ಜೆನ್ನಿಫರ್ ಲೋಪೆಜ

ಜೆ.ಲೋ ಎಂದು ಉಪನಾಮದಿಂದ ಕರೆಯಲ್ಪಡುತ್ತಿದ್ದ ಜೆನ್ನಿಫರ್ ಲಿನ್ ಲೋಪೆಜ , ಜನಿಸಿದ್ದು ಜುಲೈ 24,1969[೧] ರಲ್ಲಿ. ಈಕೆ ಅಮೇರಿಕಾದ ನಟಿ,ಹಾಡುಗಾರ್ತಿ,ಆಡಿಯೋ-ವೀಡಿಯೋ ಸಿಡಿ-ಡಿವಿಡಿಗಳ ನಿರ್ಮಾಪಕಿ,ಫ್ಯಾಷನ್ ಡಿಸೈನರ್ ಮತ್ತು ದೂರದರ್ಶನ ನಿರ್ಮಾಪಕಿ. ಫೋರ್ಬ್ಸ್ ಪ್ರಕಾರ ಈಕೆ ಹಾಲಿವುಡ್‌ನಲ್ಲಿರುವ ಲ್ಯಾಟಿನ್ ಅಮೇರಿಕಾ ಮೂಲದವರಲ್ಲೇ ಅತ್ಯಂತ ಶ್ರೀಮಂತಳು. ಪೀಪಲ್ ಎನ್ ಎಸ್ಪಾನಲ್‌ ನವರ "100 ಅತ್ಯಂತ ಪ್ರಭಾವಿತ ಹಿಸ್ಪಾನಿಕ್ಸ್"ನ ಪಟ್ಟಿಯಲ್ಲಿ ಈಕೆಯೂ ಒಬ್ಬಳು ಮತ್ತು ಈಕೆ ಅತ್ಯಂತ ಪ್ರಭಾವಶಾಲಿ ಹಿಸ್ಪಾನಿಕ್ ರಂಜಕಿ.

Jennifer Lopez
Lopez arriving at the 2004 MTV Video Music Awards in Miami, Florida on August 29, 2004
ಹಿನ್ನೆಲೆ ಮಾಹಿತಿ
ಜನ್ಮನಾಮJennifer Lynn Lopez
ಅಡ್ಡಹೆಸರುJ.Lo
ಮೂಲಸ್ಥಳThe Bronx, New York, U.S.
ಸಂಗೀತ ಶೈಲಿPop, R&B, dance-pop, latin pop
ವೃತ್ತಿActress, singer-songwriter, record producer, dancer, fashion designer, television producer
ಸಕ್ರಿಯ ವರ್ಷಗಳು1987–present
L‍abelsEpic, Work
ಅಧೀಕೃತ ಜಾಲತಾಣwww.JenniferLopez.com

ಇನ್ ಲಿವಿಂಗ್ ಕಲರ್ ಎನ್ನುವ ದೂರದರ್ಶನದ ಹಾಸ್ಯ ಕಾರ್ಯಕ್ರಮದಲ್ಲಿ ಲೋಪೆಜ ನರ್ತಕಿಯಾಗಿ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದಳು. ಮುಂದೆ ಲೋಪೆಜ ನಟನೆಯ ಸಾಹಸಕ್ಕಿಳಿದಳು. ಆಕೆ ನಟಿಸಿದ,ಸೆಲೀನಾ (1997),ಔಟ್ ಆಫ್ ಸೈಟ್ (1998) ಮತ್ತು ಏಂಜಲ್ ಐಯ್ಸ್ (2001)ಎನ್ನುವ ಮೂರೂ ಚಿತ್ರದಲ್ಲಿ ಉತ್ತಮ ನಟಿ ಎಂದು ALMA ಪ್ರಶಸ್ತಿ ಪಡೆದುಕೊಂಡಳು. ದಿ ಸೆಲ್ , ದಿ ವೆಡ್ಡಿಂಗ್ ಪ್ಲಾನರ್ , ಮೇಯ್ಡ್ ಇನ್ ಮ್ಯಾನ್‌ಹಟ್ಟನ್, , ಶಲ್ ವಿ ಡ್ಯಾನ್ಸ್ ಎನ್ನುವ ಚಿತ್ರಗಳಲ್ಲೂ ಕಾಣಿಸಿಕೊಂಡರು. (2004) ಮತ್ತು ಮಾನ್ಸ್ಟ್‌ರ್-ಇನ್-ಲಾ (2005). ತನ್ನ ಪ್ರಸಿದ್ಧಿಯನ್ನು ಲಾಭದಾಯಕವಾಗಿ ಉಪಯೋಗಿಸಿಕೊಳ್ಳಲು ಫ್ಯಾಶನ್ ಲೈನ್‌ಗೆ ಬಂದಳು ಮತ್ತು ವಿವಿಧ ಸುಗಂಧ ಧ್ರವ್ಯಗಳ ಮಾರಾಟಕ್ಕೆ ತನ್ನ ಕೀರ್ತಿಯ ಬೆಂಬಲ ಸೂಚಿಸಿದ್ದಳು.

1999ರಲ್ಲಿ, ಲೋಪೆಜ ತನ್ನ ಪ್ರಥಮ ಸ್ಟುಡಿಯೊ ಆಲ್ಬಮ್ ಆನ್ ದಿ 6 ಅನ್ನು ಬಿಡುಗಡೆಗೊಳಿಸಿದಳು. ತದನಂತರ ಲೋಪೆಜ ಬಿಲ್‌ಬೋರ್ಡ್ 200ರಲ್ಲಿ ಜೆ.ಲೋ ಎಂಬ ಎರಡು ಅದ್ವಿತೀಯ ಆಲ್ಬಮ್ ಅನ್ನು (2001) ಮತ್ತು J to tha L-O!: The Remixes (2002)ರಲ್ಲಿ ಹೊರತಂದಳು. ಮತ್ತು ಅವಳ ಮೂರನೆ ಸ್ಟುಡಿಯೋ ಆಲ್ಬಮ್ ದಿಸ್ ಇಸ್ ಮಿ... ದೆನ್(2002) ಆಲ್ಬಮ್ ಮತ್ತು ನಾಲ್ಕನೆಯ ಆಲ್ಬಮ್ ರೀಬರ್ತ್ (2005) ಬಿಲ್ ಬೋರ್ಡ್ 200 ಮೇಲೆ ಎರಡನೆಯದಾಗಿ ವಿಜೃಂಭಿಸಿತು. 2007ರಲ್ಲಿ ಲೋಪೆಜ ಎರಡು ಆಲ್ಬಮ್ ಅನ್ನು ಬಿಡುಗಡೆಗೊಳಿಸಿದಳು, ಒಂದು ಮೊದಲ ಪೂರ್ಣ ಸ್ಪಾನಿಷ್ ಭಾಷೆಯ ಆಲ್ಬಮ್ ಕೊಮೊ ಆಮಾ ಉನಾ ಮುಜೆರ್ ಮತ್ತು ನಾಲ್ಕನೆಯ ಇಂಗ್ಲಿಷ್ ಸ್ಟುಡಿಯೋ ಆಲ್ಬಮ್ ಬ್ರೇವ್ . 2003ರಲ್ಲಿ ಅಮೇರಿಕನ್ ಮ್ಯೂಸಿಕ್ ಆವಾರ್ಡ್ ಫಾರ್ ಫೇವರಿಟ್ ಪಾಪ್/ರಾಕ್ ಫಿಮೇಲ್ ಆರ್ಟಿಸ್ಟ್ ಮತ್ತು 2007ರಲ್ಲಿ ಅಮೇರಿಕನ್ ಮ್ಯೂಸಿಕ್ ಅವಾರ್ಡ್ ಫಾರ್ ಫೇವರಿಟ್ ಲ್ಯಾಟಿನ್ ಆರ್ಟಿಸ್ಟ್ ಪ್ರಶಸ್ತಿಯನ್ನು ಗೆದ್ದುಕೊಂಡಳು. ವಿಶ್ವದಾದ್ಯಂತ[೨] 48 ದಶ ಲಕ್ಷ ಮಿಲಿಯನ್ ಆಲ್ಬಮ್ ಗಳನ್ನು ಆಕೆ ಮಾರಿದ್ದಾಳೆ.

ಬಾಲ್ಯ

ಪ್ಯುಎರ್ಟೋ ರಿಕಾನ್‌ನ ಕಂಪ್ಯೂಟರ್ ತಜ್ಞ[೩] ಡೇವಿಡ್ ಲೋಪೆಜ ಮತ್ತು ಕಿಂಡರ್‌ಗಾರ್ಟನ್ ಶಿಕ್ಷಕಿ ಗ್ವಾಡಾಲೂಪ್ ರೋಡ್ರಿಗೆಜ್ ದಂಪತಿಗಳಿಗೆ ನ್ಯೂಯಾರ್ಕಿನ ಸೌತ್ ಬ್ರಾಂಕ್ಸ್‌‌ನಲ್ಲಿ ಹುಟ್ಟಿ ಬೆಳೆದವಳು ಲೋಪೆಜ. ಆಕೆಗೆ ಲಿಂಡಾ ಮತ್ತು ಲೆಸ್ಲೀ ಎಂಬ ಇಬ್ಬರು ಒಡಹುಟ್ಟಿದವರು ಲೋಪೆಜ ತನ್ನ ಎಲ್ಲಾ ಶೈಕ್ಷಣಿಕ ಶಾಲಾಭ್ಯಾಸವನ್ನು ಕೆಥೋಲಿಕ್ ಶಾಲೆಗಳಲ್ಲಿ ಕಲಿತಳು.ಬ್ರಾಂಕ್ಸ್‌ನ ಹುಡುಗಿಯರ ಪ್ರೆಸ್ಟನ್ ಹೈ ಸ್ಕೂಲಿನಲ್ಲಿ ತನ್ನ ಶಾಲಾ ದಿನಗಳನ್ನು ಪೂರೈಸಿದಳು. 19 ವಯಸ್ಸಿನಲ್ಲೇ ತನ್ನ ಹಾಡು ಮತ್ತು ನೃತ್ಯ ಕಲಿಕೆಯ ವೆಚ್ಚವನ್ನು ತಾನೇ ಭರಿಸಿಕೊಳ್ಳುತ್ತಿದ್ದಳು. ಬರುಚ್ ಕಾಲೇಜಿನಲ್ಲಿ ಒಂದು ಸೆಮಿಸ್ಟರ್ ಮುಗಿದೊಡನೆ ಲೋಪೆಜ ತನ್ನ ಸಮಯವನ್ನು ವಕೀಲರ ಕಛೇರಿಯಲ್ಲಿ ಕೆಲಸ ಮಾಡಲು, ನೃತ್ಯ ಕಲಿಯಲು ಮತ್ತು ಮ್ಯಾನ್‌ಹಟ್ಟನ್ ನೈಟ್ ಕ್ಲಬ್‌ಗಳಲ್ಲಿ[೪] ನೃತ್ಯ ಪ್ರದರ್ಶನ ನೀಡಲು ವಿಂಗಡಿಸಿಕೊಂಡಳು.1987 ರಲ್ಲಿ ಮೈ ಲಿಟಲ್ ಗರ್ಲ್ ಎನ್ನುವ ಚಿತ್ರದಲ್ಲಿ ಆಕೆಗೆ ಸಣ್ಣ ಪಾತ್ರ ದೊರಕಿತ್ತು. ನೃತ್ಯ ಪಾತ್ರಗಳಿಗೆ ತಿಂಗಳುಗಟ್ಟಳೆ ಶಾರೀರಿಕ ಪರೀಕ್ಷೆಯಾಗಿ ಲೋಪೆಜ ವಿವಿಧ ರಾಪ್ ಮ್ಯೂಸಿಕ್ ವೀಡಿಯೋಗಳಿಗೆ,1990ರ ಮಾಲಿಕೆಯ ಯೋ! ಗೆ ಆಯ್ಕೆಯಾದಳು.MTV ರಾಪ್ಸ್ ಮತ್ತು ತನ್ನ ಬ್ಲಾಕಿನ ಚಿಕ್ಕ ಮಕ್ಕಳಿಗೆ, ಅವರ "ಗೇಮ್ಸ್" ಅಮೇರಿಕನ್ ಮ್ಯುಸಿಕ್ ಅವಾರ್ಡ್ಸ್ 1991ರ ಪ್ರದರ್ಶನಕ್ಕೆ ಬೆಂಬಲವೀಯುವ ನೃತ್ಯಗಾರ್ತಿಯಾಗಿ ಕೂಡ ಕಾರ್ಯ ನಿರ್ವಹಿಸಿದಳು. ತನ್ನ ಮೊದಲ ಮೇಲುಸ್ತರದ ನೌಕರಿಯನ್ನು ದೂರದರ್ಶನದ ಹಾಸ್ಯ ಕಾರ್ಯಕ್ರಮ ಇನ್ ಲಿವಿಂಗ್ ಕಲರ್ ‌ನಲ್ಲಿ "ಫ್ಲೈ ಗರ್ಲ್" ಆಗಿ 1990ರಲ್ಲಿ ಗಳಿಸಿಕೊಂಡಳು. ತಕ್ಷಣವೇ, ಲೋಪೆಜ ಜಾನೆಟ್ ಜಾಕ್ಸನ್‌ಗೆ ಬೆಂಬಲವೀಯುವ ನೃತ್ಯಗಾರ್ತಿಯಾದಳು ಮತ್ತು 1993ರಲ್ಲಿ "ದಟ್ಸ್ ದ ವೇ ಲವ್ ಗೋಸ್" ಎನ್ನುವ ವೀಡಿಯೋದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಳು.

ಚಲನಚಿತ್ರ ಮತ್ತು ಕಿರುತೆರೆ

ಸೌತ್ ಸೆಂಟ್ರಲ್‌ ನ ಫಾಕ್ಸ್ ಮಾಲಿಕೆಯಲ್ಲಿ ನಟಿಯಾಗಿದ್ದು ಲೋಪೆಜ಼ಳ ಮೊದಲ ದೂರದರ್ಶನ ನೌಕರಿ. ಲೋಪೆಜ ಸೆಕೆಂಡ್ ಚಾನ್ಸಸ್ ಮತ್ತು ಹೋಟೆಲ್ ಮಾಲಿಬು ವಿನಲ್ಲಿ ಅಥಿತಿ ನಟಿಯಾಗಿ ಕೂಡ ನಟಿಸಿದಳು. ಆನಂತರ ನರ್ಸಸ್ ಆನ್ ದಿ ಲೈನ್:ದಿ ಕ್ರಾಷ್ ಆಫ್ ಫೈಟ್ 7 ಎನ್ನುವ ದೂರದರ್ಶನಕ್ಕಾಗಿಯೇ ತಯಾರಿಸಿದ ಚಿತ್ರದಲ್ಲಿ ನಟಿಸಿದಳು. ಗ್ರಿಗೋರಿ ನವಾರವರ 1995ರ ನಾಟಕ ಮೈ ಫ್ಯಾಮಿಲಿ ಯ ಮರಿಯಾಳ ಪಾತ್ರವನ್ನು ತೆರೆಯ ಮೇಲೆ ತಂದಾಗ 1920ರಲ್ಲಿಯ ತರುಣಿ ಮೈಯಾಳಳ ಪಾತ್ರವನ್ನು ಮಾಡಿದ್ದು ಲೋಪೆಜ಼ಳ ಮೊದಲ ಗಂಭೀರ ಪಾತ್ರವಾಗಿರುತ್ತದೆ.ಮೈ ಫ್ಯಾಮಿಲಿ ಯಲ್ಲಿ ಜಿಮ್ಮಿ ಸ್ಮಿತ್ಸ್ ಮತ್ತು ಎಡ್ವರ್ಡ್ ಜೇಮ್ಸ್ ಓಲ್ಮೋಸ್ ಎದುರು ನಟಿಸಿದ ಲೋಪೆಜ ಆಕ್ಷನ್ ಚಿತ್ರ ಮನಿ ಟ್ರೈನ್‌ ನಲ್ಲಿ ವೆಸ್ಲಿ ಸ್ನೈಪ್ಸ್‌ಮತ್ತು ವುಡ್ಡಿ ಹ್ಯಾರೆಲ್‌ಸನ್[೫] ಎದುರು ನಟಿಸಿದಳು. 1996ರಲ್ಲಿ ಫ್ರಾನ್ಸಿಸ್ ಫೋರ್ಡ್ ಕೊಪ್ಪೊಲಾರ, ರಾಬಿನ್ ವಿಲ್ಲಿಯಂಸ್[೬] ನಟಿಸಿದ್ದ 1996 ಕಾಮಿಡಿ ಜಾಕ್‌ ನಲ್ಲಿ ಆಶ್ಲಿ ಜುದ್ದ್ ಮತ್ತು ಲಾರೆನ್ ಹೊಲಿಯವರನ್ನೂ ಮೀರಿಸಿದ ನಟನೆಯನ್ನು ಲೋಪೆಜ ಪೋಷಕ ನಟಿಯಾಗಿ ಪ್ರದರ್ಶಿಸಿದಳು. ಬಹು ಜನರು ಒಪ್ಪಿಕೊಂಡು ಸ್ವೀಕರಿಸಿದ ಬಾಬ್ ರಾಫೆಲ್ಸನ್‌ರವರ ರೋಮಾಂಚಕ ಚಿತ್ರ ಬ್ಲಡ್ ಆಂಡ್ ವೈನ್‌ ನಲ್ಲಿ ಜಾಕ್ ನಿಕೊಲ್ಸನ್ ಎದುರು ಲೋಪೆಜ ನಟಿಸಿದಳು.

ತೆಜಾನೋದ ಪಾಪ್ ಗಾಯಕಿ ಸೆಲೀನಾಳ ಆತ್ಮ ಕಥನವನ್ನು 1997ರಲ್ಲಿ ತೆರೆ ಮೇಲೆ ತಂದಾಗ ಸೆಲೀನಾ ಪಾತ್ರವನ್ನು ಲೋಪೆಜ ಮಾಡಿದ್ದು ಲೊಪೆಜಳ ಬದುಕಿನಲ್ಲಿ ಮಹತ್ತರವಾದ ತಿರುವು.ಮೈ ಫ್ಯಾಮಿಲಿಯಾ ದಲ್ಲಿ ನವಾ ಎದುರು ನಟಿಸಿದ್ದರೂ ಸೆಲೀನಾ ಪಾತ್ರಕ್ಕೆ ಆಯ್ಕೆ ಮಾಡುವ ಮುನ್ನ ಲೋಪೆಜ‌ಳನ್ನು ತೀವ್ರ ಶಾರೀರಿಕ ಪರೀಕ್ಷೆಗೆ ಒಳಪಡಿಸಲಾಯಿತು. ಸೆಲೀನಾ ಪಾತ್ರದ ನಟನೆಯನ್ನು ವ್ಯಾಪಕವಾಗಿ ಪ್ರಶಂಸಿಲಾಯಿತು ಜೊತೆಗೆ ಬೆಸ್ಟ್ ಆಕ್ಟ್ರೆಸ್-ಮೋಷನ್ ಪಿಕ್ಚರ್ ಮ್ಯುಸಿಕಲ್ ಆರ್ ಕಾಮಿಡಿ ಎಂದು ಗೋಳ್ಡನ್ ಗ್ಲೋಬ್ ಅವಾರ್ಡ್‌ಗೆ ನಾಮ ನಿರ್ದೇಶನ ಮಾಡಲಾಯಿತು. ಆನಂತರ ಅದೇ ವರ್ಷ ಲೋಪೆಜ ಎರಡು ಭಾರಿ ಚಿತ್ರಗಳಲ್ಲಿ ನಟಿಸಿದಳು. ಅಮೆಜಾನ್ ನದಿ[೭]ಯನ್ನು ದಾಟುತ್ತ ಸಾಕ್ಷ್ಯಚಿತ್ರಕ್ಕಾಗಿ ಚಿತ್ರೀಕರಣ ಮಾಡುತ್ತಿದ್ದ ಟೆರ್ರಿ ಫ್ಲೋರ್ಸ್ ನಿರ್ದೇಶಕನ ಪಾತ್ರ ಮಾಡಿದ ಜಾನ್ ವಾಯ್ಟ್ ಮತ್ತು ಐಸ್ ಕ್ಯೂಬ್ ನಟಿಸಿರುವ ರೋಚಕ ಚಿತ್ರ ಅನಾಕೊಂಡ ದಲ್ಲಿ ಲೋಪೆಜ ನಟಿಸಿದಳು.

ಅದೊಂದು ಸಾಧಾರಣ ಚಿತ್ರವಾಗಿ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆದರೂ ಆ ಚಿತ್ರವನ್ನು ತೀವ್ರವಾಗಿ ಖಂಡಿಸಲಾಯಿತು.[೮] ಸ್ಟ್ರ‍ೇ ಡಾಗ್ಸ್ ಎನ್ನುವ ಪುಸ್ತಕವನ್ನು ಆಧಾರವಾಗಿಟ್ಟು ಕೊಂಡು ಮಾಡಿದ ಆಧುನಿಕ ಹಿಂಸೆ ಎನ್ನಬಹುದಾದ ಕಥಾವಸ್ತುವುಳ್ಳ ಚಿತ್ರ U ಟರ್ನ್‌ ನಲ್ಲಿ ಸೀನ್ ಪೆನ್ನ್ ಮತ್ತು ಬಿಲ್ಲಿ ಬಾಬ್ ಥಾರ್ನ್‌ಟನ್‌ಜೊತೆ ಲೋಪೆಜ ಪ್ರಮುಖ ಪಾತ್ರವನ್ನು ವಹಿಸಿದಳು.

ಎಲ್ಮೋರ್ ಲೀಯೋನಾರ್ಡ್ ಕಾದಂಬರಿ[೯] ಯನ್ನು ರೂಪಾಂತರಗೊಳಿಸಿದ ಸ್ಟೀವೆನ್ ಸೋಡರ್‌ಬರ್ಗ್ ಚಿತ್ರ ಔಟ್ ಆಫ್ ಸೈಟ್‌ ನಲ್ಲಿ ಜಾರ್ಜ್ ಕ್ಲೂನಿ ಎದುರು 1998ರಲ್ಲಿ ಲೋಪೆಜ ನಟಿಸಿದಳು.ಬಹುತೇಕರು ಪ್ರಶಂಸಿದ ಪಾತ್ರಗಳಲ್ಲಿ ಈ ಪಾತ್ರವೂ ಒಂದು. ಒಬ್ಬ ಸ್ಫುರದ್ರೂಪಿ ಅಪರಾಧಿಯನ್ನು ಪ್ರೀತಿಸುವ ಡೆಪ್ಯೂಟಿ ಫೀಳ್ಡ್ ಮಾರ್ಶಲ್ ಆಗಿ ಲೋಪೆಜ ನೀಡಿದ ತಳಸ್ಪರ್ಷಿ ನಟನೆಯನ್ನು ಅತ್ಯಂತ ಉನ್ನತ ಮಟ್ಟದಲ್ಲಿ ಶ್ಲಾಘಿಸಲಾಯಿತು. ಈ ಸಂದರ್ಭದಲ್ಲೇ ಲೋಪೆಜ ಅತೀ ಹೆಚ್ಚು ಸಂಭಾವನೆ ಪಡೆಯುವ ಹಾಲಿವುಡ್ಡಿನ ಲ್ಯಾಟಿನ್ ನಟಿ ಎಂದು ಹಾಲಿವುಡ್ದಿನ ಚರಿತ್ರೆ[೧೦] ಯಲ್ಲಿ ಗುರುತಿಸಿಕೊಂಡಳು. ಅದೇ ವರ್ಷ ಕಂಪ್ಯೂಟರ್ ಅನಿಮೇಟಡ್ ಫಿಲ್ಮ್ ಅಂಟ್ಸ್‌ ನಲ್ಲಿ ಅಜ್ಟೀಕಾಗೆ ಧ್ವನಿಯನ್ನು ಲೋಪೆಜ ನೀಡಿದಳು. ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ ದಿ ಸೆಲ್‌ ನಲ್ಲಿ ವಿನ್ಸ್ ವಾಗ್ನ್ ಎದುರು ಲೋಪೆಜ ನಟಿಸಿದಳು. ಕ್ಯಾಥರೀನ್ ಡೀನ್ ಎನ್ನುವ ಮಕ್ಕಳ ಮನೋವಿಜ್ಞಾನಿಯ ಪಾತ್ರವನ್ನು ಕಣ್ಣಿಗೆ ಕಟ್ಟುವಂತೆ ನಟಿಸಿದಳು ಲೋಪೆಜ.ಆ ಮನೋವಿಜ್ಞಾನಿ ತನ್ನ ರೋಗಿಗಳನ್ನು ಕೋಮಾ ಅವಸ್ಥೆಯಿಂದ ಏಳಿಸಲು ಅವರ ಮನಸ್ಸುಗಳಿಗೆ ಪುಸಲಾಯಿಸಿ ಮಿಥ್ಯಾವಾಸ್ತವವನ್ನು ಬಳಸುತ್ತಿದ್ದಳು.

ಈ ಚಿತ್ರ ಆಗಸ್ಟ್ 18, 2000ದಂದು ಬಿಡುಗಡೆಗೊಂಡು ಬಾಕ್ಸ್ ಆಫೀಸಿನಲ್ಲಿ ನಂಬರ್ ಒಂದು[೯] ಎಂದು ದೊಡ್ಡ ಯಶಸ್ಸನ್ನು ಕಂಡಿತು . ಮುಂದಿನ ವರ್ಷದಲ್ಲಿ ಲೋಪೆಜ, ಸಂಗೀತದಲ್ಲಿ ಮುಂದುವರೆಯಲು ಚಿತ್ರಗಳಲ್ಲಿ ನಟಿಸುವ ಕಾರ್ಯದಿಂದ ದೂರವುಳಿದಳು.

2001ರಲ್ಲಿ ಲೋಪೆಜ ಮ್ಯಾಥಿವ್ ಮ್ಯಾಕ್‌ಕನೌಗೇ ಎದುರು ಪ್ರಣಯಭರಿತ ಹಾಸ್ಯ ಚಿತ್ರ, ದಿ ವೆಡ್ಡಿಂಗ್ ಪ್ಲಾನರ್‌ ನಲ್ಲಿ ನಟಿಸಿದಳು.ಲೋಪೆಜ ನಟಿಸಿದ ಜೆ.ಲೋ ಚಿತ್ರ ಮತ್ತು ಲೋಪೆಜ ಹಾಡಿನ ಆಲ್ಬಂ ಒಂದೇ ವಾರದಲ್ಲಿ ಬಿಡುಗಡೆಗೊಂಡು ಅದ್ವಿತೀಯ ಯಶಸ್ಸು ಕಂಡಿತು. ಒಂದೇ ವಾರ[೧೧] ದಲ್ಲಿ ಚಿತ್ರದ ನಾಯಕಿಯಾಗಿ ಮತ್ತು ಆಲ್ಬಮ್ಮಿನ ಹಾಡುಗಾರ್ತಿಯಾಗಿ ಎರಡರಲ್ಲೂ ಯಶಸ್ಸು ಕಂಡ ಏಕೈಕ ವ್ಯಕ್ತಿಯಾಗಿ ಲೋಪೆಜ ಚರಿತ್ರೆಯಲ್ಲಿ ಸೇರಿದ್ದಾಳೆ. ಅತ್ಯಂತ ಸಹಜ ಪ್ರಣಯಿಯಾಗಿ ಏಂಜಲ್ ಐಸ್‌ (2001)ನಲ್ಲಿ ಮತ್ತು ಮನೋವೈಜ್ಞಾನಿಕ ಸೇಡುಗಾರ್ತಿಯಾಗಿ ಎನಫ್ (2002)ನಲ್ಲಿ ಎರಡರಲ್ಲೂ ವಿಮರ್ಶಕ ಮತ್ತು ಪ್ರೇಕ್ಷಕ ಇಬ್ಬರನ್ನೂ[೧೨] ತೃಪ್ತಿ ಪಡಿಸುವುದರಲ್ಲಿ ಸೋಲುತ್ತಾಳೆ. ಪ್ರಣಯಭರಿತ ಹಾಸ್ಯ ಚಿತ್ರ ಮೇಯ್ಡ್ ಇನ್ ಮ್ಯಾನ್‌ಹಟ್ಟನ್‌ (2002)ರಲ್ಲಿ ರಾಲ್ಫ್ ಫೀಯ್ನೆಸ್ ಜೊತೆ ನಟಿಸಿದಳು.ಮಾರಿಸಾ ವೆಂಚ್ಯೂರಾ ಒಂದು ಒಂಟಿ ತಾಯಿಯ ಪಾತ್ರ.ಇಲ್ಲಿ ಮಾರಿಸಾ ಬ್ರಾಂಕ್ಸ್‌ನಲ್ಲಿ ವಾಸಿಸುತ್ತಾಳೆ ಮತ್ತು ಜೀವನೋಪಾಯಕ್ಕಾಗಿ ಶ್ರೀಮಂತ ಮ್ಯಾನ್‌ಹಟ್ಟನ್ ಹೋಟೆಲಿನಲ್ಲಿ ರೂಮುಗಳನ್ನು ಸ್ವಚ್ಚಗೊಳ್ಳಿಸುವ ಕಾಯಕ ಮಾಡುತ್ತಿರುತ್ತಾಳೆ, ಯುವ ರಾಜಕಾರಣಿ[೧೩] ಯೊಬ್ಬ ಅವಳನ್ನು ಸಮಾಜವಾದಿ ಎಂದು ತಪ್ಪು ತಿಳಿದು ಬಿಡುತ್ತಾನೆ.ಈ ಪಾತ್ರವನ್ನು ಲೋಪೆಜ ಮಾಡಿದ್ದಳು. ಮೇಯ್ಡ್ ಇನ್ ಮ್ಯಾನ್‌ಹಟ್ಟನ್ ಬಾಕ್ಸ್ ಆಫೀಸ್ ಹಿಟ್ ಚಿತ್ರವಾಯಿತು, ಈ ಕಥಾ ಎಳೆಯನ್ನು ನ್ಯೂ ಯಾರ್ಕ್ ಟೈಂಸ್ ಲೋಪೆಜ಼ಳ 2002 ಹಾಡು, "ಜೆನ್ನಿ ಫ್ರಮ್ ದಿ ಬ್ಲಾಕ್ " ಜೊತೆ ತಾಳೆ ಮಾಡಿ "ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದ್ದರೂ ಅಗಾಧವಾದ ಸಂಪತ್ತಿದ್ದರೂ ಜೆನ್ನಿಫರ್ ಲೋಪೆಜ ತಾನು ಹುಟ್ಟಿ ಬೆಳೆದ ಬ್ಲಾಕನ್ನು ಮರೆತಿಲ್ಲ, ಬೇರಿನ[೧೪] ಸಂಪರ್ಕವನ್ನು ತೊರೆದಿಲ್ಲ" ಎಂದು ಪ್ರಶಂಸಿಸುತ್ತಾರೆ.

ವಿಮರ್ಶಕರಿಂದ ಪ್ರಶಂಸಿಸಲ್ಪಟ್ಟ ಇನ್ನು ಬೇರೆ ಚಿತ್ರಗಳೆಂದರೆ ಆನ್ ಅನ್ ಫಿನಿಶ್ಡ ಲೈಫ್ ಮತ್ತು ಶಲ್ ವಿ ಡಾನ್ಸ್? . ಲೋಪೆಜ ನಿರ್ಮಿಸಿದ ಎರಡು ಸ್ವತಂತ್ರ ಚಿತ್ರಗಳಿಗೆ, El ಕ್ಯಾಂಟಾಂಟೆ ಟೊರೆಂಟೋ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮತ್ತು ಬಾರ್ಡರ್‌ಟೌನ್ , ಬ್ರುಸೆಲ್ಸ್ ಚಲನಚಿತ್ರೋತ್ಸವದಲ್ಲಿ ಒಳ್ಳೆ ಸ್ವಾಗತ ದೊರೆಯಿತು. ಅವಳ ಸಾಧಾರಣ ಯಶಸ್ಸಿನ ಚಿತ್ರಗಳಲ್ಲಿ ಮಾನ್ಸಟರ್ -ಇನ್-ಲಾ (2005) ಸೇರುತ್ತದೆ.ಗಿಗ್ಲಿ , ವಿರ್ಮಶಕ ವಲಯದಲ್ಲೂ ಮತ್ತು ವಾಣಿಜ್ಯ ವಲಯದಲ್ಲೂ ನಿರಾಶೆ ತಂದು ಕೊಟ್ಟಿತು ಆಗಸ್ಟ್ 2007ರಲ್ಲಿ ಲೋಪೆಜ ತನ್ನ ನಟ ಮತ್ತು ಹಾಡುಗಾರ ಪತಿ ಮಾರ್ಕ್ ಅಂಥೋಣಿಯ ಜೊತೆ ಸೇರಿ El ಕ್ಯಾಂಟಾಂಟೆ ನಿರ್ಮಿಸಿದಳು. ಈ ಚಿತ್ರ ಇಂಗ್ಲೀಷಿನಲ್ಲಿದೆ,ಆದರೆ ಹಾಡುಗಳ ಉಪಶೀರ್ಷಿಕೆಗಳನ್ನು ಸೃಜನಶೀಲವಾಗಿ ಸ್ಪ್ಯಾನಿಷ್ ಭಾಷೆಯ ಲಿಪಿಯಲ್ಲಿ ಇಡಲಾಗಿದೆ. ಇದರ ಜೊತೆಗೆ ಲೋಪೆಜ ಪ್ರಣಯಭರಿತ ಹಾಸ್ಯ, ದಿ ಬ್ಯಾಕ್ ಅಪ್ ಪ್ಲಾನ್‌ [೧೫] ನಲ್ಲಿ ಕಾಣಿಸಿಕೊಳ್ಳುತ್ತಾಳೆ.

ಹಾಲಿವುಡಿನಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಲೋಪೆಜ ಮತ್ತು ಅತೀ ಹೆಚ್ಚು ಸಂಭಾವನೆ ಪಡೆಯುವ ಹಾಲಿವುಡ್ಡಿನ ಲ್ಯಾಟಿನ್ ನಟಿ ಎಂದು ಹಾಲಿವುಡ್ದಿನ ಚರಿತ್ರೆಯೂ ಹೇಳುತ್ತದೆ.ಆದಾಗ್ಯೂ ಆಕೆ ಎಂದೂ ತನ್ನ ಚಿತ್ರದ ಮೊತ್ತವನ್ನು U.S.ನಲ್ಲಿ 100 ದಶ ಲಕ್ಷ ಡಾಲರ್ ಮೀರಿಸಿಲ್ಲ. ಆದರೂ 2002, 2003, ಹಾಗು 2004[೧೬]' ' ರಲ್ಲಿ ಹೆಚ್ಚು ಸಂಭಾವನೆಯ ಪಡೆವ ಹತ್ತು ಜನರ ಹಾಲಿವುಡ್ ರಿಪೋರ್ಟರ್‌ನ ಪಟ್ಟಿಯಲ್ಲಿ ಈಕೆ ಇದ್ದಳು.

ಲೋಪೆಜ, ಮಾನ್ಸ್ಟರ್-ಇನ್-ಲಾ' ದ ಪಾತ್ರ ಕ್ಕಾಗಿ $15 ದಶ ಲಕ್ಷ ಸಂಭಾವನೆಯನ್ನು ಪಡೆದಳು. ತನ್ನ ದೇಶದೊಳಗೆ ಹೆಚ್ಚು ಮೊತ್ತದ ಚಿತ್ರ ವೆಂದರೆ ಅದು ಮೇಯ್ಡ್ ಇನ್ ಮ್ಯಾನ್‌ಹಟ್ಟನ್ ಅದು $94,011,225[೧೭] ನದು ಮತ್ತು ಅಂತರ ರಾಷ್ಟ್ರ‍ೀಯ ಮಟ್ಟದಲ್ಲಿ ಯಶಸ್ಸು ಕಂಡ ಚಿತ್ರ ಶಲ್ ವಿ ಡಾನ್ಸ್‌ನ ಮೊತ್ತ $112,238,000 . ಸ್ವ-ದೇಶಿಯ, ಶಲ್ ವಿ ಡಾನ್ಸ್? ಸಂಪಾದಿತ $57,890,460 ಮತ್ತು ಒಟ್ಟು $170,128,460 ವಿಶ್ವದಾದ್ಯಂತ[೧೮] 2007ರಲ್ಲಿ ಲೋಪೆಜ ,ಫೋರ್ಬ್ಸ್ ಪತ್ರಿಕೆಯ "ಇಪ್ಪತ್ತು ಶ್ರೀಮಂತ ಮಹಿಳಾ ಮನೋರಂಜಕರ" ಪಟ್ಟಿಯಲ್ಲಿ ಒಂಬತ್ತನೆಯವಳಾದಳು . ಆಕೆಯ ಸಂಪತ್ತು 2007ರಲ್ಲಿ $110ದಶ ಲಕ್ಷ ಎಂದು ಅಂದಾಜಿಸಲಾಗಿದೆ.[೧೯][೨೦]

ಸಂಗೀತದ ವೃತ್ತಿ ಜೀವನ

1999–2001:ಆನ್ ದಿ 6 ಮತ್ತು ಜೆ. ಲೋ

ಲೋಪೆಜ಼ಳ ಪ್ರಥಮ ಆಲ್ಬಮ್ ಆನ್ ದಿ 6 ನಲ್ಲಿ ತಾನು ಚಿಕ್ಕಂದಿನ ದಿನಗಳಲ್ಲಿ ನಡೆದಾಡುತ್ತಿದ್ದ ಕ್ಯಾಸಲ್ ಹಿಲ್‌ನ 6 ಸಬ್‌ವೇ ಲೈನ್‌ನ ಉಲ್ಲೇಖವಾಗಿದೆ. ಇದು ಜೂನ್ 1, 1999ರಲ್ಲಿ ಬಿಡುಗಡೆಯಾಗಿ ಬಿಲ್‌ಬೋರ್ಡ್ 200ರರ ಉನ್ನತವಾದ ಹತ್ತರಲ್ಲಿ ಒಂದೆಂದು ಅನ್ನಿಸಿಕೊಂಡಿತು. ಆಲ್ಬಮ್‌ನಲ್ಲಿ, ಬಿಲ್‌ಬೋರ್ಡ್ ಹಾಟ್ 100ರ ತನ್ನ ಪ್ರಧಾನ ಕಂಠದ "ಇಫ್ ಯು ಹ್ಯಾಡ್ ಮೈ ಲವ್", ಮತ್ತು ಅತ್ಯುನ್ನತ ಹತ್ತರಲ್ಲಿ "ವೇಯ್ಟಿಂಗ್ ಫಾರ್ ಟುನೈಟ್", ಮುಖ್ಯ ಭಾಗವಾಗಿ ಹೊಂದಿರುತ್ತದೆ. ಆಲ್ಬಮ್‌ನಲ್ಲಿ ಸ್ಪಾನಿಷ್ ಭಾಷೆಯ ಲ್ಯಾಟಿನ್ ಸುಗಂಧವುಳ್ಳ ಯುಗಳಗೀತೆ "ನೋ ಮಿ ಅಮಿಸ್", ಮಾರ್ಕ್ ಅಂತೋಣಿಯ ಜೊತೆ (ಮುಂದಕ್ಕೆ ಈತ ಲೋಪೆಜ‌ನ ಪತಿಯಾಗುತ್ತಾನೆ) ಮತ್ತೊಂದು ಮುಖ್ಯಭಾಗವಾಗಿ ಇರುತ್ತದೆ. "ನೋ ಮಿ ಅಮಿಸ್"ಗೆ ವಾಣಿಜ್ಯ ಬಿಡುಗಡೆ ಸಿಗದಿದ್ದರೂ ಅದು U.S.ಹಾಟ್ ಲ್ಯಾಟಿನ್ ಟ್ರಾಕ್ಸ್‌ನಲ್ಲಿ ಮೊದಲನೆಯದಾಯಿತು.ಆನ್ ದಿ 6 ನಲ್ಲಿ "ಫೀಲಿನ್’ಸೋ ಗುಡ್" ಹಾಡಿನಲ್ಲಿ ಅತಿಥಿ ಕಲಾವಿದರಾಗಿ ಬಿಗ್ ಪನ್ ಮತ್ತು ಫ್ಯಾಟ್ ಜೋಮುಖ್ಯವಾಗಿ ಇದ್ದರು, ಆದರೆ ಬಿಲ್ ಬೋರ್ಡ್ ಹಾಟ್ 100ರಲ್ಲಿ ಇದರ ಯಶಸ್ಸು ಸಾಧಾರಣವಾಗಿತ್ತು.2001ರ ಗ್ರಾಮಿ ಪ್ರಶಸ್ತಿಗಳಲ್ಲಿ,[೨೧] "ಬೆಸ್ಟ್ ಡ್ಯಾನ್ಸ್ ರೆಕಾರ್ಡಿಂಗ್‌" ವರ್ಗದಲ್ಲಿ ಗ್ರಾಮಿ ಪ್ರಶಸ್ತಿಗೆ "ಲೆಟ್ಸ್ ಗೆಟ್ ಲೌಡ್" ಎನ್ನುವ ಕೊನೆಯ ಒಂಟಿ ಹಾಡು ನಾಮನಿರ್ದೇಶನದ ಗೌರವವನ್ನು ಲೋಪೆಜ‌ಗೆ ತಂದು ಕೊಟ್ಟಿತು.ಅದೇ ವರ್ಗದಲ್ಲಿ ಹಿಂದಿನ ವರ್ಷ[೨೨] "ವೇಯ್ಟಿಂಗ್ ಫಾರ್ ಟುನೈಟ್" ನಾಮನಿರ್ದೇಶನಗೊಂಡಿತು. 2000 ಲ್ಯಾಟಿನ್ ಗ್ರಾಮಿ ಅವಾರ್ಡ್ಸ್‌ಗೆ "ನೋ ಮಿ ಅಮಿಸ್" ಎರಡು ರೀತಿಯ ಪ್ರಶಸ್ತಿ,"ಬೆಸ್ಟ್ ಪಾಪ್ ಡ್ಯುಯೊ/ಗ್ರೂಪ್ ವಿದ್ ವೋಕಲ್ ಪರ್ಫಾಮೆನ್ಸ್" ಮತ್ತು "ಬೆಸ್ಟ್ ಮ್ಯುಸಿಕ್ ವೀಡಿಯೋ"ಗೆ ನಾಮನಿರ್ದೇಶನ ಪಡೆಯಿತು.

ಜನವರಿ 23, 2001 ರಂದು ಲೋಪೆಜ಼ಳ ಎರಡನೆಯ ಆಲ್ಬಮ್, ಜೆ.ಲೋ ಬಿಡುಗಡೆಗೊಂಡಿತು ಮತ್ತು ಪ್ರಥಮ ಬಾರಿಗೆ ಬಿಲ್ ಬೋರ್ಡ್ 200ಗೆ ಪ್ರವೇಶಪಡೆಯಿತು.ಈ ಆಲ್ಬಮ್ ಆನ್ ದಿ 6 ಗಿಂತ ಹೆಚ್ಚು ನಗರ ಕೇಂದ್ರಿಕೃತವಾಗಿರುತ್ತದೆ. ಲೋಪೆಜ಼ಳ ಚಿತ್ರ ದಿ ವೆಡ್ದಿಂಗ್ ಪ್ಲಾನರ್ ಪ್ರಥಮ ಸ್ಥಾನ ಗಳಿಸಿಕೊಂಡ ಮೇಲೆ, ಒಂದು ಚಿತ್ರ ಮತ್ತು ಆಲ್ಬಮ್ ಒಂದೇ ವಾರದಲ್ಲಿ[೨೩] ಬಿಡುಗಡೆ ಹೊಂದಿ ಎರಡೂ ಯಶಸ್ವಿಯಾದದ್ದು ಇರಲೇ ಇಲ್ಲ, ಲೋಪೆಜ ಆ ಯಶಸ್ಸು ಸಂಪಾದಿಸಿದ ಮೊದಲ ನಟಿ-ಗಾಯಕಿಯಾದಳು. ಮುಖ್ಯ ದನಿಯಾಗಿ ಹಾಡಿದ ಹಾಡಿನ ಪ್ರಮುಖ ಸಾಲು,"ಲವ್ ಡೋಂಟ್ ಕಾಸ್ಟ್ ಎ ಥಿಂಗ್",ಯುನೈಟೆಡ್ ಕಿಂಗ್ಡಂನಲ್ಲಿ ಲೋಪೆಜ಼ಳ ಮೊದಲ ಏಕ ವ್ಯಕ್ತಿ ಹಾಡಿದ ಹಾಡಿನ ಪ್ರಮುಖ ಸಾಲಾಗಿದ್ದು ಅದು ಎಷ್ಟು ಪ್ರಖ್ಯಾತವಾಯಿತೆಂದರೆ U.S. ಬಿಲ್ ಬೋರ್ಡ್‌ ನ ಹಾಟ್ 100ನ ಶ್ರ‍ೇಷ್ಟ ಐದರಲ್ಲಿ ಒಂದಾಗಿತ್ತು. ತದ ನಂತರ "ಪ್ಲೇಯ್"ಮತ್ತೊಂದು ಬಿಲ್ ಬೋರ್ಡ್‌ ಹಾಟ್ 100 ನ ಶ್ರೇಷ್ಟ ಇಪ್ಪತ್ತರಲ್ಲಿ ಒಂದಾಯಿತು ಮತ್ತು UK ನಲ್ಲಿ ಮೂರನೆಯದಾಯಿತು. ಆಮೇಲೆ ಆಕೆ ಪ್ರಧಾನವಾಗಿ ದನಿಯಿತ್ತ ಮತ್ತೆರಡು ಹಾಡು "ಐಯಾಮ್ ರೀಯಲ್"ಮತ್ತು "ಐಯಿಂಟ್ ಇಟ್ ಫನ್ನಿ"ಅತೀ ವೇಗವಾಗಿ ಯಶಸ್ಸಿನ ರೇಖೆ ಮೇಲೇರಿತು. ಇದನ್ನು ಬಂಡವಾಳ ಮಾಡಿಕೊಳ್ಳಲು ಇನ್ ಕಾರ್ಪೊರೇಷನ್ ರೆಕಾರ್ಡ್ಸ್‌(ಹಳೆಯ ಹೆಸರು ಮರ್ಡರ್ ಇನ್ ಕಾರ್ಪೊರೇಷನ್)ನವರಿಗೆ ಎರಡೂ ಹಾಡುಗಳನ್ನು ರೀಮಿಕ್ಸ್‌ಮಾಡಲು ಲೋಪೆಜ ಸೂಚಿಸಿದಳು. ಅವುಗಳಗಳಲ್ಲಿ ರಾಪ್ ಕಲಾವಿದ ಜಾ ರೂಲ್ ಎರಡೂ ಹಾಡುಗಳಿಗೆ ಇದ್ದರೆ ಕಾಡ್ಡಿಲಾಕ್ ಟಾಹ್ ("ಐಂಟ್ ಇಟ್ ಫನ್ನಿ") ಒಂದರಲ್ಲಿ ಮಾತ್ರ ಇದ್ದ. ಹಲವು ವಾರಗಳವರೆಗೆ ಬಿಲ್ ಬೋರ್ಡ್ ಹಾಟ್ 100ರಲ್ಲಿ ಇವೆರಡೂ ರೀಮಿಕ್ಸ್‌ಗಳು ಪ್ರಥಮ ಸ್ಥಾನದಲ್ಲಿ ಇದ್ದವು. ತನ್ನ ಮುವತ್ತೆರಡನೆಯ ಜನ್ಮದಿನದಂದು ಬಳುವಳಿ ಹಾಡಾಗಿಜೆ.ಲೋ ವನ್ನು "ಐಯಾಮ್ ರೀಯಲ್" ಜೊತೆಗೆ ರೀಮಿಕ್ಸ್ ಮಾಡಿ ಮರು ಬಿಡುಗಡೆಗೊಳಿಸಿದಳು. "ಕ್ಯೂ ಐರೋನಿ"ಯಾದ ಯಶಸ್ಸಿನಿಂದ "ಸಿ ಯಾ ಸೇ ಅಕಾಬೋ"ವನ್ನು ಸ್ಪೇಯ್ನ್‌‌ನಲ್ಲಿ ಬಿಡುಗಡೆಗೊಳಿಸಿದಳು. 2001ರಲ್ಲಿ ಲೋಪೆಜ, ಪ್ರವಾಸದಲ್ಲಿದ್ದಾಗ ಲೆಟ್ಸ್ ಗೆಟ್ ಲೌಡ್ "ಲೀವ್ ಇನ್ ಪ್ಯುಆರ್ಟೋ ರೀಕೋ" ಗಾನಗೋಷ್ಟಿ ನಡೆಸಿಕೊಟ್ಟಳು.

2002–2006: ಜೆ ಟು ಥಾ L-O!, ದಿಸ್ ಇಸ್ ಮೀ... ದೆನ್ ಮತ್ತು ರೀಬರ್ಥ್

ಜೆ.ಲೋ ದ ಮರು ಬಿಡುಗಡೆಯ ಯಶಸ್ಸಿನಿಂದ ಲೋಪೆಜ, ಸಂಪೂರ್ಣ ಆಲ್ಬಂ ಅನ್ನು ರೀಮಿಕ್ಸಿಂಗ್ ಮಾಡುವುದಾಗಿ ನಿರ್ಧರಿಸಿ ಫೆಬ್ರವರಿ 5, 2002ರಂದು ಬಿಡುಗಡೆJ to tha L-O!: The Remixes ಮಾಡಿದಳು.ಬಿಲ್ ಬೋರ್ಡ್ 200ನಲ್ಲಿ ಈ ರೀಮಿಕ್ಸ್ ಆಲ್ಬಮ್ ಪ್ರಥಮ ಸ್ಥಾನ ಪಡೆಯಿತು.ಬಿಲ್ ಬೋರ್ಡ್‌ನ ಚರಿತ್ರೆಯಲ್ಲೇ ಅದರ ನಕ್ಷೆ[೨೪] ಯಲ್ಲಿ ಆ ಸ್ಥಾನ ಪಡೆದ ಮೊದಲ ರೀಮಿಕ್ಸ್ ಎಂದು ಗುರುತಿಸಲ್ಪಟ್ಟಿತು. ಜೆ ಟು ಥಾ L-Oದ ರೀಮಿಕ್ಸ್‌ ನಲ್ಲಿ ಏಕ ವ್ಯಕ್ತಿ ಹಾಡುವ ಹಾಡುಗಳನ್ನು ಹಾಡಿರುವ ಕಲಾವಿದರೆಂದರೆ ಪಿ.ದಿಡ್ಡಿ , ಫ್ಯಾಟ್ ಜೋ ಮತ್ತು ನಾಸ್‌ಮತ್ತು ಈ ಆಲ್ಬಮ್‌ನಲ್ಲಿ ಅಪರೂಪದ ನೃತ್ಯಮತ್ತು ಹಿಪ್ ಹಾಪ್‌ಇದೂ ಹಳೆಯ ಏಕ ವ್ಯಕ್ತಿ ಪ್ರದರ್ಶನದ ರೀಮಿಕ್ಸ್ ಆಗಿರುತ್ತದೆ. ಚರಿತ್ರೆಯಲ್ಲಿ, [[ಮೈಖಲ್ ಜಾಕ್ಸನ್‌|ಮೈಖಲ್ ಜಾಕ್ಸನ್‌Blood on the Dance Floor: HIStory in the Mix ]]ರವರ ದಿ ಬೀಟ್ಲ್ಸ,ಲವ್ ಮತ್ತು ಮಡೋನ್ನರವರ ಯು ಕ್ಯಾನ್ ಡಾನ್ಸ್ ಜೊತೆಗೆ ಲೋಪೆಜ಼ಳ ಈ ಆಲ್ಬಮ್ ನಾಲ್ಕನೆಯ ಸರ್ವಕಾಲಿಕ ದಾಖಲೆ ಮಟ್ಟದಲ್ಲಿ ಮಾರಾಟಗೊಂಡ ರೀಮಿಕ್ಸ್ ಆಲ್ಬಮ್ ಆಗಿರುತ್ತದೆ.

ದಿಸ್ ಇಸ್ ಮೀ... ಎನ್ನುವ ತನ್ನ ಮೂರನೆಯ ಆಲ್ಬಮ್ ಅನ್ನು ಲೋಪೆಜ ಬಿಡುಗಡೆ ಮಾಡಿದಳು.ಆಮೇಲೆ , ನವೆಂಬರ್ 26, 2002ರಂದು ಬಿಲ್ ಬೋರ್ಡ್ 200ರಲ್ಲಿ ಎರಡನೆಯದಾಗಿ ಹೊಮ್ಮಿತು ಮತ್ತು ನಾಲ್ಕು ಏಕ ವ್ಯಕ್ತಿ ಹಾಡುಗಳ ಉತ್ಪತ್ತಿಗೆ ಕಾರಣವಾಯಿತು: ಜೆನ್ನಿ ಫ್ರಮ್ ದ ಬ್ಲಾಕ್ (ಜಡಾಕಿಸ್ ಮತ್ತು ಸ್ಟೈಲ್ಸ್ ಪಿ ಒಳಗೊಂಡಂತೆ) ಆನಂತರ ಬಿಲ್ ಬೋರ್ಡ್ ಹಾಟ್ 100ರಲ್ಲಿ ಮೂರನೆಯದಾಗಿ ಹೊಮ್ಮಿತು; (ಆಲ್ ಐ ಹ್ಯಾವ್ LL ಕೂಲ್ J ಒಳಗೊಂಡಂತೆ), "ಐಯಾಮ್ ಗ್ಲಾಡ್ ಮತ್ತು ಬೇಬಿ ಐ ಲವ್ ಯು!" ಇವು ವಾರಾನುಗಟ್ಟಳೆ ಮೊದಲ ಸ್ಥಾನದಲ್ಲೇ ಮೆರೆಯಿತು; ಈ ಆಲ್ಬಮಿಗೆ ಕ್ಯಾರಿಲ್ ಸೈಮನ್ ಅವರ 1978ರ "ಯು ಬಿಲಾಂಗ್ ಟು ಮೀ" ಅನ್ನು ಹೊರ ಪದರವಾಗಿ ಸೇರಿಸಲಾಗಿತ್ತು. "ಐಯಾಮ್ ಗ್ಲಾಡ್" ಗೆ ಬಳಸಲಾದ ವೀಡಿಯೋ ದೃಶ್ಯಗಳು 1983ರ ಚಿತ್ರ ಫ್ಲಾಶ್ ಡ್ಯಾನ್ಸಿ ನ ದೃಶ್ಯಗಳನ್ನು ಮರು ಸೃಷ್ಟಿಸಿದವು, ಇದು ಕಾಪಿ ರೈಟ್ ಇನ್‌ಫ್ರಿಂಜ್‌ಮೆಂಟ್ ಎಂದು ನ್ಯಾಯಾಲಯದಲ್ಲಿ ದಾವೆಯನ್ನು ಎದುರಿಸಬೇಕಾಯಿತು, ಆನಂತರ ಅದು ವಜಾಗೊಂಡಿತು.[೨೫][೨೬]

ಸಂಗೀತದಿಂದ ಒಂದು ವರ್ಷ ದೂರವುಳಿದ ಲೋಪೆಜ ತನ್ನ ನಾಲ್ಕನೆಯ ಸ್ಟುಡಿಯೋ ಆಲ್ಬಮ್ ರೀಬರ್ಥ ಅನ್ನು ಮಾರ್ಚ್ 1, 2005ರಂದು ಬಿಡುಗಡೆಗೊಳಿಸಿದಳು.ಆದರೂ ಬಿಲ್ ಬೋರ್ಡ್ 200ರರಲ್ಲಿ ದ್ವಿತೀಯ ಸ್ಥಾನಕ್ಕೆ ಏರೋದು ಸೇರೋದು ಆಗುತ್ತಿದ್ದರೂ ಆಲ್ಬಮ್ ಬಹು ಬೇಗ ಪಟ್ಟಿಯಿಂದಲ್ಲೇ ಹೊರಗುಳಿದುಬಿಟ್ಟಿತು. ಆದರದು ಗೆಟ್ ರೈಟ್‌ನ ಉತ್ಪತ್ತಿಗೆ ಕಾರಣವಾಯಿತು ಮತ್ತು ಗೆಟ್ ರೈಟ್ U.S.ನ ಶ್ರೇಷ್ಟ ಹದಿನೈದರಲ್ಲೊಂದಾಯಿತು ಮತ್ತು ಲೋಪೆಜ಼ಳ ದ್ವಿತೀಯ ಪ್ಲಾಟಿನಮ್ ಹಿಟ್ ಆಯಿತು (’ಇಫ್ ಯು ಹ್ಯಾಡ್ ಮೈ ಲವ್ ನಂತರ) "ಗೆಟ್ ರೈಟ್" UK ನಲ್ಲೂ ಕೂಡ ಯಶಸ್ವಿಯಾಯಿತು ಏಕ ವ್ಯಕ್ತಿ ಹಾಡಿನಲ್ಲಿ ದ್ವಿತೀಯ ಸ್ಥಾನ ಲಭ್ಯವಾಗಿತ್ತು. ಫ್ಯಾಟ್ ಜೋ ಒಳಗೊಂಡ ಏಕ ವ್ಯಕ್ತಿ ಹಾಡು "ಹೋಳ್ಡ್ ಯು ಡೌನ್" U.S. ಹಾಟ್ 100ರಲ್ಲಿ ಅರವತ್ನಾಲ್ಕನೆಯ ಸ್ಥಾನ ಪಡೆದು UK ನಲ್ಲಿ ಆರನೆಯ ಸ್ಥಾನ ಪಡೆಯಿತು ಮತ್ತು ಆಸ್ಟ್ರೇಲಿಯಾದಲ್ಲಿ ಶ್ರೇಷ್ಟ ಇಪ್ಪತ್ತರಲ್ಲಿ ಸೇರಿತು. ಮತ್ತೊಂದು ಗೀತೆ, "ಚೆರ್ರಿ ಪೈ" 2005ರ ಉತ್ತರಾರ್ಧದಲ್ಲಿ ಬಿಡುಗಡೆಗೊಳ್ಳಿಸ ಬೇಕೆಂದು ತೀರ್ಮಾನಿಸಲಾಯಿತು ಆದರೆ ವೀಡಿಯೋ ಮಾಡುವ ಯೋಜನೆ ಕೈ ಬಿಡಲಾಯಿತು. ಇದನ್ನು ಸ್ಪೇಯ್ನ್ ರೇಡಿಯೋ ಸ್ಟೇಷನ್‌ಗಳಿಗೆ ಬಿಡುಗಡೆಗೊಳಿಸಲಾಯಿತು. RIAA ರೀಬರ್ಥ ಅನ್ನು U.S.ನಲ್ಲಿ ಪ್ಲಾಟಿನಮ್ ಎಂದು ಪ್ರಮಾಣಿಸಿತು. ಲೋಪೆಜ಼ಳ ಧ್ವನಿ ಒಳಗೊಂಡ LL ಕೂಲ್ Jಯ "ಕಂಟ್ರೋಲ್ ಮೈಸೆಲ್ಫ್"ನ ಏಕ ವ್ಯಕ್ತಿ ಹಾಡುಗಳ್ಳುಳ್ಳ ಆಲ್ಬಮ್ ಫೆಬ್ರವರಿ 1, 2006ರಂದು ಬಿಡುಗಡೆಗೊಳ್ಳಿಸಲಾಯಿತು.U.S.ಬಿಲ್ ಬೋರ್ಡ್ ಹಾಟ್ 100 ರಲ್ಲಿ ನಾಲ್ಕನೆಯ ಸ್ಥಾನ ಪಡೆಯಿತು ಮತ್ತು UK ಏಕ ವ್ಯಕ್ತಿ ಹಾಡಿನ ಪಟ್ಟಿ ಯಲ್ಲಿ ದ್ವಿತೀಯ ಸ್ಥಾನ ಪಡೆಯಿತು . ಲೋಪೆಜ‌ಳ ಈ ಆಲ್ಬಮ್ ಮೂರು ವರ್ಷಗಳಲ್ಲಿ U.S.ಶ್ರೇಷ್ಟ ಹತ್ತರಲ್ಲಿ ಸೇರಿದ್ದು ಮೊದಲ ಸಲವಾಗಿರುತ್ತದೆ.

2007-2008: ಕೊಮೊ ಉನಾ ಮುಜರ್ ಮತ್ತು ಬ್ರೇವ್

Lopez with husband Marc Anthony (right) and Greek singer Kostas Martakis (left), who opened her September 2008 concert in Athens.

ಲೋಪೆಜ ಅಧಿಕೃತವಾಗಿ ಪೂರ್ಣಪ್ರಮಾಣದ ಸ್ಪ್ಯಾನಿಷ್ ಭಾಷೆಯ ಆಲ್ಬಮ್ ಕೊಮೊ ಅಮಾ ಉನಾ ಮುಜರ್ ಅನ್ನು ಮಾರ್ಚ್ 2007ರಲ್ಲಿ ಬಿಡುಗಡೆ ಮಾಡಿದಳು.ಅವಳ ಪತಿ, ಗಾಯಕ ಮಾರ್ಕ್ ಅಂತೋಣಿಆ ಆಲ್ಬಮ್ ಅನ್ನು ಎಸ್ತಿಫಾನೊದಲ್ಲಿ ನಿರ್ಮಿಸಿದನು, "ಕ್ಯೂ ಹಿಕಿಸ್ಟೆ" ಮಾತ್ರ ಜುಲಿಯೋ ರೆಯಿಸ್ ಜೊತೆಯಾಗಿ ಸೇರಿ ನಿರ್ಮಿಸಿದನು. ಈ ಆಲ್ಬಮ್ ಬಿಲ್ ಬೋರ್ಡ್ 200ನಲ್ಲಿ ಹತ್ತನೆಯ ಶ್ರೇಣಿಯಲ್ಲಿತ್ತು, U.S. ಟಾಪ್ ಲ್ಯಾಟಿನ್ ಆಲ್ಬಮ್ಸ್‌ನಲ್ಲಿ ಪ್ರಥಮ ಶ್ರೇಣಿಯಲ್ಲಿ ಸತತವಾಗಿ ನಾಲ್ಕು ವಾರವಿತ್ತು ಮತ್ತು U.S.ಲ್ಯಾಟಿನ್ ಪಾಪ್ ಆಲ್ಬಮ್ಸ್‌‍ನಲ್ಲಿ ಸತತವಾಗಿ ಏಳು ವಾರವೂ ಪ್ರಥಮ ಶ್ರೇಣಿಯಲ್ಲಿತ್ತು. ಸ್ವಿಜರ್‌ಲ್ಯಾಂಡ್,ಇಟಾಲಿ, ಸ್ಪೇಯ್ನ್, ಫ್ರಾನ್ಸ್,ಬೆಲ್ಜಿಯಂ, ಗ್ರೀಸ್ ಜರ್ಮನಿ, ಆಸ್ಟ್ರ‍ಿಯಾ ಮತ್ತು ಪೋರ್ಚುಗಲ್ ಮುಂತಾದ ದೇಶಗಳಲ್ಲಿ ಯಶಸ್ಸು ಕಂಡುದ್ದರಿಂದ ಈ ಆಲ್ಬಮ್ ಯುರೋಪಿನಲ್ಲೂ ಕೂಡ ಯಶಸ್ಸನ್ನು ಕಂಡಿತು, ಆಲ್ಬಮಿನ ಪಟ್ಟಿಯಲ್ಲಿ ಮೂರನೆಯ ಶ್ರೇಣಿಯಲ್ಲಿ ಮಿಂಚಿತು. ಲೋಪೆಜ ತನ್ನಪತಿ ಮಾರ್ಕ್ ಅಂತೋಣಿ ಜೊತೆ ವಿಶ್ವದಾದ್ಯಂತ ಪ್ರವಾಸವನ್ನು ಕೈಗೊಳ್ಳುವುದಾಗಿ ಜುಲೈ 24, 2007ರ ಬಿಲ್ ಬೋರ್ಡ್ ಪತ್ರಿಕೆ ವರದಿ ಮಾಡಿತು. ಈ ಪ್ರವಾಸಕ್ಕೆ "ಜುಂಟೋಸ್ ಎನ್I ಕಾನ್ಸಿಯರ್ಟೊ" ಎಂದು ಹೆಸರಿಸಲಾಗಿದೆ ಮತ್ತು ಇದು ನ್ಯೂ ಜರ್ಸಿಯಿಂದ ಸೆಪ್ಟೆಂಬರ್ 29[೨೭] ರಂದು ಹೊರಡುವುದಾಗಿ ಬರೆಯಿತು. ಆಗಸ್ಟ್ 10ರಂದು ಟಿಕೇಟುಗಳು ಮಾರಾಟವಾಯಿತು.ಈ ಪ್ರವಾಸದಲ್ಲಿ ಪ್ರಸ್ತುತ ಸಂಗೀತ, ಹಳೆಯ ರಾಗಗಳು ಮತ್ತು ಸ್ಪ್ಯಾನಿಷಿನ ಸಂಗೀತ ಎಲ್ಲದರ ಮಿಶ್ರಣವಿರುತ್ತದೆ. ಆನಂತರದ ಪತ್ರಿಕಾ ಹೇಳಿಕೆಯಲ್ಲಿ ಲೋಪೆಜ ಪ್ರವಾಸದ ವಿವರವನ್ನು ಘೋಶಿಸಿದಳು ಈ ಪ್ರವಾಸವು ಮಾರ್ಕ್ ಜಿ. ಎಟೆಸ್ ಅರೆನಾದಲ್ಲಿ ಸೆಪ್ಟೆಂಬರ್ 28, 2007ರಲ್ಲಿ ಪ್ರಾರಂಭಗೊಂಡು ನವೆಂಬರ್ 7, ೨೦೦೭ ರಂದು ಫ್ಲೋರಿಡಾದ ಮಿಯಾಮಿ ಅಮೇರಿಕನ್ ಏರ್‌ಲೈನ್ಸ್ ಅರೆನಾದಲ್ಲಿ ಮುಕ್ತಾಯಗೊಂಡಿತು. ಏಕ ವ್ಯಕ್ತಿಯ ಹಾಡು,"ಕ್ಯೂ ಹಿಕಿಸ್ಟೆ"(ಸ್ಪ್ಯಾನಿಷ್ ಭಾಷೆಯಲ್ಲಿ "ವಾಟ್ ಡಿಡ್ ಯು ಡು") ಜನವರಿ 2007ರಂದು ರೇಡಿಯೋ ಸ್ಟೇಶನ್‌ಗಳಿಗೆ ಅಧಿಕೃತವಾಗಿ ಬಿಡುಗಡೆಯಾಯಿತು. ಆವತ್ತಿನಿಂದ U.S.ಬಿಲ್ ಬೋರ್ಡ್ ಹಾಟ್ 100 ರಲ್ಲಿ ಎಂಬತ್ತಾರನೆಯದಾಗಿ ಮೇಲಕ್ಕೇರಿತು ಮತ್ತು ಹಾಟ್ ಲ್ಯಾಟಿನ್ ಸಾಂಗ್ಸ್ ಮತ್ತು ಹಾಟ್ ಡ್ಯಾನ್ಸ್ ಕ್ಲಬ್ ಪ್ಲೇಯ್ನಲ್ಲಿ ಮೊದಲನೆಯದಾಯಿತು. ಯುರೋಪಿಯನ್ ಪಟ್ಟಿಯಲ್ಲಿ ಕೂಡ ಶ್ರೇಷ್ಟ ಹತ್ತರಲ್ಲಿ ಒಂದಾಯಿತು. ಈ ಹಾಡಿಗೆ ಮೊದಲ ಬಾರಿಗೆ ಸ್ಪ್ಯಾನಿಷ್ ಭಾಷೆಯ ವೀಡಿಯೋವನ್ನು ಅಳವಡಿಸಲಾಗಿತ್ತು ಮತ್ತು ಇದು MTVಯವರ ನೇರ ಪ್ರಸಾರದ ಒಟ್ಟು ಬೇಡಿಕೆಗಳು ಪ್ರತಿ ನಿತ್ಯ ಲೆಕ್ಕದಲ್ಲಿ ಈ ಹಾಡಿಗೆ ಅತೀ ಹೆಚ್ಚು ಬೇಡಿಕೆ ಇತ್ತು. ಬಿಡುಗಡೆಗೊಂಡ ಎರಡನೆಯ ಏಕ ವ್ಯಕ್ತಿ ಹಾಡು "ಮಿ ಹೇಸಸ್ ಫಾಳ್ಟ " ಮತ್ತು ಮೂರನೆಯದು "ಪೋರ್ ಆರೀಸ್‌ಗಾರ್ನಾಸ್".ಲೋಪೆಜ ಅಚ್ಚು ಮೆಚ್ಚಿನ ಲ್ಯಾಟಿನ್ ಕಲಾವಿದೆ ಎಂದು 2007ರಲ್ಲಿ ಅಮೇರಿಕನ್ ಮ್ಯುಸಿಕಲ್ ಅವಾರ್ಡ್ ಕೊಡಲಾಯಿತು.ಕೊಮೊ ಅಮಾ ಉನಾ ಮುಜರ್ ಮಾಡಿದ ಜೆನ್ನಿಫರ್ ಲೋಪೆಜ,ಸ್ಪ್ಯಾನಿಷ್ ಭಾಷೆಯ ಆಲ್ಬಮಿನಲ್ಲಿ ಬಿಲ್ ಬೋರ್ಡ್ 200ರಲ್ಲಿ ಶ್ರೇಷ್ಟ ಹತ್ತರಲ್ಲಿ ಆಯ್ಕೆ ಗೊಂಡ ಕೆಲವೇ ಕೆಲವರಲ್ಲಿ ಒಬ್ಬಳು.

ಕೊಮೊ ಅಮಾ ಉನಾ ಮುಜರ್ ಬಿಡುಗಡೆಗೊಳಿಸಿದ ಆರು ತಿಂಗಳ ತರುವಾಯ ಲೋಪೆಜ ತನ್ನ ಐದನೆಯ ಇಂಗ್ಲೀಷ್ ಸ್ಟುಡಿಯೋ ಆಲ್ಬಮ್(ಒಟ್ಟಾರೆ ಆರು ಸ್ಟುಡಿಯೋ ಆಲ್ಬಮ್‌ಗಳು), ಬ್ರೇವ್ ಅನ್ನು ಅಕ್ಟೋಬರ್ 9, 2007ರಂದು ಬಿಡುಗಡೆಗೊಳಿಸಿದಳು. ತನ್ನ ಸಹಭಾಗಿ ಬರಹಗಾರ ಇವಾನ್ "ಕಿಡ್" ಬೊಗಾರ್ಟ್[೨೮] ಜೊತೆಯಲ್ಲಿ ಕೆಲವು ನಿರ್ಮಾಪಕರುಗಳಾದ ಮಿಡಿ ಮಾಫಿಯಾ, ಜೆ.ಆರ್.ರೋಟೆಮ್,ಲಿನ್ ಮತ್ತು ವೇಡ್ ಹಾಗು ರೈಯಾನ್ ಟೆಡ್ಡರ್ ಅವರುಗಳ ಜತೆಯಾಗಿ ಕಾರ್ಯನಿರ್ವಹಿಸಲು ತೊಡಗಿದಳು. 2007 ಆಗಸ್ಟ್ 26ರಂದು ABC ಯವರು ಹತಾಶೆ ಗೃಹಿಣಿಯರಿಗಾಗಿ ನಾಲ್ಕನೆಯ ಕಾಲ ಪ್ರಾಯೋಗಿಕ ಪ್ರಥಮ ಪ್ರದರ್ಶನವನ್ನು ಏರ್ಪಡಿಸಿದರು ಅದರಲ್ಲಿ "ಮೈಲ್ ಇನ್ ದೀಸ್ ಶೂಸ್" ಹಾಡಿನ ತುಣುಕನ್ನು ಸೇರಿಸಿದ್ದರು. "ಡು ಇಟ್ ವೆಲ್" ಏಕ ವ್ಯಕ್ತಿ ಹಾಡಿನ ಆಲ್ಬಮ್ ಬಿಡುಗಡೆಗೊಂಡು ಶ್ರೇಷ್ಟ ಇಪ್ಪತ್ತರಲ್ಲೊಂದು ಎಂದು ಎಷ್ಟೋ ರಾಷ್ಟ್ರಗಳಲ್ಲಿ ಗುರುತಿಸಲ್ಪಟ್ಟಿತು. ಎರಡನೆಯ ಏಕ ವ್ಯಕ್ತಿ ಹಾಡಿನದಾಗಿ "ಹೋಳ್ಡ್ ಇಟ್, ಡೋಂಟ್ ಡ್ರಾಪ್ ಇಟ್" ಮಧ್ಯ ಯುರೋಪ್ ಪ್ರಾಂತದಲ್ಲಿ ಮಾತ್ರ ಬಿಡುಗಡೆಗೊಂಡಿತು. ಮೂರನೆಯ ಏಕ ವ್ಯಕ್ತಿ ಹಾಡಿನದಕ್ಕೆ "ಬ್ರೇವ್" ಎಂದು ಹೆಸರಿಟ್ಟು ಮೈಖಲ್ ಹೌಸ್‌ಮನ್ಸ್‌ನ ಅಧಿಕೃತ ವೆಬ್ ಸೈಟ್‌ನಲ್ಲಿ ಅದರ ಚಿತ್ರೀಕರಣ ಮುಗಿದಿದೆ ಎಂದು ಹೇಳಲಾಗಿತ್ತು ಆದರೆ ಅದು ಬಿಡುಗಡೆಗೊಳ್ಳಲೇ ಇಲ್ಲ.

2009-ಉಡುಗೊರೆ: ಲವ್?

ಲೋಪೆಜ ತನ್ನ ಏಳನೆಯ ಸ್ಟುಡಿಯೋ ಆಲ್ಬಮ್ ಲವ್? ಬಿಡುಗಡೆಗೊಳಿಸುವಳು ಮಾರ್ಚ್ ಅಥವಾ ಏಪ್ರಿಲ್ 2010ರಂದು.ಅದನ್ನು ಡಾಂಜಾ, ಜಿಮ್ ಜಾನ್ಸಿನ್,ಡಾರ್ಕ್‌ಚೈಳ್ಡ್ , ಕ್ರಿಸ್ ಇನ್ ಟೀಬ್ (ಡ್ರಾಪ್ಜೋನ್‌ನಿಂದ) ಮತ್ತು ಬೇರೆಯವರಿಂದ ದಿ ನೆಪ್ಚೂನ್ಸ್ ಅವರುಗಳು ನಿರ್ಮಿಸುವುದಾಗಿ ನಿರ್ಧಾರಿತವಾಗಿದೆ. ಅಕ್ಟೋಬರ್ 2009ರಲ್ಲಿ ಆನ್ ಲೈನಿನಲ್ಲಿ ಮಿಯಾಮಿ ರಾಪ್ಪರ್ ಪಿಟ್ಬುಲ್ ಒಳಗೊಂಡ "ಫ್ರೆಶ್ ಔಟ್ ದಿ ಓವೆನ್" ಎನ್ನುವ ಹಾಡಿನ ಬಗ್ಗೆ ಬರೆಯಲಾಗಿತ್ತು ನಂತರ ಲೋಪೆಜ಼ಳ ದಾಖಲೆಗಳ ವಿವರದ ಪಟ್ಟಿಯಲ್ಲಿ ಅದೊಂದು ಏಕ ವ್ಯಕ್ತಿಯ ಝೇಂಕಾರವೇ ಹೊರತು ಅದು ಆಲ್ಬಮಿ[೨೯] ನಲ್ಲಿ ಕಾಣಿಸುವುದಲ್ಲ ಎಂದು ತಿಳಿಯಿತು.ಅಧಿಕೃತ ಏಕ ವ್ಯಕ್ತಿಯ ಹಾಡು "ಲೌಬೌಟಿನ್ಸ್" ರೇಡಿಯೋದಲ್ಲಿ ಮೊದಲ ಬಾರಿಗೆ ನವೆಂಬರ್ 23, 2009ರಂದು ಪ್ರಸಾರವಾಯಿತು ಆನಂತರ ಹಾಡಿನ ಮೊದಲ ಪ್ರದರ್ಶನ 2009ರ ಅಮೇರಿಕನ್ ಮ್ಯೂಸಿಕಲ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ನಡೆಯಿತು.

ಇತರೆ ಯೋಜನೆಗಳು

ಏಪ್ರಿಲ್ 10, 2007ರಂದು ಲೋಪೆಜ, ಅಮೇರಿಕನ್ ಐಡಲ್‌ [೩೦] ನ ಮಾರ್ಗದರ್ಶಿಯಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಳು. ಜನವರಿ 15, 2007ರಂದು ಪ್ರಾರಂಭವಾದ MTVಯ ಎಂಟು ಕಂತುಗಳ ರಿಯಾಲಿಟಿ ಷೋ ಡಾನ್ಸ್ ಲೈಫ್‌ ನ ಕಾರ್ಯಕಾರಿ ನಿರ್ಮಾಪಕಿಯೂ ಆದಳು ಲೋಪೆಜ. ಕಾರ್ಯಕ್ರಮದಲ್ಲಿ ಭಾಗವಹಿಸುವವರನ್ನು ಆಯ್ಕೆ ಮಾಡುವ ಕಾರ್ಯದಲ್ಲಿ ಸಹಾಯ ಮಾಡಿದ ಲೋಪೆಜ, ಕಾರ್ಯಕ್ರಮದಲ್ಲಿ ಸಣ್ಣದಾಗಿ ಕಾಣಿಸಿಕೊಂಡಳು ಕೂಡ. ಆನಂತರ ಸಣ್ಣ ಮಾಲಿಕೆಗಳ ಪ್ರಸಾರಣದ ಕಾರ್ಯಕಾರಿ ನಿರ್ಮಾಪಕಿಯಾಗಿ ಕೂಡ ಯುನಿವಿಷನ್‌ನಲ್ಲಿ ಸೇವೆಗೈದಳು. ಈ ಮಾಲಿಕೆಗೆ ತನ್ನ CDಯ ಹೆಸರಾದ ಕೊಮೊ ಅಮಾ ಉನಾ ಮುಜರ್ ಅನ್ನೇ ನೀಡಿದಳು ಮತ್ತು ಅದು ಅಕ್ಟೋಬರ್ 30 ರಿಂದ ನವೆಂಬರ್ 27, 2007ರವರೆಗೂ ನಡೆಯಿತು ಮತ್ತು ಕ್ರಿಸ್ಟಿಯನ್ ಬೊರಿರ್ರೋ ಹಾಗು ಅಡ್ರಿಯಾನಾ ಕ್ರುಜ್[೩೧] ಅವರನ್ನು ಒಳಗೊಂಡಿತು.

ಡಿಸ್ಕವರಿ ಕಮ್ಯುನಿಕೇಶನ್ಸ್ ಇನ್ ಕಾರ್ಪೊರೇಷನಿನ ಒಂದು ಭಾಗವಾದ TLCಗೆ ಅಲಿಖಿತ ಬರಹಗಳಿರುವ ನೇರ ನೈಜ ಸರಣಿಗಳಿಗೆ ಸ್ಟಾರ್ ಆಗಿ ಮತ್ತು ಕಾರ್ಯಕಾರಿ ನಿರ್ಮಾಪಕಿಯು ಆಗಿ ಒಪ್ಪಂದ ಮಾಡಿಕೊಂಡಳು. ಈ ಸರಣಿಯಲ್ಲಿ ಆಕೆ ಪ್ರಾರಂಭಿಸುವ ಹೊಸ ಸುಗಂಧ ದ್ರವ್ಯ[೩೨] ದ ಬಗ್ಗೆ ತೋರಿಸಬಹುದು ಆದರೆ ಆಕೆಯ ಕುಟುಂಬ[೩೩] ದ ಬಗ್ಗೆ ತೋರಿಸುವ ಹಾಗಿರಲಿಲ್ಲ.

ಉದ್ಯಮ

ಲೋಪೆಜ 2003ರಲ್ಲಿ ವಿವಿಧ ಉಡುಪುಗಳ ಮಾರಾಟದ ಸರಣಿಯನ್ನು ಪ್ರಾರಂಭಿಸಿದಳು

JLO ಬೈ ಜೆನ್ನಿಫರ್ ಲೋಪೆಜ ಎಂಬ ಹೆಸರಿನಲ್ಲಿ ಕಿರಿಯ ಮಹಿಳೆಯರಿಗಾಗಿ ವಿವಿಧ ಉಡುಪುಗಳ ಮಾದರಿಯನ್ನು, ಅವುಗಳಲ್ಲಿ ಜೀನ್ಸ್, ಟೀ-ಶರ್ಟ್‌ಗಳು, ಕೋಟ್‌ಗಳು, ಬೆಳ್ಟ‌ಗಳು, ಪರ್ಸ್‌ಗಳು, ಮಹಿಳೆಯರ ಒಳ ಉಡುಪುಗಳು, ಆಭರಣಗಳ ಸರಣಿ,[೩೪] ಬಿಡಿಯಾಗಿ ಧರಿಸುವ ಹ್ಯಾಟ್‌ಗಳು, ಗ್ಲೌಸ್‌ಗಳು ಮತ್ತು ಸ್ಕಾವ್ರ್ಸ್[೩೫] -ಕಿವಿ ಹಾಗು ಕುತ್ತಿಗೆಯನ್ನು ಚಳಿಯಿಂದ ರಕ್ಷಿಸಿಕೊಳ್ಳಲು ಕಟ್ಟಿಕೊಳ್ಳುವ ಬಟ್ಟೆ. ಲೋಪೆಜ ಲ್ಯುಯಿಸ್ ವ್ಯುಟ್ಟನ್ 2003ರ ಚಳಿಗಾಲ ಅಭಿಯಾನದಲ್ಲಿ ಭಾಗವಹಿಸಿದಳು. 2005ರಲ್ಲಿ ಹೊಸ ಉಡುಪುಗಳ ಮಾಲಿಕೆ ಸ್ವೀಟ್‌ಫೇಸ್ ಪ್ರಾರಂಭಿಸಿದಳು. 2007ರ ಉತ್ತರಾರ್ಧದಲ್ಲಿ ಲೋಪೆಜ ನಿವೃತ್ತಿ ಹೊಂದಿ ಅಪ್ರಾಪ್ತ ವಯಸ್ಕರಿಗಾಗಿಯೇ ಹೊಸದೊಂದು ಉಡುಪಿನ ಮಾಲಿಕೆ ಜಸ್ಟ್ ಸ್ವೀಟ್[೩೬] ಎಂದು ಹೊಸದಾಗಿ ಪ್ರಾರಂಭಸಿದಳು. ವಾರದ ನ್ಯೂ ಯಾರ್ಕ ಫ್ಯಾಷನ್ ಸಂಭ್ರಮಗಳಲ್ಲಿ ಲೋಪೆಜ಼ಳ ಉಡುಪುಗಳ ವಿನ್ಯಾಸಗಳು ಸೇರಿರುತ್ತಿದ್ದವು.

ಲೋಪೆಜ ಆಗಿಂದಾಗ್ಗೆ ಪ್ರಾಣಿಗಳ ಚರ್ಮವನ್ನು ತನ್ನ ಬಟ್ಟೆಗಳಿಗೆ ಮತ್ತು ಖಾಸಗಿ ಕಪಾಟುಗಳಿಗೆ ಬಳಸುತ್ತಿದ್ದದು ಪ್ರಾಣಿಗಳ ಹಕ್ಕು[೩೭] ಬಾಧ್ಯತೆಯ ಕಾಳಜಿ ಇರುವವರಿಗೆ ತಿರಸ್ಕಾರವನ್ನುಂಟು ಮಾಡಿತು. ಲಾಸ್ ಏಂಜಲೀಸ್‌ನಲ್ಲಿ, ಮಾನ್ಸ್‌ಟರ್-ಇನ್-ಲಾ ದ ಮೊದಲ ಪ್ರದರ್ಶನ ಏರ್ಪಾಟು ಮಾಡಿದ್ದಾಗ ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ಸ್ (PETA)ದಿಂದ ನೂರಕ್ಕೂ ಹೆಚ್ಚು ಜನ ಪ್ರತಿಭಟನಾಕಾರರು ತಮ್ಮ ಕಾಳಜಿಯನ್ನು ಪ್ರದರ್ಶಿಸಿದರು.[೩೮]

ಕ್ಯಾಲಿಫೋರ್ನಿಯಾದ ಪಸಾದೇನಾ ಜಿಲ್ಲೆಯ ಸೌತ್ ಲೇಕ್‌ನಲ್ಲಿ ಕ್ಯೂಬಾ ಎನ್ ರೆಸ್ಟೋರೆಂಟ್ ಒಂದನ್ನು ಮಡ್ರೇಸ್ Archived 2010-05-15 ವೇಬ್ಯಾಕ್ ಮೆಷಿನ್ ನಲ್ಲಿ. ಎನ್ನುವ ಹೆಸರನ್ನಿಟ್ಟು ಏಪ್ರಿಲ್ 12, 2002ರಂದು ಲೋಪೆಜ ಪ್ರಾರಂಭಿಸಿದಳು.

ಲೋಪೆಜ,ಸುಗಂಧ ದ್ರವ್ಯದ ಉದ್ದಿಮೆಯನ್ನು ಗ್ಲೋ ಬೈ ಜೆ.ಲೋ ಎಂಬ ಹಾಡಿನ ಪ್ರಥಮ ಪ್ರದರ್ಶದೊಂದಿಗೆ ಪ್ರಾರಂಭಿಸಿದಳು. ಅಕ್ಟೋಬರ್ 2003ರಲ್ಲಿ ಲೋಪೆಜ ಹೊಸ ಸುಗಂಧ ದ್ರವ್ಯ "ಸ್ಟಿಲ್" ಅನ್ನು ಪರಿಚಯಿಸಿದಳು,ಹಿಂದಿನ ವರ್ಷವಷ್ಟೇ ಮಾಡಿದ್ದ "ಗ್ಲೋ"ಗೆ ಉಪ-ಪದಾರ್ಥವೆಂಬಂತೆ "ಮಿಯಾಮಿ ಗ್ಲೋ ಬೈ ಜೆ.ಲೋ" ವನ್ನು ಮಾಡಿದಳು, ತಾನು ದತ್ತು ತೆಗೆದುಕೊಂಡ ತನ್ನ ತವರು ಮಿಯಾಮಿಗೆ ಇದು ತನ್ನ ಗೌರವ ಎಂದಳು."ಗ್ಲೋ" ಮಾಲಿಕೆಗಳಲ್ಲಿ ಬಾಡಿ ಲೋಷನ್‌ಗಳನ್ನು ಮತ್ತು ಕಂಚಿನ ಉತ್ಪನಗಳನ್ನು ಮಾರುಕಟ್ಟೆಗೆ ತಂದಳು. 2005ರ ಕ್ರಿಸ್ಮಸ್‌ಕಾಲಕ್ಕೆ ಹೊಸದೊಂದು ಸುಗಂಧ ದ್ರವ್ಯ "ಲಿವ್ ಬೈ ಜೆನ್ನಿಫರ್ ಲೋಪೆಜ" ತಂದಳು. 2006ರ ವ್ಯಾಲೆಂಟೈನ್ಸ್ ಡೇಗೆ, "ಮಿಯಾಮಿ ಗ್ಲೋ"ಗೆ ಬದಲಾಗಿ "ಗ್ಲೋ"ದ ಇನ್ನೊಂದು ಉಪ-ಪದಾರ್ಥ "ಲವ್ ಅಟ್ ಫರ್ಸ್ಟ್ ಗ್ಲೋ ಬೈ ಜೆ.ಲೋ" ಅನ್ನು ತಂದಳು.ಮುಂದಿನ ಸುಗಂಧ, "ಲೀವ್ ಲ್ಯೂಕ್ಸ್" ಆಗಸ್ಟ್ 2006ರಂದು ಬಿಡುಗಡೆಗೊಳಿಸಿದರೆ, ಜನವರಿ 2007ಕ್ಕೆ "ಗ್ಲೋ ಆಫ್ಟರ್ ಡಾರ್ಕ್" ಬಿಡುಗಡೆಗೊಳಿಸಲಾಯಿತು.

ಜೆನ್ನಿಫರ್ ಲೋಪೆಜ಼ಳ ಆನಂತರದ ಸುಗಂಧ ದ್ರವ್ಯಗಳು ಏಶಿಯನ್ ಮಾರಿಕಟ್ಟೆಗಾಗಿ "ದೇಸಿಯೋ","ದೇಸಿಯೋ ಫಾರ್ ಎವರ್" ಮತ್ತು ಮೊಟ್ಟ ಮೊದಲ ಬಾರಿಗೆ ಪುರುಷರಿಗೇ ಪ್ರತ್ಯೇಕವಾಗಿ "ದೇಸಿಯೋ ಫಾರ್ ಮೆನ್" ತಂದಳು. 2009 ಫೆಬ್ರವರಿಯಲ್ಲಿ "ಸನ್ ಕಿಸ್ಡ್ ಗ್ಲೋ"ವನ್ನು ಬಿಡುಗಡೆಗೊಳಿಸಿದಳು. ಅಕ್ಟೋಬರ್ 2009[೩೯] ರಲ್ಲಿ ಬಿಡುಗಡೆಯಾದ "ಮೈ ಗ್ಲೋ" ಕೊನೆಯ ಸುಗಂಧ ದ್ರವ್ಯವಾಗಿರುತ್ತದೆ. ಜಪಾನಿನಲ್ಲಿ, ಲಕ್ಸ್‌ಶಾಂಪೂಗೆ ಪ್ರತಿನಿಧಿಯಾಗಿ ದೂರದರ್ಶನದ ವಾಣಿಜ್ಯಗಳಲ್ಲಿ ಲೋಪೆಜ ಕಾಣಿಸಿಕೊಳ್ಳುತ್ತಿದ್ದಳು.

ಚಲನಚಿತ್ರ ನಿರ್ಮಾಣ ಮತ್ತು ದೂರದರ್ಶನ ಕಾರ್ಯಕ್ರಮಗಳ ತಯಾರಿಸುವ ಕಂಪನಿ ನಿಯೋರಿಕನ್ ಪ್ರೊಡಕ್ಷನ್ಸ್ ಗೆ ಮಾಲೀಕಳಾದಳು. ತನ್ನ ಮ್ಯಾನೇಜರ್ ಬೆನ್ನಿ ಮೆಡೀನಾ ಜೊತೆ ಜಂಟಿಯಾಗಿ ಸ್ಥಾಪಿಸಲಾದ ಆ ಕಂಪನಿಯ ಅರ್ಧ ವರಮಾನ ಬೆನ್ನಿಗೆ ಸೇರಬೇಕಾಗಿತ್ತು.[೪೦] ಕಂಪನಿ ಪ್ರಾರಂಭವಾದ ಹೊಸತರಲ್ಲೇ ಮೆಡಿನಾ ಮತ್ತು ಲೋಪೆಜ ದೂರವಾದರು ಆದರೆ ಮತ್ತೆ ತಮ್ಮ ವ್ಯಾಪಾರದ ಬಾಂಧವ್ಯ[೪೧] ವನ್ನು ಮುಂದುವರೆಸಿದರು.

ಪೀಪಲ್ ಎನ್ ಎಸ್ಪಾನಲ್ ಪತ್ರಿಕೆಯವರು 2006ರಲ್ಲಿ "50 ಅತ್ಯಂತ ಸುಂದರವಾದವರು" ಮತ್ತು ಫೆಬ್ರವರಿ 2007ರಂದು "100 ಅತ್ಯಂತ ಪ್ರಭಾವಿತ ಹಿಸ್ಪಾನಿಕ್ಸ್" ಎಂದು ವಿಶೇಷ ಸಂಚಿಕೆ ಪ್ರಕಟಿಸಿದಾಗ ಅವೆರಡಕ್ಕೂ ಲೋಪೆಜ಼ಳನ್ನು ಆಯ್ಕೆ ಮಾಡಿದ್ದರು.

ವೈಯಕ್ತಿಕ ಜೀವನ

ಲೋಪೆಜ ಮತ್ತು ಆಂತೋಣಿ ಇಬ್ಬರೂ ಕ್ಯಾಲಿಫೋರ್ನಾದ, ಹಾಲಿವುಡ್ ನಲ್ಲಿರುವ ಸೆಲೆಬ್ರಿಟಿ ಸೆಂಟರ್‌ನ ಚರ್ಚ್ ಆಫ್ ಸೈಂಟಾಲಜಿಯಲ್ಲಿ ವೃತ್ತಿ ಪರ ವ್ಯಾಪಾರದ ಸಭೆಗಳನ್ನು 2006ರ ಉತ್ತರಾರ್ಧದಲ್ಲಿ ನಡೆಸುತ್ತಿದ್ದರು ಎಂದು ವರದಿಯಾಗಿತ್ತು.ಈ ಅವಧಿಯಲ್ಲಿ ಲೋಪೆಜ ಮತ್ತು ಅಂತೋಣಿ ಇಬ್ಬರೂ ಸೈಂಟಾಲಾಜಿಸ್ಟ್‌ಗಳಾದರುಎಂದು ಗಾಳಿ ಸುದ್ದಿ ಹರಡಿತ್ತು. ಸೈಂಟಾಲಾಜಿಸ್ಟ್‌ಗಳಾಗುವುದಕ್ಕೆ ಕಿಂಗ್ ಆಫ್ ಕ್ವೀನ್ಸ್ ನ ನಟಿ ಮತ್ತು ಸ್ವತ: ಸೈಂಟಾಲಾಜಿಸ್ಟ್ ಲೇಹ್ ರೆಮಿನಿ[೪೨]ಯ ಪತಿ ಅಂಗೆಲೊ ಪಗಾನ್‌ನ ಸಹಾಯ ದೊರೆಯಿತು ಎನ್ನಲಾಗಿದೆ. ಈ ವರದಿಗಳು ಪ್ರಕಟಗೊಳ್ಳುವ ಸ್ವಲ್ಪ ಮುನ್ನ ಲೋಪೆಜ NBCಗೆ "ನಾನು ಸೈಂಟಾಲಾಜಿಸ್ಟ್ ಅಲ್ಲ, ನಾನು ಕೆಥೋಲಿಕ್ ಆಗಿ ಬೆಳೆದವಳು. ಆದರೆ ಜನ ಇದರೆಡೆ ಬರುವ ರೀತಿ ಒಂದು ತಮಾಷೆಯಾಗಿದೆ. ನನಗೆ ಇದು ಆಶ್ಚರ್ಯವಾಗಿದೆ. ನನ್ನ ಜೀವನದಲ್ಲಿ ನಾನು ಭೇಟಿ ಮಾಡಿದ ಅತ್ಯಂತ ಉತ್ತಮ ಜನ ಇವರು". "ನನ್ನ ತಂದೆ ಇಪ್ಪತ್ತು ವರ್ಷ ಸೈಂಟಾಲಾಜಿಸ್ಟ್ ಆಗಿದ್ದರು ಎಂದು ಸೇರಿಸಿದಳು. ಅವರು ನನ್ನ ಜೀವನದಲ್ಲಿ ಕಂಡ ಅತ್ಯಂತ ಒಳ್ಳೆ ಮನುಷ್ಯ ಆದರೆ ಜನರೇಕೆ ಸೈಂಟಾಲಾಜಿಸ್ಟ್ ಗಳನ್ನು ನಕತ್ರಾತ್ಮಕ[೪೩] ವಾಗಿ ಚಿತ್ರಿಸುತ್ತಾರೆ ಎಂದೇ ಗೊತ್ತಾಗುತ್ತಿಲ್ಲ,ತಬ್ಬಿಬ್ಬುಗೊಂಡಿದ್ದೇನೆ" ಎಂದಳು.

2007 ನವೆಂಬರ್ 7ರಂದು ತನ್ನ "ಎನ್ ಕನ್ಸಿಎರ್ಟೊ" ಪ್ರವಾಸದ ಕೊನೆ ದಿನದಂದು ಲೋಪೆಜ ತಾನು ತನ್ನ ಪತಿ ಮಾರ್ಕ್ ಅಂತೋಣಿಯ ಮೊದಲ ಮಗುವನ್ನು ನಿರೀಕ್ಷಿಸುವುದಾಗಿ ದೃಢಪಡಿಸಿದಳು. ಈ ಹೇಳಿಕೆಯಿಂದಾಗಿ ತಿಂಗಳುಗಳಿಂದ ಲೋಪೆಜ ಗರ್ಭಿಣಿ[೪೪] ಯೋ ಅಲ್ಲವೋ ಎಂದು ನಡೆಯುತ್ತಿದ್ದ ಊಹಾಪೋಹಗಳು ನಿಂತವು. ಫೆಬ್ರವರಿ 5, 2008ರಂದು ಲೋಪೆಜ಼ಳ ತಂದೆ ಲೋಪೆಜ ಅವಳಿ ಜವಳಿ[೪೫] ಮಕ್ಕಳನ್ನು ನಿರೀಕ್ಷಿಸುತ್ತಿರುವುದಾಗಿ ದೃಢಪಡಿಸಿದರು. ಫೆಬ್ರವರಿ 22, 2008ರಂದು ಒಂದು ಗಂಡು ಒಂದು ಹೆಣ್ಣು ಅವಳಿ-ಜವಳಿ ಮಕ್ಕಳಿಗೆ ಲೋಪೆಜ ಜನ್ಮ ನೀಡಿದಳು.ಎಮ್ಮೆ ಮಾರಿಬಲ್ ಮುನಿಜ್ ಮತ್ತು ಮ್ಯಾಕ್ಸಿ ಮಿಲನ್ "ಮ್ಯಾಕ್ಸ್" ಡೇವಿಡ್ ಮುನಿಜ್ ಎಂದು ಹೆಸರಿಸಲಾಯಿತು. ಮಾರ್ಚ್ 11, 2008ರಂದು ಅವಳಿ-ಜವಳಿ ಮಕ್ಕಳನ್ನು ಪೀಪಲ್ ಪತ್ರಿಕೆಗೆ ಪರಿಚಯಿಸಲಾಯಿತು. ಆ ಕಾರಣಕ್ಕೆ ಪತ್ರಿಕೆಯವರು $6 ದಶ ಲಕ್ಷ ಕೊಟ್ಟಿತು.[೪೬][೪೭]

ಸಂಬಂಧಗಳು

ಮಾಧ್ಯಮವು ಅವಳ ಖಾಸಗಿ ಬದುಕಿನ ಬಗ್ಗೆ ತುಂಬಾ ಲಕ್ಷ್ಯ ಕೊಟ್ಟಿತು.ಲೋಪೆಜ‌ಗೆ ಎಲ್ಲರ ಗಮನ ಸೆಳೆಯುವಂತಹ ಬಾಂಧವ್ಯ ಓಜಾನಿ ನೊವಾ, ಸೀಯಾನ್ ಕೋಂಬ್ಸ್, ಕ್ರಿಸ್ ಜುದ್ದ್, ಬೆನ್ ಅಫ್ಲೆಕ್ ಮತ್ತು ಮಾರ್ಕ್ ಅಂಥೋಣಿಅವರೊಡನೆ ಇತ್ತು. 1984ರ ಶುರುವಿನಲ್ಲೇ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ 15 ವರ್ಷದ ಲೋಪೆಜ‌, ಡೇವಿಡ್ ಕ್ರುಜ್ ಜೊತೆ ಡೇಟಿಂಗ್ ಮಾಡುತ್ತಿದ್ದಳು. 1994ರಲ್ಲಿ ಬೇರೆಯಾಗಿದ್ದರೂ ಅವಳು ಅವನ ಸಾಂಗತ್ಯವನ್ನು ಹತ್ತು ವರ್ಷದ ನಂತರವೂ ಇನ್ನೂ ನಿಕಟ ನಂಟನ್ನು ಇಟ್ಟುಕೊಂಡಿದ್ದಳು.2004ರಲ್ಲಿ ಲೋಪೆಜ ಹೇಳುತ್ತಾಳೆ "ಅವನೊಬ್ಬ ಸ್ನೇಹಿತ ಮತ್ತು ಬಹುಶ: ಮಿಕ್ಕೆಲ್ಲರಿಗಿಂತ ಅವನು ನನ್ನನ್ನು ಚನ್ನಾಗಿ ಬಲ್ಲ".[೪೮][೪೯]

ಕ್ಯುಬನ್‌ನಲ್ಲಿ ಜನಿಸಿದ ಓಜಾನಿ ನೊವಾ[೫೦] ಜೊತೆ ಫೆಬ್ರವರಿ 22, 1997ರಂದು ಲೋಪೆಜ಼ಳ ಮೊದಲ ಮದುವೆಯಾಯಿತು. ನೊವಾ ಮಿಯಾಮಿ ರೆಸ್ಟೊರಾಂಟಿನಲ್ಲಿ ಒಬ್ಬ ಮಾಣಿ ಆಗಿದ್ದಾಗ ಲೋಪೆಜ ಸಂಧಿಸಿದ್ದು. 1998ರ ಜನವರಿಯಲ್ಲಿ ಅವರಿಬ್ಬರ ವಿಚ್ಛೇದನವಾಯಿತು. ಏಪ್ರಿಲ್ 2002ರಲ್ಲಿ ನೊವಾನನ್ನು ತನ್ನ ಪಸಾದೇನಾದ ಮಾಡ್ರೆಸ್ ರೆಸ್ಟೊರೆಂಟ್‌ನಲ್ಲಿ ಮ್ಯಾನೇಜರ್ ಆಗಿ ನೇಮಿಸಿದಳು.ಆದರೆ ಅಕ್ಟೋಬರ್ 2002ರಲ್ಲಿ ಅವನನ್ನು ಕೆಲಸದಿಂದ ವಜಾ ಮಾಡಲಾಯಿತು. ನೊವಾ ತನ್ನನ್ನು ವಜಾ ಮಾಡಿದ್ದಕ್ಕಾಗಿ ಲೋಪೆಜ಼ಳ ವಿರುದ್ಧ ಮೊಕದಮೆ ಹೂಡಿದನು.ಆನಂತರ ಅವರಿಬ್ಬರೂ ಗೌಪ್ಯ ಒಪ್ಪಂದ[೫೧] ಮಾಡಿಕೊಂಡರು. ಏಪ್ರಿಲ್ 2006ರಲ್ಲಿ, ಲೋಪೆಜ ತನ್ನ ಮಾಜಿ ಪತಿ ನೊವಾ ವಿರುದ್ಧ ಮೊಕದಮೆಯನ್ನು ಹೂಡಿದಳು. ಆತ ಬರೆಯುತ್ತಿರುವ ಪುಸ್ತಕದಲ್ಲಿ ತಮ್ಮ ಅಲ್ಪಾವಧಿ ಮದುವೆಯ ಜೀವನದ ಬಗ್ಗೆ ಖಾಸಗಿ ಮಾಹಿತಿಗಳನ್ನು ಬರೆದರೆ ತಾವಿಬ್ಬರೂ ಮಾಡಿಕೊಂಡಿರುವ ಗೌಪ್ಯ ಒಪ್ಪಂದ[೫೨] ವನ್ನು ನೊವಾ ಉಲ್ಲಂಘಿಸಿದಂತಾಗುತ್ತದೆ ಎಂದು ನೊವಾನ ಈ ಕಾರ್ಯವನ್ನು ತಡೆಯಬೇಕೆಂದು ಕೇಳಿಕೊಂಡಿದ್ದಳು. ಆಗಸ್ಟ್ 2007ರಲ್ಲಿ ನ್ಯಾಯಾಲಯ ನೇಮಿಸಿದ ತೀರ್ಪುಗಾರರು ಖಾಯಂ ತಡೆಯಾಜ್ಞೆಯನ್ನು ಒಜಾನಿ ನೊವಾಗೆ ಜಾರಿ ಮಾಡಿದದರು.ಇದರ ಪ್ರಕಾರ ನೊವಾ ಲೋಪೆಜ಼ಳನ್ನು "ಟೀಕಿಸುವುದಾಗಲಿ, ಅವಮಾನಿಸುವುದಾಗಲಿ, ನಕರಾತ್ಮಕವಾಗಿ ಚಿತ್ರಿಸುವುದಾಗಲಿ, ಹೀನಾಯಿಸುವುದಾಗಲಿ" ಮಾಡಬಾರದೆಂದು ಆಜ್ಞಾಪಿಸಿತು. ಲೋಪೆಜ಼ಳಿಗೆ $545,000 ಅನ್ನು ನಷ್ಟ ಪರಿಹಾರಾರ್ಥವಾಗಿ ಕೊಡಲು ಸೂಚಿಸಿತು ಅದರಲ್ಲಿ $300,000 ಕಾನೂನಿನ ವೆಚ್ಚವೆಂದು ಮತ್ತು ಅದರಲ್ಲಿ $48,000 ತೀರ್ಪುಗಾರರ ವೆಚ್ಚವು ಸೇರಿತ್ತು. ನೊವಾ ಪುಸ್ತಕಕ್ಕೆ ಸಂಬಂಧಿಸಿದ್ದಂತೆ ತನ್ನಲ್ಲಿದ್ದ ಎಲ್ಲಾ ದಾಖಲೆಗಳನ್ನು ಲೋಪೆಜ‌ಗೆ ಅಥವಾ ಆಕೆಯ ವಕೀಲ[೨೦] ರಿಗೆ ಒಪ್ಪಿಸಬೇಕೆಂದು ಆಜ್ಞಾಪಿಸಿತು. ನವೆಂಬರ್ 2009ರಲ್ಲಿ ನೊವಾ ವಿರುದ್ಧ ಒಪ್ಪಂದದ ಉಲ್ಲಂಘನೆ ಮತ್ತು ಖಾಸಗಿ ಬದುಕಿನಲ್ಲಿ ಅತಿಕ್ರಮ ಪ್ರವೇಶದ ಆರೋಪವನ್ನು ಹೊರಿಸಿ ಮೊಕದಮ್ಮೆಯನ್ನು ಹೂಡಿದಳು. ಹಿಂದೆ ಅವರಿಬ್ಬರ ನಡುವೆ ಆದ ಒಪ್ಪಂದವನ್ನು ಪ್ರಸ್ತಾಪಿಸುತ್ತ ನೊವಾ ಬಿಡುಗಡೆಗೊಳಿಸಲು ಯೋಜಿಸುತ್ತಿರುವ ಚಿತ್ರ,"ಹೌ ಐ ಮ್ಯಾರೀಡ್ ಜೆನ್ನಿಫರ್ ಲೋಪೆಜ:ದಿ JLo ಮತ್ತು ಒಜಾನಿ ನೊವಾ ಸ್ಟೋರಿ" ಮತ್ತು "ಹಿಂದೆ ನೋಡಿರದ ಹೋಂ ವಿಡಿಯೋ ಫೂಟೇಜ್‌ಗಳೂ ಇರಬಹುದೆಂದು"[೫೩][೫೪] ಆರೋಪಿಸಿ, ಚಿತ್ರವನ್ನು ತಡೆಯಬೇಕೆಂದು ಕೇಳಿದಳು. ನೊವಾ ಮತ್ತು ಆತನ ಏಜಂಟುದಾರ $100 ದಶ ಲಕ್ಷ ಅನ್ನು ಲೋಪೆಜ಼ಳ[೫೫] ವಿರುದ್ಧ ಮರುದಾವೆ ಹೂಡಬೇಕೆಂದು ಉದ್ದೇಶಿಸಿದರು. ಡಿಸೆಂಬರ್ 1, 2009ರಂದು ನ್ಯಾಯಾಧೀಶರರಾದ ಜೇಮ್ಸ್ ಚಾಲ್ಫಾಂಟ್ ತಾತ್ಕಾಲಿಕ ತಡೆಯಾಜ್ಞೆಯನ್ನು ನೊವಾ ಮತ್ತು ಆತನ ಏಜಂಟುದಾರ ಎಡ್ ಮೇಯರ್‌ಗೆ ವಿಧಿಸಿ ವೀಡಿಯೋ ಫೂಟೇಜ್‌ಗಳನ್ನು ಯಾವುದೇ ರೂಪ[೫೬] ದಲ್ಲಿ ಹಂಚಿಕೆ ಮಾಡಬಾರದೆಂದು ಆಜ್ಞಾಪಿಸಿದರು. ಈ ತಡೆಯಾಜ್ಞೆ ತಾತ್ಕಾಲಿಕವಾದುದ್ದರಿಂದ ನ್ಯಾಯಾಲಯಕ್ಕೆ ಮರಳಿ ಹೋಗಿ ಅದನ್ನು ಖಾಯಂ ತಡೆಯಾಜ್ಞೆಯನ್ನಾಗಿ ಪರಿವರ್ತಿಸಲು ಕೋರುವುದಾಗಿ ಲೋಪೆಜ಼ಳ ವಕೀಲ ಜೇಯ್ ಲೇವೆಲಿ ಹೇಳಿದರು. ಲೇವೆಲಿ ಒತ್ತಿ ಹೇಳೋದು, "ನೊವಾರ ಸ್ವಾಧೀನದಲ್ಲಿರುವುದು ಲೈಂಗಿಕತೆ ಹತ್ತಿರದ್ದೂ ಅಲ್ಲ", "ಅದು ಖಾಸಗಿ ಮತ್ತು ವೈಯಕ್ತಿಕವಷ್ಟೇ,ಅದು ಲೈಂಗಿಕ ಟೇಪ್ ಅಲ್ಲ. ಅವರು ಮುಗ್ಧರು ಮತ್ತು ಅವರನ್ನು ತಪ್ಪಾಗಿ ಪ್ರತಿನಿಧಿಸಲಾಗಿದೆ...ಮೌಲ್ಯವನ್ನು ಹೆಚ್ಚಿಸಲ್ಲಿಕ್ಕೆ ಮತ್ತು ಮಾಧ್ಯಮದ ಗಮನ[೫೬] ಸೆಳೆಯುವುದಕ್ಕೆ". ಹೀಯರಿಂಗ್ ಆದ ನಂತರ, ನೊವಾ E!ಗೆ ಹೇಳಿದ್ದು ನಾನು ತಡೆಯಾಜ್ಞೆ ವಿರುದ್ಧ ಹೋರಾಡುತ್ತೇನೆ:"ಅದು ಹಣದ ಬಗ್ಗೆ ಅಲ್ಲ,ಅದು ನನ್ನ ಬದುಕಿನ[೫೭] ಬಗ್ಗೆ".

ಲೋಪೆಜ ಮುಂದೆ ಎರಡೂವರೆ ವರ್ಷಗಳಷ್ಟು ಕಾಲ ಹಿಪ್-ಹಾಪ್‌ನ ದೊರೆ ಸೀಯಾನ್ ಕೊಂಬ್ಸ್ ಜೊತೆ ಸಂಬಂದ್ಧವಿರಿಸಿಕೊಂಡಿದ್ದಳು. 1999 ಡಿಸೆಂಬರ್ 27ರಂದು ಕೊಂಬ್ಸ್ ಮತ್ತು ಲೋಪೆಜ, ಮಿಡ್‌ಟೌನ್ ಮ್ಯಾನ್‌ಹಟ್ಟನ್ ನೈಟ್ ಕ್ಲಬಿನ ಕ್ಲಬ್ ನ್ಯೂ ಯಾರ್ಕ್‌ನಲ್ಲಿ ಇದ್ದಾಗ ಕೊಂಬ್ಸ್ ಸುತ್ತ-ಮುತ್ತಣದವರಿಗೂ ಮತ್ತು ಇನ್ನೊಂದು ಗುಂಪಿಗೂ ಗನ್‌ಫೈರ್ ಕಾಳಗವಾಯಿತು. ಲೋಪೆಜ ಮತ್ತು ಕೊಂಬ್ಸ್ ಅವರನ್ನು ಆ ದೃಶ್ಯದಿಂದ ಕಾರಿನಲ್ಲಿ ಪಾರು ಮಾಡಲಾಯಿತು ಆನಂತರ ಅವರನ್ನು ಪೊಲೀಸರು[೫೮] ಬೆನ್ನು ಹತ್ತಿ ಹಿಡಿದರು. ಅವರ ಕಾರಿನ ಮುಂಭಾಗದ ಸೀಟಿನಲ್ಲಿ ಗನ್ ಸಿಕ್ಕಿತು. ಕೊಂಬ್ಸ್ ಅವರನ್ನು ಉಗ್ರವಾದ ಗನ್ ಒಡೆತನದ ಆರೋಪ ಮಾಡಲಾಯಿತು. ಕೊಂಬ್ಸ್ ಅವರ ಮೇಲಿನ ಆರೋಕ್ಕಾಗಿ ನ್ಯಾಯಾಲಯದ ಓಡಾಟದ ಒತ್ತಡ ಮತ್ತು ಬೆಂಬತ್ತಿದ ಮಾಧ್ಯಮದವರು,ಇದರಿಂದ ಅವರ ಸಮಸ್ಯೆ ಬಹಳಷ್ಟು ಉಲ್ಬಣಗೊಂಡಿತು ಇದರಿಂದ ಲೋಪೆಜ ಒಂದು ವರ್ಷದ ತರುವಾಯ ಕೊಂಬ್ಸ್ ಅವರಿಂದ ದೂರವಾಗಲು ತೀರ್ಮಾನಿಸಿದಳು.2008ರಲ್ಲಿ ಸಂಬಂಧಿತ ಸಿವಿಲ್ ದಾವೆಯೊಂದರಲ್ಲಿ ಫಿರ್ಯಾದಿದಾರನ ವಕೀಲರು ಲೋಪೆಜ‌ಗೆ "ಈ ಕೇಸ್‌[೫೯] ಗೆ ನೆರವಾಗುವುದೇನು ಇಲ್ಲ" ಎಂದರು.

ಲೋಪೆಜ಼ಳ ಎರಡನೆಯ ಮದುವೆ ಬ್ಯಾಕ್ ಅಪ್ ಡ್ಯಾನ್ಸರ್ ,ಕ್ರಿಸ್ ಜುದ್ದ್ ಜೊತೆಗಾಯಿತು. ಮ್ಯುಸಿಕ್ ವೀಡಿಯೊದಲ್ಲಿ ಆಕೆ ಹಾಡಿದ ಏಕ ವ್ಯಕ್ತಿ ಹಾಡು "ಲವ್ ಡೋಂಟ್ ಕಾಸ್ಟ್ ಎ ಥಿಂಗ್" ಚಿತ್ರೀಕರಿಸುವಾಗ ಲೋಪೆಜ ಜುದ್ದ್‌ನನ್ನು ಭೇಟಿ ಮಾಡಿದಳು. ಇವರಿಬ್ಬರು L.A. ಸಬ್‌ಅರ್ಬ್ಸ್‌ನ ಮನೆಯೊಂದರಲ್ಲಿ ಸೆಪ್ಟೆಂಬರ್ 29, 2001ರಲ್ಲಿ ಮದುವೆಯಾದರು. ಅವರ ಮದುವೆ ಪರಿಣಾಮಕಾರಿಯಾಗಿ ಜೂನ್ 2002ಕ್ಕೆ ಮುಕ್ತಾಯವಾಗಲು ಕಾರಣ ಲೋಪೆಜ ಬೆನ್ ಅಫ್ಲೆಕ್[೬೦] ಜೊತೆ ಸಾರ್ವಜನಿಕವಾಗಿ ಡೇಟಿಂಗ್ ಮಾಡತೊಡಗಿದ್ದಾಗ. ಜನವರಿ 2003ರಲ್ಲಿ ಅಧಿಕೃತವಾಗಿ ಅವರಿಗೆ ವಿಚ್ಛೇದನವಾಯಿತು.

ವಿಚ್ಛೇದನದ ತರುವಾಯ ಲೋಪೆಜ ನಟ ಬೆನ್ ಅಫ್ಲೆಕ್ ಜೊತೆ ಡೇಟಿಂಗ್ ಶುರು ಮಾಡಿದಳು. ನಟ ಅಫ್ಲೆಕ್ ಜೊತೆಗಿನ ಅವಳ ನಂಟು ಹೆಚ್ಚು ಪ್ರಚಾರಕೊಳ ಪಟ್ಟಿತು,ಮಾಧ್ಯಮದವರು ಈ ಜೋಡಿಯನ್ನು "ಬೆನ್ನಿಫರ್" ಎಂದು ಅಡ್ಡ ಹೆಸರನಿಟ್ಟು ಕರೆದರು. ಅಫ್ಲೆಕ್ ಆರು-ಕ್ಯಾರೆಟ್ಟಿನ ನಸುಗೆಂಪಿನ ಸುಮಾರು $1.2 ದಶ ಲಕ್ಷ[೬೧] ಬೆಲೆ ಬಾಳುವ ಡೈಮಂಡ್ ಉಂಗುರವನ್ನು ನೀಡಿದಾಗ ನವೆಂಬರ್ 2002ರಲ್ಲಿ ತನ್ನ ಮತ್ತು ಅಫ್ಲಿಕ್‌ನ ಮದುವೆ ನಿಶ್ಚಿತಾರ್ಥ ಎಂದು ಲೋಪೆಜ ಘೋಶಿಸಿದಳು. ಮಾಧ್ಯಮದ ಸಂದರ್ಶಕರಿಗೆ ಲೋಪೆಜ ವಚನ ನೀಡುತ್ತಾ "ಅದೇ" ಅಫ್ಲಿಕ್ ಶೀಘ್ರವೇ ಅವರಿಬ್ಬರು ಕುಟುಂಬವಾಗುವುದಾಗಿ ಹೇಳುತ್ತಾಳೆ, ಸೆಪ್ಟೆಂಬರ್ 14, 2003ರಲ್ಲಿ ಮದುವೆ ಕ್ಯಾಲಿಫೋರ್ನಿಯಾದ ಸಾಂಟಾ ಬರ್ಬಾರಾದಲ್ಲಿ ಇಟ್ಟುಕೊಂಡಿದ್ದು ಕೇವಲ ಕೆಲವೇ ಘಂಟೆಗಳ ಹಿಂದಷ್ಟೇ ಮದುವೆ ನಿಲ್ಲಿಸಲಾಯಿತು. ತಮ್ಮ ನಿಶ್ಚಿತಾರ್ಥವನ್ನು ಕೊನೆಗಾಣಿಸುವುದಾಗಿ ಜನವರಿ 2004ರಲ್ಲಿ ಅವರು ಘೋಶಿಸಿದರು. ಅವರ ಸಂಬಂಧವನ್ನ ಅಣಕಿಸಲಾಯಿತು,ವಿಡಂಬನಾತ್ಮಕ ರಚನೆಯನ್ನು ಮಾಡಿದರು. ಸೌತ್ ಪಾರ್ಕ್ ಪ್ರಸಂಗ "ಫ್ಯಾಟ್ ಬಟ್ಟ್ ಮತ್ತು ಪ್ಯಾನ್‌ಕೇಕ್ ಹೆಡ್" ಏಪ್ರಿಲ್ 16, 2003ರಂದು ಪ್ರಸಾರವಾಯಿತು.ಅಫ್ಲೆಕ್ ಆನಂತರ ಜೆನ್ನಿಫರ್ ಗಾರ್ನರ್ ಅನ್ನು ಮದುವೆಯಾದನು. 2003ರಲ್ಲಿ ಲೋಪೆಜ ಮತ್ತು ಅಫ್ಲೆಕ್ "ಗಿಗ್ಲಿ" ಚಿತ್ರದಲ್ಲಿ ಮತ್ತು 2004ರಲ್ಲಿ "ಜೆರ್ಸಿ ಗರ್ಲ್" ಚಿತ್ರದಲ್ಲಿ ಜೊತೆಯಾಗಿ ನಟಿಸಿದರು.

Lopez and Marc Anthony at the 2006 Time 100 gala event.

ಅಫ್ಲಿಕ್ ಜೊತೆ ಮುರಿದುಕೊಂಡು ಎರಡು ತಿಂಗಳಿಗಿಂತ ಮುನ್ನವೇ ಲೋಪೆಜ ತನ್ನ ಬಹು ಕಾಲದ ಗೆಳೆಯ ಮತ್ತು ಮ್ಯುಸಿಕ್ ವೀಡಿಯೋಗಳಲ್ಲಿ ಸಹೋದ್ಯೋಗಿಯಾಗಿದ್ದ ಮಾರ್ಕ್ ಅಂತೋಣಿ ಜೊತೆಯಲ್ಲಿ ಕಾಣಿಸಿಕೊಂಡಳು. ಆತನ ಮೊದಲ ಮತ್ತು ಆಕೆಯ ಎರಡನೆಯ ಮದುವೆಗೆ ಮುನ್ನ,1990ರ ಉತ್ತಾರಾರ್ಧದಲ್ಲಿ ಅಲ್ಪಕಾಲಿಕವಾಗಿ ಡೇಟಿಂಗ್ ಮಾಡಿದ್ದರು. 2004ರ ಪೂರ್ವಾರ್ಧದಲ್ಲಿ ತಯಾರಾಗುತ್ತಿದ್ದ ಲೋಪೆಜ಼ಳ ಚಿತ್ರ ಶಲ್ ವಿ ಡ್ಯಾನ್ಸ್? ಗೆ, ಲೋಪೆಜ ಮತ್ತು ಅಂತೋಣಿ ಇಬ್ಬರೂ ಒಂದು ಯುಗಳ ಗೀತೆಯನ್ನು ಆಗ ಧ್ವನಿ ಮುದ್ರಿಸುತ್ತಿದ್ದರು. ಅಕ್ಟೋಬರ್ 2003ರಲ್ಲಿ ಅಂತೋಣಿ ತನ್ನ ಮೊದಲ ಪತ್ನಿ ಮತ್ತು ತನ್ನ ಎರಡು ಮಕ್ಕಳ ತಾಯಿ ಮಾಜಿ ಮಿಸ್ ಯುನಿವರ್ಸ್, ಡಯಾನಾರಾ ಟಾರೆಸ್ ಜೊತೆ ಎರಡನೆಯ ಬಾರಿ ಪ್ರತೇಕವಾದನು.ಟಾರೆಸ್ ಮೂರು ತಿಂಗಳ ನಂತರ ವಿಚ್ಛೇದನಕ್ಕೆ ಅರ್ಜಿ ಹಾಕಿಕೊಂಡಳು. ಜೂನ್ 5, 2004ರಂದು ಲೋಪೆಜ ಮತ್ತು ಅಂತೋಣಿ ಮನೆಯಲ್ಲೇ ಸದ್ದು-ಗದ್ದಲವಿಲ್ಲದೆ ಮದುವೆಯಾದರು, ನಾಲ್ಕು ದಿನಗಳ ತರುವಾಯ ಟಾರೆಸ್‌ನಿಂದ ವಿಚ್ಛೇದನ ಅಂತಿಮವಾಯಿತು. ಅವರ ಮದುವೆ ಸಮಾರಂಭ ಖಾಸಗಿಯಾಗಿ ಪ್ರಚಾರವಿಲ್ಲದೆ ನಡೆಯಿತು.

ಲೋಪೆಜ಼ಳ ಮನೆಗೆ ಅವಳ ಅತಿಥಿಗಳನ್ನು "ಅಪರಾಹ್ನ ಪಾರ‍್ಟಿಗೆ" ಅಹ್ವಾನಿಸಿದರು.ಆದರೆ ಯಾರಿಗೂ ತಾವು ಮದುವೆ ಮಾಡಿಕೊಳ್ಳುವುದಾಗಿ ಹೇಳಿರಲಿಲ್ಲ.

ಈ ಜೋಡಿಗಳು ಮದುವೆಗೆ ಮುನ್ನ ಅದರ ಬಗ್ಗೆ ಪ್ರಚಾರಪಡಿಸಬಾರದೆಂದು ಯೋಜಿಸಿದ್ದರು.ಹೆಚ್ಚು ಖಾಸಗಿಯಾಗಿ ಸಮಯದ ಒತ್ತಡವಿಲ್ಲದ ನಿರಾತಂಕ ವಾತಾವರಣ ಮೂಡಬೇಕೆಂಬುದಾಗಿತ್ತು. ಮದುವೆಯ ನಂತರ ನಡೆದ ಆದರೆ ಮದುವೆಗೆ ಮುನ್ನವೇ ನಿಗದಿಪಡಿಸಿದ್ದ ಹೊಸ ಆಲ್ಬಮ್ "ಅಮರ್ ಸಿನ್ ಮೆಂತಿರಾಸ್" (ಟು ಲೀವ್ ವಿದೌಟ್ ಲೈಸ್)[೬೨] ಪ್ರಚಾರಪಡಿಸುವ ಸಂದರ್ಶನಗಳಲ್ಲಿ ತನ್ನ ಮದುವೆಯ ಬಗ್ಗೆ ಅಭಿಪ್ರಾಯಗಳನ್ನು ಹೇಳಲು ನಿರಾಕರಿಸಿದನು. ಫೆಬ್ರವರಿ 2005ರಲ್ಲಿ ಲೋಪೆಜ ಮದುವೆಯನ್ನು ದೃಡಪಡಿಸಿ ಜೊತೆಗೆ ಹೇಳಿದಳು "ಎಲ್ಲರಿಗೂ ಗೊತ್ತಿರುವುದೇ ಅದೇನೂ ಗುಟ್ಟಲ್ಲ".[೬೩] ಕೆಲವು ತಿಂಗಳುಗಳ ಬಳಿಕ ಅಂತೋಣಿಯ ಮಗಳು ಏರಿಯಾನಾ ಲೋಪೆಜ಼ಳ ಮ್ಯುಸಿಕ ವೀಡಿಯೋ "ಗೆಟ್ ರೈಟ್"ನಲ್ಲಿ ಅವಳ ಪುಟ್ಟ ತಂಗಿಯಾಗಿ ಕೊನೆಯಲ್ಲಿ ಒಂದಿಷ್ಟು ಕಾಣಿಸಿಕೊಂಡಳು. ಮಾಧ್ಯಮದವರ ಜೊತೆ ಮದುವೆ ಮತ್ತು ಕೌಟಂಬಿಕ ವಿಚಾರವಾಗಿ ಅಂತೋಣಿ ಮನ ಬಿಚ್ಚಿ ಮಾತನಾಡುವುದಿಲ್ಲ ಮತ್ತು ಕೆಲ ಬಾರಿ ಸಮರ್ಥಿಸಿಕೊಳ್ಳುತ್ತಾನೆ ಕೂಡ,ಇದರಿಂದ ಲೋಪೆಜ಼ಳೂ ಪ್ರಭಾವಿತಳಾಗಿ ಸಂದರ್ಶಕರ ಜೊತೆ ಒಂದು ಸೀಮಾರೇಖೆ ಇಟ್ಟುಕೊಂಡೇ ಮಾತನಾಡುತ್ತಾಳೆ. ಡಿಸೆಂಬರ್ 29, 2008ರ ಡೈಲಿ ನ್ಯೂಸ್‌ ನಲ್ಲಿ, ಲೋಪೆಜ ಮತ್ತು ಅಂತೋಣಿ ವಿಚ್ಛೇದನದ ಯೋಜನೆಯಲ್ಲಿದ್ದಾರೆ ಎಂದೂ ಅದನ್ನು ವ್ಯಾಲೆಂಟೈನ್ಸ್ ಡೇ[೬೪] ದಿನದಂದು ಘೋಶಿಸುತ್ತಾರೆ ಎಂದು ಬರೆಯಲಾಗಿತ್ತು. "ಆ ಲೇಖನದ ವಿಚಾರದಲ್ಲಿ ಮಹತ್ವವಿಲ್ಲ"[೬೫] ಎಂದು ಲೋಪೆಜ ಹೇಳಿಕೆ ನೀಡಿದ್ದರಿಂದ ಆರೋಪವು ತಣ್ಣಗಾಯಿತು.

ಮಾನವ ಹಕ್ಕುಗಳ ವಕಾಲತ್ತು

ಫೆಬ್ರವರಿ 14, 2007ರಂದು ಲೋಪೆಜ ಆರ್ಟಿಸ್ಟ್ಸ್ ಫಾರ್ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಅವಾರ್ಡ್ "ಇನ್ ರೆಕಗ್ನಿಷನ್ ಆಫ್ ಹರ್ ವರ್ಕ್ ಆಸ್ ಪ್ರೊಡ್ಯೂಸರ್ ಆಂಡ್ ಸ್ಟಾರ್ ಆಫ್ ಬಾರ್ಡರ್‌ಟೌನ್ ,ಎ ಫಿಲ್ಮ್ ಎಕ್ಸ್ಪೋಸಿಂಗ್ ದಿ ಆನ್‌ಗೋಯಿಂಗ್ ಮರ್ಡರ್ಸ್ ಆಫ್ ಹಂಡ್ರೆಡ್ಸ್ ಆಫ್ ವುಮೆನ್ ಇನ್ ದಿ ಬಾರ್ಡರ್ ಸಿಟಿ ಆಫ್ ಜ್ಯುಆರೆಜ್, ಮೆಕ್ಸಿಕೋ" ನೋಬೆಲ್ ಪೀಸ್ ಪ್ರೈಜ್ ವಿಜೇತ ಜೋಸ್ ರಾಮೋಸ್-ಹೊರ್ಟ ಪ್ರಶಸ್ತಿಯನ್ನು ಬರ್ಲಿನ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಲೋಪೆಜ಼ಳಿಗೆ ಕೊಟ್ಟರು. ನ್ಯುಎಸ್ಟ್ರಾಸ್ ಹಿಜಾಸ್ ಡೆ ರೆಗ್ರೆಸೊ ಅ ಕ್ಯಾಸಾ A.C.ದ ಸಹ ಸ್ಥಾಪಕರಾದ ನೊರ್ಮಾ ಆಂಡ್ರೇಡ್ ಅವರಿಂದ ಧನ್ಯವಾದಗಳನ್ನು ಮತ್ತು ವಿಶೇಷ ಗಣನೆಯನ್ನು ಪಡೆದರು ಲೋಪೆಜ.("ಮೇ ಅವರ್ ಡಾಟರ್ಸ್ ರಿಟರ್ನ್ ಹೋಂ,ಸಿವಿಲ್ ಅಸೋಸಿಯೇಶನ್"), ಇದೊಂದು ಜ್ಯುಎರಸ್‌ನಲ್ಲಿ ಕೊಲ್ಲಲ್ಪಟ್ಟ ಹೆಣ್ಣು ಮಕ್ಕಳ ತಾಯಂದಿರು ಮತ್ತು ಕುಟುಂಬದವರ ಸಂಘಟನೆ, ಮರ್ಡರ್ಡ್ ವುಮೆನ್ ಆಫ್ ಜ್ಯುಎರಸ್‌.

ವ್ಯಾಕ್ಸೀನ್ ವಕಾಲತ್ತು

ನಾಯಿಕೆಮ್ಮಿಗೆ[೬೬] ವ್ಯಾಕ್ಸಿನೇಷನಿನ ಪ್ರಚಾರ ಕಾರ್ಯದಲ್ಲೂ ಲೋಪೆಜ ತೊಡಗಿಸಿಕೊಂಡಳು. ನಾಯಿಕೆಮ್ಮಿನ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಿ ಶಿಶು[೬೬][೬೭] ಗಳಿಗೆ ವ್ಯಾಕ್ಸಿನೇಷನ್ ಅನ್ನು ಪ್ರೋತ್ಸಾಹಿಸಿಲು,ಲೋಪೆಜ ಪೆರ್ಟುಸಿಸಿನ ಧ್ವನಿ ಮತ್ತು ಮಾರ್ಚ್ ಆಫ್ ಡೈಮ್ಸ್ ಕೆಲಸ ಮಾಡಿದಳು.

ಧ್ವನಿಮುದ್ರಿಕೆ ಪಟ್ಟಿ

ಪ್ರಥಮ ಸ್ಥಾನದಲ್ಲಿರುವ ಏಕ ವ್ಯಕ್ತಿ ಹಾಡಿದ ಹಾಡು

ವರ್ಷಏಕಅತ್ಯುನ್ನತ ಸ್ಥಾನ[೬೮][೬೯][೭೦]
USUKCANAUS
1999"ಇಫ್ ಯು ಹ್ಯಾಡ್ ಮೈ ಲವ್"1411
2001"ಲವ್ ಡೋಂಟ್ ಕಾಸ್ಟ್ ಎ ಥಿಂಗ್"3114
"ಐಯಾಮ್ ರೀಯಲ್"/"ಐಯಾಮ್ ರೀಯಲ್" (ಮರ್ಡರ್ ರೀಮಿಕ್ಸ್)" (ಒಳಗೊಂಡಂತೆ0}ಜಾ ರೂಲ್)1463
2002"ಐಂಟ್ ಇಟ್ ಫನ್ನಿ(ಮರ್ಡರ್ ರೀಮಿಕ್ಸ್)" (ಜಾ ರೂಲ್ ಮತ್ತು ಕ್ಯಾಡಿಲ್ಲಾಕ್ ಟಾಹ್ ಒಳಗೊಂಡಿರುವುದು)14129
"ಜೆನ್ನಿ ಫ್ರಮ್ ದಿ ಬ್ಲಾಕ್" (ಒಳಗೊಂಡಿರುವುದು ಸ್ಟೈಲ್ಸ್ Pಮತ್ತು ಜಡಾಕಿಸ್)3315
2003"ಆಲ್ ಐ ಹ್ಯಾವ್" (ಒಳಗೊಂಡಿರುವುದುಎಲ್ಎಲ್ ಕೂಲ್ ಜೆ)1262
2005."ಗೆಟ್ ರೈಟ್"12133
ಒಟ್ಟುಪ್ರಥಮ ಶ್ರೇಣಿಯ ಹಿಟ್ಸ್4231

ಪ್ರಶಸ್ತಿಗಳು

ಚಲನಚಿತ್ರಗಳ ಪಟ್ಟಿ

ನಟಿ

ವರ್ಷಸಿನಿಮಾಪಾತ್ರಟಿಪ್ಪಣಿಗಳು
1987ಮೈ ಲಿಟಲ್ ಗರ್ಲ್ಮೈರಾ
1993Nurses on the Line: The Crash of Flight 7ರೋಸೀ ರೋಮೆರೋ
(1995)ಮೈ ಫ್ಯಾಮಿಲಿ/ಮಿ ಫ್ಯಾಮಿಲಿಯಾಮಾರಿಯಾ ಸ್ಯಾಂಕೆಜ್ನಾಮ ನಿರ್ದೇಶಿತವಾದದ್ದು – ಇಂಡಿಪೆಂಡೆಂಟ್ ಸ್ಪಿರಿಟ್ ಅವಾರ್ಡ್ ಫಾರ್ ಬೆಸ್ಟ್ ಸಪೋರ್ಟಿಂಗ್ ಫೆಮೇಲ್
ಮನಿ ಟ್ರೇನ್ಗ್ರೇಸ್ ಸ್ಯಾಂಟಿಯಾಗೋ
1996ಜ್ಯಾಕ್ಮಿಸ್ ಮಾಕ್ಯುಜ್
1997ಬ್ಲಡ್ ಆಂಡ್ ವೈನ್"ಗೆಬ್ರೀಲಾ "ಗ್ಯಾಬಿ"
ಸೆಲೀನಾಸೆಲೀನಾ ಕ್ವಿಂಟಾನಿಲ್ಲಾ-ಪೆರೆಜ್ALMA ಅವಾರ್ಡ್ ಫಾರ್ ಔಟ್‌ಸ್ಟಾಂಡಿಂಗ್ ಆಕ್ಟ್ರೆಸ್
ಲೋನ್ ಸ್ಟಾರ್ ಫಿಲ್ಮ್ ಮತ್ತು ಟೆಲಿವಿಶನ್ ಅವಾರ್ಡ್ಸ್:ಬೆಸ್ಟ್ ಆಕ್ಟ್ರ‍ೆಸ್
ಇಮೇಜಿನ್ ಫೌಂಡೇಶನ್ ಅವಾರ್ಡ್ಸ್:ಲಾಸ್ಟಿಂಗ್ ಇಮೇಜ್ ಅವಾರ್ಡ್
ನಾಮಿನೇಟೆಡ್ – MTV ಮೂವೀ ಅವಾರ್ಡ್ಸ್ ಫಾರ್ ಬ್ರೇಕ್‌ಥ್ರೂ ಪರ್ಫಾಮೆನ್ಸ್
ನಾಮಿನೇಟೆಡ್ – ಗೋಳ್ಡನ್ ಗ್ಲೋಬ್ ಅವಾರ್ಡ್ಸ್‌ಫಾರ್ ಬೆಸ್ಟ್ ಪರ್ಫಾಮೆನ್ಸ್ ಬೈ ಆನ್ ಆಕ್ಟ್ರೆಸ್ ಇನ್ ಎ ಮೋಷನ್ ಪಿಕ್ಚರ್-ಮ್ಯುಸಿಕಲ್ ಆರ್ ಕಾಮಿಡಿ
ಅನಾಕೊಂಡಟೆರ್ರಿ ಫ್ಲೋರ್ಸ್ನಾಮನಿರ್ದೇಶಿತ — ಸ್ಯಾಟರ್ನ್‌ ಅವಾರ್ಡ್‌ (ಅತ್ಯುತ್ತಮ ನಟಿ)
ಯು ಟರ್ನ್ಗ್ರೇಸ್ ಮ್ಯಾಕ್‌ಕೆನ್ನಾ
1998ಔಟ್ ಆಫ್ ಸೈಟ್ಕರೇನ್ ಸಿಸ್ಕೋALMA ಅವಾರ್ಡ್ ಫಾರ್ ಔಟಸ್ಟಾಂಡಿಂಗ್ ಆಕ್ಟ್ರೆಸ್
ನಾಮನಿರ್ದೇಶನ - MTV ಮೂವ್ಹೀ ಅವಾರ್ಡ್ ಫಾರ್ ಬೆಸ್ಟ್ ಫೀಮೇಲ್ ಪರ್ಫಾರ್ಮನ್ಸ್
ನಾಮನಿರ್ದೇಶಿತ – MTV ಮೂವ್ಹಿ ಅವಾರ್ಡ್ ಫಾರ್ ಬೆಸ್ಟ್ ಕಿಸ್ ಶೇರ್ಡ್ ವಿದ್ ಜಾರ್ಜ್ ಕ್ಲೂನೇಯ್
ನಾಮನಿರ್ದೇಶಿತ – ಎಂಪೈರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್
ಅಂಟ್ಜ್ಅಜ್ಟೀಕಾ
2000ದಿ ಸೆಲ್ ಕ್ಯಾಥರೀನ್ ಡೀನ್ನಾಮನಿರ್ದೇಶಿತ — ಸ್ಯಾಟರ್ನ್‌ ಅವಾರ್ಡ್‌ (ಅತ್ಯುತ್ತಮ ನಟಿ)
ನಾಮನಿರ್ದೇಶನ - MTV ಮೂವ್ಹೀ ಅವಾರ್ಡ್ ಫಾರ್ ಬೆಸ್ಟ್ ಪೀಮೇಲ್ ಪರ್ಫಾರ್ಮನ್ಸ್
2001ದಿ ವೆಡ್ದಿಂಗ್ ಪ್ಲಾನರ್ಮೇರಿ ಫಿಯೊರೆ
ಏಂಜಲ್ ಐಯ್ಸ್ಶೆರಾನ್ ಪೋಗ್ನಾಮನಿರ್ದೇಶಿತ – ಆಲ್ಮಾ ಅವಾರ್ಡ್ ಫಾರ್ ಔಟ್‌ಸ್ಟಾಂಡಿಂಗ್ ಆಕ್ಟ್ರ‍ೆಸ್ ಇನ್ ಎ ಮೋಷನ್ ಪಿಕ್ಛರ್
2002ಎನ್ನಫ್ಸ್ಲಿಮ್ ಹಿಲ್ಲರ್
ಮೇಯ್ಡ್ ಇನ್ ಮ್ಯಾನ್ ಹಟ್ಟನ್ಮಾರಿಸಾ ವೆಂಚ್ಯುರಾನಾಮನಿರ್ದೇಶಿತ NAACP ಇಮೇಜ್ ಅವಾರ್ಡ್ ಫಾರ್ ಔಟ್ ಸ್ಟಾಂಡಿಂಗ್ ಆಕ್ಟ್ರ‍ೆಸ್ ಇನ್ ಎ ಮೋಷನ್ ಪಿಕ್ಚರ್
2003ಗಿಗ್ಲಿರಿಕ್ಕಿ
2004ಜೆರ್ಸಿ ಗರ್ಲ್ಗೆರ್ಟ್ರೂಡ್ ಸ್ಟೇಯ್ನಿ
ಶಲ್ ವಿ ಡ್ಯಾನ್ಸ್?ಪೌಲೀನಾ
2005.ಮಾನ್ಸಟರ್-ಇನ್-ಲಾಚಾರ್‌ಲೊಟ್ಟೆ "ಚಾರ್ಲೀ" ಕ್ಯಾಂಟಿಲಿನಿ
ಆನ್ ಅನ್ಫಿನಶ್ಡ ಲೈಫ್ಜೀನ್ ಜಿಲ್ಕಿಸನ್
2007ಬಾರ್ಡರ್‌ಟೌನ್ಲಾರೆನ್ ಅಡ್ರಿಯಾನ್ಗೆಲುವು: ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಅವರ ಪ್ರಶಸ್ತಿ, "ಆರ್ಟಿಸ್ಟ್ಸ್ ಫಾರ್ ಅಮ್ನೆಸ್ಟಿ", ಲೋಪೆಜ ಇದನ್ನು ಬರ್ಲಿನ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸ್ವೀಕರಿಸಿದಳು. "ಎಕ್ಸಾಮಿನಿಂಗ್ ದಿ ಆನ್‌ಗೋಯಿಂಗ್ ಮರ್ಡರ್ಸ್ ಆಫ್ ಹಂಡ್ರೆಡ್ಸ್ ಆಫ್ ವುಮೆನ್ ಇನ್ ಎ ಮೆಕ್ಸಿಕನ್ ಬಾರ್ಡರ್ ಟೌನ್" ಎನ್ನುವ ಚಿತ್ರವನ್ನು ನಿರ್ಮಿಸಿ ಮತ್ತು ಅದರಲ್ಲಿ ಪಾತ್ರವೊಂದನ್ನು ನಿರ್ವಹಿಸಿದ್ದಕ್ಕೂ ಈ ಪ್ರಶಸ್ತಿ ಲಭ್ಯವಾಯಿತು. ನಾಮನಿರ್ದೇಶನಗಳು:ಬರ್ಲಿನ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್:ಗೋಳ್ಡನ್ ಬರ್ಲಿನ್ ಬೇರ್;ಗ್ರೆಗೋರಿ ನವಾ;2007.
ಎಲ್ ಕ್ಯಾಂಟಂಟೆಪುಚಿನಾಮ ನಿರ್ದೇಶನ-ಅಲ್ಮ ಅವಾರ್ಡ್ ಫಾರ್ ಔಟ್ ಸ್ಟಾಂಡಿಂಗ್ ಪರ್‌ಫಾಮೆನ್ಸ್ ಆಫ್ ಎ ಲೀಡ್ ಲ್ಯಾಟಿನೊ/ಎ ಕ್ಯಾಸ್ಟ್ ಇನ್ ಎ ಮೋಶನ್ ಪಿಕ್ಚರ್


ನಾಮನಿರ್ದೇಶನ – ಪ್ರೀಮಿಯೋಸ್ ಫಾರ್ ಬೆಸ್ಟ್ ಆಕ್ಟ್ರೆಸ್

ಫೀಲ್ ದಿ ನಾಯ್ಸ್ಹರ್ಸೆಲ್ಫ್ (ಕೇಮಿಯೊ)
2010ದಿ ಬ್ಯಾಕ್-ಅಪ್ ಪ್ಲಾನ್ಜೋಯ್ನಿರ್ಮಾಣ-ನಂತರದ ಹಂತ
ದಿ ಗವರ್ನೆಸ್ [೭೧][೭೨]ಟಿಬಿಎನಿರ್ಮಾಣ-ಮುಂಚಿನ ಹಂತ
ಡೆಡ್ ಸೀರಿಯಸ್ [೭೩]ಟಿಬಿಎನಿರ್ಮಾಣದ ಮುನ್ನ ಸ್ಟಾರ್ರಿಂಗ್ ಮಾರ್ಟಿನ್ ಲಾಂಡಾವ್
ದೂರದರ್ಶನ
ವರ್ಷಶೀರ್ಷಿಕೆಪಾತ್ರಟಿಪ್ಪಣಿಗಳು
1991-1993ಇನ್ ಲಿವಿಂಗ್ ಕಲರ್"ಫ್ಲೈ ಗರ್ಲ್"16 ಕಂತುಗಳು
1993-1994ಸೆಕೆಂಡ್ ಚಾನ್ಸ್‌ಸಮೆಲಿಂಡಾ ಲೋಪೆಜ6 ಪ್ರಸಂಗಳು
1994ಸೌತ್ ಸೆಂಟ್ರಲ್ಲ್ಯುಸಿಲ್ಲೆ1 ಪ್ರಸಂಗಳು
ಹೋಟೆಲ್ ಮಾಲಿಬುಮೆಲ್ಲಿಂಡಾ ಲೋಪೆಜ1 ಪ್ರಸಂಗ
2004ವಿಲ್ & ಗ್ರೇಸ್ಆಕೆ3 ಪ್ರಸಂಗಳು

ನಿರ್ಮಾಪಕ

ವರ್ಷಸಿನಿಮಾಟಿಪ್ಪಣಿಗಳು
2000ಜಿನ್ನಿಫರ್ ಲೋಪೆಜ:ಫೀಲಿನ್’ ಸೋ ಗುಡ್ದೂರದರ್ಶನ,ಕಾರ್ಯಕಾರಿ ನಿರ್ಮಾಪಕಿ
2001ಸಂಗೀತದ ಕಛೇರಿಯಲ್ಲಿ ಜೆನ್ನಿಫರ್ ಲೋಪೆದ್ದೂರದರ್ಶನ,ಕಾರ್ಯಕಾರಿ ನಿರ್ಮಾಪಕಿ
2006ಸೌತ್ ಬೀಚ್ದೂರದರ್ಶನದ ಸರಣಿ ಕಂತು: {0ಎವರಿ ಡೇ ಅಬೌವ್ ಗ್ರೌಂಡ್ ಇಸ್ ಎ ಗುಡ್ ಡೇ}0}; ಕಾರ್ಯಕಾರಿ ನಿರ್ಮಾಪಕಿ
ಎಲ್ ಕ್ಯಾಂಟಂಟೆಚಲನಚಿತ್ರ ನಿರ್ಮಾಪಕರು
2007ಡ್ಯಾನ್ಸ್ ಲೈಫ್TV ಧಾರಾವಾಹಿಗಳು (ಅನ್ ನೋನ್ ಪ್ರಸಂಗಳು); ಕಾರ್ಯಕಾರಿ ನಿರ್ಮಾಪಕರು
ಫೀಲ್ ದಿ ನಾಯ್ಸ್ಚಲನಚಿತ್ರ ನಿರ್ಮಾಪಕರು
ಕೊಮೊ ಅಮಾ ಉನಾ ಮುಜರ್TV ಮಿನಿ ಧಾರಾವಾಹಿಗಳು; ಕಾರ್ಯಕಾರಿ ನಿರ್ಮಾಪಕರು
2009ಮೇಯ್ಡ್ ಇನ್ ಮ್ಯಾನ್‌ಹಟ್ಟನ್ಘೋಶಿತವಾಗಿದೆ;[೭೪] ಕಾರ್ಯಕಾರಿ ನಿರ್ಮಾಪಕರು

ಉಲ್ಲೇಖಗಳು

ಬಾಹ್ಯ ಕೊಂಡಿಗಳು

  1. REDIRECT Template:Jennifer Lopez songs