ಮುಂಬೈ ಷೇರುಪೇಟೆ

ಭಾರತದ ಮುಂಬೈನಲ್ಲಿರುವ ಷೇರುಪೇಟೆ

ಮುಂಬಯಿ ಷೇರುಪೇಟೆ (ಆಂಗ್ಲ-ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್-ಬಿಎಸ್‌ಇ) ವಿಶ್ವದಲ್ಲಿ ಅತ್ಯಧಿಕ ಸಂಖ್ಯೆಯ ಪಟ್ಟಿಯಲ್ಲಿ ಸಮ್ಮಿಲಿತವಾದ ಕಂಪನಿಗಳನ್ನು (ಲಿಸ್ಟಡ್ ಕಂಪನಿ) ಹೊಂದಿರುವ ಷೇರುಪೇಟೆಯಾಗಿದೆ. ಆಗಸ್ಟ್ ೨೦೦೭ರ ವೇಳೆ ಈ ಸಂಖ್ಯೆ ೪೭೦೦ರಷ್ಟಿತ್ತು. ಇದು ಭಾರತಮುಂಬಯಿಯ ದಲಾಲ್ ಸ್ಟ್ರೀಟ್‌ನಲ್ಲಿ ನೆಲೆಗೊಂಡಿದೆ. ೩೧ ಡಿಸೆಂಬರ್ ೨೦೦೭ರಂದು, ಬಿಎಸ್ಇಯ ಪಟ್ಟಿಯಲ್ಲಿ ಸಮ್ಮಿಲಿತವಾದ ಕಂಪನಿಗಳ ಷೇರುಗಳ ಆಧಾರದ ಮೇಲೆ ಮಾರುಕಟ್ಟೆ ನಿಷ್ಕರ್ಷಿತ ಮೌಲ್ಯವು (ಮಾರ್ಕೆಟ್ ಕ್ಯಾಪಿಟಲೈಜೇಶನ್) ೧೭೯೦೦೦ ಕೋಟಿ ಡಾಲರ್‌ಗಳಷ್ಟಿತ್ತು, ಹಾಗಾಗಿ ಅದು ದಕ್ಷಿಣ ಏಷ್ಯಾದ ಅತಿ ದೊಡ್ಡ ಮತ್ತು ವಿಶ್ವದ ೧೨ನೇ ಅತಿ ದೊಡ್ಡ ಷೇರುಪೇಟೆಯೆಂಬ ಹೆಗ್ಗಳಿಕೆ ಪಡೆಯಿತು. ಮುಂಬಯಿ ಷೇರುಪೇಟೆ ಬೆಳಿಗ್ಗೆ ೯:೦೦ ಘಂಟೆಯಿಂದ ಮಧ್ಯಾಹ್ನ ೩:೩೦ ರ ವರೆಗೆ ವಾರದಲ್ಲಿ ಐದು ದಿನ (ಶನಿವಾರ, ರವಿವಾರ ಹೊರತುಪಡಿಸಿ)‌‌ ಕಾರ್ಯ ನಿರ್ವಹಿಸುತ್ತದೆ. ಏಪ್ರಿಲ್ 26, 2017 ರ ವರದಿಯ ಪ್ರಕಾರ, ಸೆನ್ಸೆಕ್ಸ್ 30,133.35 ಕ್ಕೆ ಕೊನೆಗೊಂಡಿತು, ಇದು 30,000 ಮಟ್ಟವನ್ನು ಮೀರಿ ಮೊದಲ ಬಾರಿಗೆ ಕೊನೆಗೊಂಡಿತು.[೫]

ಬಿಎಸ್ಇ ಲಿಮಿಟೆಡ್
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್
ಪ್ರಕಾರಷೇರುಪೇಟೆ
ಸ್ಥಳದಲಾಲ್ ಸ್ಟ್ರೀಟ್, ಮುಂಬಯಿ, ಭಾರತ
ಸ್ಥಾಪನೆ9 July 1875; 54359 ದಿನ ಗಳ ಹಿಂದೆ (9 July 1875)[೧]
ಮುಖ್ಯ ವ್ಯಕ್ತಿಗಳು
  • Just. Vikramajit Sen
    (Chairman)[೨]
  • Ashishkumar Chauhan
    (MD & CEO)
ಚಲಾವಣೆಯ ನಾಣ್ಯ/ಹಣಭಾರತದ ರೂಪಾಯಿ ()
No. of listings5,439[೩]
ಮಾರುಕಟ್ಟೆ ಬಂಡವಾಳ  ೨,೧೮,೭೩೦ ಶತಕೋಟಿ (ಯುಎಸ್$೪,೮೫೫.೮೧ ಶತಕೋಟಿ) (May 2021)[೪]
ಸೂಚ್ಯಂಕಗಳು
  • BSE SENSEX
  • S&P BSE SmallCap
  • S&P BSE MidCap
  • S&P BSE LargeCap
  • BSE 500
ಜಾಲತಾಣwww.bseindia.com

ಉಲ್ಲೇಖಗಳು