ರಜನಿ ಬಕ್ಷಿ

ಭಾರತೀಯ ಪತ್ರಕರ್ತೆ

ರಜನಿ ಬಕ್ಷಿ ಮುಂಬೈ ಮೂಲದ ಸ್ವತಂತ್ರ ಪತ್ರಕರ್ತೆ ಮತ್ತು ಲೇಖಕಿ. ಅವರು ಸಮಕಾಲೀನ ಭಾರತದಲ್ಲಿ ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳ ಬಗ್ಗೆ ಬರೆಯುತ್ತಾರೆ. ರಜನಿ ಅವರು ಅಹಿಂಸೆಯ ಸಾಧ್ಯತೆಗಳನ್ನು ಅನ್ವೇಷಿಸಲು ಆನ್‌ಲೈನ್ ವೇದಿಕೆಯಾದ ಅಹಿಂಸಾ ಸಂಭಾಷಣೆಗಳ ಸಂಸ್ಥಾಪಕಿ ಮತ್ತು ಮೇಲ್ವಿಚಾರಕರಾಗಿದ್ದಾರೆ. [೧]

ಭಾರತದ ಮುಂಬೈನಲ್ಲಿ ಭಾರತ ಆರ್ಥಿಕ ಶೃಂಗಸಭೆ ೨೦೧೧ ರ ಸಮಯದಲ್ಲಿ ಭಾರತದ ಸಾಂಸ್ಕೃತಿಕ ಅರ್ಥಶಾಸ್ತ್ರದ ಅಧಿವೇಶನದಲ್ಲಿ ರಜನಿ ಬಕ್ಷಿ

ಅವರು ಹಿಂದೆ ಗೇಟ್‌ವೇ ಹೌಸ್: ಇಂಡಿಯನ್ ಕೌನ್ಸಿಲ್ ಆನ್ ಗ್ಲೋಬಲ್ ರಿಲೇಶನ್ಸ್‌ನಲ್ಲಿ ಗಾಂಧಿ ಪೀಸ್ ಫೆಲೋ ಆಗಿದ್ದರು. [೨] ಅವರ ಪತ್ರಿಕೋದ್ಯಮವು ಅನೇಕ ಇಂಗ್ಲಿಷ್ ಮತ್ತು ಹಿಂದಿ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಕಾಣಿಸಿಕೊಂಡಿದೆ. [೩] ಬಕ್ಷಿ ಕಿಂಗ್ಸ್ಟನ್, ಜಮೈಕಾ, ಇಂದ್ರಪ್ರಸ್ಥ ಕಾಲೇಜು (ದೆಹಲಿ), ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯ (ವಾಷಿಂಗ್ಟನ್ ಡಿಸಿ) ಮತ್ತು ರಾಜಸ್ಥಾನ ವಿಶ್ವವಿದ್ಯಾಲಯ (ಜೈಪುರ) ದಲ್ಲಿನ ಶಾಲೆಯಲ್ಲಿ ವ್ಯಾಸಂಗ ಮಾಡಿದರು. [೩]

೨೦೦೦ ರಲ್ಲಿ ರಜನಿ ಹೋಮಿ ಭಾಭಾ ಫೆಲೋಶಿಪ್ ಪಡೆದರು. ಅವರ ಪುಸ್ತಕ ಬಜಾರ್ಸ್, ಕನ್ವಎಸೇಷನ್ ಆಂಡ್ ಫ್ರೀಡಮ್ (೨೦೦೯) ಎರಡು ವೊಡಾಫೋನ್ ಕ್ರಾಸ್‌ವರ್ಡ್ ಪುಸ್ತಕ ಪ್ರಶಸ್ತಿಗಳನ್ನು ಗೆದ್ದಿದೆ, ಒಂದನ್ನು "ನಾನ್ ಫಿಕ್ಷನ್" ವಿಭಾಗದಲ್ಲಿ ಮತ್ತು ಒಂದು "ಪಾಪ್ಯುಲರ್ ಅವಾರ್ಡ್" ವಿಭಾಗದಲ್ಲಿ. [೪] [೫]

ಕೆಲಸಗಳು

  • ದಿ ಲಾಂಗ್ ಹಾಲ್: ದಿ ಬಾಂಬೆ ಟೆಕ್ಸ್‌ಟೈಲ್ ವರ್ಕರ್ಸ್ ಸ್ಟ್ರೈಕ್ ಆಫ್ ೧೯೮೨-೮೩ (೧೯೮೬; ಗ್ರೇಟ್ ಬಾಂಬೆ ಟೆಕ್ಸ್‌ಟೈಲ್ ಸ್ಟ್ರೈಕ್ )
  • ದ ಡಿಸ್ಪ್ಯೂಟ್ ಓವರ್ ಸ್ವಾಮಿ ವಿವೇಕಾನಂದಾಸ್ ಲೆಗಸೀ (೧೯೯೩; ಸ್ವಾಮಿ ವಿವೇಕಾನಂದ )
  • ಬಾಪು ಕುಟಿ: ಜರ್ನೀಸ್ ಇನ್ ರೀಡಿಸ್ಕವರಿ ಆಫ್ ಗಾಂಧಿ (೧೯೯೮)
  • ಲೆಟ್ಸ್ ಮೇಕ್ ಇಟ್ ಹ್ಯಾಪನ್: ಆಲ್ಟರ್ನೇಟಿವ್ ಎಕನಾಮಿಕ್ಸ್ (೨೦೦೩)
  • ಏನ್ ಎಕನಾಮಿಕ್ಸ್ ಫಾರ್ ವೆಲ್-ಬೀಯಿಂಗ್ (೨೦೦೩)
  • ಬಜಾರ್‌ಗಳು, ಕನ್ವಎಸೇಷನ್ಸ್ ಆಂಡ್ ಫ್ರೀಡಮ್ (೨೦೦೯)

ಟಿಪ್ಪಣಿಗಳು

ಬಾಹ್ಯ ಕೊಂಡಿಗಳು