ನವಾಜ್ ಶರೀಫ್

ಮಿಯಾ ಮಹಮ್ಮದ್ ನವಾಜ್ ಶರೀಫ್ , (ಪಂಜಾಬಿ, ಉರ್ದು: میاں محمد نواز شریف) (ಡಿಸೆಂಬರ್ ೨೫, ೧೯೪೯ರಂದು ಹುಟ್ಟಿದ್ದು) ಪಾಕಿಸ್ತಾನಿ ರಾಜಕಾರಣಿಯಾಗಿದ್ದು ಎರಡು ಬಾರಿ ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ(ನವೆಂಬರ್೧೯೯೦-ಜುಲೈ೧೯೯೩ ಮತ್ತು ಫೆಬ್ರವರಿ ೧೯೯೭-ಅಕ್ಟೋಬರ್೧೯೯೯). ಇವರು ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ಎಂಬ ರಾಜಕೀಯ ಪಕ್ಷದ ನಾಯಕರಾಗಿದ್ದರು. ೧೯೮೫ರಿಂದ ೧೯೯೦ ರವರೆಗೆ ಪಂಜಾಬ್‌ನ ಮುಖ್ಯಮಂತ್ರಿಯಾಗಿದ್ದರು. ಇತ್ತೆಫಾಕ್ ಗ್ರುಪ್ ಎಂಬ ಖಾಸಗಿ ಸ್ಟೀಲ್ ಮಿಲ್‌ ಉದ್ಯಮದ ಒಡೆಯರಾಗಿದ್ದರು.

Mian Mohammad Nawaz Sharif
میاں محمد نواز شریف

Prime Minister of Pakistan
ಅಧಿಕಾರ ಅವಧಿ
17 February 1997 – 12 October 1999
ರಾಷ್ಟ್ರಪತಿFarooq Leghari
Wasim Sajjad
ಪೂರ್ವಾಧಿಕಾರಿBenazir Bhutto
ಉತ್ತರಾಧಿಕಾರಿPervez Musharraf
ಅಧಿಕಾರ ಅವಧಿ
26 May 1993 – 18 July 1993
ರಾಷ್ಟ್ರಪತಿGhulam Ishaq Khan
ಪೂರ್ವಾಧಿಕಾರಿBalakh Sher Mazari (Acting)
ಉತ್ತರಾಧಿಕಾರಿMoeenuddin Ahmad Qureshi (Acting)
ಅಧಿಕಾರ ಅವಧಿ
6 November 1990 – 18 April 1993
ರಾಷ್ಟ್ರಪತಿGhulam Ishaq Khan
ಪೂರ್ವಾಧಿಕಾರಿGhulam Mustafa Jatoi (Acting)
ಉತ್ತರಾಧಿಕಾರಿBalakh Sher Mazari (Acting)
ವೈಯಕ್ತಿಕ ಮಾಹಿತಿ
ಜನನ (1949-12-25) ೨೫ ಡಿಸೆಂಬರ್ ೧೯೪೯ (ವಯಸ್ಸು ೭೪)
Lahore, Pakistan
ರಾಜಕೀಯ ಪಕ್ಷPakistan Muslim League-Nawaz
ಅಭ್ಯಸಿಸಿದ ವಿದ್ಯಾಪೀಠGovernment College University
University of the Punjab
ಧರ್ಮIslam

ಇವರೊಬ್ಬ ಶ್ರೀಮಂತ ವ್ಯಾಪಾರಿ ಮತ್ತು ರಾಜಕಾರಣಿ. ಪಾಕಿಸ್ತಾನದ ಸೈನ್ಯವು ಇವರಿಗೆ ರಾಜೀನಾಮೆ ನೀಡುವಂತೆ ಒತ್ತಡ ಹಾಕಿದ್ದರಿಂದ ಇವರ ಮೊದಲ ಅವಧಿಯು ಕಡಿಮೆ ಸಮಯದ್ದಾಗಿತ್ತು. ೧೯೯೭ರಲ್ಲಿ ಅಗಾಧವಾದ ಅಂತರದಲ್ಲಿ ಎರಡನೆಯ ಅವಧಿಗಾಗಿ ಆಯ್ಕೆಯಾದರು. ಇವರು ಎರಡನೆಯ ಬಾರಿಯಲ್ಲಿ ಭಾರತದ ಅಣು ಪರೀಕ್ಷೆಗೆ ಉತ್ತರವಾಗಿ ಪಾಕಿಸ್ತಾನದ ಮೊದಲ ಅಣು ಪರೀಕ್ಷೆಗೆ ಆದೇಶ ನೀಡಿದರು.[೧] ೧೯೯೯ ಅಕ್ಟೋಬರ್‌ನಲ್ಲಿ ಪರ್ವೇಜ್ ಮುಶ್ರಫ್‌ರವರು ಧಿಡೀರ್ ಸೈನಿಕ ಕಾರ್ಯಾಚರಣೆ ನಡೆಸಿ ಇವರನ್ನು ಸ್ಥಾನಭ್ರಷ್ಟರನ್ನಾಗಿಸಿದರು. ಬಲವಂತದಿಂದ ಹೊರದಬ್ಬಲ್ಪಟ್ಟ ೮ ವರ್ಷಗಳ ನಂತರ ೨೦೦೭ ರಲ್ಲಿ ಪಾಕಿಸ್ತಾನಕ್ಕೆ ವಾಪಸ್ಸಾದರು. ಮುಶ್ರಫ್‌ ನಂತರ ಅಧಿಕಾರಕ್ಕೆ ಬರಲು ಅವರು ಸೂಕ್ತವಾದ ವ್ಯಕ್ತಿಯಾಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಅಲ್ಲದೆ ಇಫ್ತಿಕರ್ ಮಹಮ್ಮದ್ ಚೌಧರಿ ಅವರು ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಇವರು ಪಾಕಿಸ್ತಾನದ ರಾಜಕೀಯದಲ್ಲಿ ಅಗಾಧ ಬೆಂಬಲವನ್ನು ಹೊಂದಿದ್ದಾರೆ.

ಆರಂಭಿಕ ಜೀವನ ಮತ್ತು ಶಿಕ್ಷಣ

ಇವರ ಕುಟುಂಬದ ಮೂಲವು ಹೀರಾ ಮಂಡಿ ಎಂಬ ಹಳ್ಳಿಯಾಗಿದ್ದು ಪಾಕಿಸ್ತಾನ ಹುಟ್ಟಿಕೊಳ್ಳುವುದಕ್ಕಿಂತ ಮೊದಲಿಗೆ ಉತ್ತಮವಾದ ಕೃಷಿ ಭೂಮಿಗಾಗಿ ಲಾಹೋರ್‌ಗೆ ತೆರಳಿತ್ತು.[೨] ಇವರ ಕುಟುಂಬ ಕೂಡ ತಾವು ಕಾಶ್ಮೀರ ಕಣಿವೆಯ ಸೋಫಿಯನ್ ಮೂಲದವರೆಂದು ಗುರುತಿಸಿಕೊಳ್ಳುತ್ತದೆ.[೩]

ಇವರು ರಾಷ್ಟ್ರ ಸ್ಥಾಪನೆಯಾದ ಮರು ವರ್ಷ ಪಾಕಿಸ್ತಾನದ ಲಾಹೋರ್‌ನಲ್ಲಿ ಡಿಸೆಂಬರ್ ೨೫, ೧೯೪೯ರಂದು ಜನಿಸಿದರು, ಗುಜರಿ ವ್ಯಾಪಾರಿ ಕುಟುಂಬ ಇವರದ್ದಾಗಿತ್ತು. ಪಾಕಿಸ್ತಾನ ಹುಟ್ಟಿಕೊಳ್ಳುವುದಕ್ಕಿಂತ ಮೊದಲಿಗೆ ಇವರ ತಂದೆ ಮತ್ತು ಚಿಕ್ಕಪ್ಪಂದಿರು ಲಾಹೋರ್‌ನ ಲಾಂಡಾ ಬಜಾರ್‌ನಲ್ಲಿ 'ಇತ್ತೆಫಾಕ್ ' ಎಂಬ ಹೆಸರಿನ ಸಣ್ಣ ಪ್ರಮಾಣದ ಸ್ಟೀಲ್ ವ್ಯಾಪಾರ ನಡೆಸುತ್ತಿದ್ದರು.

ಲಾಹೋರ್‌ನ ಸೇಂಟ್ ಆಂಥೋನಿ ಶಾಲೆಗೆ ದಾಖಲಾದರು. ನಂತರದಲ್ಲಿ ಇವರ ಅಣ್ಣ ಶಹಬಾಜ್ ಶರೀಫ್ ಜೊತೆಗೆ ಲಾಹೋರ್‌‌ನ ಮೊಘಲ್‌ಪುರದ ಪಾಕಿಸ್ತಾನ್ ರೇಲ್ವೆ ಹೈಸ್ಕೂಲ್‌ಗೆ ಸೇರಿಕೊಂಡರು. ಇವರಿಬ್ಬರು ಕ್ರಮವಾಗಿ ೧೯೬೪ ಮತ್ತು ೧೯೬೫ ರಲ್ಲಿ ಇದೇ ಶಾಲೆಯಿಂದ ಮೆಟ್ರಿಕ್ ಪಾಸಾದರು. ನವಾಜ್ ಶರೀಫ್ ಲಾಹೋರ್‌ ಸರ್ಕಾರಿ ಕಾಲೇಜಿಗೆ ಸೇರಿಕೊಂಡರು. ಪೂರಕ ಪರೀಕ್ಷೆ ಬರೆದ ನಂತರದಲ್ಲಿ ಬಿ.ಎ ಪದವಿಯನ್ನು ಪಡೆದುಕೊಂಡರು. ಲಾಹೋರ್‌‌ನಲ್ಲಿರುವ ಪಂಜಾಬ್‌ ಯುನಿವರ್ಸಿಟಿ ಲಾ ಕಾಲೇಜ್‌ನಲ್ಲಿ ಕಾನೂನು ಪದವಿ ಪಡೆದುಕೊಂಡರು .

ವ್ಯಾಪಾರಿ ಉದ್ಯಮ: ಇತ್ತೆಫಾಕ್ ಗ್ರುಪ್

ಇವರು ಇತ್ತೆಫಾಕ್ ಗ್ರುಪ್‌ನ ಜಂಟಿ ಒಡೆಯರಾಗಿದ್ದರು. ಇತ್ತೆಫಾಕ್ ಗ್ರುಪ್‌ ಪಾಕಿಸ್ತಾನದ ಅತಿ ದೊಡ್ಡ ವ್ಯಾಪಾರಿ ಸಂಸ್ಥೆಯಾಗಿದೆ. ಲಾಹೋರ್‌‌ನಲ್ಲಿ ಇತ್ತೆಫಾಕ್ ಇಸ್ಲಾಮಿಕ್ ಅಕಾಡಮಿ ಸ್ಥಾಪನೆ ಮಾಡಲು ನೆರವು ನೀಡಿದರು, ಇಲ್ಲಿ ವಿದ್ಯಾರ್ಥಿಗಳು ತಮ್ಮ ಜಾತ್ಯತೀತ ತರಬೇತಿಯ ಜೊತೆಗೆ ಧಾರ್ಮಿಕ ನಿಯಮಾವಳಿಗಳನ್ನು ಪಡೆದುಕೊಳ್ಳುತ್ತಾರೆ. ಶರೀಫ್ ಮುಸ್ಲಿಂ ಧರ್ಮ ಆಚರಿಸುವ ಕುಟುಂಬಕ್ಕೆ ಸೇರಿದವರಾಗಿದ್ದು, ಮುಸ್ಲಿಂನ ಪವಿತ್ರ ಗ್ರಂಥ ಕುರಾನ್‌ನ್ನು ಸೆಕೆಂಡರಿ ಮಟ್ಟದವರೆಗೆ ಕಡ್ಡಾಯ ವಿಷಯವಾಗಿ ಕಲಿಸಲು ಹೇಳಿದ್ದಾರೆ. ೧೯೭೪ ರಲ್ಲಿ ಪಾಕಿಸ್ತಾನ್ ರೇಲ್ವೆ ವಿರುದ್ಧ ಕರಾಚಿ ನಡುವಿನ ಮೊದಲ ದರ್ಜೆಯ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಇವರ ಸ್ಕೋರ್ ಸೊನ್ನೆ.

ರಕ್ತ ಸಂಬಂಧಿಗಳ ಜೊತೆ ಸೇರಿ ತಮ್ಮ ಕುಟುಂಬದ ಕಬ್ಬಿಣ ಎರಕ ಹೊಯ್ಯುವ ಕಾರ್ಖಾನೆಯನ್ನು ವಿಸ್ತರಿಸಿದರು. ೧೯೭೨ರಲ್ಲಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ರಾಷ್ಟ್ರೀಕರಣ ಮಾಡಿದ ಮೇಲೆ ತಮ್ಮ ವ್ಯಾಪಾರದ ಮೇಲೆ ತಮ್ಮ ಹಿಡಿತವನ್ನು ಕಳೆದುಕೊಂಡರು. ಮತ್ತೆ ೧೯೭೭ ರಲ್ಲಿ ಲಾಹೋರ್‌‌ನಲ್ಲಿ ಇತ್ತೆಫಾಕ್ ಇಂಡಸ್ಟ್ರೀಸ್ ಮರುಸ್ಥಾಪನೆಯಾಯಿತು. ಶರೀಫ್ ಪ್ರಧಾನಿ ಮೊಹಮ್ಮದ್ ಜಿಯಾ-ಉಲ್-ಹಕ್ ಜೊತೆಗೆ ರಾಜಕೀಯ ಸಂಬಂಧವನ್ನು ಹೆಚ್ಚಿಸಿಕೊಂಡ ನಂತರದಲ್ಲಿ ವ್ಯಾಪಾರ ಮತ್ತೆ ಮರಳಿ ಬಂದಿತು. ೧೯೯೦ರಿಂದ ಇತ್ತೆಫಾಕ್ ಇಂಡಸ್ಟ್ರೀಸ್ ಪಾಕಿಸ್ತಾನದ ಅತ್ಯಂತ ಶ್ರೀಮಂತ ವ್ಯಾಪಾರಿ ಸಂಸ್ಥೆಯಾಗಿದೆ, ೧೯೮೧ರಲ್ಲಿ ಇದರ ಉತ್ಪನ್ನವು $೧೬ ಇತ್ತು. ಈಗ ಇದರ ವಾರ್ಷಿಕ ಆದಾಯವು $೪೫೦ ಮಿಲಿಯನ್‌ಗಿಂತ ಹೆಚ್ಚಿದೆ. ದೇಶದ ಅತ್ಯಂತ ದೊಡ್ಡ ಖಾಸಗಿ ಒಡೆತನದ ಸ್ಟೀಲ್ ಮಿಲ್, ಇತ್ತೆಫಾಕ್ ಫೌಂಡರೀಸ್ (ಪ್ರೈ) ಲಿಮಿಟೆಡ್, ಎಂಟು ಸಕ್ಕರೆ ಕಾರ್ಖಾನೆಗಳು, ಮತ್ತು ನಾಲ್ಕು ಟೆಕ್ಸ್‌ಟೈಲ್ ಫಾಕ್ಟರಿಗಳನ್ನೊಳಗೊಂಡಿದೆ. ಶರೀಫ್‌ರ ನಿವ್ವಳ ಲಾಭ $೪ ಬಿಲಿಯನ್‍ಗಳು. ಲಕ್ಷಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದು, ಇತ್ತೆಫಾಕ್ ಗ್ರುಪ್‌ ಪಾಕಿಸ್ತಾನದ ಉದ್ಯಮದ ಅಭಿವೃದ್ಧಿಯಲ್ಲಿ ಮತ್ತು ಬೆಳವಣಿಗೆಯಲ್ಲಿ ಪ್ರಮುಖವಾದ ಪಾತ್ರವಹಿಸಿದೆ. ಇದು ಶರೀಫ್ ಅವರ ರಾಜಕೀಯ ಜೀವನ ಹಾಗೂ ಉಳಿದ ವ್ಯವಹಾರ ಉನ್ನತಿಗೆ ಕಾರಣವಾಯ್ತು.

ರಾಜಕೀಯ ವೃತ್ತಿಜೀವನದ ಆರಂಭ

೧೯೮೦ರಿಂದಲೂ ಸೈನ್ಯದ ಆಡಳಿತದ ಸಿದ್ಧಾಂತದಲ್ಲಿ ನಂಬಿಕೆ ಹೊಂದಿರುವ ಪ್ರಧಾನಮಂತ್ರಿ ಮಹಮ್ಮದ್ ಜಿಯಾ-ಉಲ್-ಹಕ್‌ರವರ ಜೊತೆಗೆ ಮುಖ್ಯ ಸಂಬಂಧ ಹೊಂದಿದ್ದರು. ರಹೀಮುದ್ದೀನ್ ಖಾನ್ ಜೊತೆಗೆ ಮೈತ್ರಿ ಹೊಂದಿದ್ದರು. ಹಾಗೆಯೇ ಐಎಸ್‌ಐ ಪ್ರಧಾನ ನಿರ್ದೇಶಕ ಹಮೀದ್ ಗುಲ್‌ ಜೊತೆಗೂ ನಂಟು ಹೊಂದಿದ್ದರು, ಇವರು ಶರೀಫ್‌ರಿಗೆ ಬೆಂಬಲ ನೀಡಲು ಇಸ್ಲಾಮಿ ಜಮ್ಮೂರಿ ಇತ್ತೇಹಾದ್ ಎಂಬ ಸಂಪ್ರದಾಯವಾದಿ ರಾಜಕೀಯ ಮೈತ್ರಿ ರಚನೆಯಲ್ಲಿ ಪ್ರಮುಖವಾದ ಪಾತ್ರ ವಹಿಸಿದ್ದರು.[ಸೂಕ್ತ ಉಲ್ಲೇಖನ ಬೇಕು]

ಪಂಜಾಬ್ ಅಡ್ವೈಸರಿ ಕೌನ್ಸಿಲ್

೧೯೮೧ರಲ್ಲಿ ಮೊದಲಿಗೆ ಪ್ರಧಾನಿ ಮಹಮ್ಮದ್ ಜಿಯಾ-ಉಲ್-ಹಕ್‌ರ ಅಡಿಯಲ್ಲಿ ಪಂಜಾಬ್ ಅಡ್ವೈಸರಿ ಕೌನ್ಸಿಲ್ ಸದಸ್ಯರಾದರು. ಪ್ರಾಂತೀಯ ಪಂಜಾಬ್ ಸರ್ಕಾರದ ಹಣಕಾಸು ಮತ್ತು ಕ್ರೀಡಾ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ತಮ್ಮ ಅಧಿಕಾರಾವಧಿಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಮತ್ತು ಗ್ರಾಮೀಣ ಯೋಜನೆಗಳಿಗೆ ಧನಸಹಾಯವನ್ನು ಹೆಚ್ಚಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.[೪]

ಪಂಜಾಬಿನ ಮುಖ್ಯಮಂತ್ರಿ

ಪಾಕಿಸ್ತಾನದ ಅತ್ಯಂತ ಜನನಿಬಿಡ ಪ್ರಾಂತ್ಯವಾದ ಪಂಜಾಬ್‌ನ ಮುಖ್ಯಮಂತ್ರಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದರು. (ಎಪ್ರಿಲ್ ೯, ೧೯೮೫ - ಮೇ ೩೧, ೧೯೮೮) [೫] ಜಿಯಾ-ಉಲ್-ಹಕ್ ಸಂಸತ್ತನ್ನು ವಿಸರ್ಜನೆ ಮಾಡಿದ ನಂತರ ೧೯೮೮ ರಿಂದ ಅಗಸ್ಟ್ ೧೯೯೦ರವರೆಗೆ ಉಸ್ತುವಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಅತ್ಯಂತ ಜನಪ್ರಿಯತೆಯಿಂದಾಗಿ "ಪಂಜಾಬ್‌ ಸಿಂಹ" ಎಂಬ ನಾಮಾಕಿಂತವನ್ನು ಪಡೆದುಕೊಂಡರು.[೬]

ಪ್ರಧಾನ ಮಂತ್ರಿಯಾಗಿ ಮೊದಲ ಅವಧಿ

ನವಾಜ್ ಶರೀಫ್ ಐಜೆಐನ ಮುಖಂಡರಾಗಿ ಮತ್ತು ಬೆನಜೀರ್ ಭುಟ್ಟೋರ ಉತ್ತರಾಧಿಕಾರಿಯಾಗಿ ನವೆಂಬರ್ ೧, ೧೯೯೦ ರಂದು ಪ್ರಧಾನಮಂತ್ರಿಯಾದರು. ಸಂಪ್ರದಾಯದ ತಳಹದಿಯ ಮೇಲೆ ಪ್ರಚಾರ ಮಾಡಿದರು ಮತ್ತು ಸರ್ಕಾರದಲ್ಲಿನ ಭ್ರಷ್ಟಾಚಾರವನ್ನು ಕಡಿಮೆ ಮಾಡುತ್ತೇನೆಂದು ಪ್ರತಿಜ್ಞೆ ಮಾಡಿದರು. ರಾಷ್ಟ್ರದ ಮೂಲಭೂತ ಸೌಕರ್ಯ ಸುಧಾರಿಸಲು ಮತ್ತು ಡಿಜಿಟಲ್ ದೂರಸಂಪರ್ಕಕ್ಕೆ ಉತ್ತೇಜನ ನೀಡುವುದರ ಮೇಲೆ ತಮ್ಮ ಗಮನ ಹರಿಸಿದರು. ಸರ್ಕಾರಿ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಿದರು ಮತ್ತು ಇನ್ನೂ ಹೆಚ್ಚಿನ ಕೈಗಾರಿಕಾ ಖಾಸಗೀಕರಣಕ್ಕೆ ದಾರಿ ಮಾಡಿಕೊಟ್ಟರು. ಖಾಸಗಿ ಹಣ ವರ್ಗಾವಣೆಗಾರರಲ್ಲಿ ವ್ಯವಹಾರ ಮಾಡುವ ವಿದೇಶಿ ಹಣ ವರ್ಗಾವಣೆಯನ್ನು ಕಾನೂನು ಸಮ್ಮತಗೊಳಿಸಿದರು. ಇವರ ಖಾಸಗೀಕರಣ ನೀತಿಗಳನ್ನು ಬೆನಜೀರ್ ಭುಟ್ಟೋ ಮತ್ತು ಪರ್ವೇಜ್ ಮುಶರಫ್ ಮುಂದುವರೆಸಿದರು. ಅಂತಾರಾಷ್ಟ್ರಿಯ ವೇದಿಕೆಯಲ್ಲಿ ಕಾಶ್ಮೀರ ಸಮಸ್ಯೆಯ ಕುರಿತಾಗಿ ಗಮನ ಸೆಳೆಯಲು, ಡ್ರಗ್ ಕಳ್ಳಸಾಗಾಣಿಕೆದಾರರು ಮತ್ತು ಗಡಿಯಾದ್ಯಂತ ಕಾನೂನುಬಾಹಿರವಾದ ದಾಖಲೆಯಿಲ್ಲದ ಆಯುಧ ವ್ಯವಹಾರವು ದೇಶದಲ್ಲಿ ಅಸಂಖ್ಯಾತ ಡಕಾಯಿತರನ್ನು ಹೆಚ್ಚಿಸುವುದನ್ನು ತಡೆಗಟ್ಟಲು, ಅಫ್ಘಾನಿಸ್ತಾನದಲ್ಲಿ ಶಾಂತಿಯುತ ಅಧಿಕಾರ ಹಸ್ತಾಂತರ ಇವುಗಳಿಗಾಗಿ ಹಲವಾರು ಕ್ರಮಗಳನ್ನು ಕೈಗೊಂಡರು. ಅಣು ಯೋಜನೆ ಶಾಂತಿಯುತವಾಗಿ ಮುಂದುವರೆಯಲು ಮತ್ತು ಪಾಕಿಸ್ತಾನ್ ನಿಜವಾದ ಮುಸ್ಲಿಂ ದೇಶವಾಗಲು ಬಯಸುತ್ತಿದ್ದರು ಮತ್ತು ಶರಿಯತ್ ಆರ್ಡಿನನ್ಸ್ ಮತ್ತು ಬೈಟ್-ಉಲ್ -ಮಾಲ್( ಅನಾಥ ಬಡ ವಿಧವೆಯರಿಗೆ ಸಹಾಯ ಮಾಡಲು)ನಂತಹ ಕೆಲವು ಇಸ್ಲಾಮಿಕ್ ಕಾನೂನುಗಳನ್ನು ಪರಿಚಯಿಸಿದರು; ಇದಕ್ಕಿಂತಲೂ ಹೆಚ್ಚಾಗಿ ಧಾರ್ಮಿಕ ವ್ಯವಹಾರ ಖಾತೆಗೆ ವರದಿ ತಯಾರಿಸಲು ಮತ್ತು ಇಸ್ಲಾಮೀಕರಣಕ್ಕಾಗಿ ತೆಗೆದುಕೊಳ್ಳಬೇಕಾದ ಹೆಜ್ಜೆಗಳನ್ನು ಶಿಫಾರಸ್ಸು ಮಾಡುವ ಕೆಲಸ ನೀಡಿದರು. ಮೂರು ಸಮಿತಿಗಳು ಸ್ಥಾಪನೆಯಾದ ಬಗ್ಗೆ ಖಚಿತಪಡಿಸಿದರು.

೧) ಇತ್ತೇಹಾದ್-ಇ-ಬೇನ್-ಉಲ್-ಮುಸ್ಲೀಮೀನ್
೨) ನಿಫಾಜ್-ಇ-ಶರಿಯತ್-ಕಮಿಟಿ
೩)ಇಸ್ಲಾಮಿಕ್ ವೆಲ್‌ಫೇರ್ ಕಮಿಟಿ

ಮಧ್ಯ ಏಷಿಯಾದ ಎಲ್ಲಾ ಮುಸ್ಲಿಂ ದೇಶಗಳು ಒಟ್ಟಾಗಿ ಮುಸ್ಲಿಂ ಬ್ಲಾಕ್ ರಚಿಸುವಲ್ಲಿ ನಂಬಿಕೆ ಹೊಂದಿದ್ದರು ಹಾಗೆಯೇ ಇಸಿಒ ಸದಸ್ಯತ್ವವನ್ನು ಎಲ್ಲಾ ಮಧ್ಯ ಏಷಿಯಾ ಮುಸ್ಲಿಂ ದೇಶಗಳಿಗೆ ವಿಸ್ತರಿಸಿದರು. ನವಾಜ್ ಶರೀಫ್ ಅಸೆಂಬ್ಲಿಯಲ್ಲಿ ಹೆಚ್ಚಿನ ಮತ ಹೊಂದಿದ್ದರಿಂದ ವಿಶ್ವಾಸದಿಂದಲೆ ಕೆಲಸ ನಿರ್ವಹಿಸಿದರು. ಹಿಂದಿನ ಮೂರು ಸೈನ್ಯದ ಮುಖ್ಯಸ್ಥರೊಂದಿಗೆ ತಕರಾರು ಹೊಂದಿದ್ದರು. ೧೯೯೧ ರ ಗಲ್ಫ್ ಯುದ್ಧದಿಂದ ಜನರಲ್ ಮಿಶ್ರಾ ಅಸ್ಲಾಂ ಬೇಗ್ ಜೊತೆಗೆ, ಸಿಂಧ್‌ನ "ಆಫರೇಶನ್ ಕ್ಲೀನ್-ಅಪ್" ನಿಂದ ಜನರಲ್ ಆಸಿಫ್ ನವಾಜ್ ಜೊತೆಗೆ ಮತ್ತು ಶರೀಫ್-ಇಶಾಕ್ ಇಂಬ್ರಾಗ್ಲಿಯೊದಿಂದ ಜನರಲ್ ಅಬ್ದುಲ್ ವಹೀದ್ ಕಾಕರ್ ಜೊತೆಗೆ ಹೊಡೆದಾಡುತ್ತಿದ್ದರು. ಬೆನಜೀರ್ ಮತ್ತು ಇವರ ನಡುವಿನ ವಿವಾದವನ್ನು ಹೋಗಲಾಡಿಸಲು ಮತ್ತು ಚಳುವಳಿಯನ್ನು ತಡೆಯಲು ಆಕೆಯ ಗಂಡನನ್ನು ಸೆರೆಯಿಂದ ಮುಕ್ತಗೊಳಿಸಲು ಮತ್ತು ಆಕೆಯ ಪಕ್ಷದ ಸಹಕಾರದೊಂದಿಗೆ ಎಂಟನೆಯ ತಿದ್ದುಪಡಿಯನ್ನು ತೆಗೆದು ಹಾಕಲು ಒಪ್ಪಿದರು. ಗುಲಾಂ ಇದನ್ನು ತನ್ನ ಮೇಲಿನ ಆಡಳಿತ ಪಕ್ಷದ ಧಾಳಿಯೆಂದು ತಿಳಿದು ಅಧ್ಯಕ್ಷೀಯ ಚುನಾವಣೆಯನ್ನು ಗೆಲ್ಲಲು ಎಪ್ರಿಲ್ ೧೯೯೩ರಲ್ಲಿ ಪಾಕಿಸ್ತಾನಿ ಸೇನೆಯ ಬೆಂಬಲದೊಂದಿಗೆ ತಮ್ಮ ವಿಶೇಷ ಅಧಿಕಾರವನ್ನು ಬಳಸಿಕೊಂಡು ದೇಶದ ಸಂಸತ್ತನ್ನು ವಿಸರ್ಜಿಸಿ ಮೀರ್ ಬಲಾಖ್ ಶೇರ್ ಮಜಾರಿಯವರನ್ನು ಉಸ್ತುವಾರಿ ಪ್ರಧಾನ ಮಂತ್ರಿಯಾಗಿ ನೇಮಿಸಿದರು. ಅಧ್ಯಕ್ಷೀಯ ಆಜ್ಞೆ ಅಸಂವಿಧಾನಾತ್ಮಕ ಮತ್ತು ನ್ಯಾಷನಲ್ ಅಸೆಂಬ್ಲಿಯನ್ನು ಪುನಾರಚಿಸುವ ನಿಯಮ ಮಾಡಿದ್ದರಿಂದ ಮೇ ೧೯೯೩ರಲ್ಲಿ ಮತ್ತೆ ಶರೀಫ್ ಅಧಿಕಾರ ಮರಳಿ ಪಡೆದರು. ಜುಲೈ ೧೯೯೩ರಲ್ಲಿ ಮಿಲಿಟರಿಯಿಂದ ರಾಜೀನಾಮೆ ನೀಡುವ ಒತ್ತಡ ಬಂದಿತು. ಆದರೆ ಅಧ್ಯಕ್ಷ ಗುಲಾಂ ಇಶಾಕ್ ಖಾನ್‌ರನ್ನು ಕೆಳಗಿಳಿಸುವ ಸಮಾಲೋಚನೆಯ ರಾಜಿಯೊಂದಿಗೆ ಪರ್ಯಾವಸಾನಗೊಂಡಿತು. ಮೊಯಿನ್ ಖುರೇಶಿ ಉಸ್ತುವಾರಿ ಪ್ರಧಾನಮಂತ್ರಿಯಾದರು. ಅತ್ಯಲ್ಪ ಅವಧಿಯಲ್ಲಿ ೧೯೯೩ ಅಕ್ಟೋಬರ್‌ನಲ್ಲಿಯೇ ಬೆನಜೀರ್ ಭುಟ್ಟೋರ ಉತ್ತರಾಧಿಕಾರಿಯಾದರು.

ಪ್ರಧಾನಿಯಾಗಿ ಎರಡನೆಯ ಅಧಿಕಾರಾವಧಿ

3 ಡಿಸೆಂಬರ್ 1998ರಲ್ಲಿ ಸಂಯುಕ್ತ ರಾಷ್ಟ್ರದ ಡಿಫೆನ್ಸ್ ಸೆಕ್ರೆಟರಿ, ವಿಲಿಯಂ ಎಸ್ ಕೊಹೆನ್ ಪೆಂಟಗೋನ್‌ನಲ್ಲಿ ಪ್ರಧಾನಮಂತ್ರಿ ನವಾಝ್ ಶರೀಫ್‌ರೊಂದಿಗೆ.

೧೯೯೭ರಲ್ಲಿ ಎರಡನೆಯ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದರು.[೭]

ಅಗಸ್ಟ್ ೧೯೯೭ರಲ್ಲಿ ವಿವಾದಾತ್ಮಕವಾದ ಭಯೋತ್ಪಾದನಾ ವಿರೋಧಿ ಕಾಯಿದೆಯನ್ನು ಅಂಗೀಕರಿಸಿ ಭಯೋತ್ಪಾದನಾ ವಿರೋಧಿ ನ್ಯಾಯಾಲಯಗಳನ್ನು ಸ್ಥಾಪಿಸಿದರು. ನಂತರದಲ್ಲಿ ಉಚ್ಚ ನ್ಯಾಯಾಲಯವು ಈ ಕಾಯಿದೆಯನ್ನು ಅಸಂವಿಧಾನಾತ್ಮಕವಾದುದೆಂದು ಒಪ್ಪಿತು.

೧೯೯೯ರಲ್ಲಿ ಭಾರತದ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರನ್ನು ವಾಘಾ ಗಡಿಯಲ್ಲಿ ಭೇಟಿ ಮಾಡಿ ಜಂಟಿ ಅಧಿಕೃತ ಪ್ರಕಟಣೆ ಲಾಹೋರ್‌ ಡಿಕ್ಲರೇಶನ್‌ಗೆ ಸಹಿ ಹಾಕಿದರು.[೮]

೧೯೯೮ರ ಪಾಕಿಸ್ತಾನದ ಅಣು ಪರೀಕ್ಷೆ

ಪಾಕಿಸ್ತಾನ ನಡೆಸಿದ ಅಣು ಪರೀಕ್ಷೆಯು ಇವರ ರಾಜಕೀಯ ಜೀವನದ ಮಹತ್ವದ ತಿರುವಾಗಿದೆ. ಭಾರತ ಎರಡು ವಾರಕ್ಕಿಂತ ಮುಂಚೆ ನಡೆಸಿದ ಐದು ಅಣ್ವಸ್ತ್ರ ಸ್ಪೋಟಕ ಪರೀಕ್ಷೆಗೆ ಪ್ರತಿಯಾಗಿ ಪಾಕಿಸ್ತಾನವು ೨೮, ಮೇ ೧೯೯೮ ಮತ್ತು ೩೦, ಮೇ ೧೯೯೮ರಂದು ಯಶಸ್ವಿಯಾಗಿ ಅಣು ಪರೀಕ್ಷೆ ನಡೆಸಿತು. ಭಾರತವು ತನ್ನ ಅಣು ಶಸ್ತ್ರಾಗಾರವನ್ನು ಎರಡನೆಯ ಬಾರಿಗೆ ಪರೀಕ್ಷೆಗೆ ಒಳಪಡಿಸಿತು. ಅದು ಪಾಕಿಸ್ತಾನದಲ್ಲಿ ಎಚ್ಚರಿಕೆಯ ಗಂಟೆ ಬಾರಿಸಿತು.

ಎರಡು ವಾರಗಳ ನಂತರ ಪಾಕಿಸ್ತಾನವು ತನ್ನ ಸ್ವಂತ ಅಣು ಪರೀಕ್ಷೆ ನಡೆಸಿ ವಿಶ್ವಕ್ಕೆ ಆಶ್ಚರ್ಯವನ್ನುಂಟು ಮಾಡಿತು. ಈ ಅಣು ಪರೀಕ್ಷೆ ನಡೆಸಿದ ದಿನವೆ ಶರೀಫ್ ತುರ್ತುಪರಿಸ್ಥಿತಿಯನ್ನು ಘೋಷಿಸಿದರು. ಆರ್ಥಿಕ ನಿರ್ಬಂಧಗಳ ಪರಿಣಾಮವನ್ನು ಕಡಿಮೆಗೊಳಿಸಲು ಪಾಕಿಸ್ತಾನದ ಬ್ಯಾಂಕಿನಲ್ಲಿರುವ ಎಲ್ಲಾ ವಿದೇಶಿ ಹಣದ ಖಾತೆಗಳನ್ನು ಸ್ಥಗಿತಗೊಳಿಸಲಾಯಿತು. ದೇಶದ ಅಣು ನೆಲೆಗಳನ್ನು ರಕ್ಷಿಸಲು ಪಾಕಿಸ್ತಾನದ ಸೈನ್ಯ ಪಡೆಯನ್ನು ಜಾಗೃತವಾಗಿಸಿರಿಸಿಕೊಳ್ಳಲು ನವಾಜ್ ಆದೇಶಿಸಿದರು. ರಾಷ್ಟ್ರದ ಸುರಕ್ಷತಾ ದೃಷ್ಟಿಯಿಂದ ಅಣು ಪರೀಕ್ಷೆಯನ್ನು ಸಮರ್ಥಿಸಿಕೊಂಡು ಭಾರತದ ಅಣು ಶಸ್ತ್ರಾಸ್ತ್ರ ಯೋಜನೆಗೆ ವಿರುದ್ಧವಾಗಿ ಪಾಕಿಸ್ತಾನದ ಅಣ್ವಸ್ತ್ರ ತಡೆಯುವ ಸಾಮರ್ಥ್ಯವನ್ನು ತೋರ್ಪಡಿಸಿದರು.

ನವಾಜ್ ಶರೀಫ್‍ರ ನೇತೃತ್ವದಲ್ಲಿ ಪಾಕಿಸ್ತಾನವು ಅಣು ಶಕ್ತಿ ಹೊಂದಿರುವ ಮೊದಲ ಮುಸ್ಲಿಂ ರಾಷ್ಟ್ರ ಹಾಗೂ ಪ್ರಪಂಚದ ಏಳನೆಯ ದೇಶವಾಗಿ ಹೊರಹೊಮ್ಮಿತು.

ಸಂವಿಧಾನ ತಿದ್ದುಪಡಿ

ಅಗಸ್ಟ್ ೧೯೯೮ರ ಕೊನೆಗೆ ಇಸ್ಲಾಮಿಕ್ ತತ್ವದ ಆಧಾರದ ಮೇಲೆ ಕಾನೂನು ವ್ಯವಸ್ಥೆಯನ್ನು ಸ್ಥಾಪಿಸುವ ಪ್ರಸ್ತಾಪ ವ್ಯಕ್ತಪಡಿಸಿದರು.[೯] ಮಾಜಿ ಪ್ರಧಾನಿ ಜಿಯಾ-ಉಲ್-ಹಕ್‌ರ ಹತ್ತನೆಯ ಸ್ಮಾರಕದ ಒಂದು ವಾರದ ನಂತರ ಇವರ ಪ್ರಸ್ತಾವನೆ ಬಂದಿತು. ಸಚಿವ ಸಂಪುಟವು ಇವರು ಪ್ರಸ್ತಾಪಿಸಿದ ಹಲವಾರು ವಿವಾದಾತ್ಮಕ ವಿಷಯಗಳನ್ನು ತಿರಸ್ಕರಿಸಿತು.[೧೦][೧೧] ೧೫೧ votes to ೧೬.[೧೨] ರಾಷ್ಟ್ರಿಯ ಅಸೆಂಬ್ಲಿಯು ಇದನ್ನು ಅಕ್ಟೋಬರ್ ೧೦, ೧೯೯೮ ರಂದು ಅಂಗೀಕರಿಸಿತು. ಆದರೆ ತಿದ್ದುಪಡಿಯು ಸೆನೆಟ್‌ನಲ್ಲಿ ಅರ್ಧಕ್ಕಿಂತ ಹೆಚ್ಚಿಗೆ ಮತ ಪಡೆಯುವಲ್ಲಿ ವಿಫಲವಾಯಿತು. ಇದಾದ ವಾರಗಳ ನಂತರ ಶರೀಫ್ ಸರ್ಕಾರವು ಸೈನಿಕ ಕಾರ್ಯಾಚರಣೆಗೆ ಬಲಿಯಾಯಿತು.

ಸೈನ್ಯದೊಂದಿಗೆ ಸಂಬಂಧ

ಇವರ ಎರಡನೆಯ ಅವಧಿಯಲ್ಲಿ ಜನರಲ್ ಕರಾಮತ್‌ರನ್ನು ರಾಷ್ಟ್ರಿಯ ಸುರಕ್ಷತಾ ಮಂಡಳಿಯ ವಿವಾದದಿಂದಾಗಿ ತೆಗೆದುಹಾಕಲಾಯಿತು. ನಂತರದಲ್ಲಿ ಜನರಲ್ ಮುಶ್ರಫ್ ಜೊತೆಗೆ ತೀವ್ರವಾದ ರಾಜಕೀಯ ತಿಕ್ಕಾಟ ಎದುರಿಸಬೇಕಾಯಿತು. ಇದರ ಪರಿಣಾಮವಾಗಿ ಸೈನಿಕ ಕಾರ್ಯಾಚರಣೆ ನಡೆದು ತಮ್ಮ ಸ್ಥಾನ ಕಳೆದುಕೊಂಡರು.

೧೯೯೬ ಜನವರಿಯಲ್ಲಿ ಜನರಲ್ ವಹೀದ್‌ರ ಮೂರುವರ್ಷದ ಅವಧಿ ಮುಗಿದು ಜನರಲ್ ಜಹಾಂಗೀರ್ ಕರಾಮತ್ ಸೈನ್ಯದ ಮುಖ್ಯಸ್ಥರಾಗಿ ನೇಮಕಗೊಂಡರು. ಜನವರಿ ೯, ೧೯೯೯ರಂದು ಇವರ ಅಧಿಕಾರಾವಧಿ ಕೊನೆಗೊಂಡಿತು. ಆದಾಗ್ಯೂ ಅಕ್ಟೋಬರ್ ೧೯೯೮ರಲ್ಲಿ ಜನರಲ್ ಕರಾಮತ್ ಅವರ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್‌ನ ಆಡಳಿತವು ಮುಶ್ರಫ್ ಅವರನ್ನು ಕೆಳಗಿಳಿಸಿತು. ಪಾಕಿಸ್ತಾನದ ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗಿ ಸೈನ್ಯವು ಅಧಿಕಾರಕ್ಕೆ ಬರಲು ಇದೊಂದು ಪಿತೂರಿಯಾಗಿದೆ ಎಂದು ಶರೀಫ್ ವ್ಯಾಖ್ಯಾನಿಸಿದರು. ಅಕ್ಟೋಬರ್ ೧೯೯೮ರಲ್ಲಿ ಜನರಲ್ ಕರಾಮತ್ ರಾಜೀನಾಮೆ ನೀಡಿದರು ಮತ್ತು ಜನರಲ್ ಪರ್ವೇಜ್ ಮುಶರಫ್‌ರನ್ನು ಸೈನ್ಯದ ಮುಖ್ಯಸ್ಥರನ್ನಾಗಿ ಶರೀಫ್ ನೇಮಕಮಾಡಿದರು.

೧೯೯೯ರಲ್ಲಿನ ಕಾರ್ಗಿಲ್ ಯುದ್ಧದ ಸಮಯದಲ್ಲಿ ಧಾಳಿ ಮಾಡುವ ಯಾವುದೇ ಯೋಜನೆ ಇರಲಿಲ್ಲ. ಪರ್ವೇಜ್ ಮುಶರಫ್ ಒಬ್ಬರೇ ಕಾರ್ಯ ನಡೆಸಿದ್ದಾರೆಂದು ಆರೋಪಿಸಿದರು.[೧೩]

ಸೈನಿಕ ಕಾರ್ಯಾಚರಣೆ

ಅಕ್ಟೋಬರ್ ೧೨, ೧೯೯೯ರಲ್ಲಿ ಶರೀಫ್ ಜನರಲ್ ಪರ್ವೇಜ್ ಮುಶರಫ್‌ರನ್ನು ತೆಗೆದು ಹಾಕಲು ನಿರ್ಣಯಿಸಿ ಜಿಯಾಲುದ್ದೀನ್ ಭುಟ್‌ರನ್ನು ಅವರ ಸ್ಥಾನಕ್ಕೆ ನೇಮಕ ಮಾಡಿದರು. ಆಗ ಮುಶ್ರಫ್ ಶ್ರೀಲಂಕಾದಲ್ಲಿದ್ದರು ಮತ್ತು ಪಾಕಿಸ್ತಾನಕ್ಕೆ ವಾಪಸ್ಸಾಗಲು ಕಮರ್ಷಿಯಲ್ ವಿಮಾನದ ಮೂಲಕ ಹಿಂದಿರುಗುವ ಪ್ರಯತ್ನ ನಡೆಸಿದರು. ಶರೀಫ್ ಸಿಂಧ್ ಐಜಿ ರಾಣಾ ಮಕ್ಬೂಲ್‌ರಿಗೆ ಅರ್ಮಿ ಚೀಫ್ ಸ್ಟಾಫ್ ಮತ್ತು ಮುಶ್ರಫ್‌ರನ್ನು ಬಂಧಿಸಲು ಆದೇಶಿಸಿದರು.

ಸೈನಿಕ ಕಾರ್ಯಾಚರಣೆಯ ಭಯದಿಂದಾಗಿ ಮುಶ್ರಫ್‌ರ ವಿಮಾನವು ಕಾರಾಚಿ ವಿಮಾನ ನಿಲ್ದಾಣದಲ್ಲಿ ಇಳಿಯದಂತೆ ತಡೆಯಲು ಆದೇಶಿಸಿದರು. ವಿಮಾನವು ನವಾಬ್ ಶಾ ವಿಮಾನ ನಿಲ್ದಾಣದಲ್ಲಿ ಇಳಿಯುವಂತೆ ಶರೀಫ್ ಆದೇಶಿಸಿದರು. ಮುಶ್ರಫ್ ಪಾಕಿಸ್ತಾನ್ ಸೈನ್ಯದ ಜನರಲ್‌ಗಳನ್ನು ಸಂಪರ್ಕಿಸಿ ದೇಶವನ್ನು ಹಿಡಿತಕ್ಕೆ ತೆಗೆದಿಕೊಂಡು ಶರೀಫ್ ಆಡಳಿತವನ್ನು ಕೊನೆಗೊಳಿಸಿದರು. ನಂತರದಲ್ಲಿ ಮುಶ್ರಫ್ ಮುಖ್ಯ ಕಾರ್ಯನಿರ್ವಾಹಕರಾಗಿ ಸರ್ಕಾರವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅಧಿಕಾರ ವಹಿಸಿಕೊಂಡರು.[೧೪]

ವಿಚಾರಣೆ

"ಕಿಡ್ನ್ಯಾಪಿಂಗ್, ಕೊಲೆ ಯತ್ನ, ಹೈಜಾಕ್ ಮತ್ತು ಭಯೋತ್ಪಾದನೆ" ಆರೋಪ ಹೊರಿಸಿ ಸೈನ್ಯವು ವಿಚಾರಣೆ ನಡೆಸಿತು. ಶೀಘ್ರವಾಗಿ ಸೈನಿಕ ನ್ಯಾಯಾಲಯವು ಇವರನ್ನು ಅಪರಾಧಿಯೆಂದು ತೀರ್ಮಾನಿಸಿ ಆಜೀವ ಶಿಕ್ಷೆ ವಿಧಿಸಿತು.[೧೫] ಸೌದಿ ಅರೇಬಿಯಾ ಒಪ್ಪಂದವನ್ನು ಸರಳಗೊಳಿಸಿದ್ದರಿಂದ ಶರೀಫ್‌ರನ್ನು ಮುಂದಿನ ಹತ್ತು ವರ್ಷ ಗಡಿಪಾರು ಮಾಡಲಾಯಿತು.

ಹಿಂದಿರುಗಿ ಪಾಕಿಸ್ತಾನಕ್ಕೆ

ಇಸ್ಲಾಮಾಬಾದಿನಲ್ಲಿ ವಿಫಲ ಯತ್ನ

ಅಗಸ್ಟ್ ೨೩, ೨೦೦೭ರಂದು ಪಾಕಿಸ್ತಾನದ ಉಚ್ಚ ನ್ಯಾಯಾಲಯವು ನವಾಜ್ ಶರೀಫ್ ಮತ್ತು ಅವರ ಸಹೋದರ ಶಹಬಾಜ್ ವಾಪಾಸ್ಸಾಗಬಹುದೆಂದು ಆದೇಶಿಸಿತು. ಇಬ್ಬರೂ ಶೀಘ್ರವೆ ಹಿಂದಿರುಗಲು ಒಪ್ಪಿಕೊಂಡರು.[೧೬][೧೭]

೮ ಸೆಪ್ಟೆಂಬರ್ ೨೦೦೭ರಂದು ಲೆಬನಾನ್ ರಾಜಕಾರಣಿ ಸಾದ್ ಹರಿರಿ ಮತ್ತು ಸೌದಿಯ ಗುಪ್ತಚರ ಇಲಾಖೆಯ ಮುಖ್ಯಸ್ಥ ಪ್ರಿನ್ಸ್ ಮಕ್ರೀನ್ ಬಿನ್ ಅಬ್ದುಲ್ ಅಜೀಜ್ ಇಬ್ಬರು ಆರ್ಮಿ ಹೌಸ್‌ನಲ್ಲಿ ಒಂದು ಅಭೂತ ಪೂರ್ವ ಪತ್ರಿಕಾಗೋಷ್ಠಿ ಕರೆದು ಶರೀಫ್ ಹಿಂದಿರುಗಿದರೆ ಅದು ಸಂಬಂಧದ ಮೇಲೆ ಉಂಟಾಗುವ ಪರಿಣಾಮದ ಕುರಿತಾಗಿ ಚರ್ಚಿಸಿದರು.[೧೮] ಪ್ರಾರಂಭಿಕ ಒಪ್ಪಂದವು ೧೦ ವರ್ಷಕ್ಕೆ ಮಾತ್ರವಿದ್ದು "ಇಂತಹ ಸಣ್ಣ ವಿಚಾರಗಳು ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ಮಕ್ರೀನ್ ಹೇಳಿದರು.[೧೮] ಮಕ್ರೀನ್, ಶರೀಫ್ ಒಪ್ಪಂದದೊಂದಿಗೆ ಮುಂದುವರೆಯುತ್ತಾರೆಂಬ ಆಶಾವಾದವನ್ನು ವ್ಯಕ್ತಪಡಿಸಿದರು.[೧೮]

ಸೆಪ್ಟೆಂಬರ್ ೧೦, ೨೦೦೭ರಂದು ಗಡಿಪಾರಾಗಿದ್ದ ಶರೀಫ್ ಲಂಡನ್‌ನಿಂದ [೧೮] ಇಸ್ಲಾಮಾಬಾದ್‌ಗೆ ವಾಪಸ್ಸಾದರು. ಅವರನ್ನು ವಿಮಾನದಿಂದ ಕೆಳಗಿಳಿಯಲು ಕೊಡದೆ ಕೆಲವೆ ಗಂಟೆಗಳಲ್ಲಿ ಸೌದಿ ಅರೇಬಿಯಾದ ಜೆಡ್ಡಾಗೆ ಗಡಿಪಾರು ಮಾಡಲಾಯಿತು.[೧೯] ಇದರಿಂದಾಗಿ ಇವರ ರಾಜಕೀಯ ಜೀವನ ಮುಗಿದಂತೆ ಕಂಡುಬಂದಿತು.[೭]

ಲಾಹೋರ್‌‌ಗೆ ಯಶಸ್ವಿ ಪಯಣ

೨೦ ನವೆಂಬರ್ ೨೦೦೭ರಂದು ಮುಶ್ರಫ್ ತುರ್ತುಪರಿಸ್ಥಿತಿ ಹೇರಿದ ನಂತರ ಮೊದಲ ಬಾರಿಗೆ ದೇಶವನ್ನು ಬಿಟ್ಟು ಸೌದಿ ಅರೇಬಿಯಾಗೆ ಪಯಣಿಸಿದರು.[೨೦] ಜನವರಿ ೨೦೦೮ರ ಚುನಾವಣೆ ಮುಗಿಯುವವರೆಗೆ ಶರೀಫ್ ಹಿಂದಿರುಗದಂತೆ ತಡೆಯಲು ಸೌದಿ ಅರೇಬಿಯಾವನ್ನು ಒಪ್ಪಿಸಲು ಪ್ರಯತ್ನಿಸಿದರು.[೨೦] ಬೆನಜೀರ್ ಭುಟ್ಟೋ ಹಿಂದಿರುಗುವ ಒಂದು ತಿಂಗಳ ಮೊದಲೇ ಶರೀಫ್ ರಾಜಕೀಯತೆ ಹಿಂದಿರುಗಿತು.[೨೦] ಪಾಕಿಸ್ತಾನವು ಜಾತ್ಯಾತೀತ ನಾಯಕಿ ಬೆನಜೀರ್ ಭುಟ್ಟೋ ಹಿಂದಿರುಗಲು ಅನುವು ಮಾಡಿಕೊಟ್ಟರೆ ಮಾತ್ರ ಧಾರ್ಮಿಕ ಸಂಪ್ರದಾಯವಾಗಿ ಶರೀಫ್ ಹಿಂದಿರುಗಲು ಅನುಮತಿಸುವುದಾಗಿ ಸೌದಿ ಅರೇಬಿಯಾ ವಾದಿಸಿತು.[೨೦]

ನವೆಂಬರ್ ೨೫, ೨೦೦೭ರಂದು ಶರೀಫ್ ಪಾಕಿಸ್ತಾನಕ್ಕೆ ವಾಪಸ್ಸಾದರು. ಸಾವಿರಾರು ಜನ ಬೆಂಬಲಿಗರು ಶಿಳ್ಳು ಜಯಕಾರಗಳೊಂದಿಗೆ ಶರೀಫ್ ಮತ್ತು ಅವರ ಸಹೋದರ ಶಹಬಾಜ್‌ರನ್ನು ಸ್ವಾಗತಿಸಿದರು ಮತ್ತು ವಿವಿಧ ದರ್ಜೆಯ ಲಂಪಟ ಪೋಲಿಸ್ ಅಧಿಕಾರಿಗಳು ಎಚ್ಚರಿಕೆಯಿಂದ ತಮ್ಮ ಭುಜಗಳ ಮೇಲೆ ಹೊತ್ತುಕೊಂಡರು.[೨೧] ೧೧-ತಾಸು ವಿಮಾನನಿಲ್ದಾಣದಲ್ಲಿ ಮೆರವಣಿಗೆ ನಡೆದ ನಂತರ ತಾವು ಪ್ರಾರ್ಥಿಸುವ ಮಸೀದಿಗೆ ತೆರಳಿದರು. ಹಾಗೆಯೆ ಮುಶ್ರಫ್‌ ವಿರುದ್ಧ ಕಿಡಿಕಾರಿದರು.[೨೨]

ಚುನಾವಣೆಗೆ ಸ್ಪರ್ಧಿಸಲು ನೋಂದಾಯಿಸುವ ಕೊನೆಯ ಒಂದು ದಿನದ ಮೊದಲು ಪಾಕಿಸ್ತಾನಕ್ಕೆ ವಾಪಸ್ಸಾಗಿದ್ದರು.[೨೧] ಇದು ರಾಜಕೀಯ ಆಟದ ವೇದಿಕೆಗೆ ರಾತ್ರೋರಾತ್ರಿ ಸಿದ್ಧವಾಯಿತು.[೨೧]

೨೦೦೮ ಸಂಸತ್ ಚುನಾವಣೆಗಳು

ಮುಶ್ರಫ್ ತುರ್ತುಪರಿಸ್ಥಿತಿ ಹೇರಿದ್ದರಿಂದ ಚುನಾವಣೆ ಪಾರದರ್ಶಕತೆಯಿಂದ ಕೂಡಿರುವುದಿಲ್ಲ ಎಂದು ಶರೀಫ್ ಜನವರಿ ೨೦೦೮ ರಂದು ಚುನಾವಣೆಯನ್ನು ಬಹಿಷ್ಕರಿಸುವಂತೆ ಕರೆ ನೀಡಿದರು. ನಂತರದಲ್ಲಿ ಬೆನಜೀರ್ ಭುಟ್ಟೋರ ಪಾಕಿಸ್ತಾನ್ ಪೀಪಲ್ ಪಾರ್ಟಿ ಸೇರಿದಂತೆ ೩೩ ವಿರೋಧಿ ಗುಂಪುಗಳು, ಶರೀಫ್ ಮತ್ತು ಪಿಎಂಎಲ್(ಎನ್) ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿ ಲಾಹೋರಿನಲ್ಲಿ ಸಭೆ ಸೇರುತ್ತಾರೆ. ಆದರೆ ಒಂದು ಜಂಟಿ ನಿಲುವಿಗೆ ಬರಲು ವಿಫಲರಾಗುತ್ತಾರೆ.[೨೩]

ಚುನಾವಣೆಗಾಗಿ, ತುರ್ತುಪರಿಸ್ಥಿತಿ ಸರ್ಕಾರದ ತೀರ್ಮಾನ ಮತ್ತು ಮುಶ್ರಫ್‌ರ ಪದಚ್ಯುತಿಗಾಗಿ ತೆಗೆದುಹಾಕಿದ ಸ್ವತಂತ್ರ ಜಡ್ಜ್‌ಗಳ ಮರುನೇಮಕಕ್ಕಾಗಿ ಆಂದೋಲನವನ್ನು ಆರಂಭಿಸಿದರು.[೨೪][೨೫]

ಭುಟ್ಟೋರ ಹತ್ಯೆಯಾದ್ದರಿಂದ ಚುನಾವಣೆಯು ಫೆಬ್ರವರಿ ೧೮,೨೦೦೮ಕ್ಕೆ ಮುಂದೂಡಲ್ಪಟ್ಟಿತು.[೨೬] ಚುನಾವಣೆಯ ಸಮಯದಲ್ಲಿ,- ಸಿಂಧ್‌ ಪ್ರದೇಶದಲ್ಲಿ ಭುಟ್ಟೋ ಮತ್ತು ಶರೀಫ್ ಪಂಜಾಬಿನಲ್ಲಿ ಈ ಎರಡು ಪಕ್ಷಗಳು ತಮ್ಮ ಮತಕ್ಕಾಗಿ ಮುಖ್ಯವಾಗಿ ಪಾಕಿಸ್ತಾನ್ ಪೀಪಲ್ ಪಾರ್ಟಿಯು ಊಳಿಗಮಾನ್ಯ ಸಂಬಂಧದಲ್ಲಿ ನಂಬಿಕೆ ಮತ್ತು ಪ್ರಾದೇಶಿಕ ಭಾವನಾತ್ಮಕತೆಯ ಮೇಲೆ ನಂಬಿಕೆ ಇರಿಸಿದ್ದರು.[೨೬] ಶರೀಫ್ ಭುಟ್ಟೋರ ಹತ್ಯೆಯನ್ನು ಖಂಡಿಸಿ "ಪಾಕಿಸ್ತಾನದ ಇತಿಹಾಸದಲ್ಲಿ ಅಂಧಕಾರ ಕವಿದ ದಿನ ಇದಾಗಿದೆ" ಎಂದು ಹೇಳಿದರು.[೨೭]

ಭುಟ್ಟೋರ ಹತ್ಯೆ ಮತ್ತು ಚುನಾವಣೆಗಳ ನಡುವೆ ದೇಶವು ಹಲವಾರು ಮಿಲಿಟರಿ ಧಾಳಿಗಳನ್ನು ಎದುರಿಸಿತು.[೨೮] ಮುಶ್ರಫ್ ಆ‍ಯ್‌೦ಟಿ-ಟೆರರ್ ಆಪರೇಶನ್‌ಗೆ ಆದೇಶ ನೀಡಿರುವುದು ದೇಶವನ್ನು "ರಕ್ತದಲ್ಲಿ ಮುಳುಗಿಸುತ್ತದೆ" ಎಂದು ಶರೀಫ್ ಆರೋಪಿಸಿದರು.[೨೮] ಪಾಕಿಸ್ತಾನಿ ಸರ್ಕಾರವು ವಿರೋಧ ಪಕ್ಷದ ಮುಖಂಡರಿಗೆ ಚುನಾವಣೆ ಮುಂದಿರುವಾಗ ಟೆರರಿಸ್ಟ್‌ಗಳ ಧಾಳಿಯ ಸಂಭವ ಇರುವುದರಿಂದ ಜಾಥಾ ನಡೆಸಬಾರದೆಂದು ತಾಕೀತು ಮಾಡಿತು.[೨೮] ಶರೀಫ್ ಪಕ್ಷವು ಶಿಫಾರಸ್ಸನ್ನು ತಕ್ಷಣವೆ ತಳ್ಳಿಹಾಕಿತು. ಮುಶ್ರಫ್ ವಿರುದ್ಧದ ಚಳುವಳಿಯನ್ನು ತಡೆಯುವ ಪ್ರಯತ್ನ ಮಾಡಲಾಗುತ್ತಿದೆ. ದೊಡ್ಡ ಜಾಥಾಗಳು ಚುನಾವಣಾ ಕ್ಯಾಂಪೇನ್‌ಗಳಿಗೆ ಸಹಾಯಕವಾಗಿ ಕೆಲಸ ಮಾಡುತ್ತವೆ ಎಂಬುದು ಇವರ ಯೋಚನೆಯಾಗಿತ್ತು.[೨೮]

ಶರೀಫ್ ಸಹೋದರರ ಜೊತೆಗಿನ ಪಾಕಿಸ್ತಾನದ ರಾಜಕೀಯಕ್ಕೆ ಬ್ರಿಟೀಷ್ ಮಧ್ಯಸ್ಥಿಕೆ ವಹಿಸುವಂತೆ ಕೇಳಿಕೊಳ್ಳಲು ಜನವರಿ ೨೫ರಂದು ಮುಶ್ರಫ್‍ರ ನಾಲ್ಕು ದಿನಗಳ ಲಂಡನ್ ಭೇಟಿ ವಿಫಲವಾಯಿತು.[೨೯]

ಬೆನಜೀರ್ ಭುಟ್ಟೋರ ಸಾವಿನಿಂದ ಜರ್ದಾರಿಯ ಪಾಕಿಸ್ತಾನ ಪೀಪಲ್ ಪಾರ್ಟಿ ಚೇತರಿಸಿಕೊಂಡಿತು ಮತ್ತು ಶರೀಫ್‌ರ ಪಾಕಿಸ್ತಾನ್ ಮುಸ್ಲಿಂ ಲೀಗ್ -ಎನ್ ಚುನಾವಣೆಯಲ್ಲಿ ಮೇಲುಗೈ ಸಾಧಿಸಿತು. ನ್ಯಾಷನಲ್ ಅಸೆಂಬ್ಲಿಯ ೩೪೨-ಸ್ಥಾನಗಳಲ್ಲಿ ಪಿಪಿಪಿ ೮೬; ಪಿಎಂಎಲ್-ಎನ್ ೬೬; ಮತ್ತು ಪರ್ವೇಜ್ ಮುಶರಫ್‌ಗೆ ಬೆಂಬಲಿಸುವ ಪಿಎಂಎಲ್-ಕ್ಯೂ ೪೦ ಪಡೆಯಿತು.[೩೦] ಮುಶ್ರಫ್‌ರನ್ನು ಪದಚ್ಯುತಗೊಳಿಸಲು ನಂತರದಲ್ಲಿ ಜರ್ದಾರಿ ಮತ್ತು ಶರೀಫ್ ಸಮ್ಮಿಶ್ರ ಸರ್ಕಾರ ರಚಿಸಿದರು.

೨೦೦೮ ರ ಮುಂದಿನ ಚುನಾವಣೆಗಳು

ಪಿಪಿಪಿಯ ನೇತೃತ್ವದೊಂದಿಗೆ ಇವರ ಪಕ್ಷವು ಸೇರಿಕೊಂಡಿತು ಆದರೆ ಹಿಂದಿನ ವರ್ಷ ಮುಶ್ರಫ್ ವಜಾಗೊಳಿಸಿದ್ದ ನ್ಯಾಯಾಧೀಶರ ಹಣೆಬರಹದ ಕುರಿತಾಗಿನ ಭಿನ್ನಾಭಿಪ್ರಾಯದಿಂದ ಒಕ್ಕೂಟದ ಸಂಬಂಧವು ಹದಗೆಟ್ಟಿತು.[೩೧] ಮುಶ್ರಫ್ ವಿರುದ್ಧ ರಾಜಿಯಾಗದ ತಮ್ಮ ನಿಲುವಿನಿಂದಾಗಿ ಶರೀಫ್ ಸಾರ್ವಜನಿಕರ ಬೆಂಬಲ ಪಡೆದುಕೊಂಡರು ಮತ್ತು ಇವರ ಬಲವಂತದಿಂದಾಗಿ ನ್ಯಾಯಾಧೀಶರು ಮರು ನೇಮಕಗೊಂಡರು.[೩೧] ಸಮ್ಮಿಶ್ರ ಸರ್ಕಾರವು ಬಲವಂತವಾಗಿ ಮುಶ್ರಫ್‌ರ ರಾಜೀನಾಮೆ ಪಡೆಯಲು ಯಶಸ್ವಿಯಾಯಿತು. ತುರ್ತುಪರಿಸ್ಥಿತಿ ಅವಧಿಯಲ್ಲಿ ಮುಶ್ರಫ್ ತೆಗೆದು ಹಾಕಿದ್ದ ನ್ಯಾಯಾಧೀಶರನ್ನು ಮರುಸ್ಥಾಪಿಸುವಂತೆ ಜರ್ದಾರಿಯ ಮೇಲೆ ಒತ್ತಡ ಹೇರುವಲ್ಲಿ ಶರೀಫ್ ಯಶಸ್ವಿಯಾದರು. ಇದಕ್ಕೆ ಪ್ರತಿಯಾಗಿ ನ್ಯಾಯಾಲಯವು ಶರೀಫ್‌ರನ್ನು ಅಪರಾಧಿ ದಾಖಲೆಯಿಂದ ದೋಷಮುಕ್ತರನ್ನಾಗಿಸಿ ಮತ್ತೆ ಸಂಸತ್ತಿಗೆ ಪುನಃ ಪ್ರವೇಶಿಸಲು ಅರ್ಹರನ್ನಾಗಿಸಿತು.[೩೨]

ಉಪಚುನಾವಣೆಗಳು

ಜೂನ್ ೨೦೦೮ರ ಉಪಚುನಾವಣೆಯಲ್ಲಿ ಶರೀಫ್‌ರ ಪಕ್ಷವು ಮೂರು ನ್ಯಾಷನಲ್ ಅಸೆಂಬ್ಲಿ ಸ್ಥಾನ ಮತ್ತು ಎಂಟು ಸ್ಥಾನೀಯ ಅಸೆಂಬ್ಲಿ ಸ್ಥಾನ ಗೆದ್ದುಕೊಂಡಿತು, ಇದರಲ್ಲೊಂದು ದೇಶದ ರಾಜಕೀಯದ ಕೇಂದ್ರೀಯ ಸ್ಥಾನ ಪಂಜಾಬ್. ಇಲ್ಲಿ ಶಹಬಾಜ್ ನವಾಜ್ ಪ್ರಾಂತೀಯ ಸರ್ಕಾರದ ಮುಖ್ಯಸ್ಥರಾದರು.[೩೩] ಶರೀಫ್ ಚುನಾವಣೆಗೆ ಸ್ಪರ್ಧಿಸಲು ಅರ್ಹರು ಹೌದೊ ಅಲ್ಲವೊ ಎಂಬ ವಾಗ್ವಾದದಿಂದಾಗಿ ಲಾಹೋರ್‌ ಸ್ಥಾನದ ಚುನಾವಣೆ ಮುಂದೂದಲ್ಪಟ್ಟಿತು.[೩೧][೩೪]

೨೦೦೮ ಮುಶ್ರಫ್ ಗಂಭೀರ ಆಪಾದನೆ

೭ ಅಗಸ್ಟ್ ೨೦೦೮ರಂದು ಸಮ್ಮಿಶ್ರ ಸರ್ಕಾರವು ಮುಶ್ರಫ್‌ರನ್ನು ಪ್ರಶ್ನಿಸಲು ಒಪ್ಪಿಗೆ ನೀಡಿತು. ಜರ್ದಾರಿ ಮತ್ತು ಶರೀಫ್ ಅವರಿಗೆ ಕೆಳಗಿಳಿಯುವಂತೆ ಔಪಚಾರಿಕ ವಿನಂತಿ ಮಾಡಿಕೊಂಡರು. ಒಂದು ಚಾರ್ಚ್‌ಶೀಟ್ ತಯಾರಿಸಿ ಸಂಸತ್ತಿಗೆ ಸಲ್ಲಿಸಲಾಯಿತು.[೩೫] ಮೊದಲಿಗೆ ೧೯೯೯ರಲ್ಲಿ ಮಿ. ಮುಶ್ರಫ್ ಬಲವಂತದಿಂದ ಅಧಿಕಾರ ಕಸಿದುಕೊಂಡಿದ್ದು—ಪಿಎಂಎಲ್‌(ಎನ್)ನಾಯಕ ನವಾಜ್ ಶರೀಫ್‍‌ರನ್ನು ಬಂಧಿಸಲು ಮತ್ತು ಗಡಿಪಾರಿಗೆ ವೆಚ್ಚವಾದ ಹಣ - ಮತ್ತು ಅಧ್ಯಕ್ಷರಾಗಿ ಎರಡನೆಯ ಅವಧಿಗಾಗಿ ಆಯ್ಕೆಯಾಗಲು ನವೆಂಬರ್‌ನಲ್ಲಿ ಘೋಷಿಸಿದ ತುರ್ತುಪರಿಸ್ಥಿತಿ ಇವೆಲ್ಲವನ್ನು ಒಳಗೊಂಡಿತ್ತು.[೩೬] ಇದಲ್ಲದೇ ಮುಶ್ರಫ್ "ಭಯೋತ್ಪಾದನೆ ಯುದ್ಧ"ಕ್ಕೆ ನೀಡಿದ ಕಾಣಿಕೆಗಳನ್ನು ಚಾರ್ಚ್‌ಶೀಟ್ ಒಳಗೊಂಡಿತ್ತು.[೩೬]

೧೧ ಅಗಸ್ಟ್‌ರಂದು ಆಪಾದನೆಯ ವಿಚಾರಣೆಯನ್ನು ಚರ್ಚಿಸಲು ನ್ಯಾಷನಲ್ ಅಸೆಂಬ್ಲಿಗೆ ಬರುವಂತೆ ಆದೇಶಿಸಿತು.[೩೭] ೧೮ ಅಗಸ್ಟ್ ೨೦೦೮ರಂದು, ಆಪಾದನೆಯ ಪರಿಣಾಮವಾಗಿ ರಾಜಕೀಯ ಒತ್ತಡ ಬಂದದ್ದರಿಂದ ಮುಶ್ರಫ್ ಪಾಕಿಸ್ತಾನದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ೧೯ ಅಗಸ್ಟ್ ೨೦೦೮ರಂದು, ಮುಶ್ರಫ್ ತಮ್ಮ ಒಂಭತ್ತು ವರ್ಷಗಳ ಅಧಿಕಾರವನ್ನು ಸಮರ್ಥಿಸಿಕೊಂಡು ಒಂದು ತಾಸು ಭಾಷಣ ಮಾಡಿದರು.[೩೮]

ಈಗ ಮುಶ್ರಫ್ ಲಂಡನ್ನಿಗೆ ಗಡಿಪಾರಾಗಿದ್ದಾರೆ ಮತ್ತು ರಾಷ್ಟ್ರದ್ರೋಹ ಮಾಡಿದ್ದಕ್ಕಾಗಿ ಕಾನೂನು ಕ್ರಮ ಜರುಗಿಸಬೇಕೆಂದು ಶರೀಫ್ ಕೋರುತ್ತಿದ್ದಾರೆ .[೩೯]

ಅಧ್ಯಕ್ಷೀಯ ಚುನಾವಣೆ

ಪಾಕಿಸ್ತಾನದ ಚುನಾವಣಾ ಆಯೋಗವು ೨೨ ಅಗಸ್ಟ್‌ರಂದು ಅಧ್ಯಕ್ಷೀಯ ಚುನಾವಣೆಯನ್ನು ೬ ಸೆಪ್ಟೆಂಬರ್ ೨೦೦೮ರಂದು ನಡೆಸಲಾಗುವುದೆಂದು ಪ್ರಕಟಿಸಿತು, ಮತ್ತು ೨೬ ಅಗಸ್ಟ್‌ರಿಂದ ನಾಮನಿರ್ದೇಶನ ಸಲ್ಲಿಕೆ ಪ್ರಾರಂಭವಾಯಿತು.[೪೦] ಪಾಕಿಸ್ತಾನದಲ್ಲಿ, ಎರಡು ಸಂಸತ್ತು ಮತ್ತು ನಾಲ್ಕು ಪ್ರಾಂತೀಯ ಸರ್ಕಾರಗಳಿಂದ ಅಧ್ಯಕ್ಷರ ಆಯ್ಕೆ ನಡೆಯುತ್ತದೆ. ಶರೀಫ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಿದ್ದತೆಯಲ್ಲಿದ್ದರು. ಆದರೆ ಅಗಸ್ಟ್ ೨೫ರಂದು ಪಿಎಂಎಲ್-ಎನ್ ಪರವಾಗಿ ಅಧ್ಯಕ್ಷೀಯ ಸ್ಥಾನಕ್ಕೆ ಸಯಿಜುದ್ದಾಮನ್ ಸಿದ್ಧಿಕಿ ನಾಮಿನಿಯಾಗಿದ್ದರೆಂದು ಪ್ರಕಟಿಸಿದರು.[೪೧] ಸಿದ್ಧಿಕಿ ಜರ್ದಾರಿಯವರ ವಿರುದ್ಧ ಅಧ್ಯಕ್ಷಗಿರಿ ಸೋತರು.

ನ್ಯಾಯಾಧೀಶರ ಮರುನೇಮಕ

ಮಾರ್ಚ್ ೨೦೦೭ರಂದು ಮುಶ್ರಫ್ ವಜಾಗೊಳಿಸಿದ್ದ ನ್ಯಾಯಾಧೀಶರ ಮರು ನೇಮಕಕ್ಕೆ ಶರೀಫ್ ಬೆಂಬಲಿಸಿದರು. ಮುಶ್ರಫ್ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ೬೦ ನ್ಯಾಯಾಧೀಶರನ್ನು ವಜಾಗೊಳಿಸಿದ್ದರು ಮತ್ತು ಮುಖ್ಯ ನ್ಯಾಯಮೂರ್ತಿ ಇಫ್ತಿಕರ್ ಚೌಧರಿಯವರನ್ನು ಮತ್ತೆ ಅಧಿಕಾರಕ್ಕೆ ತರುವ ಪ್ರಯತ್ನ ವಿಫಲವಾಯಿತು.[೪೨] ಶರೀಫ್ ತಮ್ಮ ವಜಾ ಆದಾಗಿನಿಂದಲೂ ನ್ಯಾಯಾಧೀಶರನ್ನು ಬೆಂಬಲಿಸುತ್ತಾ ಬಂದಿದ್ದರು .[೬] ಹೊಸ ಸರ್ಕಾರದ ಉತ್ತರಾಧಿಕಾರಿಯಾಗಿ ಮುಶ್ರಫ್ ಅಧಿಕಾರವಹಿಸಿಕೊಂಡಿದ್ದರಿಂದ ನ್ಯಾಯಾಧೀಶರ ಮರು ನೇಮಕದ ಬೆಂಬಲದ ಪ್ರಯತ್ನ ವಿಫಲವಾಯಿತು. ಕೆಲಸದಿಂದ ವಜಾ ಮಾಡಲ್ಪಟ್ಟ ನ್ಯಾಯಾಧೀಶರನ್ನು ಮತ್ತೆ ನೇಮಕ ಮಾಡುವ ವಿಚಾರವನ್ನು ಜರ್ದಾರಿ ತಿರಸ್ಕರಿಸ್ಕರಿಸಿದ್ದರಿಂದ ೨೦೦೮ರ ಕೊನೆಯಲ್ಲಿ ಸಮ್ಮಿಶ್ರ ಸರ್ಕಾರ ಬಿದ್ದು ಹೋಯಿತು.[೬] ಜರ್ದಾರಿ ತಾವು ಭ್ರಷ್ಟಾಚಾರ ಆರೋಪದಿಂದ ಮುಕ್ತವಾದ ವಿಷಯ ಒಳಗೊಂಡಂತೆ ಮುಶ್ರಫ್ ವಿಧಿಸಿದ ಎಲ್ಲಾ ಆಜ್ಞೆಗಳನ್ನು ಚೌಧರಿ ರದ್ದು ಮಾಡಬಹುದೆಂದು ಹೆದರಿದ್ದರು.[೬]

ಫೆಬ್ರವರಿ ೨೫, ೨೦೦೯ರಂದು ಉಚ್ಚನ್ಯಾಯಾಲಯವು ನವಾಜ್ ಶರೀಫ್ ಮತ್ತು ಪಂಜಾಬ್‌‌ನ ಮುಖ್ಯಮಂತ್ರಿ ಶಹಬಾಜ್ ನವಾಜ್‌ರನ್ನು ಸಾರ್ವಜನಿಕ ಅಧಿಕಾರದಿಂದ ಅನರ್ಹಗೊಳಿಸಿತು. ನಂತರ ಜರ್ದಾರಿಯವರು ಪ್ರಾಂತ್ಯದ ಶಾಸನವನ್ನು ರದ್ದುಗೊಳಿಸಿ ಪಂಜಾಬ್‌‌ನಲ್ಲಿ ಅಧ್ಯಕ್ಷೀಯ ಆಳ್ವಿಕೆಯನ್ನು ಹೇರಿದರು.[೬] ಮಾರ್ಚ್ ೧೫, ೨೦೦೯ರಂದು ಜರ್ದಾರಿಯವರು ಶರೀಫ್‌ರನ್ನು ಗೃಹಬಂಧನದಲ್ಲಿರಿಸುವ ಪ್ರಯತ್ನ ಮಾಡಿದರು.[೬] ಮನೆಯ ಹೊರಗಡೆ ಗಲಾಟೆ ಕಂಡುಬಂದದ್ದರಿಂದ ಪ್ರಾಂತ್ಯದ ಪೋಲಿಸರು ಅದೇ ದಿನ ಅವರ ಮನೆಯಿಂದ ಕಾಣೆಯಾದರು. ಪಂಜಾಬ್‌ ಪೋಲಿಸರು ಬಂಧನದಿಂದ ಶರೀಫ್‌ರನ್ನು ಮುಕ್ತಗೊಳಿಸುವ ನಿರ್ಧಾರ ತಳೆದುದು ಆರ್ಮಿ ಕಮಾಂಡ್‌ನ ಒಂದು ಪ್ರತಿಕ್ರಿಯೆಯಾಗಿತ್ತು.[೬] ಶರೀಫ್ ಎಸ್‌ಯುವಿಎಸ್‌ನ ದೊಡ್ಡ ಗುಂಪಿನೊಂದಿಗೆ ಇಸ್ಲಾಮಾಬಾದ್‌ಗೆ ಆಂದೋಲನ ಆರಂಭಿಸಿದರು.[೬] ಪಾಕಿಸ್ತಾನದ ಸೈನ್ಯ, ಅಮೆರಿಕಾ ಮತ್ತು ಬ್ರಿಟೀಷ್ ರಾಜತಾಂತ್ರಿಕ ಪ್ರತಿನಿಧಿಗಳು ಮತ್ತು ಆಂತರಿಕ ಪ್ರತಿಭಟನೆಯಿಂದಾಗಿ ಮಾರ್ಚ್ ೧೬, ೨೦೦೯ರಂದು ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿ ಒಂದು ಮುಂಜಾನೆ ದೂರದರ್ಶನದ ಮೂಲಕ ಮಾತನಾಡಿ ಇಫ್ತಿಕರ್ ಚೌಧರಿಯವರನ್ನು ಮರು ನೇಮಕ ಮಾಡುವ ಭರವಸೆ ನೀಡಿದರು. ಶರೀಫ್ "ಉಗ್ರ ಚಳುವಳಿಗೆ" ಕರೆ ನೀಡಿದರು.[೬] ಪಿಪಿಪಿ ಸರ್ಕಾರವು ಮುಂದುವರೆಯಲು ಉಳಿದುಕೊಂಡಿತು.

ಮೂರನೇ ಅವಧಿಗೆ ಇದ್ದ ಕಲಮನ್ನು ತೆಗೆದುಹಾಕಲಾಯಿತು

ಮಾಜಿ ಪ್ರಧಾನಿಗಳು ಎರಡು ಬಾರಿ ಮಾತ್ರ ಅಧಿಕಾರ ವಹಿಸಿಕೊಳ್ಳಬಹುದು ಎಂಬ ೧೮ನೆಯ ತಿದ್ದುಪಡಿ ವಿಧೇಯಕವು ಎಪ್ರಿಲ್ ೨, ೨೦೧೦ರಂದು ಸಂಸತ್ತಿನಲ್ಲಿ ತಿರಸ್ಕಾರವಾಯಿತು. ಇದು ಶರೀಫ್ ಮೂರನೆಯ ಬಾರಿಗೆ ಪ್ರಧಾನಿಯಾಗಲು ಅನುವು ಮಾಡಿಕೊಟ್ಟಿತು.[೪೩]

ವೈಯಕ್ತಿಕ ಜೀವನ

ಅವರು ಕುಲ್ಸೂಮ್ ನವಾಜ್‌ರೊಂದಿಗೆ ವಿವಾಹವಾದರು.[೪೪]

ನವಾಜ್ ಶರೀಫರ ರಾಜೀನಾಮೆ

  • 28 Jul, 2017
  • ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಹಾಗೂ ಅವರ ಕುಟುಂಬ ವಿರುದ್ಧದ ಪನಾಮಾ ಪೇಪರ್ಸ್‌ ಪ್ರಕರಣದ ವಿಚಾರಣೆ ನಡೆಸಿದ ಪಾಕಿಸ್ತಾನದ ಸುಪ್ರೀಂ ಕೋರ್ಟ್‌ ನವಾಜ್‌ ಷರೀಫ್‌ ಅವರನ್ನು ದೋಷಿ ಎಂದು ಮಹತ್ವದ ತೀರ್ಪು ಪ್ರಕಟಿಸಿದೆ. ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಷರೀಫ್ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಕ್ರಮ ಸಂಪಾದನೆ ಹಾಗೂ ತೆರಿಗೆ ವಂಚನೆಯಿಂದ ಗಳಿಸಿದ ಕಾಳಧನವನ್ನು ಅಂತರರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಇರಿಸಿರುವವರ ಪಟ್ಟಿಯು ಪನಾಮಾ ಪೇಪರ್ಸ್‌ ಸೋರಿಕೆಯಿಂದ ಬಹಿರಂಗಗೊಂಡಿತ್ತು.[೪೫]
  • 2017ರ ಜುಲೈನಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿ ಎಂದು ನವಾಜ್ ಷರೀಫ್ ವಿರುದ್ಧ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ನಂತರ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದು, ಲಂಡನ್‍ನಲ್ಲಿ ಐಷಾರಾಮಿ ಬಂಗಲೆ ಸೇರಿದಂತೆ ಅಕ್ರಮ ಆಸ್ತಿ ಖರೀದಿಸಿದ್ದ ಆರೋಪದ ಮೇರೆಗೆ ನವಾಜ್ ಷರೀಫ್‍ಗೆ 10 ವರ್ಷ ಜೈಲು ಶಿಕ್ಷೆ ಮತ್ತು ಪನಾಮ ಹಗರಣದಲ್ಲಿ ಪುತ್ರಿ ಮರಿಯಮ್ ನವಾಜ್‍ಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.[೪೫]

ನವಾಜ್ ಶರೀಫರ ತಪ್ಪುಗಳು

ನೋಡಿ

ಉಲ್ಲೇಖಗಳು‌‌

ಬಾಹ್ಯ ಕೊಂಡಿಗಳು‌‌

Political offices
ಪೂರ್ವಾಧಿಕಾರಿ
Sadiq Hussain Qureshi
Chief Minister of Punjab
1985–1990
ಉತ್ತರಾಧಿಕಾರಿ
Ghulam Haider Wyne
ಪೂರ್ವಾಧಿಕಾರಿ
Ghulam Mustafa Jatoi
Acting
Prime Minister of Pakistan
1990–1993
ಉತ್ತರಾಧಿಕಾರಿ
Balakh Sher Mazari
Acting
ಪೂರ್ವಾಧಿಕಾರಿ
Balakh Sher Mazari
Acting
Prime Minister of Pakistan
1993
ಉತ್ತರಾಧಿಕಾರಿ
Moeenuddin Ahmad Qureshi
Acting
ಪೂರ್ವಾಧಿಕಾರಿ
Malik Meraj Khalid
Acting
Prime Minister of Pakistan
1997–1999
ಉತ್ತರಾಧಿಕಾರಿ
Pervez Musharraf
as Chief Executive of Pakistan
ಪೂರ್ವಾಧಿಕಾರಿ
Shahid Hamid
Acting
Minister of Defence
1997–1999
ಉತ್ತರಾಧಿಕಾರಿ
Pervez Musharraf
Party political offices
ಪೂರ್ವಾಧಿಕಾರಿ
Fida Mohammad Khan
President of the Pakistan Muslim League-Nawaz
1993–2002
ಉತ್ತರಾಧಿಕಾರಿ
Shahbaz Sharif
  1. REDIRECT Template:Prime Ministers of Pakistan