ದಾರ್ಜೀಲಿಂಗ್ ಪರ್ವತ ರೈಲುಮಾರ್ಗ
ದಾರ್ಜೀಲಿಂಗ್ ಪರ್ವತ ರೈಲುಮಾರ್ಗ ಭಾರತದ ಪಶ್ಚಿಮ ಬಂಗಾಳ ರಾಜ್ಯದ ಸಿಲಿಗುರಿಯಿಂದ ದಾರ್ಜೀಲಿಂಗ್ ಪಟ್ಟಣಕ್ಕೆ ಹಾಸಲಾಗಿರುವ ನ್ಯಾರೋ ಗೇಜ್ ರೈಲುಮಾರ್ಗವಾಗಿದೆ. ಈ ಮಾರ್ಗದ ಹಳಿಗಳ ನಡುವಿನ ಅಂತರ ಕೇವಲ ಎರಡು ಅಡಿಗಳಿದ್ದು ಇದರ ಮೇಲೆ ಸಾಗುವ ರೈಲನ್ನು ಆಟಿಗೆ ರೈಲು ಎಂದು ಸಹ ಕರೆಯಲಾಗುತ್ತದೆ. ದಾರ್ಜೀಲಿಂಗ್ ಪರ್ವತ ರೈಲುಮಾರ್ಗವನ್ನು ೧೮೭೯ ರಿಂದ ೧೮೮೧ರ ಮಧ್ಯೆ ನಿರ್ಮಿಸಲಾಯಿತು. ಸರಾಸರಿ ಸಮುದ್ರಮಟ್ಟದಿಂದ ೧೦೦ ಮೀಟರ್ ಎತ್ತರದಲ್ಲಿರುವ ಸಿಲಿಗುರಿಯಿಂದ ಹೊರಡುವ ಈ ಮಾರ್ಗವು ೨೨೦೦ ಮೀಟರ್ ಎತ್ತರದಲ್ಲಿರುವ ದಾರ್ಜೀಲಿಂಗ್ಗೆ ಸಾಗುತ್ತದೆ. ಇಂದು ಸಹ ಈ ಮಾರ್ಗದಲ್ಲಿ ಉಗಿ ಇಂಜಿನ್ಗಳನ್ನು ಬಳಸಲಾಗುತ್ತದೆ. ಅಂಚೆ ಸಾಗಿಸುವ ರೈಲಿಗೆ ಮಾತ್ರ ಡೀಸೆಲ್ ಇಂಜಿನ್ ಅಳವಡಿಸಲಾಗಿದೆ. ೧೯೯೯ರಲ್ಲಿ ಯುನೆಸ್ಕೋ ದಾರ್ಜೀಲಿಂಗ್ ಪರ್ವತ ರೈಲುಮಾರ್ಗವನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತು. ಮುಂದೆ ೨೦೦೫ರಲ್ಲಿ ನೀಲಗಿರಿ ಪರ್ವತ ರೈಲುಮಾರ್ಗವನ್ನು ಸಹ ಈ ಮೂಲ ಘೋಷಣೆಗೆ ಹೆಚ್ಚುವರಿಯಾಗಿ ಸೇರಿಸಲಾಯಿತು.
ಭಾರತದ ಪರ್ವತ ರೈಲುಮಾರ್ಗಗಳು* | |
---|---|
UNESCO ವಿಶ್ವ ಪರಂಪರೆಯ ತಾಣ | |
ರಾಷ್ಟ್ರ | ಭಾರತ |
ತಾಣದ ವರ್ಗ | ಸಾಂಸ್ಕೃತಿಕ |
ಆಯ್ಕೆಯ ಮಾನದಂಡಗಳು | ii, iv |
ಆಕರ | 944ter |
ವಲಯ** | ಏಷ್ಯಾ-ಪೆಸಿಫಿಕ್ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 1999 (23ನೆಯ ಅಧಿವೇಶನ) |
ವಿಸ್ತರಣೆ | 2005, 2008 |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
ಇವನ್ನೂ ನೋಡಿ
ಬಾಹ್ಯ ಸಂಪರ್ಕಗಳು
- ಅಧಿಕೃತ ಮಾಹಿತಿತಾಣ Archived 2007-02-28 ವೇಬ್ಯಾಕ್ ಮೆಷಿನ್ ನಲ್ಲಿ.
- ಭಾರತೀಯ ರೈಲ್ವೇಯ ಅಧಿಕೃತ ತಾಣ
- ದಾರ್ಜೀಲಿಂಗ್ ಮತ್ತು ಆಟಿಗೆ ರೈಲಿನ ಚಿತ್ರಗಳು Archived 2009-01-06 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಶ್ವದಲ್ಲಿ ಇನ್ನೂ ಕಾರ್ಯನಿರತವಾಗಿರುವ ಉಗಿ ಇಂಜಿನ್ಗಳ ಬಗ್ಗೆ ಮಾಹಿತಿ Archived 2007-06-09 ವೇಬ್ಯಾಕ್ ಮೆಷಿನ್ ನಲ್ಲಿ.
- ದಾರ್ಜೀಲಿಂಗ್ ಪರ್ವತ ರೈಲಿನ ವೇಳಾಪಟ್ಟಿ
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ