ಜೋಸ್ ಎಚೆಗಾರೆ

ಜೋಸ್ ಎಚೆಗಾರೆ(ಎಪ್ರಿಲ್ 19, 1832 – ಸೆಪ್ಟೆಂಬರ್ 14, 1916) ೧೯೦೪ನೆಯ ಸಾಲಿನ ಸಾಹಿತ್ಯನೋಬೆಲ್ ಪ್ರಶಸ್ತಿಗಳಿಸಿದ ನಾಟಕಕಾರ.ಇವರು ಸ್ಪೇನ್ ದೇಶದವರು. ಇವರು ನಾಟಕಕಾರರಲ್ಲದೆ ಒಬ್ಬ ವಾಸ್ತುಶಿಲ್ಪಿ, ಗಣಿತಜ್ಞ,ರಾಜನೀತಿತಜ್ಞ ಕೂಡಾ ಆಗಿದ್ದು ಬಹುಮುಖಿ ಪ್ರತಿಭಾವಂತ.ಇವರಿಗೆ ನಾಟಕಕಾರನಾಗಿ ತನ್ನ ಕೃತಿಗಳ ಮೂಲಕ ಸ್ಪೇನ್ ದೇಶದ ರಂಗಭೂಮಿಯನ್ನು ಉನ್ನತ ಸ್ಥಾನಕ್ಕೆ ಏರಿಸಿದ ಸಾಧನೆಗೆ ನೋಬೆಲ್ ಪಾರಿತೋಷಕವನ್ನು ನೀಡಲಾಯಿತು.

ಜೋಸ್ ಎಚೆಗಾರೆ
ಜನನ(೧೮೩೨-೦೪-೧೯)೧೯ ಏಪ್ರಿಲ್ ೧೮೩೨
ಮ್ಯಾಡ್ರಿಡ್, ಸ್ಪೇನ್
ಮರಣSeptember 14, 1916(1916-09-14) (aged 84)
ಮ್ಯಾಡ್ರಿಡ್, ಸ್ಪೇನ್
ವೃತ್ತಿನಾಟಕಕಾರ, ವಾಸ್ತುಶಿಲ್ಪ and ಗಣಿತಜ್ಞ
ರಾಷ್ಟ್ರೀಯತೆಸ್ಪಾನಿಷ್
ಪ್ರಕಾರ/ಶೈಲಿನಾಟಕ
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1904

ಬಾಲ್ಯ

ಜೋಸ್ ಡಿ ಎಚೆಗಾರೆ ವಿದ್ವಾಂಸರ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಗ್ರೀಕ್ ಪ್ರಾಧ್ಯಾಪಕರಾಗಿದ್ದರು.ಎಚೆಗಾರೆ ಅರ್ಥಶಾಸ್ತ್ರದಲ್ಲಿ ಪದವಿಯ ಜೊತೆಗೆ ಎಂಜಿನಿಯರಿಂಗ್ ಪದವಿಯನ್ನು ಕೂಡಾ ಪಡೆದವರು.[೧]

ಸರಕಾರಿ ಸೇವೆ

ಎಚೆಗಾರೆ ಮುಂದೆ ತಮ್ಮ ಜೀವನದಲ್ಲಿ ರಾಜಕೀಯವನ್ನು ಪ್ರವೇಶಿಸಿ ಅಲ್ಲಿ ವಿವಿಧ ಹುದ್ದೆಗಳಲ್ಲಿದ್ದು ಆ ದೇಶದ ಹಣಕಾಸು ಮತ್ತು ಲೋಕೋಪಯೋಗಿ ಖಾತೆ ಸಚಿವರಾಗಿದ್ದರು.[೧]

ಸಾಹಿತ್ಯ

ಇವರಿಗೆ ೧೯೦೪ನೆಯ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ಕೊಡಲಾಯಿತು. ಇದು ಸ್ಪೇನ್ ದೇಶಕ್ಕೆ ದೊರೆತ ಮೊದಲ ನೋಬೆಲ್ ಪ್ರಶಸ್ತಿಯಾಗಿ ದಾಖಲಾಗಿದೆ.ಇದರ ಪ್ರಸಿದ್ಧ ನಾಟಕ ಎಲ್ ಗ್ರಾನ್ ಗಲೋಟೊ(El gran Galeoto)೧೯ನೆಯ ಶತಮಾನದ ಭಾವಾತಿರೇಖದ ಶೈಲಿಯಲ್ಲಿ ಬರೆಯಲ್ಪಟ್ಟಿದೆ.ಇದನ್ನು ಪಾರಮೌಂಟ್ ಪಿಕ್ಚರ್ಸ್ ಸಂಸ್ಥಯವರು ಮೂಕಿ ಚಿತ್ರವನ್ನಾಗಿ ಚಲನಚಿತ್ರಕ್ಕೆ ತಂದರು. ಚಿತ್ರದ ಹೆಸರು ದಿ ವರ್ಲ್ದ್ ಅಂಡ್ ಹಿಸ್ ವೈಫ್. ಇವರ ಪ್ರಸಿದ್ಧ ಕೃತಿಗಳಲ್ಲಿ ೧೮೯೨ ರ ಮರಿಯಾನ,೧೮೯೫ರಲ್ಲಿ ರಚಿಸಿದ ಎಲ್ ಎಸ್ಟಿಗ್ಮಾ,೧೯೦೦ರಲ್ಲಿ ರಚಿಸಿದ ಎಲ್ ಲೊಕೊ ಡಿಯೋಸ್ ಸೇರಿದೆ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು