ರಾವ್ ಬಹದ್ದೂರ್ ಹೆಚ್. ಸಿ. ಜವರಾಯ

(೧೮೮೯-೧೯೪೬)

ಜನನ, ಬಾಲ್ಯ, ವಿದ್ಯಾಭ್ಯಾಸ :

ಕೊಡಗು ಪ್ರಾಂತ್ಯದ ಮಡಕೇರಿಯಲ್ಲಿ ಹುಟ್ಟಿದ ರಾವ್ ಬಹದ್ದೂರು ಹೆಚ್. ಸಿ. ಜವರಾಯರು, ತಮ್ಮ ಪ್ರಾರಂಭಿಕ ಶಿಕ್ಷಣವನ್ನು ಮಡಕೇರಿ ಮತ್ತು ಬೆಂಗಳೂರಿನಲ್ಲಿ ಪೂರೈಸಿ, ಕೊಯಮತ್ತೂರಿನಲ್ಲಿ ಆಗತಾನೇ ಹೊಸದಾಗಿ ಸ್ಥಾಪಿಸಿದ್ದ ಅಗ್ರಿಕಲ್ಚರ್ ಕಾಲೇಜಿಗೆ ಸೇರಿದರು. ೧೯೧೩ ರಲ್ಲಿ ಎಲ್. ಜಿ. ಪದವಿಸಂಪಾದಿಸಿ, ಬೆಂಗಳೂರಿಗೆ ವಾಪಸ್ಸಾದರು. ಆಗ, ಮೈಸೂರು ಸಂಸ್ಥಾನದ ಕೃಷಿ ನಿರ್ದೇಶಕ, ಲೆಸ್ಲಿ ಕೋಲ್ಮನ್ ರವರು, ಕೃಷೀ ಪದವೀಧರ, ಜವರಾಯರನ್ನು ತಮ್ಮ ಇಲಾಖೆಗೆ ಆಹ್ವಾನಿಸಿದರು. ಜಿ. ಎಚ್. ಕೃಂಬಿಗಲ್ ಆಗ, ಬೆಂಗಳೂರಿನ "ಲಾಲ್ ಬಾಗ್," ನ 'ಸೂಪರಿಂಟೆಂಡೆಂಟ್ ಆಫ್ ಗವರ್ನಮೆಂಟ್ ಗಾರ್ಡನ್ಸ್', ಆಗಿದ್ದರು. ಅವರೂ ಜವರಾಯರನ್ನು ತಮ್ಮ ಇಲಾಖೆಗೆ ಸ್ವಾಗತಿಸಿದರು. ಹಾಗೆ ಜವರಾಯರ ವೃತ್ತಿ-ಜೀವನ, ಗವರ್ನಮೆಂಟ್ ಗಾರ್ಡನ್ಸ್ ಇಲಾಖೆಯಲ್ಲಿ, ಹಾರ್ಟಿಕಲ್ಚರ್ ಅಸಿಸ್ಟೆಂಟ್, ಹುದ್ದೆಯಿಂದ ಶುರುವಾಯಿತು. ಸ್ವಲ್ಪಕಾಲದಲ್ಲಿಯೇ ಮೇಲ್ವಿಚಾರಕರಾಗಿ ಬಡ್ತಿ ದೊರೆಯಿತು. ಆಗ, ಮೈಸೂರು ಮಹಾರಾಜ, ಶ್ರೀ ಕೃಷ್ಣರಾಜ ಒಡೆಯರಿಗೆ, ಅವರ ಅರಮನೆಯ ತೋಟ, ಮತ್ತು ಎಸ್ಟೇಟ್ ಗಳ ಉಸ್ತುವಾರಿನಡೆಸಲು ಒಬ್ಬ ದಕ್ಷ ಅಧಿಕಾರಿಯ ಅಗತ್ಯವಿತ್ತು. ಜವರಾಯರ ಹೆಸರನ್ನು ಸೂಚಿಸಲಾಯಿತು. ಅವರು ಮಹಾರಾಜರ ಪಾರ್ಕ್ಸ್ ಮತ್ತು ಗಾರ್ಡನ್ಸ್ ಗಳ ಮೇಲ್ವಿಚಾರಕರಾಗಿ ಬಡ್ತಿಹೊಂದಿದರು. ಮಹಾರಾಜರ ಮನ್ನಣೆ ಗಳಿಸುವಲ್ಲಿ ಸಫಲರಾದರು. ೧೯೧೮ ರಲ್ಲಿ, ಬೆಂಗಳೂರಿಗೆ ಬಂದಾಗ ಅವರಿಗೆ, ಸಹಾಯಕ ಸೂಪರಿಂಟೆಂಡ್ ಹುದ್ದೆ ದೊರೆಯಿತು. 'ಲಾಲ್ ಬಾಗ್', 'ಕಬ್ಬನ್ ಪಾರ್ಕ್', 'ಸರ್ಕಾರಿ ವಸ್ತುಸಂಗ್ರಹಾಲಯ,'ಕ್ಕೆ ಸೇರಿದ ಉದ್ಯಾನವನಗಳ ನಿರ್ವಹಣೆಯನ್ನು ಚೆನ್ನಾಗಿ ಮಾಡಿದರು.

ಉನ್ನತ ಶಿಕ್ಷಣಕ್ಕೆ ಲಂಡನ್ ನ, "ಕ್ಯೂ ರಾಯಲ್ ಬಟಾನಿಕಲ್ ಗಾರ್ಡನ್ಸ್" ಗೆ

೧೯೨೨ ರಲ್ಲಿ, ಅವರನ್ನು ಉನ್ನತ ಜ್ಞಾನಾರ್ಜನೆಗಾಗಿ ಲಂಡನ್ ನ 'ಕ್ಯೂ, ರಾಯಲ್ ಬಟಾನಿಕಲ್ ಗಾರ್ಡನ್ಸ್' ಗೆ ಕಳುಹಿಸಲಾಯಿತು. ೧೯೨೩ ರಲ್ಲಿ ಅವರು ಹಿಂದಿರುಗುವಾಗ, ಸಸ್ಯೋದ್ಯಾನಗಳು, ಮತ್ತು ಅವುಗಳ ನಿರ್ವಹಣೆಯಲ್ಲಿ ನಿಷ್ಣಾತರಾಗಿ ವಾಪಸ್ಸಾದರು. ಸೂಪರಿಂಟೆಂಡೆಂಟ್ ಆಫ್ ಗವರ್ನಮೆಂಟ್ ಗಾರ್ಡನ್ಸ್ ಆಗಿ, ಸೇವೆ ಸಲ್ಲಿಸುತ್ತಿದ್ದ ಕೃಂಬಿಗಲ್, ೧೯೩೨ ರಲ್ಲಿ ನಿವೃತ್ತರಾದರು. ತೆರವಾದ ಆ ಹುದ್ದೆಯನ್ನು ತುಂಬಲು, ಜವರಾಯರಿಗಿಂತ ಉತ್ತಮ ವ್ಯಕ್ತಿ ಬೇರೆಯಾರೂ ಇರಲಿಲ್ಲ. ೧೯೪೦ ರಲ್ಲಿ, ಲಾಲ್ ಬಾಗ್ ನ ನಿರ್ದೇಶಕರ ಹುದ್ದೆಗೆ ಏರಿದರು.

ಜವರಾಯರ ಸಾಧನೆಗಳು : ತೋಟಗಾರಿಕೆಯನ್ನು ವಿಸ್ತರಿಸಿದರು.

ಲಾಲ್ ಬಾಗ್ ಗಾಜಿನಮನೆಯ ವಿಸ್ತರಣೆ. ಹೆಚ್ಚು ಹೆಚ್ಚು ಸುಂದರ ಸಸ್ಯಗಳನ್ನು ಬೇರೆ ಬೇರೆ ದೇಶಗಳಿಂದ ತಂದು ನೆಟ್ಟು ಅವುಗಳ ಬಗ್ಗೆ ಪ್ರಯೋಗಾಭ್ಯಾಸ ಮಾಡುತ್ತಿದರು. ಲಾಲ್ ಬಾಗಿನಲ್ಲಿ ನಡೆಯುತ್ತಿದ್ದ ಫಲ-ಪುಷ್ಪ ಪ್ರದರ್ಶವನ್ನು ಪ್ರಾಯೋಜಿಸಲು ಖಾಸಗಿ ವಲಯಗಳು, ಸಂಘಸಂಸ್ಥೆಗಳು ಹೆಚ್ಚಾಗಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿದರು. ರೈತರಿಗೆ ಬೇಕಾದ ಅಗತ್ಯವಾದ ಸಸಿ, ಕಸಿ ಬೀಜ ಉತ್ಪಾದಿಸಲು ರಾಜ್ಯದ ಹಲವೆಡೆ, ತೋಟಗಾರಿಕಾ ಕ್ಷೇತ್ರಗಳನ್ನು ತೆರೆದರು. ಮದ್ದೂರು, ಗಂಜಾಂ, ಮತ್ತು ಕೃಷ್ಣರಾಜಸಾಗರದಲ್ಲಿನ ತೋಟಗಾರಿಕಾಕ್ಷೇತ್ರಗಳು, ಮತ್ತು ಬೆಂಗಳೂರಿನ ಸಮೀಪದ, 'ಹೆಸರ್ ಘಟ್ಟ,'ದ ತೋಟಕಾರಿಕಾ ಸಂಶೋಧನಾ ಕೇಂದ್ರ, ವು ಸಹಾ ಅವರ ಮಾರ್ಗದರ್ಶನದಲ್ಲಿಯೇ ಸ್ಥಾಪಿತವಾದವು.

ಕೃಷಿ ಮಾರುಕಟ್ಟೆಗಳ ಸ್ಥಾಪನೆ

೧೯೩೧-೩೨ ರಲ್ಲಿ, ಭಾವನಗರ್ ಸಂಸ್ಥಾನದ ಅರಸರ ಕೋರಿಕೆಯಂತೆ, ಅಲ್ಲಿನ ಉದ್ಯಾನವನಗಳು, ಮತ್ತು ತೋಟಗಳನ್ನು ಸುಂದರೀಕಣಗೊಳಿಸಲು, ತಮ್ಮ ಅಪಾರ ಅನುಭವಗಳನ್ನು ಹಂಚಿಕೊಂಡರು. ಆಗಿನ ವೈಸ್ರಾಯ್/ಗವರ್ನರ್ ಜನರಲ್ ಆಫ್ ಇಂಡಿಯಾ, ದ ಲಾರ್ಡ್ ಲಿನ್ ಲಿಥ್ ಗೊ ರವರು, ದೇಶದ ಕೃಷಿ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆಯನ್ನು ಸುಧಾರಿಸಲು, "ಕೇಂದ್ರ ಕೃಷಿ ಮಾರುಕಟ್ಟೆ ಇಲಾಖೆ," ಯನ್ನು ಹೊಸದಾಗಿ ಸಂಘಟಿಸಿದಾಗ, ಆ ಇಲಾಖೆಯಲ್ಲಿ, 'ಸೀನಿಯರ್ ಮಾರ್ಕೆಟಿಂಗ್ ಆಫೀಸರ್,' ಎಂಬ ಹುದ್ದೆಯಲ್ಲಿ ನೇಮಕಗೊಂಡು, ೧೯೩೪ ರಿಂದ ೧೯೩೮ ರ ವರೆಗೆ ದೆಹಲಿಯಲ್ಲಿ ಅತ್ಯಂತ ಶ್ರೇಷ್ಟ ಸೇವೆ ಸಲ್ಲಿಸಿದರು. ಈ ಪ್ರದರ್ಶನ ಪ್ರಥಮ "ಫಲಪುಷ್ಪ ಪ್ರದರ್ಶನ,"ಕ್ಕೆ ನಾಂದಿಯಾಯಿತು.

ಅಂದಿನ ಬ್ರಿಟಿಷ್ ಇಂಡಿಯದ ವಿವಿಧೆಡೆಗಳಲ್ಲಿ ಸಂಚರಿಸಿ, ಕೃಷಿ ಮಾರುಕಟ್ಟೆಗಳನ್ನು ಅನೇಕ ಪ್ರದೇಶಗಳಲ್ಲಿ ಸ್ಥಾಪಿಸಿದರು. ಅವರ ಕರ್ಥವ್ಯ ನಿಷ್ಠೆಯನ್ನು ಗುರುತಿಸಿ, ಬ್ರಿಟಿಷ್ ಸರ್ಕಾರ, ೧೯೪೧ ರಲ್ಲಿ ಅವರಿಗೆ "ರಾವ್ ಬಹದ್ದೂರ್," ಎಂಬ ಬಿರುದನ್ನು ನೀಡಿ ಸನ್ಮಾನಿಸಿತು. ತಮ್ಮ ೩೧ ವರ್ಷಗಳ ಸೇವೆಯನಂತರ ಅವರು, ೧೯೪೪ ರಲ್ಲಿ ನಿವೃತ್ತರಾದರು.

೧೯೪೬ ರಲ್ಲಿ ಅವರು ಭೂಪಾಲ್ ರಾಜ್ಯದಲ್ಲಿ ಸೇವಾನಿರತರಾಗಿರುವಾಗ, ತಮ್ಮ ೫೭ ನೆಯ ವಯಸ್ಸಿನಲ್ಲಿ ವಿಧಿವಶರಾದರು. ತಮ್ಮ ವೈಯುಕ್ತಿಕ ಜೀವನದಲ್ಲೂ ಮತ್ತು ಸಾರ್ವಜನನಿಕ ಜೀವನದಲ್ಲೂ ಅತ್ಯುತ್ತಮ ಶಿಸ್ತು, ಪ್ರಾಮಾಣಿಕತೆ, ಮತ್ತು ಕಠಿಣ ಪರಿಶ್ರಮದಿಂದ, ತಮ್ಮ ಬದುಕನ್ನು ಸಂಪೂರ್ಣವಾಗಿ ತೋಟಗಾರಿಕೆಗೆ ಮುಡುಪಾಗಿಟ್ಟರು. ಹೊಸಪರಂಪರೆಯನ್ನು ತಂದು ನಿವೃತ್ತಿಯ ನಂತರವೂ ಮಾರ್ಗದರ್ಶನ ಮಾಡುತ್ತಿದ್ದರು.

-'ತ್ರಿವಿಕ್ರಮ ಹೆಜ್ಜೆಗಳು,'-ಸಂ. ಟಿ. ಆರ್. ಅನಂತರಾಮು,'