ವಂಶವೃಕ್ಷ (ಕಾದಂಬರಿ)

ವಂಶವೃಕ್ಷ [೧] ಕನ್ನಡದ ಜನಪ್ರಿಯ ಬರಹಗಾರ, ತತ್ವಜ್ಞಾನಿ ಮತ್ತು ಚಿಂತಕ ಎಸ್‌.ಎಲ್ ಭೈರಪ್ಪ ರವರು ಬರೆದ ೧೯೬೫ ರ ಕಾದಂಬರಿ. ಈ ಕಾದಂಬರಿಗೆ ೧೯೬೬ ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.[೨] ಬಿವಿ ಕಾರಂತ್ ಮತ್ತು ಗಿರೀಶ್ ಕಾರ್ನಾಡ್ ನಿರ್ದೇಶಿಸಿದ ಈ ಕಾದಂಬರಿಯನ್ನು ಆಧರಿಸಿದ ಕನ್ನಡ ಚಲನಚಿತ್ರ ವಂಶ ವೃಕ್ಷ ಕ್ಕೆ ೧೯ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಮತ್ತು ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. [೩] ವಂಶವೃಕ್ಷವು ಪ್ರೀತಿ ಮತ್ತು ಅದರ ನಷ್ಟ, ದುರಂತ ಮತ್ತು ವಿಜಯದ ಸೂಕ್ಷ್ಮ ಪರಿಶೋಧನೆಯಾಗಿದೆ ಮತ್ತು ಆಧ್ಯಾತ್ಮಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಒಳನೋಟಗಳೊಂದಿಗೆ ಹೆಣೆದುಕೊಂಡಿದೆ. [೪]

ವಂಶವೃಕ್ಷ
ವಂಶವೃಕ್ಷದ ೨೫ನೇ ಆವೃತ್ತಿಯ ಮುಖಪುಟ
ಲೇಖಕರುಎಸ್.ಎಲ್. ಭೈರಪ್ಪ
ದೇಶಭಾರತ
ಭಾಷೆಕನ್ನಡ
ಪ್ರಕಾರಕಾಲ್ಪನಿಕ
ಪ್ರಕಾಶಕರುಸಾಹಿತ್ಯ ಭಂಡಾರ, ಬೆಂಗಳೂರು
ಪ್ರಕಟವಾದ ದಿನಾಂಕ
೧೯೬೫
ಮಾಧ್ಯಮ ಪ್ರಕಾರಮುದ್ರಣ (ಗಡಸು ರಟ್ಟು)
ಪುಟಗಳು೫೬೦
ಮುಂಚಿನVoting (ಕಾದಂಬರಿ)
ನಂತರದಜಲಪಾತ (೧೯೬೭)

ಸಾರಾಂಶ

ವಂಶವೃಕ್ಷ ಕಾದಂಬರಿ ಬದುಕಿನ ಬೇರುಗಳನ್ನು ಶೋಧಿಸುವ ಕೃತಿಯಾಗಿದೆ. ಬದುಕಿನ ಸೂಕ್ಷ್ಮ, ಸಂಕೀರ್ಣ ನೆಲೆಗಳ ಆಳಕ್ಕಿಳಿದು ಪ್ರಖರವಾದ ವೈಚಾರಿಕ, ತಾತ್ತ್ವಿಕ, ಮಾನವೀಯ ಅಂಶಗಳನ್ನು ಸಂವೇದನಾಶೀಲತೆಯಿಂದ ಶೋಧಿಸುವ ಕಾದಂಬರಿ ವಂಶವೃಕ್ಷ. ಈ ಕಾದಂಬರಿಯಲ್ಲಿ ಆಧ್ಯಾತ್ಮ, ವಿಧವೆಯ ಮರು ವಿವಾಹ, ಮರು ವಿವಾಹ, ಪ್ರೀತಿ, ಕಟ್ಟುಪಾಡು ಎಲ್ಲವನ್ನು ಕಾದಂಬರಿಕಾರರು ಇಲ್ಲಿ ಚಿತ್ರಿಸಿದ್ದಾರೆ. ೧೯೬೫ ಭಾರತದಲ್ಲಿ ವಿಧವೆಯ ಮರು ವಿವಾಹವೆಂದರೆ ಮೂಗು ಮುರಿಯುತ್ತಿದ್ದರು ಅಂಥ ಕಾಲದಲ್ಲಿ ಈ ಕಾದಂಬರಿಯನ್ನು ಬರೆದಿದ್ದಾರೆ. ಇಲ್ಲಿ ಬರುವ ಪಾತ್ರಗಳು ಸಮಾಜದ ಕಟ್ಟು ಪಾಡನ್ನು ಮುರಿದು ಹೊಸ ಜೀವನಕ್ಕೆ ನಾಂದಿ ಹಾಡುತ್ತಾರೆ. [೫]

ಅನುವಾದ

ವಂಶವೃಕ್ಷ ಕಾದಂಬರಿಯನ್ನು ತೆಲುಗು, ಮರಾಠಿ, ಹಿಂದಿ, ಉರ್ದು ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದಿಸಲಾಗಿದೆ. [೫]

ಪ್ರಶಸ್ತಿಗಳು

  • ೧೯೬೬ ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ [೨]

ಚಲನಚಿತ್ರ ರೂಪಾಂತರಗಳು

ಈ ಪುಸ್ತಕವನ್ನು ಎರಡು ಚಲನಚಿತ್ರಗಳಾಗಿ ಮಾಡಲಾಯಿತು, ಕನ್ನಡದಲ್ಲಿ ವಂಶ ವೃಕ್ಷ (೧೯೭೧), ಗಿರೀಶ್ ಕಾರ್ನಾಡ್ ಮತ್ತು ವಿಷ್ಣುವರ್ಧನ್ (ಚೊಚ್ಚಲ ಚಿತ್ರ). ತೆಲುಗಿನಲ್ಲಿ, ವಂಶ ವೃಕ್ಷಂ (೧೯೭೨), ಅನಿಲ್ ಕಪೂರ್ ನಟಿಸಿದ ನಂತರ ಹಿಂದಿಗೆ ಪ್ಯಾರ್ ಕಾ ಸಿಂದೂರ್ (೧೯೮೬) ಆಗಿ ಡಬ್ ಮಾಡಲಾಯಿತು. [೪]

ಉಲ್ಲೇಖಗಳು

ಬಾಹ್ಯ ಕೊಂಡಿಗಳು