, ಅದರ ಸ್ಥಿತಿಯನ್ನು ಕಂಪ್ಯೂಟರ್‌ನಿಂದ ಓದಬಹುದು. ಆಧುನಿಕ ವಿಡಿಯೊ ಗೇಮ್ ಕನ್ಸೋಲ್ಸ್‌‌ನಲ್ಲಿ ಬಳಸಿದ ಜಾಯ್‌ಸ್ಟಿಕ್‌ನ ಜನಪ್ರಿಯ ಬದಲಾವಣೆಯು ಅನಲಾಗ್ ಸ್ಟಿಕ್ ಆಗಿದೆ.

ಜಾಯ್‌ಸ್ಟಿಕ್ ವಸ್ತುಗಳು: #1 ಸ್ಟಿಕ್; #2 ಬೇಸ್; #3 ಟ್ರಿಗರ್; #4 ಎಕ್ಟ್ರಾ ಬಟನ್ಸ್; #5 ಆಟೊಫೈರ್ ಸ್ವಿಚ್; #6 ಥ್ರಾಟಲ್; #7 ಹ್ಯಾಟ್ ಸ್ವಿಚ್ (POV ಹ್ಯಾಟ್); #8 ಸಕ್ಷನ್ ಕಪ್

ಜಾಯ್‌ಸ್ಟಿಕ್ ಅನೇಕ ವಿಮಾನಗಳ ಕಾಕ್‌ಪಿಟ್‌ನಲ್ಲಿ ಮುಖ್ಯ ಹಾರಾಟ ನಿಯಂತ್ರಕವಾಗಿದ್ದು, ವಿಶೇಷವಾಗಿ ಮಿಲಿಟರಿ ವೇಗದ ಜೆಟ್‌ಗಳಲ್ಲಿ ಸೆಂಟರ್ ಸ್ಟಿಕ್ ಅಥವಾ ಸೈಡ್-ಸ್ಟಿಕ್‌ರೀತಿಯಲ್ಲಿ ಬಳಸಲಾಗುತ್ತದೆ.

ಜಾಯ್‌ಸ್ಟಿಕ್‌ಗಳನ್ನು ಕ್ರೇನ್‌ಗಳು, ಟ್ರಕ್‌ಗಳು, ಜಲಗರ್ಭದ ಚಾಲಕರಹಿತ ವಾಹನಗಳು, ವೀಲ್‌ಚೇರ್‌ಗಳು ಕಣ್ಗಾವಲು ಕ್ಯಾಮೆರಾಗಳು ಮತ್ತು ಶೂನ್ಯ ತಿರುಗುವ ತ್ರಿಜ್ಯದ ಲಾನ್ ಮೋವರ್(ಹುಲ್ಲು ಕಟಾವು ಮಾಡುವುದು)ಮುಂತಾದವುಗಳಲ್ಲಿ ಕೂಡ ಬಳಸಲಾಗುತ್ತದೆ. ಸಣ್ಣ ಬೆರಳಿನಿಂದ ನಿರ್ವಹಿಸುವ ಜಾಯ್‌ಸ್ಟಿಕ್‌ಗಳನ್ನು ಮೊಬೈಲ್ ಫೋನ್ ಮುಂತಾದ ಸಣ್ಣ ವಿದ್ಯುನ್ಮಾನ ಉಪಕರಣಕ್ಕೆ ಮಾಹಿತಿ ಉಪಕರಣಗಳಾಗಿ ಅಳವಡಿಸಲಾಗುತ್ತದೆ.

ಇತಿಹಾಸ

ಎ ಪ್ರಾಜೆಕ್ಟ್ ಜೆಮಿನಿ ಜಾಯ್‌ಸ್ಟಿಕ್-ವಿಧದ ಕೈ ನಿಯಂತ್ರಕ, 1962
ಅಟಾರಿ ಸ್ಟಾಂಡರ್ಡ್ ಕನೆಕ್ಟರ್ ಕಂಪ್ಯೂಟರ್ ಪೋರ್ಟ್ ನೋಟr: #1ಮೇಲೆ; #2 ಕೆಳಗೆ; #3 ಎಡಕ್ಕೆ; #4 ಬಲಕ್ಕೆ; #5 (ಪಾಟ್y); #6 ಫೈರ್ ಬಟನ್; #7 +5V DC; #8ಗ್ರೌಂಡ್; #9 (ಪಾಟ್x)

ವಿಮಾನದ ಮಡಿಚುರೆಕ್ಕೆ ಮತ್ತು ಎಲಿವೇಟರ್‌ಗಳಿಗೆ ಜಾಯ್‌ಸ್ಟಿಕ್ ನಿಯಂತ್ರಕಗಳಾಗಿ ಹುಟ್ಟಿಕೊಂಡಿತು. ೧೯೦೮ರ ಲೂವಿಸ್ ಬ್ಲೆರಿಯಟ್ ರವರ ಬ್ಲೆರಿಯಟ್ VIII ವಿಮಾನದಲ್ಲಿ ಇದನ್ನು ಮೊದಲಬಾರಿಗೆ ಬಳಸಲಾಯಿತು. ಬಾಲದಲ್ಲಿ ಅಡ್ಡಚಲನೆ ನಿಯಂತ್ರಣಕ್ಕೆ ಪಾದದಿಂದ ನಿರ್ವಹಿಸುವ ರಡ್ಡರ್ ಬಾರ್ ಸಂಯೋಜನೆ ಹೊಂದಿರುತ್ತದೆ.

ಜಾಯ್‌ಸ್ಟಿಕ್ ಹೆಸರು ಪೂರ್ವದ ೨೦ನೇ ಶತಮಾನದ ಫ್ರೆಂಚ್ ಪೈಲಟ್ ರಾಬರ್ಟ್ ಎಸ್ನಾಲ್ಟ್-ಪೆಲ್ಟೆರೀ ಅವರಿಂದ ಹುಟ್ಟಿಕೊಂಡಿತು ಎಂದು ಭಾವಿಸಲಾಗಿದೆ.[೧] ಸಹ ಪೈಲಟ್‌ಗಳಾದ ರಾಬರ್ಟ್ ಲೊರೈನ್, ಜೇಮ್ಸ್ ಜೋಯ್ಸ್ ಮತ್ತು ಎ.ಇ. ಜಾರ್ಜ್ ಅವರ ಪರವಾಗಿ ಪೈಪೋಟಿಯ ವಾದಗಳಿವೆ. ಲೊರೈನ್ ೧೯೦೯ರಲ್ಲಿ ಬ್ಲೇರಿಯಟ್ಸ್ ಶಾಲೆಯಲ್ಲಿ ವಿಮಾನ ಹಾರಾಟ ತರಬೇತಿಗೆ ಪಾವ್‌ಗೆ ತೆರಳಿದ್ದಾಗ ಜಾಯ್‌ಸ್ಟಿಕ್ ಎಂಬ ಪದವನ್ನು ತಮ್ಮ ದಿನಚರಿಯಲ್ಲಿ ದಾಖಲಿಸಿದ ಮನ್ನಣೆಗೆ ಪಾತ್ರರಾಗಿದ್ದಾರೆ. ಜಾರ್ಜ್ ಪ್ರವರ್ತಕ ವಿಮಾನಚಾಲಕರಾಗಿದ್ದು, ಅವರ ಸಹೋದ್ಯೋಗಿ ಜಾಬ್‌ಲಿಂಗ್ ಜತೆಯಲ್ಲಿ ೧೯೧೦ರಲ್ಲಿ ಇಂಗ್ಲೆಂಡ್ ನ್ಯೂಕ್ಯಾಸಲ್‌ನಲ್ಲಿ ದ್ವಿರೆಕ್ಕೆ ವಿಮಾನ ನಿರ್ಮಿಸಿ ಹಾರಿಸಿದರು. ಅವರು "ಜಾರ್ಜ್ ಸ್ಟಿಕ್" ಆವಿಷ್ಕಾರ ಮಾಡಿದ್ದಾರೆಂದು ಹೇಳಲಾಗಿದ್ದು, ಇದು ಜಾಯ್‌ಸ್ಟಿಕ್ ಎಂದು ಜನಪ್ರಿಯವಾಗಿ ಪರಿಚಿತವಾಯಿತು. ಜಾರ್ಜ್ ಮತ್ತು ಜಾಬ್‌ಲಿಂಗ್ ವಿಮಾನ ನಿಯಂತ್ರಣ ಕಾಲಂ ಇಂಗ್ಲೆಂಡ್‌ನ ನ್ಯೂಕ್ಯಾಸಲ್ ಅಪಾನ್ ಟೈನ್‌ನ ಡಿಸ್ಕವರಿ ಮ್ಯೂಸಿಯಂನ ಸಂಗ್ರಹದಲ್ಲಿದೆ.ಜಾಯ್‌ಸ್ಟಿಕ್‌ಗಳ ಯಾಂತ್ರಿಕ ಮೂಲಗಳು ಅನಿಶ್ಚಿತವಾಗಿದ್ದರೂ ಮುಂಚಿನ ವಿಮಾನಗಳಲ್ಲಿ ಅಸ್ತಿತ್ವದಲ್ಲಿದ್ದವು.[೨] "ಜಾಯ್‌ಸ್ಟಿಕ್ " ಪದದ ಹುಟ್ಟು ವಾಸ್ತವವಾಗಿ ಲೊರೈನ್‌ಗೆ ಸಲ್ಲುತ್ತದೆ. ಅವರು ಖಚಿತವಾಗಿ ಈ ಉಪಕರಣವನ್ನು ಆವಿಷ್ಕರಿಸದಿದ್ದರೂ ಪದವನ್ನು ಬಳಸಿದ ಅತ್ಯಂತ ಮುಂಚಿನವರಾಗಿದ್ದರು.

ಪ್ರಥಮ ವಿದ್ಯುತ್ ೨-ಆಕ್ಸಿಸ್ ಜಾಯ್‌ಸ್ಟಿಕ್ ಬಹುಶಃ ಜರ್ಮನಿಯಲ್ಲಿ ೧೯೪೪ರಲ್ಲಿ ಆವಿಷ್ಕರಿಸಲಾಯಿತು. ಕೆಲವು ಜರ್ಮನ್ ಬಾಂಬರ್ ವಿಮಾನದಲ್ಲಿ ಬಳಸಿದ ಜರ್ಮನ್ ಕೆಹ್ಲ್ ರೇಡಿಯೊ ನಿಯಂತ್ರಣ ಟ್ರಾನ್ಸ್‌ಮಿಟರ್ ವ್ಯವಸ್ಥೆಯ ಭಾಗವಾಗಿ ಬಳಸಲು ಉಪಕರಣವನ್ನು ಅಭಿವೃದ್ಧಿಪಡಿಸಲಾಯಿತು. ರಾಕೆಟ್‌ನಿಂದ ಚಿಮ್ಮಿದ ಹಡಗು ವಿರೋಧಿ ಕ್ಷಿಪಣಿ ಹೆನ್ಸ್‌ಚೆಲ್ Hs ೨೯೩ ಮತ್ತು ಕಡಲು ಮತ್ತು ಇತರ ಗುರಿಗಳ ವಿರುದ್ಧ ವಿದ್ಯುತ್‌ಇಲ್ಲದ ಪ್ರವರ್ತಕ ನಿಖರ ನಿರ್ದೇಶಿತ ಯುದ್ಧಸಾಮಗ್ರಿ Fritz-X ನಿರ್ದೇಶಿಸಲು ಬಳಸಲಾಯಿತು. ಕೆಹ್ಲ್ ‌ ಟ್ರಾನ್ಸ್‌ಮಿಟರ್‌ನ ಜಾಯ್‌ಸ್ಟಿಕ್‌ನ್ನು ಕ್ಷಿಪಣಿಯನ್ನು ಗುರಿಯತ್ತ ತಿರುಗಿಸಲು ನಿರ್ವಾಹಕ ಬಳಸುತ್ತಾನೆ. ಈ ಜಾಯ್‌ಸ್ಟಿಕ್ ಅನಾಲಾಗ್ ಸಂವೇದಕಗಳ ಬದಲಿಗೆ ಆನ್-ಆಫ್ ಸ್ವಿಚ್‌ಗಳನ್ನು ಹೊಂದಿರುತ್ತದೆ. Hs ೨೯೩ ಮತ್ತು Fritz-Xಎರಡೂ Straßburg ರೇಡಿಯೊ ಗ್ರಾಹಕಗಳನ್ನು ಬಳಸಿಕೊಂಡು ಕೆಹ್ಲ್ಸ್ ನಿಯಂತ್ರಣ ಸಂಕೇತಗಳನ್ನು ಆರ್ಡನೆನ್ಸ್ ನಿಯಂತ್ರಕ ಸರ್ಫೇಸ್‌ಗಳಿಗೆ ಕಳಿಸುತ್ತವೆ.

ಈ ಆವಿಷ್ಕಾರವನ್ನು Peenemündeಯ Heeresversuchsanstalt ನಲ್ಲಿ ಸೇರಿದ ವಿಜ್ಞಾನಿಗಳ ತಂಡದಲ್ಲಿ ಒಬ್ಬರು ಮಾಡಿದರು. ಇಲ್ಲಿ ಜರ್ಮನ್ ರಾಕೆಟ್ ಕಾರ್ಯಕ್ರಮದ ತಂಡದ ಭಾಗವು ವಾಸರ್‌ಫಾಲ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುತ್ತಿತ್ತು. ಇದು ನೆಲದಿಂದ ಆಕಾಶಕ್ಕೆ ಹಾರುವ ಕ್ಷಿಪಣಿ V-೨ ರಾಕೆಟ್ನ ವಿಭಿನ್ನರೂಪ. ವಾಸರ್‌ಫಾಲ್ ಚಾಲನ ಉಪಕರಣವು ವಿದ್ಯುತ್ ಸಂಕೇತಗಳನ್ನು ರೇಡಿಯೊ ಸಂಕೇತಗಳಿಗೆ ಪರಿವರ್ತಿಸಿ, ಇದನ್ನು ಕ್ಷಿಪಣಿಗೆ ಸಾಗಿಸುತ್ತದೆ.

೧೯೬೦ರ ದಶಕದಲ್ಲಿ ಜಾಯ್‌ಸ್ಟಿಕ್ ಬಳಕೆಯು ಫಿಲ್ ಕ್ರಾಫ್ಟ್(೧೯೬೪) ಉತ್ಪಾದಿಸಿದ ಕ್ವಿಕ್ ಫ್ಲೈ ಮುಂತಾದ ರೇಡಿಯೊ ನಿಯಂತ್ರಿತ ಮಾದರಿ ವಿಮಾನ ವ್ಯವಸ್ಥೆಗಳಲ್ಲಿ ವ್ಯಾಪಕವಾಯಿತು. ಈಗ ಕಾರ್ಯಸ್ಥಗಿತಗೊಳಿಸಿದ ಕ್ರಾಫ್ಟ್ ಸಿಸ್ಟಮ್ಸ್ ಸಂಸ್ಥೆಯು ತರುವಾಯ ಕಂಪ್ಯೂಟರ್ ಕೈಗಾರಿಕೆ ಮತ್ತು ಇತರೆ ಬಳಕೆಗಳಿಗೆ ಜಾಯ್‌ಸ್ಟಿಕ್‌ಗಳ ಪ್ರಮುಖ OEM ಪೂರೈಕೆದಾರ ಎನಿಸಿತು. ರೇಡಿಯೊ ನಿಯಂತ್ರಿತ ವಿಮಾನ ಕೈಗಾರಿಕೆಯ ಹೊರಗೆ ಜಾಯ್‌ಸ್ಟಿಕ್‌ಗಳ ಪ್ರಥಮ ಬಳಕೆಯು ವಿದ್ಯುತ್‌ಚ್ಛಾಲಿತ ವೀಲ್‌ಚೇರ್‌ಗಳಾದ ಪೆರ್ಮೊಬಿಲ್(೧೯೬೩)ಮುಂತಾದವುಗಳ ನಿಯಂತ್ರಣದಲ್ಲಿ ಬಳಸಿರಬಹುದು. ಈ ಅವಧಿಯಲ್ಲಿ NASA ಅಪೋಲೊ ಯಾತ್ರೆಗಳ ಭಾಗವಾಗಿ ಜಾಯ್‌ಸ್ಟಿಕ್‌ಗಳನ್ನು ನಿಯಂತ್ರಕ ಉಪಕರಣಗಳಾಗಿ ಬಳಸಿತು. ಉದಾಹರಣೆಗೆ, ಲೂನಾರ್ ಲ್ಯಾಂಡರ್ ಪರೀಕ್ಷೆ ಮಾದರಿಗಳನ್ನು ಜಾಯ್‌ಸ್ಟಿಕ್ ಮೂಲಕ ನಿಯಂತ್ರಿಸಲಾಯಿತು.

ಅನೇಕ ಆಧುನಿಕ ಏರ್‌ಲೈನರ್ಸ್ ವಿಮಾನದಲ್ಲಿ, ಉದಾಹರಣೆಗೆ ೧೯೮೦ರ ದಶಕದಿಂದ ಅಭಿವೃದ್ಧಿಪಡಿಸಿದ ಎಲ್ಲ ಏರ್‌ಬಸ್ ವಿಮಾನಗಳಿಗೆ ಜಾಯ್‌ಸ್ಟಿಕ್‌ ಸೈಡ್‌ಸ್ಟಿಕ್ ರೂಪದಲ್ಲಿ ಹಾರಾಟ ನಿಯಂತ್ರಣಕ್ಕೆ ಹೊಸ ಜೀವ ತುಂಬಿತು. ಇದು ಗೇಮ್ಸ್ ಜಾಯ್‌ಸ್ಟಿಕ್ ರೀತಿಯ ನಿಯಂತ್ರಕವಾಗಿದ್ದು, ಸಾಂಪ್ರದಾಯಿಕ ಯೋಕ್ ಬದಲಿಯಾಗಿ ಹಾರಾಟವನ್ನು ನಿಯಂತ್ರಿಸಲು ಬಳಸಲಾಗುತ್ತದೆ. ಸೈಡ್‌ಸ್ಟಿಕ್ ಭಾರವನ್ನು ಉಳಿಸುತ್ತದೆ ಮತ್ತು ಕಾಕ್‌ಪಿಟ್‌ನಲ್ಲಿ ಚಲನೆ ಮತ್ತು ಗೋಚರತೆಯನ್ನು ಸುಧಾರಿಸುತ್ತದೆ ಮತ್ತು ಸಾಂಪ್ರದಾಯಿಕ "ಕಂಟ್ರೋಲ್ ಯೋಕ್‌"ಗಿಂತ ಅಪಘಾತದಲ್ಲಿ ಸುರಕ್ಷಿತವಾಗಿರುತ್ತದೆ.

ವಿದ್ಯುನ್ಮಾನ ಆಟಗಳು

ಟೆಲಿವಿಷನ್ ವಿಡಿಯೊ ಆಟಗಳು ಮತ್ತು ೧೯೭೨ರಲ್ಲಿ ಬಿಡುಗಡೆಯಾದ ಮ್ಯಾಗ್ನವೋಕ್ಸ್ ವೊಡಿಸ್ಸಿ ಕನ್ಸೋಲ್ ಸಂಶೋಧಕ ರಾಲ್ಫ್ ಎಚ್.ಬೇರ್ ೧೯೬೭ರಲ್ಲಿ ಪ್ರಥಮ ವಿಡಿಯೊ ಗೇಮ್ ಜಾಯ್‌ಸ್ಟಿಕ್ಸ್ ಸೃಷ್ಟಿಸಿದರು. ಪರದೆಯ ಮೇಲೆ ಪ್ರದರ್ಶನವಾಗುವ ತಾಣದ ಅಡ್ಡವಾದ ಮತ್ತು ಲಂಬವಾದ ಸ್ಥಾನವನ್ನು ನಿಯಂತ್ರಿಸಲು ಅವರಿಗೆ ಸಾಧ್ಯವಾಯಿತು.[೩] ಅತ್ಯಂತ ಮುಂಚಿನ ಎಲೆಕ್ಟ್ರಾನಿಕ್ ಗೇಮ್ ಜಾಯ್‌ಸ್ಟಿಕ್‌ನ್ನು ಫೈರ್ ಬಟನ್‌ನೊಂದಿಗೆ ೧೯೬೯ರ ಆರ್ಕೇಡ್ ಗೇಮ್ ಮಿಸೈಲ್ ಭಾಗವಾಗಿ ಸೆಗಾ ಬಿಡುಗಡೆ ಮಾಡಿತು. ಶೂಟರ್ ಅನುಕರಣೆ ಆಟವಾದ ಇದನ್ನು ಮುಂಚಿನ ದ್ವಿನಿಯಂತ್ರಣ ಯೋಜನೆಯ ಭಾಗವಾಗಿ ಬಳಸಿತು. ಎರಡು ದಿಕ್ಕಿಗೆ ಸಂಬಂಧಿಸಿದ ಗುಂಡಿಗಳನ್ನು ಮೋಟರ್‌ನಿಂದ ಕೂಡಿದ ಟ್ಯಾಂಕ್ ಚಲಿಸಲು ಬಳಸಲಾಗುತ್ತದೆ ಮತ್ತು ಎರಡು ಮಾರ್ಗದ ಜಾಯ್‌ಸ್ಟಿಕ್‌ಗಳನ್ನು ಪರದೆಯಲ್ಲಿ ತೋರಿಸುವ ವಿಮಾನಗಳಿಗೆ ಕ್ಷಿಪಣಿಯಿಂದ ಗುರಿಯಿಡಲು ಮತ್ತು ನಡೆಸಲು ಬಳಸಲಾಗುತ್ತದೆ. ವಿಮಾನಕ್ಕೆ ಡಿಕ್ಕಿ ಹೊಡೆದಾಗ, ಪರದೆಯಲ್ಲಿ ಸ್ಫೋಟವು ಕಾಣಿಸಿಕೊಳ್ಳುವ ಜತೆಗೆ ಸ್ಫೋಟದ ಸದ್ದು ಕೇಳಿಸುತ್ತದೆ.[೪] ೧೯೭೦ರಲ್ಲಿ[೫] ಆಟವನ್ನು ಉತ್ತರಅಮೆರಿಕದಲ್ಲಿ ಮಿಡ್‌ವೇ ಗೇಮ್ಸ್ S.A.M.I. ರೀತಿಯಲ್ಲಿ ಬಿಡುಗಡೆ ಮಾಡಿತು.[೪]

ಟಾಯ್ಟೊ ೧೯೭೩ರಲ್ಲಿ ಆರ್ಕೇಡ್ ರೇಸಿಂಗ್ ವಿಡಿಯೊ ಆಟ ಆಸ್ಟ್ರೊ ರೇಸ್ ಭಾಗವಾಗಿ ನಾಲ್ಕು ಪಥಗಳ ಜಾಯ್‌ಸ್ಟಿಕ್ ಬಿಡುಗಡೆ ಮಾಡಿತು.[೬] ೧೯೭೫ರ ರನ್ ಎಂಡ್ ಗನ್ ಬಹುದಿಕ್ಕಿನ ಶೂಟರ್ ಆಟ ವೆಸ್ಟರ್ನ್ ಗನ್ ದ್ವಿದಂಡ ನಿಯಂತ್ರಣಗಳನ್ನು ಪರಿಚಯಿಸಿತು. ಚಲನೆಗಾಗಿ ಒಂದು ಎಂಟು ಪಥದ ಜಾಯ್‌ಸ್ಟಿಕ್ ಮತ್ತು ಶೂಟಿಂಗ್ ದಿಕ್ಕನ್ನು ಬದಲಿಸಲು ಇನ್ನೊಂದನ್ನು ಪರಿಚಯಿಸಿತು. ಉತ್ತರಅಮೆರಿಕದಲ್ಲಿ ಮಿಡ್ವೇ ಗನ್ ಫೈಟ್ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿತು.[೭] ೧೯೭೬ರಲ್ಲಿ ಟೈಟೊ ಇಂಟರ್‌ಸೆಪ್ಟರ್ ಬಿಡುಗಡೆ ಮಾಡಿತು. ಇದು ಮುಂಚಿನ ಫರ್ಸ್ಟ್ ಪರ್ಸನ್ ಕಂಬ್ಯಾಟ್ ಫ್ಲೈಟ್ ಸಿಮ್ಯುಲೇಟರ್(ಸಮರ ವಿಮಾನ ಅನುಕರಣೆ) ಜೆಟ್ ಫೈಟರ್ ಚಾಲನೆ ಮಾಡುವುದು ಒಳಗೊಂಡಿದೆ. ೮ ಪಥಗಳ ಜಾಯ್‌ಸ್ಟಿಕ್ ಬಳಸಿಕೊಂಡು ಉಪಕರಣಕ್ಕೆ ಅಳವಡಿಸಿರುವ ತೆಳುವಾದ ತಂತಿಯ ಮೂಲಕ ಗುರಿಯಿರಿಸಿ ಶತ್ರುವಿನ ವಿಮಾನಕ್ಕೆ ಶೂಟ್ ಮಾಡುವುದಾಗಿದೆ.[೮]

ಅಟಾರಿ ಸ್ಟಾಂಡರ್ಡ್ ಜಾಯ್‌ಸ್ಟಿಕ್ ಅಟಾರಿ ೨೬೦೦ಗಾಗಿ ಅಭಿವೃದ್ಧಿಪಡಿಸಲಾಯಿತು. ೧೯೭೭ರಲ್ಲಿ ಬಿಡುಗಡೆಯಾದ ಇದು ಒಂಟಿ ಫೈರ್ ಬಟನ್‌‍ನೊಂದಿಗೆ ಡಿಜಿಟಲ್ ಜಾಯ್‌ಸ್ಟಿಕ್ ಆಗಿದ್ದು, DE-೯ ಕನೆಕ್ಟರ್ಮೂಲಕ ಸಂಪರ್ಕ ಹೊಂದಿದೆ. ಇದರ ವಿದ್ಯುತ್ ನಿರ್ದಿಷ್ಟ ವಿವರಣೆಗಳು ಅನೇಕ ವರ್ಷಗಳವರೆಗೆ ವಾಸ್ತವ ವಾದ ಪ್ರಮಾಣಬದ್ಧ ಡಿಜಿಟಲ್ ಜಾಯ್‌ಸ್ಟಿಕ್ ನಿರ್ದಿಷ್ಟ ವಿವರಣೆಯಾಗಿತ್ತು. ಜಾಯ್‌ಸ್ಟಿಕ್‌ಗಳನ್ನು ಸಾಮಾನ್ಯವಾಗಿ ನಿಯಂತ್ರಕಗಳಾಗಿ ಪ್ರಥಮ ಮತ್ತು ಎರಡನೇ ತಲೆಮಾರಿನ ಗೇಮ್ ಕನ್ಸೋಲ್‌ಗಳಲ್ಲಿ ಬಳಸಲಾಯಿತು. ಆದರೆ ಅವು ೧೯೮೦ರ ದಶಕದ ಮಧ್ಯಾವಧಿಯಲ್ಲಿ ನಿಂಟೆಂಡೊ ಎಂಟರ್‌ಟೈನ್‌ಮೆಂಟ್ ಸಿಸ್ಟಮ್ ಮತ್ತು ಸೆಗಾ ಮಾಸ್ಟರ್ ಸಿಸ್ಟಮ್‌ನೊಂದಿಗೆ ಪರಿಚಿತ ಗೇಮ್‌ಪ್ಯಾಡ್(ಆಟ ನಿಯಂತ್ರಕ)ಗೆ ದಾರಿ ಕಲ್ಪಿಸಿತು. ಜಾಯ್‌ಸ್ಟಿಕ್ ವಿಶೇಷವಾಗಿ ಆರ್ಕೇಡ್ ಶೈಲಿಯವು ಯಾವುದೇ ಕನ್ಸೋಲ್‌ಗೆ ಮಾರುಕಟ್ಟೆ ಪೂರಕ ಭಾಗದ ಸೇರ್ಪಡೆ ಬಳಿಕ ಜನಪ್ರಿಯವಾಯಿತು.

೧೯೮೫ರಲ್ಲಿ ಸೆಗಾದ ಮೂರನೇ ವ್ಯಕ್ತಿಯ ಆರ್ಕೇಡ್ ರೈಲ್ ಶೂಟರ್ ಆಟ ಸ್ಪೇಸ್ ಹ್ಯಾರಿಯರ್ ಚಲನೆಗಾಗಿ ನಿಜವಾದ ಅನಲಾಗ್ ಫ್ಲೈಟ್ ಸ್ಟಿಕ್ ಪರಿಚಯಿಸಿತು. ಅದರ ಅನಲಾಗ್ ಜಾಯ್‌ಸ್ಟಿಕ್ ಯಾವುದೇ ದಿಕ್ಕಿನಲ್ಲಿ ಚಲನೆಯನ್ನು ದಾಖಲಿಸುತ್ತದೆ ಮತ್ತು ಒತ್ತಡದ ಪ್ರಮಾಣವನ್ನು ಅಳತೆ ಮಾಡುತ್ತದೆ. ಜಾಯ್‌ಸ್ಟಿಕ್‌ನ್ನು ನಿರ್ದಿಷ್ಟ ದಿಕ್ಕಿನಲ್ಲಿ ಎಷ್ಟು ದೂರದ ವರೆಗೆ ತಳ್ಳಲಾಗುತ್ತದೆ ಎನ್ನುವುದನ್ನು ಅವಲಂಬಿಸಿ ಭಿನ್ನ ವೇಗಗಳಲ್ಲಿ ಆಟಗಾರ ಪಾತ್ರಧಾರಿಯನ್ನು ಚಲಿಸುವಂತೆ ಮಾಡುತ್ತದೆ.[೯]

೧೯೯೦ರ ದಶಕದ ಕೊನೆಯವರೆಗೆ,ಅನಲಾಗ್ ಸ್ಟಿಕ್ ಸ್ (ಅಥವಾ ಥಂಬ್‌ಸ್ಟಿಕ್ಸ್ , ಮುಷ್ಟಿಗಳಿಂದ ನಿಯಂತ್ರಿಸಬಹುದಾದದ್ದು)ವಿಡಿಯೊ ಗೇಮ್ ಕನ್ಸೋಲ್‌ಗಳಲ್ಲಿ ಪ್ರಮಾಣಕವಾಗಿದ್ದು, ಸ್ಟಿಕ್(ದಂಡ)ತನ್ನ ತಟಸ್ಥ ಸ್ಥಾನದಿಂದ ಸ್ಥಳಪಲ್ಲಟವನ್ನು ಸೂಚಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಅರ್ಥವೇನೆಂದರೆ,ಸಾಫ್ಟ್‌ವೇರ್ ಸ್ಥಾನದ ಜಾಡು ಹಿಡಿಯುವ ಅಥವಾ ನಿಯಂತ್ರಕಗಳು ಚಲಿಸುವ ವೇಗವನ್ನು ಅಂದಾಜು ಮಾಡುವ ಅಗತ್ಯವಿರುವುದಿಲ್ಲ. ಈ ಉಪಕರಣಗಳು ಸಾಮಾನ್ಯವಾಗಿ ಸ್ಟಿಕ್(ದಂಡ)ಸ್ಥಾನವನ್ನು ನಿರ್ಧರಿಸಲು ಮ್ಯಾಗ್ನೆಟಿಕ್ ಫ್ಲಕ್ಸ್ ಡಿಟೆಕ್ಟರ್ ಬಳಸುತ್ತವೆ.

ಅನಲಾಗ್ ಜಾಯ್‌ಸ್ಟಿಕ್ ಭಿನ್ನ ರೂಪಾಂತರವು ಪೊಸಿಷನಲ್ ಗನ್ ಆಗಿದ್ದು, ಇದು ಹಗುರ ಗನ್‌ಗೆ ಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಹಗುರ ಸಂವೇದಕಗಳ ಬಳಕೆ ಬದಲಿಗೆ, ಪೊಸಿಷನಲ್ ಗನ್ ಅವಶ್ಯಕವಾಗಿ ನಿರ್ದಿಷ್ಟ ಸ್ಥಾನದಲ್ಲಿರಿಸಿದ ಅನಲಾಗ್ ಜಾಯ್‌ಸ್ಟಿಕ್ ಆಗಿದ್ದು, ಆಟಗಾರ ಪರದೆಯ ಮೇಲೆ ಎಲ್ಲಿ ಗುರಿಯಿರಿಸಿದ್ದಾನೆಂದು ನಿರ್ಧರಿಸಲು ಗನ್ ಸ್ಥಾನವನ್ನು ದಾಖಲಿಸುತ್ತದೆ.[೧೦][೧೧] ಇವನ್ನು ಸಾಮಾನ್ಯವಾಗಿ ಆರ್ಕೇಡ್ ಗನ್ ಗೇಮ್ಸ್‌ಗಾಗಿ ಬಳಸಲಾಗುತ್ತದೆ. ಮುಂಚಿನ ಉದಾಹರಣೆಗಳಲ್ಲಿ ೧೯೭೨ರ ಸೆಗಾದ ಸೀ ಡೆವಿಲ್ ,[೧೨] ೧೯೭೬ರ ಟೈಟೊ ಅಟ್ಯಾಕ್ ,[೧೩] ೧೯೭೭ರ ಕ್ರಾಸ್ ಫೈರ್ [೧೪] ಮತ್ತು ೧೯೭೮ರ ನಿಂಟೆಂಡೊನ ಬಾಟಲ್ ಶಾರ್ಕ್ ಒಳಗೊಂಡಿವೆ.[೧೫]

ಆರ್ಕೇಡ್ ಸ್ಟಿಕ್ಸ್

ಆರ್ಕೇಡ್ ಸ್ಟಿಕ್ ದೊಡ್ಡ ರೂಪದ ನಿಯಂತ್ರಕವಾಗಿದ್ದು, ಹೋಮ್ ಕನ್ಸೋಲ್ಸ್ ಅಥವಾ ಕಂಪ್ಯೂಟರ್‌ನೊಂದಿಗೆ ಬಳಸಲಾಗುತ್ತದೆ. ಅವು ಕೆಲವು ಆರ್ಕೇಡ್ ಕ್ಯಾಬಿನೆಟ್‌ಗಳ ಸ್ಟಿಕ್ ಮತ್ತು ಗುಂಡಿ ವಿನ್ಯಾಸವನ್ನು ಬಳಸುತ್ತವೆ. ಉದಾಹರಣೆಗೆ ನಿರ್ದಿಷ್ಟ ಬಹು ಗುಂಡಿ ವ್ಯವಸ್ಥೆಗಳು. ಉದಾಹರಣೆಗೆ, ಆರ್ಕೇಡ್ ಗೇಮ್ಸ್‌ನ ೬ ಗುಂಡಿ ವಿನ್ಯಾಸಗಳಾದ ಸ್ಟ್ರೀಟ್ ಫೈಟರ್ II ಅಥವಾ ಮೋರ್ಟಲ್ ಕೊಂಬಾಟ್ ಕನ್ಸೋಲ್ ಜಾಯ್‌ಪ್ಯಾಡ್‌ನಲ್ಲಿ ಸರಾಗವಾಗಿ ಅನುಕರಿಸಲು ಸಾಧ್ಯವಿಲ್ಲ. ಆದ್ದರಿಂದ ಮನೆಯ ಕನ್ಸೋಲ್‌ಗಳಿಗೆ ಮತ್ತು ಪಿಸಿಗಳಿಗೆ ಈ ಆಟಗಳಿಗಾಗಿ ಪರವಾನಗಿ ಪಡೆದ ಹೋಮ್ ಆರ್ಕೇಡ್ ಸ್ಟಿಕ್ಸ್‌ಗಳನ್ನು ತಯಾರಿಸಲಾಗುತ್ತದೆ.[೧೬]

ತಾಂತ್ರಿಕ ವಿವರಗಳು

1980ರ ದಶಕದ ಒಂದು ಗುಂಡಿಯ ಆಟದ ಜಾಯ್‌ಸ್ಟಿಕ್

ಬಹುತೇಕ ಜಾಯ್‌ಸ್ಟಿಕ್‌ಗಳು ಎರಡು ಆಯಾಮಗಳಿಂದ ಕೂಡಿದ್ದು, ಚಲನೆಯ ಎರಡು ಆಕ್ಸಿಸ್ ಹೊಂದಿರುತ್ತದೆ.(ಮೌಸ್ ರೀತಿಯಲ್ಲಿ) ಆದರೆ ಒಂದು ಮತ್ತು ಮೂರು ಆಯಾಮದ ಜಾಯ್‌ಸ್ಟಿಕ್‌ಗಳು ಅಸ್ತಿತ್ವದಲ್ಲಿವೆ. ಜಾಯ್‌ಸ್ಟಿಕ್ ಸಾಮಾನ್ಯವಾಗಿ ದಂಡವನ್ನು ಎಡಕ್ಕೆ ಅಥವಾ ಬಲಕ್ಕೆ ಚಲಿಸಿದಾಗ Xಅಕ್ಷದ ಮೇಲೆ ಚಲನೆಯನ್ನು ಸಂಕೇತಿಸುವಂತೆ ಮತ್ತು ಮುಂದಕ್ಕೆ(ಮೇಲೆ)ಅಥವಾ ಹಿಂದೆ(ಕೆಳಗೆ)ಚಲನೆಯು Yಅಕ್ಷದಲ್ಲಿನ ಚಲನೆಯನ್ನು ಸಂಕೇತಿಸುವಂತೆ ವಿನ್ಯಾಸಗೊಳಿಸಿರಲಾಗುತ್ತದೆ. ಮೂರು ಆಯಾಮದ ಚಲನೆಗೆ ವಿನ್ಯಾಸಗೊಳಿಸಿರುವ ಜಾಯ್‌ಸ್ಟಿಕ್‌ಗಳಲ್ಲಿ, ಸ್ಟಿಕ್‌ನ್ನು ಎಡಕ್ಕೆ(ಪ್ರದಕ್ಷಿಣ ವಿರುದ್ಧ ಚಲನೆ)ಅಥವಾ ಬಲಕ್ಕೆ(ಪ್ರದಕ್ಷಿಣ ಚಲನೆ)ಯು Zಅಕ್ಷದಲ್ಲಿ ಚಲನೆಯನ್ನು ಸಂಕೇತಿಸುತ್ತದೆ. ಈ ಮೂರು ಅಕ್ಷಗಳು- X Y ಮತ್ತು Z, ವಿಮಾನಕ್ಕೆ ಸಂಬಂಧಿಸಿದಂತೆ ಉರುಳು, ತಿರುಗುವ ಪ್ರಮಾಣ ಮತ್ತು ಅಡ್ಡಚಲನೆಯಾಗಿದೆ.

ಅನಲಾಗ್ ಜಾಯ್‌ಸ್ಟಿಕ್ ನಿರಂತರ ಸ್ಥಿತಿಗಳನ್ನು ಹೊಂದಿದೆ. ಅಂದರೆ ಯಾವುದೇ ದಿಕ್ಕಿನಲ್ಲಿ ಸಮತಟ್ಟು ಅಥವಾ ಜಾಗದಲ್ಲಿ ಚಲನೆಯ ಕೋನೀಯ ಅಳತೆಯಲ್ಲಿ ವಾಪಸಾಗುತ್ತದೆ.(ಸಾಮಾನ್ಯವಾಗಿ ಪೊಟೆನ್ಷಿಯೊಮೀಟರ್ ಬಳಸಿಕೊಂಡು) ಮತ್ತು ಡಿಜಿಟಲ್ ಜಾಯ್‌ಸ್ಟಿಕ್ ನಾಲ್ಕು ಭಿನ್ನ ದಿಕ್ಕುಗಳಿಗೆ ಆನ್/ಆಫ್ ಸಂಕೇತಗಳನ್ನು ಮತ್ತು ಯಾಂತ್ರಿಕವಾಗಿ ಸಾಧ್ಯವಾದ ಸಂಯೋಜನೆಗಳನ್ನು ನೀಡುತ್ತದೆ.(ಮೇಲೆ ಬಲಕ್ಕೆ ಅಥವಾ ಕೆಳಗೆ-ಎಡಕ್ಕೆ ಮುಂತಾದವು) (ಡಿಜಿಟಲ್ ಜಾಯ್‌ಸ್ಟಿಕ್‌ಗಳು ಸಾಮಾನ್ಯವಾಗಿ ೧೯೮೦ರ ದಶಕದ ವಿಡಿಯೊ ಗೇಮ್ ಕನ್ಸೋಲ್‌ಗಳಿಗೆ, ಆರ್ಕೇಡ್ ಯಂತ್ರಗಳಿಗೆ ಮತ್ತು ಗೃಹ ಕಂಪ್ಯೂಟರ್‌ಗಳಿಗೆ ಆಟದ ನಿಯಂತ್ರಕಗಳಾಗಿವೆ.

ಹೆಚ್ಚುವರಿಯಾಗಿ ಜಾಯ್‌ಸ್ಟಿಕ್‌ಗಳಿಗೆ ಸಾಮಾನ್ಯವಾಗಿ ಒಂದು ಅಥವಾ ಅದಕ್ಕಿಂತ ಹೆಚ್ಚು ಫೈರ್ ಬಟನ್‌ ಗಳಿದ್ದು, ಒಂದು ರೀತಿಯ ಕ್ರಿಯೆಯಲ್ಲಿ ತೊಡಗಿಸಬಹುದು. ಇವೆಲ್ಲ ಸರಳವಾದ ಆಫ್/ಆನ್ ಸ್ವಿಚ್‌ಗಳಾಗಿವೆ.

ಕೆಲವು ಜಾಯ್‌ಸ್ಟಿಕ್‌ಗಳಿಗೆ ಸ್ವಾರ್ಶ ಪ್ರತ್ಯಾದಾನ ಸಾಮರ್ಥ್ಯವಿದೆ. ಇವು ಹೀಗೆ ಸಕ್ರಿಯ ಉಪಕರಣಗಳಾಗಿದ್ದು, ಕೇವಲ ಮಾಹಿತಿ ಉಪಕರಣಗಳಲ್ಲ. ಕಂಪ್ಯೂಟರ್‌ಗೆ ಜಾಯ್‌ಸ್ಟಿಕ್‌ಗೆ ಸಂಕೇತವನ್ನು ಹಿಂದಿರುಗಿಸಬಹುದು. ಇದು ಹಿಂತಿರುಗುವ ಬಲದೊಂದಿಗೆ ಚಲನೆಯನ್ನು ಪ್ರತಿರೋಧಿಸುತ್ತದೆ ಅಥವಾ ಜಾಯ್‌ಸ್ಟಿಕ್ ಅದುರುವಂತೆ ಮಾಡುತ್ತದೆ.

PCs ಗಳಿಗೆ ಬಹುತೇಕ I/O ಇಂಟರ್‌ಫೇಸ್ ಕಾರ್ಡ್‌ಗಳು ಜಾಯ್‌ಸ್ಟಿಕ್(ಆಟ ನಿಯಂತ್ರಣ)ಪೋರ್ಟ್ ಹೊಂದಿರುತ್ತದೆ. ಆಧುನಿಕ ಜಾಯ್‌ಸ್ಟಿಕ್‌ಗಳು ಬಹುಮಟ್ಟಿಗೆ PCಸಂಪರ್ಕಕ್ಕಾಗಿ USB ಇಂಟರ್‌ಫೇಸ್ ಬಳಸುತ್ತದೆ.

ಕೈಗಾರಿಕೆ ಬಳಕೆಗಳು

ಇತ್ತೀಚಿನ ದಿನಗಳಲ್ಲಿ, ಜಾಯ್‌ಸ್ಟಿಕ್‌ಗಳನ್ನು ಅನೇಕ ಕೈಗಾರಿಕೆ ಮತ್ತು ಉತ್ಪಾದನೆ ಬಳಕೆಗಳಲ್ಲಿ ಉಪಯೋಗಿಸುವುದು ಸಾಮಾನ್ಯಸಂಗತಿಯಾಗಿದೆ. ಉದಾಹರಣೆಗೆ ಕ್ರೇನ್‌ಗಳು, ಅಸೆಂಬ್ಲಿ ಲೈನ್‌ಗಳು,ಅರಣ್ಯ ಉಪಕರಣ, ಗಣಿಗಾರಿಕೆ ಟ್ರಕ್‌ಗಳು ಮತ್ತು ಅಗೆಯುವ ಯಂತ್ರಗಳಲ್ಲಿ ಬಳಸಲಾಗುತ್ತದೆ. ವಾಸ್ತವವಾಗಿ, ಇಂತಹ ಜಾಯ್‌ಸ್ಟಿಕ್‌‌ಗಳ ಬಳಕೆ ತೀರಾ ಬೇಡಿಕೆಯಿಂದ ಕೂಡಿದ್ದು, ಸರಿಸುಮಾರು ಎಲ್ಲ ಆಧುನಿಕ ಜಲಚಾಲಿತ ನಿಯಂತ್ರಣ ವ್ಯವಸ್ಥೆಗಳಲ್ಲಿ ಸಾಂಪ್ರದಾಯಿಕ ಯಾಂತ್ರಿಕ ನಿಯಂತ್ರಣದ ಸನ್ನೆಕೋಲನ್ನು ಅಕ್ಷರಶಃ ಬದಲಿಸಿದೆ. ಹೆಚ್ಚುವರಿಯಾಗಿ, ಬಹುತೇಕ ಚಾಲರಹಿತ ವಿಮಾನಗಳು (UAVs)ಮತ್ತು ಜಲಾಂತರ್ಗಾಮಿ ದೂರನಿಯಂತ್ರಕ ಚಾಲಿತ ವಾಹನ (ROVs)ಗಳು ವಾಹನವನ್ನು,ಅಳವಡಿಸಿರುವ ಕ್ಯಾಮೆರಾವನ್ನು, ಸಂವೇದಕಗಳು ಮತ್ತು ಮನಿಪ್ಯುಲೇಟರ್‌ಗಳನ್ನು ನಿಯಂತ್ರಿಸಲು ಕನಿಷ್ಟ ಒಂದು ಜಾಯ್‌ಸ್ಟಿಕ್ ಅಗತ್ಯವಿರುತ್ತದೆ.

ಇಂತಹ ಬಳಕೆಗಳ ಅತ್ಯಂತ ಸಕ್ರಿಯತೆ, ಕಠಿಣ ಸ್ವಭಾವದಿಂದಾಗಿ, ಕೈಗಾರಿಕೆ ಜಾಯ್‌ಸ್ಟಿಕ್‌ ಸಾಮಾನ್ಯ ವಿಡಿಯೊ ಆಟದ ನಿಯಂತ್ರಕಗಳಿಗಿಂತ ಗಟ್ಟಿಮುಟ್ಟಾಗಿರುತ್ತದೆ ಮತ್ತು ಹೆಚ್ಚು ಅವಧಿಗೆ ಕಾರ್ಯನಿರ್ವಹಿಸಲು ಸಮರ್ಥವಾಗುತ್ತದೆ. ಇದು ೧೯೮೦ರ ದಶಕದಲ್ಲಿ ಸಂಪರ್ಕರಹಿತ ಗ್ರಹಿಕೆಯ ರೂಪದಲ್ಲಿ ಹಾಲ್ ಪರಿಣಾಮ ಗ್ರಹಿಕೆಯ ಅಭಿವೃದ್ಧಿ ಮತ್ತು ಬಳಕೆಗೆ ದಾರಿಯಾಯಿತು. ಅನೇಕ ಕಂಪೆನಿಗಳು ಹಾಲ್ ಪರಿಣಾಮ ತಂತ್ರಜ್ಞಾನವನ್ನು ಬಳಸಿಕೊಂಡು ಕೈಗಾರಿಕೆ ಬಳಕೆಗಳಿಗೆ ಜಾಯ್‌ಸ್ಟಿಕ್‌ಗಳನ್ನು ಉತ್ಪಾದಿಸುತ್ತವೆ. ಜಾಯ್‌ಸ್ಟಿಕ್ ವಿನ್ಯಾಸದಲ್ಲಿ ಬಳಸಿದ ಇನ್ನೊಂದು ತಂತ್ರಜ್ಞಾನವು ಶ್ರಮ ಮಾಪಕಗಳ ಬಳಕೆಯಾಗಿದೆ. ಇದು ಬಲ ಸಂಜ್ಞಾಪರಿವರ್ತಕಗಳ ನಿರ್ಮಾಣದಿಂದ ಉತ್ಪಾದನೆಯು ಬೌತಿಕ ವಿಚಲನಕ್ಕಿಂತ ಬಳಸುವ ಬಲಕ್ಕೆ ಪ್ರಮಾಣಾನುಗುಣವಾಗಿರುತ್ತದೆ. ಸಣ್ಣ ಬಲ ಸಂಜ್ಞಾಪರಿವರ್ತಕಗಳನ್ನು ಮೆನು ಆಯ್ಕೆ ನಿರ್ವಹಣೆಗಳಿಗಾಗಿ ಜಾಯ್‌ಸ್ಟಿಕ್‌ಗಳಿಗೆ ಹೆಚ್ಚುವರಿ ನಿಯಂತ್ರಣಗಳಾಗಿ ಬಳಸಲಾಗುತ್ತದೆ.

ದೊಡ್ಡ OEMಗಳಾದ ಕ್ಯಾಟರ್‌ಪಿಲ್ಲರ್, ಜಾನ್ ಡೀರೆ, AGCO, CNH, JLG, GENIE ಮತ್ತಿತರಕ್ಕೆ ಸೇವೆ ಸಲ್ಲಿಸುವ ಜಾಗತಿಕ ಉತ್ಪಾದಕರು ಡೆಲ್ಟಾ ಟೆಕ್ ಕಂಟ್ರೋಲ್ಸ್ Archived 2011-07-04 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು ಪೆನ್ನಿ ಎಂಡ್ ಗೈಲ್ಸ್ ಕಂಟ್ರೋಲ್ಸ್. ಪೆನ್ನಿ ಎಂಡ್ ಗೈಲ್ಸ್ ಕಂಟ್ರೋಲ್ಸ್ ಸಾಯೆರ್ ಡ್ಯಾನ್‌ಪೋಸ್‌ಗೆ ಜಾಯ್‌ಸ್ಟಿಕ್‌ಗಳನ್ನು ವಿನ್ಯಾಸಗೊಳಿಸುತ್ತದೆ ಮತ್ತು ತಯಾರಿಸುತ್ತದೆ. ಏಪಂ ಏಪಂ ಜಾಗತಿಕ ಮಾರುಕಟ್ಟೆಗಾಗಿ ಇಂತಹ ಇನ್ನೊಂದು ಉತ್ಪಾದಕ ಸಂಸ್ಥೆಯಾಗಿದೆ. ಇಂತಹ ಬ್ರಾಂಡ್‌ಗಳನ್ನು ಸೇರಿಸಿರುವುದು CH ಪ್ರಾಡಕ್ಟ್ಸ್ [೧] Archived 2019-08-04 ವೇಬ್ಯಾಕ್ ಮೆಷಿನ್ ನಲ್ಲಿ., ಆಲಿವರ್ ಕಂಟ್ರೋಲ್ ಸಿಸ್ಟಮ್ಸ್ [೨] ಮತ್ತು ಏಪಂ ಓನ್ [೩].

ಉತ್ತರ ಅಮೆರಿಕದಲ್ಲಿ ಕೈಗಾರಿಕೆಗೆ ಸೇವೆ ಸಲ್ಲಿಸುವ ಅನೇಕ ಸಣ್ಣ ಪ್ರಾದೇಶಿಕ ತಯಾರಕರಿದ್ದಾರೆ;OEM ಕಂಟ್ರೋಲ್ಸ್, ಓಟ್ಟೊ ಎಂಜಿನಿಯರಿಂಗ್, PQ ಕಂಟ್ರೋಲ್ಸ್, CH ಪ್ರಾಡಕ್ಟ್ಸ್, ಮತ್ತುBG ಸಿಸ್ಟಮ್ಸ್.

ವಿಶೇಷ ಪರಿಣತಿಯ ಮಾರುಕಟ್ಟೆ ಕ್ಷೇತ್ರಗಳಾದ ಕ್ರೇನ್ ಕಂಟ್ರೋಲ್ಸ್ ಮತ್ತು ವಿಮಾನತಯಾರಿಕೆ ಮುಂತಾದವನ್ನು ಪೂರೈಸುವ ಅನೇಕ ಉತ್ಪಾದಕರು ಯುರೋಪ್‌ನಲ್ಲಿದ್ದಾರೆ. ಐರೋಪ್ಯ ಜಾಗತಿಕ ಜಾಯ್‌ಸ್ಟಿಕ್ ಪೂರೈಕೆದಾರರಲ್ಲಿ ಸ್ವಿಸ್ ಕಂಪೆನಿ ಗೆಂಜೆ & ಥೋಮಾ AG Archived 2011-07-11 ವೇಬ್ಯಾಕ್ ಮೆಷಿನ್ ನಲ್ಲಿ. ಆಗಿದ್ದು, ಕೈಗಾರಿಕೆ ದರ್ಜೆಯ ಪ್ರಮಾಣಕ ಮತ್ತು ಹೇಳಿಮಾಡಿಸಿದ ಜಾಯ್‌ಸ್ಟಿಕ್‌ಗಳನ್ನು ಪೂರೈಸುತ್ತದೆ. ಯುನೈಟೆಡ್ ಕಿಂಗ್ಡಂನಲ್ಲಿ ಪ್ರಿಂಟೆಡ್ ಮೋಟರ್ ವರ್ಕ್ಸ್ ಇತ್ತೀಚೆಗೆ ಕೈಗಾರಿಕೆ ವ್ಯಾಪ್ತಿಗಳ ಫ್ಲೈಟ್ ಲಿಂಕ್ ಕಂಟ್ರೋಲ್ಸ್/ಪಿಎಂಲ್ ಫ್ಲೈಟ್‌ಲಿಂಕ್ ಉತ್ಪಾದನೆಯನ್ನು ವಶಕ್ಕೆ ತೆಗೆದುಕೊಂಡಿದೆ.

ಕೆಲವು ದೊಡ್ಡ ಜಾಯ್‌ಸ್ಟಿಕ್ ಉತ್ಪಾದಕರು ಜಾಯ್‌ಸ್ಟಿಕ್ ಹ್ಯಾಂಡಲ್‌ಗಳನ್ನು ಮತ್ತು ಹಿಡಿಗಳನ್ನು ಓಇಎಂ ಅಗತ್ಯಗಳಿಗೆ ನಿರ್ದಿಷ್ಟವಾಗಿ ತಯಾರಿಸಲು ಶಕ್ತವಾಗಿವೆ. ಆದರೆ ಸಣ್ಣ ಪ್ರಾದೇಶಿಕ ಉತ್ಪಾದನೆ ಸಾಮಾನ್ಯವಾಗಿ ಸಣ್ಣ OEMಗಳಿಗಿಂತ ಪ್ರಮಾಣಿತ ಉತ್ಪನ್ನಗಳನ್ನು ಹೆಚ್ಚಿನ ಬೆಲೆಗಳಲ್ಲಿ ಮಾರಾಟ ಮಾಡಲು ಗಮನಹರಿಸಿದವು.

ಹ್ಯಾಟ್ ಸ್ವಿಚ್

ಹ್ಯಾಟ್ ಸ್ವಿಚ್ - ಮೇಲ್ಬಾಗದಲ್ಲಿ ,ಹಸಿರು ಬಣ್ಣದಲ್ಲಿ

ಹ್ಯಾಟ್ ಸ್ವಿ‌ಚ್‌ ಗಳು ಕೆಲವು ಜಾಯ್‌ಸ್ಟಿಕ್‌ಗಳಿಗೆ ನಿಯಂತ್ರಕವಾಗಿವೆ. ಇವನ್ನು POV (ಪಾಯಿಂಟ್ ಆಫ್ ವ್ಯೂ) ಸ್ವಿಚ್ ಎಂದು ಕೂಡ ಕರೆಯಲಾಗುತ್ತದೆ. ಇದು ವಾಸ್ತವಪ್ರಾಯ ಪ್ರಪಂಚದಲ್ಲಿ ಸುತ್ತಲೂ ನೋಡಲು ಮೆನುಗಳನ್ನು ಬ್ರೌಸ್ ಮಾಡಲು ಸಹಾಯ ಮಾಡುತ್ತದೆ. ಉದಾಹರಣೆಗೆ, ಅನೇಕ ಹಾರಾಟ ಅನುಕರಣ ಸಾಧನಗಳು ಆಟಗಾರನ ದೃಷ್ಟಿಕೋನಗಳನ್ನು ಬದಲಿಸಲು ಅದನ್ನು ಬಳಸುತ್ತವೆ.[೧೭] ಆದರೆ ಉಳಿದ ಆಟಗಳು ಕೆಲವುಬಾರಿ ಅದನ್ನು D-ಪ್ಯಾಡ್‌ಗೆ ಬದಲಿಯಾಗಿ ಬಳಸುತ್ತವೆ. ಪ್ಲೇಸ್ಟೇಷನ್ ಡ್ಯೂಯಲ್‌ಶಾಕ್ ನಿಯಂತ್ರಕಗಳ ಮಾದರಿಯಲ್ಲಿ ಕಂಪ್ಯೂಟರ್ ಗೇಮ್‌ಪ್ಯಾಡ್‌ಗಳು ಸ್ವಿಚ್ ಸ್ಕಾನ್‌ಕೋಡ್‌ಗಳನ್ನು ಅದರ D-ಪ್ಯಾಡ್‌ಗೆ ಗೊತ್ತುಮಾಡುತ್ತದೆ.

ಹ್ಯಾಟ್ ಸ್ವಿಚ್ ಪದವು ಇದೇ ರೀತಿ ಕಾಣುವ ಶಿರಸ್ತ್ರಾಣದ ಹೆಸರಾದ ಕೂಲೀ ಹ್ಯಾಟ್ ಪದದ ಶುದ್ಧೀಕರಣವಾಗಿದೆ. ಇದನ್ನು ಅವಮಾನಕರ ಭಾಷೆಯೆಂದು ಪರಿಗಣಿಸಲಾಗಿದೆ.

ನಿಜವಾದ ವಿಮಾನದಲ್ಲಿ ಹ್ಯಾಟ್ ಸ್ವಿಚ್ ಏಲೆರಾನ್ ಅಥವಾ ರಡ್ಡರ್ ಟ್ರಿಮ್ ಮುಂತಾದ ವಸ್ತುಗಳನ್ನು ನಿಯಂತ್ರಿಸುತ್ತದೆ.

ಸಹಾಯಕ ತಂತ್ರಜ್ಞಾನ

ವಿಶೇಷ ತಜ್ಞತೆಯ ಜಾಯ್‌ಸ್ಟಿಕ್‌ಗಳನ್ನು ಸಹಾಯಕ ತಂತ್ರಜ್ಞಾನದ ಪಾಯಿಂಟಿಂಗ್ ಡಿವೈಸ್ ಎಂದು ವರ್ಗೀಕರಿಸಲಾಗಿದೆ. ಇದನ್ನು ತೀವ್ರ ದೈಹಿಕ ವೈಕಲ್ಯ ಹೊಂದಿರುವ ಜನರಿಗೆ ಕಂಪ್ಯೂಟರ್ ಮೌಸ್‌ಗೆ ಬದಲಿಯಾಗಿ ಬಳಕೆಯಾಗುತ್ತದೆ. ಆಟಗಳನ್ನು ನಿಯಂತ್ರಿಸುವ ಬದಲಿಗೆ ಈ ಜಾಯ್‌ಸ್ಟಿಕ್‌ಗಳು USBಪೋರ್ಟ್‌ನಲ್ಲಿ ಅಳವಡಿಕೆಯಾಗಿ ಮೌಸ್ ಪಾಯಿಂಟರ್ ನಿಯಂತ್ರಿಸುತ್ತದೆ. ಇವು ಸಾಮಾನ್ಯವಾಗಿ ಅಥೆಟಾಯ್ಡ್(ನಿಧಾನ ಚಲನೆ)ಸ್ಥಿತಿಗಳ ಜನರಿಗೆ ಉಪಯುಕ್ತವಾಗಿದೆ. ಉದಾ ಸೆರೆಬ್ರಲ್ ಪಾಲ್ಸಿ. ಸಾಮಾನ್ಯ ಮೌಸ್‌ಗಿಂತ ಅವನ್ನು ಹಿಡಿಯಲು ಅವರಿಗೆ ಸುಲಭವಾಗುತ್ತದೆ. ಸಣ್ಣ ಜಾಯ್‌ಸ್ಟಿಕ್‌ಗಳು ಸ್ನಾಯು ದುರ್ಬಲತೆ ಸ್ಥಿತಿಗಳ ಜನರಿಗೆ ಕೂಡ ಲಭ್ಯವಿವೆ. ಉದಾಹರಣೆಗೆ ಸ್ನಾಯುಕ್ಷಯ ಅಥವಾ ಮೋಟರ್ ನರಕೋಶದ ಕಾಯಿಲೆ. ಅವುಗಳನ್ನು ವಿದ್ಯುತ್ ಚಾಲಿತ ವೀಲ್‌ಚೇರ್‌ಗಳಲ್ಲಿ ನಿಯಂತ್ರಣಕ್ಕಾಗಿ ಬಳಸಲಾಗುತ್ತದೆ.ಇದನ್ನು ನಿಯಂತ್ರಕ ವಿಧಾನವಾಗಿ ಬಳಸಲು ಸರಳ ಮತ್ತು ಪರಿಣಾಮಕಾರಿಯಾಗಿದೆ.

ಇವನ್ನೂ ಗಮನಿಸಿ‌

  • ಗೇಮ್‌ಪ್ಯಾಡ್
  • ಗ್ರಾವಿಸ್ PC ಗೇಮ್‌ಪ್ಯಾಡ್
  • ಆಟ ನಿಯಂತ್ರಕ
  • ವಿಮಾನ ಹಾರಾಟ ನಿಯಂತ್ರಣ ವ್ಯವಸ್ಥೆ
  • ಕೆಂಪ್‌ಸ್ಟನ್ ಜಾಯ್‌ಸ್ಟಿಕ್
  • TAC-೨
  • ದಿ ಆರ್ಕೇಡ್
  • ಹಾರಾಟ ಅನುಕರಣ ಸಾಧನ

ಉಲ್ಲೇಖಗಳು‌‌

ಬಾಹ್ಯ ಕೊಂಡಿಗಳು‌‌

This article is based on material taken from the Free On-line Dictionary of Computing prior to 1 November 2008 and incorporated under the "relicensing" terms of the GFDL, version 1.3 or later.