ರಾಜ್ಯಪಾಲ

ದೇಶದ ಮುಖ್ಯಸ್ಥರಾಗಿ ರಾಷ್ಟ್ರಪತಿ ಇರುವಂತೆಯೇ, ಭಾರತದಲ್ಲಿ ರಾಜ್ಯಗಳ ಮುಖ್ಯಸ್ಥರನ್ನು ರಾಜ್ಯಪಾಲ ಎಂದು ಕರೆಯುತ್ತಾರೆ.ಕಾರ್ಯಾಂಗದ ನಿಜವಾದ ಮುಖ್ಯಸ್ಥರು ಮುಖ್ಯಮಂತ್ರಿಗಳಾಗಿದ್ದರೂ ರಾಜ್ಯಪಾಲರು ರಾಜ್ಯಗಳ ಮುಖ್ಯಸ್ಥರಾಗಿರುತ್ತಾರೆ.ರಾಜ್ಯಪಾಲರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ. ರಾಜ್ಯಪಾಲರ ಅಧಿಕಾರಾವಧಿ ೫ ವರ್ಷಗಳು.ಕೇಂದ್ರದಲ್ಲಿ ರಾಷ್ಟ್ರಪತಿ ಇದ್ದಂತೆ ರಾಜ್ಯದಲ್ಲಿ ರಾಜ್ಯಪಾಲ ಇರಬೇಕಾಗುತ್ತದೆ. ಭಾರತದ ಸಂವಿಧಾನದಲ್ಲಿ ರಾಜ್ಯದ ಶಾಸನ ರಚನಾ ಅಧಿಕಾರ ಹಾಗೂ ನ್ಯಾಯಾಂಗದ ಅಧಿಕಾರ ಹೊರತುಪಡಿಸಿ ಇರುವ ಉಳಿದೆಲ್ಲ ಅಧಿಕಾರವನ್ನು ರಾಜ್ಯಪಾಲರು ಇಲ್ಲವೆ ಅವರ ಹೆಸರಿನಲ್ಲಿಯೇ ನಿರ್ವಹಣೆ ಮಾಡಬೇಕಾಗುತ್ತದೆ. ಇದು ಸಂವಿಧಾನ ಒಪ್ಪಿಕೊಂಡ ಕ್ರಮವಾಗಿದೆ.ರಾಜ್ಯಪಾಲರು ಸ್ವಂತ ವಿವೇಚನೆಯಂತೆ ಕಾರ್ಯ ನಿರ್ವಹಿಸಲು ಇರುವ ಅವಕಾಶ ಕಡಿಮೆ. ಸಾಧಾರಣವಾಗಿ ಅವರು ಸಚಿವ ಸಂಪುಟದ ಸಲಹೆ–ಸೂಚನೆ ಮೇರೆಗೆ ಕೆಲಸ ಮಾಡಬೇಕಾಗುತ್ತದೆ (ಕಲಂ 163).ಕೆಲ ವಿಷಯಗಳಲ್ಲಿ ಅವರು ಸ್ವಂತ ವಿವೇಚನೆ ಬಳಸುವ ಅಧಿಕಾರ ಇದೆ (ಉದಾಹರಣೆಗೆ ಮುಖ್ಯಮಂತ್ರಿಯನ್ನಾಗಿ ಯಾರನ್ನು ಮಾಡಬೇಕು ಹಾಗೂ ಸಚಿವ ಸಂಪುಟ ವಿಶ್ವಾಸ ಕಳೆದುಕೊಂಡಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಅನುಸರಿಸುವ ಮಾರ್ಗ ಮತ್ತು ವಿಧಾನ). ಉಳಿದಂತೆ ಸ್ವಂತ ವಿವೇಚನೆ ಬಳಸುವಂತಿಲ್ಲ. ಆಡಳಿತದಲ್ಲಿ ಸಚಿವ ಸಂಪುಟದ ಸಲಹೆಗಳ ಮೇಲೆ ಮೇಲ್ಮನವಿ ಪ್ರಾಧಿಕಾರವಾಗಿ ನಡೆದುಕೊಳ್ಳುವಂತಿಲ್ಲ.

7ನೇ ಸಂವಿಧಾನದ ತಿದ್ದುಪಡಿ

ಗವರ್ನರ್ ಭಾರತದಲ್ಲಿ ಒಂದು ರಾಜ್ಯದ ಮುಖ್ಯಸ್ಥರಾಗಿರುತ್ತಾರೆ. ಸಾಮಾನ್ಯವಾಗಿ, ಗವರ್ನರ್ ಅನ್ನು ಪ್ರತಿ ರಾಜ್ಯಕ್ಕೆ ನೇಮಕ ಮಾಡಲಾಗುತ್ತದೆ, ಆದರೆ 7 ನೇ ಸಂವಿಧಾನದ ತಿದ್ದುಪಡಿಯ ನಂತರ, ಒಂದಕ್ಕಿಂತ ಹೆಚ್ಚು ರಾಜ್ಯಗಳಿಗೆ ಒಬ್ಬ ರಾಜ್ಯಪಾಲರನ್ನು ಹೆಚ್ಚುವರಿಯಾಗಿ ನೇಮಕ ಮಾಡಬಹುದು.

ಭಾರತದ ರಾಜ್ಯಗಳ ರಾಜ್ಯಪಾಲರ ಪಟ್ಟಿ

ರಾಜ್ಯರಾಜ್ಯಪಾಲರು[೧]ಚಿತ್ರಅಧಿಕಾರ ಸ್ವೀಕರಿಸಿದ ದಿನRef.
ಆಂಧ್ರಪ್ರದೇಶಬಿಸ್ವಭೂಷಣ್ ಹರಿಚಂದನ್ 19 ಜುಲೈ 2019
ಅರುಣಾಚಲ ಪ್ರದೇಶಬಿ. ಡಿ. ಮಿಶ್ರಾ 3 ಅಕ್ಟೋಬರ್ 2017[೨]
ಅಸ್ಸಾಂಜಗದೀಶ್ ಮುಖಿ 10 ಅಕ್ಟೋಬರ್ 2017[೩]
ಬಿಹಾರಫಗು ಚೌಹಾಣ್ಚಿತ್ರ:Fagu chauhan.jpg20 ಜುಲೈ 2019
ಛತ್ತೀಸ್‌ಘಡ್ಅನಸೂಯಾ ಉಕೇಯ್ 17 ಜುಲೈ 2019
ಗೋವಾಸತ್ಯಪಾಲ್ ಮಲಿಕ್ 3 ನವೆಂಬರ್ 2019
ಗುಜರಾತ್ಆಚಾರ್ಯ ದೇವ್ ವ್ರತ್ 15 ಜುಲೈ 2019
ಹರಿಯಾಣಸತ್ಯದೇವ್ ನಾರಾಯಣ್ ಆರ್ಯ 25 ಆಗಸ್ಟ್ 2018[೪]
ಹಿಮಾಚಲ ಪ್ರದೇಶಬಂಡಾರು ದತ್ತಾತ್ರೇಯ 1 ಸೆಪ್ಟೆಂಬರ್ 2019
ಝಾರ್ಖಂಡ್ದ್ರೌಪದಿ ಮುರ್ಮು 18 ಮೇ 2015[೫]
ಕರ್ನಾಟಕವಜುಭಾಯಿ ವಾಲಾ 1 ಸೆಪ್ಟೆಂಬರ್ 2014[೬]
ಕೇರಳಆರಿಫ್ ಮೊಹಮ್ಮದ್ ಖಾನ್ 6 ಸೆಪ್ಟೆಂಬರ್ 2019
ಮಧ್ಯಪ್ರದೇಶಲಾಲ್‌ಜಿ ಟಂಡನ್ 20 ಜುಲೈ 2019
ಮಹಾರಾಷ್ಟ್ರಭಗತ್ ಸಿಂಗ್ ಕೋಶಿಯಾರಿ1 ಸೆಪ್ಟೆಂಬರ್ 2019
ಮಣಿಪುರನಜ್ಮಾ ಹೆಪ್ತುಲ್ಲಾ 21 ಆಗಸ್ಟ್ 2016[೭]
ಮೇಘಾಲಯತಥಾಗತ ರಾಯ್ 27 ಜನವರಿ 2020
ಮಿಝೋರಂಪಿ. ಎಸ್. ಶ್ರೀಧರನ್ ಪಿಳ್ಳೈ 5 ನವೆಂಬರ್ 2019
ನಾಗಾಲ್ಯಾಂಡ್ಆರ್. ಎನ್. ರವಿ 20 ಜುಲೈ 2019
ಒರಿಸ್ಸಾಗಣೇಶಿ ಲಾಲ್ 29 ಮೇ 2018[೮]
ಪಂಜಾಬ್ವಿ. ಪಿ. ಸಿಂಗ್ ಬದ್ನೋರ್ 22 ಆಗಸ್ಟ್ 2016[೯]
ರಾಜಸ್ಥಾನಕಲ್‌ರಾಜ್ ಮಿಶ್ರಾ 1 ಸೆಪ್ಟೆಂಬರ್ 2019
ಸಿಕ್ಕಿಂಗಂಗಾ ಪ್ರಸಾದ್ 26 ಆಗಸ್ಟ್ 2018[೧೦]
ತಮಿಳುನಾಡುಬನ್ವಾರಿಲಾಲ್ ಪುರೋಹಿತ್ 6 ಅಕ್ಟೋಬರ್ 2017[೧೧]
ತೆಲಂಗಾಣತಮಿಳಿಸೈ ಸೌಂದರರಾಜನ್1 ಸೆಪ್ಟೆಂಬರ್ 2019
ತ್ರಿಪುರರಮೇಶ್ ಬೈಸ್ 20 ಜುಲೈ 2019
ಉತ್ತರ ಪ್ರದೇಶಆನಂದಿಬೆನ್ ಪಟೇಲ್ 20 ಜುಲೈ 2019
ಉತ್ತರಾಖಂಡಬೇಬಿ ರಾಣಿ ಮೌರ್ಯ 26 ಆಗಸ್ಟ್ 2018[೧೨]
ಪಶ್ಚಿಮ ಬಂಗಾಳಜಗದೀಪ್ ಧನ್‌ಖಾರ್20 ಜುಲೈ 2019

ಭಾರತದ ಕೇಂದ್ರಾಡಳಿತ ಪ್ರದೇಶಗಳ ಉಪರಾಜ್ಯಪಾಲರ / ಆಡಳಿತಾಧಿಕಾರಿಗಳ ಪಟ್ಟಿ

ಹುದ್ದೆಹೆಸರು[೧೩]ಚಿತ್ರಅಧಿಕಾರ ಸ್ವೀಕರಿಸಿದ ದಿನRef
ಅಂಡಮಾನ್ ಮತ್ತು ನಿಕೋಬಾರ್
(ಉಪರಾಜ್ಯಪಾಲರು)
ದೇವೇಂದ್ರ ಕುಮಾರ್ ಜೋಶಿ 8 ಅಕ್ಟೋಬರ್ 2017[೧೪]
ಚಂಡೀಗಡ
(ಆಡಳಿತಾಧಿಕಾರಿಗಳು)
ವಿ. ಪಿ. ಸಿಂಗ್ ಬದ್ನೋರ್ 22 ಆಗಸ್ಟ್ 2016
[೯]
ದಾದ್ರಾ ಮತ್ತು ನಗರ್ ಹವೇಲಿ
(ಆಡಳಿತಾಧಿಕಾರಿಗಳು)
ಪ್ರಫುಲ್ ಖೋಡಾ ಪಟೇಲ್ 30 ಡಿಸೆಂಬರ್ 2016[೧೫]
ದಮನ್ ಮತ್ತು ದಿಯು
(ಆಡಳಿತಾಧಿಕಾರಿಗಳು)
ಪ್ರಫುಲ್ ಖೋಡಾ ಪಟೇಲ್ 29 ಆಗಸ್ಟ್ 2016[೧೬]
ದೆಹಲಿ
(ಉಪರಾಜ್ಯಪಾಲರು)
ಅನಿಲ್ ಬೈಜಲ್ 31 ಡಿಸೆಂಬರ್ 2016[೧೭]
ಜಮ್ಮು ಮತ್ತು ಕಾಶ್ಮೀರ
(ಉಪರಾಜ್ಯಪಾಲರು)
ಜಿ. ಸಿ. ಮುರ್ಮು – 31 ಅಕ್ಟೋಬರ್ 2019
ಲಡಾಖ್
(ಉಪರಾಜ್ಯಪಾಲರು)
ಆರ್. ಕೆ. ಮಾಥೂರ್ 31 ಅಕ್ಟೋಬರ್ 2019
ಲಕ್ಷದ್ವೀಪ
(ಆಡಳಿತಾಧಿಕಾರಿಗಳು)
ದಿನೇಶ್ವರ್ ಶರ್ಮಾ – 3 ನವೆಂಬರ್ 2019[೧೮]
ಪಾಂಡಿಚೆರಿ
(ಉಪರಾಜ್ಯಪಾಲರು)
ಕಿರಣ್ ಬೇಡಿ 29 ಮೇ 2016[೧೯]

ಉಲ್ಲೇಖಗಳು

[೧][೨]