ವಿಶ್ವ ಆರೋಗ್ಯ ದಿನ

ಪ್ರಪಂಚದಾದ್ಯಂತ WHO ಸೂಚಿಸಿದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವ ದಿನ।
ಡಬ್ಲ್ಯುಎಚ್ಒದ ಧ್ವಜ

ವಿಶ್ವ ಆರೋಗ್ಯ ದಿನ ಮತ್ತು ಮಹತ್ವ

ಎಲ್ಲರಿಗೂ ಉತ್ತಮ ಆರೋಗ್ಯ ನೀಡುವ ನಿಟ್ಟಿನಲ್ಲಿ ಹಲವು ವ್ಯಕ್ತಿಗಳ ಶ್ರಮದಿಂದ ವಿಶ್ವ ಆರೋಗ್ಯ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ವಿಶ್ವದ ಸಕಲ ಮನುಜರ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವಾಕಾಂಕ್ಷೆಯಿಂದ ಹಲವು ಯೋಜನೆಗಳನ್ನು ಪ್ರಾರಂಭಿಸಲಾಯಿತು. 1948ರಲ್ಲಿ ಜಿನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗಸಭೆಯಲ್ಲಿ ವರ್ಷಕ್ಕೊಮ್ಮೆ ವಿಶ್ವ ಆರೋಗ್ಯ ದಿನವನ್ನು ಆಚರಿಸುವ ಮಹತ್ವದ ಬಗ್ಗೆ ಸಮಾಲೋಚಿಸಲಾಯಿತು.[೧]

ಪ್ರಥಮ ವಿಶ್ವ ಆರೋಗ್ಯ ದಿನ

1950ರ ಏಪ್ರಿಲ್ 7 ರಂದು ಪ್ರಥಮ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ಅಂದಿನಿಂದ ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷವೂ ಒಂದು ವಿಷಯದ ಮೇಲ್ಪಂಕ್ತಿಯನ್ನು ಆರಿಸಿ ಆ ವಿಷಯದ ಕುರಿತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಶ್ವದೆಲ್ಲೆಡೆ ಅನುಷ್ಠಾನಗೊಳಿಸಲು ವಿವಿಧ ಚಟುವಟಿಕೆಗಳನ್ನು ಏರ್ಪಡಿಸುತ್ತಾ ಬಂದಿದೆ. 

ವಿವಿಧ ಕಾರ್ಯಕ್ರಮಗಳು

ಆರೋಗ್ಯದ ಕಾಳಜಿಯ ಕುರಿತಾದ ಈ ವಿಷಯವನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಮತ್ತು ಈ ಬಗ್ಗೆ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಹಲವು ಖ್ಯಾತನಾಮರು ಈ ಕಾರ್ಯಕ್ರಮಗಳಲ್ಲಿ ಯಾವುದೇ ಪ್ರತಿಫಲವಿಲ್ಲದೇ ಭಾಗಿಯಾಗಿ ಜನಹಿತ ಕಾರ್ಯಕ್ರಮಗಳಿಗೆ ಬಂಬಲ ನೀಡುತ್ತಾ ಬಂದಿದ್ದಾರೆ. ವಿಷಯದ ಕುರಿತಾದ ಪ್ರಸ್ತುತಿಗಳು ಇಡಿಯ ವರ್ಷ ಜನರ ಮನದಲ್ಲಿ ಹಸಿರಾಗಿ ಉಳಿಯಲು ಕ್ರಮ ಕೈಗೊಳ್ಳಲಾಗುತ್ತದೆ.

ವಿಶ್ವ ಆರೋಗ್ಯ ದಿನದ ಆಚರಣೆ

ಈ ಆಚರಣೆಯಲ್ಲಿ ಆಯಾ ಸರ್ಕಾರೇತರ ಸಂಸ್ಥೆಗಳು (ಎನ್.ಜಿ.ಓ), ಲಾಭರಹಿತ ಕಾರ್ಯನಿರ್ವಹಿಸುವ ಸಂಸ್ಥೆಗಳು ಭಾಗವಹಿಸಿ ಕಾರ್ಯಕ್ರಮಗಳ ಯಶಸ್ವಿಗೆ ಸಹಕರಿಸುತ್ತವೆ. ಸಾರ್ವಜನಿಕರಿಗೆ ಆರೋಗ್ಯ ಮತ್ತು ವಿವಿಧ ಕೆಡುಕುಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ಇದರಲ್ಲಿ ಭಾಗವಹಿಸುವ ಸಂಸ್ಥೆಗಳು ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡಿ ಹೆಚ್ಚು ಹೆಚ್ಚು ಜನರಿಗೆ ಈ ಮಾಹಿತಿ ಲಭ್ಯವಾಗಲು ನೆರವಾಗುತ್ತವೆ.

ಆರೋಗ್ಯ ದಿನವನ್ನೇಕೆ ಆಚರಿಸಬೇಕು

ಈ ಕಾರ್ಯಕ್ರಮದಲ್ಲಿ ಭಾಗವಹಿಸುರವರೆಲ್ಲಾ ಕೇವಲ ಸೇವಾಮನೋಭಾವನೆ ಮತ್ತು ಕೃತಾರ್ಥತೆ ಅನುಭವಿಸುವ ನಿಟ್ಟಿನಲ್ಲಿ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಾರೆ. ಅರಿವಿಲ್ಲದೇ ಜನತೆ ಆಚರಿಸುತ್ತಾ ಬಂದಿರುವ ಅನಾರೋಗ್ಯಕರ ಮತ್ತು ಪಿಡುಗುಗಳ ಬಗ್ಗೆ ಮಾಹಿತಿ ನೀಡಿ ಜನರನ್ನು ಸರಿದಾರಿಗೆ ತರಲು ಪ್ರಯತ್ನಪಡುತ್ತಾರೆ. ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಿ, ಕಾಪಾಡಬೇಕಾದ ನೈರ್ಮಲ್ಯ, ಸ್ವಚ್ಛತಾ ಅಭ್ಯಾಸಗಳು, ನೀರಿನ ದುಂದುವೆಚ್ಚ, ಪರಿಸರದ ಸ್ವಚ್ಛತೆ, ಮೊದಲಾದ ವಿಷಯಗಳ ಬಗ್ಗೆ ಕಾಳಜಿವಹಿಸುವ ಮಾಹಿತಿಯನ್ನು ನೀಡುತ್ತಾರೆ. ಇದರಿಂದ ಸಮಾಜದ ಆರೋಗ್ಯ ಉತ್ತಮಗೊಳ್ಳುತ್ತದೆ. ಆರೋಗ್ಯಕರ ಸಮಾಜ, ದೇಶದ ಶಕ್ತಿಯಾಗುತ್ತದೆ.

ಕೆಲವು ಪ್ರಮುಖ ಧ್ಯೇಯೋದ್ದೇಶಗಳು

  • ಅಧಿಕ ರಕ್ತದೊತ್ತಡಕ್ಕೆ ಕಾರಣ ಮತ್ತು ತಡೆಯುವ ನಿಟ್ಟಿನಲ್ಲಿ ಜನಸಾಮಾನ್ಯರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು
  • ವಿವಿಧ ರೋಗಗಳಿಗೆ ತುತ್ತಾಗುವ ಕಾರಣಗಳು ಮತ್ತು ಅದರಿಂದ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿಗಳು
  • ಸಾಂಕ್ರಾಮಿಕ ರೋಗಗಳಿಗೆ ತುತ್ತಾಗದಿರಲು ಕೈಗೊಳ್ಳಬೇಕಾದ ಕ್ರಮಗಳು
  • ಕುಡಿಯುವ ನೀರಿದ ಸದ್ಬಳಕೆ, ಬಯಲು ಶೌಚಾಲಯದ ಅಪಾಯಗಳು ಮೊದಲಾದವು 

ಹಿಂದಿನ ಅಭಿಯಾನದ ಪ್ರಮುಖ ಧ್ಯೇಯವಾಕ್ಯಗಳು

  • 1950 ರಲ್ಲಿ - ನಿಮ್ಮ ಆರೋಗ್ಯಕ್ಕಾಗಿ ಲಭ್ಯವಿರುವ ಸೇವೆಗಳ ಬಗ್ಗೆ ಅರಿಯಿರಿ "Know your Health Services".
  • 1951 ರಲ್ಲಿ - ನಿಮ್ಮ ಮತ್ತು ವಿಶ್ವದ ಎಲ್ಲಾ ಮಕ್ಕಳಿಗೆ ಉತ್ತಮ ಆರೋಗ್ಯ "Health for your Child and World's Children".
  • 1952 ರಲ್ಲಿ - ಆರೋಗ್ಯಕರ ಪರಿಸರದಿಂದ ಆರೋಗ್ಯಕರ ಸಮಾಜ "Healthy surroundings make Healthy people".
  • 1953 ರಲ್ಲಿ - ಆರೋಗ್ಯವೇ ಭಾಗ್ಯ "Health is Wealth"

ಧ್ಯೇಯವಾಕ್ಯ 2015

ವಿಶ್ವ ಆರೋಗ್ಯ ಸಂಸ್ಥೆ ಆಹಾರದ ಮೂಲಕ ಆಗಮಿಸುವ ರೋಗಗಳ ಕಾಳಜಿಯನ್ನು 2017 ವರ್ಷದ ವಿಷಯವನ್ನಾಗಿ ಆರಿಸಿಕೊಂಡಿದೆ. "From farm to plate, make food safe." (ಗದ್ದೆಯಿಂದ ತಟ್ಟೆಗೆ, ನಿಮ್ಮ ಆಹಾರ ಸುರಕ್ಷಿತವಾಗಿರಲಿ) ಎಂಬ ಧ್ಯೇಯವಾಕ್ಯವನ್ನು ಆಯ್ದುಕೊಂಡಿದೆ. ಲಾಭ ಮಾಡುವ ಗುರಿಯಿಂದ ಕೃತಕವಾಗಿ ಬೆಳೆಯನ್ನು ಪರಿವರ್ತಿಸುವ ರಾಸಾಯನಿಕ ಮತ್ತು ಇತರ ವಿಷಕಾರಿ ವಸ್ತುಗಳ ಬಗ್ಗೆ ಅರಿವು ಮೂಡಿಸುವುದು ಈ ಯೋಜನೆಯ ಪ್ರಮುಖ ಯೋಜನೆಯಾಗಿದೆ.

2017 ಖಿನ್ನತೆ ಬಗ್ಗೆ ಚರ್ಚೆ

ವಿಶ್ವ ಆರೋಗ್ಯ ದಿನ 2017, 7 ಏಪ್ರಿಲ್ ಆಚರಿಸಲಾಗುತ್ತದೆ, ಖಿನ್ನತೆ ವಿಷಯದ ಬಗ್ಗೆ ಚರ್ಚೆ ನಡೆಸಲಾಗುವದು. ಎಲ್ಲಾ ದೇಶಗಳಲ್ಲಿ ಖಿನ್ನತೆ ಎಲ್ಲಾ ವಯಸ್ಸಿನ ಜನರಿಗೆ ತಗುಲುತ್ತದೆ. ಕುಟುಂಬಗಳಲ್ಲಿ, ಸ್ನೇಹಿತರು , ಮತ್ತು ಸಮುದಾಯಗಳಲ್ಲಿ, ಕೆಲಸ ಮತ್ತು ಆರೋಗ್ಯ ವ್ಯವಸ್ಥೆಗಳನ್ನು ,ದೈನಂದಿನ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

ಬಾಹ್ಯ ಕೊಂಡಿಗಳು

ಉಲ್ಲೇಖಗಳು