ದಂತಕಥೆ

ದಂತಕಥೆಯು ಜನಪದ ಸಾಹಿತ್ಯದ ಪ್ರಕಾರವಾಗಿದ್ದು ಮಾನವ ಇತಿಹಾಸದಲ್ಲಿ ನಡೆದದ್ದೆಂದು ಹೇಳುವವನು ಹಾಗೂ ಕೇಳುಗರಿಬ್ಬರಿಂದಲೂ ಗ್ರಹಿಸಲಾದ ಅಥವಾ ನಂಬಲಾದ ಮಾನವ ಕ್ರಿಯೆಗಳು ಇರುವ ಕಥೆಯನ್ನು ಹೊಂದಿರುತ್ತದೆ. ಈ ಪ್ರಕಾರದಲ್ಲಿನ ಕಥೆಗಳು ಮಾನವೀಯ ಮೌಲ್ಯಗಳನ್ನು ತೋರ್ಪಡಿಸಬಹುದು, ಮತ್ತು ಕಥೆಗೆ ಸತ್ಯಾಭಾಸವನ್ನು ನೀಡುವ ನಿರ್ದಿಷ್ಟ ಗುಣಗಳನ್ನು ಹೊಂದಿರಬಹುದು. ತನ್ನ ಸಕ್ರಿಯ ಹಾಗೂ ನಿಷ್ಕ್ರಿಯ ಭಾಗಿಗಳಿಗೆ ದಂತಕಥೆಯು "ಸಾಧ್ಯತೆ"ಯ ಲೋಕದಾಚೆಗಿರುವ ಘಟನೆಗಳನ್ನು ಒಳಗೊಂಡಿರುವುದಿಲ್ಲ, ಆದರೆ ಪವಾಡಗಳನ್ನು ಒಳಗೊಂಡಿರಬಹುದು. ಅವುಗಳನ್ನು ತಾಜಾ, ಮಹತ್ವವುಳ್ಳ ಹಾಗೂ ವಾಸ್ತವಿಕವಾಗಿಡಲು ಕಾಲಾಂತರದಲ್ಲಿ ದಂತಕಥೆಗಳು ರೂಪಾಂತರಗೊಳ್ಳಬಹುದು. ಅನೇಕ ದಂತಕಥೆಗಳು ಅನಿಶ್ಚಿತತೆಯ ಲೋಕದೊಳಗೆ ಕಾರ್ಯನಿರ್ವಹಿಸುತ್ತವೆ. ಭಾಗಿಗಳು ಇವನ್ನು ಎಂದೂ ಸಂಪೂರ್ಣವಾಗಿ ನಂಬುವುದಿಲ್ಲ, ಆದರೆ ಇವನ್ನು ಎಂದೂ ದೃಢನಿಶ್ಚಯದಿಂದ ಸಂದೇಹಿಸುವುದಿಲ್ಲ.[೧]

ಗ್ರಿಮ್ ಸಹೋದರರು ದಂತಕಥೆಯನ್ನು ಐತಿಹಾಸಿಕ ಆಧಾರವಿರುವ ಜಾನಪದ ಕಥೆಯೆಂದು ವ್ಯಾಖ್ಯಾನಿಸಿದರು.[೨]

ಉಲ್ಲೇಖಗಳು